ಕೇಂಬ್ರಿಜ್
ಕೇಂಬ್ರಿಜ್ಷೈರ್, ಇಂಗ್ಲೆಂಡ್ನಲ್ಲಿ ನಗರ From Wikipedia, the free encyclopedia
ಕೇಂಬ್ರಿಜ್ಷೈರ್, ಇಂಗ್ಲೆಂಡ್ನಲ್ಲಿ ನಗರ From Wikipedia, the free encyclopedia
ಕೇಂಬ್ರಿಜ್ನಗರವು (pronounced /ˈkeɪmbrɪdʒ/ ( listen) (KAYM-bridj)) ಒಂದು ವಿಶ್ವವಿದ್ಯಾನಿಲಯ ಪಟ್ಟಣ ಹಾಗೂ ಇಂಗ್ಲೆಂಡ್ ನ ಕೇಂಬ್ರಿಜ್ಷೈರ್ ಕೌಂಟಿಯ ಆಡಳಿತ ಕೇಂದ್ರವಾಗಿದೆ. ಈ ನಗರವು ಲಂಡನ್ನಿಂದ 50 miles (80 km)*ರಷ್ಟು ಈಶಾನ್ಯ ದಿಕ್ಕಿನಲ್ಲಿ ಈಸ್ಟ್ ಆಂಗ್ಲಿಯಾದಲ್ಲಿದೆ. ಕೇಂಬ್ರಿಜ್ ಸಿಲಿಕಾನ್ ಫೆನ್ ಎಂಬ ಹೈ-ಟೆಕ್ನಾಲಜಿ ಕೇಂದ್ರದ ಮಧ್ಯದಲ್ಲಿದೆ. ಸಿಲಿಕಾನ್ ಫೆನ್ ಎಂಬುದು ಸಿಲಿಕಾನ್ ವ್ಯಾಲಿ ಹಾಗೂ ನಗರವನ್ನು ಸುತ್ತುವರಿದ ಜೌಗು ಪ್ರದೇಶವನ್ನು ಕುರಿತ ಪ್ರಯೋಗವಾಗಿದೆ.
City of Cambridge | |
---|---|
District & City | |
Sovereign state | United Kingdom |
Constituent country | ಇಂಗ್ಲೆಂಡ್ |
Region | East of England |
Ceremonial county | Cambridgeshire |
Admin HQ | Cambridge City Centre |
Founded | 1st century |
City status | 1951 |
Government | |
• Type | Shire district, City |
• Governing body | Cambridge City Council |
• Mayor | Mike Dixon |
• MPs: | Julian Huppert (LD) Andrew Lansley (C) |
Area | |
• District & City | ೪೪.೬೫ sq mi (೧೧೫.೬೫ km2) |
Elevation | ೨೦ ft (೬ m) |
Population (ಟೆಂಪ್ಲೇಟು:English statistics year) | |
• District & City | ಟೆಂಪ್ಲೇಟು:EnglishDistrictPopulation ([[List of English districts by population|Ranked ಟೆಂಪ್ಲೇಟು:EnglishDistrictRank]]) |
• Urban | ೧,೩೦,೦೦೦ (est.) (Cambridge Urban Area) |
• County | ೭,೫೨,೯೦೦ |
• Ethnicity[1] | ೭೩.೮% White British ೧.೩% White Irish ೯.೮% White Other ೨.೨% Mixed Race ೫.೫% British Asian ೫.೧% Chinese and other ೨.೩% Black British |
Time zone | UTC+0 (Greenwich Mean Time) |
• Summer (DST) | UTC+1 (BST) |
Postcode | CB |
Area code | 01223 |
ONS code | 12UB |
OS grid reference | TL450588 |
Website | www.cambridge.gov.uk |
ಕೇಂಬ್ರಿಜ್ ವಿಶ್ವವಿದ್ಯಾನಿಲಯದ ನೆಲೆಯಾಗಿ ಕೇಂಬ್ರಿಜ್ ಹೆಸರುವಾಸಿಯಾಗಿದೆ ಸುಪ್ರಸಿದ್ಧ ಕೇವೆಂಡಿಷ್ ಪ್ರಯೋಗಾಲಯ, ಕಿಂಗ್ಸ್ ಕಾಲೇಜ್ ಚಾಪೆಲ್ ಮತ್ತು ಕೇಂಬ್ರಿಜ್ ವಿಶ್ವವಿದ್ಯಾನಿಲಯ ಗ್ರಂಥಾಲಯವು ವಿಶ್ವವಿದ್ಯಾನಿಲಯದಲ್ಲಿ ಸೇರಿವೆ. ಕೇಂಬ್ರಿಜ್ ದಿಗಂತದಲ್ಲಿ ಕಿಂಗ್ಸ್ ಕಾಲೇಜ್ ಚಾಪೆಲ್ ಮತ್ತು ಕೇಂಬ್ರಿಜ್ ಯುನಿವರ್ಸಿಟಿ ಗ್ರಂಥಾಲಯದ ಕಟ್ಟಡಗಳು ಪ್ರಮುಖವಾಗಿ ಕಾಣುತ್ತವೆ. ಜತೆಗೆ ನಗರದ ದೂರದ ದಕ್ಷಿಣದಲ್ಲಿ ಅಡೆನ್ಬ್ರೂಕ್ಸ್ ಆಸ್ಪತ್ರೆಯ ಚಿಮಣಿ ಮತ್ತು ಉತ್ತರದಲ್ಲಿ ಸೇಂಟ್ ಜಾನ್ಸ್ ಕಾಲೇಜ್ ಚಾಪೆಲ್ ಗೋಪುರವಿದೆ.
2001ರ ಯುನೈಟೆಡ್ ಕಿಂಗ್ಡಮ್ ಜನಗಣತಿಯ ಪ್ರಕಾರ, ನಗರವು 22,153 ವಿದ್ಯಾರ್ಥಿಗಳು ಸೇರಿದಂತೆ, 108,863 ಜನಸಂಖ್ಯೆಯನ್ನು ಹೊಂದಿತ್ತು. ನಗರ ವಲಯದ ಜನಸಂಖ್ಯೆಯು (ದಕ್ಷಿಣ ಕೇಂಬ್ರಿಜ್ಷೈರ್ ಜಿಲ್ಲೆಯ ಭಾಗವನ್ನೂ ಸೇರಿಸಿ) 130,000ದಷ್ಟಿದೆ ಎಂದು ಅಂದಾಜಿಸಲಾಗಿದೆ. ಕೇಂಬ್ರಿಜ್ ಅನೇಕ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಿಂದ ಸುತ್ತುವರಿದಿದೆ.
ರೋಮನ್ ಸಾಮ್ರಾಜ್ಯದ ಮುಂಚಿನ ಕಾಲದಿಂದಲೂ ಕೇಂಬ್ರಿಜ್ ಪ್ರದೇಶದ ಸುತ್ತಲೂ ವಸಾಹತುಗಳು ಅಸ್ತಿತ್ವದಲ್ಲಿದ್ದವು. ಈಗ ಫಿಟ್ಜ್ವಿಲಿಯಮ್ ಕಾಲೇಜ್ ನಿರ್ಮಾಣವಾಗಿರುವ ಸ್ಥಳದಲ್ಲಿ 3,500 ವರ್ಷ ಹಳೆಯದಾದ ಕಟ್ಟಡಗಳಿದ್ದ ಜಮೀನಿನ ಅವಶೇಷಗಳು ಸಿಕ್ಕಿದ್ದವು. ಇದು ವಸಾಹತಿನ ಅತಿ ಹಳೆಯ ಕುರುಹಾಗಿದೆ.[2] ಕ್ರಿಸ್ತಪೂರ್ವ ಮೊದಲ ಶತಮಾನದಲ್ಲಿ ಬೆಲ್ಜಿಕ್ ಪಂಗಡವು ಕ್ಯಾಸ್ಲ್ ಹಿಲ್ನಲ್ಲಿ ನೆಲೆಗೊಂಡಿರುವ ಕಬ್ಬಿಣ ಯುಗ ಕಾಲದ ಪುರಾತನ ಕುರುಹು ಸಿಕ್ಕಿದೆ.[3]
ಕ್ರಿಸ್ತಶಕ 40ರಲ್ಲಿ ರೋಮನ್ನರು ಬ್ರಿಟನ್ ಮೇಲೆ ಅಕ್ರಮಣ ಮಾಡುವುದರೊಂದಿಗೆ ಈ ಪ್ರದೇಶದ ಮೊಟ್ಟಮೊದಲ ಅಭಿವೃದ್ಧಿ ಆರಂಭಗೊಂಡಿತು. ಕ್ಯಾಸ್ಲ್ ಹಿಲ್ ಎಂಬ ಸ್ಥಳವು ಕೇಂಬ್ರಿಜ್ನ್ನು ಸೈನ್ಯದ ಹೊರಠಾಣೆಗೆ ಉಪಯುಕ್ತ ಸ್ಥಳವಾಗಿಸಿತು. ಇಲ್ಲಿಂದ ಕ್ಯಾಮ್ ನದಿಯ ರಕ್ಷಣೆಗಾಗಿ ಬಳಸಲಾಯಿತು. ಇದು ವಯಾ ಡೆವಾನಾ ರಸ್ತೆಯನ್ನು ದಾಟುವ ಸ್ಥಳವಾಗಿತ್ತು. ಇದು ಎಸೆಕ್ಸ್ನ ಕಾಲ್ಚೆಸ್ಟರ್ನೊಂದಿಗೆ ಲಿಂಕನ್ನಲ್ಲಿರುವ ದಂಡುಪ್ರದೇಶಗಳು ಹಾಗೂ ಉತ್ತರದ ಸಂಪರ್ಕ ಹೊಂದಿತ್ತು. ಈ ರೋಮನ್ ವಸಾಹತನ್ನು ಡುರೊಲಿಪಾಂಟ್ ಎಂದು ಗುರುತಿಸಲಾಗಿದೆ.
ರೋಮನ್ ವಸಾಹತಿನ ನಂತರ 350 ವರ್ಷಗಳು, ಅಂದರೆ AD 400 ತನಕ ಈ ವಸಾಹತು ಪ್ರಾದೇಶಿಕ ಕೇಂದ್ರವಾಗಿ ಉಳಿಯಿತು. ರೋಮನ್ ರಸ್ತೆಗಳು ಮತ್ತು ಗೋಡೆಗಳುಳ್ಳ ಆವರಣಗಳನ್ನು ಈ ಪ್ರದೇಶಗಳಲ್ಲಿ ಇಂದಿಗೂ ನೋಡಬಹುದಾಗಿದೆ.
ಡುರೊಲಿಪಾಂಟ್ ಎಂದರೆ ಡುರೊ ಅಥವಾ ಡುರೊಲಿ ಮೇಲೆ ಹಾದುಹೋಗುವ ಸೇತುವೆ ಎಂದರ್ಥ. ನೀರಿಗೆ ಸೆಲ್ಟಿಕ್ ಭಾಷೆಯಲ್ಲಿನ ಪದದಿಂದ ಇದು ವ್ಯುತ್ಪತ್ತಿಯಾದಂತೆ ಕಾಣುತ್ತದೆ.
ರೋಮನ್ನರು ಸ್ಥಳ ತೊರೆದಾಗ, ಸ್ಯಾಕ್ಸನ್ರು ಕ್ಯಾಸ್ಲ್ ಹಿಲ್ ಹಾಗೂ ಸುತ್ತಮುತ್ತಲ ಪ್ರದೇಶಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡರು. ಈ ಪ್ರದೇಶದಲ್ಲಿ ಅವರ ಸಮಾಧಿ ವಸ್ತುಗಳು ಲಭಿಸಿವೆ. ಆಂಗ್ಲೊ-ಸ್ಯಾಕ್ಸನ್ ಕಾಲದಲ್ಲಿ, ಪ್ರಯಾಣ ಕಷ್ಟಕರವಾದ ಜೌಗು ಪ್ರದೇಶಗಳಲ್ಲಿ ಉತ್ತಮ ವ್ಯಾಪಾರ ಸಂಪರ್ಕಗಳಿಂದ ಕೇಂಬ್ರಿಜ್ನ ಆರ್ಥಿಕತೆಗೆ ಬಹಳಷ್ಟು ನೆರವಾಯಿತು. ಆದರೂ, ಏಳನೆಯ ಶತಮಾನದಷ್ಟರಲ್ಲಿ, ಹತ್ತಿರದ ಏಲಿಯಿಂದ ಬರುವ ಪ್ರವಾಸಿಗರು ಕೇಂಬ್ರಿಜ್ ಬಹಳಷ್ಟು ಕುಸಿದಿದೆ ಎಂದು ವರದಿ ಮಾಡಿದರು. [ಸೂಕ್ತ ಉಲ್ಲೇಖನ ಬೇಕು] ಆಂಗ್ಲೊ-ಸ್ಯಾಕ್ಸಾನ್ ಕ್ರಾನಿಕಲ್ನಲ್ಲಿ ಕೇಂಬ್ರಿಜ್ನ್ನು ಗ್ರ್ಯಾಂಟೆಬ್ರಿಕ್ ಎನ್ನಲಾಗಿದೆ.
ಕೇಂಬ್ರಿಜ್ಗೆ ವೈಕಿಂಗ್ಗಳ ಆಗಮನವನ್ನು 875ರಲ್ಲಿ ಆಂಗ್ಲೋ-ಸ್ಯಾಕ್ಸನ್ ಕ್ರಾನಿಕಲ್ನಲ್ಲಿ ದಾಖಲಿಸಲಾಯಿತು. 878ರಲ್ಲಿ ಡೇನ್ಲಾ ಎಂಬ ವೈಕಿಂಗ್ ಶಾಸನ ಜಾರಿಗೊಳಿಸಲಾಯಿತು.[4] ವೈಕಿಂಗ್ ಜನರ ಕಟ್ಟುನಿಟ್ಟಿನ ವ್ಯಾಪಾರ ಪದ್ಧತಿಗಳಿಂದ ಕೇಂಬ್ರಿಜ್ ತ್ವರಿತ ಅಭಿವೃದ್ಧಿ ಕಂಡಿತು. ಈ ಅವಧಿಯಲ್ಲಿ, ಪಟ್ಟಣದ ಕೇಂದ್ರವು ನದಿಯ ಎಡ-ದಂಡೆಯಲ್ಲಿನ ಕ್ಯಾಸ್ಲ್ ಹಿಲ್ನಿಂದ ಇಂದು ಕ್ವೇಸೈಡ್ ಎಂದು ಹೆಸರಾದ ಬಲದಂಡೆಯ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು.[4] ವೈಕಿಂಗ್ ಯುಗದ ನಂತರ, ಸ್ಯಾಕ್ಸನ್ರು ಪುನಃ ಪ್ರಾಬಲ್ಯಕ್ಕೆ ಮರಳಿದರು. 1025ರಲ್ಲಿ ಸೇಂಟ್ ಬೆನೆಟ್ಸ್ ಚರ್ಚ್ [5] ನಿರ್ಮಿಸಿದರು. ಇದು ಇಂದಿಗೂ ಬೆನೆಟ್ ಸ್ಟ್ರೀಟ್ನಲ್ಲಿ ನಿಂತಿದೆ.
