ಬ್ರಾಹ್ಮಣ ಜಾತಿಯ ಒಳ ಸಮುದಾಯ From Wikipedia, the free encyclopedia
ಅಯ್ಯರ್ ([aiʝar] (ತಮಿಳು:ஐயர், ಕನ್ನಡ:ಅಯ್ಯರ್, ಮಲಯಾಳಂ:അയ്യർ ಎಂದು ಉಚ್ಚರಿಸಲಾಗಿದೆ) (Ayyar , Aiyar , Ayer ಅಥವಾ Aiyer ಎಂದೂ ಉಚ್ಚರಿಸಲಾಗುತ್ತದೆ) ಎಂಬುದು ತಮಿಳು ಮೂಲದ ಹಿಂದೂ ಬ್ರಾಹ್ಮಣ ಸಮುದಾಯದ ಜಾತಿಯ ಉಪನಾಮವಾಗಿದೆ. ಬಹಳಷ್ಟು ಅಯ್ಯರ್ಗಳು ಆದಿ ಶಂಕರಾಚಾರ್ಯರು ಪ್ರತಿಪಾದಿಸಿದ ಅದ್ವೈತ ತತ್ತ್ವದ ಅನುಯಾಯಿಗಳು.[1][2][3][4][5][6] ಬಹಳಷ್ಟು ಅಯ್ಯರ್ ಸಮುದಾಯದವರು ತಮಿಳುನಾಡಿನಲ್ಲಿ ವಾಸಿಸುತ್ತಾರೆ. ಮಧ್ಯಯುಗೀಯ ಕಾಲದಲ್ಲಿ, 'ಅಯ್ಯರ್' ಎಂಬ ಉಪನಾಮವನ್ನು ಎಲ್ಲಾ ತಮಿಳು ಸ್ಮಾರ್ತ ಬ್ರಾಹ್ಮಣರಿಗೂ ನೀಡಲಾಗಿತ್ತು. ಈ ಕಾಲದಲ್ಲಿ ಇವರೆಲ್ಲರೂ ಒಂದೇ ಸಮುದಾಯದಲ್ಲಿ ಸಂಘಟಿತರಾಗಿದ್ದರು. ಆದರೂ, ೧೧ನೆಯ ಶತಮಾನದಲ್ಲಿ, ಇವರಲ್ಲಿ ಒಂದು ಗುಂಪು ಪ್ರತ್ಯೇಕಗೊಂಡು, ಅಯ್ಯಂಗಾರ್ ಎಂಬ ಹೊಸ ಸಮುದಾಯ ರಚನೆ ಮಾಡಿದರು. ಅಯ್ಯಂಗಾರ್ ಸಮುದಾಯವು ಶ್ರೀ ವೈಷ್ಣವ ಆರಾಧಕರು.[7][8][9] ವ್ಯಾಪಕವಾಗಿ ಅನುಸರಿಸಲಾದ ಸಂಪ್ರದಾಯದಲ್ಲಿ, ಅಯ್ಯರ್ ಸಮುದಾಯದವರು ಉತ್ತರ ಭಾರತದಿಂದ ವಲಸೆ ಬಂದ ಇಂಡೊ-ಆರ್ಯನ್ ವಂಶಸ್ಥರು ಎನ್ನಲಾಗಿದೆ. ಸಾಂಸ್ಕೃತಿಕ ಮತ್ತು ಪ್ರಾದೇಶಿಕ ಭಿನ್ನತೆಗಳ ಆಧಾರದ ಮೇಲೆ, ಈ ಸಮುದಾಯವನ್ನು ವಿವಿಧ ಉಪ-ಪಂಗಡಗಳನ್ನಾಗಿ ವಿಂಗಡಿಸಲಾಗಿದೆ. ಎಲ್ಲಾ ಬ್ರಾಹ್ಮಣರಂತೆಯೇ, ಈ ಸಮುದಾಯವನ್ನು ಕೂಡ ಅವರ ಗೋತ್ರ ಅಥವಾ ಪಿತೃವಂಶಕ್ರಮ ಮತ್ತು ಅವರು ಅನುಸರಿಸುವ ವೇದದ ಆಧಾರದ ಮೇಲೆ ವಿಂಗಡಿಸಲಾಗಿದೆ. ಭಾರತದ ಬ್ರಾಹ್ಮಣ ಸಮುದಾಯಗಳಲ್ಲಿ ಅಯ್ಯರ್ ಸಮುದಾಯವು ಪಂಚ ದ್ರಾವಿಡ ಬ್ರಾಹ್ಮಣ ಉಪವಿಂಗಡಣೆಯಲ್ಲಿ ಬರುತ್ತಾರೆ ಹಾಗು ಈ ಸಮುದಾಯವು ಇತರೆ ಬ್ರಾಹ್ಮಣರ ಸಮುದಾಯಗಳು ಆಚರಿಸುವ ಸಂಪ್ರದಾಯಗಳನ್ನು ಮತ್ತು ಪದ್ಧತಿಗಳನ್ನು ಸಹ ಹಂಚಿಕೊಳ್ಳುತ್ತವೆ.[10] ಇತ್ತೀಚಿನ ಕಾಲದಲ್ಲಿ, ಭಾರತದ ರಾಜ್ಯವಾದ ತಮಿಳುನಾಡುನಲ್ಲಿ ನಡೆದ ಮೀಸಲಾತಿ ನೀತಿಗಳು[11] ಹಾಗೂ ಸ್ವಾಭಿಮಾನಿ ಆಂದೋಲನಗಳು ಅಯ್ಯರ್ ಸಮುದಾಯಕ್ಕೆ ಸಮಸ್ಯೆ ತಂದೊಡ್ಡಿದವು. ಇದರಿಂದಾಗಿ ಈ ಸಮುದಾಯದವರು ಭಾರತದ ಇತರೆ ಭಾಗಗಳು ಹಾಗೂ ಇಂಗ್ಲಿಷ್-ಭಾಷಿಕ ವಿದೇಶಗಳತ್ತ ವಲಸೆ ಹೋಗಲಾರಂಭಿಸಿದರು. ಅಯ್ಯರ್ ಎಂಬ ಉಪನಾಮದ ಬಳಕೆಯ ಸಾಮಾನ್ಯ ಪದ್ಧತಿಯಂತೆಯೇ, ಇವರು ಶಾಸ್ತ್ರಿ [12] ಅಥವಾ ಭಟ್ಟರ್ [13][14] ಅಥವಾ ಶರ್ಮಾ ಎಂಬ ಉಪನಾಮ ಬಳಸುವುದುಂಟು.
This article contains Indic text. Without proper rendering support, you may see question marks or boxes, misplaced vowels or missing conjuncts instead of Indic text. |
ಚಿತ್ರ:CVRaman.jpg R. Venkataraman · Subramanya Bharathi · Ramana Maharishi Indra Nooyi · Sir C. P. Ramaswami Iyer Sir Chandrasekhara V. Raman · Vishwanathan Anand | |
ಜನಸಂಖ್ಯಾ ಬಾಹುಳ್ಯದ ಪ್ರದೇಶಗಳು | |
---|---|
Indian states of ತಮಿಳುನಾಡು, Kerala and ಆಂಧ್ರ ಪ್ರದೇಶ | |
ಭಾಷೆಗಳು | |
Brahmin Tamil, Sankethi | |
ಧರ್ಮ | |
Hinduism | |
ಸಂಬಂಧಿತ ಜನಾಂಗೀಯ ಗುಂಪುಗಳು | |
Pancha-Dravida Brahmins, Tamil people, Iyengar, Madhwa, Tamil Brahmin |
ಅಯ್ಯರ್ ಎಂಬ ಪದವನ್ನು ಅಯ್ಯ ಎಂಬ ಉಪನಾಮದಿಂದ ಪಡೆಯಲಾಗಿದೆ. ತಮಿಳರಲ್ಲಿ ಮರ್ಯಾದಸ್ಥರನ್ನು ಸೂಚಿಸಲು ಅಯ್ಯ ಎಂದು ಉಲ್ಲೇಖಿಸುತ್ತಿದ್ದರು. ಅಯ್ಯ ಎಂಬ ಪದಕ್ಕೆ ಇನ್ನೂ ಹಲವು ವ್ಯುತ್ಪತ್ತಿಗಳಿವೆ. ಸಾಮಾನ್ಯವಾಗಿ ಇದು ಅಣ್ಣನನ್ನು ಸಂಕೇತಿಸುವ ಪೂರ್ವ-ದ್ರಾವಿಡ ಉಕ್ತಿಯಾಗಿದೆ. ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಇದೇ ಅರ್ಥದಲ್ಲಿ ಬಳಸಲಾಗಿದೆ.[15] ಆದರೂ ಇನ್ನೂ ಕೆಲವರು ಅಯ್ಯ ಎಂಬ ಪದವನ್ನು, ಆರ್ಯ ಎಂಬ ಸಂಸ್ಕೃತ ಪದದ ಪ್ರಾಕೃತ ಆವೃತ್ತಿ ಎನ್ನುವ ವ್ಯುತ್ಪತ್ತಿ ನೀಡುತ್ತಾರೆ. ಇದರ ಅರ್ಥ, 'ಕುಲೀನ'.[16][17] 'ಅಯ್ಯರ್' ಎಂಬುದು ತಮಿಳು ಯಾದವ ಉಪ-ಜಾತಿಯ ಹೆಸರೂ ಹೌದು.[18] ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಕ್ರಿಶ್ಚಿಯನ್ ಪಾದ್ರಿಗಳಿಗೆ ಕೆಲವೊಮ್ಮೆ ಅಯ್ಯರ್ ಎಂಬ ಗೌರವಸೂಚಕ ಉಪನಾಮ ನೀಡಲಾಗಿತ್ತು.[19] ಪುರಾತನ ಕಾಲದಲ್ಲಿ, ಇವರನ್ನು ಅಂಥನರ್ [20][21] ಅಥವಾ ಪಾರ್ಪ್ಪಾನ್ [22][23][24] ಎನ್ನಲಾಗುತ್ತಿತ್ತು. ಆದರೂ ಪಾರ್ಪ್ಪಾನ್ ಎಂಬ ಪದದ ಬಳಕೆ ಇಂದಿನ ಕಾಲದಲ್ಲಿ ಅವಹೇಳನಕಾರಿ ಎಂದು ಪರಿಗಣಿಸಲಾಗಿದೆ.[25] ಇತ್ತೀಚಿನ ಕಾಲದ ವರೆಗೂ, ಕೇರಳದ ಅಯ್ಯರ್ಗಳನ್ನು ಪಟ್ಟರ್ ಗಳು ಎಂದು ಉಲ್ಲೇಖಿಸಲಾಗುತ್ತಿತ್ತು.[26] ಪಾರ್ಪ್ಪಾನ್ ಉಕ್ತಿಯಂತೆಯೇ, ಪಟ್ಟರ್ ಸಹ ಇಂದು ಅವಹೇಳನಕಾರಿ ಎಂದು ಪರಿಗಣಿತವಾಗಿದೆ.[27] ಹಿಂದೆ, ಮಧುರೈ ನಗರದ ನಾಯಕ್ ದೊರೆಗಳು ಸಹ ಅಯ್ಯರ್ ಉಪನಾಮ ಹೊಂದಿದ್ದರು ಹಾಗೂ ಬ್ರಾಹ್ಮಣರು ಪಿಳ್ಳೈ ಅಥವಾ ಮುಡಳಿ ಎಂಬ ಉಪನಾಮ ಹೊಂದಿದ್ದು ದಾಖಲೆಯಾಗಿದೆ.[28]
ಕೆಲವು ಅಯ್ಯರ್ ಸಮುದಾಯಗಳು ತಮ್ಮ ಮತಕ್ರಿಯಾವಿಧಿ ಆಚರಣೆಯಲ್ಲಿ ದಕ್ಷಿಣ ಭಾರತದ ಕಾವೇರಿ ನದಿಯೊಂದಿಗೆ ನರ್ಮದಾ ನದಿಗೂ ನಮನ ಸಲ್ಲಿಸುವುದುಂಟು. ಇದರಿಂದಾಗಿ ತಮ್ಮ ಸಮುದಾಯಕ್ಕೆ ಉತ್ತರ ಭಾರತದ ಮೂಲವಿರುವ ದಂತಕಥೆಗಳನ್ನು ಪೂಜ್ಯಭಾವನೆಯಿಂದ ನೋಡುತ್ತಿದ್ದರು.[29] ಅಯ್ಯರ್ ಸಮುದಾಯಗಳ ವಿವಾಹ ಕಾರ್ಯಗಳಲ್ಲಿ ಆರ್ಯ ಎಂದು ಪರಿಗಣಿಸಲಾದ ಹಾಗೂ ದ್ರಾವಿಡ ಎಂದು ಗುರುತಿಸಲಾದ ಪದ್ಧತಿಗಳ ಮಿಶ್ರಣವಿದೆ.[30][31] ೧೯೯೬ರಲ್ಲಿ ಮಧುರೈ ನಿವಾಸಿ ಅಯ್ಯರ್ ಕುಟುಂಬಗಳೊಂದಿಗೆ ನಡೆಸಿದ ತಳೀಯ ಸಮೀಕ್ಷೆಯ ಪ್ರಕಾರ, ಮಧ್ಯ ಏಷ್ಯಾದ ಯುರೇಶಿಯಸ್ಟೆಪಿಸ್ (ಹುಲ್ಲುಗಾಡು ಪ್ರದೇಶ) ಜನತೆಯೊಂದಿಗೆ ನಿಕಟ ಸಂಬಂಧವನ್ನು ಬಹಿರಂಗಪಡಿಸಿದೆ.[32] ಅಯ್ಯರ್ಗಳು ಹಾಗೂ ಅಗ್ನೇಯ ಏಷ್ಯನ್ ಜನತೆ ನಡುವೆ ಕೆಲವು ಆಲೀಲ್(ವ್ಯತಿರಿಕ್ತ ವಂಶವಾಹಿಗಳ ಜೋಡಿ) ಸಂಯೋಗಗಳ (ಹ್ಯಾಪ್ಲೋಟೈಪ್) ಹಂಚಿಕೆ ಕೂಡ ಇರುವುದರಿಂದಾಗಿ, ಅಯ್ಯರ್ಗಳ ಪೂರ್ವಜರು ಅಗ್ನೇಯ ಏಷ್ಯಾದಿಂದ ಭಾರತಕ್ಕೆ ವಲಸೆ ಬಂದರು ಎಂಬುದನ್ನು ಸೂಚಿಸುತ್ತದೆ.[32] ೨೦೦೧ರಲ್ಲಿ ತೆಲುಗು ಮೂಲದ ಬ್ರಾಹ್ಮಣ ಸಮುದಾಯಗಳಲ್ಲಿ ನಡೆಸಿದ ವಂಶವಾಹಿ ಅಧ್ಯಯನಗಳ ಪ್ರಕಾರ, ಬ್ರಾಹ್ಮಣರು ಮತ್ತು ಯುರೋಪಿಯನ್ನರ ನಡುವಿನ ತಳೀಯ ಅಂತರ(೦.೦೧೩)ಯುರೋಪಿಯನ್ನರು ಮತ್ತು ಕ್ಷತ್ರಿಯರ (೦.೦೩೦) ಅಥವಾ ವೈಶ್ಯರ (೦.೦೨೦) ನಡುವಿನ ಅಂತರಕ್ಕಿಂತ ಕಡಿಮೆಯಿತ್ತು ಎಂಬ ಮಾಹಿತಿ ಬಯಲಾಯಿತು.[33] ೨೦೦೭ರಲ್ಲಿ ನಡೆಸಲಾದ ಸಮೀಕ್ಷೆಯ ಪ್ರಕಾರ, ಅಯ್ಯರ್ಗಳು ಮತ್ತು ಅಯ್ಯಂಗಾರ್ಗಳು, ವೀರಕೋಡಿ ವೆಲ್ಲಲರ್ಗಳಂತಹ ತಮಿಳುನಾಡಿನ ಬ್ರಾಹ್ಮಣೇತರ ಮುಂದುವರೆದ ಸಮುದಾಯಗಳೊಂದಿಗೆ ಪ್ರತ್ಯೇಕ ಸಮೂಹಗಳನ್ನು ರಚಿಸಿಕೊಂಡಿದ್ದವು.[34] ೨೦೦೮ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಅಯ್ಯರ್ ಮತ್ತು ಅಯ್ಯಂಗಾರ್ ವಂಶಗಳ ಅತಿ-ಇತ್ತೀಚಿನ ವಲಸೆಗಾರರು, ತಮಿಳುನಾಡಿಗೆ ಮುಂಚೆ ವಲಸೆ ಹೋದವರಿಗಿಂತಲೂ ಹೆಚ್ಚಾಗಿ ಬಂಗಾಳಿ ಬ್ರಾಹ್ಮಣರು, ಮಹಿಷ್ಯ ಮತ್ತು ಬಗ್ಡಿ ಸಮುದಾಯಗಳೊಂದಿಗೆ ಹೆಚ್ಚು ಸಾಮ್ಯತೆಗಳನ್ನು ಹೊಂದಿದ್ದು ಕಂಡುಬಂದಿತ್ತು.[35] ಎಡ್ಗರ್ ಥರ್ಸ್ಟನ್ ಅಯ್ಯರ್ಗಳನ್ನು ಮಧ್ಯ-ಶಿರಸೂಚ್ಯಂಕ(ಮೆಸೊಸೆಫಾಲಿಕ್)ವೆಂದು ವಿಂಗಡಿಸಿದ್ದಾರೆ. ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಅವರು ನಡೆಸಿದ ಮಾನವಶಾಸ್ತ್ರೀಯ ಸಮೀಕ್ಷೆಯ ಆಧಾರದ ಮೇಲೆ ಅಯ್ಯರ್ಗಳ ಸರಾಸರಿ ಶಿರಸೂಚ್ಯಂಕ(ತಲೆಬುರುಡೆಗಳ ವಿಂಗಡಣೆ ಸೂಚ್ಯಂಕ) ೭೪.೨ [36] ಹಾಗೂ ಸರಾಸರಿ ನಾಸಿಕ ಸೂಚ್ಯಂಕ ೯೫.೧ ಎಂದು ವರ್ಗೀಕರಿಸಿದರು.[37] ಕೇರಳದ ಅಯ್ಯರ್ಗಳ ಸರಾಸರಿ ಶಿರ ಸೂಚ್ಯಂಕ ೭೪.೫ [36] ಹಾಗೂ ನಾಸಿಕ ಸೂಚ್ಯಂಕ ೯೨.೯ ಎಂದು ನಿರ್ಣಯಿಸಲಾಯಿತು.[37]
