Remove ads
From Wikipedia, the free encyclopedia
ಮೆಕ್ಕಾ [ಅಧಿಕೃತವಾಗಿ ಮಕ್ಕಾ ಅಲ್-ಮುಕರ್ರಮ (ಅರೇಬಿಕ್: مكة المكرمة) ಸಾಮಾನ್ಯವಾಗಿ ಮಕ್ಕಾ ಎಂದು ಕರೆಯಲಾಗುತ್ತದೆ] ಇಸ್ಲಾಮ್ ಧರ್ಮದ ಪವಿತ್ರ ಸ್ಥಳ ಮತ್ತು ಸೌದಿ ಅರೇಬಿಯಾದ ಮಕ್ಕಾ ಪ್ರಾಂತ್ಯದ ರಾಜಧಾನಿ.[೧] ಇದು ಕೆಂಪು ಸಮುದ್ರದ ತೀರದಲ್ಲಿರುವ ಜೆದ್ದಾದಿಂದ 70 ಕಿ.ಮೀ. (43 ಮೈಲು) ದೂರದಲ್ಲಿ, ಸಮುದ್ರ ಮಟ್ಟದಿಂದ 277 ಮೀ (909 ಅಡಿ) ಎತ್ತರದ ಕಣಿವೆ ಪ್ರದೇಶದಲ್ಲಿದೆ. 2015ರ ಜನಗಣತಿಯ ಪ್ರಕಾರ ಇಲ್ಲಿನ ಜನಸಂಖ್ಯೆಯು 15,78,722.[೨] 2020ರಲ್ಲಿ ಇಲ್ಲಿನ ಜನಸಂಖ್ಯೆ 20,42,000 ಇರಬಹುದೆಂದು ಅಂದಾಜಿಸಲಾಗಿದೆ. ಇದು ಸೌದಿ ಅರೇಬಿಯಾದ 3ನೇ ಅತಿಹೆಚ್ಚು ಜನನಿಬಿಢ ನಗರವಾಗಿದ್ದು ಮೊದಲನೆಯ ಸ್ಥಾನದಲ್ಲಿ ರಿಯಾದ್ ಮತ್ತು ಎರಡನೆಯ ಸ್ಥಾನದಲ್ಲಿ ಜೆದ್ದಾ ನಗರಗಳಿವೆ. ಇಲ್ಲಿನ ಜನಸಂಖ್ಯೆಗಿಂತ ಮೂರು ಪಟ್ಟು ಹೆಚ್ಚಿನ ಯಾತ್ರಾರ್ಥಿಗಳು ಪ್ರತಿ ವರ್ಷ ಹಜ್ಜ್ ನಿರ್ವಹಿಸಲು ಇಲ್ಲಿಗೆ ಬರುತ್ತಾರೆ. ಹಿಜರಿ ಕ್ಯಾಲೆಂಡರ್ನ ಕೊನೆಯ ತಿಂಗಳಾದ ದುಲ್-ಹಿಜ್ಜ ತಿಂಗಳಲ್ಲಿ ಇಲ್ಲಿ ಪ್ರತಿವರ್ಷ ಹಜ್ಜ್ ನಡೆಯುತ್ತದೆ.
ಮೆಕ್ಕಾ
مكة
| |
---|---|
ನಗರ | |
ಮಕ್ಕಾ ಅಲ್-ಮುಕರ್ರಮ (مكة المكرمة) | |
ದೇಶ | ಸೌದಿ ಅರೇಬಿಯ |
ಪ್ರಾಂತ್ಯ | ಮಕ್ಕಾ ಪ್ರಾಂತ್ಯ |
ಸರ್ಕಾರ | |
• ಮೇಯರ್ | ಸಾಲಿಹ್ ಅಲ್-ತುರ್ಕಿ |
• ಪ್ರಾಂತ್ಯ ರಾಜ್ಯಪಾಲ | ಖಾಲಿದ್ ಬಿನ್ ಫೈಸಲ್ |
Area | |
• Total | ೧,೨೦೦ km೨ (೫೦೦ sq mi) |
• ಭೂಮಿ | ೭೬೦ km೨ (೨೯೦ sq mi) |
Elevation | ೨೭೭ m (೯೦೯ ft) |
Population (2015) | |
• Total | ೧೫,೭೮,೭೨೨ |
• ಅಂದಾಜು (2020) | ೨೦,೪೨,೦೦೦ |
• ಶ್ರೇಣಿ | ಸೌದಿ ಅರೇಬಿಯಾದಲ್ಲಿ 3ನೇ ಸ್ಥಾನ |
Demonym(s) | ಮಕ್ಕೀ (مكيಟೆಂಪ್ಲೇಟು:Script/doc/id-unk/report) |
ಸಮಯದ ವಲಯ | |
ಸಮಯ ವಲಯ | ಯುಟಿಸಿ+3 (AST) |
Area code(s) | +966-12 |
ಜಾಲತಾಣ | hmm |
