From Wikipedia, the free encyclopedia
ನೋಣಿ ಹಣ್ಣು ಮೊರಿಂಡಾ ಸಿಟ್ರಿ ಫೋಲಿಯಾ ಜಾತಿಗೆ ಸೇರಿದೆ. ಪೆಸೆಫಿಕ್ ಪ್ರದೇಶದಲ್ಲಿ ವ್ಯಾಪಕವಾಗಿ ಬೆಳೆಯುವ ಈ ಸಸ್ಯವು ನಿತ್ಯ ಹಸುರಾಗಿರುತ್ತದೆ. ಈ ಹಿ೦ದೆ ಇ೦ಡೋನೇಶಿಯಾ ದಿ೦ದ ಆಸ್ಟ್ರೇಲಿಯಾದವರೆಗೆ ಇದನ್ನು ಬೆಳೆಯುತ್ತಿದ್ದು ಈಗ ವಿಸ್ತಾರವಾದ ಭೂ ಪ್ರದೇಶದಲ್ಲಿ ಬೆಳೆಯುತ್ತದೆ. ಇದಕ್ಕೆ ಕಾರಣವೆ೦ದರೆ ಎಲ್ಲ ತರಹದ ಭೌಗೋಳಿಕ ವೈವಿಧ್ಯತೆಗೆ ಈ ಸಸ್ಯ ಒಗ್ಗಿಕೊ೦ಡಿರುವುದು. ಬ೦ಜರು ಭೂಮಿಯಲ್ಲಿ, ಆಮ್ಲೀಯ ಮಣ್ಣಿನಲ್ಲಿ, ಕ್ಷಾರೀಯ ಮಣ್ಣಿನಲ್ಲಿ ಇದು ಬೆಳೆಯುತ್ತದೆ. ಗಾಳಿ, ಬೆ೦ಕಿ, ಪ್ರವಾಹ, ಉಪ್ಪುನೀರು ಇವುಗಳಿಂದ ಈ ಸಸ್ಯಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ.
ಮೊರಿಂಡ ಸಿಟ್ರಿಫೋಲಿಯ | |
---|---|
ಎಲೆ ಮತ್ತು ನೋಣಿ ಹಣ್ಣು | |
Scientific classification | |
Unrecognized taxon (fix): | [[ಮೊರಿಂಡ]] |
ಪ್ರಜಾತಿ: | [. ಸಿಟ್ರಿಫೋಲಿಯ |
Binomial name | |
ಮೊರಿಂಡ ಸಿಟ್ರಿಫೋಲಿಯ | |
ನೋಣಿ ಸಸ್ಯದ ಎಲೆಯು ಹೊಳೆಯುತ್ತದೆ. ಎಲೆಗಳ ಉದ್ದ ೨೦-೪೫ ಸೆ.ಮೀ ಅಗಲ ೮-೨೫ ಸೆ.ಮೀ ಇರುತ್ತದೆ. ಹಣ್ಣುಗಳು ನಸು ಹಳದಿ ಬಣ್ಣದ್ದಾಗಿದ್ದು, ಕಾಯಿಗಳು ತಿಳಿ ಹಸಿರು ಬಣ್ಣವನ್ನು ಹೊ೦ದಿರುತ್ತವೆ. ಈ ಕಾಯಿಗಳು ೩-೧೦ಸೆ.ಮೀ ವ್ಯಾಸವನ್ನು ಹೊ೦ದಿರುತ್ತವೆ. ನೋಣಿ ಬೀಜಗಳು ಸೇಬಿನ ಬೀಜವನ್ನು ಹೋಲುತ್ತವೆ. ನೋಣಿ ಬೀಜದ ಬಾಲದಲ್ಲಿ ಗಾಳಿಕೋಶವಿರುವುದರಿ೦ದ ನೀರಿಗೆ ಹಾಕಿದರೂ ಬೀಜ ದಿನಗಟ್ಟಲೆ ತೇಲುತ್ತಲೇ ಇರುತ್ತದೆ.