ಇಂದು, ಅಯ್ಯರ್ಗಳು ಇಡೀ ದಕ್ಷಿಣ ಭಾರತದಾದ್ಯಂತ ವಾಸಿಸುವರು. ಆದರೆ ಅವರು ಇಂದಿಗೂ ಸಹ ತಮಿಳುನಾಡಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವರು. ತಮಿಳು ಬ್ರಾಹ್ಮಣರು ರಾಜ್ಯದ ಒಟ್ಟು ಜನಸಂಖ್ಯೆಯ ಅಂದಾಜು ೩%ರಷ್ಟಿದ್ದು, ರಾಜ್ಯದಾದ್ಯಂತ ಹರಡಿಕೊಂಡಿದ್ದಾರೆ.[38] ಆದರೂ, ಅಯ್ಯರ್ ಸಮುದಾಯದ ಜನಸಂಖ್ಯೆ ಕುರಿತು ನಿಖರ ಅಂಕಿಅಂಶಗಳು ಅಲಭ್ಯ.[38] ಅವರು ಕಾವೇರಿ ನದಿ ಮುಖಜ ಭೂಮಿಯಲ್ಲಿರುವ ನಾಗಪಟ್ಟಣಂ, ತಂಜಾವೂರು, ತಿರುವಾರೂರು [39][40] ಹಾಗೂ ತಿರುಚನಾಪಳ್ಳಿ ಜಿಲ್ಲೆಗಳಲ್ಲಿ ಮುಖ್ಯವಾಗಿ ಕೇಂದ್ರೀತಕೃತರಾಗಿದ್ದಾರೆ. ಈ ವಲಯದ ಒಟ್ಟು ಜನಸಂಖ್ಯೆಯಲ್ಲಿ ಅಯ್ಯರ್ ಕುಟುಂಬಗಳದ್ದು ೧೦%ರಷ್ಟಿದೆ.[41][42] ತಮಿಳುನಾಡಿನ ಉತ್ತರ ಭಾಗದಲ್ಲಿ, ಅಯ್ಯರ್ ಕುಟುಂಬಗಳು ಚೆನ್ನೈಯ ಮಹಾನಗರ ಪ್ರದೇಶಗಳು[43][44] ಹಾಗೂ ಕಾಂಚಿಪುರಂನಲ್ಲಿ ವಾಸಿಸುತ್ತವೆ. ತಮಿಳುನಾಡಿನ ಉತ್ತರ ಭಾಗಗಳ ಗ್ರಾಮಾಂತರ ಪ್ರದೇಶಗಳಲ್ಲಿ ಅಯ್ಯರ್ ಕುಟುಂಬಗಳು ಬಹುಮಟ್ಟಿಗೆ ಅಸ್ತಿತ್ವದಲ್ಲಿಲ್ಲ [45] ತಮಿಳುನಾಡಿನ ಪಶ್ಚಿಮ ಮತ್ತು ದಕ್ಷಿಣ ಜಿಲ್ಲೆಗಳಲ್ಲಿ ಅಯ್ಯರ್ ಕುಟುಂಬಗಳು ಗಮನಾರ್ಹ ಸಂಖ್ಯೆಗಳಲ್ಲಿ ವಾಸಿಸುತ್ತವೆ.[46] ರಾಜ್ಯದ ಅತಿ ದಕ್ಷಿಣ ಭಾಗದ ಅಯ್ಯರ್ಗಳನ್ನು ತಿರುನೆಲ್ವೆಲಿ ಅಯ್ಯರ್ಗಳು [47] ಎನ್ನಲಾಗುತ್ತದೆ. ಅವರು ತಿರುನೆಲ್ವೆಲಿ ಬ್ರಾಹ್ಮಣ ಉಪಭಾಷೆ ಮಾತನಾಡುವರು. ಪಾಲಕ್ಕಾಡ್ ಮೂಲದ ಹಲವು ಕೇರಳ ಅಯ್ಯರ್ಗಳು ಕೊಯಮತ್ತೂರುನಲ್ಲಿದ್ದಾರೆ.[48]
ಅಯ್ಯರ್ಗಳಲ್ಲಿ ಹಲವು ಉಪಪಂಗಡಗಳಿವೆ - ವಡಮಾ, ಬೃಹಚರಣಮ್ ಅಥವಾ ಬೃಹತ್ಚರಣಮ್, ವಾತಿಮ, ಶೊಲಿಯರ್ ಅಥವಾ ಚೊಳಿಯರ್, ಅಷ್ಟಸಹಸ್ರಮ್, ಮುಕ್ಕಾನಿ, ಗುರುಕ್ಕಲ್, ಕಾನಿಯಾಲರ್ ಹಾಗೂ ಪ್ರಥಮಸಾಕಿ.[7][49][50][51] ಪ್ರತಿಯೊಂದು ಉಪಪಂಗಡವನ್ನು ಗ್ರಾಮ ಅಥವಾ ಮೂಲಪ್ರದೇಶಕ್ಕೆ ಅನುಸಾರವಾಗಿ ಮರುವಿಂಗಡಿಸಲಾಗಿದೆ.
ವಡಮಾ ಗಳು (ತಮಿಳು:வடமா) ತಮ್ಮನ್ನು ತಾವೇ ಸ್ಮಾರ್ಥ ಬ್ರಾಹ್ಮಣರಲ್ಲಿ ಅತ್ಯುತ್ತಮ ಎಂದು ಪರಿಗಣಿಸಿದ್ದಾರೆ.[7][52] 'ವಡಮಾ' ಎಂಬ ಪದವು ವಡಕ್ಕು ಎಂಬ ತಮಿಳು ಪದದಿಂದ ವ್ಯುತ್ಪತ್ತಿಯಾಗಿದೆ (ಅರ್ಥ: ಉತ್ತರ).[53] ಈ ಕಾರಣದಿಂದಾಗಿ, ತಮಿಳುನಾಡಿನಲ್ಲಿ ನೆಲೆಸಿದ ಬ್ರಾಹ್ಮಣ ಪಂಗಡಗಳಲ್ಲಿ ವಡಮಾಗಳು ಬಹಳಷ್ಟು ಇತ್ತೀಚಿನವರು ಎಂದು ವ್ಯಾಪಕವಾಗಿ ಊಹಿಸಲಾಗಿದೆ.[52] ಆದರೆ, ಇದೇ ಸಮಯ, ವಲಸೆಯ ಸಾಕ್ಷ್ಯಕ್ಕೆ ಬದಲು, ಸಂಸ್ಕೃತೀಕರಣದ ಮಟ್ಟ ಹಾಗೂ ಸಾಂಸ್ಕೃತಿಕ ಸಂಬಂಧ ಗುರುತಿಸಲು ವಡಮಾ ಎಂಬ ಗೌರವಾನ್ವಿತ ಬಿರುದನ್ನು ಬಳಸಲಾಗಿದೆ.[54] ವಡಮಾ ಉಪಪಂಗಡವನ್ನು ವಡದೇಶ ವಡಮಾ, ಚೋಳದೇಶ ವಡಮಾ, ಸಭಾಯ್ಯರ್, ಇಂಜಿ ಮತ್ತು ತುಮ್ಮಗುಂಟ ದ್ರಾವಿಡ ಎಂಬ ಗುಂಪುಗಳಾಗಿ ವಿಂಗಡಿಸಲಾಗಿದೆ.[7]
ವಾತಿಮ (ತಮಿಳು:வாத்திமா) ಉಪಪಂಗಡದವರು ಬಹಳಷ್ಟು ಕಡಿಮೆ ಸಂಖ್ಯೆಯಲ್ಲಿದ್ದು, ತಂಜಾವೂರು ಜಿಲ್ಲೆಯ ಹದಿನೆಂಟು ಗ್ರಾಮಗಳಲ್ಲಿ ಬಹುತೇಕ ಸೀಮಿತಗೊಂಡಿದ್ದಾರೆ. ಅವರನ್ನು ಪದಿನೆಟ್ಟು ಗ್ರಾಮತು ವಾತಿಮ ಅಥವಾ ಹದಿನೆಂಟು ಗ್ರಾಮಗಳ ವಾತಿಮಾ, ಉದಯಲೂರು, ನನ್ನಿಲಂ ಮತ್ತು ರತ್ನಮಂಗಳಂ ಎಂಬ ಗುಂಪುಗಳಲ್ಲಿ ಉಪವಿಭಾಗಿಸಲಾಗಿದೆ.[55]
ಬೃಹಚರಣಂ ಎಂಬುದು ಬೃಹತ್ಚರಣಂ (ಸಂಸ್ಕೃತ:ब्रहतचरनम्) ಎಂಬ ಸಂಸ್ಕೃತ ಪದದ ಅಪಭ್ರಂಶವಾಗಿದೆ. ಇದರ ಅರ್ಥ 'ಮಹಾನ್ ಪಂಗಡ'.[56] ಬೃಹಚರಣಮ್ಗಳು ವಡಮಾಗಳಿಗಿಂತ ಬಹಳಷ್ಟು ಕಟ್ಟಾ ಶೈವ ಪದ್ಧತಿ ಪಾಲಿಸುವವರು. ಬೃಹಚರಣಮ್ಗಳನ್ನು ಕಂದ್ರಮೈಕ, ಮಿಲಂಗನೂರು, ಮನಗುಡಿ, ಫಲಮನೇರಿ, ಮೂಸನಾಡು, ಕೊಳತೂರು, ಮಾರುದನಚೇರಿ, ಸತ್ಯಮಂಗಳಂ ಮತ್ತು ಪುತ್ತೂರು ದ್ರಾವಿಡ ಪಂಗಡಗಳೆಂದು ಉಪವಿಭಾಗಿಸಲಾಗಿದೆ.[56]
ಬೃಹಚರಣಮ್ಗಳಂತೆ ಅಷ್ಟಸಹಸ್ರಮ್ (ಸಂಸ್ಕೃತ:अष्टसहश्रम) ಗುಂಪಿನವರೂ ಸಹ ವಡಮಾಗಳಿಗಿಂತಲೂ ಕಟ್ಟಾ ಶೈವ ಪದ್ಧತಿ ಪಾಲಿಸುವವರಾಗಿದ್ದಾರೆ.[57] ಈ ಗುಂಪಿನಲ್ಲಿ ಅಥಿಯೂರು, ಅರಿವರ್ಪಡೆ, ನಂದಿವಾಡಿ ಮತ್ತು ಷಟ್ಕುಲಂ ಗುಂಪುಗಳಾಗಿ ಉಪವಿಂಗಡಿಸಲಾಗಿದೆ.[57]
ಚಿದಂಬರಂ ಸ್ಥಳದ ದೀಕ್ಷಿತರ್ (ತಮಿಳು:தீக்ஷிதர்) ಪಂಗಡವನ್ನು ತಮಿಳು ಭಾಷೆಯಲ್ಲಿ ತಿಳೈ ಮುವೈರವರ್ ಎಂದು ವಿಶಿಷ್ಟವಾಗಿ ಉಲ್ಲೇಖಿಸಲಾಗುತ್ತದೆ. ಚಿದಂಬರಂ ಎಂಬ ಪಟ್ಟಣವು ಇವರ ಮೂಲಸ್ಥಳ. ದಂತಕಥೆಯ ಪ್ರಕಾರ, ವಾರಾಣಸಿಯಿಂದ ವಲಸೆ ಬಂದ ಮೂರು ಸಾವಿರ ವ್ಯಕ್ತಿಗಳ ವಂಶಸ್ಥರು ಎನ್ನಲಾಗಿದೆ.[57] ಕೇರಳದ ನಾಯರ್ ಮತ್ತು ನಂಬೂದಿರಿ ಪಂಗಡದವರಂತೆ, ದೀಕ್ಷಿತರ್ ಪಂಗಡದವರೂ ಸಹ ತಮ್ಮ ತಲೆಯ ಮುಂಭಾಗದಲ್ಲಿ ಕುಡುಮಿ ಧರಿಸುವರು.[57]
ಶೊಲಿಯರ್ ಗಳು ತಮಿಳು:சோழியர்் ಹಿಂದೂ ದೇವಾಲಯದಲ್ಲಿ ಅರ್ಚಕರು, ಅಡುಗೆಯವರು ಅಥವಾ ವಿಗ್ರಹ ಸಿಂಗರಿಸುವವರಾಗಿ ಸೇವೆ ಸಲ್ಲಿಸುವರು.[58] ರಾಜ ಚಂದ್ರಗುಪ್ತ ಮೌರ್ಯನ ಮಂತ್ರಿಯಾಗಿದ್ದ ಚಾಣಕ್ಯ ತಮ್ಮ ಪಂಗಡಕ್ಕೆ ಸೇರಿದವನೆಂದು ಚೊಳಿಯರ್ಗಳು ಸಾರ್ವತ್ರಿಕ ನಂಬಿಕೆ ಇರಿಸಿದ್ದಾರೆ.[59] ಅವರು ತಿರುಕಟ್ಟಿಯೂರು, ಮಡಲೂರು, ವಿಶಾಲೂರು, ಪುತಲೂರು, ಸೆಂಗನುರು, ಅವಡಿಯರ್ ಕೊಯಿಲ್ ಗುಂಪುಗಳಾಗಿ ವಿಎಭಜನೆಯಾಗಿದ್ದಾರೆ.[60] ಪ್ರಖ್ಯಾತ ಕರ್ನಾಟಕ ಸಂಗೀತದ ಗಾಯಕ ಚೆಂಬೈ ವೈದ್ಯನಾಥ ಅಯ್ಯರ್ ಚೊಳಿಯರ್ ಸಮುದಾಯದವರು [61]
ಶಿವಾಚಾರ್ಯ ಅಥವಾ ಗುರುಕ್ಕಲ್ (ತಮಿಳು:குருக்கள்்்) ಪಂಗಡದಲ್ಲಿ ತಮಿಳುನಾಡಿನ ಶಿವ ಮತ್ತು ಶಕ್ತಿ ದೇವಾಲಯಗಳಲ್ಲಿ ಅರ್ಚಕ ವೃತ್ತಿಯು ಆನುವಂಶಿಕವಾಗಿ ಬಂದಿದೆ.[62][63] ಅವರು ಶೈವ ಸಂಪ್ರದಾಯದವರಾಗಿದ್ದು, ಶೈವ ಸಿದ್ಧಾಂತವನ್ನು ಕಟ್ಟುನಿಟ್ಟಾಗಿ ಪಾಲಿಸುವರು. ಇದರಿಂದಾಗಿ ಅವರು ಆದಿ ಶಂಕರಾಚಾರ್ಯರ ಅನುಯಾಯಿಗಳಲ್ಲ.[63] ಗುರುಕ್ಕಲ್ಗಳು ಆಗಮ ಶಾಸ್ತ್ರಗಳಲ್ಲಿ ಪರಿಣತರಾಗಿದ್ದು , ಈ ದೇವಾಲಯಗಳ ಆಗಮ ಮತಕ್ರಿಯಾ ವಿಧಿಗಳನ್ನು ಪಾಲಿಸುವರು. ಈ ಸಾಂಸ್ಕೃತಿಕ ಭಿನ್ನತೆಗಳಿಂದಾಗಿ, ಇತರೆ ಅಯ್ಯರ್ ಪಂಗಡಗಳೊಂದಿಗೆ ವಿವಾಹಗಳು ಇಂದಿನವರೆಗೂ ಸಹ ಬಹಳ ವಿರಳವಾಗಿದೆ.[64] ಗುರುಕ್ಕಲ್ಗಳನ್ನು ತಿರುವಳಂಗಡ್, ಕಾಂಜೀವರಮ್ ಮತ್ತು ತಿರುಕ್ಕಳುಕುನ್ರಮ್ ಎಂದು ಉಪವಿಂಗಡಿಸಲಾಗಿದೆ.[63]
ಅಯ್ಯರ್ಗಳ ಮುಕ್ಕಾನಿ (ತಮಿಳು:முக்கானீ) ಉಪಪಂಗಡದವರು ಸಾಂಪ್ರದಾಯಿಕವಾಗಿ ತಿರುಚೆಂಡೂರಿನ ದೇವಾಲಯಗಳಲ್ಲಿನ ಅರ್ಚಕರಿಗೆ ಸಹಾಯಕರಾಗಿರುವರು.[59] ಪುರಾಣಪ್ರಸಿದ್ಧ ಕಥೆಗಳ ಪ್ರಕಾರ, ಮುಕ್ಕಾನಿಗಳು ಶಿವ ಭಗವಂತನ ದೈತ್ಯ ಅಂಗರಕ್ಷಕ ಭೂತಗಣ ಗಳಾಗಿದ್ದರು. ಶಿವನು ತನ್ನ ಪುತ್ರ ಸುಬ್ರಹ್ಮಣ್ಯನ ದೇಗುಲಗಳ ಕಾವಲಿರಲು ಮುಕ್ಕಾನಿಗಳಿಗೆ ಜವಾಬ್ದಾರಿ ನೀಡಿದ್ದ.[65] ಮುಕ್ಕಾನಿಗಳು ಹೆಚ್ಚಿಗೆ ಋಗ್ವೇದವನ್ನು ಪಾಲಿಸಿ ಅನುಸರಿಸುವರು.
