Remove ads
From Wikipedia, the free encyclopedia
ನೊಬೆಲ್ ಪ್ರಶಸ್ತಿಗಳನ್ನು ಅತ್ಯುತ್ತಮ ಎನ್ನುವಂತ ಸಂಶೋಧನೆಗಳಿಗೆ ನೀಡಿದರೆ, ಇಗ್ನೊಬಲ್ ಪ್ರಶಸ್ತಿ (Ig Nobel Prize)ಗಳನ್ನು, ಅಸ್ವಾಭಾವಿಕ ಅಥವಾ ಅತೀ ಕಮ್ಮಿ ಪ್ರಾಮುಖ್ಯದ ಸಂಶೋಧನೆಗಳನ್ನು ಕೈಗೊಂಡವರಿಗೆ ನೀಡಲಾಗುತ್ತದೆ. ಪ್ರಶಸ್ತಿ ಸಮಿತಿಯು ಈ ಪ್ರಶಸ್ತಿಯ ಉದ್ದೇಶವನ್ನು, ಮೊದಲು ನಗು ಮೂಡಿಸಿ ನಂತರ ಚಿಂತನೆಗೆ ಹಚ್ಚುವ ಸಂಶೋಧನೆಗಳಿಗೆ ಎಂದಿದೆ. ಈ ಪ್ರಶಸ್ತಿಯು ಕೆಲವೊಮ್ಮೆ ವ್ಯಂಗವಾಗಿಯೂ ನೀಡಲ್ಪಡುತ್ತದೆ. ನೋಬೆಲ್ ಎನ್ನುವ ಪದವನ್ನೇ ಬಳಸಿ ಇಗ್ನೊಬಲ್ ಎಂದರೆ ಪ್ರಾಮುಖ್ಯವಲ್ಲದ ಎನ್ನುವ ಅರ್ಥ ಕೊಡುವ ಪದದ ಮೇಲೆ ಇಗ್ನೊಬಲ್ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಪ್ರಶಸ್ತಿ ವಿಜೇತರಿಗೆ ಹಾರ್ವರ್ಡ್ ವಿಶ್ವವಿದ್ಯಾಲಯದ ಸ್ಯಾಂಡರ್ಸ್ ಥಿಯೇಟರ್ ನಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ವಿದ್ವಾಂಸರುಗಳಿಂದ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಅಲ್ಲದೆ ಅಲ್ಲಿ ಪ್ರಶಸ್ತಿ ವಿಜೇತರ ಭಾಷಣವೂ ಇರುತ್ತದೆ. ಅನ್ನಲ್ಸ್ ಆಫ್ ಇಂಪ್ರಾಬಬಲ್ ರೀಸರ್ಚ್ ಎನ್ನುವ ವೈಜ್ಞಾನಿಕ ವಿನೋದ ಪತ್ರಿಕೆಯು ಈ ಬಹುಮಾನಗಳನ್ನು ಅಯೋಜಿಸುತ್ತದೆ.
೧೯೯೧ರಲ್ಲಿ ಆನಲ್ಸ್ ಆಫ್ ಇಂಪ್ರಾಬಬಲ್ ರೀಸರ್ಚ್ ಪತ್ರಿಕೆಯ ಸಂಪಾದಕರು ಮತ್ತು ಸಹ-ಸ್ಥಾಪಕರಾದ ಮಾರ್ಕ್ ಅಬ್ರಹಾಮ್ ಅವರಿಂದ ಸ್ಥಾಪಿಸಲ್ಪಟ್ಟಿತು. ಆ ಬಾರಿಯ ಪ್ರಶಸ್ತಿಗಳನ್ನು ಮತ್ತೆ ಮಾಡಲೇಬಾರದಂತಹ ಸಂಶೋಧನೆಗಳನ್ನು ಮಾಡಿದ ಹತ್ತು ಜನರಿಗೆ ನೀಡಲಾಯಿತು. ನೋಬಲ್ ಪ್ರಶಸ್ತಿಯ ಐದು ವಿಭಾಗಗಳಾದ ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ ಶಾಸ್ತ್ರ, ಸಾಹಿತ್ಯ ಮತ್ತು ಶಾಂತಿಯ ವಿಭಾಗಗಳೂ ಮತ್ತು ಜೀವಶಾಸ್ತ್ರ, ಸಾರ್ವಜನಿಕ ಆರೋಗ್ಯ, ಇಂಜಿನಿಯರಿಂಗ್ ಸೇರಿದಂತೆ ಹತ್ತು ವಿಭಾಗಗಳನ್ನು ಇಗ್ನೊಬಲ್ ಪ್ರಶಸ್ತಿ ಹೊಂದಿದೆ. ಈ ಪ್ರಶಸ್ತಿಗಳು ವಿನೋದದಿಂದ ಕೂಡಿದ ವೈಜ್ಞಾನಿಕ ಸಂಶೋಧನೆಗಳಿಗೆ ನೀಡುವುದಾದರೂ, ಕೆಲವೊಮ್ಮೆ ವ್ಯಂಗಕ್ಕಾಗಿ ಅಥವಾ ವಿಡಂಬನೆಗಾಗಿಯೂ ನೀಡಲ್ಪಡುತ್ತವೆ.
