![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/a/aa/Flag_of_Kuwait.svg/langkn-640px-Flag_of_Kuwait.svg.png&w=640&q=50)
ಕುವೈತ್
From Wikipedia, the free encyclopedia
ಕುವೈತ್ (ಅರೇಬಿಕ್: دولة الكويت) ಏಷ್ಯಾ ಖಂಡದ ಪರ್ಷಿಯನ್ ಕೊಲ್ಲಿಯ ಕರಾವಳಿಯಲ್ಲಿರುವ ಒಂದು ಸ್ವತಂತ್ರ ಅರಬ್ ದೇಶ. ಇದರ ದಕ್ಷಿಣದಲ್ಲಿ ಸೌದಿ ಅರೇಬಿಯ ಮತ್ತು ಉತ್ತರ ಹಾಗು ಪಶ್ಚಿಮದಲ್ಲಿ ಇರಾಕ್ ದೇಶಗಳಿವೆ. ಕುವೈತ್ ಎಂದರೆ ಅರಬಿಕ್ ಭಾಷೆಯಲ್ಲಿ ನೀರಿನ ಹತ್ತಿರ ಕಟ್ಟಿರುವ ಕೋಟೆ ಎಂದು ಅರ್ಥ.[3] ಇದರ ಜನಸಂಖ್ಯೆ ಸುಮಾರು ೩.೧ ದಶಲಕ್ಷ. ವಿಸ್ತೀರ್ಣ 5,800 ಚ. ಮೈ.
ಕುವೈತ್ ರಾಜ್ಯ دولة الكويت Dawlat al-Kuwayt | |
---|---|
Flag | |
Anthem: Al-Nasheed Al-Watani | |
![]() | |
Capital | ಕುವೈತ್ ನಗರ |
Largest city | ರಾಜಧಾನಿ |
Official languages | ಅರಬಿಕ್ |
Demonym(s) | Kuwaiti |
Government | ಸಾಂವಿಧಾನಿಕ ವಂಶೀಯ ಎಮಿರೇಟ್[1] |
• ಎಮಿರ್ | ಸಬಃ ಅಲ್-ಅಹ್ಮದ್ ಅಲ್-ಜಬರ್ ಅಲ್-ಸಬಃ |
ನಾಸ್ಸಿರ್ ಮೊಹಮ್ಮದ್ ಅಲ್-ಅಹ್ಮದ್ ಅಲ್-ಸಬಃ | |
ಸ್ವಾತಂತ್ರ್ಯ | |
• ಯುನೈಟೆಡ್ ಕಿಂಗ್ಡಮ್ನಿಂದ | ಜೂನ್ ೧೯, ೧೯೬೧ |
• Water (%) | ಅತ್ಯಲ್ಪ |
Population | |
• 2007 estimate | 3,399,637[2] (n/a) |
GDP (PPP) | ೨೦೦೭ estimate |
• Total | $130.239 ಶತಕೋಟಿ (೫೬ನೆಯ) |
• Per capita | $50,343 (೩ನೆಯ) |
GDP (nominal) | ೨೦೦೭ estimate |
• Per capita | $33,687 |
HDI (೨೦೦೬) | ![]() Error: Invalid HDI value · ೨೯ನೆಯ |
Currency | ಕುವೈತಿ ದಿನಾರ್ (KWD) |
Time zone | UTC+3 (AST) |
• Summer (DST) | UTC+3 |
Driving side | right |
Calling code | 965 |
Internet TLD | .kw |
ಕುವೈತ್ ನಗರ ಇದರ ರಾಜಧಾನಿ ನಗರ.
ಕರಾವಳಿಯ ಬಳಿ ಇರುವ ಅನೇಕ ದ್ವೀಪಗಳು ಇದಕ್ಕೆ ಸೇರಿವೆ. ಇವುಗಳ ಪೈಕಿ ಫೇಲಕಾ ಮುಖ್ಯವಾದದ್ದು ಈ ದ್ವೀಪದಲ್ಲಿ ಕ್ರಿ. ಪೂ. 2500ರಷ್ಟು ಪ್ರಾಚೀನವಾದ ಅವಶೇಷಗಳು ದೊರಕಿವೆ. ಕುವೈತ್ ಮರಳುಗಾಡಿನಿಂದ ಕೂಡಿದ ಪ್ರದೇಶ. ಕುವೈತ್ ನಗರದ ಪಶ್ಚಿಮಕ್ಕೆ 18 ಮೈ. ದೂರದಲ್ಲಿ ಅಲ್ ಜಹ್ರಾ ಎಂದು ಒಂದು ಸಣ್ಣ ಓಯಸಿಸ್ ಇದೆ. ಕುವೈತ್ನಲ್ಲಿ ಬೇಸಗೆಯಲ್ಲಿ ಸೆಕೆ ವಿಪರೀತ. ವಾತಾವರಣದಲ್ಲಿ ತೇವಾಂಶ ಬಲು ಕಡಿಮೆ, ಚಳಿಗಾಲದಲ್ಲಿ ವಾಯುಗುಣ ಹಿತಕರವಾಗಿದೆ. ಆದರೆ ಆಗಾಗ್ಗೆ ಬೀಸುವ ಬಿರುಗಾಳಿ ದೂಳಿನಿಂದ ಕೂಡಿರುತ್ತದೆ. ಮಳೆ ಸಾಮಾನ್ಯವಾಗಿ ಬಲು ಕಡಿಮೆ, ಅದೂ ಚಳಿಗಾಲದಲ್ಲಿ.