ಕಾನಿಯಾಲರ್ (ತಮಿಳು:காநியாளர்) ಅಯ್ಯರ್ ಪಂಗಡಗಳಲ್ಲಿ ಹೆಚ್ಚುಕಡಿಮೆ ಅಜ್ಞಾತ ಉಪಪಂಗಡವಾಗಿದೆ. ಕಾನಿಯಾಲರ್ಗಳು ವೈಷ್ಣವ ದೇವಾಲಯಗಳಲ್ಲಿ ಅಡುಗೆಯವರು ಹಾಗೂ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಡುವ ಸೇವಕರಾಗಿ ಸೇವೆ ಸಲ್ಲಿಸುವರು.[59] ಇದರಿಂದಾಗಿ ಅವರು ವೈಷ್ಣವ ಸಂಪ್ರದಾಯದ ಅಯ್ಯಂಗಾರ್ಗಳಂತೆ ನಾಮ ಧರಿಸುವರು.[59]
ಪ್ರಥಮಸಾಖಿ ಗಳೂ ಸಹ ಅಯ್ಯರ್ ಸಮುದಾಯದ ಅಪರಿಚಿತ ಪಂಗಡ. ಅವರು ಶ್ವೇತ ಯಜುರ್ವೇದವನ್ನು ಅನುಸರಿಸುವರು.[66] ಹಿಂದೂ ಪುರಾಣಗಳ ಪ್ರಕಾರ, ಬಹಳ ದೂರದ ಪ್ರಾಚೀನತೆಯಲ್ಲಿ, ದೇವರು ಪ್ರಥಮಸಾಖಿಗಳಿಗೆ ಪ್ರತಿದಿನ ಒಂದು ಗಂಟೆಯ ಕಾಲ ಪರಯರ್ [67] ಗಳಾಗಿ ಕಳೆಯಬೇಕೆಂದು ಶಾಪನೀಡಿದರು. ಇದರಿಂದಾಗಿ, ತಂಜಾವೂರು ಜಿಲ್ಲೆ[66] ಯಲ್ಲಿ ಈ ಉಪಪಂಗಡವು ಮಧ್ಯಾನ ಪರೈಯನ್ನರು ಎಂದು ಹೆಸರಾಗಿದ್ದಾರೆ. ಇತರೆ ಬ್ರಾಹ್ಮಣ ಪಂಗಡಗಳು ಈ ಪಂಗಡದವರನ್ನು ಕೆಳಮಟ್ಟದವರು ಎಂದು ಪರಿಗಣಿಸಿದ್ದಾರೆ[66] ಕೇಶಿಗಳು ಅಥವಾ ಹಿರಣ್ಯಕೇಶಿಗಳು ಎಂಬ ಇನ್ನೊಂದು ಅಯ್ಯರ್ ಪಂಗಡವನ್ನು ಎಡ್ಗರ್ ಥರ್ಸ್ಟನ್ ಪ್ರಸ್ತಾಪಿಸಿದ್ದಾನೆ.[56] ಆದರೂ, ಈ ಉಪಪಂಗಡವು ಮಾಯವಾಗಿರಬಹುದು ಅಥವಾ ಕಾಲಾನಂತರದಲ್ಲಿ ಇನ್ನೂ ವಿಶಾಲವಾದ ವಡಮಾ ಸಮುದಾಯದಲ್ಲಿ ವಿಲೀನವಾಗಿರಬಹುದು. ಇತರೆ ಬ್ರಾಹ್ಮಣರಂತೆ, ಅಯ್ಯರ್ಗಳು ವೇದಗಳನ್ನು ಕಲಿಯುವ ಅಗತ್ಯವಿತ್ತು. ಅವರು ಅನುಸರಿಸುವ ವೇದವನ್ನು ಆಧರಿಸಿ, ಅಯ್ಯರ್ಗಳನ್ನು ನಾಲ್ಕು ವಿವಿಧ ಪಂಗಡಗಳಲ್ಲಿ ವಿಂಗಡಿಸಲಾಗಿದೆ.[68] ಯುಜರ್ವೇದಗಳನ್ನು ಅನುಸರಿಸುವ ಅಯ್ಯರ್ಗಳು ಸಾಮಾನ್ಯವಾಗಿ ಕೃಷ್ಣ ಯಜುರ್ವೇದದ ಬೋಧನೆಗಳನ್ನು ಪಾಲಿಸುವರು.[10][69]
ಇತರೆ ಬ್ರಾಹ್ಮಣರಂತೆ, ಅಯ್ಯರ್ಗಳ ಪೈತೃಕ ಪೂರ್ವಜರನ್ನು ಎಂಟು ಋಷಿಗಳ ಲ್ಲಿ ಒಬ್ಬರೆಂದು ಪತ್ತೆಹಚ್ಚಿದ್ದಾರೆ.[70][71] ಇದರಂತೆ, ನಿರ್ದಿಷ್ಟ ಋಷಿ ಯ ವಂಶಸ್ಥರಾಗಿರುವುದರ ಮೇರೆಗೆ, ಅಯ್ಯರ್ಗಳಲ್ಲಿ ಎಂಟು ಗೋತ್ರ ಗಳ ವಿಂಗಡಣೆಗಳಿವೆ. ಕುಟುಂಬದಲ್ಲಿರುವ ಅವಿವಾಹಿತೆ ಸ್ತ್ರೀ ತನ್ನ ತಂದೆಯ ಗೋತ್ರಕ್ಕೆ ಸೇರಿರುತ್ತಾಳೆ, ವಿವಾಹವಾದ ನಂತರ, ತನ್ನ ಪತಿಯ ಗೋತ್ರ ವನ್ನು ಸ್ವೀಕರಿಸುತ್ತಾಳೆ. ವೇದಗಳನ್ನು ಇನ್ನೂ ನಾಲ್ಕು ಶಾಖೆಗಳು ಅಥವಾ ಕೊಂಬೆಗಳಾಗಿ ಉಪವಿಭಾಗ ಮಾಡಲಾಗಿದೆ. ಪ್ರತಿಯೊಂದು ವೇದವನ್ನು ಅನುಸರಿಸುವವರು ತಾವು ಸೇರಿರುವ ಶಾಖೆ ಯಂತೆ ಉಪವಿಭಾಗಿಸಲಾಗುತ್ತದೆ. ಆದರೂ, ಕೇವಲ ಶಾಖೆ ಗಳು ಮಾತ್ರ ಚಾಲ್ತಿಯಲ್ಲಿವೆ. ಇವುಗಳಲ್ಲಿ ಹಲವು ಮಾಯವಾಗಿವೆ. ತಮಿಳುನಾಡಿನಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ವಿವಿಧ ವೇದಗಳು ಮತ್ತು ತತ್ಸಂಬಂಧಿತ ಶಾಖೆ ಗಳು ಕೆಳಕಂಡಂತಿವೆ:[72]
ವೇದಗಳು | ಶಾಖೆಗಳು | |
---|---|---|
ಋಗ್ವೇದ | ಶಕಾಲ ಮತ್ತು ಪೈಂಗಿ | |
ಯಜುರ್ವೇದ | ಕಣ್ವ ಮತ್ತು ತೈತ್ತಿರೀಯ | |
ಸಾಮವೇದ | ಕೌತುಮ, ಜೈಮಿನೀಯ/ತಲವಕರ, ಶತ್ಯಾಯನೀಯ ಮತ್ತು ಗೌತಮ | |
ಅಥರ್ವವೇದ | ಶೌನಕಿಯ ಮತ್ತು ಪೈಪಲದ |
ಕಳೆದ ಕೆಲವು ಶತಮಾನಗಳಿಂದ ಅಯ್ಯರ್ಗಳು ಬಹಳಷ್ಟು ಸಂಖ್ಯೆಗಳಲ್ಲಿ ಕರ್ನಾಟಕ ರಾಜ್ಯಕ್ಕೆ ವಲಸೆ ಹೋಗಿ ನೆಲೆಸಿದ್ದುಂಟು. ಮೈಸೂರು ಮಹಾರಾಜರ ಆಳ್ವಿಕೆಯಲ್ಲಿ, ಅಂದಿನ ಮದ್ರಾಸ್ ಪ್ರಾಂತ್ಯದಿಂದ ಬಹಳಷ್ಟು ಅಯ್ಯರ್ಗಳು ಮೈಸೂರಿಗೆ ವಲಸೆ ಹೋದರು. ಕರ್ನಾಟಕದಲ್ಲಿ ವಾಸಿಸುವ ಅಯ್ಯರ್ಗಳಲ್ಲಿ ಬಹಳಷ್ಟು ಜನರು ಅಷ್ಟಗ್ರಾಮ ಅಯ್ಯರ್ ಪಂಗಡದವರು.[73]. ಸಂಕೇತಿ ಅಯ್ಯರ್ಗಳು ಎಂಬುದು ಇನ್ನೊಂದು ಉಪಜಾತಿ. ಸಂಕೇತಿಗಳು, ಕನ್ನಡ, ತಮಿಳು ಮತ್ತು ಸಂಸ್ಕೃತ ಭಾಷೆಗಳಿಂದ ಪದಗಳನ್ನು ಎರವಲು ಪಡೆದಿರುವ ಸಂಕೇತಿ ಎಂಬ ವಿಭಿನ್ನ ಭಾಷೆ ಮಾತನಾಡುವರು.
ಈ ಅಯ್ಯರ್ಗಳನ್ನು ಇಂದು ಕೇರಳ ಅಯ್ಯರ್ ಸಮುದಾಯದವರು ಎನ್ನಲಾಗಿದೆ. ತಿರುನೆಲ್ವೆಲಿ ಮತ್ತು ರಾಮನಾಡ್ ಜಿಲ್ಲೆಗಳಿಂದ ಅಯ್ಯರ್ಗಳ ವಲಸೆಯ ಬಗ್ಗೆ ಯಾವುದೇ ಐತಿಹಾಸಿಕ ದಾಖಲೆಯಿಲ್ಲ. ಆದರೆ, ತಂಜಾವೂರು ಜಿಲ್ಲೆಯಿಂದ ಪಾಲಕ್ಕಾಡ್ಗೆ ವಲಸೆಯನ್ನು ಹಲವು ದಾಖಲೆಗಳಲ್ಲಿ ನಮೂದಿಸಲಾಗಿದೆ. [76][77]
ಮಹಾವಂಶವೆಂಬ ಬೌದ್ಧ ಗ್ರಂಥದಲ್ಲಿ ಶ್ರೀಲಂಕಾ ದೇಶದಲ್ಲಿ ಕ್ರಿಸ್ತ ಪೂರ್ವ ೫೦೦ರಷ್ಟು ಪೂರ್ವ ಕಾಲದಿಂದಲೂ ಸಹ ಬ್ರಾಹ್ಮಣರ ಉಪಸ್ಥಿತಿ ದಾಖಲಾಗಿದೆ. ಆಗ ಭಾರತದ ಪ್ರಧಾನಭೂಭಾಗದಿಂದ ವಲಸೆಗಳು ಉಂಟಾದವು. ಸದ್ಯಕ್ಕೆ, ಶ್ರೀಲಂಕಾ ತಮಿಳು ಅಲ್ಪಸಂಖ್ಯಾತರಲ್ಲಿ ಬ್ರಾಹ್ಮಣರು ಪ್ರಮುಖ ಭಾಗವಾಗಿದ್ದಾರೆ.[78][79] ಜಾಫ್ನಾ ಸಾಮ್ರಾಜ್ಯದ ರಚನೆಯಲ್ಲಿ ತಮಿಳು ಬ್ರಾಹ್ಮಣರು ಐತಿಹಾಸಿಕ ಪಾತ್ರ ವಹಿಸಿದ್ದರೆಂದು ನಂಬಲಾಗಿದೆ.[79][80][81]
ದಕ್ಷಿಣ ಭಾರತವಲ್ಲದೆ, ಅಯ್ಯರ್ಗಳು ಉತ್ತರ ಭಾರತದಲ್ಲಿನ ಹಲವು ನಗರಗಳಿಗೆ ವಲಸೆ ಹೋಗಿ ನೆಲೆಸಿದರು. ಮುಂಬಯಿ,[82][83] ಕೊಲ್ಕತ್ತಾ, ಒಡಿಶಾ ಮತ್ತು ದೆಹಲಿ ನಗರಗಳಲ್ಲಿ ಅಯ್ಯರ್ಗಳು ಗಮನಾರ್ಹ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ.[44][84][85] ಬ್ರಿಟಿಷ್ ಆಳ್ವಿಕೆಯಲ್ಲಿ ಆರಂಭವಾದ ಈ ವಲಸೆಗಳು ಆಗಾಗ್ಗೆ ಉತ್ತಮ ಜೀವನ ಅರಸುವುದಕ್ಕಾಗಿ ಕೈಗೊಳ್ಳಲಾಗುತ್ತಿತ್ತು. ಇವು ಸಮುದಾಯದ ಸಂಪದಭಿವೃದ್ಧಿಗೆ ಕೊಡುಗೆ ನೀಡಿದವು.[11] ಇತ್ತೀಚೆಗಿನ ಸಮಯಗಳಲ್ಲಿ ಅಯ್ಯರ್ಗಳು ಉತ್ತಮ ಜೀವನೋಪಾಯಕ್ಕಾಗಿ ಯುನೈಟೆಡ್ ಕಿಂಗ್ಡಮ್, ಯುರೋಪ್ ಹಾಗೂ ಅಮೆರಿಕಾ ಸಂಯುಕ್ತ ಸಂಸ್ಥಾನಗಳತ್ತ [83] ಗಮನಾರ್ಹ ಸಂಖ್ಯೆಗಳಲ್ಲಿ ವಲಸೆ ಹೋದರು.[86][87][88][89]
