ಗರ್ಭಗೃಹ
ಹಿಂದೂ ಮತ್ತು ಜೈನ ದೇವಸ್ಥಾನಗಳ ಅತ್ಯಂತ ಒಳಗಿನ ಸ್ಥಳ / From Wikipedia, the free encyclopedia
ಗರ್ಭಗೃಹ (ಗರ್ಭಗುಡಿ) ಎಂದರೆ ಹಿಂದೂ ಮತ್ತು ಜೈನ ದೇವಸ್ಥಾನಗಳ ಅತ್ಯಂತ ಒಳಗಿನ ಸ್ಥಳವಾಗಿದ್ದು ಇಲ್ಲಿ ದೇವಾಲಯದ ಪ್ರಧಾನ ದೇವತೆಯ ಮೂರ್ತಿ ಇರುತ್ತದೆ. ಜೈನ ಧರ್ಮದಲ್ಲಿ, ಮುಖ್ಯ ದೇವತೆಯನ್ನು ಮೂಲ್ನಾಯಕವೆಂದು ಕರೆಯಲಾಗುತ್ತದೆ. ಹಿಂದೂ ಧರ್ಮದಲ್ಲಿ ಸಾಮಾನ್ಯವಾಗಿ ಈ ಕೋಣೆಯನ್ನು ಪ್ರವೇಶಿಸಲು ಕೇವಲ ಅರ್ಚಕರಿಗೆ ಅನುಮತಿ ಇರುತ್ತದೆ.