From Wikipedia, the free encyclopedia
ಬಾಯ್ಸ್ ರೇಡಿಯೊ ಮೈಕ್ರೊಮೀಟರ್ ಉಷ್ಣಯುಗ್ಮ ಮತ್ತು ವಿದ್ಯುತ್ಪ್ರವಾಹ ಮಾಪಕ ಇವೆರಡರ ಕಾರ್ಯಗಳನ್ನೂ ಮಾಡಬಲ್ಲ ಉಪಕರಣ.[1][2] ಆಂಟಿಮನಿ-ಬಿಸ್ಮತ್ ಲೋಹಗಳ ಉಷ್ಣಯುಗ್ಮ; ಲೋಹದ್ವಯದ ಒಂದು ಜೊತೆ ತುದಿಗಳನ್ನು ತಾಮ್ರದ ತಗಡಿಗೆ ಬೆಸೆದು ರೂಪಿಸಿದ ಒಂದು ಸಂಧಿ; ತಾಮ್ರದ ತಗಡಿಗೆ ಹಣತೆ ಕಪ್ಪಿನ ಲೇಪನ; ಕ್ವಾರ್ಟ್ಸ್ ತಂತುವಿನ ನೆರವಿನಿಂದ ಕಾಂತಧ್ರುವಗಳ ನಡುವೆ ತೂಗಾಡುತ್ತಿರುವ ತಾಮ್ರತಂತಿಯ ಹಗುರ ಸುರುಳಿ ಮತ್ತು ಇದಕ್ಕೆ ಲೋಹದ್ವಯದ ಮತ್ತೆರಡು ತುದಿಗಳ ಜೋಡಣೆ; ಸುರುಳಿಯ ಮೇಲ್ಭಾಗದಲ್ಲಿ ಸ್ಥಾಪಿತವಾದ ಚಿಕ್ಕ ಕನ್ನಡಿ; ಕನ್ನಡಿ ಪ್ರತಿಫಲಿಸುವ ಬೆಳಕಿನ ಕಿರಣದಲ್ಲಿ ಆಗುವ ವಿಚಲನೆಯನ್ನು ಅಳೆಯಲು ನೆರವು ನೀಡುವ ಅಳತೆಪಟ್ಟಿ–ಇದು ಉಪಕರಣದ ರಚನೆ. ತಾಮ್ರದ ತಗಡಿನ ಮೇಲೆ ವಿಕಿರಣ ಬಿದ್ದಾಗ ತಾಪ ಹೆಚ್ಚಿ ಸುರುಳಿಯಲ್ಲಿ ಔಷ್ಣಿಕ ವಿದ್ಯುತ್ ಪ್ರವಹಿಸುತ್ತದೆ. ವಿದ್ಯುತ್ ಪ್ರವಾಹದ ಪ್ರಮಾಣಕ್ಕೆ ಅನುಪಾತೀಯವಾಗಿ ಸುರುಳಿ ತಿರುಗುತ್ತದೆ. ಈ ತಿರುಗುವಿಕೆಗೆ ಅನುಗುಣವಾಗಿ ಸುರುಳಿಯಲ್ಲಿಯ ಕನ್ನಡಿ ಪ್ರತಿಫಲಿಸುವ ಬೆಳಕಿನ ಕಿರಣ ವಿಚಲಿಸುತ್ತದೆ. ಈ ವಿಚಲನೆಯನ್ನು ಅಳೆದು ವಿಕಿರಣ ತೀವ್ರತೆಯನ್ನು ಲೆಕ್ಕಿಸಬಹುದು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.