Remove ads
From Wikipedia, the free encyclopedia
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್) ಭಾರತದ ಹಾಗು ವಿಶ್ವದ ಅತಿ ದೊಡ್ದ ಸ್ವಯಂಸೇವಿ ಸಂಘಟನೆ.[ಸೂಕ್ತ ಉಲ್ಲೇಖನ ಬೇಕು] ಸೆಪ್ಟೆಂಬರ್ ೨೭, 1925ರ ವಿಜಯದಶಮಿಯ ದಿನ ಮಹಾರಾಷ್ಟ್ರ ರಾಜ್ಯದ ನಾಗಪುರದಲ್ಲಿ ಡಾ. ಕೇಶವ ಬಲಿರಾಂ ಹೆಡಗೆವಾರ್ ಈ ಸಂಘಟನೆಯನ್ನು ಹುಟ್ಟುಹಾಕಿದರು. ಹಿಂದೂ ರಾಷ್ಟ್ರೀಯವಾದ ಬಲಪಂಥೀಯ ಸಂಘಟನೆಯೆಂದು ಸಾಮಾನ್ಯವಾಗಿ ಪರಿಗಣಿಸಲ್ಪಡುವ ಈ ಸಂಸ್ಥೆ ಭಾರತದ ನಾಗಪುರದಲ್ಲಿ ತನ್ನ ಮುಖ್ಯ ಕಾರ್ಯಾಲಯ ಹೊಂದಿದೆ. ಹಿಂದೂ ಸಂಘಟನೆ ಮತ್ತು ಐಕ್ಯತೆಯನ್ನು ತನ್ನ ಗುರಿಯನ್ನಾಗಿ ಹೊಂದಿರುವ ಈ ಸಂಸ್ಥೆಗೆ ಹೊಂದಿಕೊಂಡಿರುವ ಇತರ ಸಂಸ್ಥೆಗಳನ್ನು ಒಟ್ಟಾಗಿ ಸೇರಿಸಿ ಸಾಮಾನ್ಯವಾಗಿ "ಸಂಘ ಪರಿವಾರ" ಎಂದು ಕರೆಯಲಾಗುತ್ತದೆ. ಸುಮಾರು ಆರು ವರ್ಷ ಭಾರತದ ಆಡಳಿತ ನಡೆಸಿದ ಭಾರತೀಯ ಜನತಾ ಪಕ್ಷ ಈ ಸಂಸ್ಥೆಯ ರಾಜಕೀಯ ಮುಖ ಎಂದು ಹಲವರು ಪರಿಗಣಿಸುತ್ತಾರೆ.[ಸೂಕ್ತ ಉಲ್ಲೇಖನ ಬೇಕು]
ಸಂಕ್ಷಿಪ್ತ ಹೆಸರು | ಆರ್ಎಸ್ಎಸ್ |
---|---|
ಸ್ಥಾಪನೆ | 27 ಸೆಪ್ಟೆಂಬರ್ 1925 |
ಸ್ಥಾಪಿಸಿದವರು | ಕೇಶವ್ ಬಲಿರಾಮ್ ಹೆಡಗೇವಾರ್ |
ಶೈಲಿ | ಸ್ವಯಂಸೇವೆ |
Legal status | ಅಸ್ತಿತ್ವದಲ್ಲಿದೆ |
Purpose | ಸ್ವಯಂಸೇವೆಯ ಮೂಲಕ ದೇಶಸೇವೆ |
ಪ್ರಧಾನ ಕಚೇರಿ | ಡಾ. ಹೆಡ್ಗೆವಾರ್ ಭವನ, ಸಂಘ ಕಟ್ಟಡ ರಸ್ತೆ, ನಾಗ್ಪುರ, ಮಹಾರಾಷ್ಟ್ರ - ೪೪೦೦೩೨ |
ಕಕ್ಷೆಗಳು | 21.146°N 79.111°E |
ಪ್ರದೇಶ | ಭಾರತ |
Membership | |
ಅಧಿಕೃತ ಭಾಷೆ | ಯಾವುದೂ ಇಲ್ಲ |
ಸರಸಂಘಚಾಲಕ | ಮೋಹನ್ ಭಾಗವತ್ |
ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) | ದತ್ತಾತ್ರೇಯ ಹೊಸಬಾಳೆ |
ಅಂಗಸಂಸ್ಥೆಗಳು |
|
ಅಧಿಕೃತ ಜಾಲತಾಣ | www |
ಒಂದು ಅಂದಾಜಿನ ಪ್ರಕಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರ ಸಂಖ್ಯೆಯು ೨೫ ರಿಂದ ೬೦ ಲಕ್ಷಗಳಷ್ಟಾಗಿರುತ್ತದೆ .[೫]
ಈ ಸಂಘಟನೆಯ ರಾಷ್ಟ್ರೀಯ ಮಟ್ಟದ ಮುಖ್ಯಸ್ಥರನ್ನು ಸರಸಂಘಚಾಲಕ ಎಂದು ಕರೆಯುತ್ತಾರೆ. ಸಂಸ್ಥಾಪನೆಯ ದಿನದಿಂದ ಈಗಿನವರೆಗಿನ ಸರಸಂಘಚಾಲಕರ ಪಟ್ಟಿಯನ್ನು ಈ ಕೆಳಗೆ ಕೊಡಲಾಗಿದೆ.