ಹಿಂದೂ ಋಷಿ ಆಪಸ್ತಂಭ ರಚಿಸಿದ ಆಪಸ್ತಂಭ ಸೂತ್ರ ಸೇರಿದಂತೆ ಹಲವು ಹಿಂದೂ ಪವಿತ್ರಗ್ರಂಥಗಳಲ್ಲಿ ವಿವರಿಸಿದಂತೆ ಅಯ್ಯರ್ ಮತಕ್ರಿಯಾವಿಧಿ ಆಚರಣೆಗಳು ಹಲವು ಧಾರ್ಮಿಕ ವಿಧಿಗಳನ್ನು ಒಳಗೊಂಡಿದೆ [10] ಇವುಗಳಲ್ಲಿ ಷೋಡಸ ಸಂಸ್ಕಾರಗಳು ಅಥವಾ ಹದಿನಾರು ಕರ್ತವ್ಯಗಳು ಬಹಳ ಮುಖ್ಯವಾಗಿವೆ.[90] ಹಿಂದಿನ ಕಾಲದಲ್ಲಿ ಅನುಸರಿಸಲಾದ ಧಾರ್ಮಿಕ ವಿಧಿಗಳ ಆಚರಣೆಗಳಲ್ಲಿ ಹಲವನ್ನು ಇಂದು ಆಚರಿಸದಿದ್ದರೂ ಸಹ, ಕೆಲವು ಪದ್ಧತಿಗಳು ಇನ್ನೂ ಚಾಲ್ತಿಯಲ್ಲಿವೆ.[91][92]
ಅಯ್ಯರ್ಗಳಿಗೆ ಜನ್ಮದ ಸಮಯದಲ್ಲೇ ಮತಕ್ರಿಯಾವಿಧಿ ಆಚರಣೆಯ ಉಪಕ್ರಮ ಕೈಗೊಳ್ಳಲಾಗುತ್ತದೆ. ಪ್ರಾಚೀನ ಕಾಲದಲ್ಲಿ, ತಾಯಿಯ ಹೊಕ್ಕುಳ ಬಳ್ಳಿಯಿಂದ ಬೇರ್ಪಡಿಸಿದಾಗಲೇ ಮತಕ್ರಿಯಾವಿಧಿ ಆಚರಣೆಗಳನ್ನು ನಿರ್ವಹಿಸಲಾಗುತ್ತಿತ್ತು. ಈ ಸಮಾರಂಭಕ್ಕೆ ಜಾತಕರ್ಮ ಎನ್ನಲಾಗುತ್ತದೆ.[93][94] ಆದರೂ, ಈ ಪದ್ಧತಿಯನ್ನು ಇಂದು ಪಾಲಿಸಲಾಗುತ್ತಿಲ್ಲ. ನಕ್ಷತ್ರಗಳ ಸ್ಥಿತಿಗಳನ್ನು ಪರಿಗಣಿಸಿ, ನವಜಾತ ಶಿಶುವಿನ ಜನ್ಮಕುಂಡಲಿಯನ್ನು ಸಿದ್ಧಪಡಿಸಲಾಗುತ್ತದೆ. ನಂತರ, ಮಗುವಿಗೆ ವಿಧ್ಯುಕ್ತವಾಗಿ ನಾಮಕರಣ ಮಾಡಲಾಗುತ್ತದೆ.[94][95] ಮಗುವಿನ ಜನ್ಮದಿನದಂದು, ದೀರ್ಘಾಯುಷ್ಯ ಪ್ರಾಪ್ತಿಗಾಗಿ ಮತಕ್ರಿಯಾವಿಧಿ ಆಚರಣೆ ನಡೆಸಲಾಗುವುದು. ಈ ವಮತಕ್ರಿಯಾವಿಧಿ ಆಚರಣೆಯನ್ನು ಆಯುಷ್ಯ ಹೋಮ ಎನ್ನಲಾಗುವುದು. ಗ್ರೆಗರಿಯನ್ ಪಂಚಾಂಗದ ಬದಲಿಗೆ, ನಕ್ಷತ್ರಗಳ ಸ್ಥಿತಿಗತಿಗಳಿಗೆ ಅನುಸಾರವಾಗಿ ತಮಿಳು ಪಂಚಾಂಗದ ಪ್ರಕಾರ ಮಗುವಿನ ಜನ್ಮದಿನದಂದು ಈ ಆಚರಣೆ ನಡೆಸಲಾಗುತ್ತದೆ.[95] ಮಗುವಿನ ಮೊದಲ ಜನ್ಮದಿನ ಬಹಳ ಮುಖ್ಯ, ಆ ಗಂಡು ಅಥವಾ ಹೆಣ್ಣು ಮಗುವಿನ ಕಿವಿಗಳನ್ನು ಚುಚ್ಚಲು ಅದು ಸೂಕ್ತ ಸಮಯ ಎನ್ನಲಾಗಿದೆ. ಹೆಣ್ಣುಮಗುವಾಗಿದ್ದಲ್ಲಿ, ಆ ದಿನದಿಂದ ಮಗುವಿಗೆ ಕಿವಿಯೋಲೆ ತೊಡಿಸಲಾಗುತ್ತದೆಂದು ನಿರೀಕ್ಷಿಸಲಾಗಿದೆ. ಗಂಡು ಮಗುವಿಗೆ ಏಳು ವರ್ಷ ತುಂಬಿದ ನಂತರ ಎರಡನೆಯ ದೀಕ್ಷೆ ನಡೆಸಲಾಗುವುದು.[96][97] ಇದು ಉಪನಯನ ಆಚರಣೆ ಎನ್ನಲಾಗುವುದು. ಇದರಲ್ಲಿ ಬ್ರಾಹ್ಮಣನು ಮರುಜನ್ಮ ತಾಳುವನು ಎನ್ನಲಾಗಿದೆ .[97][98] ಬಾಲಕನ ಎಡಭುಜದಿಂದ ಹಿಡಿದು ಅವನ ಬಲಭಾಗದಸೊಂಟದವರೆಗೆ, ಅವನ ಮುಂಡವನ್ನು ಆವರಿಸುವ ಮೂರು ತಂತುಗಳ ಹತ್ತಿಯ ದಾರವನ್ನು (ಜನಿವಾರ) ಅಳವಡಿಸಲಾಗುತ್ತದೆ.[96][98][99][100] ಉಪನಯನ ದೀಕ್ಷಾ ಸಮಾರಂಭವನ್ನು ದ್ವಿಜ ಅಥವ ಎರಡು ಬಾರಿ ಹುಟ್ಟಿದ ಜಾತಿಯ ಸದಸ್ಯರಿಗೆ ಮಾತ್ರ ನಡೆಸಲಾಗುವುದು. ಸಾಮಾನ್ಯವಾಗಿ, ಬಾಲಕನು ಏಳರಿಂದ ಹದಿನಾರು ವರ್ಷ ವಯಸ್ಸಿರುವಾಗ ಉಪನಯನ ದೀಕ್ಷೆ ಮಾಡಿಸಲಾಗುವುದು.[101][102] ಪ್ರಾಚೀನ ಕಾಲದಲ್ಲಿ, ಉಪನಯನವನ್ನು ಬಾಲಕನ ಶಿಕ್ಷಣದ ಆರಂಭ ಹಂತದ ಕುರುಹಾದ ಮತಕ್ರಿಯಾವಿಧಿ ಆಚರಣೆ ಎಂದು ಪರಿಗಣಿಸಲಾಗಿತ್ತು [103] ಆಗಿನ ಕಾಲದದಲ್ಲಿ ಶಿಕ್ಷಣದಲ್ಲಿ ಹೆಚ್ಚೆಂದರೆ ವೇದಗಳ ಅಧ್ಯಯನ. ಆದರೆ ಬ್ರಾಹ್ಮಣರು ಪೌರೋಹಿತ್ಯ ಹೊರತುಪಡಿಸಿ, ಇತರೆ ವೃತ್ತಿಗಳಲ್ಲಿ ತೊಡಗುವುದರೊಂದಿಗೆ, ಈ ಉಪನಯನ ದೀಕ್ಷೆಯು ಒಂದು ಸಾಂಕೇತಿಕ ಮತಾಚರಣೆಯಾಯಿತು. ದೀಕ್ಷೆ ಪಡೆದ ಬಾಲಕನಿಯಮಿತವಾಗಿ ಸಂಧ್ಯಾವಂದನೆ ಕಾರ್ಯ ಮಾಡಿ [104] ದಿನದಲ್ಲಿ ಮೂರು ಸಲ' :ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ನಿರ್ದಿಷ್ಟ ಪ್ರಾರ್ಥನೆಗಳನ್ನು ಮಾಡಬೇಕು. ಗಾಯತ್ರಿ ಮಂತ್ರವು,[104][105] ಸೂಚಿಸಲಾದ ಮಂತ್ರಗಳಲ್ಲಿ ಅತಿ ಪವಿತ್ರ ಹಾಗೂ ಬಹಳ ಮುಖ್ಯ.[104][105] ಮುಸ್ಲಿಮರಿಗೆ ಕಲಿಮ ಮತ್ತು ಪಾರಸಿಗಳಿಗೆ ಅಹುನ್ವರ್ ಎಷ್ಟು ಪವಿತ್ರವೋ, ಗಾಯತ್ರಿ ಮಂತ್ರವು ಹಿಂದೂಗಳಿಗೆ ಅಷ್ಟೇ ಪವಿತ್ರ.[104] ವರ್ಷಕ್ಕೊಮ್ಮೆ, ಅಯ್ಯರ್ಗಳು ಹಾಗೂ ಬಹುಶಃ ಎಲ್ಲಾ ಬ್ರಾಹ್ಮಣ ಸಮುದಾಯದವರೂ ತಮ್ಮ ಜನಿವಾರ ಬದಲಾಯಿಸುವರು. ಈ ಧಾರ್ಮಿಕ ಆಚರಣೆಯು ದಕ್ಷಿಣ ಭಾರತೀಯ ಬ್ರಾಹ್ಮಣರಿಗೆ ವಿಶಿಷ್ಟವಾಗಿದೆ. ತಮಿಳುನಾಡಿನಲ್ಲಿ ಈ ದಿನವನ್ನು ಆವನಿ ಅವಿಟ್ಟಮ್ ಎಂದು ಆಚರಿಸಲಾಗಿದೆ.[106][107]
ಅಯ್ಯರ್ಗಳಿಗೆ ಇತರೆ ಮುಖ್ಯ ಧಾರ್ಮಿಕ ಆಚರಣೆಗಳೆಂದರೆ ನಿಧನರಾದವರಿಗೆ ಅಂತಿಮ ಸಂಸ್ಕಾರಗಳು.[108][109][110] ಅಯ್ಯರ್ಗಳು ಮೃತರ ಅಂತ್ಯಕ್ರಿಯೆಗಳನ್ನು ವೈದಿಕಧರ್ಮದ ರೀತ್ಯಾ ನಡೆಸುವರು. ವ್ಯಕ್ತಿ ನಿಧನರಾಗಿ ಒಂದು ದಿನದೊಳಗೆ ಅಂತ್ಯಕ್ರಿಯೆ ನಡೆಸಲಾಗುವುದು.[111][112] ಅಂತ್ಯಕ್ರಿಯೆಗಳು ಹದಿಮೂರು ದಿನಗಳ ಆಚರಣೆಯನ್ನು ಒಳಗೊಂಡಿರುತ್ತದೆ ಹಾಗೂ ಪ್ರತಿ ತಿಂಗಳ ಅಮಾವಾಸ್ಯೆ ದಿನ ಅಯ್ಯರ್ಗಳು ತಮ್ಮ ಪೂರ್ವಜರಿಗಾಗಿ ತರ್ಪಣ [113] ಸಲ್ಲಿಸುವರು.[111][114][115] ವರ್ಷಕ್ಕೊಮ್ಮೆ ಶ್ರಾದ್ಧ ಕಾರ್ಯ ಸಹ ನಿರ್ವಹಿಸಲಾಗುವುದು.[115][116] ಮೃತರ ಪುರುಷ ವಂಶಸ್ಥರು ಮಾತ್ರ ಈ ಕಾರ್ಯಗಳನ್ನು ನಿರ್ವಹಿಸಬೇಕೆಂದು ನಿರೀಕ್ಷಿಸಲಾಗುತ್ತದೆ. ವಿವಾಹಿತ ಪುರುಷರು ಈ ಆಚರಣೆ ಮಾಡುತ್ತಿದ್ದಲ್ಲಿ, ಅವರ ಪತ್ನಿಯರು ಜೊತೆಗಿರಬೇಕು. ಈ ಕಾರ್ಯಗಳಲ್ಲಿ ಮಹಿಳೆಯರ ಉಪಸ್ಥಿತಿಯು ಸಾಂಕೇತಿಕವಾಗಿ ಮುಖ್ಯ. ಇದರ ವಿಧಾನಗಳನ್ನು ನಡೆಸುವಲ್ಲಿ ಮಹಿಳೆಯರ 'ಸಮ್ಮತಿ' ಅಗತ್ಯವಿದೆ.[111][117]
ದೀಪಾವಳಿ, ನವರಾತ್ರಿ (ದಸರಾ), ಪೊಂಗಲ್ (ಮಕರ ಸಂಕ್ರಾಂತಿ), ವಿನಾಯಕ ಚತುರ್ಥಿ, ಕೃಷ್ಣ ಜನ್ಮಾಷ್ಠಮಿ, ತಮಿಳರ ಹೊಸವರ್ಷ, ಶಿವರಾತ್ರಿ ಹಾಗೂ ಕಾರ್ತೀಕ ದೀಪ ಸೇರಿದಂತೆ, ಬಹುಶಃ ಎಲ್ಲಾ ಹಿಂದೂ ಹಬ್ಬ-ಉತ್ಸವಗಳನ್ನೂ ಅಯ್ಯರ್ಗಳು ಆಚರಿಸುವರು.
