From Wikipedia, the free encyclopedia
ಕುಟಿಲವಾತ/ಮೆತುಮೂಳೆರೋಗ/ಹಕ್ಕಿರೋಗ ಎಂಬುದು ಮಕ್ಕಳ ಮೂಳೆಗಳನ್ನು ಮೆದುಗೊಳಿಸಿ ಸಂಭಾವ್ಯ ಮೂಳೆಮುರಿತ ಹಾಗೂ ವಿರೂಪಕ್ಕೆ ಕಾರಣವಾಗುವಂಥ ರೋಗ. ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕುಟಿಲವಾತ/ಮೆತುಮೂಳೆರೋಗವು ಹೆಚ್ಚು ಕಾಡುವ ಬಾಲ್ಯಾವಸ್ಥೆಯ ರೋಗವಾಗಿದೆ. ಇದಕ್ಕೆ ಪ್ರಧಾನ ಕಾರಣ ಡಿ ಜೀವಸತ್ವದ ಕೊರತೆಯಾದರೂ, ಆಹಾರದಲ್ಲಿನ ಅಗತ್ಯ ಕ್ಯಾಲ್ಷಿಯಂನ ಕೊರತೆಯೂ ಕುಟಿಲವಾತ/ಮೆತುಮೂಳೆರೋಗಕ್ಕೆ (ವಿಪರೀತ ಅತಿಸಾರ ಹಾಗೂ ವಾಂತಿಗಳು) ಕಾರಣವಾಗಬಹುದು. ವಯಸ್ಕರಿಗೂ ಇದು ಬಾಧಿಸಬಹುದಾದರೂ, ಬಹುಪಾಲು ಸಂದರ್ಭಗಳಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಕಂಡುಬರುತ್ತದೆ, ಇದಕ್ಕೆ ಸಾಧಾರಣವಾಗಿ ಬಾಲ್ಯದ ಪ್ರಾರಂಭದ ದಿನಗಳಲ್ಲಿ ಉಂಟಾಗಿದ್ದ ಅಪೌಷ್ಟಿಕತೆ ಅಥವಾ ಉಪವಾಸಗಳು ಕಾರಣವಾಗಿರುತ್ತವೆ. ವಯಸ್ಕರಲ್ಲಿ ಉಂಟಾಗುವ ಇಂತಹುದೇ ಪರಿಸ್ಥಿತಿಯನ್ನು ವಿವರಿಸಲು ಅಸ್ಥಿಮಾರ್ದವ ಎಂಬ ಪದವನ್ನು ಬಳಸಲಾಗುತ್ತದೆ, ಸಾಧಾರಣವಾಗಿ ಇದಕ್ಕೆ D ಜೀವಸತ್ವದ ಕೊರತೆ ಕಾರಣವಾಗಿರುತ್ತದೆ.[1] "ಕುಟಿಲವಾತ/ಮೆತುಮೂಳೆರೋಗ/ರಿಕೆಟ್ಸ್" ಪದದ ಮೂಲವು ಮಡಿಸುವುದು ಎಂಬರ್ಥ ಬರುವ ಬಹುಶಃ ಹಳೆಯ ಆಂಗ್ಲ ಪ್ರಭೇದದ 'ರಿಕನ್' ಆಗಿರಬಹುದು. ಗ್ರೀಕ್ ವ್ಯುತ್ಪನ್ನ ಪದ "ರಾಚೈಟಿಸ್ " ("ಬೆನ್ನೆಲುಬಿನ ಉರಿಯೂತ" ಎಂಬರ್ಥ ಬರುವ ಪಾಕ್ಸಿಟಿಕ್/ραχίτις) ಎಂಬ ಪದವನ್ನು ನಂತರ ಬಹುಪಾಲು ಪದದ ಉಚ್ಚಾರಣೆಯಲ್ಲಿನ ಸಾಮ್ಯತೆಯಿಂದಾಗಿ ವೈಜ್ಞಾನಿಕ ಪಾರಿಭಾಷಿಕ ಪದವಾಗಿ ಕುಟಿಲವಾತ/ಮೆತುಮೂಳೆರೋಗವನ್ನು ಸೂಚಿಸಲು ಬಳಸಲಾಯಿತು.
