Remove ads
ಸಸ್ಯದ ಜಾತಿ From Wikipedia, the free encyclopedia
ಶುಂಠಿ ಆಹಾರದಲ್ಲಿ ಬಳಸಲಾಗುವ ಒಂದು ಸಂಬಾರ ವಸ್ತು. ಶುಂಠಿಯನ್ನು ಔಷಧಿಗಳಲ್ಲಿ ಸಹ ಬಳಸುವರು. ಶುಂಠಿಯ ಗಿಡದ ನೆಲದೊಳಗಿನ ಭಾಗದ ಕಾಂಡವು ಶುಂಠಿಯೆನಿಸಿಕೊಳ್ಳುತ್ತದೆ. ಶುಂಠಿಯ ಕೃಷಿಗೆ ಸುದೀರ್ಘ ಇತಿಹಾಸವಿದೆ. ಏಷ್ಯಾ ಮೂಲದ ಶುಂಠಿಯನ್ನು ಭಾರತ, ಆಗ್ನೇಯ ಏಷ್ಯಾ, ಪಶ್ಚಿಮ ಆಫ್ರಿಕಾ ಮತ್ತು ಕೆರಿಬ್ಬಿಯನ್ ಪ್ರದೇಶಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ.
ಶುಂಠಿ | |
---|---|
Conservation status | |
Secure | |
Scientific classification | |
ಸಾಮ್ರಾಜ್ಯ: | Plantae |
(ಶ್ರೇಣಿಯಿಲ್ಲದ್ದು): | Angiosperms |
(ಶ್ರೇಣಿಯಿಲ್ಲದ್ದು): | Monocots |
(ಶ್ರೇಣಿಯಿಲ್ಲದ್ದು): | Commelinids |
ಗಣ: | Zingiberales |
ಕುಟುಂಬ: | Zingiberaceae |
ಕುಲ: | Zingiber |
ಪ್ರಜಾತಿ: | Z. officinale |
Binomial name | |
Zingiber officinale Roscoe | |
ಶುಂಠಿಯ ತೀಕ್ಷ್ಣ ಘಾಟು ಮತ್ತು ರುಚಿಗಳು ಅದರಲ್ಲಿನ ಜಿಂಜೆರೋಲ್, ಶೊಗಾಲ್ ಮತ್ತು ಜಿಂಜೆರೋನ್ಗಳೆಂಬ ಸಸ್ಯತೈಲಗಳ ಮಿಶ್ರಣದಿಂದ ಉಂಟಾಗುತ್ತದೆ. ಈ ತೈಲಗಳು ತಾಜಾ ಶುಂಠಿಯ ಒಟ್ಟು ತೂಕದ ೧ ರಿಂದ ೩ ಶೇಕಡಾದಷ್ಟು ಇರುತ್ತವೆ. ಸುಗಂಧ ಬೀರುವ ಜಿಂಜರಾಲ್ ಹಳದಿ ಬಣ್ಣದ ಎಣ್ಣೆ. ಅದರಲ್ಲಿ ಕಾಂಫೀನೆ, ಫೆಲ್ಲಾಂಡ್ರಮ್, ಜಿಂಜಿಬೆನೈನ್, ಸೈನಿಯಾಲ್, ಬೊರ್ನಿಯಾಲ್ ಎಂಬ ಘಟಕಗಳಿವೆ. ವಿವಿಧ ರೆಸಿನ್ಗಳು, ಪಿಷ್ಟಪದಾರ್ಥ, ಪೊಟಾಸಿಯಮ್ ಆಕ್ಸಲೇಟ್ ಮತ್ತು ಕೆಲವು ಆವಶ್ಯಕ ತೈಲಗಳೂ ಇರುವುವು.
ಹಸಿ ಶುಂಠಿ ಮತ್ತು ಒಣಶುಂಠಿಗಳನ್ನು ಅಡುಗೆಯಲ್ಲಿ ಸಂಬಾರ ಪದಾರ್ಥವನ್ನಾಗಿ ವ್ಯಾಪಕವಾಗಿ ಬಳಸಲಾಗುತ್ತದೆ.[೧]
ಸುಮಾರು ೩ ರಿಂದ ೪ ಅಡಿ ಎತ್ತರಕ್ಕಿರುವ ಶುಂಠಿಯ ಗಿಡವು ತೆಳ್ಳಗೆ ನೇರವಾಗಿರುತ್ತದೆ. ಗಿಡದ ಬಿಳಿ ಮತ್ತು ರೋಜಾ ಬಣ್ಣದ ಮೊಗ್ಗುಗಳು ಹಳದಿ ಬಣ್ಣದ ಹೂವಾಗಿ ಅರಳುತ್ತವೆ.
