Remove ads
From Wikipedia, the free encyclopedia
ಭೌತವಿಜ್ಞಾನದಲ್ಲಿ ವಿಕಿರಣವು ತರಂಗದ ರೂಪದಲ್ಲಿ ಅಥವಾ ಚಲಿಸುವ ಅಣುವಿನ ಕಣಗಳ ರೂಪದಲ್ಲಿ ಪ್ರಸಾರವಾಗುವ ಶಕ್ತಿ.[೧][೨] ಇಂದಿನ ದಿನಗಳಲ್ಲಿ ಇದರ ಸದುಪಯೋಗ ವೈದ್ಯಕೀಯ ಕ್ಷೇತ್ರದಲ್ಲೂ ಶುರುವಾಗಿದೆ.
ರಕ್ತವರ್ಣಕ್ಕೂ ಆಚೆ ಇರುವ ರಶ್ಮಿಗಳನ್ನು ಅತಿರಕ್ತವಿಕಿರಣಗಳು ಎನ್ನುತ್ತಾರೆ.
ರೋಗಗಳನ್ನು ಪತ್ತೆಹಚ್ಚಲು ವಿಕಿರಣಪಟು ಪರಮಾಣುಗಳು ಬಲು ಸಹಕಾರಿ. ಅನೇಕ ರೋಗಗಳ ಚಿಕಿತ್ಸೆಗೆ ವಿಕಿರಣವನ್ನೂ ವಿಕಿರಣಪಟು ಪರಮಾಣುಗಳನ್ನೂ ಬಳಸಲಾಗುತ್ತದೆ. ಉದಾಹರಣೆಗೆ ರೇಡಿಯೊಕ್ರೋಮಿಯಮನ್ನು ಹಿಮೊಲಿಟಿಕ್ ಅನಿಮಿಯದಲ್ಲಿ, ರೇಡಿಯೊ ಅಯೊಡೀನನ್ನು ಹೈಪರ್ ಥೈರಾಯಿಡ್ ಗ್ರಂಥಿ, ರೇಡಿಯೊ ಫಾಸ್ಫರಸನ್ನು ಪಾಲಿಸೈಥೀಮಿಯ ಕಾಯಿಲೆಯಲ್ಲಿ ಬಳಸಬಹುದು. ಮೊಬೈಲ್ ದೂರವಾಣಿ ಬಳಕೆಯಿಂದ ತಲೆನೋವು, ಮಿದುಳಿನ ಅರ್ಬುದರೋಗಗಳು ಉಂಟಾಗಬಹುದೆಂಬ ಪ್ರತೀತಿ ಹಬ್ಬಿದೆ. ಆದರೆ ಸದ್ಯದ ವೈಜ್ಞಾನಿಕ ಸಾಹಿತ್ಯದಲ್ಲಿ ಇದಕ್ಕೆ ಯಾವುದೇ ಸ್ಪಷ್ಟ ಸಾಕ್ಷಿ ಇರುವುದಿಲ್ಲ.
ಅಯಾನೀಕರಿಸುವ ವಿಕಿರಣವನ್ನು ಸೂಸುವ ಯಂತ್ರಗಳನ್ನು ಉಪಯೋಗಿಸುವ ಕೆಲಸಗಾರರು ತಮ್ಮ ದೇಹಗಳಲ್ಲಿ ಸೇರಿರಬಹುದಾದ ವಿಕಿರಣದ ಗುಟ್ಟಿಯನ್ನು (ಡೋಸ್) ಅಳೆಯಲು ಅವರ ಉಡಿಗೆಗೆ ಮಾಪನ ಮೀಟರನ್ನು ಲಗತ್ತಿಸಿರುತ್ತಾರೆ. ಇದನ್ನು ಪ್ರತಿ ತಿಂಗಳೂ ಪ್ರಯೋಗಶಾಲೆಗೆ ಕಳಿಸಿ ದೇಹ ಸೇರಿರುವ ವಿಕಿರಣದ ಪ್ರಮಾಣವನ್ನು ತಿಳಿದು ಯುಕ್ತ ಕ್ರಮ ಕೈಗೊಳ್ಳಬೇಕು.
ಲೇಸರ್ ಸೂಚಿ (ತೀಕ್ಷ್ಣ ಬೆಳಕಿನ ದಂಡ) ನೇರ ದುಷ್ಪರಿಣಾಮಕಾರಿಯಲ್ಲವಾದರೂ ಅಕಸ್ಮಾತ್ತಾಗಿ ಕಣ್ಣಿಗೆ ಬಿದ್ದರೆ ಅಪಘಾತ ಉಂಟಾಗ ಬಹುದು. ಅಲ್ಲದೇ ಒಂದು ವೇಳೆ, ಈ ಬೆಳಕನ್ನು ನೆಟ್ಟ ದೃಷ್ಟಿಯಿಂದ ನೋಡಿದಲ್ಲಿ ಕಣ್ಣಿಗೆ ಅಪಾಯವಾಗಬಹುದು. ಇದರ ಅರಿವಿಲ್ಲದ ಚಿಕ್ಕ ಮಕ್ಕಳ ಕೈಗೆ ಲೇಸರ್ ಸೂಚಿ ಎಟುಕದಂತೆ ಇರಿಸಬೇಕು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.