From Wikipedia, the free encyclopedia
ಬೇವು ಭಾರತೀಯ ಉಪಖಂಡದ ಮೂಲವಾಸಿ. ಇದನ್ನು ಕನ್ನಡದಲ್ಲಿ ಒಳ್ಳೆ ಬೇವು, ಕಹಿಬೇವು, ಕಹಿನಿಂಬೆ ಮರ, ಕಹಿನಿಂಬ, ಇಸಬೇವು, ಬೇವು, ವಿಷಬೇವು, ಕಾಯಿಬೇವು ಎಂದು ಪ್ರಾಂತೀಯವಾರು ಗುರುತಿಸುತ್ತಾರೆ. ತೀವ್ರ ತರದ ಬರಗಾಲದಲ್ಲಿಯೂ ಬದುಕಿ, ಜನೋಪಯೋಗಿ ಎನಿಸಿದ ಮರ. ಇದು ಇಂಡೋ-ಮಲಯ ಪ್ರದೇಶ ಹಾಗೂ ಆಫ್ರಿಕದ ಉಷ್ಣವಲಯಗಳಲ್ಲೆಲ್ಲ ಕಾಣದೊರೆಯುತ್ತದೆ.
ಬೇವು | |
---|---|
ಅಜಡಿರಕ್ಟ ಇಂಡಿಕ | |
Scientific classification | |
ಸಾಮ್ರಾಜ್ಯ: | Plantae |
(ಶ್ರೇಣಿಯಿಲ್ಲದ್ದು): | Angiosperms |
(ಶ್ರೇಣಿಯಿಲ್ಲದ್ದು): | Eudicots |
(ಶ್ರೇಣಿಯಿಲ್ಲದ್ದು): | Rosids |
ಗಣ: | Sapindales |
ಕುಟುಂಬ: | Meliaceae |
ಕುಲ: | Azadirachta |
ಪ್ರಜಾತಿ: | A. indica |
Binomial name | |
Azadirachta indica A.Juss., 1830[1] | |
Synonyms[1][2] | |
|
ಎಲ್ಲ ತೆರನ ಮಣ್ಣುಗಳಲ್ಲಿ ಇದು ಬೆಳೆಯುತ್ತದಾದರೂ ಕಪ್ಪು ಎರೆಭೂಮಿಯಲ್ಲಿ ಉತ್ತಮ ಬೆಳೆವಣಿಗೆ ತೋರುತ್ತದೆ. ಮರದ ವೃದ್ಧಿ ಬೀಜಗಳ ಮೂಲಕ.
ಇದು ಮೆಲಿಯೇಸಿ ಕುಟುಂಬಕ್ಕೆ ಸೇರಿದ್ದು,ಅಜಡಿರಕ್ಟ ಇಂಡಿಕ (Azadirachta Indica) ಎಂಬುದು ಸಸ್ಯಶಾಸ್ತ್ರೀಯ ಹೆಸರು. 'ವೆಪ್ಪಮ್' ಎಂದು ತಮಿಳು ಭಾಷೆಯಲ್ಲಿ, 'ವೇಪ' ಎಂದು ತೆಲುಗುಭಾಷೆಯಲ್ಲಿ ಕರೆಯುತ್ತಾರೆ. ಆಂಗ್ಲ ಭಾಷೆಯಲ್ಲಿ 'ನೀಮ್' ಎಂದು ಹೆಸರಿದೆ.
