ಕರಿಬೇವಿನ ಎಲೆಗಳು From Wikipedia, the free encyclopedia
ಕರಿಬೇವಿನ ಮರ (ಸಿಂಹಳದಲ್ಲಿ: කරපිංචා, ತಮಿಳಿನಲ್ಲಿ:கறி (ಕರ್ರಿ)வேப்பிலை, ಕನ್ನಡದಲ್ಲಿ:ಕರಿಬೇವು ತೆಲುಗಿನಲ್ಲಿ:కరివేపాకు ಮಲಯಾಳಂನಲ್ಲಿ: കറിവേപ്പില) (ಮುರ್ರಾಯಾ ಕೋನಿಗೈ ಸಮಾ; . ಬೆರ್ಗೆರಾ ಕೋನಿಗೈ, ಚಾಕಸ್ ಕೋನಿಗೈ ) ಎನ್ನುವುದು ಭಾರತ ಮೂಲದ ರುಟೇಸಿಯೇ ಕುಟುಂಬದ ಉಷ್ಣವಲಯದಿಂದ ಉಪೋಷ್ಣ ವಲಯದಲ್ಲಿ ಬೆಳೆಯುವ ಮರವಾಗಿದೆ. ಹೆಸರನ್ನು ತಮಿಳಿನಲ್ಲಿ 'ಕರಿವೇಪಿಳ್ಳೈ' (ಕರಿ-ಮಸಾಲೆ ಪದಾರ್ಥ, ವೆಪ್ಪು-ಬೇವು ಮತ್ತು ಇಲೈ- ಎಲೆ) ಎಂದು ಉಚ್ಚರಿಸಲಾಗುತ್ತದೆ ಮತ್ತು ಇದು ಕರಿಬೇವಿನ ಎಲೆಗಳ ಅಕ್ಷರಶಃ ಭಾಷಾಂತರವಾಗಿದೆ. ತಮಿಳು ಹೆಸರಿನ ಅರ್ಥವು "ಮಸಾಲೆ ಪದಾರ್ಥವನ್ನು ತಯಾರಿಸಲು ಬಳಸುವ ಎಲೆ" ಎಂದು ಆಗಿದೆ ಮತ್ತು ಇದು ತಮಿಳುನಾಡಿನಲ್ಲಿ (ದಕ್ಷಿಣ ಭಾರತದ ಒಂದು ರಾಜ್ಯ) ತಯಾರಿಸುವ ಬಹುಪಾಲು ಎಲ್ಲಾ ಅಡುಗೆ ಪದಾರ್ಥಗಳಲ್ಲಿ ಕೊತ್ತುಂಬರಿ ಸೊಪ್ಪಿನ ಜೊತೆಗೆ ಬಳಸಲ್ಪಡುತ್ತದೆ. ಆಗಾಗ್ಗೆ ಮಸಾಲೆ ಪದಾರ್ಥಗಳಲ್ಲಿ ಬಳಸುವ ಎಲೆಗಳನ್ನು ಸಾಮಾನ್ಯವಾಗಿ "ಕರಿಬೇವಿನ ಎಲೆಗಳು" ಎನ್ನಲಾಗುತ್ತದೆ, ಆದರೆ ಇವುಗಳಿಗೆ "ಸಿಹಿ ಬೇವಿನ ಎಲೆಗಳು" ಎಂತಲೂ ಕರೆಯಲಾಗುತ್ತದೆ. ದಕ್ಷಿಣ ಭಾರತದಲ್ಲಿ ಇದು ಮಸಾಲೆ ಪದಾರ್ಥಗಳಲ್ಲಿ ಬಳಸಲಾಗುವ ಅವಿಭಾಜ್ಯ ಘಟಕವಾಗಿದ್ದು, ಅಲ್ಲಿ ಕರಿಬೇವಿನ ಎಲೆಗಳಿಲ್ಲದೇ ಮಸಾಲೆ ಪದಾರ್ಥವು ರುಚಿಹೀನ ಎಂದು ಭಾವಿಸಲಾಗುತ್ತದೆ. ಎಲೆಯ ನೋಟವು ಕಹಿಯಾದ ಬೇವಿನ ಮರದ ಎಲೆಗಳ ಹಾಗೆ ಇರುವುದರಿಂದ ಕನ್ನಡದಲ್ಲಿ ಇದನ್ನು "ಕರಿ ಬೇವು" ಎಂದು ಕರೆಯಲಾಗುತ್ತದೆ. ಮೆಡಿಟರೇನಿಯನ್ನ ಸುವಾಸನೆಭರಿತ ಬೇ ಎಲೆಗಳು ಮತ್ತು ಕಾಮಕಸ್ತೂರಿ ಎಲೆಗಳಿಗಿಂತ ಕರಿಬೇವಿನ ಎಲೆಗಳು ಸಂಪೂರ್ಣವಾಗಿ ಭಿನ್ನವಾಗಿವೆ.