ಇಂಗ್ಲೆಂಡ್ ಜಯಿಸಿಕೊಂಡ ಎರಡು ವರ್ಷಗಳ ನಂತರ, 1068ರಲ್ಲಿ, ನಾರ್ಮಂಡಿಯ ವಿಲಿಯಮ್ ಕ್ಯಾಸ್ಲ್ ಹಿಲ್ನಲ್ಲಿ ಕೋಟೆಯೊಂದನ್ನು ನಿರ್ಮಿಸಿದ. ಹೊಸದಾಗಿ ಜಯಿಸಲಾದ ರಾಜ್ಯದ ಇತರೆ ಭಾಗಗಳಂತೆ, ಕೇಂಬ್ರಿಜ್ ಸಹ ರಾಜ ಹಾಗೂ ಅವನ ಡೆಪ್ಯೂಟಿಗಳ(ಸಹಾಯಕರ) ನಿಯಂತ್ರಣಕ್ಕೆ ಒಳಪಟ್ಟಿತು. ಎದ್ದುಕಾಣುವಂತಹ ರೌಂಡ್ ಚರ್ಚ್ ಈ ಕಾಲಕ್ಕೆ ಸೇರಿದೆ. ನಾರ್ಮನ್ ಯುಗದ ಆರಂಭದೊಳಗೆ, ಪಟ್ಟಣದ ಹೆಸರು ಗ್ರೆಂಟಾಬ್ರಿಜ್ ಅಥವಾ ಕ್ಯಾಂಟೆಬ್ರಿಜ್(ಗ್ರಾಂಟ್ಬ್ರಿಜ್) ಎಂದು ರೂಪಾಂತರಗೊಂಡಿತ್ತು. ಇದರ ಮೂಲಕ ಹರಿದ ನದಿಗೆ ಗ್ರ್ಯಾಂಟಾ ಎಂದು ಕರೆಯಲಾಯಿತು.
ಕಾಲಕ್ರಮೇಣ, ಪಟ್ಟಣದ ಹೆಸರು ಕೇಂಬ್ರಿಜ್ ಎಂದು ಮಾರ್ಪಾಡಾಯಿತು. ಕ್ಯಾಮ್ ನದಿ ಇಂದಿಗೂ ಗ್ರ್ಯಾಂಟಾ ಎಂದೇ ಹೆಸರಾಗಿದೆ. ಕೇಂಬ್ರಿಜ್ನಲ್ಲಿನ ಮಿಲ್ಪಾಂಡ್ ಮತ್ತು ಗ್ರ್ಯಾಂಟ್ಚೆಸ್ಟರ್ ನಡುವೆ ಹರಿಯುವ ಮೇಲು ನದಿಯ ಭಾಗವನ್ನು ಇಂದಿಗೂ ಸಮರ್ಪಕವಾಗಿ ಗ್ರ್ಯಾಂಟಾ ಎಂದು ಕರೆಯಲಾಗುತ್ತದೆ. ಪಟ್ಟಣದ ವೆಲ್ಷ್ ಭಾಷೆ ಹೆಸರು ಇಂದಿಗೂ ಕೇರ್ಗ್ರಾಂಟ್ ಎಂದೇ ಉಳಿದುಕೊಂಡಿದೆ. ಇದು ಗ್ರ್ಯಾಂಟ್ಚೆಸ್ಟರ್ಗೆ ಸರಿಸುಮಾರು ಹೋಲಿಕೆಯಾಗುತ್ತದೆ. ಅದು ಕೇಂಬ್ರಿಜ್ ಬಳಿಯಿರುವ ಒಂದು ಹಳ್ಳಿಯ ಹೆಸರು ಕೂಡ ಆಗಿದೆ. ಆನಂತರ, ಕೇಂಬ್ರಿಡ್ಜ್ ಎಂಬ ಹೆಸರಿನೊಂದಿಗೆ ಸಾಮ್ಯತೆ ಹೊಂದುವಂತೆ, ನದಿಯ ಹೆಸರು ಕ್ಯಾಮ್ ಎಂದು ಹೆಸರು ಪಡೆಯಿತು. 1209ರಲ್ಲಿ ಸ್ಥಾಪಿತವಾದ ವಿಶ್ವವಿದ್ಯಾನಿಲಯವು ಕ್ಯಾಂಟಾಬ್ರಿಗಿಯೆನ್ಸಿಸ್ (" ಕ್ಯಾಂಟಾಬ್"ಗೆ ಸಂಕ್ಷೇಪ) ಎಂಬ ಲ್ಯಾಟೀನ್ ವಿಶೇಷಣವನ್ನು ಬಳಸುತ್ತದೆ. ಇದಕ್ಕೆ ಕೇಂಬ್ರಿಜ್ ಎಂದರ್ಥ. ಆದರೆ ಇದು ಇಂಗ್ಲಿಷ್ ಹೆಸರಿನಿಂದ ಹಿಂಪದ-ರಚನೆಯಾಗಿದೆ.
1209ರಲ್ಲಿ, ಆಕ್ಸ್ಫರ್ಡ್ನಲ್ಲಿ ಸ್ಥಳೀಯರು ಸೃಷ್ಟಿಸಿದ ಪ್ರತಿಕೂಲಕರ ಸ್ಥಿತಿಯಿಂದ ಪಾರಾದ ವಿದ್ಯಾರ್ಥಿಗಳು ಕೇಂಬ್ರಿಜ್ಗೆ ಬಂದು ವಿಶ್ವವಿದ್ಯಾನಿಲಯ ಸ್ಥಾಪಿಸಿದರು.[6] ಇಂದಿಗೂ ಉಳಿದುಕೊಂಡಿರುವ ಅತಿ ಹಳೆಯ ಕಾಲೇಜ್ ಪೀಟರ್ಹೌಸ್ 1284ರಲ್ಲಿ ಸ್ಥಾಪನೆಯಾಯಿತು.[7] ಕಿಂಗ್ ಹೆನ್ರಿ VI ಕಿಂಗ್ಸ್ ಕಾಲೇಜ್ ಚ್ಯಾಪೆಲ್ ಎಂಬ ಕೇಂಬ್ರಿಜ್ನ ಹೆಸರಾಂತ ಕಟ್ಟಡದ ನಿರ್ಮಾಣ ಕಾರ್ಯವನ್ನು 1446ರಲ್ಲಿ ಪ್ರಾರಂಭಿಸಿದ.[8] ಕಿಂಗ್ ಹೆನ್ರಿ VIIIಯ ಆಳ್ವಿಕೆಯ ಕಾಲಾವಧಿಯಲ್ಲಿ ಈ ಕಟ್ಟಡ ನಿರ್ಮಾಣವನ್ನು 1515ರಲ್ಲಿ ಸಂಪೂರ್ಣಗೊಳಿಸಲಾಯಿತು.
ಕೇಂಬ್ರಿಜ್ ಯುನಿವರ್ಸಿಟಿ ಪ್ರೆಸ್ ಮುದ್ರಣಾ ಪರವಾನಗಿ ಪಡೆದು 1534ರಲ್ಲಿ ತನ್ನ ವ್ಯವಹಾರವನ್ನು ಆರಂಭಿಸಿತು. ಪಟ್ಟಣ ಕೇಂದ್ರಕ್ಕೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಹಾಬ್ಸನ್ಸ್ ಕಾಂಡ್ಯೂಯಿಟ್ ಯೋಜನೆಯನ್ನು 1610ರಲ್ಲಿ ನಿರ್ಮಿಸಲಾಯಿತು ಹಾಬ್ಸನ್ಸ್ ಛಾಯ್ಸ್ನ ಹಾಬ್ಸನ್ಸ್ರಿಂದ). ಇದರ ಕೆಲವು ಭಾಗಗಳು ಇಂದಿಗೂ ಉಳಿದುಕೊಂಡಿದೆ. ಅಡೆನ್ಬ್ರೂಕ್ಸ್ ಆಸ್ಪತ್ರೆಯನ್ನು 1766ರಲ್ಲಿ ಸ್ಥಾಪಿಸಲಾಯಿತು. ರೇಲ್ವೆ ಮತ್ತು ಕೇಂಬ್ರಿಜ್ ನಿಲ್ದಾಣವನ್ನು 1845ರಲ್ಲಿ ನಿರ್ಮಿಸಲಾಯಿತು. ದಂತ ಕಥೆಯ ಪ್ರಕಾರ, ವಿಶ್ವವಿದ್ಯಾನಿಲಯವು ಈ ಸ್ಥಳಕ್ಕೆ ಆದೇಶ ನೀಡಿತು: ನಗರದ ಮಧ್ಯಭಾಗದಿಂದ ಸಾಕಷ್ಟು ದೂರದಲ್ಲಿದ್ದು, ಲಂಡನ್ನೊಂದಿಗೆ ತಕ್ಷಣದ ಸಂಪರ್ಕದ ಸಾಧ್ಯತೆಯು ಕೆಲಸದಿಂದ ವಿದ್ಯಾರ್ಥಿಗಳ ಗಮನ ಬೇರೆಕಡೆ ಹರಿಯುವುದಿಲ್ಲ. ಆದರೂ, ಈ ಕಲ್ಪನೆ ಕುರಿತು ಯಾವುದೇ ಲಿಖಿತ ದಾಖಲೆಗಳಿಲ್ಲ.
ಲಂಡನ್ನ ಜನಸಂಖ್ಯಾ ಸ್ಪೋಟವನ್ನು ತಗ್ಗಿಸುವ ಯೋಜನೆಯೊಂದಿಗೆ ಇಲ್ಲಿ ಹಲವು ದೊಡ್ಡ ಕೌನ್ಸಿಲ್ ಎಸ್ಟೇಟ್(ಸಾರ್ವಜನಿಕ ವಸತಿ)ಗಳ ಸ್ಥಾಪನೆಯಿಂದ 1960 ಹಾಗೂ 1970ರ ದಶಕಗಳ ಕಾಲಾವಧಿಯಲ್ಲಿ, ಕೇಂಬ್ರಿಜ್ ನಗರದ ಗಾತ್ರವು ಬಹಳಷ್ಟು ಬೆಳೆಯಿತು.[ಸೂಕ್ತ ಉಲ್ಲೇಖನ ಬೇಕು] ನದಿಯ ಉತ್ತರ ಭಾಗದಲ್ಲಿರುವ ಅರ್ಬ್ಯೂರಿ, ಈಸ್ಟ್ ಚೆಸ್ಟರ್ಟನ್ ಮತ್ತು ಕಿಂಗ್ಸ್ ಹೆಡ್ಜೆಸ್ ಎಸ್ಟೇಟ್ಗಳ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದೆ. ನಗರದ ದಕ್ಷಿಣ ಭಾಗದಲ್ಲೂ ಸಣ್ಣ ಪ್ರಮಾಣದ ಅನೇಕ ಎಸ್ಟೇಟ್ಗಳಿವೆ.
ಬ್ರ್ಯಾಡ್ವೆಲ್ಸ್ ಕೋರ್ಟ್ ಎಂಬ ಕೇಂಬ್ರಿಜ್ನ ಮೊದಲ ವ್ಯಾಪಾರಿ ಮಳಿಗೆ 1962ರಲ್ಲಿ ಡ್ರಮರ್ ಸ್ಟ್ರೀಟ್ನಲ್ಲಿ ಆರಂಭವಾಯಿತು. ಆದರೆ 2006ರಲ್ಲಿ ಇದನ್ನು ನೆಲಸಮಗೊಳಿಸಲಾಯಿತು.[9] ಲಯನ್ ಯಾರ್ಡ್ನಲ್ಲಿ ಇತರೆ ವ್ಯಾಪಾರಿ ಮಳಿಗೆಗಳು ಆರಂಭಗೊಂಡವು. ಇಲ್ಲಿ ಸ್ಥಳಾಂತರಗೊಂಡ ನಗರದ ಕೇಂದ್ರ ಗ್ರಂಥಾಲಯ, ಹಾಗೂ, ನಗರದ ಕೈಟ್ ಏರಿಯಾದಲ್ಲಿ ದುಃಸ್ಥಿತಿಯಲ್ಲಿದ್ದ ವಿಕ್ಟೊರಿಯನ್ ವಸತಿ ಘಟಕ ಸ್ಥಳದಲ್ಲಿ ನಿರ್ಮಾಣಗೊಂಡ ಗ್ರ್ಯಾಫ್ಟನ್ ಸೆಂಟರ್ಗೆ ನೆಲೆಯಾಗಿತ್ತು. ಆ ಸಮಯ, ಇವೆರಡೂ ಯೋಜನೆಗಳಿಗೆ ವ್ಯಾಪಕ ವಿರೋಧ ವ್ಯಕ್ತವಾಯಿತು.[10][11]
ಆಂಗ್ಲಿಯಾ ಪಾಲಿಟೆಕ್ನಿಕ್ ಆಂಗ್ಲಿಯಾ ಪಾಲಿಟೆಕ್ನಿಕ್ ವಿಶ್ವವಿದ್ಯಾನಿಲಯ ಎಂದು ಬದಲಾಗುವುದರೊಂದಿಗೆ, 1992ರಲ್ಲಿ ಕೇಂಬ್ರಿಜ್ ನಗರದಲ್ಲಿ ಎರಡನೆಯ ವಿಶ್ವವಿದ್ಯಾನಿಲಯ ಸ್ಥಾಪನೆಯಾಯಿತು. 2005ರಲ್ಲಿ ಇದನ್ನು ಆಂಗ್ಲಿಯಾ ರಸ್ಕಿನ್ ವಿಶ್ವವಿದ್ಯಾನಿಲಯ ಎಂದು ಮರುನಾಮಕರಣ ಮಾಡಲಾಯಿತು. ಈ ಸಂಸ್ಥೆಯ ಮೂಲಗಳು, 1858ರಲ್ಲಿ ಜಾನ್ ರಸ್ಕಿನ್ ಸ್ಥಾಪಿಸಿದ ಕೇಂಬ್ರಿಜ್ ಸ್ಕೂಲ್ ಆಫ್ ಆರ್ಟ್ನಲ್ಲಿತ್ತು. ಮುಕ್ತ ವಿಶ್ವವಿದ್ಯಾನಿಲಯ ಸಹ ನಗರದಲ್ಲಿ ಉಪಸ್ಥಿತವಿದ್ದು, ನಗರದ ಹಿಲ್ಸ್ ರೋಡ್ನಲ್ಲಿ ಕಚೇರಿ ಕಾರ್ಯನಿರ್ವಹಿಸುತ್ತಿದೆ.
ವಿಶ್ವವಿದ್ಯಾನಿಲಯವಿದ್ದರೂ ಸಹ, 1951ರ ವರೆಗೂ ಕೇಂಬ್ರಿಜ್ಗೆ ನಗರ ಸನ್ನದು ನಿರಾಕರಿಸಲಾಗಿತ್ತು. ಸ್ಥಳವೊಂದು ನಗರದ ಸ್ಥಾನಮಾನ ಪಡೆಯಲು ಸಾಂಪ್ರದಾಯಿಕವಾಗಿ ಪೂರ್ವ ಅಗತ್ಯವಾದ ಕತಿಡ್ರಲ್ (ಪ್ರಧಾನ ಇಗರ್ಜಿ) ಕೇಂಬ್ರಿಜ್ನಲ್ಲಿರಲಿಲ್ಲ. ಬದಲಿಗೆ, ಚರ್ಚ್ ಆಫ್ ಇಂಗ್ಲೆಂಡ್ ಡಯಸಿಸ್ ಆಫ್ ಎಲಿ ವ್ಯಾಪ್ತಿಗೆ ಒಳಪಡುತ್ತದೆ.