ಹಲವಾರು ಅಡಚಣೆಗಳ ನಡುವೆಯೂ ನೋಣಿ ಸಸ್ಯ ಚೆನ್ನಾಗಿ ಬೆಳೆಯುತ್ತದೆ. ಹೀಗಾಗಿ ಇದರ ಕೃಷಿ ಬಹಳ ಸುಲಭ.
ಏಕಕೃಷಿ ವಿಧಾನವನ್ನು ಅನುಸರಿಸಿದರೆ ಇತರ ಎಲ್ಲಾ ಬೆಳೆಗಳ೦ತೆ ಕೀಟಗಳು ಮತ್ತು ರೋಗಗಳ ಬಾಧೆ ಪ್ರಬಲವಾಗಿರುತ್ತದೆ. ಗಿಡ ಹೇನು, ಎಲೆಕೊರಕ, ಬಿಳಿನೊಣ, ಕ೦ಬಳಿ ಹುಳಗಳು, ರಸಹೀರುವ ಕೀಟಗಳು ಮೊದಲಾದವುಗಳು ನೋಣಿ ಸಸ್ಯವನ್ನು ಬಾಧಿಸುತ್ತದೆ. ತೀರಾ ಆರ್ದೃತೆಯಿ೦ದ ಕೂಡಿದ ಸ್ಥಳದಲ್ಲಿ ಅಥವಾ ಅತಿ ಹೆಚ್ಚು ಮಳೆ ಬೀಳುವ ಸ್ಥಳಗಳಲ್ಲಿ ಬೆಳೆಯುವ ನೋಣಿ ಗಿಡಕ್ಕೆ ಎಲೆ ಚುಕ್ಕಿ ರೋಗ ಬರಬಹುದು.ಇದಕ್ಕೆ ಮೂಲ ಕಾರಣ ಶಿಲೀ೦ಧ್ರಗಳು.ಹೀಗಾಗಿ ಏಕಬೆಳೆಯಾಗಿ ಬೆಳೆಯುವುದರ ಬದಲು ಇನ್ನಿತರ ಬೆಳೆಗಳ ಜೊತೆಗೆ ಮಿಶ್ರ ಬೆಳೆಯಾಗಿ ಕೃಷಿ ಮಾಡಬೇಕು. ನೋಣಿಯೊ೦ದಿಗೆ ಮಿಶ್ರಬೆಳೆಯಾಗಿ ಬೆಳೆಯಬಹುದಾದ ವಾಣಿಜ್ಯ ಬೆಳೆಗಳೆ೦ದರೆ ದೀವಿಹಲಸು, ಪಪ್ಪಾಯ, ಮಾವು, ಬಾಳೆ,ತೆ೦ಗು-ಇತ್ಯಾದಿ.
ನೋಣಿ ರಸವನ್ನು ಗಂಟು ನೋವು, ಕೈ ಮಡಚುವ ತೊಂದರೆ, ಕಾಲು ನೋವು ಮತ್ತು ಮಂಡಿ ನೋವಿಗೆ ಪರಿಹಾರವಾಗಿ ಉಪಯೋಗಿಸುತ್ತಿದ್ದಾರೆ.[1] ಉಸಿರಾಟದ ಸಮಸ್ಯೆ ನಿವಾರಣೆಗೂ ಇದು ಉಪಯುಕ್ತ. ಮುರಿದ ಎಲುಬುಗಳನ್ನು ಮರುಜೋಡಿಸಲು ಹಾಗೂ ಡಯಾಬಿಟಿಸ್, ಏರು ರಕ್ತದೊತ್ತಡ ನಿಯಂತ್ರಣಕ್ಕೂ ಬಳಕೆಯಾಗುತ್ತಿದೆ. ಮಲಬದ್ಧತೆಯ ಸಮಸ್ಯೆ ಇರುವವರೂ ನೋಣಿ ರಸ ಸೇವಿಸಬಹುದು.ಅನೇಕ ವಿಶ್ವವಿದ್ಯಾನಿಲಯಗಳು ಸಂಶೋಧನೆ ಸಮೀಕ್ಷೆಗಳ ಪ್ರಕಾರ, ನೋಣಿಯ ರಸ ಆರೋಗ್ಯವರ್ಧಕ ಎಂಬುದು ದೃಢಪಟ್ಟಿದೆ. ಕೀಲು ನೋವು, ಹ್ರದಯ ಸಂಬಂಧ ಕಾಯಿಲೆ, ಖಿನ್ನತೆ ಹಾಗೂ ನಿದ್ರಾಹೀನತೆಯಿಂದ ತೊಂದರೆ ಅನುಭವಿಸುತ್ತಿರುವವರು ಇದರ ಮೊರೆ ಹೋಗಬಹುದು.
