ಪೌರತ್ವ (ತಿದ್ದುಪಡಿ) ಮಸೂದೆ, ೨೦೧೯
From Wikipedia, the free encyclopedia
ಪೌರತ್ವ (ತಿದ್ದುಪಡಿ) ಮಸೂದೆ, ೨೦೧೯, ೧೯೫೫ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡುವ ಮಸೂದೆಯಾಗಿದ್ದು, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತರಿಗೆ ಪೌರತ್ವ ನೀಡುವ ಉದ್ದೇಶವನ್ನು ಹೊಂದಿದೆ. ಆ ಆರು ಧರ್ಮದವರು ಭಾರತಕ್ಕೆ ೩೧ ಡಿಸೆಂಬರ್ ೨೦೧೪ ಅಥವಾ ಅದಕ್ಕಿಂತಲೂ ಮೊದಲು ಪ್ರವೇಶಿಸಿದವರಾಗಿದ್ದಲ್ಲಿ, ಅವರೆಲ್ಲರೂ ಭಾರತೀಯ ಪೌರತ್ವಕ್ಕೆ ಅರ್ಹರು.[3][4]
Quick Facts ಪೌರತ್ವ (ತಿದ್ದುಪಡಿ) ಮಸೂದೆ, ೨೦೧೯, ಭಾರತದ ಸಂಸತ್ತು ...
ಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ | |
---|---|
ಭಾರತದ ಸಂಸತ್ತು | |
ಪೌರತ್ವ ಮಸೂದೆ, ೧೯೫೫ರ ತಿದ್ದುಪಡಿ ಕಾಯಿದೆ. | |
ಉಲ್ಲೇಖ | Act No. 47 of 2019 |
ಭೌಗೋಳಿಕ ವ್ಯಾಪ್ತಿ | ಭಾರತ |
ಮಂಡನೆ | ಲೋಕಸಭೆ |
ಅಂಗೀಕೃತವಾದ ದಿನ | 10 ಡಿಸೆಂಬರ್ 2019 (2019-12-10) |
ಮಂಡನೆ | ರಾಜ್ಯ ಸಭೆ |
ಅಂಗೀಕೃತವಾದ ದಿನ | 11 ಡಿಸೆಂಬರ್ 2019 (2019-12-11) |
ಒಪ್ಪಿತವಾದ ದಿನ | 12 ಡಿಸೆಂಬರ್ 2019 (2019-12-12) |
ಸಹಿ ಹಾಕಿದ್ದು | 12 ಡಿಸೆಂಬರ್ 2019 (2019-12-12) |
ಸಹಿ ಮಾಡಿದವರು | ರಾಮನಾಥ ಕೋವಿಂದ್, (ಭಾರತದ ರಾಷ್ಟ್ರಪತಿ) |
ಶಾಸನ ಜಾರಿ | 10 ಜನವರಿ 2020; 1615 ದಿನ ಗಳ ಹಿಂದೆ (2020-೦೧-10)[1][2] |
ಮಸೂದೆಯ ಇತಿಹಾಸ | |
ಮೂಲ ಉಲ್ಲೇಖ | ಮೂಲ |
ಶಾಸನದ ಉಲ್ಲೇಖ | Bill No. 370 of 2019 |
ಶಾಸನ ಪ್ರಕಟವಾದ ದಿನಾಂಕ | 9 ಡಿಸೆಂಬರ್ 2019; 1647 ದಿನ ಗಳ ಹಿಂದೆ (2019-೧೨-09) |
ಮಂಡನೆ | ಅಮಿತ್ ಶಾ, ಗೃಹ ಸಚಿವ, ಭಾರತ ಸರ್ಕಾರ |
ಮೊದಲ ಮಂಡನೆ | 9 ಡಿಸೆಂಬರ್ 2019 (2019-12-09) |
ಎರಡನೆಯ ಮಂಡನೆ | 10 ಡಿಸೆಂಬರ್ 2019 (2019-12-10) |
ಮೂರನೆಯ ಮಂಡನೆ | 11 ಡಿಸೆಂಬರ್ 2019 (2019-12-11) |
ಸಾರಾಂಶ | |
೨೦೧೪ರ ಡಿಸೆಂಬರ್ ೩೧ ರಂದು ಅಥವಾ ಅದಕ್ಕೂ ಮೊದಲು ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂ, ಸಿಖ್ಖ, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ ಧರ್ಮದ ವಲಸಿಗರನ್ನು ಭಾರತೀಯ ಪೌರತ್ವಕ್ಕೆ ಅರ್ಹರನ್ನಾಗಿ ಮಾಡುತ್ತದೆ. | |
ಸ್ಥಿತಿ: ಜಾರಿಗೆ ಬಂದಿದೆ |
Close
ಕೇಂದ್ರ ಸಚಿವ ಸಂಪುಟವು ೪ ಡಿಸೆಂಬರ್ ೨೦೧೯ ರಂದು ಮಸೂದೆಯನ್ನು ಮುಂದಿಟ್ಟಿತು. ಇದನ್ನು ಡಿಸೆಂಬರ್ ೧೦ ರಂದು ಲೋಕಸಭೆಯು ಅಂಗೀಕರಿಸಿತು ಹಾಗೂ ಡಿಸೆಂಬರ್ ೧೧ ರಂದು ರಾಜ್ಯಸಭೆಯು ಇದನ್ನು ಅಂಗೀಕಾರ ಮಾಡಿತು.[5]