ಕರಿಬೇವಿನ ಮರ | |
---|---|
Scientific classification | |
ಸಾಮ್ರಾಜ್ಯ: | plantae |
(ಶ್ರೇಣಿಯಿಲ್ಲದ್ದು): | Angiosperms |
(ಶ್ರೇಣಿಯಿಲ್ಲದ್ದು): | Eudicots |
(ಶ್ರೇಣಿಯಿಲ್ಲದ್ದು): | Rosids |
ಗಣ: | Sapindales |
ಕುಟುಂಬ: | ರುಟೇಸಿಯೇ |
ಕುಲ: | ಮುರ್ರಯ |
ಪ್ರಜಾತಿ: | M. koenigii |
Binomial name | |
Murraya koenigii (L.) Sprengel[1] | |
ರೊಟೇಸೀ ಕುಟುಂಬದ ಮರಯ ಕೊನಿಗೆ ಎಂಬ ವೈಜ್ಞಾನಿಕ ಹೆಸರಿನ ಮರ.ಸಸ್ಯ ಜಾತಿಯ ಹೆಸರು ಸಸ್ಯವಿಜ್ಞಾನಿಯಾದ ಜೊಹಾನನ್ ಕೋನಿಗ್ ಅವರ ಸ್ಮರಣಾರ್ಥವಾಗಿದೆ.
ಇದು ಸು. 20' ಎತ್ತರಕ್ಕೆ ಬೆಳೆಯುವ ಬಹುವಾರ್ಷಿಕ ಮರ. ಇದರ ತೊಗಟೆ ಕಗ್ಗಂದು ಅಥವಾ ಕಪ್ಪು ಬಣ್ಣದ್ದು. ಎಲೆಗಳು ಪರ್ಯಾಯವಾಗಿ ಜೋಡಣೆಗೊಂಡಿದ್ದು ಗರಿರೂಪದ ಸಂಯುಕ್ತ ಮಾದರಿಯವಾಗಿವೆ. ಒಂದೊಂದು ಎಲೆಯಲ್ಲೂ ಸು. 9-25 ಕಿರುಎಲೆಗಳಿವೆ (ಪರ್ಣಿಕೆ). ಇವನ್ನು ಬೆಳಕಿಗೆ ಎದುರಾಗಿ ಹಿಡಿದು ಪರೀಕ್ಷಿಸಿದರೆ ಅವುಗಳ ಅಲಗಿನ ಮೇಲೆಲ್ಲ ಸೂಕ್ಷ್ಮವಾದ ಚುಕ್ಕೆಗಳಂಥ ರಸಗ್ರಂಥಿಗಳನ್ನು ನೋಡಬಹುದು. ಈ ಗ್ರಂಥಿಗಳಲ್ಲಿ ಒಂದು ವಿಶಿಷ್ಟಬಗೆಯ ಚಂಚಲತೈಲವಿದೆ. ಇದರಿಂದಾಗಿ ಎಲೆಗಳು