ಸಂ: ನಿಂಬಾ
ಹಿಂ: ನೀಮ್
ಮ: ಲಿಂಬ
ಗು: ಲಿಂಬಾಡೋ
ತೆ: ವಿಂಬು
ತ: ನಿಂಬಾಮು
ಮದ್ಯಮ ಪ್ರಮಾಣದ ನಿತ್ಯಹರಿದ್ವರ್ಣದ ಮರ. ಬೇವಿನಮರ ಸುಮಾರು ೩೦ ರಿಂದ ೬೦ ಅಡಿ ಎತ್ತರದವರೆಗೆ ಬೆಳೆಯುತ್ತದೆ. ಒಣಸೀಮೆಗಳಲ್ಲಿ ಬೆಳೆಯುವಂಥ ಬೇವಿನ ಮರದ ಎಲೆಗಳು ವರ್ಷಕ್ಕೊಮ್ಮೆ ಉದುರುವುವಾದ್ದರಿಂದ ಇದನ್ನು ಪರ್ಣಪಾತಿ ಮರಗಳ ಗುಂಪಿಗೆ ಸಹ ಸೇರಿಸುವುದಿದೆ. ಬರಗಾಲದ ಸಮಯದಲ್ಲಿ ಎಲೆ ಉದುರಿಸುತ್ತದೆ. ದಟ್ಟವಾದ ಹಂದರ. ತೊಗಟೆ ಸಾಧಾರಣ ಮಂದ, ಕರಿಬೂದು ಬಣ್ಣವಿರುತ್ತದೆ. ದಾರುವು ಕೆಂಪು ಕಂದು ಬಣ್ಣವಿದ್ದು, ಸೀಳಿಕೆಗಳಿರುತ್ತವೆ.
ಎಲೆಗಳು ಸಂಯುಕ್ತ, ಏಕಪಿಚ್ಚಕ ಮಾದರಿಯವು. ಪರ್ಯಾಯರೀತಿಯಲ್ಲಿ ಜೋಡಣೆಗೊಂಡಿರುವುವು. ಎಲೆಗಳ ಅಂಚು ಗರಗಸದಂತೆ. ಎಲೆಗಳ ಕಕ್ಷಗಳಲ್ಲಿ ಸ್ಥಿತವಾಗಿರುವ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹೂ ಅರಳುವ ಸಮಯ ಫೆಬ್ರುವರಿ-ಏಪ್ರಿಲ್. ಫಲ ಒಂಟಿ ಬೀಜವುಳ್ಳ ಬೆರಿ ಮಾದರಿಯದು.
ಬೇವಿನಮರ ಮಾರ್ಚ್ ಏಪ್ರಿಲ್ ತಿಂಗಳಿನಲ್ಲಿ ಗೊಂಚಲು ಗೊಂಚಲಾಗಿ ಸಣ್ಣ ಬಿಳಿಹೂಗಳನ್ನು ಬಿಡುತ್ತದೆ. ಬೇವಿನಮರದ ಹೂಗಳ ಪರಿಮಳ ಜೇನಿನ ಪರಿಮಳವನ್ನು ಹೋಲುತ್ತದೆ.
ಹೂಗಳು ಚಿಕ್ಕವು ಮತ್ತು ಬೆಳ್ಳಗಿರುತ್ತವೆ. ಕಾಯಿಗಳು ಹಸಿರಾಗಿದ್ದು ಹಣ್ಣಾದಾಗ ಹಳದಿ ಬಣ್ಣವನ್ನು ಹೊಂದುತ್ತವೆ. ಹಣ್ಣನ್ನು ಹಿಚುಕಿದಾಗ ಬಿಳಿ ಅಂಟಾದ ದ್ರವವು ಹೊರಡುವುದು. ಮರದ ಗೋಂದು ಬೆಳ್ಳಗಿರುವುದು. ಇದರಲ್ಲಿ ಕಹಿಯಾದ “ಮಾರ್ಗೊಸೈನ್” ಅನ್ನುವ ಕಟು ಕ್ಷಾರವಿರುವುದು.
ಬೇವು ಕಹಿರುಚಿಗೆ ಇನ್ನೊಂದು ಹೆಸರು ಎನಿಸಿದೆ. ಇದರ ಎಲ್ಲ ಭಾಗಗಳು ಕಹಿಯೇ. ಇದಕ್ಕೆ ಕಾರಣ ನಿಂಬಿಡನ್ ಎಂಬ ಕಹಿಸಾರ.
