ಅಮಿತ್ ಶಾ (ಜನನ 22 ಅಕ್ಟೋಬರ್ 1964) ಒಬ್ಬ ಭಾರತೀಯ ರಾಜಕಾರಣಿ ಮತ್ತು ಪ್ರಸ್ತುತ ಗುಜರಾತಿರಾಜ್ಯಸಭಾ ಎಂಪಿ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಯ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ. ನಾಲ್ಕು ಸತತ ಚುನಾವಣೆಗಳಲ್ಲಿ ಸರ್ಖೇಜ್ನ ಶಾಸಕರಾಗಿ ಚುನಾಯಿತರಾಗಿದ್ದಾರೆ 1997 (ಉಪಚುನಾವಣೆ), 1998, 2002 ಮತ್ತು 2007. ಅಮಿತ್ ಶಾ', ೨೦೧೪ ರ ಸಾರ್ವತ್ರಿಕ ಚುನಾವಣೆಯಲ್ಲಿ ಬಹಳ ಮಹತ್ವದ ಪಾತ್ರ ವಹಿಸಿದ್ದರು. ಉತ್ತರ ಪ್ರದೇಶದ ಉಸ್ತುವಾರಿ ನಾಯಕನಾಗಿ ನೇಮಕಗೊಂಡು ಲಖ್ನೋಗೆ ತೆರೆಳಿದರು. ಉತ್ತರ ಪ್ರದೇಶದಲ್ಲಿ ರಾಜಕೀಯ ತಂತ್ರಗಳನ್ನು ಹೆಣೆಯುವುದರಲ್ಲಿ ಮುತ್ಸದ್ಧಿಯಾಗಿದ್ದ 'ಅಮಿತ್ ಶಾ', ಗುಜರಾತಿನ  ನರೇಂದ್ರ ಮೋದಿಯವರ ಸರಕಾರದಲ್ಲಿ ಗೃಹಸಚಿವರಾಗಿದ್ದರು. [2] '

Quick Facts ಅಮಿತ್ ಶಾ, ರಾಷ್ಟ್ರಪತಿ ...
ಅಮಿತ್ ಶಾ
Thumb

ಹಾಲಿ
ಅಧಿಕಾರ ಸ್ವೀಕಾರ 
30 ಮೇ 2019 (2019-05-30)
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ದ್ರೌಪದಿ ಮುರ್ಮು
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪೂರ್ವಾಧಿಕಾರಿ ರಾಜನಾಥ್ ಸಿಂಗ್

ಸಹಕಾರ ಮಂತ್ರಿ
ಹಾಲಿ
ಅಧಿಕಾರ ಸ್ವೀಕಾರ 
7 ಜುಲೈ 2021 (2021-07-07)
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ದ್ರೌಪದಿ ಮುರ್ಮು
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪೂರ್ವಾಧಿಕಾರಿ ಹುದ್ದೆ ಸ್ಥಾಪನೆ

ನ್ಯಾಷನಲ್ ಡೆಮೋಕ್ರಾಟಿಕ್ ಅಲೈನ್ಸ್
ಹಾಲಿ
ಅಧಿಕಾರ ಸ್ವೀಕಾರ 
9 ಜುಲೈ 2014 (2014-07-09)
ಪೂರ್ವಾಧಿಕಾರಿ ಎಲ್. ಕೆ. ಅಡ್ವಾಣಿ

ಅಧಿಕಾರ ಅವಧಿ
9 ಜುಲೈ 2014 (2014-07-09)  20 ಜನವರಿ 2020 (2020-01-20)
ಪೂರ್ವಾಧಿಕಾರಿ ರಾಜನಾಥ್ ಸಿಂಗ್
ಉತ್ತರಾಧಿಕಾರಿ ಜಗತ್ ಪ್ರಕಾಶ್ ನಡ್ಡಾ

ಲೋಕಸಭಾ ಸದಸ್ಯ
ಹಾಲಿ
ಅಧಿಕಾರ ಸ್ವೀಕಾರ 
23 ಮೇ 2019 (2019-05-23)
ಪೂರ್ವಾಧಿಕಾರಿ ಎಲ್. ಕೆ. ಅಡ್ವಾಣಿ
ಮತಕ್ಷೇತ್ರ ಗಾಂಧಿನಗರ
ಬಹುಮತ 5,57,014 (43.38%)

ರಾಜ್ಯಸಭಾ ಸದಸ್ಯ
ಅಧಿಕಾರ ಅವಧಿ
19 ಆಗಸ್ಟ್ 2017 (2017-08-19)  29 ಮೇ 2019 (2019-05-29)
ಪೂರ್ವಾಧಿಕಾರಿ ದಿಲೀಪ್ ಪಾಂಡ್ಯ
ಉತ್ತರಾಧಿಕಾರಿ ಎಸ್.ಜೈಶಂಕರ್
ಮತಕ್ಷೇತ್ರ ಗುಜರಾತ್

