From Wikipedia, the free encyclopedia
ಓ ಇದು ಕನ್ನಡ ವರ್ಣಮಾಲೆಯಲ್ಲಿ ಹದಿಮೂರನೆಯದು, ದೀರ್ಘಸ್ವರಾಕ್ಷರ, ಲಿಪಿಯ ದೃಷ್ಟಿಯಿಂದ ಒ ಮತ್ತು ಓಕಾರಗಳಲ್ಲಿ ಪ್ರಾಚೀನಕಾಲದ ಶಾಸನಗಳಲ್ಲಿ ಅಷ್ಟಾಗಿ ವ್ಯತ್ಯಾಸಗಳು ಕಾಣಬರುವುದಿಲ್ಲ. ಬಹುಶಃ ಇವೆರಡಕ್ಕೂ ವ್ಯತ್ಯಾಸ ತೋರಿಸುವ ಪ್ರವೃತ್ತಿ ವಿಜಯನಗರ ಕಾಲಾಂತರ ಬೆಳೆದುಬಂದಿರಬೇಕು. ಆದರೆ ಬರೆವಣಿಗೆಯಲ್ಲಿನ ಈ ವ್ಯತ್ಯಾಸ ಖಚಿತವಾಗಿ ಯಾವಾಗ ಪ್ರಾರಂಭವಾಯಿತು ಎಂದು ಹೇಳುವುದು ಕಷ್ಟ. ಪ್ರ.ಶ. 18ನೆಯ ಶತಮಾನದ ಶಾಸನಗಳಲ್ಲಿ ಈ ಅಕ್ಷರದ ಹ್ರಸ್ವ ಮತ್ತು ದೀರ್ಘಗಳಿಗೆ ಪ್ರತ್ಯೇಕ ರೂಪಗಳಿರುವುದು ಕಂಡುಬರುತ್ತದೆ.
ಈ ಅಕ್ಷರ ಪಶ್ಚ-ಅರ್ಧ-ಸಂವೃತ-ಗೋಲ-ದೀರ್ಘ-ಸ್ವರವನ್ನು ಸೂಚಿಸುತ್ತದೆ.
ಸಂಸ್ಕೃತದಲ್ಲಿ (ದೇವನಾಗರಿ) ಸ್ವರಾಕ್ಷರಗಳು ‘ಅ’ ಕಾರ ದಿಂದ ‘ಔ’ ಕಾರದವರೆಗೆ ೧೪ ಇವೆ. ಅವುಗಳೆಂದರೆ,
ಎರಡು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು ೫ - ಆ, ಈ, ಊ, ಋೂ, ೡ, ಏ, ಓ - ಈ ಅಕ್ಷರಗಳನ್ನು ಗುರು(ವ್ಯಾಕರಣ) ಎಂದು ಕರೆಯುತ್ತಾರೆ. ಇವುಗಳಲ್ಲಿ ಓ ಅಕ್ಷರವೂ ಒಂದಾಗಿದೆ.
ಈ ನಾಮಿ ಸ್ವರಗಳನ್ನು ಸವರ್ಣಗಳೆಂದು ಕರೆಯುತ್ತಾರೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.