ಗಂಧಯುಕ್ತವಾಗಿವೆ. ಹೂಗಳು ದ್ವಿಲಿಂಗಿಗಳು; ರೆಂಬೆಗಳ ತುದಿಯಲ್ಲಿ ಹುಟ್ಟುವ ಮಧ್ಯಾರಂಭಿ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹೂಗಳು ಬಿಳಿಯಬಣ್ಣದವೂ ನವುರಾದ ವಾಸನೆಯುಳ್ಳವೂ ಆಗಿವೆ. ಪುಷ್ಪಪಾತ್ರೆ ಮತ್ತು ಪುಷ್ಪದಳ ಸಮೂಹ ತಲಾ ಐದೈದು ಪತ್ರಗಳನ್ನೂ ದಳಗಳನ್ನೂ ಒಳಗೊಂಡಿವೆ. ಕೇಸರಗಳು 10; ಎರಡು ಸುತ್ತುಗಳಲ್ಲಿ ಜೋಡಿತವಾಗಿವೆ. ಅಂಡಾಶಯ ಉಚ್ಚಸ್ಥಾನದ್ದು; ಅದರಲ್ಲಿ ಎರಡು ಕೋಣೆಗಳಿವೆ. ಫಲ ಗುಂಡಗಿನ ಅಥವಾ ಉದ್ದುದ್ದವಾದ ಬೆರ್ರಿ ಮಾದರಿಯದು. ಅದರ ಬಣ್ಣ ಊದಾಮಿಶ್ರಿತ ಕಪ್ಪು. ಇದು ೪-೬ ಮೀ ಎತ್ತರಕ್ಕೆ, ೪೦ ಸೆಂಮೀ ಸುತ್ತಳತೆಯ ಕಾಂಡದೊಂದಿಗೆ ಬೆಳೆಯುವ ಚಿಕ್ಕ ಮರವಾಗಿದೆ. ಎಲೆಗಳು ಗರಿಯಂತಿದ್ದು, ೧೧-೨೧ ಚಿಗುರೆಲೆಗಳನ್ನು ಹೊಂದಿರುತ್ತದೆ ಮತ್ತು ಪ್ರತಿ ಚಿಗುರೆಲೆಯು ೨-೪ ಸೆಂಮೀ ಉದ್ದ ಮತ್ತು ೧-೨ ಸೆಂಮೀ ಅಗಲವಾಗಿರುತ್ತದೆ. ಇವುಗಳು ಅತೀ ಸುವಾಸನೆಭರಿತವಾಗಿರುತ್ತದೆ. ಹೂವುಗಳು ಚಿಕ್ಕದಾಗಿದ್ದು, ಬಿಳಿ ಬಣ್ಣವಾಗಿರುತ್ತದೆ ಮತ್ತು ಸುಗಂಧಭರಿತವಾಗಿರುತ್ತದೆ. ಚಿಕ್ಕದಾಗಿ ಕಪ್ಪಾಗಿದ್ದು ಹೊಳೆಯುವ ಹಣ್ಣುಗಳನ್ನು ತಿನ್ನಬಹುದು, ಆದರೆ ಅವುಗಳ ಬೀಜಗಳು ವಿಷಪೂರಿತವಾಗಿರುತ್ತವೆ.
