ಕಲಿಯುಗ
From Wikipedia, the free encyclopedia
ಕಲಿಯುಗ ಹಿಂದೂ ಧರ್ಮದಲ್ಲಿ ಬರುವ, ಯುಗ ಚಕ್ರದ ನಾಲ್ಕು ಯುಗಗಳಲ್ಲಿ ಒಂದು. ಇತರೆ ಯುಗಗಳೆಂದರೆ: ವಿಶ್ವಯುಗ, ದ್ವಾಪರಯುಗ, ಕೃತ (ಸತ್ಯ) ಯುಗ. ಇವುಗಳಲ್ಲಿ ನಾಲ್ಕನೆಯದಾದ, ಸಂಘರ್ಷ ಮತ್ತು ಪಾಪದಿಂದ ತುಂಬಿರುವ ಪ್ರಸ್ತುತ ಯುಗವೇ ಕಲಿಯುಗವೆಂದು ನಂಬಲಾಗಿದೆ. [1][2][3]
ಪೌರಾಣಿಕ ಮೂಲಗಳ ಪ್ರಕಾರ, ಕೃಷ್ಣ ದೇವರ ಮರಣವು ದ್ವಾಪರಯುಗದ ಅಂತ್ಯ ಹಾಗೂ ಕಲಿಯುಗದ ಪ್ರಾರಂಭವನ್ನು ಸೂಚಿಸುತ್ತದೆ. [4] ಇದು ಕ್ರಿ.ಪೂ ೧೭/೧೮ ಫೆಬ್ರವರಿ ೩೧೦೨ ಕ್ಕೆ ಸೇರಿದೆ. [5] ೪೩೨,೦೦೦ ವರ್ಷಗಳವರೆಗೆ (೧,೨೦೦ ದೈವಿಕ ವರ್ಷಗಳು) ಇರುವ ಕಲಿಯುಗವು ೫,೧೨೫ ವರ್ಷಗಳ ಹಿಂದೆ ಪ್ರಾರಂಭವಾಯಿತು ಮತ್ತು ಸಾ.ಶ ೨೦೨೪ ರ ಹೊತ್ತಿಗೆ ೪೨೬,೮೭೫ ವರ್ಷಗಳು ಉಳಿದಿವೆ. [6] ಕಲಿಯುಗವು ಸಾ.ಶ. ೪೨೮,೮೯೯ ರಲ್ಲಿ ಕೊನೆಗೊಳ್ಳುತ್ತದೆ. [7]
ಕಲಿಯುಗದ ಕೊನೆಯಲ್ಲಿ, ಸದ್ಗುಣಗಳು ಅತ್ಯಂತ ಕೆಟ್ಟ ಸ್ಥಿತಿಯಲ್ಲಿದ್ದಾಗ, ಕಲ್ಕಿಯಿಂದ ಭವಿಷ್ಯ ನುಡಿದ ಮುಂದಿನ ಯುಗ ಚಕ್ರವಾದ ಕೃತ (ಸತ್ಯ) ಯುಗಕ್ಕೆ ನಾಂದಿ ಹಾಡಲು ಒಂದು ವಿಪತ್ತು ಮತ್ತು ಧರ್ಮದ ಮರುಸ್ಥಾಪನೆಯು ಸಂಭವಿಸುತ್ತದೆ. [8]