ಕುಟಿಲವಾತ/ಮೆತುಮೂಳೆರೋಗಕ್ಕೆ ತುತ್ತಾಗುವ ಸಾಧ್ಯತೆ ವಿಪರೀತ ಹೆಚ್ಚಿರುವವರೆಂದರೆ:
ಕೆಂಪು ಕೂದಲಿನ ವ್ಯಕ್ತಿಗಳು ಬಿಸಿಲಿನಲ್ಲಿ ಹೆಚ್ಚಿನ D ಜೀವಸತ್ವವನ್ನು ಉತ್ಪಾದಿಸಬಲ್ಲ ತಮ್ಮ ಸಾಮರ್ಥ್ಯದಿಂದಾಗಿ ಕುಟಿಲವಾತ/ಮೆತುಮೂಳೆರೋಗಕ್ಕೆ ತುತ್ತಾಗುವ ಅಪಾಯವನ್ನು ಕಡಿಮೆ ಹೊಂದಿರುತ್ತಾರೆಂದು ಊಹೆ ಮಾಡಲಾಗಿದೆ.
೬ ತಿಂಗಳುಗಳಿಂದ ೨೪ ತಿಂಗಳುಗಳ ವಯಸ್ಸಿನಲ್ಲಿ ಮೂಳೆಗಳು ತೀವ್ರವಾಗಿ ಬೆಳವಣಿಗೆ ಹೊಂದುವುದರಿಂದ ಆ ವಯಸ್ಸಿನ ಮಕ್ಕಳು ಹೆಚ್ಚಿನ ಅಪಾಯ ಹೊಂದಿರುತ್ತಾರೆ. ಇದರಿಂದಾಗಬಹುದಾದ ದೀರ್ಘಕಾಲೀನ ಪರಿಣಾಮಗಳಲ್ಲಿ ಉದ್ದ/ನೀಳ ಮೂಳೆಗಳ ಬಾಗುವಿಕೆ ಅಥವಾ ವಿರೂಪಗೊಳ್ಳುವಿಕೆ ಹಾಗೂ ಬಾಗಿದ ಬೆನ್ನು ಸೇರಿವೆ.
ಕರುಳು ಸರಿಯಾದ ಪ್ರಮಾಣದಲ್ಲಿ ಕ್ಯಾಲ್ಷಿಯಂ ಅನ್ನು ಹೀರಿಕೊಳ್ಳಲು D ಜೀವಸತ್ವವು ಅತ್ಯಗತ್ಯ. ಬಿಸಿಲು, ವಿಶೇಷವಾಗಿ ನೇರಳಾತೀತ ಬೆಳಕು ಮಾನವ ಚರ್ಮದ ಕೋಶಗಳಿಗೆ, D ಜೀವಸತ್ವವನ್ನು ನಿಷ್ಕ್ರಿಯ ಸ್ಥಿತಿಯಿಂದ ಸಕ್ರಿಯ ಸ್ಥಿತಿಗೆ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ. D ಜೀವಸತ್ವವಿಲ್ಲದಾಗ ಆಹಾರದಲ್ಲಿನ ಕ್ಯಾಲ್ಷಿಯಂಅನ್ನು ಸರಿಯಾದ ರೀತಿಯಲ್ಲಿ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ, ಇದರ ಪರಿಣಾಮವಾಗಿ ಕ್ಯಾಲ್ಷಿಯಂರಾಹಿತ್ಯತೆ ಉಂಟಾಗಿ, ಅಸ್ಥಿಪಂಜರ ಹಾಗೂ ಹಲ್ಲುಗಳ ವಿರೂಪಗೊಳ್ಳುವಿಕೆ ಹಾಗೂ ಉದಾ. ಅತಿಪ್ರತಿಕ್ರಿಯಾಶೀಲತೆಯಂತಹ ನರಸ್ನಾಯುಕ ರೋಗಲಕ್ಷಣಗಳು ಮೈದೋರುತ್ತವೆ. ಮಾರ್ಗರೀನ್/ಕೃತಕ ಬೆಣ್ಣೆ, ಸಾರವರ್ಧಿತ ಹಾಲು ಹಾಗೂ ರಸಗಳು, ಟುನಾ, ಹೆರ್ರಿಂಗ್ ಮತ್ತು ಸಾಲ್ಮನ್ ಮೀನುಗಳಂತಹ ತೈಲಭರಿತ ಮೀನುಗಳು, ಬೆಣ್ಣೆ, ಮೊಟ್ಟೆ, ಮೀನಿನ ಯಕೃತ್ತಿನ ತೈಲಗಳು D ಜೀವಸತ್ವವನ್ನು ಹೊಂದಿರುವ ಆಹಾರಗಳಾಗಿರುತ್ತವೆ. D ಜೀವಸತ್ವ ನಿರೋಧಕ ಕುಟಿಲವಾತ/ಮೆತುಮೂಳೆರೋಗ ಎಂಬ ಹೆಸರಿನ ರೋಗವು ಅಪರೂಪದ X-ಸಂಪರ್ಕಿತ ಪ್ರಧಾನ ರೂಪವಾಗಿದೆ.