ಕರಿಬೇವು ತನ್ನ ಸುಗಂಧಪೂರಿತ ಎಲೆಗಳಿಂದಾಗಿ ಬಹು ಪ್ರಾಮುಖ್ಯ ಪಡೆದಿದೆ. ಎಲೆಗಳನ್ನು ಹಲವಾರು ಬಗೆಯ ಅಡಿಗೆಯ ಕೆಲಸಗಳಲ್ಲಿ ಉಪಯೋಗಿಸುವುದು ಎಲ್ಲರಿಗೂ ತಿಳಿದದ್ದೇ. ಎಲೆಗಳ ರಾಸಾಯನಿಕ ಸಂಯೋಜನೆ ಈ ರೀತಿ ಇದೆ: ತೇವಾಂಶ 66.3%; ಪ್ರೋಟೀನು 6.1%; ಕೊಬ್ಬು 1.0%; ಸಕ್ಕರೆ-ಪಿಷ್ಟದ ಅಂಶ 16.0%; ನಾರಿನ ಅಂಶ 6.4%; ಲವಣಾಂಶ 4.2%; ಹಾಗೂ ಪ್ರತಿ 100 ಗ್ರಾಂ. ಎಲೆಗಳಲ್ಲಿ 810 ಮಿಗ್ರಾಂ. ಕ್ಯಾಲ್ಸಿಯಂ, 600 ಮಿಗ್ರಾಂ. ರಂಜಕ. 3.1 ಮಿಗ್ರಾಂ. ಕಬ್ಬಿಣ, 12,600 ಐ. ಯು ಕ್ಯಾರೋಟೀನ್ (ಎ ಜೀವಾತು ರೂಪದಲ್ಲಿ), 4 ಮಿಗ್ರಾಂ, ಸಿ ಜೀವಾತು. ಇವಲ್ಲದೆ ಹಲವಾರು ಬಗೆಯ ಅಮೈನೋ ಅಮ್ಲಗಳೂ ಇವೆ.
ಆಗ ತಾನೇ ಕೊಯ್ದ ಎಲೆಗಳನ್ನು ಅಸವೀಕರಣಗೊಳಿಸಿ (ಆವಿ ಬಟ್ಟಿಯಿಳಿಸುವಿಕೆ) ಒಂದು ಬಗೆಯ ಚಂಚಲ ತೈಲವನ್ನು ತೆಗೆಯಬಹುದು. ಶುದ್ಧಗೊಳಿಸಿದ ಈ ಎಣ್ಣೆ ಹಳದಿ ಬಣ್ಣದ್ದೂ ಸಂಬಾರದ ವಾಸನೆಯುಳ್ಳದ್ದೂ ಲವಂಗದ ಕಟುರುಚಿಯುಳ್ಳದ್ದೂ ಅಗಿದೆ. ಇದನ್ನು ಕೆಲವು ಬಗೆಯ ಸಾಬೂನುಗಳಿಗೆ ಕೊಡುವ ಸುಗಂಧ ದ್ರವ್ಯಗಳನ್ನು ಸ್ಥಿರೀಕರಣಗೊಳಿಸಲು ಬಳಸುತ್ತಾರೆ. ಎಲೆಗಳನ್ನು ಆಮಶಂಕೆ. ಅತಿಸಾರ, ವಾಂತಿ ಮುಂತಾದವನ್ನು ನಿಲ್ಲಿಸಲು ಉಪಯೋಗಿಸುವುದಲ್ಲದೆ ತರೆಚು ಗಾಯಗಳಿಗೂ ಬೊಕ್ಕೆಗಳಿಗೂ ಹಚ್ಚಲು ಬಳಸುತ್ತಾರೆ. ಬೇರು ಮತ್ತು ತೊಗಟೆಗಳನ್ನು ಶಕ್ತಿವರ್ಧಕ, ಜೀರ್ಣಕಾರಿ ಹಾಗೂ ವಾತಹರ ಔಷಧಿಗಳಾಗಿ ಉಪಯೋಗಿಸುತ್ತಾರೆ. ಇದರ ಚೌಬೀನೆ ಗಡುಸಾಗಿ ನಯವಾದ ಎಳೆಗಳ ವಿನ್ಯಾಸವನ್ನು ಹೊಂದಿದೆ. ಹಾಗೂ ದೀರ್ಘಕಾಲ ಬಾಳಿಕೆ ಬರುತ್ತದೆ. ಆದ್ದರಿಂದ ಇದನ್ನು ವ್ಯವಸಾಯದ ಉಪಕರಣಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