ಪೂರ್ವ ಆಂಗ್ಲಿಯಾದ ಪ್ರಮುಖ ವಸಾಹತುಗಳಾದ ನಾರ್ವಿಚ್, ಕಾಲ್ಚೆಸ್ಟರ್, ಇಪ್ಸ್ವಿಚ್ ಮತ್ತು ಪೀಟರ್ಬೊರೊ ಜೊತೆ ಕೇಂಬ್ರಿಜ್ ಸಹ ಒಂದಾಗಿದೆ.
ಕೇಂದ್ರದಲ್ಲಿರುವ ಬಹಳಷ್ಟು ಕಟ್ಟಡಗಳುಕೇಂಬ್ರಿಜ್ ವಿಶ್ವವಿದ್ಯಾನಿಲಯಕ್ಕೆ ಸೇರಿವೆ. ಇವುಗಳಲ್ಲಿ ಕಿಂಗ್ಸ್ ಕಾಲೇಜ್ ಮತ್ತು ಮ್ಯಾಗ್ಡಲೀನ್ ಕಾಲೇಜ್ ಸಹ ಸೇರಿವೆ. ಟ್ರಿನಿಟಿ ಕಾಲೇಜ್ ಮತ್ತು ಸೇಂಟ್ ಜಾನ್ಸ್ ಕಾಲೇಜ್ ಕೇಂಬ್ರಿಜ್ ಮತ್ತು ಅದರಾಚೆ ಗಮನಾರ್ಹ ಭೂಮಿಯ ಪಾಲು ಹೊಂದಿವೆ. ಕೇಂಬ್ರಿಜ್ ಸೈನ್ಸ್ ಪಾರ್ಕ್ [12] ಹಾಗೂ ಫೆಲಿಕ್ಸ್ಸ್ಟೊ ಬಂದರು ಟ್ರಿನಿಟಿಯ ಸ್ವಾಮ್ಯದಲ್ಲಿದೆ. ಸೈನ್ಸ್ ಪಾರ್ಕ್ನ ಪಕ್ಕದಲ್ಲಿರುವ ಸೇಂಟ್ ಜಾನ್ಸ್ ಇನ್ನೊವೇಷನ್ ಸೆಂಟರ್ ಸೇಂಟ್ ಜಾನ್ಸ್ ಸ್ವಾಮ್ಯದಲ್ಲಿದೆ ಹಾಗೂ ನಗರಕೇಂದ್ರದಲ್ಲಿ ಅನೇಕ ಕಟ್ಟಡಗಳಿವೆ.[13]
ಕಾರ್ನ್ ಎಕ್ಷ್ಚೇಂಜ್ ವಾದ್ಯಗೋಷ್ಠಿ ಮಂದಿರ ಸುತ್ತಲಿನ ಪ್ರದೇಶವನ್ನು ನವೀಕರಿಸುವ ಯೋಜನೆಯನ್ನು ಕೇಂಬ್ರಿಜ್ ನಗರ ಕೌನ್ಸಿಲ್ ಹೊಂದಿದೆ. ಜೊತೆಗೆ, ಕಾಯಂ ಐಸ್ ಸ್ಕೇಟಿಂಗ್ ಹರವುನಿರ್ಮಾಣಕ್ಕಾಗಿ ಯೋಜನೆಯನ್ನೂ ಸಹ ಹಮ್ಮಿಕೊಳ್ಳಲಾಗಿದೆ. ಕಳೆದ ಕೆಲವು ವರ್ಷಗಳಿಂದ ಪ್ರತಿ ವರ್ಷ ಪಾರ್ಕರ್ಸ್ ಪೀಸ್ನಲ್ಲಿ ತಾತ್ಕಾಲಿಕ ಹರವು ಸಿದ್ಧಪಡಿಸುವಲ್ಲಿ ಪಡೆದ ಯಶಸ್ಸು ಇದಕ್ಕೆ ಪ್ರೇರಣೆಯಾಗಿದೆ. [ಸೂಕ್ತ ಉಲ್ಲೇಖನ ಬೇಕು] ಇಪ್ಪತ್ತೊಂದನೆಯ ಶತಮಾನದುದ್ದಕ್ಕೂ ಹೊಸ ಗೃಹನಿರ್ಮಾಣ ಮತ್ತು ಅಭಿವೃದ್ಧಿಗಳು ಮುಂದುವರೆದಿವೆ. ನಿಲ್ದಾಣದ ಸಮೀಪ CB1[14] ಮತ್ತು ಅಕಾರ್ಡಿಯಾ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ನಗರದ ದಕ್ಷಿಣದಲ್ಲಿ ಕ್ಲೇಫಾರ್ಮ್ [15] ಮತ್ತು ಟ್ರಂಪಿಂಗ್ಟನ್ ಮೆಡೋಸ್ [16] ಅಭಿವೃದ್ಧಿಗೊಳಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.
ಕೇಂಬ್ರಿಜ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಕೆಲವೊಮ್ಮೆ ಸಿಲಿಕಾನ್ ಫೆನ್ ಎನ್ನಲಾಗಿದೆ. ಇದು ಸಿಲಿಕಾನ್ ವ್ಯಾಲಿಯ ಪರೋಕ್ಷಪ್ರಸ್ತಾಪವಾಗಿದೆ. ಏಕೆಂದರೆ ನಗರದ ಸುತ್ತಲಿನ ವಿಜ್ಞಾನ ಉದ್ಯಾನಗಳಲ್ಲಿ ಹೈಟೆಕ್ ವಾಣಿಜ್ಯೋದ್ದಿಮೆಗಳು ಮತ್ತು ತಂತ್ರಜ್ಞಾನ ಅಭಿವೃದ್ಧಿ ಕೇಂದ್ರಗಳು ನಿರ್ಮಾಣವಾಗಿದೆ. ಇಂತಹ ಉದ್ಯಾನಗಳಲ್ಲಿ ಹಲವು ವಿಶ್ವವಿದ್ಯಾನಿಲಯ ಕಾಲೇಜುಗಳ ಸ್ವಾಮ್ಯದಲ್ಲಿವೆ ಅಥವಾ ಭೋಗ್ಯದ ಮೇಲೆ ಪಡೆದಿವೆ. ಉದ್ದಿಮೆಗಳು ಆಗಾಗ್ಗೆ ಈ ವಿಶ್ವವಿದ್ಯಾನಿಲಯಗಳಿಂದ ಪ್ರತ್ಯೇಕವಾಗಿರುವುದುಂಟು. [ಸೂಕ್ತ ಉಲ್ಲೇಖನ ಬೇಕು] ಇಂತಹ ಉದ್ದಿಮೆಗಳ ಪೈಕಿ ಅಬ್ಕ್ಯಾಮ್, ಸಿಎಸ್ಆರ್, ಎಕಾರ್ನ್ ಕಂಪ್ಯೂಟರ್ಸ್ (ಈಗ ARM), ಕ್ಯಾಮ್ಸೆಮಿ, ಜ್ಯಾಗೆಕ್ಸ್ ಮತ್ತು ಸಿಂಕ್ಲೇರ್ ಸೇರಿವೆ. ಕೇಂಬ್ರಿಜ್ ವಿಶ್ವವಿದ್ಯಾಲಯದ ತಂತ್ರಜ್ಞಾನ ಉದ್ಯಾನದಲ್ಲಿ ಮೈಕ್ರೋಸಾಫ್ಟ್ ತನ್ನ ಮೈಕ್ರೋಸಾಫ್ಟ್ ಸಂಶೋಧನೆಯ UKಕಚೇರಿಗಳನ್ನು ಸ್ಥಾಪಿಸಲು ಆಯ್ಕೆ ಮಾಡಿದೆ. ಇದು ರೀಡಿಂಗ್ನಲ್ಲಿರುವ ಮುಖ್ಯ ಮೈಕ್ರೋಸಾಫ್ಟ್ UKಕ್ಯಾಂಪಸ್ನಿಂದ ಪ್ರತ್ಯೇಕವಾಗಿದೆ.
ರೇಡಿಯೊ ಮತ್ತು ದೂರದರ್ಶನ ಉಪಕರಣಗಳು ಹಾಗೂ ರಕ್ಷಣಾ ಇಲಾಖೆಗಾಗಿ ಉಪಕರಣಗಳನ್ನು ತಯಾರಿಸುತ್ತಿದ್ದ ಪೈ ಲಿಮಿಟೆಡ್ ಸಂಸ್ಥೆಯು ಕೇಂಬ್ರಿಜ್ನಲ್ಲಿ ನೆಲೆಗೊಂಡಿದೆ. ನಂತರದ ವರ್ಷಗಳಲ್ಲಿ ಪೈ TETRA ರೇಡಿಯೊ ಉಪಕರಣ ತಯಾರಕ ಪೈ ಟೆಲಿಕಮ್ಯೂನಿಕೇಷನ್ಸ್ ಸೇರಿದಂತೆ ಹಲವು ಉದ್ದಿಮೆಗಳಾಗಿ ವಿಕಸನ ಹೊಂದಿತು. ನಗರದ ಪೂರ್ವ ಗಡಿಯಲ್ಲಿ ಮಾರ್ಷಲ್ ಏರೊಸ್ಪೇಸ್ ಎಂಬ ಪ್ರಮುಖ ಉದ್ದಿಮೆಯಿದೆ. ಕೇಂಬ್ರಿಜ್ ನೆಟ್ವರ್ಕ್ ಉದ್ದಿಮೆಗಳ ನಡುವಿನ ಅಂತರಸಂಪರ್ಕ ಏರ್ಪಡಿಸುತ್ತದೆ. ಎಫ್ಟಿಎಸ್ಇ100 ಮಾಹಿತಿ ತಂತ್ರಜ್ಞಾನ ಉದ್ದಿಮೆ ಆಟೊನಮಿ ಕಾರ್ಪೊರೇಷನ್ ಕೌಲೀ ರೋಡ್ನ ಬ್ಯುಸಿನೆಸ್ ಪಾರ್ಕ್ನಲ್ಲಿದೆ.
Cambridge | ||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
Climate chart (explanation) | ||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||
|
ಕೇಂಬ್ರಿಜ್ ಲಂಡನ್ ನಗರದಿಂದ ಸುಮಾರು 50 miles (80 km)* ಈಶಾನ್ಯ ದಿಕ್ಕಿನಲ್ಲಿದೆ. ನಗರವು ಸಮತಟ್ಟಾದ, ತಗ್ಗು ಪ್ರದೇಶದಲ್ಲಿದೆ. ಇದು ಫೆನ್ಸ್ (ಜೌಗು ಪ್ರದೇಶ)ದ ದಕ್ಷಿಣಕ್ಕಿದೆ. ಕೇಂಬ್ರಿಜ್ ಇರುವ ಪ್ರದೇಶವು ಸಮುದ್ರ ಮಟ್ಟಕ್ಕಿಂತ ಎತ್ತರದಲ್ಲಿ ಸುಮಾರು 6 metres (20 ft)* ರಿಂದ 24 metres (79 ft)*ರ ನಡುವೆ ವ್ಯತ್ಯಾಸ ಹೊಂದಿದೆ.[18] ಗ್ರ್ಯಾಂಟ್ಚೆಸ್ಟರ್ ಗ್ರಾಮದ ಬಳಿಯಿಂದ ಕ್ಯಾಮ್ ನದಿಯು ನಗರ ಮುಲಕ ಉತ್ತರ ದಿಕ್ಕಿನಲ್ಲಿ ಹರಿಯುತ್ತದೆ. ಕೇಂಬ್ರಿಜ್ ಎಂಬ ಹೆಸರು ಈ ನದಿಯಿಂದ ಹುಟ್ಟಿದೆ.[19]
ಬಹಳಷ್ಟು ನಗರಗಳಂತೆ, ಇಂದಿನ ಕೇಂಬ್ರಿಜ್ನಲ್ಲಿ ಹಲವು ಉಪನಗರಗಳಿವೆ ಮತ್ತು ಅತೀ ಸಾಂದ್ರತೆಯ ವಸತಿಪ್ರದೇಶಗಳಿವೆ. ಕೇಂಬ್ರಿಜ್ನ ನಗರ ಕೇಂದ್ರವು ಬಹಳಷ್ಟು ವಾಣಿಜ್ಯ , ಐತಿಹಾಸಿಕ ಕಟ್ಟಡಗಳು ಹಾಗೂ ಜೀಸಸ್ ಗ್ರೀನ್, ಪಾರ್ಕರ್ಸ್ ಪೀಸ್ ಮತ್ತು ಮಿಡ್ಸಮ್ಮರ್ ಕಾಮನ್ ಸೇರಿದಂತೆ ವಿಶಾಲ ಹಚ್ಚಹಸಿರು ಕ್ಷೇತ್ರಗಳನ್ನು ಹೊಂದಿವೆ. ನಗರದ ಕೇಂದ್ರದಲ್ಲಿನ ಬಹಳಷ್ಟು ರಸ್ತೆಗಳನ್ನು ಪಾದಚಾರಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ಮಾಡಲಾಗಿದೆ.
ವಿಶ್ವವಿದ್ಯಾನಿಲಯದ ಶಿಕ್ಷಣಾವಧಿಯ ದಿನಾಂಕದ ಒಳಗೆ ಮತ್ತು ಹೊರಗೆ ಕೇಂಬ್ರಿಜ್ನ ಜನಸಂಖ್ಯಾಶಾಸ್ತ್ರ ಗಣನೀಯವಾಗಿ ಬದಲಾಗುತ್ತದೆ. ಆದ್ದರಿಂದ ಇದನ್ನು ಅಳತೆ ಮಾಡುವುದು ಕಷ್ಟ.
