ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿ
ಅರ್ಥಶಾಸ್ತ್ರ ಪ್ರಶಸ್ತಿ From Wikipedia, the free encyclopedia
1968 ರಿಂದ
- ಆಲ್‌ಫ್ರೆಡ್ ನೊಬೆಲ್ ಅವರ ಸ್ಮರಣೆಗಾಗಿ ಬ್ಯಾಂಕ್ ಆಫ್ ಸ್ವೀಡನ್ ನೀಡುವ ಅರ್ಥಶಾಸ್ತ್ರ ಪ್ರಶಸ್ತಿ. ಈ ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿ)ಯು ನಿರ್ಧರಿಸುತ್ತದೆ. (ಇದನ್ನು ಅರ್ಥ ಶಾಸ್ತ್ರದ ನೊಬೆಲ್ ಪ್ರಶಸ್ತಿ ಎಂದು ಪರಿಗಣಿಸಿದರೂ, ಇದು ಆಲ್‌ಫ್ರೆಡ್ ನೊಬೆಲ್ ಅವರ ಉಯಿಲಿನಲ್ಲಿರಲಿಲ್ಲ. ಅರ್ಥಶಾಸ್ತ್ರಕ್ಕೆ ನೀಡಲಾಗುವ ನೊಬೆಲ್ ಪ್ರಶಸ್ತಿಯನ್ನು ಸ್ವೀಡನ್ನಿನ ಕೇಂದ್ರೀಯ ಬ್ಯಾಂಕ್ 1968ರಲ್ಲಿ ಸ್ಥಾಪಿಸಿದೆ.
ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿ 2016 -‘ಗುತ್ತಿಗೆ ಸಿದ್ಧಾಂತ’ಕ್ಕೆ

- 12 Oct, 2016
- 2016 ರ ಅಮೆರಿಕದ ಅರ್ಥಶಾಸ್ತ್ರಜ್ಞ ಆಲಿವರ್ ಹಾರ್ಟ್ ಮತ್ತು ಫಿನ್ಲೆಂಡ್‌ನ ಬೆಂಗ್ಟ್ ಹೋಲ್ಮಸ್ಟ್ರಾಮ್ ಅವರು ಅಭಿವೃದ್ಧಿಪಡಿಸಿರುವ ‘ಗುತ್ತಿಗೆ ಸಿದ್ಧಾಂತ’ಕ್ಕೆ ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿಯನ್ನು ಜಂಟಿಯಾಗಿ ಘೋಷಿಸಲಾಗಿದೆ.
ವಿವರ
- ಬ್ರಿಟನ್ - ಅಮೆರಿಕದ ಅರ್ಥಶಾಸ್ತ್ರಜ್ಞ ಆಲಿವರ್ ಹಾರ್ಟ್ ಮತ್ತು ಫಿನ್ಲೆಂಡ್‌ನ ಬೆಂಗ್ಟ್ ಹೋಲ್ಮಸ್ಟ್ರಾಮ್ ಅವರು ಅಭಿವೃದ್ಧಿಪಡಿಸಿರುವ ‘ಗುತ್ತಿಗೆ ಸಿದ್ಧಾಂತ’ಕ್ಕೆ ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿಯನ್ನು ಜಂಟಿಯಾಗಿ ಘೋಷಿಸಲಾಗಿದೆ. ಉನ್ನತ ಹುದ್ದೆಗಳಲ್ಲಿ ಇರುವವರ ಕಾರ್ಯದಕ್ಷತೆ ಆಧರಿಸಿದ ವೇತನ, ವಿಮೆ ಹಣ ಪಾವತಿ, ಕಡಿತ ಮತ್ತು ಸರ್ಕಾರಿ ವಲಯದ ಉತ್ಪಾದನಾ ಚಟುವಟಿಕೆಗಳ ಖಾಸಗೀಕರಣ ಸೇರಿದಂತೆ ವೈವಿಧ್ಯಮಯ ವಿಷಯಗಳನ್ನು ವಿಶ್ಲೇಷಿಸುವ ಸಮಗ್ರ ವಿಧಾನವನ್ನು ಈ ಇಬ್ಬರೂ ಅರ್ಥಶಾಸ್ತ್ರಜ್ಞರು ಈ ಗುತ್ತಿಗೆ ಸಿದ್ಧಾಂತದಲ್ಲಿ ಅಭಿವೃದ್ಧಿಪಡಿಸಿದ್ದಾರೆ ಎಂದು ಪ್ರಶಸ್ತಿ ಆಯ್ಕೆ ಸಮಿತಿಯು ತಿಳಿಸಿದೆ. ನಿತ್ಯ ಜೀವನದಲ್ಲಿ ಗುತ್ತಿಗೆ ವಿಷಯ ಮತ್ತು ಉದ್ದಿಮೆ ಸಂಸ್ಥೆಗಳ ಕಾರ್ಯವೈಖರಿ ಅರ್ಥೈಸಿಕೊಳ್ಳಲು ಮತ್ತು ಗುತ್ತಿಗೆ ನಿಯಮಾವಳಿಗಳಲ್ಲಿನ ಲೋಪದೋಷಗಳನ್ನು ತಿಳಿದುಕೊಳ್ಳಲು ಇವರಿಬ್ಬರೂ ಅಭಿವೃದ್ಧಿಪಡಿಸಿದ ಸೈದ್ಧಾಂತಿಕ ನಿಯಮಗಳು ನೆರವಾಗಲಿವೆ. ದಿವಾಳಿಗೆ ಸಂಬಂಧಿಸಿದ ಕಾನೂನುಗಳಿಂದ ಹಿಡಿದು ರಾಜಕೀಯ ಸಂವಿಧಾನ ರೂಪಿಸುವಲ್ಲಿ ಇವರಿಬ್ಬರೂ ತಮ್ಮ ಈ ‘ಗುತ್ತಿಗೆ ಸಿದ್ಧಾಂತ’ದ ಮೂಲಕ ‘ಬೌದ್ಧಿಕ ತಳಪಾಯ’ ಹಾಕಿದ್ದಾರೆ ಎಂದೂ ಸಮಿತಿ ಅಭಿಪ್ರಾಯಪಟ್ಟಿದೆ.
- ಸರ್ಕಾರಿ ಸ್ವಾಮ್ಯದ ಕಂಪನಿಗಳ ಖಾಸಗೀಕರಣ - ಇತ್ಯಾದಿಗಳನ್ನು ವ್ಯಾಖ್ಯಾನಿಸಬಹುದಾಗಿದೆ. ಇದಲ್ಲದೆ, ವಿಮಾ ಪಾಲಿಸಿಗಳ ನಿರ್ಧಾರ, ಬಂದೀಖಾನೆ ವೇತನ ನಿರ್ವಹಣೆಗೂ ಇದು ಅನುಕೂಲ ಕಲ್ಪಿಸಿದೆ.
ಪ್ರಶಸ್ತಿ ಮತ್ತು ಹಣ
- ಇವರಿಬ್ಬರೂ ಪ್ರಶಸ್ತಿಯ ಮೊತ್ತವಾದ ಈ ಇಬ್ಬರಿಗೂ 9,24,000 ಡಾಲರ್ ಬಹುಮಾನ ಬರಲಿದೆ. ಸಮನಾಗಿ ಹಂಚಿಕೊಳ್ಳಲಿದ್ದಾರೆ.[೧]
ನೋಡಿ
ಉಲ್ಲೇಖಗಳು
Wikiwand - on
Seamless Wikipedia browsing. On steroids.