From Wikipedia, the free encyclopedia
ವಾಂತಿ - Vomiting (ವಮನ) ಎಂದರೆ ಬಾಯಿ ಮತ್ತು ಕೆಲವೊಮ್ಮೆ ಮೂಗಿನ ಮೂಲಕ ಹೊಟ್ಟೆಯ ಒಳವಸ್ತುಗಳ ಅನೈಚ್ಛಿಕ, ಬಲಯುತ ಹೊರಹಾಕುವಿಕೆ.[1]
ವಾಂತಿಯು ವಿವಿಧ ರೀತಿಯ ಪರಿಸ್ಥಿತಿಗಳಿಂದ ಉಂಟಾಗಬಹುದು; ಇದು ಜಠರದುರಿತ ಅಥವಾ ವಿಷ ಸೇವನೆಯಂತಹ ಅಸ್ವಸ್ಥತೆಗಳಿಗೆ ನಿರ್ದಿಷ್ಟ ಪ್ರತಿಕ್ರಿಯೆಯಾಗಿ ವ್ಯಕ್ತವಾಗಬಹುದು, ಅಥವಾ ಮೆದುಳಿನ ಗೆಡ್ಡೆಗಳು ಮತ್ತು ಏರಿದ ಅಂತರ್ಕಪಾಲ ಒತ್ತಡದಿಂದ ಅಯಾನೀಕರಿಸುವ ವಿಕಿರಣಕ್ಕೆ ಅತಿಒಡ್ಡಿಕೆವರೆಗೆ ವ್ಯಾಪಿಸುವ ನಿರ್ದಿಷ್ಟವಲ್ಲದ ಅಸ್ವಸ್ಥತೆಗಳ ಅನುಗತ ರೋಗಲಕ್ಷಣವಾಗಿ ವ್ಯಕ್ತವಾಗಬಹುದು.[2] ಇನ್ನೇನು ವಾಂತಿಯಾಗಿಬಿಡುವುದು ಎಂಬ ಅನಿಸಿಕೆಯನ್ನು ವಾಕರಿಕೆ ಎಂದು ಕರೆಯಲಾಗುತ್ತದೆ. ಇದು ಹಲವುವೇಳೆ ವಾಂತಿಗೆ ಮುಂಚೆಗೆ ಆಗುತ್ತದೆ ಆದರೆ ಇದರಿಂದ ವಾಂತಿ ಆಗಬೇಕೆಂದೇನಿಲ್ಲ. ಓಕರಿಕೆ ಮತ್ತು ವಾಂತಿಯನ್ನು ತಡೆಹಿಡಿಯಲು ಕೆಲವೊಮ್ಮೆ ವಾಂತಿ ನಿರೋಧಕ ಔಷಧಿಗಳು ಅಗತ್ಯವಾಗುತ್ತವೆ. ನಿರ್ಜಲೀಕರಣವು ಕಾಣಿಸಿಕೊಳ್ಳುವ ತೀವ್ರ ಪ್ರಕರಣಗಳಲ್ಲಿ, ಅಂತರಭಿಧಮನಿ ದ್ರವ ಅಗತ್ಯವಾಗಬಹುದು. ಸ್ವ-ಪ್ರಚೋದಿತ ವಾಂತಿಯು ಕ್ಷುದ್ರೋಗದಂತಹ ತಿನ್ನುವ ಅಸ್ವಸ್ಥತೆಯ ಘಟಕವಾಗಿರಬಹುದು. ಕ್ಷುದ್ರೋಗವು ಈಗ ಸ್ವತಃ ಒಂದು ತಿನ್ನುವ ಅಸ್ವಸ್ಥತೆಯಾಗಿದೆ (ಶುದ್ಧೀಕರಣ ಅಸ್ವಸ್ಥತೆ).