ಕುಟಿಲವಾತ/ಮೆತುಮೂಳೆರೋಗದ ಚಿಹ್ನೆಗಳು ಹಾಗೂ ಲಕ್ಷಣಗಳೆಂದರೆ:
ತೀವ್ರಗೊಂಡ ಕುಟಿಲವಾತ/ಮೆತುಮೂಳೆರೋಗ ಪೀಡಿತನ ಕ್ಷ-ಕಿರಣ ಅಥವಾ ರೇಡಿಯೋಗ್ರಾಫ್ ಸಾಧಾರಣವಾಗಿ ಒಂದು ಸಿದ್ಧರೂಪವೆಂಬಂತೆ ಕಂಡುಬರುತ್ತದೆ: ಬಾಗಿದ ಕಾಲುಗಳು (ಕಾಲುಗಳ ಉದ್ದ ಮೂಳೆಯ ಹೊರಭಾಗದ ವಕ್ರತೆ) ಹಾಗೂ ವಿರೂಪಗೊಂಡ ಎದೆ. ತಲೆಬುರುಡೆಯಲ್ಲಾಗುವ ಬದಲಾವಣೆಗಳು ಎದ್ದುಕಾಣುವಂತಹ "ಚಚ್ಚೌಕ ತಲೆಯನ್ನು" ಹೊಂದಿರುವ ಭಾವ ಮೂಡಿಸುತ್ತದೆ. ಚಿಕಿತ್ಸೆ ನೀಡದೇ ಹೋದರೆ ಈ ವಿರೂಪಗಳು ವಯಸ್ಕರಾದಾಗಲೂ ಹಾಗೆಯೇ ಇರುತ್ತವೆ.
ಇವೆಲ್ಲವುಗಳ ಜೊತೆಗೆ ಮಕ್ಕಳ ಜೀರ್ಣಾಂಗ ವ್ಯವಸ್ಥೆ ಸುಸ್ಥಿತಿಯಲ್ಲಿರುವುದಿಲ್ಲ. ಕೆಮ್ಮು, ಬೆವರುವಿಕೆ ಮುಂತಾದ ಬಾಧೆಗಳೂ ಮಗುವಿಗೆ ತಟ್ಟುತ್ತವೆ.
ದೀರ್ಘಕಾಲೀನ ಪರಿಣಾಮಗಳೆಂದರೆ ಉದ್ದನೆಯ ಮೂಳೆಗಳ ಶಾಶ್ವತ ವಕ್ರತೆ ಅಥವಾ ವಿರೂಪತೆ ಹಾಗೂ ಬಾಗಿದ ಬೆನ್ನು.
ವೈದ್ಯರು ಕುಟಿಲವಾತ/ಮೆತುಮೂಳೆರೋಗವನ್ನು ಇವುಗಳಿಂದ ರೋಗನಿರ್ಣಯ ಮಾಡಬಲ್ಲರು:
ಕುಟಿಲವಾತ/ಮೆತುಮೂಳೆರೋಗದ ಚಿಕಿತ್ಸೆ ಹಾಗೂ ತಡೆಗಟ್ಟುವಿಕೆಯನ್ನು ಕುಟಿಲವಾತನಿರೋಧ ಎಂದು ಕರೆಯಲಾಗುತ್ತದೆ.
