From Wikipedia, the free encyclopedia
ಅಶೋಕನು ಮೌರ್ಯ ಸಾಮ್ರಾಜ್ಯದಲ್ಲೇ ಅತ್ಯಂತ ಪ್ರಸಿದ್ಧ ಚಕ್ರವರ್ತಿ ಕ್ರಿ.ಪೂ ೨೭೩ ರಿಂದ ಕ್ರಿ.ಪೂ ೨೩೨ ರವರಿಗೆ ಪ್ರಾಚೀನ ಭಾರತದಲ್ಲಿ ಅತಿ ದೊಡ್ಡ ರಾಜ್ಯವನ್ನಾಳಿದ ಕೆಲವೇ ಕೆಲವು ರಾಜರಲ್ಲಿ ಸಾಮ್ರಾಟ್ ಅಶೋಕನ ಹೆಸರು ಮೂಡಿ ಬರುತ್ತದೆ. ದೇವನಾಂಪ್ರಿಯ ಮತ್ತು ಪ್ರಿಯದರ್ಶಿ ಎಂಬ ಬಿರುದುಗಳಿಂದ ಖ್ಯಾತನಾಗಿದ್ದಾನೆ. ೧೯೧೫ ರವರಿಗೆ ಪಿಯದಸಿ ರಾಜ ಯಾರೆಂದು ತಿಳಿಯದಾಗಿತ್ತು. ಆದರೆ ೧೯೧೫ರಲ್ಲಿ ದೊರೆತ ಮಾಸ್ಕಿ ಶಾಸನದಲ್ಲಿ ಅಶೋಕನನ್ನು ದೇವಾನಾಂಪ್ರಿಯ ಅಶೋಕ ಎಂದು ಕರೆದಿದ್ದು ಈ ಅಸ್ಪಷ್ಟತೆ ನಿವಾರಣೆ ಗೊಂಡಿತು. ಅಶೋಕ' ಶಬ್ಧಕ್ಕೆ - ಸಂಸ್ಕೃತದಲ್ಲಿ ಶೋಕವಿಲ್ಲದ ಎಂಬರ್ಥವಿದೆ.
ಈ ಲೇಖನವನ್ನು Ashoka ಆಂಗ್ಲ ಪುಟದಿಂದ ಅನುವಾದ ಮಾಡಬೇಕಿದೆ. ನೀವೂ ಸಹಾಯ ಮಾಡಬಹುದು.
ಸಾಮ್ರಾಟ್ ಅಶೋಕ | |
---|---|
Priyadarśin Devanapriya Chakravartin | |
A c. 1st century BCE/CE relief from Sanchi, showing Ashoka on his chariot, visiting the Nagas at Ramagrama.[೧][೨] | |
3rd Mauryan Emperor | |
ಆಳ್ವಿಕೆ | c. 268 – c. 232 BCE[೩] |
ಪಟ್ಟಾಭಿಷೇಕ | 268 BCE[೩] |
ಪೂರ್ವಾಧಿಕಾರಿ | ಬಿಂದುಸಾರ |
ಉತ್ತರಾಧಿಕಾರಿ | ದಶರಥ ಮೌರ್ಯ |
Spouse |
|
ಸಂತಾನ | |
| |
ತಂದೆ | Bindusara |
ತಾಯಿ | Subhadrangi or Dharma[note ೧] |
ಜನನ | c. 304 BCE ಪಾಟಲೀಪುತ್ರ (ಈಗಿನ ಪಾಟ್ನಾ), ಭಾರತ |
ಮರಣ | 232 BCE (aged c. 71 – 72) Pataliputra, modern-day Patna, Bihar, India |
ಧರ್ಮ | ಬೌದ್ಧ ಧರ್ಮ |
| ||
ರಾಜಧಾನಿ: | ಪಾಟಲಿಪುತ್ರ | |
ಮನೆತನ: | ಮೌರ್ಯ ಸಾಮ್ರಾಜ್ಯ | |
ಪೂರ್ವಾಧಿಕಾರಿ: | ಬಿಂದುಸಾರ | |
ಉತ್ತರಾಧಿಕಾರಿ: | ದಶರಥ ಮೌರ್ಯ | |
ಅಧಿಕಾರಾವಧಿ: | ಕ್ರಿ.ಪೂ ೨೭೩ ರಿಂದ ಕ್ರಿ.ಪೂ ೨೩೨ | |
ಜನ್ಮ ಸ್ಥಳ: | ಪಾಟಲೀಪುತ್ರ (ಈಗಿನ ಪಾಟ್ನಾ), ಭಾರತ | |
ಯುದ್ಧಗಳು: | ಕಳಿಂಗ ಯುದ್ಧ ಕ್ರಿ.ಪೂ.೨೬೧ | |
ಧರ್ಮ: | ಬೌದ್ಧ ಧರ್ಮ | |
ತಂದೆ-ತಾಯಿ: | ಬಿಂದುಸಾರ ಮತ್ತು ಸುಭದ್ರಾಂಗಿ | |
ಬಿರುದುಗಳು: | ದೇವನಾಂಪ್ರಿಯ ಮತ್ತು ಪ್ರಿಯದರ್ಶಿ |
ಕಳಿಂಗ ಯುದ್ಧ ಕ್ರಿ.ಪೂ.261 ರಲ್ಲಿ ಕಳಿಂಗ ರಾಜ್ಯದ (ಈಗಿನ ಒರಿಸ್ಸಾ) ಧೌಲಿ ಪ್ರದೇಶದ ಬಳಿ ದಯಾ ನದಿಯ ತೀರದಲ್ಲಿ ನಡೆಯಿತು ಆರಂಭಕ್ಕೆ ಕಾರಣ ಏನೆಂದು ನಿಶ್ಚಿತವಾಗಿ ತಿಳಿದಿಲ್ಲ . ಅಶೋಕನ ಸೊದರರಲ್ಲೊಬ್ಬ - ಬಹುಶಃ ಸುಶೀಮನ ಬೆಂಬಲಿಗನೂ - ಕಳಿಂಗಕ್ಕೆ ಓಡಿ ಹೋಗಿ ಆಶ್ರಯ ಪಡೆದಿರಬಹುದು ಅಥವಾ ಅಶೋಕನ ಹಿರಿಯರ ಕಾಲದಿಂದಲೂ ಸ್ವತಂತ್ರವಾಗಿಯೇ ಉಳಿದಿತ್ತು ಅದರ ರಾಜ ಶುದ್ಧಧರ್ಮ.
ಮುಖ್ಯ ಲೇಖನ : ಅಶೋಕನ ಶಾಸನಗಳು
ಮುಖ್ಯ ಲೇಖನ : ಬೌದ್ಧ ಧರ್ಮದ ಇತಿಹಾಸ
Seamless Wikipedia browsing. On steroids.