ಗುಜರಾತ್ ವಿಧಾನಸಭಾ ಸದಸ್ಯ
ಅಧಿಕಾರ ಅವಧಿ
2012 (2012)  2017 (2017)
ಪೂರ್ವಾಧಿಕಾರಿ ಹುದ್ದೆ ಸ್ಥಾಪನೆ
ಉತ್ತರಾಧಿಕಾರಿ ಕೌಶಿಕ್ ಪಟೇಲ್
ಮತಕ್ಷೇತ್ರ ನಾರಣ್ಪುರ
ಅಧಿಕಾರ ಅವಧಿ
1997 (1997)  2012 (2012)
ಪೂರ್ವಾಧಿಕಾರಿ ಹರಿಶ್ಚಂದ್ರ ಪಟೇಲ್
ಉತ್ತರಾಧಿಕಾರಿ ಹುದ್ದೆ ವಿಸರ್ಜನೆ
ಮತಕ್ಷೇತ್ರ ಸರ್ಕೆಜ್

ರಾಜ್ಯ ಸಚಿವ, ಗುಜರಾತ್ ಸರ್ಕಾರ
ಅಧಿಕಾರ ಅವಧಿ
2002 (2002)  2012 (2012)
ಇಲಾಖೆಗಳು ಗೃಹ, ಕಾನೂನು ಮತ್ತು ನ್ಯಾಯ, ಕಾರಾಗೃಹ, ಗಡಿ ಸುರಕ್ಷೆ, ನಾಗರಿಕ ರಕ್ಷೆ, ಅಬಕಾರಿ, ಗೃಹ ಕಾವಲು, ಸಾರಿಗೆ, ನಿಷೇಧ, ಗ್ರಾಮ ರಕ್ಷಕ ದಳ, ಪೊಲೀಸ್ ವಸತಿ, ಶಾಸಕಾಂಗ ಮತ್ತು ಸಂಸದೀಯ ವ್ಯವಹಾರಗಳು
ಮುಖ್ಯಮಂತ್ರಿ ನರೇಂದ್ರ ಮೋದಿ
ವೈಯಕ್ತಿಕ ಮಾಹಿತಿ
ಜನನ ಅಮಿತ್ ಅನಿಲ್ಚಂದ್ರ ಶಾ
(1964-10-22) ೨೨ ಅಕ್ಟೋಬರ್ ೧೯೬೪ (ವಯಸ್ಸು ೫೯)[1]
ಬಾಂಬೆ, ಮಹಾರಾಷ್ಟ್ರ, ಭಾರತ
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ
ಇತರೆ ರಾಜಕೀಯ
ಸಂಲಗ್ನತೆಗಳು
ನ್ಯಾಷನಲ್ ಡೆಮಾಕ್ರಟಿಕ್ ಆಲೈನ್ಸ್
ಸಂಗಾತಿ(ಗಳು)
ಸೋನಾಲ್ ಶಾ
(m. ೧೯೮೭)
ಮಕ್ಕಳು ಜಯ್ ಶಾ
ಅಭ್ಯಸಿಸಿದ ವಿದ್ಯಾಪೀಠ ಗುಜರಾತ್ ವಿಶ್ವವಿದ್ಯಾಲಯ
(ಬ್ಯಾಚುಲರ್ ಆಫ್ ಸೈನ್ಸ್)
ವೃತ್ತಿ ರಾಜಕಾರಣಿ
ಜಾಲತಾಣ www.amitshah.co.in
Close

ಜನನ ಮತ್ತು ಜೀವನ

ಅಮಿತ್ ಭಾಯಿ ಅನಿಲ್ ಚಂದ್ರ ಶಾ ಗುಜರಾತಿನ ಬನಿಯಾ ಜಾತಿಗೆ ಸೇರಿದ ಕುಟುಂಬದಲ್ಲಿ ೨೨ನೇ ಅಕ್ಟೋಬರ್ ೧೯೬೪ರಂದು ಜನಿಸಿದರು. ಅವರ ತಂದೆ ಅನಿಲ್ ಷಾ ಒಬ್ಬ ವ್ಯಾಪಾರಿಯಾಗಿದ್ದರು. ಪ್ಲಾಸ್ಟಿಕ್ ಪೈಪುಗಳ ವ್ಯಾಪಾರವನ್ನು ಇವರು ನಡೆಸುತ್ತಿದ್ದರು. ಅಮಿತ್ ಅವರ ಮುತ್ತಜ್ಜ ಅಂದಿನ ಮನಸ ರಾಜ್ಯದ(ಈಗ ಗುಜರಾತ್ ರಾಜ್ಯದಲ್ಲಿದೆ) ನಗರ ಪ್ರಮುಖರಾಗಿದ್ದರು.