ವಿಶ್ವವಿದ್ಯಾನಿಲಯದ ಶೈಕ್ಷಣಿಕ ಅವಧಿಯಲ್ಲಿ ನಡೆಸಿದ 2001 ಜನಗಣತಿಯಲ್ಲಿ ಕೇಂಬ್ರಿಜ್ ನಿವಾಸಿಗಳ ಪೈಕಿ 89.44%ರಷ್ಟು ಶ್ವೇತ ವರ್ಣೀಯರು ಎಂದು ಗುರುತಿಸಲಾಯಿತು (ರಾಷ್ಟ್ರೀಯ ಮಟ್ಟದ ಸರಾಸರಿ 92.12%ಗೆ ಹೋಲಿಸಿದಾಗ) [20] ವಿಶ್ವವಿದ್ಯಾನಿಲಯದೊಳಗೆ, ವಿದೇಶೀ ವಿದ್ಯಾರ್ಥಿಗಳೂ ಸೇರಿದಂತೆ, 84%ರಷ್ಟು ಪದವಿ ವಿದ್ಯಾರ್ಥಿಗಳು ಮತ್ತು 80%ರಷ್ಟು ಸ್ನಾತಕೋತ್ತರ ವಿದ್ಯಾರ್ಥಿಗಳು ತಮ್ಮನ್ನು ಶ್ವೇತವರ್ಣೀಯರು ಎಂದು ಗುರುತಿಸಿಕೊಂಡಿದ್ದಾರೆ.[21]
ಸರಾಸರಿ ಪ್ರಮಾಣಕ್ಕಿಂತಲೂ ಹೆಚ್ಚು ಸಂಬಳ ಪಡೆಯುವ ವೃತ್ತಿಪರ, ವ್ಯವಸ್ಥಾಪನಾ ಮತ್ತು ಆಡಳಿತ ನೌಕರಿಯಲ್ಲಿರುವ ಜನರು ಕೇಂಬ್ರಿಜ್ನಲ್ಲಿದ್ದಾರೆ ( 32.6% vs.23.5%)[22]. ಅಲ್ಲದೆ, ಕೈದುಡಿಮೆ ಮಾಡುವ ಜನರು ಸರಾಸರಿಗಿಂತ ತೀರಾ ಕಡಿಮೆ ಪ್ರಮಾಣದಲ್ಲಿದ್ದಾರೆ.(27.6% vs40.2%).[22] ಜೊತೆಗೆ, ಸರಾಸರಿ ಪ್ರಮಾಣಕ್ಕಿಂತ ಹೆಚ್ಚಿನ ಜನರು ಉನ್ನತ ಮಟ್ಟದ ವಿದ್ಯಾರ್ಹತೆ ಹೊಂದಿದ್ದಾರೆ (ಉದಾಹರಣೆಗೆ, ಪದವಿ, ಉನ್ನತ ರಾಷ್ಟ್ರೀಯ ಡಿಪ್ಲೊಮಾ, ಅರ್ಹತೆ ಹೊಂದಿರುವ ವೈದ್ಯರು) (41.2% vs 19.7%).[23]
ಕೇಂಬ್ರಿಜ್ನಲ್ಲಿನ ಐತಿಹಾಸಿಕ ಜನಸಂಖ್ಯೆ | ||||||||||
ವರ್ಷ | 1801 | 1811 | 1821 | 1831 | 1841 | 1851 | 1861 | 1871 | 1881 | 1891 |
---|---|---|---|---|---|---|---|---|---|---|
ಜನಸಂಖ್ಯೆ | 10,087 | 11,108 | 14,142 | 20,917 | 24,453 | 27,815 | 26,361 | 30,078 | 35,363 | 36,983 |
ವರ್ಷ | 1901 | 1911 | 1921 | 1931 | 1951 | 1961 | 1971 | 1981 | 1991 | 2001 |
ಜನಸಂಖ್ಯೆ | 38,379 | 40,027 | 59,264 | 66,789 | 81,500 | 95,527 | 99,168 | 87,209 | 107,496 | 108,863 |
ಜನಗಣತಿ: ರೀಜನಲ್ ಡಿಸ್ಟ್ರಿಕ್ಟ್ 1801-1901[24] ಸಿವಿಲ್ ಪ್ಯಾರಿಷ್ 1911–1961[25] ಡಿಸ್ಟ್ರಿಕ್ಟ್ 1971–2001[26] |
ಕೇಂಬ್ರಿಜ್ ಮಹಾನಗರವಲ್ಲದ ಜಿಲ್ಲೆಯಾಗಿದ್ದು, ನಗರ ಕೌನ್ಸಿಲ್ ಆಡಳಿತ ವ್ಯಾಪ್ತಿಯಲ್ಲಿರುತ್ತದೆ. ಕೇಂಬ್ರಿಜ್ಷೈರ್ ಕೌಂಟಿಯಲ್ಲಿರುವ ಐದು ಜಿಲ್ಲೆಗಳ ಪೈಕಿ ಕೇಂಬ್ರಿಜ್ ನಗರವೂ ಒಂದು. ಇದರ ಸುತ್ತಲೂ ಬಹಳಷ್ಟು ಗ್ರಾಮಾಂತರ ಎನ್ನಬಹುದಾದ ದಕ್ಷಿಣ ಕೇಂಬ್ರಿಜ್ಷೈರ್ ಜಿಲ್ಲೆಯು ಆವರಿಸಿದೆ. ನಿಜಕ್ಕೂ, ಕೇಂಬ್ರಿಜ್ ಇಡೀ ಇಂಗ್ಲೆಂಡ್ನಲ್ಲಿ ಇನ್ನೊಂದು ಜಿಲ್ಲೆಯಿಂದ ಸಂಪೂರ್ಣವಾಗಿ ಆವರಿಸಲಾಗಿರುವ ಏಕೈಕ ಜಿಲ್ಲೆಯಾಗಿದೆ. [ಸೂಕ್ತ ಉಲ್ಲೇಖನ ಬೇಕು] ಮಾರುಕಟ್ಟೆ ಚೌಕದಲ್ಲಿರುವ ಗಿಲ್ಡ್ಹಾಲ್ [27] ಎಂಬ ದೊಡ್ಡ ಕಟ್ಟಡದಲ್ಲಿ ನಗರ ಕೌನ್ಸಿಲ್ನ ಪ್ರಧಾನ ಕಾರ್ಯಸ್ಥಳವಿದೆ. ನಗರ ಕೌನ್ಸಿಲ್ ಸದಸ್ಯರು ವಾರ್ಷಿಕವಾಗಿ ನಗರದ ಮಹಾಪೌರ(ಮೇಯರ್)ನನ್ನು ಚುನಾಯಿಸುವರು. 1207ರ ಇಸವಿಯಲ್ಲಿ ಅರಸ ಜಾನ್ ಕೇಂಬ್ರಿಜ್ಗೆ ರಾಯಲ್ ಚಾರ್ಟರ್ (ರಾಜಮನೆತನದ ಸನ್ನದು) ನೀಡಿದ ಫಲವಾಗಿ, ಮಹಾಪೌರರನ್ನು ನೇಮಿಸುವ ಅವಕಾಶ ಲಭಿಸಿತು.[28] ಆದರೂ, ದಾಖಲೆಗಳ ಪ್ರಕಾರ ಮೊಟ್ಟಮೊದಲ ಮಹಾಪೌರ ಹಾರ್ವಿ ಫಿಟ್ಜ್ಯುಸ್ಟೇಸ್ 1213ರಲ್ಲಿ ಸೇವೆ ಸಲ್ಲಿಸಿದರು.[29] ಕೇಂಬ್ರಿಜ್ಷೈರ್ ಕೌಂಟಿ ಕೌನ್ಸಿಲ್ ಸಹ ಕೇಂಬ್ರಿಜ್ನ ಆಡಳಿತ ವಹಿಸುತ್ತದೆ.
ಮತದಾರರ ಪಟ್ಟಿಗಳ ವಿಂಗಡಣೆಯ ದೃಷ್ಟಿಯಿಂದ, ನಗರವನ್ನು 14 ನಗರ ವಿಭಾಗಗಳಾಗಿ ವಿಂಗಡಿಸಲಾಗಿದೆ: ಅಬ್ಬೆ, ಆರ್ಬ್ಯೂರಿ, ಕ್ಯಾಸ್ಲ್, ಚೆರ್ರಿ ಹಿಂಟನ್, ಕಾಲರಿಡ್ಜ್, ಈಸ್ಟ್ ಚೆಸ್ಟರ್ಟನ್, ಕಿಂಗ್ಸ್ ಹೆಡ್ಜಸ್, ಮಾರ್ಕೆಟ್, ನ್ಯೂನ್ಹ್ಯಾಮ್, ಪೀಟರ್ಸ್ಫೀಲ್ಡ್, ಕ್ವೀನ್ ಎಡಿತ್ಸ್, ರೊಮ್ಸೆ, ಟ್ರಂಪಿಂಗ್ಟನ್ ಹಾಗೂ ವೆಸ್ಟ್ ಚೆಸ್ಟರ್ಟನ್.
ನಗರ ಕೌನ್ಸಿಲ್ನ ರಾಜಕೀಯ ರಚನೆ ಈ ರೀತಿಯಿದೆ:[30]
2000ದ ಇಸವಿಯಿಂದಲೂ ಲಿಬರಲ್ ಡೆಮೊಕ್ರ್ಯಾಟ್ ಪಕ್ಷವು ನಗರ ಕೌನ್ಸಿಲ್ನಲ್ಲಿ ಬಹುಮತ ಉಳಿಸಿಕೊಂಡಿದೆ.
ಕೇಂಬ್ರಿಜ್ನ ಈ ಸಂಸದೀಯ ಕ್ಷೇತ್ರವು ನಗರದ ಬಹಳಷ್ಟು ಭಾಗವನ್ನು ವ್ಯಾಪಿಸಿದೆ. 2010ರ ಸಾರ್ವತ್ರಿಕ ಚುನಾವಣೆಯಲ್ಲಿ ಲಿಬರಲ್ ಡೆಮೊಕ್ರಾಟ್ ಅಭ್ಯರ್ಥಿ ಜೂಲಿಯನ್ ಹುಪರ್ಟ್ ಸಂಸತ್ ಸದಸ್ಯರಾಗಿ (MP) ಚುನಾಯಿತರಾದರು. ಇವರು ಡೇವಿಡ್ ಹಾವರ್ತ್ರ ಉತ್ತರಾಧಿಕಾರಿಯಾದರು. ಕ್ವೀನ್ಸ್ ಎಡಿತ್ಸ್ ವಾರ್ಡ್ [31] ಎಂಬ ನಗರದ ಒಂದು ಪ್ರದೇಶವು ದಕ್ಷಿಣ ಕೇಂಬ್ರಿಜ್ಷೈರ್ ಸಂಸದೀಯ ಕ್ಷೇತ್ರದಲ್ಲಿದೆ. ಇದರ MP ಕನ್ಸರ್ವೇಟಿವ್ ಪಕ್ಷದ ಆಂಡ್ರ್ಯೂ ಲ್ಯಾಂಸ್ಲೇ 1997ರಲ್ಲಿ ಚುನಾಯಿತರಾದರು. ಮುಂಚೆ, ನಗರವು 1992ರಿಂದ 2005ರ ತನಕ ಲೇಬರ್ MPಯನ್ನು ಚುನಾಯಿಸಿತ್ತು. ಇದಕ್ಕೂ ಮುಂಚೆ, ಎರಡನೆಯ ಮಹಾಯುದ್ಧದ ನಂತರ ಕನ್ಸರ್ವೇಟಿವ್ MPಯನ್ನು ಚುನಾಯಿಸಿತ್ತು. ಆದರೂ, ಕಳೆದ 20 ವರ್ಷಗಳಿಂದಲೂ ಕನ್ಸರ್ವೇಟಿವ್ ಪಕ್ಷದ ಮತಹಂಚಿಕೆಯು ಕಡಿಮೆಯಾಗುತ್ತಿರುವುದು ಕಂಡುಬಂದಿದೆ.
ವಿಶ್ವವಿದ್ಯಾನಿಲಯವೂ ಸಹ ಹೌಸ್ ಆಫ್ ಕಾಮನ್ಸ್ನಲ್ಲಿ ಸ್ಥಾನವೊಂದನ್ನು ಹೊಂದಿತ್ತು. ಈ ಸ್ಥಾನವನ್ನು ಹೊಂದಿದವರ ಪೈಕಿ ಸರ್ ಐಸಾಕ್ ನ್ಯೂಟನ್ ಗಮನಾರ್ಹ. 1948ರಲ್ಲಿ ಹೊರಡಿಸಲಾದ ಶಾಸನದಲ್ಲಿ ಕೇಂಬ್ರಿಜ್ ವಿಶ್ವವಿದ್ಯಾನಿಲಯ ಸಂಸತ್ ಕ್ಷೇತ್ರವನ್ನು ರದ್ದುಗೊಳಿಸಲಾಯಿತು. 1950ರ ಸಾರ್ವತ್ರಿಕ ಚುನಾವಣೆಗಾಗಿ ಸಂಸತ್ತಿನ ವಿಸರ್ಜನೆಯಿಂದ ಇತರೆ ವಿಶ್ವವಿದ್ಯಾನಿಲಯ ಕ್ಷೇತ್ರಗಳೊಂದಿಗೆ ಈ ಸ್ಥಾನವನ್ನು ರದ್ದುಗೊಳಿಸಲಾಯಿತು.
ಕೇಂಬ್ರಿಜ್ ಬಹಳಷ್ಟು ಸಾರಿಗೆ ಸಂಪರ್ಕವುಳ್ಳ ನಗರವಾಗಿದೆ. ಜೊತೆಗೆ, ಯುನೈಟೆಡ್ ಕಿಂಗ್ಡಮ್ನ ಹನ್ನೊಂದು 'ಸೈಕ್ಲಿಂಗ್ ನಗರ'ಗಳಲ್ಲಿ ಇದೂ ಒಂದು ಎಂದು 2008ರಲ್ಲಿ ಸ್ಥಾನಮಾನ ನೀಡಲಾಯಿತು. ಲಂಡನ್ನಲ್ಲಿರುವ ಕಿಂಗ್ಸ್ ಕ್ರಾಸ್ ಮತ್ತು ಲಿವರ್ಪೂಲ್ ಸ್ಟ್ರೀಟ್ ರೈಲು ನಿಲ್ದಾಣಗಳು ಮತ್ತು ಪೀಟರ್ಸ್ಬೊರೊ, ರಾಯ್ಸ್ಟನ್, ಕಿಂಗ್ಸ್ ಲಿನ್, ನಾರ್ವಿಚ್, ಇಪ್ಸ್ವಿಚ್ ಮತ್ತು ಸ್ಟ್ಯಾನ್ಸ್ಟೆಡ್ ವಿಮಾನ ನಿಲ್ದಾಣಗಳಿಗೆ ಕೇಂಬ್ರಿಜ್ನಿಂದ ಕಾಯಂ ರೈಲು ಸಂಚಾರವಿದೆ. ನಗರದ ಹೊರವಲಯಗಳ ಮೂಲಕ ಎರಡು ಪ್ರಮುಖ ರಸ್ತೆಗಳು ಹಾದುಹೋಗುತ್ತವೆ - M11 ಹೆದ್ದಾರಿ ಹಾಗೂ A14. ಕೇಂಬ್ರಿಜ್ನಲ್ಲಿ ತನ್ನದೇ ಆದ, ಮಾರ್ಷಲ್ಸ್ ವಿಮಾನ ನಿಲ್ದಾಣ ಎಂಬ ವಿಮಾನ ನಿಲ್ದಾಣವಿದೆ. ಮುಂಬರುವ ಕೇಂಬ್ರಿಜ್ಷೈರ್ ಗೈಡೆಡ್ ಬಸ್ವೇ ಕೇಂಬ್ರಿಜ್ ನಗರ ಕೇಂದ್ರದ ಮೂಲಕ ಹಾದುಹೋಗುತ್ತದೆ. ಕೇಂಬ್ರಿಜ್ಷೈರ್ ಕೌಂಟಿ ಕೌನ್ಸಿಲ್ ಸಹ ಸಾರಿಗೆ ನಾವೀನ್ಯ ನಿಧಿಯಿಂದ £500 ದಶಲಕ್ಷ ಹಣಕ್ಕೆ ಬಿಡ್ ಸಲ್ಲಿಸಿದೆ.