ಚಿಕಿತ್ಸೆಯಲ್ಲಿ ಆಹಾರ ಮೂಲಕವಾಗಿ ಕ್ಯಾಲ್ಷಿಯಂ, ಫಾಸ್ಫೇಟ್ಗಳು ಹಾಗೂ D ಜೀವಸತ್ವದ ಹೆಚ್ಚುವರಿ ಸೇವನೆ ಸೇರಿರುತ್ತದೆ. ನೇರಳಾತೀತ B ಬೆಳಕಿಗೆ (ಸೂರ್ಯನು ನೆತ್ತಿಯಲ್ಲಿದ್ದಾಗಿನ ಬಿಸಿಲು) ಒಡ್ಡಿಕೊಳ್ಳುವುದು, ಕಾಡ್ ಮೀನಿನ ಯಕೃತ್ತಿನ ತೈಲ, ಹಾಲಿಬಟ್ ಯಕೃತ್ತಿನ ತೈಲ, ಹಾಗೂ ವಯೋಸ್ಟೆರಾಲ್ ಜೀವಸತ್ವ ಇವೆಲ್ಲವೂ D ಜೀವಸತ್ವದ ಸ್ರೋತಗಳಾಗಿವೆ.
ಪ್ರತಿದಿನ ಅಗತ್ಯ ಪ್ರಮಾಣದ ಬಿಸಿಲಿನ ನೇರಳಾತೀತ B ಬೆಳಕು ಹಾಗೂ ಆಹಾರದಲ್ಲಿ ಕ್ಯಾಲ್ಷಿಯಂ ಮತ್ತು ರಂಜಕಗಳ ಸೂಕ್ತ ಪೂರಣವು ಕುಟಿಲವಾತ/ಮೆತುಮೂಳೆರೋಗವನ್ನು ತಡೆಗಟ್ಟಬಹುದು. ದಟ್ಟವರ್ಣದ ಚರ್ಮದ ಶಿಶುಗಳು ನೇರಳಾತೀತ ಕಿರಣಗಳಿಗೆ ಹೆಚ್ಚು ಒಡ್ಡಿಕೊಳ್ಳಬೇಕಾಗುತ್ತದೆ. ನೇರಳಾತೀತ ಬೆಳಕಿನ ಚಿಕಿತ್ಸೆ ಹಾಗೂ ಔಷಧಗಳ ಮೂಲಕ D ಜೀವಸತ್ವದ ಮರುಪೂರಣವು ಕುಟಿಲವಾತ/ಮೆತುಮೂಳೆರೋಗದ ಸಮಸ್ಯೆಯನ್ನು ಸರಿಪಡಿಸಬಹುದು ಎಂಬುದು ಸಾಬೀತಾಗಿದೆ.
ಶಿಶುಗಳು ಹಾಗೂ ಮಕ್ಕಳಿಗೆ ಪ್ರತಿದಿನ ೪೦೦ ಅಂತರರಾಷ್ಟ್ರೀಯ ಏಕಮಾನ/ಇಂಟರ್ನ್ಯಾಷನಲ್ ಯೂನಿಟ್ (IU)ಗಳಷ್ಟು D ಜೀವಸತ್ವ ಸೇವನೆಗೆ ಶಿಫಾರಸು ಮಾಡಲಾಗಿದೆ. D ಜೀವಸತ್ವವನ್ನು ಸೂಕ್ತ ಪ್ರಮಾಣದಲ್ಲಿ ಪಡೆಯದ ಮಕ್ಕಳು ಕುಟಿಲವಾತ/ಮೆತುಮೂಳೆರೋಗದಿಂದ ಪೀಡಿತರಾಗುವ ಹೆಚ್ಚಿನ ಸಾಧ್ಯತೆ ಹೊಂದಿರುತ್ತಾರೆ. D ಜೀವಸತ್ವವು ದೇಹವು ಮೂಳೆಗೆ ಅಗತ್ಯ ಪ್ರಮಾಣದ ಕ್ಯಾಲ್ಷಿಯಂ ಪೂರಣ ಮಾಡಲು ಹಾಗೂ ನಿರ್ವಹಣೆ ಮಾಡಲು ಅನುಕೂಲವಾಗುವಂತೆ ದೇಹವು ಕ್ಯಾಲ್ಷಿಯಂ ಸ್ವೀಕರಿಸಲು ಅತ್ಯಗತ್ಯವಾಗಿದೆ.
