Remove ads
From Wikipedia, the free encyclopedia
ನೊಬೆಲ್ ಪ್ರಶಸ್ತಿಯು ಅಲ್‌ಫ್ರೆಡ್ ನೊಬೆಲ್‌ರ ಮರಣೋತ್ತರ ಉಯಿಲಿನ ಪ್ರಕಾರ ವ್ಯಕ್ತಿಗಳ ಮತ್ತು ಸಂಘಸಂಸ್ಥೆಗಳ ಅತ್ಯುಚ್ಚ ಜನೋಪಕಾರಿ ಸಾಧನೆ, ಸಂಶೋಧನೆ, ಅವಿಷ್ಕಾರ ಮತ್ತು ಸೇವೆಗಳಿಗೆ ನೀಡಲ್ಪಡುತ್ತಿರುವ ಪುರಸ್ಕಾರ. ಇವನ್ನು ಕೆಳಗೆ ನಮೂದಿ ಸಿರುವ ವಿಭಾಗಗಳಿಗೆ ಪ್ರದಾನಿಸಲಾಗುತ್ತದೆ. ನೊಬೆಲ್ ಪ್ರಶಸ್ತಿಯನ್ನು ಜಗತ್ತಿನ ಅತ್ಯುಚ್ಚ ಸನ್ಮಾನ ಎಂದು ಪರಿಗಣಿಸಲಾಗಿದೆ. ನವೆಂಬರ್ ೨೦೦೫ರವರೆಗೆ ಒಟ್ಟು ೭೭೬ ನೊಬೆಲ್ ಪದಕಗಳನ್ನು ನೀಡಲಾಗಿದೆ. (೭೫೮ನ್ನು ಸಾಧಕರಿಗೂ ಉಳಿದ ೧೮ನ್ನು ಸಂಸ್ಥೆಗಳಿಗೆ ನೀಡಲಾಗಿದೆ).
ನೋಬೆಲ್ ಪ್ರಶಸ್ತಿ | |
---|---|
ಕೊಡಲ್ಪಡುವ ವಿಷಯ | ಮಾನವೀಯತೆ ಅತ್ಯುತ್ತಮ ಕೊಡುಗೆಗಳಿಗಾಗಿ ರಸಾಯನಶಾಸ್ತ್ರ, ಅರ್ಥಶಾಸ್ತ್ರ, ಸಾಹಿತ್ಯ, ಶಾಂತಿ, ಭೌತಶಾಸ್ತ್ರ, ಮತ್ತು ಶರೀರ ವಿಜ್ಞಾನ ಅಥವಾ ಔಷಧ |
ದೇಶ | |
ಕೊಡಿಸಲ್ಪಡು |
|
ಆಲ್ಫ್ರೆಡ್ ನೋಬೆಲ್ 'ಡೈನಮೈಟ್' ವಿಸ್ಪೋಟಕವನ್ನು ಆವಿಷ್ಕರಿಸಿದಾತ. ಈ ವಿಸ್ಪೋಟಕವು ಯುದ್ದಗಳಲ್ಲಿ ಹೆಚ್ಚಾಗಿ ಬಳಕೆಯಾದರಿಂದ ಈತನು ಅಪಾರ ಸಂಪತ್ತನ್ನು ಗಳಿಸಿದ. ಆದರೆ ತನ್ನಿಂದ ಕಾರಣವಾದ ಸಾವು - ನೋವುಗಳಿಂದ ವಿಚಲಿತಗೊಂಡು, ೧೮೯೫ರಲ್ಲಿ ತನ್ನ ಸಂಪತ್ತಿನ ೯೪% ಭಾಗವನ್ನು ಈ ಪ್ರಶಸ್ತಿಗಳ ಸ್ತಾಪನೆಗೆ ಉಯಿಲಿನಲ್ಲಿ ನಮೂದಿಸಿದ. ಈ ಪ್ರಕಾರವಾಗಿ ೧೯೦೧ರಲ್ಲಿ ಮೊದಲ ನೊಬೆಲ್ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಆಲ್ಫ್ರೆಡ್ ನೊಬೆಲ್ ಅವರ ಸ್ಮರಣೆಗಾಗಿ ಬ್ಯಾಂಕ್ ಆಫ್ ಸ್ವೀಡನ್ ನೀಡುವ ಅರ್ಥಶಾಸ್ತ್ರ ಪ್ರಶಸ್ತಿ (ಇದನ್ನು ಅರ್ಥ ಶಾಸ್ತ್ರದ ನೊಬೆಲ್ ಪ್ರಶಸ್ತಿ ಎಂದು ಪರಿಗಣಿಸಿದರೂ, ಇದು ಆಲ್‌ಫ್ರೆಡ್ ನೊಬೆಲ್ ಅವರ ಉಯಿಲಿನಲ್ಲಿರಲಿಲ್ಲ. ಈ ಪುರಸ್ಕಾರವನ್ನು ೧೯೬೯ ರಲ್ಲಿ ಬ್ಯಾಂಕ್ ಆಫ್ ಸ್ವೀಡನ್ ಪ್ರಾರಂಭ ಮಾಡಿತು.)
೨೦೦೯ ರ ವರೆಗೆ ಭಾರತೀಯರಾದ (ಅಥವಾ ಭಾರತೀಯ ಮೂಲದ) ೮ ಜನಕ್ಕೆ ಈ ಪ್ರಶಸ್ತಿ ಸಂದಿದೆ. ಇವರುಗಳು-
2019
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.