Remove ads
From Wikipedia, the free encyclopedia
ಕೈಪರ್ ಪಟ್ಟಿ- ನೆಪ್ಚೂನ್‌ನ ಕಕ್ಷೆಯಿಂದ (ಸೂರ್ಯನಿಂದ ೩೦ AU) ಸೂರ್ಯನಿಂದ ೫೦ AU ಗಳವರೆಗಿನ ವಲಯ. ಕೈಪರ್ ಪಟ್ಟಿಯೊಳಗಿನ ಕಾಯಗಳು ಮತ್ತು ಚದರಿದ ತಟ್ಟೆಯ ಕಾಯಗಳನ್ನು ಒಟ್ಟಾಗಿ ನೆಪ್ಚೂನ್-ಅತೀತ ಕಾಯ ಗಳೆಂದು ಕರೆಯಲಾಗುತ್ತದೆ. ನೆಪ್ಚೂನ್-ಅತೀತ ಕಾಯಗಳಲ್ಲಿ ಹಿಲ್ಸ್ ಮೋಡ ಮತ್ತು ಊರ್ಟ್ ಮೋಡಗಳ ಊಹೆಯಾಧಾರಿತ ಕಾಯಗಳೂ ಸೇರಿವೆ. ನೆಪ್ಚೂನ್‌ನ ಜೊತೆಯ ಒಡನಾಟದಿಂದ (೨:೧ ಕಕ್ಷೀಯ ಅನುರಣನೆ) ೪೮ಖ.ಮಾ.ದಲ್ಲಿ ಗೋಚರ ತುದಿ (ಅಂದರೆ, ಕಾಯಗಳ ಸಾಂದ್ರತೆಯಲ್ಲಿ ಹಠಾತ್ ಬದಲಾವಣೆ; ಕೆಳಗಿನ ಕಕ್ಷೆಗಳ ವಿತರಣೆಯನ್ನು ನೋಡಿ) ಉಂಟಾಗುತ್ತದೆ ಎಂದು ಯೋಚಿಸಲಾಗಿದೆ. ಆದರೆ, ಪ್ರಸ್ತುತದ ಮಾದರಿಗಳಿಂದ ಈ ವಿಚಿತ್ರ ವಿತರಣೆಯ ಬಗ್ಗೆ ಇನ್ನೂ ಒಳ್ಳೆಯ ವಿವರಣೆಗಳು ದೊರಕಿಲ್ಲ.
ಕೈಪರ್ ಪಟ್ಟಿಯ ಮೇಲೆ ಗುರು ಮತ್ತು ನೆಪ್ಚೂನ್ ಗ್ರಹಗಳು ಆಳವಾದ ಪ್ರಭಾವವನ್ನು ಬೀರಿವೆ ಎಂದು ಆಧುನಿಕ ಗಣಕಯಂತ್ರ ಛದ್ಮನಗಳಿಂದ ತಿಳಿದು ಬರುತ್ತದೆ.
ಎಡ್ಜ್‌ವರ್ತ್‌ಗೆ ಮನ್ನಣೆ ಕೊಡಲು ಎಡ್ಜ್‌ವರ್ತ್-ಕೈಪರ್ ಪಟ್ಟಿ ಪದವನ್ನು ಪರ್ಯಾಯವಾಗಿ ಬಳಸಲಾಗುತ್ತದೆ. ನೆಪ್ಚೂನ್-ಅತೀತ ಕಾಯ ಪದವು ಬೇರೆಲ್ಲಾ ಪದಗಳಿಗಿಂತ ಕಡಿಮೆ ವಿವಾದಾತ್ಮಕವಾಗಿರುವುದರಿಂದ, ಹಲವು ವೈಜ್ಞಾನಿಕ ಸಮುದಾಯಗಳು ಈ ಪದವನ್ನು ಶಿಫಾರಸು ಮಾಡುತ್ತವೆ; ಆದರೆ, ಇದು ಸೌರಮಂಡಲದ ಹೊರ ತುದಿಯಲ್ಲಿರುವ ಎಲ್ಲಾ ಕಾಯಗಳನ್ನೂ ಸೇರಿಸುವುದರಿಂದ (ಕೇವಲ ಕೈಪರ್ ಪಟ್ಟಿಯ ಕಾಯಗಳನ್ನು ಮಾತ್ರವಲ್ಲದೆ), ಈ ಎರಡು ಪದ ಗುಚ್ಛಗಳು ಸಮಾನಾರ್ಥ ಪದಗಳಲ್ಲ.
