ಅಮೇರಿಕದ ಭೌತಶಾಸ್ತ್ರತ್ಞ From Wikipedia, the free encyclopedia
ಕಾರ್ಲ್ ಡಿ.ಆಂಡರ್ಸನ್ (೩ ಸೆಪ್ಟೆಂಬರ್ ೧೯೦೫ – ೧೧ ಜನವರಿ ೧೯೯೧) ಅಮೆರಿಕದ ಭೌತವಿಜ್ಞಾನಿ.ಇವರು ಪಾಸಿಟ್ರಾನ್ನನ್ನು ಕಂಡು ಹಿಡಿದು ಪ್ರಸಿದ್ಧರಾದರು. ಇವರಿಗೆ ಇದೇ ವಿಷಯಕ್ಕೆ ೧೯೩೬ರಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು.
'ಕಾರ್ಲ್ ಡಿ.ಆಂಡರ್ಸನ್' | |
---|---|
ಜನನ | ಸೆಪ್ಟೆಂಬರ್, ೩, ೧೯೦೫ ನ್ಯೂಯಾರ್ಕ್, ಅಮೆರಿಕ |
ಮರಣ | ಜನವರಿ ೧೧, ೧೯೯೧ ಕ್ಯಾಲಿಫೋರ್ನಿಯಾ,ಅಮೆರಿಕ |
ರಾಷ್ಟ್ರೀಯತೆ | ಅಮೆರಿಕ |
ಕಾರ್ಯಕ್ಷೇತ್ರಗಳು | ಭೌತಶಾಸ್ತ್ರ |
ಸಂಸ್ಥೆಗಳು | ಕ್ಯಾಲಿಫೋರ್ನಿಯಾ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ |
ಅಭ್ಯಸಿಸಿದ ಸಂಸ್ಥೆ | ಕ್ಯಾಲಿಫೋರ್ನಿಯಾ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ |
ಪ್ರಸಿದ್ಧಿಗೆ ಕಾರಣ | ಪಾಸಿಟ್ರಾನ್ |
ಗಮನಾರ್ಹ ಪ್ರಶಸ್ತಿಗಳು | ನೋಬೆಲ್ ಪ್ರಶಸ್ತಿ-೧೯೩೬ |
ನ್ಯೂಯಾರ್ಕ್ನಲ್ಲಿ ಜನಿಸಿದ. ಕ್ಯಾಲಿಫೋರ್ನಿಯಾದ ಔದ್ಯೋಗಿಕರಣ ಸಂಸ್ಥೆಯಲ್ಲಿ (ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ವಿದ್ಯಾಭ್ಯಾಸ ಮಾಡಿ 1930ರಲ್ಲಿ ಪದವೀಧರನಾದ. ಕೆಲವು ಕಾಲದ ಮೇಲೆ ಅದೇ ವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದ.
ವಿಶ್ವಕಿರಣಗಳ (ಕಾಸ್ಮಿಕ್ ರೇಸ್) ಸಂಶೋಧನೆಯಲ್ಲಿ ನಿರತನಾದ ಇವನು 1932ರಲ್ಲಿ ಪಾಸಿಟ್ರಾನ್ ಎಂಬ ಸೂಕ್ಷ್ಮ ಧನ ವಿದ್ಯುತ್ಕಣವನ್ನು ಕಂಡುಹಿಡಿದ. ಇದು ಎಲೆಕ್ಟ್ರಾನ್ ಎಂಬ ಋಣ ವಿದ್ಯುತ್ಕಣದ ಪ್ರತಿಯೋಗಿ. ಡಿರಾಕ್ ಆ ಮೊದಲೇ ವಿವರಿಸಿದ ತತ್ತ್ವದ ಪ್ರಕಾರ ಇಂಥ ಕಣ ಇರಬೇಕಿತ್ತು. ಅದನ್ನು ಪ್ರಾಯೋಗಿಕವಾಗಿ ಸಾಧಿಸಿದ ಹಿರಿಮೆ ಅವನದು. ಈ ಶೋಧನೆಗಾಗಿ 1936ರ ಭೌತಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ ಯನ್ನು ಈತನಿಗೂ ವಿಕ್ಟರ್ಹೆಸ್ ಎಂಬಾತನಿಗೂ ಹಂಚಲಾಯಿತು[1].. ಮೆಸಾನ್ ಕಣದ (ಎಲೆಕ್ಟ್ರಾನ್ ಮತ್ತು ಪ್ರೋಟಾನ್ಗಳ ಮಧ್ಯಸ್ಥವಾದ ಭಾರವನ್ನು ಹೊಂದಿದ) ಶೋಧನೆಯಲ್ಲಿಯೂ ಈತನ ಪಾತ್ರ ಮುಖ್ಯವಾದುದೇ. ನೆಡರ್ ಮೇಯರ್ ಎಂಬಾತ ಇವನ ಸಂಶೋಧನೆಗಳಲ್ಲಿ ಸಹಕಾರಿಯಾಗಿದ್ದ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.