ಘಗಗಘಣಢ From Wikipedia, the free encyclopedia
ಎ ಕನ್ನಡ ವರ್ಣಮಾಲೆಯ ಎಂಟನೇ ಅಕ್ಷರವಾಗಿದೆ.ಇದು ಒಂದು ಸ್ವರಾಕ್ಷರ.
ಕನ್ನಡ ವರ್ಣಮಾಲೆಯ ಒಂಬತ್ತನೆಯ ಅಕ್ಷರ. ಹ್ರಸ್ವ ಸ್ವರ. ಸಂಸ್ಕøತದಲ್ಲಿ ಹ್ರಸ್ವ ಎಕಾರವಿಲ್ಲವಾಗಿ ಬ್ರಾಹ್ಮೀ ಲಿಪಿಯ ಲೇಖಗಳಲ್ಲಿ ಈ ಅಕ್ಷರದ ರೂಪ ದೊರೆಯದು. ಕನ್ನಡದಲ್ಲಿ ಈ ಲಿಪಿ ಮತ್ತು ಉಚ್ಛಾರಣೆ ಬಳಕೆಯಲ್ಲಿದ್ದರೂ ಪ್ರಾಚೀನ ಕನ್ನಡದ ಶಾಸನಗಳಲ್ಲಿ ಎ ಕಾರಕ್ಕೆ ಬದಲು ಏ ಕಾರವನ್ನೇ ಬಳಸಲಾಗಿದೆ. ಬಹುಶಃ ಇದು ಸಂಸ್ಕøತ ಪ್ರಭಾವದಿಂದ ಆಗಿರಬಹುದು. ಬರವಣಿಗೆಯಲ್ಲಿ ಒಂದೇ ಅಕ್ಷರ ಕಂಡುಬಂದರೂ ಸಂದರ್ಭಕ್ಕೆ ತಕ್ಕಂತೆ ಹ್ರಸ್ವವಾಗಿಯೊ ದೀರ್ಘವಾಗಿಯೊ ಉಚ್ಛರಿಸುವ ವಾಡಿಕೆ ಇತ್ತು. ಲಿಪಿಯ ದೃಷ್ಟಿಯಿಂದ ಈ ಅಕ್ಷರದ ಹ್ರಸ್ವ ಮತ್ತು ದೀರ್ಘ ರೂಪಗಳಿಗಿರುವ ವ್ಯತ್ಯಾಸ ಯಾವಾಗ ರೂಢಿಗೆ ಬಂತು ಎಂದು ಹೇಳುವುದು ಕಷ್ಟ. ಕ್ರಿ.ಶ.15ನೆಯ ಶತಮಾನದ ವಿಜಯನಗರ ಕಾಲದಲ್ಲಿ ವ್ಯಂಜನಾಕ್ಷರಗಳೊಂದಿಗಿನ ಎ ವರ್ಣದ ರೂಪ ಹೇಗಿತ್ತೆಂಬುದನ್ನು ಚಿತ್ರದಲ್ಲಿ ತೋರಿಸಿದೆ.[1]
ಈ ಅಕ್ಷರ ಪೂರ್ವ ಅಗೋಲ ಅರ್ಧ ಸಂವೃತ ಹ್ರಸ್ವಸ್ವರವನ್ನು ಸೂಚಿಸುತ್ತದೆ.
ಸಂಸ್ಕೃತದಲ್ಲಿ (ದೇವನಾಗರಿ) ಸ್ವರಾಕ್ಷರಗಳು ‘ಅ’ ಕಾರ ದಿಂದ ‘ಔ’ ಕಾರದವರೆಗೆ ೧೪ ಇವೆ. ಅವುಗಳೆಂದರೆ,
ಒಂದು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು ೫ - ಅ, ಇ, ಉ, ಋ, ೡ. ಎ, ಒ - ಈ ಅಕ್ಷರಗಳನ್ನು ಲಘು(ವ್ಯಾಕರಣ) ಎಂದು ಕರೆಯುತ್ತಾರೆ. ಇವುಗಳಲ್ಲಿ ಎ ಅಕ್ಷರವೂ ಒಂದಾಗಿದೆ.
ಈ ನಾಮಿ ಸ್ವರಗಳನ್ನು ಸವರ್ಣಗಳೆಂದು ಕರೆಯುತ್ತಾರೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.