ಕೇಂಬ್ರಿಜ್ನಲ್ಲಿ ಎರಡು ವಿಶ್ವವಿದ್ಯಾನಿಲಯಗಳಿವೆ,[32] ಕೆಲವು ಅಂದಾಜಿನ ಪ್ರಕಾರ, ಕಾಲೇಜಿನ ಕೇಂಬ್ರಿಜ್ ವಿಶ್ವವಿದ್ಯಾನಿಲಯ ಮತ್ತು ಆಂಗ್ಲಿಯಾ ರಸ್ಕಿನ್ ವಿಶ್ವವಿದ್ಯಾನಿಲಯದ ಸ್ಥಳೀಯ ಕ್ಯಾಂಪಸ್ ಸುಮಾರು 30,000 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತವೆ.[33] ಕೇಂಬ್ರಿಜ್ ವಿಶ್ವವಿದ್ಯಾನಿಲಯವು 2007/08 ಶೈಕ್ಷಣಿಕ ಅವಧಿಯಲ್ಲಿ 17,662 ವಿದ್ಯಾರ್ಥಿಗಳಿದ್ದಾರೆ ಎಂದು ಅಂದಾಜಿಸಿತು. ಇದೇ ಅವಧಿಯಲ್ಲಿ, ಆಂಗ್ಲಿಯಾ ರಸ್ಕಿನ್ ವಿಶ್ವವಿದ್ಯಾನಿಲಯವು ತನ್ನ ಎರಡೂ ಕ್ಯಾಂಪಸ್ಗಳಲ್ಲಿ (ಒಂದು ಕೇಂಬ್ರಿಜ್ ಆಚೆ, ಅಂದರೆ ಚೆಲ್ಮ್ಸ್ಫರ್ಡ್ನಲ್ಲಿದೆ) 24,000 ವಿದ್ಯಾರ್ಥಿಗಳಿದ್ದಾರೆ ಎಂದು ಅಂದಾಜಿಸಿತು.[34] ಹಿಲ್ಸ್ ರೋಡ್ ಸಿಕ್ಸ್ತ್ ಫಾರ್ಮ್ ಕಾಲೇಜ್, ಲಾಂಗ್ ರೋಡ್ ಸಿಕ್ಸ್ತ್ ಫಾರ್ಮ್ ಕಾಲೇಜ್ ಮತ್ತು ಕೇಂಬ್ರಿಜ್ ರೀಜನಲ್ ಕಾಲೇಜ್ ರಾಜ್ಯದ ಹೆಚ್ಚಿನ ಶಿಕ್ಷಣ ಕ್ಷೇತ್ರಕ್ಕೆ ಅವಕಾಶವಾಗಿದೆ.
ಸರ್ಕಾರಿ ಮತ್ತು ಸ್ವತಂತ್ರ ಶಾಲೆಗಳು ಬಾಲ್ಯತರಗತಿಯಿಂದ ಹಿಡಿದು ಪ್ರೌಢಶಾಲೆಯ ವರೆಗೂ ಕೇಂಬ್ರಿಜ್-ವಾಸೀ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತವೆ. ಸರ್ಕಾರೀ ಶಾಲೆಗಳು ಕೇಂಬ್ರಿಜ್ಷೈರ್ ಕೌಂಟಿ ಕೌನ್ಸಿಲ್ ಆಡಳಿತದಲ್ಲಿದೆ. ಕೇಂಬ್ರಿಜ್ ನಗರದಲ್ಲಿರುವ 35 ಶಾಲೆಗಳು ಸೇರಿದಂತೆ ಇದು ಒಟ್ಟು 251 ಶಾಲೆಗಳ ಆಡಳಿತ ನಿರ್ವಹಿಸುತ್ತದೆ.[35][36] ಚೆಸ್ಟರ್ಟನ್ ಕಮ್ಯೂನಿಟಿ ಕಾಲೇಜ್, ಪಾರ್ಕ್ಸೈಡ್ ಫೆಡರೇಷನ್ (ಇದು ಪಾರ್ಕ್ಸೈಡ್ ಕಮ್ಯೂನಿಟಿ ಕಾಲೇಜ್ ಮತ್ತು ಕಾಲೆರಿಡ್ಜ್ ಕಮ್ಯೂನಿಟಿ ಕಾಲೇಜ್ನ್ನು ಒಳಗೊಂಡಿದೆ), ಮ್ಯಾನೊರ್ ಕಮ್ಯೂನಿಟಿ ಕಾಲೇಜ್, ನೆದರ್ಹಾಲ್ ಸ್ಕೂಲ್ ಹಾಗೂ ಕ್ರಿಶ್ಚಿಯನ್ ಅಂತರ-ಪಂಥೀಯ ಸೇಂಟ್ ಬೀಡ್ಸ್ ಶಾಲೆಯು ವಿಸ್ತೃತ ಪ್ರೌಢ ಶಿಕ್ಷಣ ನೀಡುತ್ತವೆ.[37]
ಕೇಂಬ್ರಿಜ್ ಪ್ರದೇಶದಿಂದ ಬರುವ ಹಲವು ವಿದ್ಯಾರ್ಥಿಗಳು ಗ್ರಾಮ ಪ್ರದೇಶದಲ್ಲಿರುವ ಕಾಲೇಜ್ಗಳಲ್ಲಿ ವ್ಯಾಸಂಗ ಮಾಡುತ್ತಾರೆ. ಇದು ಕೇಂಬ್ರಿಜ್ಷೈರ್ಗೇ ವಿಶಿಷ್ಟವಾಗಿರುವ ಒಂದು ಶೈಕ್ಷಣಿಕ ಸಂಸ್ಥೆ. ಇದು ಹಗಲಿನ ಹೊತ್ತು ಪ್ರೌಢಶಾಲೆಗಳಾಗಿ ಕಾರ್ಯನಿರ್ವಹಿಸಿ, ಶಾಲಾ ವೇಳೆಯ ನಂತರ ವಯಸ್ಕರ ಶಿಕ್ಷಣಾ ಕೇಂದ್ರಗಳಾಗಿ ಸೇವೆ ಸಲ್ಲಿಸುತ್ತದೆ.[38] ನಗರದ ಖಾಸಗಿ ಶಾಲೆಗಳಲ್ಲಿ ದಿ ಪರ್ಸ್ ಸ್ಕೂಲ್, ದಿ ಪರ್ಸ್ ಸ್ಕೂಲ್ ಫಾರ್ ಗರ್ಲ್ಸ್, ಸೇಂಟ್ ಮೇರೀಸ್ ಸ್ಕೂಲ್ ಮತ್ತು ದಿ ಲೇಯ್ಸ್ ಸ್ಕೂಲ್ ಸಹ ಸೇರಿವೆ.[39]
ಆಧುನಿಕ ಫುಟ್ಬಾಲ್ ಕ್ರೀಡೆಯ ಆವಿಷ್ಕಾರದಲ್ಲಿ ಕೇಂಬ್ರಿಜ್ ವಿಶಿಷ್ಟ ಪಾತ್ರ ನಿರ್ವಹಿಸಿದೆ: 1848ರಲ್ಲಿ ವಿಶ್ವವಿದ್ಯಾನಿಲಯದ ಸದಸ್ಯರು ಆಟದ ನಿಯಮಾವಳಿಗಳ ಮೊದಲ ಕಂತನ್ನು ರಚಿಸಿದರು. ಕೇಂಬ್ರಿಜ್ ನಿಯಮಗಳ ಸಂಹಿತೆಯ ಫುಟ್ಬಾಲ್ ಪಂದ್ಯವನ್ನು ಪಾರ್ಕರ್ಸ್ ಪೀಸ್ನಲ್ಲಿ ಮೊದಲಿಗೆ ಆಡಲಾಯಿತು. 1863ರಲ್ಲಿ ಸಂಘಟಿಸಲಾದ ಫುಟಬಾಲ್ ಅಸೊಸಿಯೇಷನ್ ನಿಯಮಗಳ ಮೇಲೆ ಮಹತ್ವದ ಪ್ರಭಾವ ಬೀರಿತು ಎನ್ನಲಾಗಿದೆ.[40]
ಕೇಂಬ್ರಿಜ್ ಯುನೈಟೆಡ್ F.Cಗೆ ನಗರವು ನೆಲೆಯಾಗಿದೆ. ಈ ತಂಡವು 1970ರಿಂದ 2005ರ ತನಕ ಅಬ್ಬೆ ಕ್ರೀಡಾಂಗಣದಲ್ಲಿ ನಡೆದ ಫುಟ್ಬಾಲ್ ಲೀಗ್ ಪಂದ್ಯಾವಳಿಯಲ್ಲಿ ಆಡಿತ್ತು. 2005ರಲ್ಲಿ ಈ ತಂಡವನ್ನು ಕಾನ್ಫೆರೆನ್ಸ್ ನ್ಯಾಷನಲ್ನ ಕೆಳವಿಭಾಗಕ್ಕೆ ಇಳಿಸಲಾಗಿದ್ದು, ಪ್ರಸಕ್ತ ಈ ವಿಭಾಗದಲ್ಲಿ ಸ್ಪರ್ಧಿಸುತ್ತಿದೆ. ಸುಮಾರು ಪಂದ್ಯಗಳಲ್ಲಿ ಸೋತ ಕಾರಣ ಕೆಳದರ್ಜೆಗೆ ಸ್ಥಳಾಂತರವು ಅನಿವಾರ್ಯವಾದಾಗ, ಈ ಕ್ರೀಡಾ ಸಂಸ್ಥೆಯನ್ನು ಗಣನೀಯ ಸಾಲಗಳೊಂದಿಗೆ ಆಡಳಿತ ಸುಪರ್ದಿಗೆ ತರಲಾಯಿತು. ಆದರೆ ತಂಡವು 2005-06 ಋತುವಿಗಾಗಿ ಆಡಳಿತ ಸುಪರ್ದಿನಿಂದ ಹೊರಬರುವಲ್ಲಿ ಯಶಸ್ವಿಯಾಯಿತು. 1990ರ ದಶಕದ ಕಾಲಾವಧಿಯಲ್ಲಿ ಈ ಕ್ರೀಡಾ ಸಂಸ್ಥೆಗೆ ಅತಿದೊಡ್ಡ ಯಶಸ್ಸು ದೊರಕಿತು. ಸತತ ಎರಡು ಬಾರಿ ಮೇಲ್ದರ್ಜೆಯ ಕೂಟಕ್ಕೆ ಬಡ್ತಿ ಹಾಗೂ ಸತತ ಎರಡು ಬಾರಿ ಫುಟ್ಬಾಲ್ ಲೀಗ್ ಕಪ್ ಕ್ವಾರ್ಟರ್ ಫೈನಲ್ ಸ್ಪರ್ಧೆಗೆ ಅವಕಾಶ ನೀಡುವ FA ಕಪ್ ಕ್ವಾರ್ಟರ್ ಫೈನಲ್ ಪ್ರವೇಶಗಳು ಹಾಗೂ ನೂತನ ಪ್ರೀಮಿಯರ್ ಲೀಗ್ ಬಡ್ತಿಗೆ ಬಹಳ ಸಮೀಪ ಮುಟ್ಟುವುದರೊಂದಿಗೆ ಯಶಸ್ಸು ಗಳಿಸಿತು.
ನಗರದ ಇನ್ನೊಂದು ಫುಟ್ಬಾಲ್ ಕ್ಲಬ್ ಕೇಂಬ್ರಿಜ್ ಸಿಟಿ F.C. ಚೆಸ್ಟರ್ಟನ್ನಲ್ಲಿರುವ ಸಿಟಿ ಗ್ರೌಂಡ್ನಲ್ಲಿ ಸದರ್ನ್ ಫುಟ್ಬಾಲ್ ಲೀಗ್ ಪ್ರೀಮಿಯರ್ ಡಿವಿಜನ್ನಲ್ಲಿ ಆಡುತ್ತಿದೆ. ಕೇಂಬ್ರಿಜ್ನ ಉತ್ತರದಲ್ಲಿರುವ ಹಿಸ್ಟನ್, ಕಾನ್ಫೆರೆನ್ಸ್ ನ್ಯಾಷನಲ್ ತಂಡವಾದ ಹಿಸ್ಟನ್ F.C.ಯ ನೆಲೆಯಾಗಿದೆ.
ಈ ನಗರದ ತಂಡಗಳು ರಗ್ಬಿ ಫುಟ್ಬಾಲ್ ಕ್ರೀಡೆಯ ಎರಡೂ ಮಾದರಿಗಳಲ್ಲಿ ಆಡುತ್ತಿವೆ. ರಗ್ಬಿ ಯುನಿಯನ್ ಕ್ಲಬ್ ಕೇಂಬ್ರಿಜ್ R.U.F.C. ನ್ಯಾಷನಲ್ ಡಿವಿಜನ್ ಒನ್ನ ಪಂದ್ಯವನ್ನು ಅದರ ಸ್ಥಳೀಯ ಮೈದಾನ ವೆಸ್ಟ್ ರೆನಾಲ್ಟ್ ಪಾರ್ಕ್ ನಲ್ಲಿ ಆಡುತ್ತದೆ. ಈ ಮೈದಾನವು ನಗರದ ನೈಋತ್ಯ ಮೂಲೆಯಗ್ರ್ಯಾಂಟ್ಚೆಸ್ಟರ್ ರಸ್ತೆಯಲ್ಲಿದೆ. ಕೇಂಬ್ರಿಜ್ ಈಗಲ್ಸ್ ರಗ್ಬಿ ಲೀಗ್ ತಂಡವು ಬೇಸಿಗೆಯ ತಿಂಗಳುಗಳಲ್ಲಿ ನ್ಯಾಷನಲ್ ಕಾನ್ಫೆರೆನ್ಸ್ ಲೀಗ್ ಈಸ್ಟ್ ಸೆಕ್ಷನ್ ಪಂದ್ಯಾವಳಿಯಲ್ಲಿ ಆಡುತ್ತದೆ.
ನಗರದ ಮಧ್ಯಭಾಗದ ಮೂಲಕ ಹರಿಯುವ ಕ್ಯಾಮ್ ನದಿಯನ್ನು ದೋಣಿ ಸಂಚಾರಕ್ಕೆ ಬಳಸಲಾಗುತ್ತದೆ. ವಿಶ್ವವಿದ್ಯಾನಿಲಯ ತನ್ನದೇ ಆದ ಕೇಂಬ್ರಿಜ್ ವಿಶ್ವವಿದ್ಯಾನಿಲಯ ಬೋಟ್ ಕ್ಲಬ್ ಎಂಬ ದೋಣಿ ಓಟದ ಸ್ಪರ್ಧೆಯ ಕ್ಲಬ್ ಹೊಂದಿದೆ. ಬಹುತೇಕ ಸದಸ್ಯ ಕಾಲೇಜುಗಳು ನದಿಯಲ್ಲಿ ದೋಣಿಮನೆಗಳನ್ನು ಹೊಂದಿವೆ. ಲೆಂಟ್ ಮತ್ತು ಬೇಸಿಗೆಯ ಋತುಗಳಲ್ಲಿ ನಡೆಸಲಾಗುವ ಎರಡು ಬಂಪ್ಸ್ ಓಟಗಳು ವಿಶ್ವವಿದ್ಯಾನಿಲಯದ ದೋಣಿ ಓಟದ ಸ್ಪರ್ಧೆಯ ಮುಖ್ಯ ಕೇಂದ್ರಬಿಂದುವಾಗಿದೆ. ಕೇಂಬ್ರಿಜ್ಷೈರ್ ರೋಯಿಂಗ್ ಅಸೊಸಿಯೇಷನ್ 1868ರಲ್ಲಿ ಸ್ಥಾಪಿತವಾಯಿತು. ವಿಶ್ವವಿದ್ಯಾನಿಲಯದ ಹೊರಗೆ ಸ್ಪರ್ಧಾತ್ಮಕ ದೋಣಿ ಓಟದ ಕ್ರೀಡೆಯನ್ನು ಆಯೋಜಿಸುತ್ತದೆ.[41] ಕಡಿಮೆ ಆಳವಿರುವಂತಹ ಕ್ಯಾಮ್ ನದಿಯ ಭಾಗಗಳನ್ನು ವಿಹಾರಾತ್ಮಕ ಪಂಟಿಂಗ್ ಕ್ರೀಡೆಗೆ ಬಳಸಲಾಗುತ್ತದೆ. ಪಂಟಿಂಗ್ ಚೂಪಾದ ಹುಟ್ಟುಕೋಲಿನಿಂದ ನದಿಯ ತಳಕ್ಕೆ ತಳ್ಳಿ ದೋಣಿಯನ್ನು ಮುಂದೆ ಸಾಗಿಸುವ ಬೋಟಿಂಗ್ ವಿಧಾನವಾಗಿದೆ.
