ಹೋಮಿ ಜಹಂಗೀರ್ ಭಾಬಾ
ಭಾರತೀಯ ಭೌತವಿಜ್ಞಾನಿ / From Wikipedia, the free encyclopedia
ಹೋಮಿ ಜಹಂಗೀರ್ ಭಾಭಾ (ಅಕ್ಟೋಬರ್ ೩೦ ೧೯೦೯ – ಜನವರಿ ೨೪ ೧೯೬೬) ಫಾರ್ಸಿ ಮೂಲದ ಭಾರತೀಯ ಭೌತವಿಜ್ಞಾನಿ. ಇವರು ಭಾರತದ ಅಣುಶಕ್ತಿ ಕಾರ್ಯಕ್ರಮದ ಸ್ಥಾಪನೆ ಹಾಗು ಬೆಳವಣಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಇವರು ಸಂಸ್ಥಾಪಕ ನಿರ್ದೇಶಕರಾಗಿ ಭಾರತೀಯ ಪರಮಾಣು ಭೌತಶಾಸ್ತ್ರಜ್ಞರಾಗಿದ್ದರು ಮತ್ತು ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಇವರನ್ನು "ಭಾರತೀಯ ಪರಮಾಣು ಕಾರ್ಯಕ್ರಮದ ತಂದೆ" ಎಂದು ಆಡುಮಾತಿನಲ್ಲಿ ಹೇಳಲಾಗುತ್ತದೆ. ಭಾಭಾರವರು, ಅಟೋಮಿಕ್ ಎನರ್ಜಿ ಎಸ್ಟಾಬ್ಲಿಷ್ಮೆಂಟ್, ಟ್ರೊಂಬೆ (ಎಇಇಟಿ)ಯ ಸಂಸ್ಥಾಪಕ ನಿರ್ದೇಶಕರಾಗಿದ್ದರು. ಇದೀಗ ಅವರ ಗೌರವಾರ್ಥ ಅದನ್ನು ಭಾಭಾ ಆಟೋಮಿಕ್ ಸಂಶೋಧನಾ ಕೇಂದ್ರ ಎಂದು ಹೆಸರಿಸಲ್ಪಟ್ಟಿದೆ. ಟಿ,ಐ,ಫ಼್,ರ್ ಮತ್ತು ಎ.ಇ.ಇ.ಟಿ ಭಾರತೀಯ ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿಯ ಮೂಲಾಧಾರವಾಗಿದೆ. ಇದರಲ್ಲಿ ಭಾಭಾರವರು ನಿರ್ದೇಶಕರಾಗಿ, ಮೇಲ್ವಿಚಾರಣೆ ನಡೆಸುತ್ತಿದ್ದರು.[1]
Quick Facts ಹೋಮಿ ಜಹಂಗೀರ್ ಭಾಭಾ, ಜನನ ...
ಹೋಮಿ ಜಹಂಗೀರ್ ಭಾಭಾ | |
---|---|
ಜನನ | ಅಕ್ಟೋಬರ್ ೩೦, ೧೯೦೯ ಮುಂಬಯಿ |
ಮರಣ | ಜನವರಿ ೨೪, ೧೯೬೬ |
ವಾಸ | ಭಾರತ |
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರಗಳು | ಭೌತಶಾಸ್ತ್ರ |
ಸಂಸ್ಥೆಗಳು | ಕ್ಯಾವೆಂಡಿಶ್ ಪ್ರಯೋಗಶಾಲೆ ಟಾಟ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್ ಭಾರತೀಯ ಅಣುಶಕ್ತಿ ಪ್ರಾಧಿಕಾರ |
ಅಭ್ಯಸಿಸಿದ ಸಂಸ್ಥೆ | ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ |
ಡಾಕ್ಟರೆಟ್ ಸಲಹೆಗಾರರು | ಪಾಲ್ ಡಿರಾಕ್ |
Close