ಆದರೂ, ದಕ್ಷಿಣ ಭಾರತದ ಬ್ರಾಹ್ಮಣರಿಗೆ ವಿಶಿಷ್ಟವಾಗಿರುವ ಬಹುಮುಖ್ಯ ಹಬ್ಬವೆಂದರೆ, ಆವನಿ ಅವಿಟ್ಟಮ್ ಹಬ್ಬ.[118]
ಅಯ್ಯರ್ ವಿವಾಹ ಕಾರ್ಯದಲ್ಲಿ ಸುಮಂಗಲಿ ಪ್ರಾರ್ಥನೆ (ವೈವಾಹಿಕ ಜೀವನವು ಸುಖಸಮೃದ್ಧಿಯಿಂದ ಕೂಡಿರಲೆಂದು ಸಲ್ಲಿಸುವ ಹಿಂದೂ ಪ್ರಾರ್ಥನೆಗಳು), ನಾಂದಿ (ಪೂರ್ವಜರಿಗೆ ನಮನ), ನಿಶ್ಚಿತಾರ್ಥ (ವಿವಾಹದ ಒಡಂಬಡಿಕೆ)[100] ಹಾಗೂ ಮಾಂಗಲ್ಯಧಾರಣ (ಮಂಗಲಸೂತ್ರ ಕಟ್ಟುವುದು).[119] ಅಯ್ಯರ್ ಸಮುದಾಯದ ಪ್ರಮುಖ ಕಾರ್ಯಗಳಲ್ಲಿ ವ್ರತ (ನಿರಶನ), ಕಾಶಿ ಯಾತ್ರೆ (ಕಾಶಿಗೆ ತೀರ್ಥಯಾತ್ರೆ), ಊಂಜಲ್(ಸ್ಥಳೀಯ ಉಯ್ಯಾಲೆ) , ಕನ್ಯಾದಾನ (ವಧುವನ್ನು ವರನ ಸುಪರ್ದಿಗೆ ಒಪ್ಪಿಸುವುದು), ಮಾಂಗಲ್ಯಧಾರಣ , ಪಾಣಿಗ್ರಹಣ [120] ಹಾಗೂ ಸಪ್ತಪದಿ (ಅಥವಾ ಏಳು ಹೆಜ್ಜೆಗಳು - ಇದು ವಿವಾಹಕಾರ್ಯದ ಅಂತಿಮ ಮತ್ತು ಬಹಳ ಮುಖ್ಯವಾದ ಹಂತ - ಇಲ್ಲಿ ವರನ ಹಸ್ತಗಳ ಬೆಂಬಲದೊಂದಿಗೆ ವಧು ಏಳು ಹೆಜ್ಜೆ ಹಾಕುವಳು, ಇದರಿಂದಾಗಿ ಅವರ ಮಿಲನ ಅಂತಿಮಗೊಳ್ಳುತ್ತದೆ).[120] ಇದಾದ ನಂತರ ನಲಾಂಗು ಎಂಬ ಅನೌಪಚಾರಿಕ ಕಾರ್ಯವಿರುವುದು.[121][122]
ಅಯ್ಯರ್ಗಳು ಸಾಮಾನ್ಯವಾಗಿ ಬಹಳಷ್ಟು ಸಾಂಪ್ರದಾಯಿಕ ಜೀವನ ನಡೆಸಿ, ತಮ್ಮ ಪದ್ಧತಿಗಳು ಮತ್ತು ಸಂಪ್ರದಾಯಗಳಿಗೆ ದೃಢವಾಗಿ ನಿಷ್ಠರಾಗಿರುತ್ತಾರೆ. ಆದರೂ, ಇತ್ತೀಚೆಗೆ, ದೇವಾಲಯದ ಅರ್ಚಕರಂತಹ ಸಾಂಪ್ರದಾಯಿಕ ಕರ್ತವ್ಯಗಳನ್ನು ಅವರು ಕೈಬಿಟ್ಟು, ಹೆಚ್ಚು ಮತಾತೀತ ವೃತ್ತಿಗಳಲ್ಲಿ ತೊಡಗಿದ್ದಾರೆ. ಇದರಿಂದಾಗಿ ಸಮಕಾಲೀನ ಅಯ್ಯರ್ಗಳು ತಮ್ಮ ಪೂರ್ವಜರಿಗಿಂತಲೂ ಹೊಂದಿಕೊಳ್ಳುವಿಕೆಯ ಧೋರಣೆ ತಾಳಿದ್ದಾರೆ.[123] ಮನುಸ್ಮೃತಿಯಲ್ಲದೆ, ಆಪಸ್ತಂಭ ಮತ್ತು ಬೌಧಯಾನದ ಗೃಹ್ಯ ಸೂತ್ರಗಳನ್ನು ಅಯ್ಯರ್ಗಳು ಪಾಲಿಸುವರು. ಅಯ್ಯರ್ಗಳ ಸಮುದಾಯವು ಸಾಮಾನ್ಯವಾಗಿ ಪುರುಷಪ್ರಧಾನವಾಗಿದೆ. ಆದರೆ ಊಳಿಗಮಾನ್ಯ ಸಮುದಾಯವಲ್ಲ.[124]
ಅಯ್ಯರ್ಗಳು ಸಾಮಾನ್ಯವಾಗಿ ಕಟ್ಟುನಿಟ್ಟಾದ ಸಸ್ಯಾಹಾರಿಗಳು. ಮೂಲ ಇಂದ್ರಿಯಗಳನ್ನು ಪ್ರಚೋದಿಸುತ್ತವೆ ಎಂಬ ಕಾರಣಕ್ಕೆ ಕೆಲವು ಅಯ್ಯರ್ಗಳು ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವಿಸುವುದಿಲ್ಲ.[125] ಹಸು ಹಾಲು ಮತ್ತು ಇತರೆ ಹಾಲಿನ ಉತ್ಪಾದನೆ ಸೇವಿಸಲು ಅನುಮತಿಯಿತ್ತು.[126] ಅಯ್ಯರ್ಗಳು ಮದ್ಯ ಹಾಗೂ ತಂಬಾಕು ಸೇವನೆ ಮಾಡುವಂತಿಲ್ಲ.[126][127] ಅಯ್ಯರ್ಗಳು ತಮ್ಮ ಹಾಗೂ ತಾವು ವಾಸಿಸುವ ಗೃಹದ ಕೂಲಂಕಷ ಶುದ್ಧೀಕರಣ ಕಾರ್ಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುವರು. ಬೆಳಗಿನ ಹೊತ್ತು ಶುದ್ಧೀಕರಣ ಸ್ನಾನವಿಲ್ಲದೆ ಪುರುಷರು ತಮ್ಮ ಹದಿನಾರು ಕರ್ತವ್ಯಗಳನ್ನು ಮಾಡುವಂತಿರಲಿಲ್ಲ ಹಾಗೂ ಮಹಿಳೆಯರು ಶುದ್ದೀಕರಣ ಸ್ನಾನವಿಲ್ಲದೇ ಅಡುಗೆ ಮಾಡಲು ನಿಷೇಧಿಸಲಾಗಿದೆ.[123][125] ಅಯ್ಯರ್ಗಳು ದೇವತೆಗಳಿಗೆ ನೈವೇದ್ಯ ಅರ್ಪಿಸಿದ ನಂತರವೇ ಆಹಾರ ಸೇವಿಸುವರು.[128]
ಮಡಿ ಯ ನಿಯಮಳೊಂದಿಗೆ ಹೊಂದಿಕೊಂಡಲ್ಲಿ ಮಾತ್ರ ಅವರ ಸ್ನಾನವು ಶುದ್ಧಗೊಳಿಸುವ ಸ್ನಾನ ಎಂದು ಪರಿಗಣಿಸಲಾಗುತ್ತಿತ್ತು.[125][129] ತಮಿಳು ಹಾಗೂ ದಕ್ಷಿಣ ಭಾರತದ ಇತರೆ ಬ್ರಾಹ್ಮಣರು ತಾವು ದೈಹಿಕವಾಗಿ ಶುದ್ಧರಾಗಿದ್ದೇವೆಂದು ಸೂಚಿಸಲು 'ಮಡಿ ' ಎಂಬ ಪದ ಬಳಸುವರು. ಮಡಿಯಲ್ಲಿರಲು, ಬ್ರಾಹ್ಮಣರು ಇತ್ತೀಚೆಗೆ ತೊಳೆದು ಒಣಗಿಸಲಾದ ಶುದ್ಧ ವಸ್ತ್ರಗಳನ್ನು ಮಾತ್ರ ಧರಿಸಬೇಕು. ಮಡಿ ಯಲ್ಲಿ ಇಲ್ಲದಿರುವವರು ಈ ವಸ್ತ್ರಗಳನ್ನು ಮುಟ್ಟುವಂತಿಲ್ಲ.[129] ತಣ್ಣೀರು ಸ್ನಾನ ಮಾಡಿ ಅಂತಹ ವಸ್ತ್ರಗಳನ್ನು ಧರಿಸಿದ ನಂತರವೇ ಆ ವ್ಯಕ್ತಿಯು ಮಡಿ ಯಲ್ಲಿದ್ದಾರೆ ಎನ್ನಬಹುದು.[130] ಇಂದಿನ ಆಧುನಿಕ ಕಾಲದಲ್ಲೂ ಸಹ ಅಯ್ಯರ್ಗಳು ಯಾವುದೇ ಧಾರ್ಮಿಕ ಸಮಾರಂಭಗಳಲ್ಲಿ ಭಾಗವಹಿಸುವ ಮುಂಚೆ ಇಂತಹ ಮಡಿ ಪದ್ಧತಿಯನ್ನು ಅನುಸರಿಸುವರು.[125]
.
ಹಿಂದಿನ ಶತಮಾನದ ಆರಂಭದ ವರೆಗೆ, ಅಯ್ಯರ್ ಕುಟುಂಬದಲ್ಲಿ ವಿಧವೆಯರು ಮರುವಿವಾಹವಾಗುವಂತಿರಲಿಲ್ಲ.[133] ಒಂದೊಮ್ಮೆ ಆಕೆಯ ಪತಿ ನಿಧನವಾದ ನಂತರ, ಅಯ್ಯರ್ ಮಹಿಳೆಯು ತನ್ನ ತಲೆ ಬೋಳಿಸಿಕೊಳ್ಳಬೇಕಾಗಿತ್ತು.[134] ಆಕೆ ತನ್ನ ಹಣೆಯಿಂದ ಕುಂಕುಮ ವನ್ನು ಅಳಿಸಿ, ವಿಭೂತಿ ಬಳಿದುಕೊಳ್ಳಬೇಕಾಗಿತ್ತು. ಸುಧಾರಣೆಗಳ ಜಾರಿಯಿಂದಾಗಿ, ಇವೆಲ್ಲಾ ಪದ್ಧತಿಗಳನ್ನು ಹೆಚ್ಚಾಗಿ ಕೈಬಿಡಲಾಗಿದೆ.[135]
ಅಯ್ಯರ್ ಪುರುಷರು ಸಾಮಾನ್ಯವಾಗಿ ತಮ್ಮ ಸೊಂಟದಿಂದ ಪಾದದವರೆಗೂ ಆವರಿಸುವ ವೇಸ್ಟಿ ಗಳು ಅಥವಾ ಧೋತಿ ಉಡುವರು. ಧೋತಿಗಳು ಸಾಮಾನ್ಯವಾಗಿ ಹತ್ತಿ ಅಥವಾ ಕೆಲವೊಮ್ಮೆ ರೇಷ್ಮೆಯಿಂದ ತಯಾರಿಸಲಾಗಿರುತ್ತವೆ. ವೇಸ್ಟಿ ಗಳನ್ನು ವಿವಿಧ ಶೈಲಿಗಳಲ್ಲಿ ಉಡಲಾಗುತ್ತವೆ. ಮಾದರಿ ಬ್ರಾಹ್ಮಣ ಶೈಲಿಯಲ್ಲಿ ಉಡಲಾದ ಅವನ್ನು ಪಂಚಗಜ (ಸಂಸ್ಕೃತ ಮೂಲ ಪಂಚ (ಐದು) ಮತ್ತು ಗಜ (ಗಜ)) ಎನ್ನಲಾಗಿದೆ. ಈ ಪಂಚಗಜ ಗಳು ಐದು ಗಜ ಅಗಲವಿರುತ್ತವೆ. ಇದಕ್ಕೆ ತದ್ವಿರುದ್ಧವಾಗಿ, ದಿನವೂ ಉಡಲಾದ ವೇಸ್ಟಿ ಗಳು ಸುಮಾರು ನಾಲ್ಕರಿಂದ ಎಂಟು ಮೊಳ ಅಗಲವಿರುತ್ತವೆ. ಅವರು ಕೆಲವೊಮ್ಮ ತಮ್ಮ ಭುಜಗಳ ಮೇಲೆ ಅಂಗವಸ್ತ್ರ ಎಂಬ ಒಂಟಿ-ಬಟ್ಟೆ ಹೊದ್ದುಕೊಳ್ಳುವರು.(ದೇಹ ಮುಚ್ಚುವ ಬಟ್ಟೆ) ಆರಂಭ ಕಾಲದಲ್ಲಿ, ನೇಮನಿಷ್ಠೆ ಅನುಸರಿಸುವ ಅಯ್ಯರ್ ಪುರುಷರು ತಮ್ಮ ಸೊಂಟ ಅಥವಾ ಎದೆಯ ಮೇಲೆ ಜಿಂಕೆಯ ಅಥವಾ ಹುಲ್ಲಿನ ಹೆಣಿಗೆ ಧರಿಸುತ್ತಿದ್ದರು.[100] ಸಾಂಪ್ರದಾಯಿಕ ಅಯ್ಯರ್ ಮಹಿಳೆಯು ಮಡಿಸಾರ ಎಂಬ ಒಂಬತ್ತು ಗಜದ ಸೀರೆ ಉಡುವಳು.[136]
ಹಲವು ಶತಮಾನಗಳಿಂದಲೂ ಅಯ್ಯರ್ಗಳು ತಮ್ಮ ಕಲೆ ಮತ್ತು ವಿಜ್ಞಾನಗಳಲ್ಲಿ ಬಹಳಷ್ಟು ಆಸಕ್ತಿ ವಹಿಸಿದ್ದಾರೆ. ಭರತನಾಟ್ಯಂ ಎಂಬ ತಮಿಳುನಾಡಿನ ಶಾಸ್ತ್ರೀಯ ನೃತ್ಯರೂಪದ ಚಿರಸ್ಥಾಯಿ ಕಾರ್ಯವಾದ ಭರತನಾಟ್ಯ ಶಾಸ್ತ್ರವನ್ನು ಸಂರಕ್ಷಿಸುವ ಜವಬ್ದಾರಿ ಹೊತ್ತರು. ೨೦ನೆಯ ಶತಮಾನದ ಆರಂಭದಲ್ಲಿ, ನೃತ್ಯವನ್ನು ದೇವದಾಸಿಯರೊಂದಿಗೆ ಸಂಬಂಧಿಸಿದ ಒಂದು ಹೀನಸ್ಥಿತಿಯ ಕಲೆ ಎಂದು ಭಾವಿಸಲಾಗುತ್ತಿತ್ತು. ಆದರೆ, ಅವನತಿಯಲ್ಲಿದ್ದ ಈ ನೃತ್ಯಕಲೆಗೆ ಪುನಶ್ಚೇತನ ನೀಡಿದ ರುಕ್ಮಿಣಿ ದೇವಿ ಅರುಂಡೇಲ್ ನೃತ್ಯದ ಅಧ್ಯಯನ ಮತ್ತು ಅಭ್ಯಾಸ-ಪ್ರಯೋಗಗಳಲ್ಲಿ ಬ್ರಾಹ್ಮಣರು ಭಾಗವಹಿಸುವ ಕುರಿತು ಸಾಮಾಜಿಕ ಮತ್ತು ಜಾತೀಯ ಬಹಿಷ್ಕಾರವನ್ನು ತೆಗೆದುಹಾಕಿದರು.[137][138]
ಆದರೂ, ನೃತ್ಯಕ್ಕೆ ಹೋಲಿಸಿದರೆ, ಸಂಗೀತ ಕ್ಷೇತ್ರದಲ್ಲಿ ಅಯ್ಯರ್ಗಳ ಕೊಡುಗೆ ಬಹಳಷ್ಟು ಪ್ರಶಂಸಾರ್ಹವಾಗಿದೆ.[139][140] ೧೮ನೆಯ ಶತಮಾನದ ಕೊನೆಯಲ್ಲಿ, ಕರ್ನಾಟಕ ಸಂಗೀತ ತ್ರಯರು ಕೆಲವು ಅತ್ಯುತ್ತಮ ಸಂಗೀತರಚನೆಗಳನ್ನು ಮಾಡುವುದಕ್ಕೆ ಜವಾಬ್ದಾರರಾದರು. ಇಂದು, ಸಾಂಪ್ರದಾಯಿಕ ಸಂಗೀತ ಗಾಯನ ಹಾಗೂ ಭಾರತೀಯ ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯಕರಾದನಿತ್ಯಶ್ರೀ ಮಹಾದೇವನ್, ಉಷಾ ಉಥುಪ್, ಶಂಕರ್ ಮಹಾದೇವನ್, ಮಹಾಲಕ್ಷ್ಮಿ ಅಯ್ಯರ್, ಹಂಸಿಕಾ ಅಯ್ಯರ್ ಹಾಗೂ ನರೇಶ್ ಅಯ್ಯರ್ ಸೇರಿದಂತೆ ಬಹಳಷ್ಟು ಅಯ್ಯರ್ಗಳಿದ್ದಾರೆ. ನಾಟಕ, ಕಿರುಕಥೆ ಮತ್ತು ದೇವಾಲಯದ ವಾಸ್ತುಶೈಲಿಯಲ್ಲಿಯೂ ಅಯ್ಯರ್ಗಳು ಗಮನಾರ್ಹ ಕೊಡುಗೆ ನೀಡಿದ್ದಾರೆ. ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಆರ್. ಕೆ. ನಾರಾಯಣ್, ಆರ್. ಕೆ. ಲಕ್ಷ್ಮಣ್, ಸುಬ್ರಹ್ಮಣ್ಯ ಭಾರತಿ, ಕಲ್ಕಿ ಕೃಷ್ಣಮೂರ್ತಿ, ಉಲ್ಲೂರ್ ಪರಮೇಶ್ವರ ಅಯ್ಯರ್ ಮತ್ತು ಚೊ ರಾಮಸ್ವಾಮಿ ಸೇರಿದಂತೆ ಅಯ್ಯರ್ ಸಮುದಾಯದ ಬಹಳಷ್ಟು ಜನರು ಐಯರ್ ಸಮುದಾಯದ ಕೊಡುಗೆ. ಅವರು ತಮಿಳು ಭಾಷೆ ಮತ್ತು ಸಾಹಿತ್ಯಕ್ಕಾಗಿ ಬಹಳಷ್ಟು ಕೊಡುಗೆ ನೀಡಿದ್ದಾರೆ.[141][142]
ಅಯ್ಯರ್ಗಳದ್ದು ಕಟ್ಟುನಿಟ್ಟಾದ ಸಸ್ಯಾಹಾರವಾಗಿದ್ದು,[10][143] ಅಕ್ಕಿಯು ಲಕ್ಷಾಂತರ ದಕ್ಷಿಣ ಭಾರತೀಯರ ಮೂಲಭೂತ ಆಹಾರವಾಗಿದೆ. ಅಯ್ಯರ್ ಮನೆಗಳಲ್ಲಿ ಸಾರು, ಹುಳಿ ಇತ್ಯಾದಿಯಂತಹ ಸರ್ವೇಸಾಮಾನ್ಯ ಅಡುಗೆಗಳೊಂದಿಗೆ, ಸಸ್ಯಾಹಾರಿ ಉಪಖಾದ್ಯಗಳನ್ನೂ ಸಹ ಆಗಾಗ್ಗೆ ತಯಾರಿಸಲಾಗುತ್ತದೆ. ಮನೆಯಲ್ಲಿ ತಯಾರಿಸಲಾದ ತುಪ್ಪ ಈ ಆಹಾರಕ್ಕೆ ಮೂಲಭೂತ ಸೇರ್ಪಡೆಯಾಗಿದೆ. ಬಡಿಸಲಾದ ಅನ್ನ ಹಾಗೂ ಮಸೂರ ಬೇಳೆಯ ತೊವ್ವೆಯ ಮೇಲೆ ತುಪ್ಪ ಸುರಿದ ನಂತರವೇ ಸಾಂಪ್ರದಾಯಿಕ ಭೋಜನಕೂಟ ಆರಂಭವಾಗುತ್ತದೆ. ಆಹಾರವು ಬಹಳ ರುಚಿಕರವಾಗಿದ್ದರೂ, ದಕ್ಷಿಣ ಭಾರತೀಯ ಪಾಕಪದ್ಧತಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಸಂಬಾರ ಪದಾರ್ಥಗಳು ಮತ್ತು ಬಿಸಿಯ ಪ್ರಮಾಣವನ್ನು ಈ ಖಾದ್ಯಗಳಲ್ಲಿ ತ್ಯಜಿಸಲಾಗಿರುತ್ತದೆ. ಅಯ್ಯರ್ಗಳು ಮೊಸರುಪ್ರಿಯರೆಂದು ಹೆಸರಾಗಿದ್ದಾರೆ. ದೋಸೆ, ಇಡ್ಲಿ ಇತ್ಯಾದಿಯಂತಹ ದಕ್ಷಿಣ ಭಾರತದ ಇತರೆ ಖಾದ್ಯಗಳೂ ಸಹ ಅಯ್ಯರ್ಗಳಿಗೆ ಬಹಳ ಇಷ್ಟವಾದದ್ದು. ಪಾನೀಯಗಳಲ್ಲಿ ಕಾಫಿ ಹಾಗೂ ಆಹಾರ ಖಾದ್ಯಗಳಲ್ಲಿ ಮೊಸರು ಐಯರ್ ಆಹಾರ ಪಟ್ಟಿಯಲ್ಲಿ ಅತ್ಯವಶ್ಯಕ ಭಾಗವಾಗಿದೆ.