ವಾಸ್ತವವಾಗಿ ಎಷ್ಟೋ ಕಡೆಗಳಲ್ಲಿ ನೋಣಿಯನ್ನು ಒ೦ದು ಕಳೆ ಗಿಡವೆ೦ದೇ ಭಾವಿಸಿದ್ದಾರೆ. ಆದರೆ ಇತರ ಕಳೆ ಗಿಡಗಳ೦ತೆ ಇದು ಎಲ್ಲಿಯೂ ಸ್ಥಳೀಯ ಸಸ್ಯ ಪ್ರಭೇದಗಳನ್ನು ನಾಶಪಡಿಸುವ ದುರ್ಗುಣವನ್ನು ತೋರಿಸಿಲ್ಲ.ಆದರೂ ಇದನ್ನು ಕಳೆಗಿಡವೆ೦ದು ಭಾವಿಸಲು ಕಾರಣವೆ೦ದರೆ ಒಮ್ಮೆ ಬೆಳೆದು ನಿ೦ತರೆ ನೋಣಿಯನ್ನು ನಾಶಪಡಿಸುವುದು ಕಷ್ಟ. ಈ ಗಿಡದ ಒಳ್ಳೆಯ ಅ೦ಶವೆ೦ದರೆ ಜ್ವಾಲಾಮುಖಿಯಿ೦ದ ಹೊರಚೆಲ್ಲಿದ ಲಾವಾರಸ ಹರಡಿಕೊ೦ಡ ಜಾಗಗಳಲ್ಲಿ ಕಾಲಾ೦ತರದಲ್ಲಿ ಬೇರೆ ಯಾವುದೇ ಗಿಡ ಬೆಳೆಯದಿದ್ದರೂ, ನೋಣಿ ಮಾತ್ರ ಅ೦ತಹ ಕಡೆಗಳಲ್ಲಿ ಬೆಳೆಯುತ್ತದೆ. ಬೇರೆ ಬೇರೆ ಪ್ರದೇಶಗಳಲ್ಲಿರುವ ವಿಭಿನ್ನ ಭೌಗೋಳಿಕ ಅ೦ಶಗಳ ಕಾರಣದಿ೦ದಾಗಿ ನೋಣಿಯ ಎತ್ತರ, ಎಲೆಯ ರಚನೆ, ಹಣ್ಣಿನ ಗಾತ್ರ, ಬೀಜಗಳ ಸ೦ಖ್ಯೆ, ರುಚಿ ಇದರಲ್ಲೆಲ್ಲಾ ವ್ಯತ್ಯಾಸ ಕ೦ಡುಬರಬಹುದು.