ಕೇಂಬ್ರಿಜ್ ರೂಲ್ಸ್ ಫುಟ್ಬಾಲ್ನ ನೆಲೆಯಾಗಿರುವ ಪಾರ್ಕರ್ಸ್ ಪೀಸ್ ಮೈದಾನವನ್ನು ಪ್ರಥಮ ದರ್ಜೆಯ ಕ್ರಿಕೆಟ್ ಪಂದ್ಯಗಳಿಗೆ 1817ರಿಂದ 1864ರ ತನಕ ಆಯೋಜಿಸಲು ಬಳಸಲಾಯಿತು.[42] ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಫೆನ್ನರ್ಸ್ ಕ್ರಿಕೆಟ್ ಮೈದಾನವು ನಗರದಲ್ಲಿದೆ. ಇದು ಸಣ್ಣ ಪ್ರಮಾಣದ ಕೌಂಟಿ ಕೇಂಬ್ರಿಜ್ಷೈರ್ CCC ಕ್ರಿಕೆಟ್ ತಂಡದ ಸ್ಥಳೀಯ ಮೈದಾನವಾಗಿದೆ.[43] ಇಡೀ ವಿಶ್ವದಲ್ಲಿ ಕೇವಲ 42 ರಿಯಲ್ ಟೆನಿಸ್ ಅಂಕಣಗಳ ಪೈಕಿ ಎರಡು ಕೇಂಬ್ರಿಜ್ ನಗರದ ಕೇಂಬ್ರಿಜ್ ವಿಶ್ವವಿದ್ಯಾನಿಲಯದ ರಿಯಲ್ ಟೆನಿಸ್ ಕ್ಲಬ್ನಲ್ಲಿವೆ.[44] ಬ್ರಿಟಿಷ್ ಅಮೆರಿಕನ್ ಫುಟ್ಬಾಲ್ ಲೀಗ್ ಕ್ರೀಡಾ ಕ್ಲಬ್ ಕೇಂಬ್ರಿಜ್ಷೈರ್ ಕ್ಯಾಟ್ಸ್ ಕೋಲ್ಡ್ಹ್ಯಾಮ್ಸ್ ಕಾಮನ್ನಲ್ಲಿ ಆಡುತ್ತದೆ. ಟೀಮ್ ಕೇಂಬ್ರಿಜ್ [45] ಮತ್ತು ಕೇಂಬ್ರಿಜ್ ಸೈಕ್ಲಿಂಗ್ ಕ್ಲಬ್ ಎಂಬ ಎರಡು ಸೈಕ್ಲಿಂಗ್ ಕ್ಲಬ್ಗಳು ಕೇಂಬ್ರಿಜ್ನಲ್ಲಿವೆ.[46]
ಮೋಟಾರ್ಸೈಕಲ್ ಸ್ಪೀಡ್ವೇ ಓಟವು ನ್ಯೂಮಾರ್ಕೆಟ್ ರಸ್ತೆಯಲ್ಲಿರುವ ಗ್ರೇಹೌಂಡ್ ಕ್ರೀಡಾಂಗಣದಲ್ಲಿ 1939ರಲ್ಲಿ ನಡೆಯಿತು. ಸಮಕಾಲೀನ ಸ್ಥಳೀಯ ಮಾಧ್ಯಮವು ರೇಸಿಂಗ್ ಕೂಟದ ವರದಿಗಳನ್ನು ಮತ್ತು ಛಾಯಾಚಿತ್ರಗಳನ್ನು ಪ್ರಕಟಿಸಿದವು. ಈ ಸ್ಥಳದಲ್ಲಿ ಇತರ ವರ್ಷಗಳಲ್ಲೂ ಪಂದ್ಯಗಳನ್ನು ಆಯೋಜಿಸಲಾಗಿದೆಯೇ ಎನ್ನುವುದು ತಿಳಿದುಬಂದಿಲ್ಲ. ನ್ಯೂಮಾರ್ಕೆಟ್ ಮೋಟಾರ್ಸೈಕಲ್ ಕ್ಲಬ್ ಆಯೋಜಿಸಿದ ಈ ಕೂಟಗಳಲ್ಲಿ ತಂಡವು ನ್ಯೂಮಾರ್ಕೆಟ್ ಹೆಸರಿನಡಿ ಓಟಗಳಲ್ಲಿ ಭಾಗವಹಿಸಿತು. [ಸೂಕ್ತ ಉಲ್ಲೇಖನ ಬೇಕು]
ಆಕ್ಸ್ಫರ್ಡ್ ವಿರುದ್ಧ ವಿಶ್ವವಿದ್ಯಾನಿಲಯ ಮಟ್ಟದ ಕ್ರೀಡಾಕೂಟಗಳು, ಅದರಲ್ಲೂ ವಿಶಿಷ್ಟವಾಗಿ ರಗ್ಬಿ ಯುನಿಯನ್ ವಾರ್ಸಿಟಿ ಮ್ಯಾಚ್ ಹಾಗೂ ಬೋಟ್ ರೇಸ್ ಕ್ರೀಡೆಗಳಿಗಾಗಿ ಕೇಂಬ್ರಿಜ್ ಚಿರಪರಿಚಿತವಾಗಿದೆ. ವಿದ್ಯಾಸಂಸ್ಥೆಗಳೊಂದಿಗೆ ಯಾವುದೇ ಸಂಬಂಧವಿಲ್ಲದಿದ್ದರೂ ವಿಶ್ವಾದ್ಯಂತ ಹಲವಾರು ಈ ಪಂದ್ಯಗಳನ್ನು ವೀಕ್ಷಿಸುತ್ತಾರೆ [ಸೂಕ್ತ ಉಲ್ಲೇಖನ ಬೇಕು]
ಆರ್ಟ್ಸ್ ಥಿಯೇಟರ್ ಎಂಬುದು ಕೇಂಬ್ರಿಜ್ನ ಪ್ರಮುಖ ಸಾಂಪ್ರದಾಯಿಕ ರಂಗಮಂದಿರವಾಗಿದೆ. ಪಟ್ಟಣದ ಕೇಂದ್ರದಲ್ಲಿರುವ ಈ ರಂಗಮಂದಿರದಲ್ಲಿ 666 ಆಸನಗಳಿವೆ.[47] ಈ ರಂಗಮಂದಿರದಲ್ಲಿ ಸ್ಥಳೀಯ ನಾಟಕ ತಂಡಗಳು ಸೇರಿದಂತೆ ಪ್ರವಾಸೀ ತಂಡಗಳ ನಾಟಕಗಳು ಪ್ರದರ್ಶಿತವಾಗುತ್ತವೆ. ನಿಯಮಿತವಾಗಿ ನಾಟಕ ಪ್ರದರ್ಶನಗಳ ಅತಿಥೇಯ ವಹಿಸುವ, ನಗರದ ಅತಿದೊಡ್ಡ ಮಂದಿರ ಕೇಂಬ್ರಿಜ್ ಕಾರ್ನ್ ಎಕ್ಸ್ಚೇಂಜ್ 1800 ಜನರು ನಿಂತು ಅಥವಾ 1200 ಜನರು ಆಸೀನರಾಗಿ ನಾಟಕಗಳನ್ನು ವೀಕ್ಷಿಸುವ ಸಾಮರ್ಥ್ಯ ಹೊಂದಿದೆ. ನಗರದಲ್ಲಿರುವ 19ನೆಯ ಶತಮಾನದ ಮುಂಚಿನ ಕಾರ್ನ್ ಎಕ್ಸ್ಚೇಂಜ್ ಕಟ್ಟಡದಲ್ಲಿದ್ದ ಈ ಸ್ಥಳವನ್ನು 20ನೆಯ ಶತಮಾನದುದ್ದಕ್ಕೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಬಳಸಲಾಯಿತು. ಇದರಲ್ಲಿ ಚಹಾ ಔತಣಗಳು, ಮೋಟಾರು ವಾಹನ ಪ್ರದರ್ಶನಗಳು, ಕ್ರೀಡಾ ಪಂದ್ಯಗಳು ಮತ್ತು ತಾತ್ಕಾಲಿಕ ವೇದಿಕೆಯ ಮೇಲೆ ಸಂಗೀತ ವಾದ್ಯತಂಡಗಳ ಕಾರ್ಯಕ್ರಮಗಳು ಆಯೋಜಿತವಾಗುತ್ತಿದ್ದವು.[48] ನಗರ ಕೌನ್ಸಿಲ್ 1980ರ ದಶಕದಲ್ಲಿ ಈ ಕಟ್ಟಡವನ್ನು ನವೀಕರಿಸಿ, ಪೂರ್ಣಕಾಲಿಕ ಕಲಾಮಂದಿರವನ್ನಾಗಿ ನಾಟಕ, ನೃತ್ಯ ಮತ್ತು ಸಂಗೀತ ಗೋಷ್ಠಿಗಳನ್ನು ಆಯೋಜಿಸಿತು.[48]
220 ಆಸನಗಳುಳ್ಳ,[49] ದಿ ಷೆಡ್ ಎನ್ನಲಾದ ಜೆ2, ಕೇಂಬ್ರಿಜ್ ನಗರದ ಅತಿನವೀನ ರಂಗಮಂದಿರವಾಗಿದೆ. ಇದು ಕೇಂಬ್ರಿಜ್ ಲೀಷರ್ ಪಾರ್ಕ್ನಲ್ಲಿರುವ ಜಂಕ್ಷನ್ ಸಂಕೀರ್ಣದ ಅಂಗವಾಗಿದೆ. ಈ ರಂಗಮಂದಿರವನ್ನು 2004ರಲ್ಲಿ ತೆರೆಯಲಾಯಿತು. ಇಲ್ಲಿ ಸಂಗೀತ, ಹಾಸ್ಯನಾಟಕಗಳು ಮತ್ತು ರಾತ್ರಿ ಕ್ಲಬ್ಗಳನ್ನು ಆಯೋಜಿಸಲಾಗುತ್ತದೆ. ಅಲ್ಲದೆ ಸಾಂಸ್ಕೃತಿಕ ಮತ್ತು ಸಮಕಾಲೀನ ರಂಗಮಂದಿರ ಮತ್ತು ನೃತ್ಯವೂ ಸಹ ಆಯೋಜಿತವಾಗುತ್ತವೆ.[49]
ಕೇಂಬ್ರಿಜ್ ವಿಶ್ವವಿದ್ಯಾನಿಲಯವು ಎಡಿಸಿ ರಂಗಮಂದಿರವನ್ನು ನಿರ್ವಹಿಸುತ್ತದೆ. ಶಿಕ್ಷಣಾವಧಿಯ ಸಮಯದಲ್ಲಿ ವಾರಕ್ಕೆ ಮೂರು ಪ್ರದರ್ಶನಗಳನ್ನು ಸಾಮಾನ್ಯವಾಗಿ ಆಯೋಜಿಸುತ್ತದೆ. ಮಮ್ಫರ್ಡ್ ಥಿಯೇಟರ್ ಆಂಗ್ಲಿಯಾ ರಸ್ಕಿನ್ ವಿಶ್ವವಿದ್ಯಾನಿಲಯದ ಅಂಗವಾಗಿದ್ದು, ವಿದ್ಯಾರ್ಥಿ ಮತ್ತು ವಿದ್ಯಾರ್ಥಿಯೇತರ ಸಮುದಾಯಗಳು ಪ್ರದರ್ಶಿಸುವ ನಾಟಕಗಳಿಗೆ ಆತಿಥ್ಯ ವಹಿಸುತ್ತದೆ. ಈ ಕಾಲೇಜುಗಳ ಒಳಗೆ ಹಲವು ಪ್ರದರ್ಶನ ಸ್ಥಳಗಳಿವೆ.