ಮಕ್ಕಾವನ್ನು ಸಾಮಾನ್ಯವಾಗಿ "ಇಸ್ಲಾಮ್ ಧರ್ಮದ ತೊಟ್ಟಿಲು" ಎಂದು ಪರಿಗಣಿಸಲಾಗುತ್ತದೆ.[೩] ಮಕ್ಕಾ ಮುಹಮ್ಮದ್ ಪೈಗಂಬರ್ ಹುಟ್ಟಿದ ಸ್ಥಳವಾಗಿರುವುದರಿಂದ ಇಸ್ಲಾಮ್ ಧರ್ಮದಲ್ಲಿ ಅದಕ್ಕೆ ಮಹತ್ವ ನೀಡಲಾಗುತ್ತದೆ. ಮಕ್ಕಾದಲ್ಲಿರುವ ಜಬಲ್ ನೂರ್ ಪರ್ವತದ ಹಿರಾ ಗುಹೆಯಲ್ಲಿ ಮುಹಮ್ಮದ್ಗೆ ಮೊತ್ತಮೊದಲು ದೇವವಾಣಿ ಅವತೀರ್ಣವಾಯಿತೆಂದು ಮುಸ್ಲಿಮರು ನಂಬುತ್ತಾರೆ.[೪] ಆರ್ಥಿಕವಾಗಿ ಮತ್ತು ದೈಹಿಕವಾಗಿ ಹಜ್ಜ್ ನಿರ್ವಹಿಸುವ ಸಾಮರ್ಥ್ಯವಿರುವ ಪ್ರತಿಯೊಬ್ಬ ಮುಸಲ್ಮಾನನಿಗೂ ಹಜ್ಜ್ ನಿರ್ವಹಿಸುವುದಕ್ಕಾಗಿ ಮಕ್ಕಾಗೆ ತೆರಳುವುದು ಕಡ್ಡಾಯವಾಗಿದೆ. ಮಕ್ಕಾದ ಮಹಾ ಮಸೀದಿಯಲ್ಲಿರುವ ಕಅಬಾ ಜಗತ್ತಿನಲ್ಲಿ ಮೊತ್ತಮೊದಲು ನಿರ್ಮಿಸಲಾದ ಆರಾಧನಾಲಯ ಎಂದು ಮುಸ್ಲಿಮರು ನಂಬುತ್ತಾರೆ. ಮಕ್ಕಾ ಇಸ್ಲಾಮ್ ಧರ್ಮದ ಪವಿತ್ರ ಸ್ಥಳಗಳಲ್ಲಿ ಒಂದಾಗಿದ್ದು ಮುಸ್ಲಿಮರು ನಮಾಝ್ ಮಾಡುವಾಗ ಅದರ ದಿಕ್ಕಿಗೆ ತಿರುಗುತ್ತಾರೆ.[೫]
ಮುಸ್ಲಿಮ್ ಆಡಳಿತಗಾರರು ಎಲ್ಲಾ ಕಾಲದಲ್ಲೂ ಈ ನಗರವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸಿದ್ದರಿಂದ ಈ ನಗರವು ಅನೇಕ ಆಡಳಿತಗಳನ್ನು ಕಂಡಿದೆ. 1925 ರಲ್ಲಿ ಇಬ್ನ್ ಸೌದ್ ಮತ್ತು ಮಿತ್ರಪಕ್ಷಗಳು ಹಿಜಾಝ್ ಪ್ರಾಂತ್ಯವನ್ನು ತಮ್ಮ ವಶಕ್ಕೆ ಪಡೆದಾಗ ಮಕ್ಕಾ ಅವರ ಆಡಳಿತಕ್ಕೆ ಸೇರ್ಪಡೆಗೊಂಡಿತು. ಇದರ ನಂತರ ಅದು ತನ್ನ ಗಾತ್ರ ಮತ್ತು ಮೂಲಸೌಕರ್ಯದಲ್ಲಿ ಅಗಾಧ ವಿಸ್ತರಣೆಯನ್ನು ಕಂಡಿತು. ಅಬ್ರಾಜುಲ್ ಬೈತ್ (ಇದು ಜಗತ್ತಿನ ನಾಲ್ಕನೇ ಅತಿ ಎತ್ತರದ ಕಟ್ಟಡ ಮತ್ತು ಜಗತ್ತಿನ ಮೂರನೇ ಅತಿ ಹೆಚ್ಚು ವಿಸ್ತೀರ್ಣದ ಕಟ್ಟಡ) ಮುಂತಾದ ಹೊಸ, ಆಧುನಿಕ ಕಟ್ಟಡಗಳು ಇಲ್ಲಿ ತಲೆಯೆತ್ತಿದವು. ಸೌದಿ ಸರಕಾರವು ಅಜ್ಯಾದ್ ಕೋಟೆಯಂತಹ ಅನೇಕ ಐತಿಹಾಸಿಕ ರಚನೆಗಳು ಮತ್ತು ಪುರಾತತ್ವ ಸ್ಥಳಗಳನ್ನು ನಾಶ ಮಾಡಿತು. ಮಕ್ಕಾ ನಗರಕ್ಕೆ ಮುಸ್ಲಿಮೇತರರ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.[೬]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.