ಅನ್ನಶುದ್ಧಿ ಎಂಬ ಅನ್ನವನ್ನು ಶುದ್ಧಿಗೊಳಿಸುವ ಮತಕ್ರಿಯಾವಿಧಿ ಆಚರಣೆ ಮುಗಿಸಿದ ನಂತರವೇ ಆಹಾರವನ್ನು ಸೇವಿಸಲಾಗುತ್ತದೆ.[128]
ಪುರಾತನ ಕಾಲದಲ್ಲಿ, ಅಯ್ಯರ್ಗಳು, ಅಯ್ಯಂಗಾರ್ಗಳು ಮತ್ತು ಇತರೆ ತಮಿಳು ಬ್ರಾಹ್ಮಣರೊಂದಿಗೆ, ಗ್ರಾಮಗಳಲ್ಲಿನ ವಿಶಿಷ್ಟ ಬ್ರಾಹ್ಮಣ ವಸತಿಗಳಾದ ಅಗ್ರಹಾರ ದಲ್ಲಿ ವಾಸಿಸುತ್ತಿದ್ದರು. ಸಂಸ್ಕೃತದಲ್ಲಿ ಅಗರಂ ಎಂದರೆ ತುದಿ ಅಥವಾ ಕೊನೆ , ಹರಮ್ ಎಂದರೆ ಶಿವ ಎಂದರ್ಥ. ಶಿವ ಮತ್ತು ವಿಷ್ಣು ದೇವಾಲಯಗಳು ಸಾಮಾನ್ಯವಾಗಿ ಅಗ್ರಹಾರ ದ ಕೊನೆಯಲ್ಲಿವೆ. ಇಂತಹ ಹಲವು ಅಗ್ರಹಾರಗಳ ಬಳಿ ಬಹಳ ವೇಗವಾಗಿ ಹರಿಯುವ ಝರಿ ಅಥವಾ ನದಿಯುಂಟು.[144] ಒಂದು ಮಾದರಿಯ ಅಗ್ರಹಾರ ದೇವಾಲಯ ಮತ್ತು ಅದರ ಪಕ್ಕ ಹಾದುಹೋಗುವ ರಸ್ತೆಯನ್ನು ಹೊಂದಿದೆ. ರಸ್ತೆಯ ಎರಡೂ ಬದಿಯಲ್ಲಿನ ಮನೆಗಳಲ್ಲಿ ಅವಿಭಾಜ್ಯ ಕುಟುಂಬ ವ್ಯವಸ್ಥೆ ಪಾಲಿಸುತ್ತಿದ್ದ ಬ್ರಾಹ್ಮಣ ಕುಟುಂಬಗಳಿದ್ದವು. ಎಲ್ಲಾ ಮನೆಗಳೂ ಒಂದೇ ತರಹದ ವಿನ್ಯಾಸ ಮತ್ತು ವಾಸ್ತುಶೈಲಿ ಹೊಂದಿದ್ದವು. ಆದರೆ ಗಾತ್ರದಲ್ಲಿ ವ್ಯತ್ಯಾಸಗಳಿದ್ದವು.[145][146] ಬ್ರಿಟಿಷರ ಆಗಮನ ಮತ್ತು ಕೈಗಾರಿಕಾ ಕ್ರಾಂತಿಯ ಆರಂಭದೊಂದಿಗೆ, ಅಯ್ಯರ್ಗಳು ತಮ್ಮ ಜೀವನದ ದಾರಿ ಕಂಡುಕೊಳ್ಳಲು ನಗರಗಳತ್ತ ವಲಸೆ ಹೋಗಲಾರಂಭಿಸಿದರು. ೧೮೦೦ರ ದಶಕದ ಅಪರಾರ್ಧದಲ್ಲಿ, ಅಯ್ಯರ್ ಜನರು ಹೆಚ್ಚಿನ ಸಂಖ್ಯೆಗಳಲ್ಲಿ ಪಟ್ಟಣಗಳು ಮತ್ತು ನಗರಗಳಿಗೆ ಸ್ಥಳಾಂತರಗೊಂಡು, ಅಲ್ಲಿ ಪ್ರಾಂತೀಯ ಮತ್ತು ನ್ಯಾಯಾಂಗ ಆಡಳಿತಗಳಲ್ಲಿ ಲಾಭದಾಯಕ ನೌಕರಿ ಮಾಡಲಾರಂಭಿಸಿದರು. ಇದರಿಂದಾಗಿ, ಗ್ರಾಮಗಳಲ್ಲಿರುವ ಅಗ್ರಹಾರ ಗಳನ್ನು ಕ್ರಮೇಣ ತೊರೆಯಲಾಯಿತು.[145][146][147][148][149] ಆದರೆ, ಇಂದಿಗೂ ಸಹ, ಕೆಲವು ಅಗ್ರಹಾರಗಳಿವೆ. ಅಲ್ಲಿ ಸಾಂಪ್ರದಾಯಿಕ ಅಯ್ಯರ್ ಕುಟುಂಬಗಳು ವಾಸಿಸುತ್ತಿವೆ. ಯಾವುದೇ ಅಯ್ಯರ್ ನಿವಾಸದಲ್ಲಿ, ಜನರು ಮನೆ ಪ್ರವೇಶಿಸಿದೊಡನೆ, ಮೊದಲು ಅವರು ನೀರಿನಲ್ಲಿ ಕಾಲು ತೊಳೆದುಕೊಳ್ಳುವರು.[150][151]
ಭಾರತ ಹಾಗೂ ಇತರೆಡೆ ವಾಸಿಸುವ ಬಹಳಷ್ಟು ಅಯ್ಯರ್ಗಳ ಮಾತೃಭಾಷೆ ತಮಿಳು. ಆದರೂ, ಅಯ್ಯರ್ಗಳು ತಮ್ಮ ಸಮುದಾಯಕ್ಕೆ ವಿಶಿಷ್ಟವಾದ ತಮಿಳು ಭಾಷೆ ಮಾತನಾಡುವರು.[152][153][154] ತಮಿಳಿನ ಈ ಉಪಭಾಷೆಯನ್ನು ಬ್ರಾಹ್ಮಿಕ್ ಅಥವಾ ಬ್ರಾಹ್ಮಣ ತಮಿಳು ಎನ್ನಲಾಗಿದೆ. ಬ್ರಾಹ್ಮಣ ತಮಿಳು ಭಾಷೆಯ ಅತಿಯಾದ ಸಂಸ್ಕೃತೀಕರಣ ಹಾಗೂ ಸಂಸ್ಕೃತ ಶಬ್ದಸಂಪತ್ತು ವ್ಯಾಪಕ ಬಳಕೆಯಾಗಿದ್ದ ಕಾರಣ, ತಮಿಳು ರಾಷ್ಟ್ರೀಯತಾವಾದಿಗಳಿಂದ ಟೀಕೆಗೆ ಗುರಿಯಾಗಿದೆ.[155] ದೇಶದ ಸ್ವಾತಂತ್ರ್ಯಪೂರ್ವ ಕಾಲದಲ್ಲಿ, ಬ್ರಾಹ್ಮಣ ತಮಿಳು ವಿವಿಧ ತಮಿಳು ಸಮುದಾಯಗಳ ನಡುವೆ ಅಂತರ್ಜಾತಿ ಸಂವಹನಕ್ಕೆ ಸಂಪರ್ಕ ಭಾಷೆಯಾಗಿತ್ತು.[156] ಆದರೆ ಸ್ವತಃ ಬ್ರಾಹ್ಮಣರೇ ಈ ಭಾಷೆಯನ್ನು ತ್ಯಜಿಸಿ, ಪ್ರಾದೇಶಿಕ ತಮಿಳು ಬಾಷೆ ಮಾತನಾಡಲಾರಂಭಿಸಿದರು.[156] ಪಾಲಕ್ಕಾಡ್ ಅಯ್ಯರ್ಗಳು ತಮ್ಮದೇ ಆದ ವಿಶಿಷ್ಟ ಉಪ-ಭಾಷೆ ಮಾತನಾಡುವರು.[157] ಪಾಲಕ್ಕಾಡ್ ತಮಿಳಿನಲ್ಲಿ ಮಳಯಾಲಂ ಮೂಲದ ಬಹಳಷ್ಟು ಪದಗಳಿವೆ.[157] ಸಂಕೇತಿ ಅಯ್ಯರ್ಗಳು, ಕನ್ನಡ, ತಮಿಳು ಮತ್ತು ಸಂಸ್ಕೃತ ಭಾಷೆಗಳಿಂದ ಎರವಲು ಪಡೆದ ಪದಗಳನ್ನು ಬಳಸುವ ಸಂಕೇತಿ ಭಾಷೆ ಮಾತನಾಡುವರು. ಅಯ್ಯಂಗಾರರು ಅಯ್ಯಂಗಾರ್ ತಮಿಳು ಎಂಬ ಪ್ರತ್ಯೇಕ ಭಾಷೆ ಮಾತನಾಡುವರು.[152] ಅಯ್ಯಂಗಾರ್ ಭಾಷೆಯು ಒಂದು ಆಡುಭಾಷೆಯೇ ಅಲ್ಲ, ಅದು ಬ್ರಾಹ್ಮಣ ತಮಿಳು ಭಾಷೆಯ ಕೇವಲ ಒಂದು ಉಪ ಆಡುಭಾಷೆಯಾಗಿದೆ ಎಂದು ಕೆಲವರು ಪರಿಗಣಿಸಿದ್ದಾರೆ.
Italic text== ಇಂದಿನ ಅಯ್ಯರ್ಗಳು == ಮುಂಚೆ, ಅಯ್ಯರ್ಗಳ ಸಾಂಪ್ರದಾಯಿಕ ನೌಕರಿಗಳ ಪೈಕಿ ದೇವಾಲಯಗಳಲ್ಲಿ ಸೇವೆ ಸಲ್ಲಿಸುವುದು ಅಥವಾ ಹಿಂದೂ ಧಾರ್ಮಿಕ ಕ್ರಿಯಾವಿಧಿಗಳನ್ನು ಮಾಡುವುದು ಪ್ರಮುಖ ಕಸುಬುಗಳಾಗಿದ್ದವು. ಆದರೆ ಪ್ರಾಚೀನ ಕಾಲದಿಂದಲೂ, ಅಯ್ಯರ್ಗಳು ಇನ್ನಷ್ಟು ಧಾರ್ಮಿಕೇತರ ಕಸುಬುಗಳಲ್ಲಿ ತೊಡಗುವುದಕ್ಕೆ ಅವರಿಗೆ ನಿಷೇಧವಿರಲಿಲ್ಲ. ಪ್ರಾಚೀನ ಕಾಲದ ತಮಿಳು ರಾಜರು ಅಯ್ಯರ್ಗಳನ್ನು ಆಡಳಿತಗಾರ ಹುದ್ದೆಗಳಿಗೆ ಸೇರಿಸಿಕೊಳ್ಳುತ್ತಿದ್ದರು. ಮಧ್ಯಯುಗೀಯ ಚೋಳರ ಆಳ್ವಿಕೆಯ ಕಾಲದಲ್ಲಿ, ಅವರ ಸಾಮ್ರಾಜ್ಯದಲ್ಲಿ ಭೂಸೇನೆಯ ಪ್ರಮುಖ ಸೇನಾಧಿಪತಿಗಳಾಗಿಯೂ ಸೇವೆ ಸಲ್ಲಿಸಿದ್ದುಂಟು.