ಬರಗಾಲದಲ್ಲಿ ಬದುಕಿ ಉಳಿಯುವ ಮರವಾದುದರಿಂದ ಭಾರತದ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ನೆರಳಿನಾಶ್ರಯದ ಪ್ರಮುಖ ಮರ. ಸಾಲು ಮರಗಳಾಗಿ,ತೋಪುಗಳಾಗಿ ನೆಡಲ್ಪಟ್ಟಿದೆ. ಇದರ ದಾರುವು ಬಹು ಉಪಯೋಗಿ. ಬಡವರ ಪಾಲಿನ ಸಾಗುವಾನಿ ಎನ್ನುವ ಹೆಸರಿದೆ. ಗೃಹ ನಿರ್ಮಾಣ, ಪಿಠೋಪಕರಣ ಮುಂತಾದ ಕೆಲಸಗಳಿಗೆ, ಮನೆಕಟ್ಟಡ, ಕೆತ್ತನೆ, ಹಲಗೆ, ಆಟಿಕೆ, ನೇಗಿಲು ಮುಂತಾದ ಕೃಷಿ ಉಪಕರಣಗಳು-ಇವಕ್ಕೆ ಉಪಯೋಗಿಸಲ್ಪಡುತ್ತದೆ. ತೊಗಟೆಯಿಂದ ಬರುವ ಅಂಟು, ಹೂವು, ಎಲೆಗಳು ಔಷಧಿಗಳಿಗೆ ಉಪಯೋಗವಾಗುತ್ತದೆ. ಬೀಜದ ಹಿಂಡಿ ಉತ್ಕೃಷ್ಟ ಗೊಬ್ಬರ. ಎಳೆಯ ಕಡ್ಡಿ ದಂತಮಾರ್ಜನಕ್ಕಾಗಿ ಉಪಯೋಗವಾಗುತ್ತದೆ.
ಕೆಲವೊಮ್ಮೆ ಚಳಿಗಾಲದಲ್ಲಿ ಬೇವಿನ ಮರದ ಬುಡದಿಂದ ಒಂದು ಬಗೆಯ ಬಿಳಿಯ ರಸ ಒಸರುತ್ತದೆ. ಸಿಹಿಮಿಶ್ರಿತ ಹುಳಿ ರುಚಿಯುಳ್ಳ ಇದಕ್ಕೆ ಬೇವಿನ ಹೆಂಡ ಎಂದು ಹೆಸರು. ಮರದಿಂದ ಹೊರಬಂದ ಕೂಡಲೆ ಬ್ಯಾಕ್ಟೀರಿಯ ಕ್ರಿಯೆಗೆ ಪಕ್ಕಾಗಿ ಇದು ನೊರೆ ನೊರೆಯಾಗುತ್ತದೆ. ಅಂತೆಯೇ ಇದಕ್ಕೆ ಅಸಹ್ಯವಾಸನೆ ಉಂಟಾಗುತ್ತದೆ. ಆದರೂ ಇದನ್ನು ಕುಷ್ಠ, ಇನ್ನಿತರ ಬಗೆಯ ಚರ್ಮರೋಗಗಳು, ನಿಶ್ಯಕ್ತಿ ಮುಂತಾದುಗಳ ನಿವಾರಣೆಗೆ ಉಪಯೋಗಿಸಲಾಗುತ್ತದೆ.
ಭಾರತೀಯರು ಚಾಂದ್ರಮಾನ ಯುಗಾದಿ ಆಚರಣೆಯಲ್ಲಿ ಬೇವು ಬೆಲ್ಲವನ್ನು ಜೀವನದಲ್ಲಿ ಸಿಹಿ ಕಹಿಯನ್ನು ಸಮಾನವಾಗಿ ಪರಿಗಣಿಸಬೇಕೆಂದು ಸಾಂಕೇತಿಕವಾಗಿ ಬಳಸುತ್ತಾರೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.