ಅಮಿತ್ ಶಾ ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಸೇರಿ ಸ್ವಯಂ ಸೇವಕರಾಗಿದ್ದರು. ಮುಂದೆ ತಮ್ಮ ಕಾಲೇಜು ಅವಧಿಯಲ್ಲಿ ಇದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಟೂಡೆಂಟ್ ವಿಂಗ್ ಅಖಿಲ ಭಾರತಿಯ ವಿದ್ಯಾರ್ಥಿ ಪರಿಷದ್ (ABVP) ನಲ್ಲಿ ಸಕ್ರಿಯವಾಗಿ ಕೆಲಸಮಾಡುತ್ತಿದ್ದರು. ಗುಜರಾತಿನ ಗಾಂಧಿನಗರದಿಂದ ಎಲ್.ಕೆ.ಅದ್ವಾನಿಯವರ ಹಲವಾರು ಚುನಾವಣಾ ಪ್ರಚಾರವನ್ನು ನಡೆಸಿಕೊಟ್ಟರು. ಮುಂದೆ 'ಗುಜರಾತ್ ರಾಜ್ಯ ಫೈನಾನ್ಸ್ ಕಾರ್ಪೋರೇಶನ್ ಲಿಮಿಟೆಡ್ ಸಂಸ್ಥೆ'ಯಲ್ಲಿ ಚೇರ್ಮನ್ ಆಗಿ ಅತಿ ಚಿಕ್ಕ ಪ್ರಾಯದಲ್ಲಿ ನಿಯುಕ್ತಿಗೊಂಡರು. ಅಮಿತ್ ಶಾರವರ ಕಾರ್ಯ ಕ್ಷಮತೆಯನ್ನು ಗುರುತಿಸಿ,ಅವರನ್ನು 'ಅಹ್ಮೆದಾಬಾದ್ ಡಿಸ್ಟ್ರಿಕ್ಟ್ ಕೊ ಆಪರೇಟಿವ್ ಬ್ಯಾಂಕ್' ನ ಚೇರ್ಮನ್ ಆಗಿ ನಿಯುಕ್ತಿಮಾಡಲಾಯಿತು.

ವಿದ್ಯಾಭ್ಯಾಸ ಹಾಗೂ ವೃತ್ತಿಜೀವನ

'ಅಮಿತ್ ಶಾ'ರವರು, ಜೀವ ರಸಾಯನ ಶಾಸ್ತ್ರ ಪದವೀಧರ. ಶೇರು ದಳ್ಳಾಳಿಯಾಗಿ ಕೆಲಸ ನಿರ್ವಹಿಸಿದ್ದರು. ಬಿಜೆಪಿ ಪಕ್ಷ ಸೇರಿ ಅಡ್ವಾಣಿಯವರಿಗೆ ಹತ್ತಿರವಾದರು. ಗುಜಾರಾತ್ ನ ಹಣಕಾಸು ಸಂಸ್ಥೆಯ ಅಧ್ಯಕ್ಷರಾಗಿ ಕೆಲಸಮಾಡಿದ್ದರು. ಮೋದಿ ಸರಕಾರದಲ್ಲಿ ಒಂದು ಸಮಯದಲ್ಲಿ ೧೦ ಖಾತೆಗಳನ್ನು ಸಂಭಾಲಿಸಿದ್ದರು. ಭಾರತಿಯ ಜನತಾ ಪಕ್ಷದ ಜನರಲ್ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ನರೇಂದ್ರ ಮೋದಿಯವರ ಸರಕಾರದ ಗುಜರಾತ್ ಸರಕಾರದಲ್ಲಿ 'ಮಿನಿಸ್ಟರ್ ಆಫ್ ಸ್ಟೇಟ್ ಫಾರ್ ಹೋಂ ಅಫೇರ್ಸ್' ನಲ್ಲಿ ಕೆಲಸಮಾಡುತ್ತಿದ್ದರು. ಆದರೆ, ೨೦೧೦ ರಲ್ಲಿ ರಾಜೀನಾಮೆ ಕೊಡಬೇಕಾಯಿತು. 'ಸೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣ'ದಲ್ಲಿ ಭಾಗಿಯಾಗಿದ್ದು, ಸ್ಟೇಟ್ ಪೋಲಿಸ್ ಗೆ ಆದೇಶ ಕೊಟ್ಟು, ಹಲವಾರು ಜನರನ್ನು ಕೊಲ್ಲಿಸಲು ಕಾರಣರಾದರೆಂಬ ಆಪಾದನೆಯ ಮೇರೆಗೆ, ಅವರನ್ನು ಅರೆಸ್ಟ್ ಮಾಡಲಾಗಿತ್ತು.[3] [4].

ಹೊರ ಸಂಪರ್ಕ

ಉಲ್ಲೇಖಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.