ಈ ಶಬ್ದಕ್ಕೆ ಕನ್ನಡದಲ್ಲಿ ಶಾಖೆ ಎಂದು ಅರ್ಥ ಬರುತ್ತದೆ. ಆರ್.ಎಸ್.ಎಸ್. (ರಾ.ಸ್ವ.ಸಂ.) ನ ಸಂಘಟಾತ್ಮಕ ಕಾರ್ಯವು ಶಾಖೆಗಳ ಮೂಲಕವೇ ನಡೆಯುತ್ತದೆ. ಶಾಖೆಗಳು ಪ್ರತಿನಿತ್ಯ ಒಂದು ಘಂಟೆ ಕಾಲ ಸಾರ್ವಜನಿಕ ಬಯಲು ಸ್ಥಳಗಳಲ್ಲಿ ನಡೆಸಲ್ಪಡುತ್ತವೆ. ಒಂದು ಅಂಕಿ ಅಂಶದ ಪ್ರಕಾರ, ರಾಷ್ಟ್ರಾದ್ಯಂತ ಭಾರತದಲ್ಲಿ ೬೦,೦೦೦ಕ್ಕೂ ಹೆಚ್ಚು ಶಾಖೆಗಳು ನಡೆಯುತ್ತಿವೆ.[೬].
ರಾ.ಸ್ವ.ಸಂ.ನ ಶಾಖೆಗಳಲ್ಲಿ ಸ್ವಯಂ ಸೇವಕರ ವ್ಯಕ್ತಿತ್ವ ನಿರ್ಮಾಣ ಹಾಗು ವಿಕಸನ ದೃಷ್ಟಿಯಿಂದ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ದೈಹಿಕ ಸದೃಢತೆಗಾಗಿ ಯೋಗ ಮತ್ತು ವ್ಯಾಯಾಮ ಮಾಡುವದಲ್ಲದೆ ಆಟಗಳನ್ನು ಆಡಲಾಗುತ್ತದೆ. ನಾಗರಿಕ ಪ್ರಜ್ಞೆ, ಸಮಾಜ ಸೇವೆ, ಸಮುದಾಯ ಜೀವನ, ದೇಶಭಕ್ತಿ ಮೊದಲಾದ ಗುಣಗಳ ಬೆಳವಣಿಗೆಗಾಗಿ ಇನ್ನಿತರ ಚಟುವಟಿಕೆಗಳನ್ನೂ ನಡೆಸಲಾಗುತ್ತದೆ.[೭] ಸ್ವಯಂಸೇವಕರಿಗೆ ಪ್ರಥಮ ಚಿಕಿತ್ಸೆ, ಅಪಾಯಕರ ಸನ್ನಿವೇಶಗಳಿಂದ ಜನರನ್ನು ರಕ್ಷಿಸುವದು ಮತ್ತು ಪುನರ್ವಸತಿಯಂತಹ ಚಟುವಟಿಕೆಗಳ ತರಭೇತಿ ನೀಡಲಾಗುತ್ತದೆ. ಶಾಖೆ ನಡೆಸಲ್ಪಡುವ ಗ್ರಾಮ ಅಥವಾ ಪ್ರದೇಶಗಳ ಸ್ವಚ್ಛತೆ ಹಾಗು ಅಭಿವೃದ್ಡಿ ಕೆಲಸಗಳಲ್ಲಿ ತೊಡಗುವಂತೆ ಸ್ವಯಂಸೇವಕರನ್ನು ಸಂಘವು ಪ್ರೋತ್ಸಾಹಿಸುತ್ತದೆ.[೭][೮]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.