ಎಸ್. ಜಾನಕಿ
ಭಾರತೀಯ ಹಿನ್ನೆಲೆ ಗಾಯಕಿ / From Wikipedia, the free encyclopedia
ಎಸ್. ಜಾನಕಿ (ಏಪ್ರಿಲ್ ೨೩, ೧೯೩೮) ಭಾರತದ ಪ್ರಮುಖ ಚಲನಚಿತ್ರ ಹಿನ್ನೆಲೆ ಗಾಯಕಿ. ತಮಿಳು, ತೆಲುಗು, ಕನ್ನಡ, ಮಲಯಾಳಂ, ಒಡಿಯಾ, ಹಿಂದಿ, ಸಿಂಹಳ, ತುಳು, ಬಡಗ, ಬಂಗಾಳಿ, ಉರ್ದು, ಪಂಜಾಬಿ, ಕೊಂಕಣಿ, ಮರಾಠಿ, ಸಿಂಧಿ ಮುಂತಾದ ೧೭ಕ್ಕೂ ಹೆಚ್ಚಿನ ಭಾರತೀಯ ಭಾಷೆಗಳಲ್ಲಿ ೪೮,೦೦೦ಕ್ಕೂ ಹೆಚ್ಚಿನ ಹಾಡುಗಳನ್ನು ಹಾಡಿ ಜನಜನಿತವಾಗಿದ್ದಾರೆ.[1] ನಾಲ್ಕು ಬಾರಿ ಅತ್ಯುತ್ತಮ ಹಿನ್ನೆಲೆಗಾಯಕಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಜಾನಕಿ, ವಿವಿಧ ರಾಜ್ಯಗಳಿಂದ ೨೮ಕ್ಕೂ ಹೆಚ್ಚಿನ ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ಹೆಚ್ಚಿನ ಹಾಡುಗಳನ್ನು ಕ್ರಮವಾಗಿ ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಹಾಡಿದ್ದಾರೆ.[2][3]
Quick Facts ಎಸ್. ಜಾನಕಿ, ಜನನ ...
ಎಸ್. ಜಾನಕಿ | |
---|---|
ಜಾನಕಿ, ೨೦೦೭ ರಲ್ಲಿ | |
ಜನನ | ಶಿಷ್ಟ್ಲ ಶ್ರೀರಾಮಮೂರ್ತಿ ಜಾನಕಿ (1938-04-23) ೨೩ ಏಪ್ರಿಲ್ ೧೯೩೮ (ವಯಸ್ಸು ೮೬) ರೆಪಲ್ಲೇ, ಗುಂಟೂರು ಜಿಲ್ಲೆ, ಆಂಧ್ರಪ್ರದೇಶ |
ಇತರೆ ಹೆಸರು | ಜಾನಕಮ್ಮ |
ವೃತ್ತಿ | ಹಿನ್ನೆಲೆ ಗಾಯಕಿ |
ಸಕ್ರಿಯ ವರ್ಷಗಳು | ೧೯೫೭ - ಈವರೆಗೂ |
ಸಂಗಾತಿ | ದಿ. ವಿ ರಾಮಪ್ರಸಾದ್(೧೯೫೮ - ೧೯೯೦) |
ಮಕ್ಕಳು | ಮುರಳಿ ಕೃಷ್ಣ (ಜ.೧೯೬೦) |
ಜಾಲತಾಣ | sjanaki |
Close