ಇನ್ಫೋಸಿಸ್
From Wikipedia, the free encyclopedia
ಆಂಗ್ಲ ಹೆಸರು - Infosys Limited (INFY Archived 2005-07-19 ವೇಬ್ಯಾಕ್ ಮೆಷಿನ್ ನಲ್ಲಿ.) ಇನ್ಫೋಸಿಸ್ ಭಾರತದ ಬೆಂಗಳೂರು ನಗರದಲ್ಲಿ ಕೇಂದ್ರೀಕೃತವಾದ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಅತಿ ದೊಡ್ಡ ಸಂಸ್ಥೆಗಳಲ್ಲಿ ಒಂದಾಗಿದ್ದು, ೧,೪೫,೦೦೦ ಕ್ಕೂ ಹೆಚ್ಚು ಕೆಲಸಗಾರರನ್ನು ಹೊಂದಿದೆ. ಭಾರತದಲ್ಲಿ ಒಂಬತ್ತು ತಂತ್ರಾಂಶ ಅಭಿವೃದ್ಧಿ ಕೇಂದ್ರ ಮತ್ತು ಪ್ರಪಂಚದಾದ್ಯಂತ ೨೯ ಕಛೇರಿಗಳನ್ನು ಭಾರತ, ಯುಸ್ಎ, ಚೀನಾ, ಆಸ್ಟ್ರೇಲಿಯಾ, ಯುಕೆ, ಕೆನಡ, ಜಪಾನ್ ಹಾಗೂ ಇನ್ನಿತರೆ ರಾಷ್ಟ್ರಗಳಲ್ಲಿದೆ. ಇನ್ಫೋಸಿಸ್ವು ೩೦ಕ್ಕೂ ಹೆಚ್ಚು ದೇಶದ ಕಂಪನಿಗಳಿಗೆ ವಾಣಿಜ್ಯ ವ್ಯವಹಾರ, ತಾಂತ್ರಿಕ, ಯಾಂತ್ರಿಕ, ಬಾಹ್ಯಾಧಾರ ಸೇವೆಗಳನ್ನು ಒದಗಿಸುತ್ತಿದೆ. ೨೦೦೭-೨೦೦೮ ರ ಸಾಲಿನಲ್ಲಿ ಈ ಸಂಸ್ಥೆ ರೂ. ೪೦೦ ಕೋಟಿಗೂ ಹೆಚ್ಚು ಆದಾಯ ಪಡೆಯಿತು. ೨೦೨೦ರ ಅಂಕಿಅಂಶಗಳ ಪ್ರಕಾರ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ನಂತರದ ಅತಿದೊಡ್ಡ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾಗಿದೆ.[3]
ಸಂಸ್ಥೆಯ ಪ್ರಕಾರ | ಸಾರ್ವಜನಿಕ ಬಿಎಸ್ಇ: 500209 ಎನ್ಎಸ್ಇ: INFY |
---|---|
ಸ್ಥಾಪನೆ | ೨ನೇ ಜುಲೈ ೧೯೮೧, ಪುಣೆಯಲ್ಲಿ |
ಮುಖ್ಯ ಕಾರ್ಯಾಲಯ | ಬೆಂಗಳೂರು, ಭಾರತ ಎಲೆಕ್ಟ್ರಾನಿಕ್ ಸಿಟಿ, ಹೊಸೂರು ರಸ್ತೆ |
ವ್ಯಾಪ್ತಿ ಪ್ರದೇಶ | ವಿಶ್ವದಾದ್ಯಂತ |
ಪ್ರಮುಖ ವ್ಯಕ್ತಿ(ಗಳು) | ಎನ್ ಆರ್ ನಾರಾಯಣಮೂರ್ತಿ (ಗೌರವ ಮಾರ್ಗದರ್ಶಿ) ಕೆ ವಿ ಕಾಮತ್ (ಅಧ್ಯಕ್ಷ) ಕ್ರಿಸ್ ಗೋಪಾಲಕೃಷ್ಣನ್ (ಸಹ-ಅಧ್ಯಕ್ಷ) ಎಸ್. ಡಿ. ಶಿಬುಲಾಲ್ (ಕಾರ್ಯಕಾರಿ ನಿರ್ವಾಹಕ) |
ಉದ್ಯಮ | ತಂತ್ರಾಂಶ ಸೇವೆಗಳು |
ಉತ್ಪನ್ನ | ಫಿನಾಕಲ್ (ಸಾರ್ವತ್ರಿಕ ಬ್ಯಾಂಕಿಂಗ್ ಉತ್ಪನ್ನ) |
ಸೇವೆಗಳು | ಮಾಹಿತಿ ತಂತ್ರಜ್ಞಾನ ಸಮಾಲೋಚನೆ ಸೇವೆಗಳು |
ಆದಾಯ | ರೂ. 21,693 ಕೋಟಿ ($4.66 ಶತಕೋಟಿ) (ವಿತ್ತವರ್ಷ 2008-09)[1] |
ನಿವ್ವಳ ಆದಾಯ | ರೂ. 5,988 ಕೋಟಿ ($1.28 ಶತಕೋಟಿ) (ವಿತ್ತವರ್ಷ 2008-09)[1] |
ಉದ್ಯೋಗಿಗಳು | ೧೦೪,೮೫೦[2] |
ಉಪಸಂಸ್ಥೆಗಳು | ಇನ್ಫೋಸಿಸ್ ಬಿಪಿಒ ಇನ್ಫೋಸಿಸ್ ಕನ್ಸಲ್ಟಿಂಗ್ ಇನ್ಫೋಸಿಸ್ ಆಸ್ಟ್ರೇಲಿಯ ಇನ್ಫೋಸಿಸ್ ಚೀನ ಇನ್ಫೋಸಿಸ್ ಮೆಕ್ಸಿಕೊ ಇನ್ಫೋಸಿಸ್ ಸ್ವೀಡನ್ |
ಜಾಲತಾಣ | www.infosys.com |
೨೪ ಅಗಸ್ಟ ೨೦೨೧ ರಲ್ಲಿ ೧೦೦ ಶತಕೋಟಿ ಮಾರುಕಟ್ಟೆ ಮೌಲ್ಯ ಹೊಂದಿದ ನಾಲ್ಕನೆಯ ಭಾರತೀಯ ಕಂಪೆನಿ ಎಂಬ ಹೆಗ್ಗಳಿಕೆ ಪಡೆದಿದೆ.[4][5]