ಅಮೆರಿಕದಲ್ಲಿ ನೋಣಿ ಪಾನೀಯವನ್ನು ಆಹಾರ ಸೇವನೆಯ ನಂತರ ಆರೋಗ್ಯಕರ ಪೇಯವಾಗಿ ಉಪಯೋಗಿಸಿಲಾಗುತ್ತದೆ. ಡಾ.ನೈಲ್ ಸೋಲೊಮನ್ ಎಂಬಾತ ಇಪ್ಪತ್ತನೇ ಶತಮಾನದ ಕೊನೆಯಲ್ಲಿ ಇದರಲ್ಲಿ ಔಷಧೀಯ ಗುಣ, ಪೌಷ್ಟಿಕಾಂಶ ಮತ್ತು ರೋಗನಿರೋಧಕ ಶಕ್ತಿ ಇರುವುದನ್ನು ಪತ್ತೆ ಹಚ್ಚಿದ ಬಗ್ಗೆ ದಾಖಲೆಗಳಿವೆ. ನೋಣಿಯನ್ನು "ಭಾರತದ ಮಲ್ಬರಿ" ಎಂದು ಕರೆಯುತ್ತಾರೆ.ಪೊದೆಯ ರೂಪದ ಈ ಗಿಡ, ಸಾಮಾನ್ಯವಾಗಿ ಹತ್ತು ಅಡಿ ಎತ್ತರಕ್ಕೆ ಬೆಳೆಯುತ್ತದೆ. ಬಿಳಿ ಹೂ ಬಿಟ್ಟ ನಂತರ ಕಾಯಿಯಾಗುತ್ತದೆ. ನೋನಿ ಹಣ್ಣು ಮೂರರಿಂದ ನಾಲ್ಕು ಡಯಾಮೀಟರಿನಷ್ಟು ದೊಡ್ದದಾಗಿರುತ್ತದೆ. ಬಹು ಉಪಯೋಗಿ ಹಾಗೂ ನೋವು ನಿವಾರಕ ನೋಣಿ ಹಣ್ಣುಗಳನ್ನೇ ಪ್ರಧಾನ ಕ್ರಷಿ ಕಸುಬಾಗಿ ಸ್ವೀಕರಿಸಿ ಯಶಸ್ವಿಯಾಗಿರುವ ರೈತ ಕುಟುಂಬವೊಂದು ಶಿವಮೊಗ್ಗದ ರಾಮೀನಕೊಪ್ಪದಲ್ಲಿದೆ. ಶ್ರೀನಿವಾಸಮೂರ್ತಿ ದಂಪತಿಯ ನೋಣಿ ಬೆಳೆಯುವ ಈ ಸಾಧನೆ ಹಲವು ರೈತರಿಗೆ ಸ್ಪೂರ್ತಿಯಾಗಿದೆ.[2]
ನೋಣಿಯನ್ನು ಔಷಧಿಯಾಗಿ ಸೇವಿಸಬಯಸುವವರು ಮೊದಲ ಮೂರು ದಿನ ಬೆಳಗಿನ ಉಪಹಾರಕ್ಕೆ ಮುಂಚಿತವಾಗಿ ಒಂದು ಟೀ ಸ್ಪೂನ್ ಸೇವಿಸಬೇಕು. ಒಂದು ತಿಂಗಳ ಸೇವನೆಯ ನಂತರ ಉಪಹಾರಕ್ಕೆ ಮುಂಚೆ ಎರಡೂ ಸ್ಪೂನ್, ಮಧ್ಯಾಹ್ನ ಊಟಕ್ಕಿಂತ ಮುಂಚೆ ಎರಡು ಸ್ಪೂನ್ ರಸ ಸೇವಿಸಬೇಕು. ನೋಣಿಯ ಎಲೆಯೂ ಉಪಯುಕ್ತ. ಇದರ ಎಲೆಯಿಂದ ತಗೆದ ರಸ ಅನೇಕ ರೀತಿಯ ಚರ್ಮ ರೋಗಗಳನ್ನು ನಿವಾರಿಸಿದೆ. ಎಲೆಯ ಕಷಾಯ ಜ್ವರ ನಿವಾರಕ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.