ವಾಂತಿಯು ಕಾರುವಿಕೆಯಿಂದ ಭಿನ್ನವಾಗಿದೆ. ಆದರೆ ಇವೆರಡೂ ಪದಗಳನ್ನು ಹಲವುವೇಳೆ ಒಂದರ ಬದಲು ಮತ್ತೊಂದನ್ನು ಬಳಸಲಾಗುತ್ತದೆ. ಕಾರುವಿಕೆ ಎಂದರೆ ವಾಂತಿಯೊಂದಿಗೆ ಸಂಬಂಧಿಸಲಾದ ಬಲ ಹಾಗೂ ಅಸಮಾಧಾನ ಇಲ್ಲದೆಯೇ ಜೀರ್ಣವಾಗದ ಆಹಾರವು ಅನ್ನನಾಳದಿಂದ ಹಿಂದಕ್ಕೆ ಬಾಯಿಗೆ ವಾಪಸಾಗುವುದು. ಸಾಮಾನ್ಯವಾಗಿ ಕಾರುವಿಕೆ ಮತ್ತು ವಾಂತಿಯ ಕಾರಣಗಳು ಭಿನ್ನವಾಗಿರುತ್ತವೆ.
ಹೊಟ್ಟೆಯ ಒಳವಸ್ತುವು ಶ್ವಸನ ವ್ಯೂಹವನ್ನು ಪ್ರವೇಶಿಸಿದರೆ ವಾಂತಿಯು ಅಪಾಯಕಾರಿಯಾಗಬಹುದು. ಸಾಧಾರಣ ಸಂದರ್ಭಗಳಲ್ಲಿ ಗ್ರಸನಕೂಪ ಪ್ರತಿಕ್ರಿಯೆ ಮತ್ತು ಕೆಮ್ಮು ಇದು ಉಂಟಾಗದಂತೆ ತಡೆಯುತ್ತದೆ; ಆದರೆ, ಮದ್ಯ ಅಥವಾ ಅರಿವಳಿಕೆಯಂತಹ ಕೆಲವು ಪದಾರ್ಥಗಳ ಪ್ರಭಾವಗಳಲ್ಲಿರುವ ವ್ಯಕ್ತಿಗಳಲ್ಲಿ ಈ ರಕ್ಷಣಾತ್ಮಕ ಪ್ರತಿಕ್ರಿಯೆಗಳು ದುರ್ಬಲವಾಗಿರುತ್ತವೆ. ಆ ವ್ಯಕ್ತಿಗೆ ಉಸಿರುಗಟ್ಟಬಹುದು ಅಥವಾ ಉಸಿರಾಟ ಸಂಬಂಧಿ ನ್ಯುಮೋನಿಯಾವನ್ನು ಅನುಭವಿಸಬಹುದು.[3][4] ದೀರ್ಘಕಾಲದ ಮತ್ತು ವಿಪರೀತ ವಾಂತಿಯು ದೇಹದಲ್ಲಿಂದ ನೀರನ್ನು ಬರಿದು ಮಾಡುತ್ತದೆ (ನಿರ್ಜಲೀಕರಣ) ಮತ್ತು ವಿದ್ಯುದ್ವಿಚ್ಛೇದ್ಯ ಸ್ಥಿತಿಯನ್ನು ಮಾರ್ಪಡಿಸಬಹುದು. ಜಠರಜನ್ಯ ವಾಂತಿಯಿಂದ ನೇರವಾಗಿ ಆಮ್ಲ ಮತ್ತು ಕ್ಲೋರೈಡ್ನ ನಷ್ಟ ಉಂಟಾಗುತ್ತದೆ.
ವಮನಕಾರಿ ಎಂದರೆ ವಾಂತಿಯನ್ನು ಪ್ರೇರಿಸುವ ಬಾಹ್ಯಕಾರಕ (ಎಮೆಟಿಕ್). ವಮನ ಎಂದರೆ ವಾಂತಿ.
ವಮನಕಾರಿಗಳಲ್ಲಿ ಎರಡು ಬಗೆಗಳಿವೆ:
ಮೊದಲನೆಯ ಬಗೆಗೆ ನಿದರ್ಶನಗಳು:
ಈ ವಮನಕಾರಿ ಪದಾರ್ಥಗಳಿಗೆ ಜಠರದ ಲೋಳೆಪೊರೆಯಿಂದ ನೀರು ಹೀರುವ ಗುಣವಿದೆ. ಹೀಗೆ ಹೀರಲ್ಪಟ್ಟಾಗ ವಾಂತಿ ಪ್ರೇರಿಸಲ್ಪಡುತ್ತದೆ.