ಪ್ರಶಸ್ತಿ ಪ್ರದಾನ ಸಮಾರಂಭವು ಮೊದಲಿಗೆ ಎಮ್. ಐ. ಟಿ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿದ್ದರೂ, ಈಗ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಸ್ಯಾಂಡರ್ಸ್ ಥಿಯೇಟರ್ ನಲ್ಲಿ ನಡೆಯುತ್ತದೆ. ನೈಜ ನೊಬೆಲ್ ಪ್ರಶಸ್ತಿ ವಿಜೇತ ವಿದ್ವಾಂಸರುಗಳಿಂದಲೇ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಹಲವಾರು ಬಗೆಯ ವಿನೋದಗಳು ಈ ಸಮಾರಂಭದಲ್ಲಿರುತ್ತವೆ. ಉದಾಹರಣೆಗೆ, ಮಿಸ್. ಸ್ವೀಟೀ ಪೂ ಎಂಬ ಚಿಕ್ಕ ಹುಡುಗಿ, ಭಾಷಣಕಾರರ ಭಾಷಣ ಉದ್ದವಾದರೆ " ದಯವಿಟ್ಟು ನಿಲ್ಲಿಸಿ ನನಗೆ ಬೋರಾಗಿದೆ" ಎಂದು ಅಳುತ್ತದೆ. ಕಾರ್ಯಕ್ರಮದ ಕೊನೆಯಲ್ಲಿ "ಈ ಪ್ರಶಸ್ತಿ ನಿಮಗಿನ್ನೂ ಸಿಗದಿದ್ದರೆ ......... ಅದಕ್ಕಿಂತಲೂ ಹೆಚ್ಚಾಗಿ ಈ ಪ್ರಶಸ್ತಿ ನಿಮಗೆ ಸಿಕ್ಕಿದ್ದರೆ ..... ಮುಂದಿನ ವರ್ಷ ಅದೃಷ್ಟ ನಿಮ್ಮ ಜತೆಗಿರಲಿ" ಎನ್ನುವ ಮಾತುಗಳನ್ನು ಹೇಳಲಾಗುತ್ತದೆ .
ಈ ಪ್ರಶಸ್ತಿ ಪ್ರದಾನ ಸಮಾರಂಭದ ಮುದ್ರಿಕೆಯನ್ನು ಅಮೆರಿಕಾದ ನ್ಯಾಷನಲ್ ಪಬ್ಲಿಕ್ ರೇಡಿಯೋ ಪ್ರಸಾರ ಮಾಡುತ್ತದೆ. ಅಲ್ಲದೆ ಅಂತರ್ಜಾಲದಲ್ಲಿ ನೇರ ಪ್ರಸಾರವೂ ಇರುತ್ತದೆ.
ಒಟ್ಟಾವೋ, ಸೆ.25- ಜಗತ್ತಿನಲ್ಲಿ ಮನುಷ್ಯ ಅತೀ ಬುದ್ಧಿವಂತ ಪ್ರಾಣಿ. ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟವಾದ ತಂತ್ರಜ್ಞಾನ ಬೆಳೆಸಿಕೊಂಡು ಐತಿಹಾಸಿಕ ಸಾಧನೆಗೈದು ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಸ್ವೀಕರಿಸಿರುವ ಉದಾಹರಣೆಗಳು ಸಾಕಷ್ಟಿವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಪ್ರಾಣಿಗಳ ರೀತಿಯಲ್ಲಿ ಗುಣ-ನಡವಳಿಕೆಗಳನ್ನು ರೂಪಿಸಿಕೊಂಡು ಐಜಿ ನೊಬೆಲ್ ಪುರಸ್ಕಾರಕ್ಕೆ ಭಾಜನವಾಗಿದ್ದಾನೆ. ಸ್ವಿಟ್ಜರ್‍ಲ್ಯಾಂಡ್‍ನ ಥಾಮಸ್ ಎಂಬ ವ್ಯಕ್ತಿಯು ಮೇಕೆಗಳ ರೀತಿಯಲ್ಲಿ ಬದುಕುತ್ತಿದ್ದಾನೆ. ಈತ ಹೆಚ್ಚಿನ ಸಮಯವನ್ನು ಮೇಕೆಗಳ ಜತೆ ಕಳೆಯುತ್ತಿದ್ದಾನೆ, ಮೇಕೆಗಳಂತೆ ನಡೆದಾಡುತ್ತಾನೆ. ಅದರ ಜತೆಯೇ ಹುಲ್ಲು ತಿನ್ನುತ್ತಾನೆ. ಅವುಗಳಂತೆ ನಡೆದಾಡಲು ಕೃತಕ ಕಾಲುಗಳನ್ನು ಅಳವಡಿಸಿಕೊಂಡು ಅವುಗಳ ಜತೆ ಬೆಟ್ಟ-ಗುಡ್ಡಗಳಲ್ಲಿ ನಡೆದಾಡುತ್ತಾನೆ. [೧]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.