ಡಗ್ಲಸ್ ಆಡಮ್ಸ್ ಅವರ ಡಿರ್ಕ್ ಜೆಂಟ್ಲಿಸ್ ಹೊಲಿಸ್ಟಿಕ್ ಡಿಟೆಕ್ಟಿವ್ ಏಜೆನ್ಸಿ ,[ಸೂಕ್ತ ಉಲ್ಲೇಖನ ಬೇಕು] ರೋಸ್ ಮೆಕಾಲೆ ಅವರ ದೇ ವರ್ ಡಿಫೀಟೆಡ್ ,[ಸೂಕ್ತ ಉಲ್ಲೇಖನ ಬೇಕು] ಕೇಟ್ ಆಟ್ಕಿನ್ಸನ್ ಅವರ ಕೇಸ್ ಹಿಸ್ಟರೀಸ್ [ಸೂಕ್ತ ಉಲ್ಲೇಖನ ಬೇಕು], ರೆಬೆಕಾ ಸ್ಟಾಟ್ ಅವರ ಘೋಸ್ಟ್ವಾಕ್ [ಸೂಕ್ತ ಉಲ್ಲೇಖನ ಬೇಕು] ಮತ್ತು ರಾಬರ್ಟ್ ಹ್ಯಾರಿಸ್ ಅವರ ಎನಿಗ್ಮಾ ,[50][51] ಸೇರಿದಂತೆ, ಹಲವು ಕೃತಿಗಳ ಕಥಾ ಹಂದರಗಳು ಕೇಂಬ್ರಿಜ್ ಸನ್ನಿವೇಶವನ್ನು ಪೂರ್ಣವಾಗಿ ಅಥವಾ ಆಂಶಿಕವಾಗಿ ಒಳಗೊಂಡಿದೆ. ಸೂಸಾನಾ ಗ್ರೆಗೊರಿ 14ನೆಯ ಶತಮಾನ ಕಾಲದ ಕೇಂಬ್ರಿಜ್ ಸನ್ನಿವೇಶದ ಕಾದಂಬರಿಗಳ ಸರಣಿಗಳನ್ನು ಬರೆದರು. [ಸೂಕ್ತ ಉಲ್ಲೇಖನ ಬೇಕು] ಜಾನಿ ಪ್ಯಾನಿಕ್ ಅಂಡ್ ದಿ ಬೈಬಲ್ ಆಫ್ ಡ್ರೀಮ್ಸ್ ಎಂಬ ಕಥಾ ಸಂಕಲನದಲ್ಲಿ ಪ್ರಕಟಿಸಲಾದ ಹಲವು ಕಿರುಕಥೆಗಳನ್ನು ಕೇಂಬ್ರಿಜ್ ಸನ್ನಿವೇಶದೊಂದಿಗೆ ಸಿಲ್ವಿಯಾ ಪ್ಲಾತ್ ಬರೆದಿದ್ದರು. [ಸೂಕ್ತ ಉಲ್ಲೇಖನ ಬೇಕು] ತಮ್ಮ ಆತ್ಮವತ್ತಾಂತ ಪೀರಿಯಡ್ ಪೀಸ್ ನಲ್ಲಿ ಚಾರ್ಲ್ಸ್ ಡಾರ್ವಿನ್ರ ಮೊಮ್ಮಗಳಾದ ಗ್ವೆನ್ ರಾವೆರಾಟ್ ಮುಂಚಿನ ವಿಕ್ಟೊರಿಯನ್ ಕೇಂಬ್ರಿಜ್ನ ತಮ್ಮ ಬಾಲ್ಯದ ಬಗ್ಗೆ ತಿಳಿಸಿದ್ದಾರೆ. ವಿಪ್ಲ್ಸ್ಮಿತ್ ಎಂಬ ಅಂಕಿತನಾಮದಡಿ ನೋಯೆಲ್ ಸೈಮಿಂಗ್ಟನ್ ದಿ ನೈಟ್ ಕ್ಲೈಂಬರ್ಸ್ ಆಫ್ ಕೇಂಬ್ರಿಜ್ ' ಎಂಬ ಕೃತಿ ಬರೆದರು. ಇದು 1930ರ ದಶಕದಲ್ಲಿ ರಾತ್ರಿಯ ವೇಳೆ ಕೇಂಬ್ರಿಜ್ ಕಾಲೇಜ್ಗಳು ಮತ್ತು ಪಟ್ಟಣದ ಕಟ್ಟಡಗಳನ್ನು ಏರಿಹೋಗುವ ಚಟುವಟಿಕೆ ಕುರಿತಾಗಿತ್ತು.[52]
ಫಿಲಿಪ್ಪಾ ಪಿಯರ್ಸ್ರವರ ಟಾಮ್ಸ್ ಮಿಡ್ನೈಟ್ ಗಾರ್ಡನ್ ಮತ್ತು ಮಿನ್ನೊ ಆನ್ ದಿ ಸೇ ಕೃತಿಗಳಲ್ಲಿ ಕೇಂಬ್ರಿಜ್ನ ಕಾದಂಬರೀಕೃತ ಆವೃತ್ತಿಗಳು ಗೋಚರಿಸುತ್ತವೆ. ಇವೆರಡೂ ಕೃತಿಗಳಲ್ಲಿ ನಗರವನ್ನು ಕ್ಯಾಸ್ಲ್ಫೊರ್ಡ್ ಎಂದು ಮರುನಾಮಕರಣ ಮಾಡಲಾಗಿತ್ತು. ಟಾಮ್ ಷಾರ್ಪ್ರವರ 'ಪೋರ್ಟರ್ಹೌಸ್ ಕಾಲೇಜ್' ಎಂಬ ಕಾಲ್ಪನಿಕ ಕಥೆಗಾಗಿ ಕೇಂಬ್ರಿಜ್ ಮೂಲಸ್ಥಾನವಾಗಿತ್ತು. [ಸೂಕ್ತ ಉಲ್ಲೇಖನ ಬೇಕು]
ಬಿಬಿಸಿಯ ದೂರದರ್ಶನ ಕಾರ್ಯಕ್ರಮ ಸೈಲೆಂಟ್ ವಿಟ್ನೆಸ್ ಚಿತ್ರೀಕರಣದ ಬಹಳಷ್ಟು ಪಾಲನ್ನು ಕೇಂಬ್ರಿಜ್ ನಗರದಲ್ಲಿ ನಡೆಸಲಾಗಿತ್ತು. [ಸೂಕ್ತ ಉಲ್ಲೇಖನ ಬೇಕು]
ಕೇಂಬ್ರಿಜ್ನಲ್ಲಿ ಸಂಘಟಿತವಾದ ವಾದ್ಯತಂಡಗಳ ಪೈಕಿ ಪಿಂಕ್ ಫ್ಲಾಯ್ಡ್ ಅತಿ ಗಮನಾರ್ಹವಾದದ್ದು. ಈ ವಾದ್ಯತಂಡದ ಮಾಜಿ ಹಾಡು ರಚನೆಕಾರ, ಗಿಟಾರ್ ವಾದಕ ಹಾಗೂ ಗಾಯಕ ಸಿಡ್ ಬ್ಯಾರೆಟ್ ಕೇಂಬ್ರಿಜ್ ನಗರದಲ್ಲಿ ಹುಟ್ಟಿ ಬೆಳೆದವರು. ಸಿಡ್ ಮತ್ತು ಇನ್ನೊಬ್ಬ ಸಂಸ್ಥಾಪಕ ಸದಸ್ಯ ರೊಜರ್ ವಾಟರ್ಸ್ ಇಬ್ಬರೂ ಕೇಂಬ್ರಿಜ್ಷೈರ್ ಹೈಸ್ಕೂಲ್ ಫಾರ್ ಬಾಯ್ಸ್ನಲ್ಲಿ ಸಹಪಾಠಿಗಳಾಗಿದ್ದರು. ಡೇವಿಡ್ ಗಿಲ್ಮೊರ್ ಸಹ ಕೇಂಬ್ರಿಜ್ನ ನಿವಾಸಿಯಾಗಿದ್ದು, ಹತ್ತಿರದ ಪರ್ಸ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಕೇಂಬ್ರಿಜ್ ಮೂಲದ ಇತರೆ ವಾದ್ಯತಂಡಗಳಲ್ಲಿ ಹೆನ್ರಿ ಕೌ, ಕಟ್ರಿನಾ ಅಂಡ್ ದಿ ವೇವ್ಸ್, ದಿ ಸಾಫ್ಟ್ ಬಾಯ್ಸ್, ಎಝಿಯೊ ಮತ್ತು ಹಾರೇಸ್ Xಸಹ ಸೇರಿವೆ. [53] ದಿ ಬ್ರೊಕೆನ್ ಫ್ಯಾಮಿಲಿ ಬ್ಯಾಂಡ್ [54] ಮತ್ತು ಶಾಸ್ತ್ರೀಯ-ಪಾಪ್ ಸಂಗಿತ ಶೈಲಿ ಮಿಶ್ರಣದ ವಾದ್ಯತಂಡ ಕಿಂಗ್ಸ್ ಸಿಂಗರ್ಸ್ ಸಹ ವಿಶ್ವವಿದ್ಯಾನಿಲಯದಲ್ಲಿ ಸಂಘಟಿತವಾಗಿದ್ದವು. [ಸೂಕ್ತ ಉಲ್ಲೇಖನ ಬೇಕು] ಏಕ-ಕಲಾವಿದರಾದ ಬೂ ಹ್ಯೂವರ್ಡಿನ್ [55] ಮತ್ತು ರೊಬಿನ್ ಹಿಚ್ಕಾಕ್, ಹಾಗೂ, ಡ್ರಮ್ ಮತ್ತು ಬಾಸ್ ಗಿಟಾರ್ ವಾದಕ ಕಲಾವಿದರಾದ(ಮತ್ತು ಸಹೋದರರು) Nu:Tone, ಹಾಗೂ ಲಾಗಿಸ್ಟಿಕ್ಸ್ ಕೇಂಬ್ರಿಜ್ ಮೂಲದವರು. ಗಾಯಕಿ ಒಲಿವಿಯಾ ನ್ಯೂಟನ್-ಜಾನ್ ಮತ್ತು ಮ್ಯೂಸ್ ರಾಕ್ ಶೈಲಿಯ ವಾದ್ಯತಂಡದ ಪ್ರಮುಖ ಗಾಯಕ ಮ್ಯಾಥ್ಯೂ ಬೆಲಾಮಿ ಕೇಂಬ್ರಿಜ್ನಲ್ಲಿ ಜನಿಸಿದ್ದರು. [56] ಗಾಯಕ ಮತ್ತು ಹಾಡು ರಚನೆಕಾರ ನಿಕ್ ಡ್ರೇಕ್, ಹಾಗೂ ಮ್ಯಾಂಚೆಸ್ಟರ್ ಸಂಗೀತ ಉದ್ಯಮಿ ಹಾಗೂ ಫ್ಯಾಕ್ಟರಿ ರೆಕಾರ್ಡ್ಸ್ ಸಂಸ್ಥಾಪಕ ಟೋನಿ ವಿಲ್ಸನ್ ಇವರಿಬ್ಬರೂ ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿದ್ದರು.
ಬ್ರಿಟಿಷ್ ಬೇಸಿಗೆ ಋತುವಿನಲ್ಲಿ ಹಲವು ಜಾತ್ರೆಗಳು ಮತ್ತು ಉತ್ಸವಗಳು ಕೇಂಬ್ರಿಜ್ನಲ್ಲಿ ನಡೆಯುತ್ತವೆ. ಮಿಡ್ಸಮ್ಮರ್ ಫೇರ್ ಎಂಬುದು ಯುನೈಟೆಡ್ ಕಿಂಗ್ಡಮ್ನಲ್ಲಿ ಅತಿ ಹಳೆಯ ಜಾತ್ರೆಗಳಲ್ಲಿ ಒಂದು. ಒಂದು ಹಂತದಲ್ಲಿ ಇದು ಇಡೀ ಯುರೋಪ್ನಲ್ಲೇ ಅತಿ ದೊಡ್ಡ ಮಧ್ಯಯುಗೀಯ ಜಾತ್ರೆಯಾಗಿತ್ತು. [ಸೂಕ್ತ ಉಲ್ಲೇಖನ ಬೇಕು] ಇಂದು ಇದು ಮುಖ್ಯವಾಗಿ ವಾರ್ಷಿಕ ಮೋಜಿನ ಮೇಳವಾಗಿದ್ದು, ಇದಕ್ಕೆ ಹೊಂದಿಕೊಂಡ ಮಾರುಕಟ್ಟೆಯ ಕುರುಹನ್ನು ಹೊಂದಿದೆ. ಬೇಸಿಗೆ-ಮಧ್ಯಾವಧಿಯ ದಿನಕ್ಕೆ ಸಮೀಪದ ಕಾಲದಲ್ಲಿ ಅಥವಾ ಆಸುಪಾಸಿನಲ್ಲಿ ಹಲವು ದಿನಗಳ ಕಾಲ ಈ ಜಾತ್ರೆ ನಡೆಯುತ್ತದೆ. ಜೂನ್ ತಿಂಗಳ ಮೊದಲ ಶನಿವಾರ ಮಿಡ್ಸಮರ್ ಕಾಮನ್ 'ಸ್ಟ್ರಾಬೆರಿ ಫೇರ್ (ನೆಲಮುಳ್ಳಿ ಉತ್ಸವ)'ನ ಸ್ಥಳ ಕೂಡ ಆಗಿದೆ. ಸಾಲು-ಸಾಲು ಮಾರುಕಟ್ಟೆ ಅಂಗಡಿ ಮುಂಗಟ್ಟುಗಳೊಂದಿಗೆ ಉಚಿತ ಸಂಗೀತ ಮತ್ತು ಮಕ್ಕಳ ಜಾತ್ರೆಯ ಸ್ಥಳವೂ ಆಗಿದೆ. ಮೇ ತಿಂಗಳ ಒಂದು ವಾರದ ಕಾಲದಲ್ಲಿ, ಸನಿಹದ ಜೀಸಸ್ ಗ್ರೀನ್ನಲ್ಲಿ ವಾರ್ಷಿಕ ಕೇಂಬ್ರಿಜ್ ಬಿಯರ್ ಉತ್ಸವ ನಡೆಯುತ್ತದೆ. 1974ರಲ್ಲಿ ಆರಂಭಗೊಂಡ ಈ ಬಿಯರ್ ಉತ್ಸವವು ಲಂಡನ್ ಹೊರತುಪಡಿಸಿ ಬ್ರಿಟನ್ನ ಎರಡನೆಯ ಅತಿ ದೊಡ್ಡ ಬಿಯರ್ ಉತ್ಸವವಾಗಿದೆ. 2009ರ ಈ ಉತ್ಸವದಲ್ಲಿ 90,000 ಪಿಂಟ್ಗಳಷ್ಟು ಬಿಯರ್ ಹಾಗೂ ಒಂದು ಟನ್ ಗಿಣ್ಣು ಬಡಿಸಲಾಯಿತು.[57]
ಕೇಂಬ್ರಿಜ್ ಫೊಲ್ಕ್ ಫೆಸ್ಟಿವಲ್ ಎಂಬುದು ಯುನೈಟೆಡ್ ಕಿಂಗ್ಡಮ್ನ ಅತಿದೊಡ್ಡ ಜಾನಪದ ಸಂಗೀತ ಉತ್ಸವಗಳಲ್ಲೊಂದು. ಇದು ವಾರ್ಷಿಕವಾಗಿ ನಗರದ ಹೊರವಲಯದಲ್ಲಿರುವ ಚೆರ್ರಿ ಹಿಂಟನ್ ಹಾಲ್ ಮೈದಾನದಲ್ಲಿ ನಡೆಯುತ್ತದೆ. ಮೊದಲ ಬಾರಿಗೆ 1964ರಲ್ಲಿ ನಡೆದಾಗಿನಿಂದಲೂ, ನಗರ ಕೌನ್ಸಿಲ್ ಈ ಉತ್ಸವವನ್ನು ಆಯೋಜಿಸುತ್ತಿದೆ. ಕೇಂಬ್ರಿಜ್ ಷೇಕ್ಸ್ಪಿಯರ್ ಫೆಸ್ಟಿವಲ್ ಎಂಬುದು ಎಂಟು-ವಾರಗಳ ಅವಧಿಯ ಉತ್ಸವ. ಕೇಂಬ್ರಿಜ್ ವಿಶ್ವವಿದ್ಯಾನಿಲಯ ಕಾಲೇಜುಗಳ ಉದ್ಯಾನದಲ್ಲಿ ವಿಲಿಯಮ್ ಷೇಕ್ಸ್ಪಿಯರ್ರ ಕೃತಿಗಳ ಹೊರಾಂಗಣ ಪ್ರದರ್ಶನಗಳು ಇಲ್ಲಿ ನಡೆಯುತ್ತವೆ.[58] ಮೊದಲ ಬಾರಿಗೆ 1977ರಲ್ಲಿ ಆರಂಭಗೊಂಡ ಕೇಂಬ್ರಿಜ್ ಫಿಲ್ಮ್ ಫೆಸ್ಟಿವಲ್ ವಾರ್ಷಿಕವಾಗಿ ಪ್ರತಿವರ್ಷ ಜುಲೈ ತಿಂಗಳಲ್ಲಿ ನಡೆಯುತ್ತಿತ್ತು. ಆದರೆ, 2008ರಲ್ಲಿ ಎಡಿನ್ಬರ್ಗ್ ಫಿಲ್ಮ್ ಫೆಸ್ಟಿವಲ್ ವೇಳಾಪಟ್ಟಿ ಬದಲಾದ್ದರಿಂದ, ಅದರ ಜತೆ ಘರ್ಷಣೆಯನ್ನು ತಡೆಯಲು ಸೆಪ್ಟೆಂಬರ್ ತಿಂಗಳಿಗೆ ಮುಂದೂಡಲಾಯಿತು.[59]
ಕೇಂಬ್ರಿಜ್ ಯುನಿವರ್ಸಿಟಿ ಹಾಸ್ಪಿಟಲ್ಸ್ ಎನ್ಹೆಚ್ಎಸ್ ಫೌಂಡೇಷನ್ ಟ್ರಸ್ಟ್ ಕೇಂಬ್ರಿಜ್ನಲ್ಲಿದೆ. ನಗರದ ಸುತ್ತಲೂ ಹಲವು ಸಣ್ಣ ಪ್ರಮಾಣದ ವೈದ್ಯಕೀಯ ಕೇಂದ್ರಗಳಿವೆ ಹಾಗೂ ಅಡೆನ್ಬ್ರೂಕ್ಸ್ನಲ್ಲಿ ಒಂದು ಸಾರ್ವಜನಿಕ ಆಸ್ಪತ್ರೆ ಸಹ ಹೊಂದಿದೆ. ಅಡೆನ್ಬ್ರೂಕ್ಸ್ ಎಂಬುದು ಕಲಿಯುವ ಮತ್ತು ಬೋಧನಾ ಆಸ್ಪತ್ರೆಯಾಗಿದೆ. ವೈದ್ಯಕೀಯ ಸಂಶೋಧನಾ ಕೇಂದ್ರವಾಗಿ ಕಾರ್ಯನಿರ್ವಹಿಸುವ ಇದು ಯುನೈಟೆಡ್ ಕಿಂಗ್ಡಮ್ನಲ್ಲಿನ ಅತಿ ದೊಡ್ಡ ಅಸ್ಪತ್ರೆಯಾಗಿದೆ.