ಬೇರೆ ಕೆಲವು ವಮನಕಾರಿಗಳು ತಮ್ಮವೇ ಆದ ರಸಗಳಿಂದ ಜಠರವನ್ನು ಕೆರಳಿಸಿ ವಾಂತಿಯಾಗುವಂತೆ ಮಾಡುವುವು. ಇನ್ನು ಕೆಲವು ವಮನಕಾರಿಗಳು ಕಡಿಮೆ ಪ್ರಮಾಣದಲ್ಲಿ ತಮ್ಮ ಕಾರ್ಯ ನಡೆಸಿ ಶ್ವಾಸಕೋಶಗಳ ಮೇಲೆ ಪ್ರಭಾವ ಬೀರಿ ಅಲ್ಲಿ ಶೇಖರಗೊಂಡ ಕಫವನ್ನು ಸಡಿಲುಗಳಿಸಿ ವಾಂತಿಯಾಗುವಂತೆ ಮಾಡಿ ಅದನ್ನು ಉಚ್ಚಾಟಿಸುವುವು. ವಿಶೇಷವಾಗಿ ಈ ಸಮಸ್ಯೆ ಚಿಕ್ಕಮಕ್ಕಳನ್ನು ಬಾಧಿಸುತ್ತದೆ. ಮಕ್ಕಳಿಗೆ ಕೆಮ್ಮುವುದು ಸಾಧ್ಯವಾಗದಿದ್ದಾಗ ಕೆಮ್ಮಿದಂತೆ ಮಾಡಿ ಬಂದ ಕಫವನ್ನು ನುಂಗಿ ಬಿಡುತ್ತವೆ. ನುಂಗಿದ ಈ ಕಫ ಜಠರದಲ್ಲಿ ಶೇಖರಗೊಂಡಿರುತ್ತದೆ. ಇಂಥ ಕಫ ಹೊರತರಲು ವಮನಕಾರಿ ಪದಾರ್ಥಗಳನ್ನು ಬಳಸಲಾಗುತ್ತದೆ.
ಎರಡನೆಯ ಬಗೆಯ ವಮನಕಾರಿಗಳು:
ವ್ಯಕ್ತಿ ನುಂಗಿದ ವಿಷ ಇನ್ನೂ ಜಠರದಲ್ಲಿದೆ ಎಂದು ಅನಿಸಿದರೆ ಎರಡನೆಯ ಬಗೆಯ ವಮನಕಾರಿಗಳನ್ನು ಬಳಸಲಾಗುವುದು. ಕೆಲವು ವಿಷಗಳಿಗೆ ನುಂಗಿದೊಡನೆ ತಮ್ಮ ಸಂಪರ್ಕಕ್ಕೆ ಬರುವ ಎಲ್ಲ ಅಂಗಾಂಶಗಳನ್ನೂ ಪಚನಗೊಳಿಸುವ ಶಕ್ತಿ ಇರುವುದು. ಇಂಥ ಪ್ರಸಂಗದಲ್ಲಿ ವಮನಕಾರಿಗಳನ್ನು ಬಳಸಕೂಡದು. ಸೇವಿಸಿದ ಪದಾರ್ಥಗಳು ಗಂಟಲಲ್ಲಿ ಅಥವಾ ಅನ್ನನಾಳದಲ್ಲಿ ಸಿಲುಕಿದ್ದಾಗ ಅವನ್ನು ಹೊರತೆಗೆಯಲು ವಮನಕಾರಿಗಳನ್ನು ಉಪಯೋಗಿಸಲಾಗುವುದು.
ವಮನಕಾರಿಗಳನ್ನು ಬಳಸದಿರುವ ಪ್ರಸಂಗಗಳು
ತೀವ್ರ ಹೃದಯರೋಗಿಗಳು, ಹೆಚ್ಚಿದ ರಕ್ತದೊತ್ತಡ ಇರುವವರು, ರಕ್ತ ಕಾರುತ್ತಿರುವ ಕ್ಷಯರೋಗಿಗಳು, ಗರ್ಭಿಣಿಯರು ಮೊದಲಾದ ಕೂರುರೋಗಿಗಳಿಗೆ ವಮನಕಾರಿಗಳನ್ನು ಕೊಡಬಾರದು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.