ಕನ್ನಡ ವರ್ಣಮಾಲೆಯ ಐದನೇ ಸ್ವರಾಕ್ಷರ. ಕನ್ನಡದ ಹೃಸ್ವ ಸ್ವರ ಅಕ್ಷರ. ನಾಮಿಸ್ವರಗಳಲ್ಲಿ ಉ ಮತ್ತು ಜೊತೆ ಸೇರುತ್ತವೆ. ಹಾಗಾಗಿ ಸವರ್ಣಗಳಲ್ಲಿ ಉ ಅಕ್ಷರದ ಪಾತ್ರವೂ ಇದೆ.[1]

Thumb

ಚಾರಿತ್ರಿಕ ಹಿನ್ನೆಲೆ

ಇದು ಕನ್ನಡ ವರ್ಣಮಾಲೆಯ ಐದನೆಯ ಅಕ್ಷರ. ಅಶೋಕನ ಶಾಸನಗಳಲ್ಲಿನ ಇದರ ರೂಪ ಅತಿ ಪ್ರಾಚೀನವಾದುದು. ಎರಡು ನೇರಗೆರೆಗಳು ಸುಮಾರು 120 ಡಿಗ್ರಿ ಕೋನದಲ್ಲಿ ಸಂಧಿಸಿದಂತೆ ಕಾಣುವ ಈ ರೂಪ ಸು. 300 ವರ್ಷಗಳ ಕಾಲ ಯಾವ ಬದಲಾವಣೆಯೂ ಇಲ್ಲದೆ ಮುಂದುವರಿದಂತೆ ಕಾಣುತ್ತದೆ. ಕದಂಬರ ಕಾಲದಲ್ಲಿ ಗುಂಡಗಾಗುವ ಪ್ರವೃತ್ತಿಯನ್ನು ತೋರುತ್ತದೆ. ರಾಷ್ಟ್ರಕೂಟರ ಕಾಲದಲ್ಲಿ ಅಕ್ಷರದ ಕೆಳಭಾಗ ಅಗಲವಾಗುತ್ತದೆ. ಪ್ರ.ಶ. 13ನೆಯ ಶತಮಾನದ ಹೊತ್ತಿಗೆ ಕೆಳಭಾಗ ಎರಡು ಕೊಂಡಿಗಳಂತೆ ಆಗಿ, ಅದೇ ರೂಪ ವಿಜಯನಗರದ ಕಾಲದಲ್ಲೂ ಮುಂದುವರಿಯುತ್ತದೆ. ಪ್ರ.ಶ. 16ನೆಯ ಶತಮಾನದ ಅನಂತರ ಗಮನಾರ್ಹವಾದ ಬದಲಾವಣೆಗಳುಂಟಾಗಿ ಪ್ರ.ಶ. 18ನೆಯ ಶತಮಾನದಲ್ಲಿ, ಈಗಿನ ರೂಪಕ್ಕೆ ಸಮೀಪವಾಗಿರುವಂತೆ ತೋರುತ್ತದೆ. ಆದರೆ ಮೇಲಿರುವ ತಲೆಕಟ್ಟಿನ ಮಾದರಿಯ ರೇಖೆ ಮಾತ್ರ ಉಳಿದುಬರುತ್ತದೆ. ಅನಂತರ ಅದು ಮಾಯವಾಗಿ, ಈಗಿನ ರೂಪವನ್ನು ತಾಳುತ್ತದೆ.[2]

ಭಾಷಾ ವಿಜ್ಞಾನದ ವಿವರ

ಈ ಅಕ್ಷರ ಪಶ್ಚ ಸಂವೃತ ಗೋಲ ಹ್ರಸ್ವಸ್ವರ ಧ್ವನಿಯನ್ನು ಸೂಚಿಸುತ್ತದೆ.


ಸ್ವರಾಕ್ಷರಗಳು ಎಂದರೇನು ?

  1. ಸ್ವಯಂ ರಂಜತೇ ಇತಿಃ ಸ್ವರಃ - ಸ್ವತಂತ್ರವಾಗಿ ಉಚ್ಚರಿಸಲು ಬರುವ ಅಕ್ಷರಗಳೇ ಸ್ವರಗಳು.
  2. ಅಕಾರಂ ಮೊದಲಾಗಿರೆ ಪದಿನಾಲ್ಕು ಸ್ವರಂಗಳ್.

ಸಂಸ್ಕೃತದಲ್ಲಿ (ದೇವನಾಗರಿ) ಸ್ವರಾಕ್ಷರಗಳು ‘ಅ’ ಕಾರ ದಿಂದ ‘ಔ’ ಕಾರದವರೆಗೆ ೧೪ ಇವೆ. ಅವುಗಳೆಂದರೆ,

ಹೃಸ್ವಸ್ವರ

ಒಂದು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು ೫ - ಅ, ಇ, ಉ, ಋ, ಌ. ಎ, ಒ - ಈ ಅಕ್ಷರಗಳನ್ನು ಲಘು(ವ್ಯಾಕರಣ) ಎಂದು ಕರೆಯುತ್ತಾರೆ. ಇವುಗಳಲ್ಲಿ ಅಕ್ಷರವೂ ಒಂದಾಗಿದೆ.

ಕನ್ನಡದ ನಾವಿ ಸ್ವರಗಳು

ಈ ನಾಮಿ ಸ್ವರಗಳನ್ನು ಸವರ್ಣಗಳೆಂದು ಕರೆಯುತ್ತಾರೆ.

More information ಹೃಸ್ವಸ್ವರ, ದೀರ್ಘಸ್ವರ ...
ಹೃಸ್ವಸ್ವರದೀರ್ಘಸ್ವರ
Close

ಉ ಕನ್ನಡ ಅಕ್ಷರದ ಬರವಣಿಗೆ ಮತ್ತು ಉಚ್ಚಾರಣೆ ವಿಧಾನ

More information ಕನ್ನಡ, ದೇವನಾಗರಿ ...
ಕನ್ನಡ ದೇವನಾಗರಿ ISO 15919 ಸಂಕೇತ ಬರೆಯುವ ವಿಧಾನ ಉಚ್ಚಾರಣೆ ವಿಧಾನ
u Thumb
Close

ಉ ಅಕ್ಷರದಿಂದ ಆರಂಭವಾಗುವ ನಾಮಪದಗಳು

ಉಲ್ಲೇಖ

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.