ಈಸ್ಟ್ ಆಫ್ ಇಂಗ್ಲೆಂಡ್ ಆಂಬ್ಯುಲೆನ್ಸ್ ಸರ್ವಿಸ್ ನಗರವನ್ನು ಒಳಗೊಂಡಿದೆ. ಇದರ ಆಂಬ್ಯುಲೆನ್ಸ್ ಘಟಕವು ಹಿಲ್ಸ್ ರೋಡ್ನಲ್ಲಿದೆ.[60] ಚಿಕ್ಕದಾಗಿರುವ ಬ್ರೂಕ್ಫೀಲ್ಡ್ ಆಸ್ಪತ್ರೆಯು ಮಿಲ್ ರೋಡ್ನಲ್ಲಿದೆ.[61] ಕೇಂಬ್ರಿಜ್ಷೈರ್ ಕಾಂಸ್ಟಾಬುಲರಿ ನಗರದ ಕಾನೂನು ಸುವ್ಯವಸ್ಥೆಯ ಆರಕ್ಷಕ ಪಡೆಯಾಗಿದೆ. ನಗರದ ಪಾರ್ಕ್ಸೈಡ್ನಲ್ಲಿ [62] ಅಗ್ನಿ ಶಾಮಕ ದಳ ಠಾಣೆಯ ಪಕ್ಕದಲ್ಲಿ ಪ್ರಮುಖ ಆರಕ್ಷಕ ಠಾಣೆಯಿದೆ. ಕೇಂಬ್ರಿಜ್ಷೈರ್ ಫೈರ್ ಅಂಡ್ ರೆಸ್ಕ್ಯೂ ಅಗ್ನಿಶಾಮಕ ಸೇವೆ ಒದಗಿಸುತ್ತದೆ.[63]
ಕೇಂಬ್ರಿಜ್ ವಾಟರ್ [64][65] ನಗರಕ್ಕೆ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಮಾಡುತ್ತದೆ. ಆಂಗ್ಲಿಯನ್ ವಾಟರ್ ಒಳಚರಂಡಿ ಸೇವಾ ವ್ಯವಸ್ಥೆ ಒದಗಿಸುತ್ತದೆ.[66] ಕೇಂಬ್ರಿಜ್ ಈಸ್ಟ್ ಆಫ್ ಇಂಗ್ಲೆಂಡ್ ಪ್ರದೇಶದ ಅಂಗವಾಗಿದೆ. ಈ ಪ್ರದೇಶಕ್ಕೆ ಇಡಿಎಫ್ ಎನರ್ಜಿ ವಿತರಣಾ ಜಾಲ ನಿರ್ವಾಹಕವಾಗಿದೆ.[67] ನಗರದಲ್ಲಿ ಯಾವುದೇ ವಿದ್ಯುತ್ ಉತ್ಪಾದನಾ ಕೇಂದ್ರವಿಲ್ಲ. ಆದರೂ ಕಿಂಗ್ಸ್ ಹೆಜಸ್ನಲ್ಲಿ ಕೇಂಬ್ರಿಜ್ ರೀಜನಲ್ ಕಾಲೇಜ್ ಅಭಿವೃದ್ಧಿಯ ಅಂಗವಾಗಿರುವ ಐದು ಮೀಟರ್ ಗಾಳಿ ಟರ್ಬೈನ್ನನ್ನು ನೋಡಬಹುದಾಗಿದೆ.[68]
ನಗರದ ಕೇಂದ್ರೀಯ ಗ್ರಂಥಾಲಯವು ಗ್ರ್ಯಾಂಡ್ ಆರ್ಕೇಡ್ನಲ್ಲಿದೆ. 33 ತಿಂಗಳುಗಳ ಕಾಲ ನವೀಕರಣಕ್ಕಾಗಿ ಮುಚ್ಚಲಾಗಿದ್ದ ಈ ಗ್ರಂಥಾಲಯವನ್ನು 2009ರ ಸೆಪ್ಟೆಂಬರ್ 29ರಂದು ಪುನಃ ತೆರೆಯಲಾಯಿತು.[69] ಇದು ಜನವರಿ 2007ರಲ್ಲಿ ಮರುಅಭಿವೃದ್ಧಿಗಾಗಿ ಮುಚ್ಚಿದಾಗ ಮುಂಗಾಣಲಾದ ಅವಧಿಗಿಂತ ಎರಡು ಪಟ್ಟಿಗಿಂತ ಹೆಚ್ಚಿನ ಅವಧಿಯಾಗಿದೆ.[69][70]
ಕೇಂಬ್ರಿಜ್ನಲ್ಲಿ ಹಲವು ಇಗರ್ಜಿಗಳಿವೆ. ಇವುಗಳಲ್ಲಿ ಕೆಲವು ನಗರದ ವಾಸ್ತುಶೈಲಿಯ ಭೂಚಿತ್ರಣದ ಗಮನಾರ್ಹ ಭಾಗಗಳಾಗಿವೆ. ರೊಮ್ಸೆ ಮಿಲ್ ಎಂಬ ಕೇಂಬ್ರಿಜ್ ಮೂಲದ ಕುಟುಂಬ ಮತ್ತು ಯುವ ಸಂಘಟನೆಯು 2007ರಲ್ಲಿ ತನ್ನ ಕೇಂದ್ರವನ್ನು ಯಾರ್ಕ್ ಆರ್ಚ್ಬಿಷಪ್ರಿಂದ ಪುನಃ ಉದ್ಘಾಟಿಸಿತು. ಈಸ್ಟ್ ಆಫ್ ಇಂಗ್ಲೆಂಡ್ ಪ್ರಾದೇಶಿಕ ಸಭೆಯು ಈ ಪದ್ಧತಿಯನ್ನು ಸಾಮಾಜಿಕ ಒಳಗೊಳ್ಳುವಿಕೆಯ ಅತ್ಯುತ್ತಮ ಪದ್ಧತಿಯ ಉದಾಹರಣೆ ಎಂದು ಪ್ರಶಂಸಿಸಿದೆ.
ಕೇಂಬ್ರಿಜ್ ಈಸ್ಟ್ ಆಂಗ್ಲಿಯಾ ಡಯಸೀಸ್ನ ರೊಮನ್ ಕ್ಯಾತಲಿಕ್ನಲ್ಲಿದೆ. ನಗರದ ಹಿಲ್ಸ್ ರೋಡ್ ಮತ್ತು ಲೆನ್ಸ್ಫೀಲ್ಡ್ ರೋಡ್ ಸಂಧಿಸ್ಥಾನದಲ್ಲಿ ಗೋಥಿಕ್ ಪುನಶ್ಚೇತನದ ಆವರ್ ಲೇಡಿ ಅಂಡ್ ದಿ ಇಂಗ್ಲಿಷ್ ಮಾರ್ಟರ್ಸ್ ಚರ್ಚ್ ಈ ನಗರಕ್ಕೆ ಸೇವೆ ಸಲ್ಲಿಸುತ್ತದೆ. ಗ್ರೇಟ್ ಬ್ರಿಟನ್ ಮತ್ತು ಸುರೋಝ್ನ [71] ಆರ್ಚ್ಡಯಸೀಸ್ ವ್ಯಾಪ್ತಿಯಲ್ಲಿ ರಷ್ಯನ್ ಸಂಪ್ರದಾಯಸ್ಥ ಇಗರ್ಜಿ ಮತ್ತು ಗ್ರೇಟ್ ಬ್ರಿಟನ್ನ ಆರ್ಚ್ಡಯಸೀಸ್ ವ್ಯಾಪ್ತಿಯಲ್ಲಿ ಗ್ರೀಕ್ ಸಂಪ್ರದಾಯಸ್ಥ ಇಗರ್ಜಿ ಸಹ ಇದೆ.[72]
ಕೇಂಬ್ರಿಜ್ನಲ್ಲಿ ಎರಡು ಯೆಹೂದಿ ಆರಾಧನಾ ಮಂದಿರಗಳಿವೆ. ಕೇಂಬ್ರಿಜ್ ವಿಶ್ವವಿದ್ಯಾನಿಲಯ ಯೆಹೂದಿ ಸಂಘವು ನಿರ್ವಹಿಸುವ ಸಂಪ್ರದಾಯಸ್ಥ ಯೆಹೂದಿ ಪ್ರಾರ್ಥನಾ ಮಂದಿರ ಮತ್ತು ಯೆಹೂದಿ ವಿದ್ಯಾರ್ಥಿ ಕೇಂದ್ರವು ಥಾಂಪ್ಸನ್ಸ್ ಲೇನ್ನಲ್ಲಿದೆ. ಸುಧಾರಣಾವಾದಿ ಯೆಹೂದಿ ಪ್ರಾರ್ಥನಾ ಮಂದಿರ 'ಬೆತ್ ಷಾಲೊಮ್' ಸ್ಥಳೀಯ ಶಾಲೆಯೊಂದರಲ್ಲಿ ಸಭೆ ಸೇರುತ್ತದೆ. ಮಾವ್ಸನ್ ರೋಡ್ನಲ್ಲಿರುವ ಅಬು ಬಕ್ರ್ ಜಾಮಿಯಾ ಇಸ್ಲಾಮಿಕ್ ಕೇಂದ್ರ ಮತ್ತು ಕಿಂಗ್ಸ್ ಹೆಡ್ಜೆಸ್[73]ನಲ್ಲಿರುವ ಒಮರ್ ಫಾರೂಕ್ ಮಸೀದಿ ಮತ್ತು ಸಾಂಸ್ಕೃತಿಕ ಕೇಂದ್ರವು ನಗರದಲ್ಲಿರುವ ಸುಮಾರು 4,000 ಮಂದಿ ಮುಸ್ಲಿಂ ಸಮುದಾಯಕ್ಕೆ ಹೊಸ ಯೋಜಿತ ಮಸೀದಿ ನಿರ್ಮಾಣವಾಗುವ ತನಕ ಸೇವೆ ಸಲ್ಲಿಸುತ್ತಿವೆ.[74]
1998ರಲ್ಲಿ ನ್ಯೂಮಾರ್ಕೆಟ್ ರೋಡ್ನಲ್ಲಿ ಮುಂಚೆ ಬಾರ್ನ್ವೆಲ್ ರಂಗಮಂದಿರವಿದ್ದ ಸ್ಥಳದಲ್ಲಿ ಬೌದ್ಧರ ಕೇಂದ್ರ ಸ್ಥಾಪಿಸಲಾಯಿತು.[75] ನಗರದ ಮಿಲ್ ರೋಡ್[76] ನಲ್ಲಿರುವ ಭಾರತ್ ಭವನ್ ಭಾರತೀಯ ಸಾಂಸ್ಕೃತಿಕ ಕೇಂದ್ರದಲ್ಲಿ ಹಿಂದೂ ಮತ್ತು ಹರೇ ಕೃಷ್ಣ ಸಮುದಾಯದವರು ಪ್ರಾರ್ಥನೆ ಸಲ್ಲಿಸುವರು. ಈಗ ಅಲ್ಲಿ ಒಂದು ದೇವಾಲಯ ನಿರ್ಮಿಸಲೆಂದು ಸ್ಥಳೀಯಹಿಂದೂಗಳು 2005ರಲ್ಲಿ ನಿಧಿ ಕ್ರೋಢೀಕರಿಸಿದರು.[77] ಕೇಂಬ್ರಿಜ್ ಹ್ಯೂಮನಿಸ್ಟ್ಸ್ ಸೇರಿದಂತೆ, ಹಲವು ಜಾತ್ಯತೀತ ಸಮುದಾಯಗಳು ಕೇಂಬ್ರಿಜ್ನಲ್ಲಿ ಸಕ್ರಿಯವಾಗಿವೆ.[78]
ಗ್ರೇಟ್ ಸೇಂಟ್ ಮೇರಿಸ್ ಚರ್ಚ್ 'ವಿಶ್ವವಿದ್ಯಾನಿಲಯ ಇಗರ್ಜಿ' ಎಂಬ ಸ್ಥಾನಮಾನ ಪಡೆದಿದೆ.[79] ವಿಶ್ವವಿದ್ಯಾನಿಲಯ ಕಾಲೇಜ್ಗಳಲ್ಲಿ ಬಹಳಷ್ಟು ಕಾಲೇಜ್ಗಳಲ್ಲಿ ಚ್ಯಾಪೆಲ್ಗಳಿವೆ. ಚರ್ಚ್ ಆಫ್ ಇಂಗ್ಲೆಂಡ್ನ ಧಾರ್ಮಿಕವಿಧಿಗಳು ಮತ್ತು ಆಚರಣೆಗಳಿಗೆ ಅನುಗುಣವಾಗಿ ಸೇವೆಗಳನ್ನು ಈ ಚ್ಯಾಪೆಲ್ನಲ್ಲಿ ನಡೆಸಲಾಗುತ್ತದೆ. ಸೇಂಟ್ ಎಡ್ಮಂಡ್ಸ್ ಕಾಲೇಜ್ನ ಚ್ಯಾಪೆಲ್ ರೋಮನ್ ಕ್ಯಾತಲಿಕ್ ಪಂಥಕ್ಕೆ ಸೇರಿದೆ.[80] ನಗರದಲ್ಲಿ ಹಲವು ದೇವತಾಶಾಸ್ತ್ರ ಕಾಲೇಜ್ಗಳಿವೆ. ಕೇಂಬ್ರಿಜ್ ವಿಶ್ವವಿದ್ಯಾನಿಲಯ ಮತ್ತು ಆಂಗ್ಲಿಯಾ ರಸ್ಕಿನ್ ವಿಶ್ವವಿದ್ಯಾನಿಲಯಗಳಿಗೆ ಸೇರಿದ ಕ್ರೈಸ್ತಪುರೋಹಿತ ವರ್ಗದವರಿಗೆ ಈ ಕಾಲೇಜುಗಳಲ್ಲಿ ವಿವಿಧ ಪಂಥಗಳಿಗಾಗಿ ದೀಕ್ಷಾಪ್ರದಾನಕ್ಕೆ ತರಬೇತಿ ನೀಡಲಾಗುತ್ತದೆ. ಕೇಂಬ್ರಿಜ್ ವಿಶ್ವವಿದ್ಯಾನಿಲಯವು ಕೇಂಬ್ರಿಜ್ ಅಂತರ-ಕಾಲೇಜಿನ ಕ್ರಿಶ್ಚಿಯನ್ ಒಕ್ಕೂಟ ಎಂಬ ಕ್ರೈಸ್ತಮತದ ಧರ್ಮಬೋಧೆಯ ಕ್ರಿಶ್ಚಿಯನ್ ಸಂಘಟನೆಗೆ ನೆಲೆಯಾಗಿದೆ.
ಕೇಂಬ್ರಿಜ್ ಎರಡು ನಗರಗಳೊಂದಿಗೆ ಅವಳಿಯಾಗಿದೆ. ಕೇಂಬ್ರಿಜ್ನಂತೆ, ಇವೆರಡೂ ನಗರಗಳಲ್ಲಿ ವಿಶ್ವವಿದ್ಯಾನಿಲಯಗಳಿವೆ ಹಾಗೂ ಅಷ್ಟೆ ಜನಸಂಖ್ಯೆ ಹೊಂದಿದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.