ಭಾರತದ ಅನೇಕ ಕಡೆಗಳಲ್ಲಿ, ವಿಶೇಷವಾಗಿ ತಮಿಳುನಾಡು, ಕೇರಳ ಮತ್ತು ಕೊಡಗಿನ ಕೆಲವು ಪ್ರದೇಶಗಳಲ್ಲಿ ಹೆಚ್ಚಾಗಿ ಇದರ ಬೇಸಾಯ ಮಾಡುತ್ತಾರೆ. ಹಿತೋಷ್ಣ ತಂಪು ಹವಾಮಾನವಿರುವ ಸ್ಥಳ ಶುಂಠಿ ಕೃಷಿಗೆ ಯೋಗ್ಯವಾದುದು. ಮೊಳಕೆಗಳಿರುವ ಬೇರು, ಕಾಂಡ ಅಥವಾ ರೈಜೋಮ್ಗಳನ್ನು ಮೆದುಮಣ್ಣಿನ ನೆಲದಲ್ಲಿ ನಾಟಿಮಾಡಿ ಇದರ ಗಿಡಗಳನ್ನು ಬೆಳೆಸುತ್ತಾರೆ. ಚಿಗುರೊಡೆದು ಪೂರ್ತಿ ಬೆಳೆದ ಸಸ್ಯದ ಮೇಲ್ಭಾಗದಲ್ಲಿ ಅಗಲವಾದ ದೊಡ್ಡ ಎಲೆಗಳು ಬೇರುಕಾಂಡದಿಂದ ಚಿಗುರಿ ನೆಲದ ಮೇಲ್ಭಾಗಕ್ಕೆ ಬರುತ್ತವೆ. ಶುಂಠಿ ವಾರ್ಷಿಕ ಸಸ್ಯವಾಗಿದೆ. ಇದರ ಬೇರುಕಾಂಡವೇ ಉಪಯೋಗ ಭಾಗ.
ಜಗತ್ತಿನ ಒಟ್ಟು ಶುಂಠಿಯ ಉತ್ಪಾದನೆಯ ೩೦% ಪಾಲನ್ನು ಬೆಳೆಯುವ ಭಾರತ ಮೊದಲ ಸ್ಥಾನದಲ್ಲಿದೆ.
ವಿಶ್ವದ ಮೊದಲ ಹತ್ತು ಶುಂಠಿ ಉತ್ಪಾದಕ ದೇಶಗಳು — 11 ಜೂನ್ 2008ರಂತೆ | ||||
---|---|---|---|---|
ದೇಶ | ಉತ್ಪಾದನೆ (ಟನ್ನುಗಳಲ್ಲಿ) | |||
ಭಾರತ | ೫೦೦೦೦೦ | |||
ಚೀನಾ | 285000 | |||
ಇಂಡೋನೇಷ್ಯಾ | 177000 | |||
ನೇಪಾಳ | 158905 | |||
ನೈಜೀರಿಯ | 138000 | |||
ಬಾಂಗ್ಲಾದೇಶ | 57000 | |||
ಜಪಾನ್ | 42000 | |||
ಥೈಲ್ಯಾಂಡ್ | 34000 | |||
ಫಿಲಿಪ್ಪೀನ್ಸ್ | 28000 | |||
ಶ್ರೀಲಂಕಾ | 8270 | |||
ಒಟ್ಟು ವಿಶ್ವ | 1387445 | |||
ಶುಂಠಿ ಹಸಿವನ್ನು ಜಾಗೃತಗೊಳಿಸಿ ಮಲಬದ್ಧತೆಯನ್ನು ನಿವಾರಿಸಿ, ಗರ್ಭಾವಸ್ಥೆಯಲ್ಲಿ ಬೆಳಗಿನ ಬೇನೆ ಸಹ ಹೋಗಿಸುತ್ತದೆ. ಶುಂಠಿಯನ್ನು ಬಹಳ ಒಳ್ಳೆಯ ಮೂಲಿಕೆ ಎಂದು ಕರೆಯಲಾಗುತ್ತದೆ. ಶುಂಠಿಯಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ ಮತ್ತು ಬಿ ಕಾಂಪ್ಲೆಕ್ಸ್ ಇದೆ. ಇದು ಮೆಗ್ನೀಸಿಯಮ್, ಫಾಸ್ಪರಸ್, ಸಿಲಿಕಾನ್, ಸೋಡಿಯಂ, ಕಬ್ಬಿಣ, ಸತು, ಕ್ಯಾಲ್ಸಿಯಂ, ಬೀಟಾ-ಕ್ಯಾರೋಟಿನ್ ನಂತಹ ಖನಿಜಗಳಿಂದ ಸಮೃದ್ಧವಾಗಿದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. [೨]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.