ಎಲೆಗಳನ್ನು ದಕ್ಷಿಣ ಮತ್ತು ಪಶ್ಚಿಮ ತೀರದ ಪ್ರದೇಶದ ಮತ್ತು ಶ್ರೀಲಂಕಾ ಅಡುಗೆಗಳಲ್ಲಿ ಮತ್ತು ಪ್ರಮುಖವಾಗಿ ಮಸಾಲೆ ಪದಾರ್ಥಗಳಲ್ಲಿ ಬೇ ಎಲೆಗಳಂತೆಯೇ ಪರಿಮಳದ ವಸ್ತುವಾಗಿ ಕರಿಬೇವಿನ ಎಲೆಗಳನ್ನು ಉಪಯೋಗಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ತಯಾರಿಯ ಮೊದಲ ಹಂತದಲ್ಲಿ ಇದನ್ನು ಕತ್ತರಿಸಿದ ಈರುಳ್ಳಿಯ ಜೊತೆಗೆ ಹುರಿಯಲಾಗುತ್ತದೆ. ಕರಿಬೇವಿನ ಎಲೆಗಳನ್ನು ತೋರಣ್, ವಡಾ, ರಸಂ ಮತ್ತು ಕಢಿ ಪದಾರ್ಥಗಳನ್ನು ತಯಾರಿಸಲು ಸಹ ಬಳಸಲಾಗುತ್ತದೆ. ತಾಜಾ ರೂಪದಲ್ಲಿ ಇವುಗಳು ಅತೀ ಅಲ್ಪ ಬಾಳಿಕೆಯ ಕಾಲಾವಧಿಯನ್ನು ಹೊಂದಿರುತ್ತವೆ ಮತ್ತು ಇವುಗಳು ರೆಫ್ರಿಜರೇಟರ್ನಲ್ಲಿಯೂ ತಾಜಾವಾಗಿರಲಾರವು. ಇವುಗಳು ಒಣ ರೂಪದಲ್ಲಿಯೂ ಲಭ್ಯವಿರುತ್ತವೆ, ಆದರೆ ಸುವಾಸನೆಯು ಅತೀ ಕಡಿಮೆ ಪ್ರಮಾಣದಲ್ಲಿರುತ್ತದೆ.
ಮುರ್ರಾಯ ಕೋನಿಗೈ ಯ ಎಲೆಗಳನ್ನು ಆಯುರ್ವೇದಿಕ್ ಔಷಧದಲ್ಲಿಯೂ ಸಹ ಔಷಧೀಯ ವಸ್ತುವಾಗಿ ಬಳಸಲಾಗುತ್ತದೆ. ಈ ಎಲೆಗಳ ಗುಣಲಕ್ಷಣಗಳು ಸಕ್ಕರೆ ಕಾಯಿಲೆ ನಿರೋಧಕವಾಗಿ,[2] ಆಂಟಿ ಆಕ್ಸಿಡೆಂಟ್ ಆಗಿ,[3] ಸೂಕ್ಷ್ಮಾಣು ನಿರೋಧಕವಾಗಿ, ಊತ ನಿರೋಧಕವಾಗಿ, ಹೆಪಟೋಪ್ರೊಟೆಕ್ಟಿವ್ ಆಗಿ, ಆಂಟಿ-ಹೈಪರ್ಕೊಲೆಸ್ಟೆರೋಲೆಮಿಕ್ ಆಗಿ ಹಾಗೂ ಇತರ ರೋಗ ಲಕ್ಷಣಗಳಲ್ಲಿ ಉಪಯೋಗಕಾರಿಯಾಗಿದೆ. ಕೂದಲು ಆರೋಗ್ಯಪೂರ್ಣವಾಗಿ ಮತ್ತು ಸೊಂಪಾಗಿ ಬೆಳೆಯುವಲ್ಲಿ ಕರಿಬೇವಿನ ಎಲೆಗಳು ಸಹಾಯಕಾರಿ ಎಂಬುದಾಗಿಯೂ ಕಂಡುಬಂದಿದೆ. ಇವುಗಳು ಕಬ್ಬಿಣದ ಅಂಶವನ್ನು ಸಹ ಒಳಗೊಂಡಿದೆ.