ತಿಳಿದಿರುವ ಅತಿ ಕಾಂತಿಯುತ ಕೈಪರ್ ಪಟ್ಟಿ ಕಾಯಗಳು (೪.೦ಕ್ಕಿಂತ ಕಡಿಮೆ ನಿರಪೇಕ್ಷ ಉಜ್ವಲತಾಂಕ ಹೊಂದಿರುವ) ಈ ಕೆಳಗಿನಂತಿವೆ:
ಶಾಶ್ವತ ಅಂತಿಕ |
ತಾತ್ಕಾಲಿಕ ಅಂತಿಕ |
ನಿರಪೇಕ್ಷ ಉಜ್ವಲತಾಂಕ | ಪ್ರತಿಫಲನಾಂಶ | ಸಮಭಾಜಕದ ವ್ಯಾಸ (ಕಿ.ಮೀ.) |
ದೀರ್ಘಾರ್ಧ ಅಕ್ಷ (ಖ.ಮಾ.) |
ಆವಿಷ್ಕಾರದ ವರ್ಷ | ಆವಿಷ್ಕಾರಕ | Diameter method |
---|---|---|---|---|---|---|---|---|
ಪ್ಲುಟೊ | ೧.೦ | ೦.೬ | ೨೩೨೦ | ೩೯.೪ | ೧೯೩೦ | C. Tombaugh | occultation | |
136472 | 2005 FY9 | ೦.೩ | ೦.೮ ೦.೨ | ೧೮೦೦ ೨೦೦ | ೪೫.೭ | ೨೦೦೫ | M. Brown, C. Trujillo & D. Rabinowitz | assumed albedo |
136108 | 2003 EL61 | ೦.೧ | ೦.೬ (assumed) | ~೧೫೦೦ (1 | ೪೩.೩ | ೨೦೦೫ | M. Brown, C. Trujillo & D. Rabinowitz | assumed albedo |
Charon | S/1978 P 1 | ೧ | ೦.೪ | ೧೨೦೫ | ೩೯.೪ | ೧೯೭೮ | J. Christy | occultation |
Orcus | 2004 DW | ೨.೩ | ೦.೧ (assumed) | ~೧೫೦೦ | ೩೯.೪ | ೨೦೦೪ | M. Brown, C. Trujillo & D. Rabinowitz | assumed albedo |
Quaoar | 2002 LM60 | ೨.೬ | ೦.೧೦ ೦.೦೩ | ೧೨೬೦ ೧೯೦ | ೪೩.೫ | ೨೦೦೨ | C. Trujillo & M. Brown | disk resolved |
Ixion | 2001 KX76 | ೩.೨ | ೦.೨೫ ೦.೫೦ | ೪೦೦ ೫೫೦ | ೩೯.೬ | ೨೦೦೧ | DES | thermal |
55636 | 2002 TX300 | ೩.೩ | > ೦.೧೯ | < ೭೦೯ | ೪೩.೧ | ೨೦೦೨ | NEAT | thermal |
55565 | 2002 AW197 | ೩.೩ | ೦.೧೪ ೦.೨೦ | ೬೫೦ ೭೫೦ | ೪೭.೪ | ೨೦೦೨ | C. Trujillo, M. Brown, E. Helin, S. Pravdo, K. Lawrence & M. Hicks / Palomar Observatory |
thermal |
55637 | 2002 UX25 | ೩.೬ | ೦.೦೮? | ~೯೧೦ | ೪೨.೫ | ೨೦೦೨ | A. Descour / Spacewatch | assumed albedo |
Varuna | 2000 WR106 | ೩.೭ | ೦.೧೨ ೦.೩೦ | ೪೫೦ ೭೫೦ | ೪೩.೦ | ೨೦೦೦ | R. McMillan | thermal |
2002 MS4 | ೩.೮ | ೦.೧ (assumed) | ೭೩೦? | ೪೧.೮ | ೨೦೦೨ | C. Trujillo, M. Brown | assumed albedo | |
2003 AZ84 | ೩.೯ | ೦.೧ (assumed) | ೭೦೦? | ೩೯.೬ | ೨೦೦೩ | C. Trujillo, M. Brown, E. Helin, S. Pravdo, K. Lawrence & M. Hicks |
assumed albedo |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.