From Wikipedia, the free encyclopedia
ಆನೇಕಲ್ ಬೆಂಗಳೂರು ನಗರ ಜಿಲ್ಲೆಯ ತಾಲೂಕುಗಳಲ್ಲೊಂದು. ಆನೇಕಲ್ ಒಂದು ಪ್ರಮುಖ ಪಟ್ಟಣ ಹಾಗು ತಾಲ್ಲೂಕು ಕೇಂದ್ರ. ಬೆಂಗಳೂರಿನಿಂದ ೩೫ ಕಿ.ಮೀ. ದೂರದಲ್ಲಿರುವ ಆನೇಕಲ್, ತಮಿಳುನಾಡು ಗಡಿಯಿಂದ ಕೇವಲ ೫ ಕಿ.ಮೀ.ದೂರದಲ್ಲಿದೆ. ರೇಷ್ಮೆ ವಸ್ತ್ರ ತಯಾರಿಕೆ ಹೆಸರುವಾಸಿಯಾಗಿರುವ ಆನೇಕಲ್ ತಾಲ್ಲೂಕಿನಲ್ಲಿ ಅನೇಕ ಐತಿಹಾಸಿಕ ಹಾಗು ನೈಸರ್ಗಿಕ ತಾಣಗಳಿವೆ. ಗಡಿನಾಡು ಪ್ರದೇಶದಲ್ಲಿದ್ದರೂ ತಾಲೂಕಿನಲ್ಲಿ ಕನ್ನಡಿಗರು ಬಹುಸಂಖ್ಯಾತರಗಿದ್ದಾರೆ. ಆನೇಕಲ್ಲನ್ನು ಕರ್ನಾಟಕದ ರಾಗಿಯ ಕಣಜವೆಂದು ಕರೆಯಲಾಗುತ್ತದೆ. ಆನೇಕಲ್ ತಾಲೂಕು 530 ಚ.ಕಿ.ಮೀ ವಿಸ್ತೀರ್ಣ ಹೊಂದಿದೆ.
ಅನೇಕಲ್ | |
---|---|
ತಾಲ್ಲೂಕು ಕೇಂದ್ರ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಬೆಂಗಳೂರು ನಗರ ಜಿಲ್ಲೆ |
ಸರ್ಕಾರ | |
• MLA | ಬಿ.ಶಿವಣ್ಣ |
Elevation | ೯೧೫ m (೩,೦೦೨ ft) |
Population (೨೦೧೧) | |
• Total | ೩೩,೧೬೦ |
ಭಾಷೆಗಳು ಕನ್ನಡ | |
• ಅಧಿಕೃತ | ಕನ್ನಡ |
ಸಮಯ ವಲಯ | ಯುಟಿಸಿ+5:30 (IST) |
PIN | 562106 |
ದೂರವಾಣಿ ಕೋಡ್ | 91-80 |
ವಾಹನ ನೋಂದಣಿ | KA 59 |
ಕರ್ನಾಟಕ ರಾಜ್ಯದಲ್ಲಿನ ಬೆಂಗಳೂರು ಜಿಲ್ಲೆಯ ಈಶಾನ್ಯದಲ್ಲಿರುವ ಈ ಪಟ್ಟಣದಲ್ಲಿ ಎರಡು ಕಣಿವೆಗಳಿವೆ. ಪಶ್ಚಿಮದ ಭಾಗ ಬೆಟ್ಟಗುಡ್ಡಗಳಿಂದಲೂ ಕಾಡಿನಿಂದಲೂ ತುಂಬಿದೆ. ಇದು ನದಿಯ ಜಲಾನಯನ ಕಣಿವೆಗೆ ಸೇರಿದ್ದು. ಪೂರ್ವದ ಕಣಿವೆ ಪೊನ್ಯೈಯಾರ್ ನದಿಯ ಜಲಾನಯನ ಭೂಮಿಗೆ ಸೇರಿದೆ.
ಈ ತಾಲ್ಲೂಕಿನ ಜನಸಂಖ್ಯೆ 2,98,961 ಹಾಗೂ ಪಟ್ಟಣದ ಜನಸಂಖ್ಯೆ 33,160.
ಬೆಂಗಳೂರು ನಗರದ ಆಗ್ನೇಯಕ್ಕೆ 36 ಕಿ.ಮೀ.ಗಳ ದೂರದಲ್ಲಿ 12.7°N 77.7°E.[1] ಅಕ್ಷಾಂಶ,ರೇಖಾಂಶಗಳು ಸಂಧಿಸುವ ಭಾಗದಲ್ಲಿ ತಾಲ್ಲೂಕಿನ ಕೇಂದ್ರವಾದ ಆನೇಕಲ್ ಪಟ್ಟಣವಿದೆ.ಇದು ಸಮುದ್ರ ಮಟ್ಟದಿಂದ ಸರಾಸರಿ 915 metres (3001 feet)ಎತ್ತರದಲ್ಲಿದೆ. ಆನೇಕಲ್ ಪದದ ಅರ್ಥದ ಪ್ರಕಾರ ಆನೆಯಕಲ್ಲು ಅಥವಾ ಅಣಿಕಲ್ಲು ಎಂಬ ವ್ಯಾಖ್ಯಾನ ದೊರಕುತ್ತದೆ. ಆದರೆ ಇದಕ್ಕೆ ಸಂಬಂಧಪಟ್ಟ ಯಾವುದೇ ಕಥೆಯೂ ದೊರಕುವುದಿಲ್ಲ.
ಇಲ್ಲಿ ಕೋಟೆ ಮತ್ತು ಕೆರೆಯನ್ನು 17ನೆಯ ಶತಮಾನದ ಪ್ರಾರಂಭದಲ್ಲಿ ಸಲಗತ್ತೂರ್ ವಂಶದ ಮುಖ್ಯಸ್ಥ ಕಟ್ಟಿಸಿದನೆಂದು ಪ್ರತೀತಿಯಿದೆ. ಒಂದು ಶತಮಾನ ಕಳೆದ ಅನಂತರ ಇದು ಮೈಸೂರಿಗೆ ಸೇರಿದುದಲ್ಲದೆ 1760ರಲ್ಲಿ ಹೈದರನ ಕೈವಶವಾಯಿತು. 1400ರಲ್ಲಿ ಇಲ್ಲಿನ ವಾಸಸ್ಥರು ಕ್ರೈಸ್ತ ದೇವಾಲಯವನ್ನು ಕಟ್ಟಿದರೆಂದು ತಿಳಿದುಬರುತ್ತದೆ. ಪೌರಸಭೆ 1870ರಲ್ಲಿ ಪ್ರಾರಂಭವಾಯಿತು. ಇತ್ತೀಚಿನ ಜನಜಾಗೃತಿಯ ಚಟುವಟಿಕೆಗಳಿಂದ ಪಟ್ಟಣ ಅನೇಕ ಕಾರ್ಯಕ್ಷೇತ್ರಗಳಲ್ಲಿ ಮುನ್ನಡೆಯುತ್ತಿರುವುದಲ್ಲದೆ ತಾಲ್ಲೂಕಿನ ಅಭಿವೃದ್ಧಿಗೂ ಸಹಾಯಕವಾಗಿದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.