ಅಗತ್ಯ ಪ್ರಮಾಣದ D ಜೀವಸತ್ವ ಮಟ್ಟವನ್ನು ಆಹಾರದ ಮೂಲಕ ಪೂರಣ ಮಾಡಿ ಹಾಗೂ ಅಥವಾ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ಕಾಪಾಡಿಕೊಳ್ಳಬಹುದು. D ಜೀವಸತ್ವ 3 (ಕೊಲೆಕ್ಯಾಲ್ಷಿಫೆರೊಲ್) ದ ಬಳಕೆ ಹೆಚ್ಚು ಅಪೇಕ್ಷಣೀಯ ಏಕೆಂದರೆ ಇದು D ಜೀವಸತ್ವ 2 ಕ್ಕಿಂತ ವೇಗವಾಗಿ ಹೀರಿಕೊಳ್ಳಲ್ಪಡುತ್ತದೆ. ಬಹಳಷ್ಟು ಚರ್ಮಶಾಸ್ತ್ರಜ್ಞರು D ಜೀವಸತ್ವ ಪೂರಣವನ್ನು ಸೂರ್ಯನಿಗೆ ಒಡ್ಡಿಕೊಳ್ಳುವುದರಿಂದ ಚರ್ಮದ ಅರ್ಬುದಕ್ಕೆ ಕಾರಣವಾಗುವ ಅಪಾಯ ಇರುವುದರಿಂದ ಅಸುರಕ್ಷಿತ ನೇರಳಾತೀತ ಒಡ್ಡಿಕೊಳ್ಳುವಿಕೆಗಿಂತ ಉತ್ತಮ ಬದಲೀ ವಿಧಾನವೆಂದು ಶಿಫಾರಸು ಮಾಡುತ್ತಾರೆ. ಜುಲೈ ತಿಂಗಳಿನ ಬಿಸಿಲಿರುವ ಒಂದು ಮಧ್ಯಾಹ್ನ ನ್ಯೂಯಾರ್ಕ್ ಮಹಾನಗರದಲ್ಲಿರುವ ಟೀಷರ್ಟ್ ಹಾಗೂ ಷಾರ್ಟ್ ಧರಿಸಿರುವ ಓರ್ವ ಶ್ವೇತವರ್ಣೀಯ ಪುರುಷ ೨೦ ನಿಮಿಷಗಳ ಸೂರ್ಯರಕ್ಷಕಪರದೆ ರಹಿತ ಒಡ್ಡಿಕೊಳ್ಳುವಿಕೆಯ ಮೂಲಕ D ಜೀವಸತ್ವದ ೨೦೦೦೦ IUಗಳನ್ನು ಉತ್ಪಾದಿಸುತ್ತಾನೆ ಎಂಬುದು ಗಮನಾರ್ಹ.
ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (AAP) ಸಂಸ್ಥೆಯ ಪ್ರಕಾರ ಎದೆಹಾಲು ಕುಡಿದ ಶಿಶುಗಳು ಅಗತ್ಯವಿದ್ದಷ್ಟು ಪ್ರಮಾಣದ D ಜೀವಸತ್ವವನ್ನು ಕೇವಲ ಎದೆಹಾಲಿನಿಂದಲೇ ಪಡೆಯಲಾರರು. ಈ ಕಾರಣದಿಂದಾಗಿ, AAP ವಿಶೇಷತಃ ಎದೆಹಾಲು ಕುಡಿಯುವ ಶಿಶುಗಳು ೨ ತಿಂಗಳುಗಳ ವಯಸ್ಸಿನಿಂದ ಕನಿಷ್ಟ ೧೭ ಔನ್ಸ್ಗಳಷ್ಟು D ಜೀವಸತ್ವ-ಸಾರವರ್ಧಿತ ಹಾಲು ಅಥವಾ ದ್ರಾವಣವನ್ನು ಸೇವಿಸಲು ಸಾಧ್ಯವಾಗುವವರೆಗೆ ಪ್ರತಿದಿನ D ಜೀವಸತ್ವದ ಪೂರಕಾಂಶಗಳನ್ನು ಪಡೆಯಬೇಕು ಎಂದು ಶಿಫಾರಸು ಮಾಡುತ್ತದೆ.[2] ಪೂರಕ D ಜೀವಸತ್ವದ ಅಗತ್ಯ ಮಾನವ ಎದೆಹಾಲಿನ ವಿಕಾಸದಿಂದುಂಟಾದ ನ್ಯೂನತೆಯಲ್ಲ, ಬದಲಿಗೆ ಆಧುನಿಕ ಶಿಶುವಿನ ಬಿಸಿಲಿಗೆ ಒಡ್ಡಿಕೊಳ್ಳುವಿಕೆಯು ಕಡಿಮೆಯಾಗಿರುವುದರಿಂದ ಉಂಟಾದ ಸಮಸ್ಯೆಯಾಗಿದೆ (ಅಂದರೆ, ಅಗತ್ಯ ಪ್ರಮಾಣದಷ್ಟು ಬಿಸಿಲಿಗೆ ಒಡ್ಡಿಕೊಳ್ಳಲ್ಪಟ್ಟ ಎದೆಹಾಲು ಕುಡಿವ ಶಿಶುಗಳು ಕುಟಿಲವಾತ/ಮೆತುಮೂಳೆರೋಗಕ್ಕೆ ತುತ್ತಾಗುವ ಸಾಧ್ಯತೆಗಳು ಕಡಿಮೆ ಇರುತ್ತದೆ, ಆದಾಗ್ಯೂ ಚಳಿಗಾಲದಲ್ಲಿ ಪೂರಣವು ಭೌಗೋಳೀಯ ಅಕ್ಷಾಂಶಗಳ ಮೇಲೆ ಆಧಾರಿತವಾಗಿ ಬೇಕಾಗಬಹುದು).
ನಿಯಮಿತವಾಗಿ ವ್ಯಾಯಾಮ ಮಾಡಬೇಕು. ನೋವು ಮತ್ತು ಊತ ನಿವಾರಿಸಲು ಶೈತ್ಯ ಚಿಕಿತ್ಸೆ ಮತ್ತು ಬರ್ಫ ಚಿಕಿತ್ಸೆ ನೆರವಾಗುತ್ತವೆ. ಇವುಗಳಿಂದ ಸಂಧಿನೋವು ಮತ್ತು ಒತ್ತಡ ಕಡಿಮೆಯಾಗುತ್ತವೆ. ಸೈಕಲ್ ಅರ್ಗೋಮೀಟರ್ ತುಳಿಯುವುದರಿಂದ ರೋಗಿಯ ತೂಕ ಕಡಿಮೆಯಾಗಿ ಆತನ ತ್ರಾಣ ಅಧಿಕವಾಗುತ್ತದೆ.
ಕುಟಿಲವಾತ/ಮೆತುಮೂಳೆರೋಗ vs. ದುರ್ಬಳಕೆ : ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಾಂಕ್ರಾಮಿಕ ಜಾಡ್ಯ ಲೇಖನದಲ್ಲಿ ವಿವರಿಸಿದ ಹಾಗೆ ಕುಟಿಲವಾತ/ಮೆತುಮೂಳೆರೋಗದ ಲಕ್ಷಣಗಳು (ಜನ್ಮಜಾತವಾಗಿ ಬರುವಂತಹವೂ ಸೇರಿದಂತೆ) ಶಿಶು ಲೈಂಗಿಕ ದುರ್ಬಳಕೆಯಂತೆ ಕಾಣಬಹುದಾಗಿದೆ ಎಂಬುದು ರುಜುವಾತಾಗಿದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.