ತಮ್ಮ ಆರಂಭಿಕ ಹುದ್ದೆಗಳ ಜೊತೆಗೆ, ಅಯ್ಯರ್ಗಳು ಇಂದು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.[158] ಭಾರತದ ಮೂವರು ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಸರ್ C. V. ರಾಮನ್, ಸುಬ್ರಹ್ಮಣ್ಯನ್ ಚಂದ್ರಶೇಖರ್ ಹಾಗೂ ವೆಂಕಟರಾಮನ್ ರಾಮಕೃಷ್ಣನ್ ಈ ಮೂವರು ಅಯ್ಯರ್ ಸಮುದಾಯದವರು.[159] ಈ ಕಾಲದಲ್ಲಿ ತಾವೇ ಸ್ವಪ್ರೇರಣೆಯಿಂದ ಸಾಂಪ್ರದಾಯಿಕ ಪೌರೋಹಿತ್ಯ ಹುದ್ದೆ ಒಪ್ಪಿಕೊಳ್ಳುವ ಅಯ್ಯರ್ಗಳು ಶೇಖಡವಾರು ಕಡಿಮೆ ಪ್ರಮಾಣದಲ್ಲಿದ್ದಾರೆ.[123]
ಪ್ರಾಚೀನ ಕಾಲದಿಂದಲೂ, ಅರ್ಚಕರ ದರ್ಜೆಯ ಸದಸ್ಯರಾಗಿದ್ದ ಅಯ್ಯರ್ಗಳು ತಮಿಳುನಾಡಿನ ಶೈಕ್ಷಣಿಕ, ಧಾರ್ಮಿಕ ಮತ್ತು ಸಾಹಿತ್ಯ ಸಂಸ್ಥೆಗಳಲ್ಲಿ ಹೆಚ್ಚು ಕಡಿಮೆ ಸಂಪೂರ್ಣ ಪ್ರಾಬಲ್ಯ ಮೆರೆದೆರು. [160] ಬ್ರಿಟಿಷ್ ಆಳ್ವಿಕೆಯುದ್ದಕ್ಕೂ ಅವರ ಪ್ರಾಬಲ್ಯ ಮುಂದುವರೆಯಿತು. ಇಂಗ್ಲಿಷ್ ಭಾಷೆ ಮತ್ತು ಉತ್ತಮ ಶಿಕ್ಷಣದ ಜ್ಞಾನವನ್ನು ರಾಜಕೀಯ, ಆಡಳಿತದ, ನ್ಯಾಯಾಂಗದ ಹಾಗೂ ಬೌದ್ಧಿಕ ಕ್ಷೇತ್ರಗಳಲ್ಲಿ ಪ್ರಾಬಲ್ಯ ಮೆರೆಯಲು ಬಳಸಿಕೊಂಡರು. ೧೯೪೭ರಲ್ಲಿ ಭಾರತ ಸ್ವಾತಂತ್ರ್ಯ ಪಡೆದಾಗ, ಅಯ್ಯರ್ಗಳು ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ತಮ್ಮ ಬಿಗಿ ಹಿಡಿತವನ್ನು ಉಳಿಸಿಕೊಳ್ಳಲು ಯತ್ನಿಸಿದರು. ಇಂತಹ ಪರಿಸ್ಥಿತಿಯು ತಮಿಳುನಾಡಿನಲ್ಲಿ ಇತರೆ ಜಾತಿಗಳ ಸಿಟ್ಟಿಗೆ ಕಾರಣವಾಯಿತು. ಈ ವಾತಾವರಣದ ಫಲಶ್ರುತಿಯೇ "ಬ್ರಾಹ್ಮಣೇತರ" ಚಳವಳಿ ಹಾಗೂ ಜಸ್ಟಿಸ್ ಪಾರ್ಟಿ (ನ್ಯಾಯ ಪಕ್ಷ) ಎಂಬ ರಾಜಕೀಯ ಪಕ್ಷದ ರಚನೆಯಾಯಿತು.[161] ೧೯೪೦ರ ದಶಕದಲ್ಲಿ ಜಸ್ಟಿಸ್ ಪಾರ್ಟಿಯ ಅಧ್ಯಕ್ಷರಾದ ಪೆರಿಯರ್, ಪಕ್ಷದ ಹೆಸರನ್ನು ದ್ರಾವಿಡ ಕಳಗಮ್ ಎಂದು ಬದಲಾಯಿಸಿದರು ಹಾಗೂ ತಮಿಳು ಬ್ರಾಹ್ಮಣರೆಲ್ಲರೂ ಆರ್ಯನ್ನರು ಎಂಬ ಅಭಿಪ್ರಾಯ ರೂಪಿಸಿದರು. ರಾಬರ್ಟ್ ಕ್ಯಾಲ್ಡ್ವೆಲ್ರ ಬರಹಗಳ ಆಧಾರದ ಮೇಲೆ ತಮಿಳರಲ್ಲಿ ಬಹುತೇಕ ಜನರು ದ್ರಾವಿಡ ಮೂಲದವರು ಎಂಬುದಕ್ಕೆ ಇದು ವಿರುದ್ಧವಾಗಿತ್ತು.[162] ಇದಾದ ನಂತರ ಬ್ರಾಹ್ಮಣ-ವಿರೋಧಿ ಅಪಪ್ರಚಾರ ಮತ್ತು ರಾಜಾಜಿ ಸರ್ಕಾರದ ಜನಪ್ರಿಯತೆ ಕುಂಠಿತದಿಂದಾಗಿ ತಮಿಳು ಬ್ರಾಹ್ಮಣ ಸಮುದಾಯದ ಮೇಲೆ ಅಳಿಸಲಾಗದ ಚುಕ್ಕೆ ಬಿದ್ದು, ಅವರ ರಾಜಕೀಯ ಆಕಾಂಕ್ಷೆಗಳು ಅಂತ್ಯಗೊಂಡಿತು. ೧೯೬೦ರ ದಶಕದಲ್ಲಿ, ದ್ರಾವಿಡ ಮುನ್ನೇತ್ರ ಕಳಗಮ್ (ಸ್ಥೂಲ ಅರ್ಥ - ದ್ರಾವಿಡರ ಪ್ರಗತಿಪರ ಸಂಘಟನೆ) ಹಾಗೂ ಇದರ ಉಪಗುಂಪುಗಳು ಈ ವೇದಿಕೆಯ ಮೇಲೆ ರಾಜಕೀಯ ನೆಲೆ ಸ್ಥಾಪಿಸಿ, ರಾಜ್ಯ ಸಚಿವಾಲಯಗಳನ್ನು ರೂಪಿಸಿತು. ಈ ಮೂಲಕ ಅಯ್ಯರ್ಗಳು ಪಕ್ಷದಲ್ಲಿ ಪ್ರಮುಖ ಸ್ಥಾನಗಳಲ್ಲಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹೊಂದಿದ್ದ ನಿಯಂತ್ರಣವು ತಪ್ಪಿಹೋಯಿತು. ಇಂದು, ಕೆಲವೇ ಕೆಲವು ಅಪವಾದಗಳನ್ನು ಹೊರತುಪಡಿಸಿ, ಅಯ್ಯರ್ಗಳು ರಾಜಕೀಯ ಕ್ಷೇತ್ರದಿಂದ ಅಕ್ಷರಶಃ ಅಳಿದುಹೋಗಿದ್ದಾರೆ. [163][164][165][166][167] [168][169][170] ಬ್ರಾಹ್ಮಣರ ಧಾರ್ಮಿಕ ಪ್ರಾಬಲ್ಯವನ್ನು ತಡೆಗಟ್ಟಲೆಂದು, ತಮಿಳುನಾಡು ಸರ್ಕಾರವು ೨೦೦೬ರಲ್ಲಿ ಹಿಂದೂ ದೇವಾಲಯಗಳಲ್ಲಿ ಬ್ರಾಹ್ಮಣೇತರ ಪೂಜಾರಿಗಳನ್ನು ನೇಮಿಸಲು ನಿರ್ಧರಿಸಿತು.[171] ಇದರಿಂದ ಭಾರೀ ವಿವಾದ ಸೃಷ್ಟಿಯಾಯಿತು. ತಮಿಳುನಾಡು ಸರ್ಕಾರವು ನೇಮಿಸಿದ, ತಮಿಳು ಹಳ್ಳಿಗವಿತೆ ಓದುವ ಒಬ್ಬ ಬ್ರಾಹ್ಮಣೇತರ ಒಡುವರ್ ವ್ಯಕ್ತಿ ೨೦೦೮ರ ಮಾರ್ಚ್ ತಿಂಗಳಲ್ಲಿ ಚಿದಂಬರಂ ನಟರಾಜ ದೇವಾಲಯದ ಗರ್ಭಗುಡಿ ಪ್ರವೇಶಿಸಲು ಯತ್ನಿಸಿದಾಗ ಹಿಂಸಾಚಾರ ಭುಗಿಲೆದ್ದಿತು.[172]
ಅಯ್ಯರ್ಗಳ ಪರಂಪರೆಯಲ್ಲಿ ಬ್ರಾಹ್ಮಣೇತರು ಹಾಗೂ ಇತರರಿಂದ ಜನಾಂಗೀಯತೆಯ ಆರೋಪಗಳನ್ನು ಎದುರಿಸಬೇಕಾಯಿತು. ಅಯ್ಯರ್ಗಳೂ ಸಹ ಬ್ರಾಹ್ಮಣೇತರರ ವಿರುದ್ಧ ಇದೇ ತರಹದ ಆರೋಪ ಮಾಡಿದ್ದುಂಟು.
It was found that prior to Independence, the Pallars were never allowed to enter the residential areas of the caste Hindus particularly of the Brahmins. Whenever a Brahmin came out of his house, no Scheduled Caste person was expected to come in his vicinity as it would pollute his sanctity and if it happened by mistake, he would go back home cursing the latter. He would come out once again only after taking a bath and making sure that no such thing would be repeated.
However, as a mark of protest a few Pallars of this village deliberately used to appear before the Brahmin again and again. By doing so the Pallars forced the Brahmin to get back home once again to take a bath drawing water from deep well.[173]
ಮದ್ರಾಸ್ ಉಚ್ಚನ್ಯಾಯಾಲಯದ ಮೊಟ್ಟಮೊದಲ ಭಾರತೀಯ ನ್ಯಾಯಾಧೀಶ ಸರ್ ಟಿ. ಮುತ್ತುಸ್ವಾಮಿ ಅಯ್ಯರ್ ಒಮ್ಮೆ ವಿವಾದಾತ್ಮಕ ಜಾತೀಯ ಪ್ರತಿಕ್ರಿಯೆ ನೀಡಿದ್ದರು. ಮದ್ರಾಸ್ ಉಚ್ಚನ್ಯಾಯಾಲಯದ ಮೊಟ್ಟಮೊದಲ ಭಾರತೀಯ ನ್ಯಾಯಾಧೀಶ ಸರ್ ಟಿ. ಮುತ್ತುಸ್ವಾಮಿ ಅಯ್ಯರ್ ಒಮ್ಮೆ ವಿವಾದಾತ್ಮಕ ಜಾತೀಯ ಪ್ರತಿಕ್ರಿಯೆ ನೀಡಿದ್ದರು.
Hindu temples were neither founded nor are kept up for the benefit of Mahomedans, outcastes and others who are outside the scope of it[174]
ಬ್ರಾಹ್ಮಣರಿಂದ ಕುಂದುಕೊರತೆಗಳು ಮತ್ತು ಭೇದಭಾವಗಳ ಪ್ರಸಂಗಗಳು ದ್ರಾವಿಡ ಚಳುವಳಿಯನ್ನು ಉದ್ದೀಪಿಸಿದವು ಎಂದು ನಂಬಲಾಗಿದೆ.[161] ೨೦ನೆಯ ಶತಮಾನದ ಆರಂಭದಲ್ಲಿ ಪಾಶ್ಚಾತ್ಯ ಶಿಕ್ಷಣ ಮತ್ತು ಕಲ್ಪನೆಗಳು ಭಾರತದ ಮೇಲೆ ತ್ವರಿತ ಪ್ರಭಾವ ಬೀರುತ್ತಿದ್ದ ಕಾರಣ, ಬ್ರಾಹ್ಮಣೇತರರಲ್ಲಿ ಜಾಗ್ರತೆಯ ಅಲೆಯೆದ್ದಿತು. ನ್ಯಾಯಯುತವಾಗಿ ತಮಗೆ ಸೇರಬೇಕಿದ್ದ ಹಕ್ಕುಗಳನ್ನು ನಿರಾಕರಿಸಲಾಗಿದೆ ಎಂದು ಅವರು ಭಾವಿಸಿದರು.[161] ಇದರಿಂದಾಗಿ ಬ್ರಾಹ್ಮಣೇತರರು ಹೋರಾಟ ನಡೆಸಿ, 1916ರಲ್ಲಿ ಜಸ್ಟಿಸ್ ಪಾರ್ಟಿ ಎಂಬ ರಾಜಕೀಯ ಪಕ್ಷ ಸಂಘಟಿಸಿದರು. ನಂತರ ಇದು ದ್ರಾವಿಡರ ಕಳಗಂ ಎಂದಾಯಿತು. ಹಿಂದೂ-ವಿರೋಧಿ ಮತ್ತು ಬ್ರಾಹ್ಮಣ-ವಿರೋಧಿ ಭಾವೋದ್ವೇಗದ ಅಪಪ್ರಚಾರದ ಲಾಭ ಪಡೆದು ಬ್ರಾಹ್ಮಣರನ್ನು ಅವರ ಪ್ರಭಾವೀ ಸ್ಥಾನಮಾನಗಳಿಂದ ಕೆಳಗಳಿಸುವುದು ಜಸ್ಟಿಸ್ ಪಾರ್ಟಿಯ ಮೂಲ ತತ್ತ್ವವಾಗಿತ್ತು. ಹಂತ-ಹಂತವಾಗಿ, ಬ್ರಾಹ್ಮಣೇತರರು ಪ್ರತಿಯೊಂದು ಕ್ಷೇತ್ರದಲ್ಲೂ ಬ್ರಾಹ್ಮಣರನ್ನು ಹಿಂದಿಕ್ಕಿ, ಶಿಕ್ಷಣ ಮತ್ತು ಆಡಳಿತ ಸೇವೆಗಳಲ್ಲಿ ಬ್ರಾಹ್ಮಣರು ಹಿಂದೆ ಹೊಂದಿದ್ದ ಏಕಸ್ವಾಮ್ಯತೆಯನ್ನು ನಾಶಗೊಳಿಸಿದರು.[175] ವಿವಿಧ ಸೇವಾ ಕ್ಷೇತ್ರಗಳಲ್ಲಿ ಬ್ರಾಹ್ಮಣರ ಏಕಸ್ವಾಮ್ಯತೆ ನಾಶಗೊಂಡು, ಇತರೆ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ಪರಿಚಯಿಸಿದರೂ ಸಹ, ಬ್ರಾಹ್ಮಣ-ವಿರೋಧಿ ಭಾವನೆಗಳು ಕುಂಠಿತವಾಗಲಿಲ್ಲ. ಇದಕ್ಕೆ ವಿರುದ್ಧವಾಗಿ, ಬ್ರಾಹ್ಮಣ ವಿರೋಧಿ ಭಾವನೆಗಳನ್ನು ರಾಜಕಾರಣಿಗಳು ಪೂರ್ಣವಾಗಿ ಸ್ವಪ್ರಯೋಜನಕ್ಕೆ ಬಳಸಿಕೊಂಡರು. ಬ್ರಾಹ್ಮಣ-ವಿರೋಧಿ ವಾಗ್ದಾಳಿ ನಡೆಸಿ, ಬ್ರಾಹ್ಮಣೇತರ ಮತದಾರರ ಮತಗಳನ್ನು ಕಬಳಿಸಿದರು.[176][177] ಕಾಲಾನಂತರದಲ್ಲಿ, ಇದು ಎಂತಹ ಮಟ್ಟಕ್ಕೆ ತಲುಪಿತ್ತು ಎಂದರೆ, ದ್ರಾವಿಡ ಚಳುವಳಿಯ ಮುಂಚೂಣಿಯಲ್ಲಿದ್ದವರೇ ಅನ್ಯಾಯವೆಂದು ಕೂಗಿದರು. ಅವಕಾಶಗಳಿಂದ ವಂಚಿತರಾದ ತಮಿಳು ಬ್ರಾಹ್ಮಣರು ಸಾಮೂಹಿಕವಾಗಿ ಜೀವನೋಪಾಯಕ್ಕಾಗಿ ಭಾರತದ ಇತರೆ ರಾಜ್ಯಗಳು ಹಾಗೂ ವಿದೇಶಗಳಿಗೆ ವಲಸೆ ಹೋಗಲಾರಂಭಿಸಿದರು.[11] ಪದೇ ಪದೇ ಬ್ರಾಹ್ಮಣರ ವಿರುದ್ಧದ ಜಾತೀಯತೆ ಮತ್ತು ಜನಾಂಗ ಭೇದನೀತಿಯ ಆರೋಪಗಳು ಕೇಳಿಬಂದವು ಸ್ವಾತಂತ್ರ್ಯ-ಪೂರ್ವ ದಶಕಗಳಲ್ಲಿ ಕೆಳಜಾತಿಯ ಜನರು ಬ್ರಾಹ್ಮಣರ ವಿರುದ್ಧ ಮಾಡುತ್ತಿದ್ದ ಆರೋಪಗಳ ರೀತಿಯಲ್ಲಿತ್ತು. ಆದರೂ, ಕೆಲವು ತಮಿಳು ಬ್ರಾಹ್ಮಣ ಇತಿಹಾಸಜ್ಞರು, ಬ್ರಾಹ್ಮಣ ದೌರ್ಜನ್ಯಗಳ ಪರಿಕಲ್ಪನೆಯನ್ನು ಕೇವಲ ಕಟ್ಟುಕಥೆ ಎಂದು ತಳ್ಳಿ ಹಾಕಿದರು. ತಮಿಳು ಬ್ರಾಹ್ಮಣರ ವಿರುದ್ಧದ ಜಾತೀಯತೆಯ ಆರೋಪಗಳು ಉತ್ಪ್ರೇಕ್ಷೆಯಿಂದ ಕೂಡಿದ್ದು, ದ್ರಾವಿಡ ಕಳಗಂ ಬೆಳವಣಿಗೆಗೆ ಮುಂಚಿನ ಕಾಲದಲ್ಲಿಯೂ, ತಮಿಳು ಬ್ರಾಹ್ಮಣ ಸಮಾಜದ ಗಮನೀಯ ಭಾಗವು ಉದಾರವಾದಿಗಳು ಮತ್ತು ಜಾತೀಯತೆ ವಿರೋಧಿಗಳು ಎಂದು ಅವರು ವಾದಿಸಿದ್ದಾರೆ. ರಾಜನ ಪ್ರಾಂತ್ಯ ತಿರುವಾಂಕೂರಿನಲ್ಲಿ ಅನುಮೋದಿಸಲಾದ ಮಂದಿರ ಪ್ರವೇಶ ಘೋಷಣೆ ಯು ಎಲ್ಲಾ ಜಾತಿಗಳ ಜನರಿಗೂ ಹಿಂದೂ ದೇವಾಲಯಗಳನ್ನು ಪ್ರವೇಶಿಸಲು ಅನುಮತಿ ನೀಡಿತು. ಅಯ್ಯರ್ ಸಮುದಾಯದವರಾದ ತಿರುವಾಂಕೂರಿನ ದಿವಾನ್ ಸರ್. ಸಿ. ಪಿ. ರಾಮಸ್ವಾಮಿ ಅಯ್ಯರ್ಪ್ರಯತ್ನಗಳಿಂದಾಗಿ ಇದು ಸಾಧ್ಯವಾಯಿತು.[178] ಬ್ರಾಹ್ಮಣ-ವಿರೋಧಿ ಚಳುವಳಿಯು ನಿರೀಕ್ಷಿತ ಮಟ್ಟಕ್ಕೆ ಯಶಸ್ವಿಯಾಗಿಲ್ಲ, ದಲಿತರ ವಿರುದ್ಧ ಮುಂಚಿನ ರೀತಿಯಲ್ಲಿ ಭೇದಭಾವವಿದೆ ಎಂದು ದಲಿತ ಮುಖಂಡ ಮತ್ತು ಪುದಿಯ ತಮಿಳಗಂ ರಾಜಕೀಯ ಪಕ್ಷದ ಸಂಸ್ಥಾಪಕ ಡಾ. ಕೃಷ್ಣಸ್ವಾಮಿ ಒಪ್ಪಿಕೊಂಡಿದ್ದಾರೆ.