ಸಾಂಬಾರು ಪದಾರ್ಥಗಳಲ್ಲಿ ಹೆಚ್ಚು ಸಾಮಾನ್ಯವಾಗಿ ಬಳಸಲ್ಪಡುವುದಾದರೂ, ಕರಿಬೇವಿನ ಮರದ ಎಲೆಗಳನ್ನು ರುಚಿಯನ್ನು ಹೆಚ್ಚಿಸಲು ಇತರ ಹಲವು ಆಹಾರ ಪದಾರ್ಥಗಳಲ್ಲಿ ಬಳಸಬಹುದು.
ನೆಡಲು ಬೀಜಗಳು ಹಣ್ಣಾಗಿರಬೇಕು ಮತ್ತು ತಾಜಾ ಆಗಿರಬೇಕು; ಒಣಗಿದ ಅಥವಾ ಬಾಡಿದ ಹಣ್ಣುಗಳು ಮೊಳೆಯುವುದಿಲ್ಲ. ಒಂದೋ ಪೂರ್ಣ ಹಣ್ಣನ್ನು (ಅಥವಾ ಹಣ್ಣಿನ ತಿರುಳನ್ನು ತೆಗೆಯಿರಿ) ಕುಂಡದಲ್ಲಿ ನೆಡಬೇಕಾಗುತ್ತದೆ ಮತ್ತು ಅದನ್ನು ಒಣಗಿಸದೇ ತೇವಾಂಶದಲ್ಲಿ ಇಡಬೇಕಾಗುತ್ತದೆ.[original research?] ಕರಿಬೇವು ಸಸ್ಯವನ್ನು ಸಸ್ಯಗಳ ಸುತ್ತಲೂ ಬೇರಿನಿಂದ ಹೊರಟಿರುವ ಸಸಿಗಳಿಂದಲೂ ಬೀಜಗಳಿಂದಲೂ ವೃದ್ಧಿಮಾಡಬಹುದು. ಚೌಗುಪ್ರದೇಶಗಳಲ್ಲಿ ಇದರ ಬೇಸಾಯ ಮಾಡಲು ಸಾಧ್ಯವಿಲ್ಲ. ಸಸಿ ನಾಟಿಮಾಡಿದ ಅನಂತರ ಇದು ಸರಿಯಾಗಿ ಬೇರುಬಿಟ್ಟು ಚಿಗುರುವ ತನಕ ಎಚ್ಚರಿಕೆ ವಹಿಸಬೇಕು. ಸಸಿನೆಟ್ಟ 3-4 ವರ್ಷಗಳ ಅನಂತರ ಎಲೆಗಳನ್ನು ಕೊಯ್ಯುಬಹುದು. ಈ ಸಸ್ಯ ಬಹಳ ನಿಧಾನವಾಗಿ ಬೆಳೆಯುವ ಗುಣವುಳ್ಳದ್ದು. ಆದ್ದರಿಂದ ಎಳೆಯ ಸಸಿಯಾಗಿರುವಾಗ ಎಲೆ ಕೊಯ್ಯುಲು ಪ್ರಾರಂಭಿಸಿದರೆ ಬೆಳೆವಣಿಗೆ ನಿಂತುಹೋಗಿ ಗಿಡ ಸತ್ತುಹೋಗುವ ಸಾಧ್ಯತೆ ಹೆಚ್ಚು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.