So many movements have failed. In Tamil Nadu there was a movement in the name of anti-Brahmanism under the leadership of Periyar. It attracted Dalits, but after 30 years of power, the Dalits understand that they are as badly-off - or worse-off - as they were under the Brahmans. Under Dravidian rule, they have been attacked and killed, their due share in government service is not given, they are not allowed to rise.[179]
ಅಯ್ಯರ್ಗಳು ಸಂಸ್ಕೃತವಾದಿಗಳಾಗಿದ್ದು, ತಮಿಳು ಭಾಷೆ, ಸಂಸ್ಕೃತಿ ಮತ್ತು ನಾಗರಿಕತೆಯ ವಿರುದ್ಧ ವಿಕೃತ ಹಾಗೂ ಕಡೆಗಣಿಸುವ ಧೋರಣೆಯನ್ನು ತಾಳಿದ್ದಾರೆಂದು ಅಯ್ಯರ್ಗಳ ವಿರುದ್ಧ ಮತ್ತೊಂದು ಆರೋಪವಾಗಿದೆ.[180][181] ಅದರೂ, ತಮಿಳು ಸಾಹಿತ್ಯದ ವಿಸ್ತಾರ ಅಧ್ಯಯನವು ಈ ಆರೋಪವನ್ನು ನಿರಾಧಾರ ಎಂದು ಸಾಬೀತುಪಡಿಸಿದೆ.[182] ಪ್ರಸಿದ್ಧ ದ್ರಾವಿಡ ಶಾಸ್ತ್ರಜ್ಞ ಕಾಮಿಲ್ ಜ್ವೆಲೆಬಿಲ್ ಪ್ರಕಟಿಸಿದ ತಮ್ಮ ಕೃತಿ ಕಂಪ್ಯಾನಿಯನ್ ಸ್ಟಡೀಸ್ ಟು ದಿ ಹಿಸ್ಟರಿ ಆಫ್ ತಮಿಳ್ ಲಿಟರೇಚರ್ ನಲ್ಲಿ, 'ಮಧ್ಯಯುಗೀಯ ಮತ್ತು ಮಧ್ಯಯುಗದ ನಂತರದ ಕಾಲದಲ್ಲಿ ತಮಿಳು ನಾಗರಿಕತೆ ಮತ್ತು ಸಂಸ್ಕೃತಿಯ ಅವನತಿಗೆ ಉತ್ತರಿಸುವುದರಲ್ಲಿ ಬ್ರಾಹ್ಮಣನನ್ನು ಹರಕೆಯ ಕುರಿಯಾಗಿ ಆಯ್ಕೆ ಮಾಡಲಾಯಿತು' ಎಂದು ಹೇಳಿದ್ದಾರೆ.[183][184] ಅಗತಿಯಾರ್ (ಸಾಮಾನ್ಯವಾಗಿ ಪುರಾತನ ವೈದಿಕ ಋಷಿ ಅಗಸ್ತ್ಯರ ಜತೆ ಗುರುತಿಸಲಾಗಿದೆ) ತಮಿಳು ಭಾಷೆ ವ್ಯಾಕರಣದ ಮೊದಲ ನಿಯಮಗಳನ್ನು ಸಂಗ್ರಹಿಸಿದ ಗೌರವಕ್ಕೆ ಪಾತ್ರರಾಗಿದ್ದಾರೆ.[185] ತೋಳ್ಕಪ್ಪಿಯಂ ಎಂಬ ತಮಿಳು ಭಾಷೆಯ ಅತಿ ಪ್ರಾಚೀನ ಸಾಹಿತ್ಯ ಕೃತಿಯ ಕರ್ತೃ ತೋಳ್ಕಪ್ಪಿಯರ್, ತಮಿಳು ಬ್ರಾಹ್ಮಣನಾಗಿದ್ದು, ಅಗತಿಯರ್ನ ಶಿಷ್ಯ ಎನ್ನಲಾಗಿದೆ.[186] ಇದಲ್ಲದೇ ಯು. ವಿ. ಸ್ವಾಮಿನಾಥ ಅಯ್ಯರ್ ಮತ್ತು ಸುಬ್ರಹ್ಮಣ್ಯ ಭಾರತಿ ದ್ರಾವಿಡ ಚಳವಳಿಗೆ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ.[187][188] ತಮಿಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡಲೆಂದು ಚಳವಳಿ ನಡೆಸಿದವರಲ್ಲಿ ಪ್ರತಿಮರ್ ಕಲೈಗ್ನರ್ ಮೊದಲಿಗರಾಗಿದ್ದರು.[189] 'ತಮಿಳು, ಬ್ರಾಹ್ಮಣರು ಮತ್ತು ಸಂಸ್ಕೃತ' ಎಂಬ ವಿಷಯದ ಬಗ್ಗೆ ೧೯೯೭ರಲ್ಲಿ ಭಾಷಣ ನೀಡಿದ ಜಾರ್ಜ್ ಎಲ್. ಹಾರ್ಟ್, 'ಬ್ರಾಹ್ಮಣರು ತಮಿಳಿಗಿಂತಲೂ ಸಂಸ್ಕೃತದತ್ತ ಹೆಚ್ಚು ಒಲವು ತೋರುತ್ತಿದ್ದರು' ಎಂಬ ಬ್ರಾಹ್ಮಣ ವಿರೋಧಿಗಳ ಆಪಾದನೆಯನ್ನು ತಳ್ಳಿಹಾಕಿದರು.[141]
ಜನಪ್ರಿಯ ಮಾಧ್ಯಮಗಳಲ್ಲಿ ಅಯ್ಯರ್ಗಳನ್ನು ಸಕಾರಾತ್ಮಕ ಹಾಗೂ ನಕಾರಾತ್ಮಕವಾಗಿ ಚಿತ್ರಿಸಲಾಗಿದೆ. ಬ್ರಾಹ್ಮಣರು ತಮಿಳು ಜನಸಂಖ್ಯೆಯ ಕೇವಲ ೩%ರಷ್ಟಿದ್ದರೂ, ಅವರ ವಿಭಿನ್ನ ಸಂಸ್ಕೃತಿ ಹಾಗೂ ವಿಶಿಷ್ಟ ಪದ್ಧತಿಗಳು ಹಾಗೂ ವಿಚಿತ್ರ ಅಭ್ಯಾಸಗಳಿಂದಾಗಿ ಅಯ್ಯರ್ ಜನರನ್ನು ಸಕಾರಾತ್ಮಕ ಮತ್ತು ನಕಾರಾತ್ಮಕ ಟೀಕೆಗೆ ಗುರಿಪಡಿಸಲಾಯಿತು. ಸಂಗಮ್ ಕವಿಗಳ ಕೃತಿಗಳಲ್ಲಿ ಬ್ರಾಹ್ಮಣರನ್ನು ಮೊದಲ ಬಾರಿಗೆ ಉಲ್ಲೇಖಿಸಲಾಗಿದೆ.[190] ಆರಂಭಿಕ ಕ್ರಿಶ್ಚಿಯನ್ ಯುಗದ ಪೂರ್ವದಲ್ಲಿ, ಬೌದ್ಧ ಧರ್ಮವನ್ನು ದಮನಿಸುವಲ್ಲಿ ಮಾಡಿದ ಪ್ರಯತ್ನಗಳಿಗಾಗಿ ಬ್ರಾಹ್ಮಣ ಸಂತರನ್ನು ಆಗಾಗ್ಗೆ ಪ್ರಶಂಸಿಸಲಾಗಿದೆ.[190] ಆಧುನಿಕ ಕಾಲದಲ್ಲಿ ಅಯ್ಯರ್ಗಳು ಮತ್ತು ಅಯ್ಯಂಗಾರ್ಗಳು ಮುದ್ರಣಾ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಗಮನಾರ್ಹ ಪಾಲಿನ ಮೇಲೆ ನಿಯಂತ್ರಣ ಹೊಂದಿದ್ದಾಗ ಪತ್ರಿಕೆಗಳು, ನಿಯತಕಾಲಿಕೆಗಳಲ್ಲಿ ಬ್ರಾಹ್ಮಣರು ಮತ್ತು ಬ್ರಾಹ್ಮಣ ಸಂಸ್ಕೃತಿಯ ಪ್ರಶಂಸಾರ್ಹ ಪ್ರಸಾರವ್ಯಾಪ್ತಿಯನ್ನು ಹೊಂದಿತ್ತು. ಕಾದಂಬರಿಗಳು, ಕಿರುತೆರೆ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ಹಲವು ಬ್ರಾಹ್ಮಣ ಪಾತ್ರಗಳು ಕಾಣಿಸಿಕೊಂಡವು. ಹದಿಮೂರನೆಯ ಶತಮಾನದಲ್ಲಿ ರಚನೆಯಾದ, ಯೋಗದ ಬಗೆಗಿನ ತಿರುಮಂದಿರಂ ಎಂಬ ಗ್ರಂಥವು ಬ್ರಾಹ್ಮಣರ ಮೇಲೆ ಟೀಕಾಪ್ರವಾಹ ಹರಿಸಿದ ಮೊಟ್ಟಮೊದಲ ಜ್ಞಾತ ತಮಿಳು ಸಾಹಿತ್ಯ ಕೃತಿಯಾಗಿತ್ತು.[191] ಆದರೂ, ೧೯ನೆಯ ಶತಮಾನದಲ್ಲಿ ಆಂಶಿಕವಾಗಿ ಕ್ರಿಶ್ಚಿಯನ್ ಧರ್ಮಪ್ರಚಾರಕರ ಪ್ರಯತ್ನಗಳ ಕಾರಣದಿಂದಾಗಿ ಬ್ರಾಹ್ಮಣ-ವಿರೋಧಿ ಭಾವನೆಯು ಇತ್ತೀಚಿನ ವಿದ್ಯಮಾನವಾಗಿದೆ.[192] ಇಪ್ಪತ್ತನೆಯ ಶತಮಾನದ ಪೂರ್ವದಲ್ಲಿ ಇಯೊತಿ ಥಾಸ್, ಮರಿಮಲೈ ಅಡಿಗಲ್, ಪೆರಿಯರ್, ಭಾರತಿದಾಸನ್, ಹಾಗೂ ಇನ್ನೂ ಇತ್ತೀಚೆಗೆ ಸಿ. ಎನ್. ಅಣ್ಣಾ ದೊರೈ ಹಾಗೂ ಜಸ್ಟಿಸ್ ಪಾರ್ಟಿ ನಾಯಕರು ಹಾಗೂ ತೀರಾ ಇತ್ತೀಚೆಗೆ ದ್ರಾವಿಡರ ಕಳಗಂ ಮುಖಂಡರ ಲೇಖನಗಳು ಮತ್ತು ಭಾಷಣಗಳು ಹೆಚ್ಚು ಆಧುನಿಕ ಬ್ರಾಹ್ಮಣ-ವಿರೋಧಿ ವಾಗ್ದಾಳಿಗಳಿಂದ ಕೂಡಿದ್ದವು.[193][194][195][196][197][198][199]
೧೯೪೦ರ ದಶಕದಿಂದ ಹಿಡಿದು, ಅಣ್ಣಾದೊರೈ ಮತ್ತು ದ್ರಾವಿಡ ಮುನ್ನೇತ್ರ ಕಳಗಂ ಪಕ್ಷವು ತಮ್ಮ ರಾಜಕೀಯ ಸಿದ್ಧಾಂತದ ಪ್ರಸಾರಕ್ಕೆ ಚಲನಚಿತ್ರಗಳು ಮತ್ತು ಸಾಮೂಹಿಕ ಮಾಧ್ಯಮಗಳನ್ನು ಬಳಸಿಕೊಂಡಿವೆ.[200] ೧೮೯೫೨ರ ಜನಪ್ರಿಯ ಚಲನಚಿತ್ರ ಪರಾಶಕ್ತಿ ಸೇರಿದಂತೆ ಹಲವು ಚಲನಚಿತ್ರಗಳು ಬ್ರಾಹ್ಮಣ-ವಿರೋಧಿ ಲಕ್ಷಣವನ್ನು ಹೊಂದಿವೆ.[201]
ಆರಂಭಕಾಲದಲ್ಲಿ ಐಯ್ಯರ್ ಸಮುದಾಯದ ಅಗತ್ಯರ್, ತೋಲ್ಕಪ್ಪಿಯಾರ್, ಪರಿಮೆಲಳಗರ್ ಹಾಗೂ ನಕ್ಕಿನರ್ಕಿನಿಯರ್ ಋಷಿಗಳು ಹಾಗೂ ಧಾರ್ಮಿಕ ಪಂಡಿತರು ಪ್ರಾಮುಖ್ಯತೆ ಗಳಿಸಿದ್ದರು..[185][186] ೧೮೦೦ರ ದಶಕಕ್ಕೆ ಮುಂಚೆ, ಈ ಸಮುದಾಯದ ಬಹುಶಃ ಎಲ್ಲಾ ಪ್ರಮುಖ ಸದಸ್ಯರು ಧಾರ್ಮಿಕ ಹಾಗೂ ಸಾಹಿತ್ಯ ಕ್ಷೇತ್ರದವರಾಗಿದ್ದರು.[202] ತ್ಯಾಗರಾಜ, ಶ್ಯಾಮಶಾಸ್ತ್ರಿ ಮತ್ತು ಮುತ್ತುಸ್ವಾಮಿ ದೀಕ್ಷಿತರು ಕರ್ನಾಟಕ ಶಾಸ್ತ್ರೀಯ ಸಂಗೀತತ್ರಯರು ಎನ್ನಲಾಗಿದೆ. ಇದು ಬಹುಶಃ ಈ ಸಮುದಾಯದ ಐತಿಹಾಸಿಕ ಗಣ್ಯಪುರುಷರ ಪ್ರಥಮ ದೃಢೀಕರಣವಾಗಿದೆ. ಇವರಿಗೆ ಮುಂಚೆ ಬದುಕಿದ್ದವರ ಜೀವನಚರಿತ್ರೆಗಳೆಲ್ಲವು ಅರೆ ಪ್ರಸಿದ್ಧಿ ಪಡೆದಿರುವಂತೆ ಕಂಡಿದ್ದು ಇದಕ್ಕೆ ಕಾರಣ.[203][204][205] ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ, ಕಾನೂನು ಮತ್ತು ಆಡಳಿತ ವೃತ್ತಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದವರಲ್ಲಿ ಅಯ್ಯರ್ ಮತ್ತು ಅಯ್ಯಂಗಾರ್ಗಳದ್ದೇ ಸಿಂಹಪಾಲು.[206][207] ೧೯ನೆಯ ಶತಮಾನದಲ್ಲಿ ರಾಜನ ಪ್ರಾಂತ್ಯವಾಗಿದ್ದ ತಿರುವಾಂಕೂರಿನ ದಿವಾನ ರಲ್ಲಿ ಹಲವರು ತಮಿಳು ಬ್ರಾಹ್ಮಣರಾಗಿದ್ದರು (ಅಯ್ಯರ್ಗಳು ಮತ್ತು ಅಯ್ಯಂಗಾರ್ಗಳು).[208] ಆ ಕಾಲದ ಪ್ರಮುಖ ವ್ಯಕ್ತಿಗಳಲ್ಲಿ ಶೇಷಯ್ಯ ಶಾಸ್ತ್ರಿ, ಸರ್ ಟಿ. ಮುತ್ತುಸ್ವಾಮಿ ಅಯ್ಯರ್, ಸರ್. ಪಿ. ಎಸ್. ಶಿವಸ್ವಾಮಿ ಅಯ್ಯರ್, ಶೃಂಗಸುಬ್ಬಯ್ಯರ್, ಸರ್ ಕೆ. ಶೇಷಾದ್ರಿ ಅಯ್ಯರ್, ಸರ್ ಎಸ್. ಸುಬ್ರಹ್ಮಣ್ಯ ಅಯ್ಯರ್ ಹಾಗೂ ಸಿ. ಪಿ. ರಾಮಸ್ವಾಮಿ ಅಯ್ಯರ್ ಇವರೆಲ್ಲರೂ ಕಾನೂನು ಕ್ಷೇತ್ರದ ಹಿನ್ನೆಲೆ ಹೊಂದಿದ್ದರು.[206] ಇದೇ ಸಮಯ, ಇವರೆಲ್ಲರೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಾಗೂ ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ನಿಕಟ ಸಂಪರ್ಕ ಹೊಂದಿದ್ದರು. ಅಯ್ಯರ್ ಸಮುದಾಯದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಸುಬ್ರಹ್ಮಣ್ಯ ಭಾರತಿ ಅತಿ ಪ್ರಮುಖರು. ಸ್ವಾತಂತ್ರ್ಯದ ನಂತರ, ಅಯ್ಯರ್ಗಳು ಹಲವು ಕ್ಷೇತ್ರಗಳಲ್ಲಿ, ಇದರಲ್ಲಿ ನಿರ್ದಿಷ್ಟವಾಗಿ ಶಾಸ್ತ್ರೀಯ ಕಲೆಗಳ ಕ್ಷೇತ್ರದಲ್ಲಿ ಪ್ರಬಲರಾದರು.
ಟೆಂಪ್ಲೇಟು:Portal
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.