From Wikipedia, the free encyclopedia
ಟಿ.ಎಫ್.ಆರ್(TFR) ಇಲ್ಲವೇ ಟೋಟಲ್ ಫರ್ಟಿಲಿಟಿ ರೇಟ್ (ಕನ್ನಡದಲ್ಲಿ ಹೆರುವೆಣಿಕೆ) ಅಂದರೆ ಒಂದು ಕುಟುಂಬದಲ್ಲಿ ಹೆಣ್ಣಿಗೆ ಅವಳ ಜೀವಿತಾವಧಿಯಲ್ಲಿ ಸರಾಸರಿ ಎಷ್ಟು ಮಕ್ಕಳಾಗುತ್ತವೆ ಅನ್ನುವುದರ ಅಳತೆ [1]. ಯಾವುದೇ ಜನಾಂಗದ ಜನಸಂಖ್ಯೆ ಏರದೇ ಇಳಿಯದೇ ಸಮತೋಲನ ಸಾಧಿಸಲು ಆ ಜನಾಂಗದ ಹೆರುವೆಣಿಕೆ ಮಟ್ಟ 2.1ರಷ್ಟಿರಬೇಕು ಅನ್ನುವುದನ್ನು ಪ್ರಪಂಚದ ಎಲ್ಲ ನಾಡುಗಳು ಒಪ್ಪಿ ಅದಕ್ಕೆ ತಕ್ಕಂತೆ ತಮ್ಮ ಜನಸಂಖ್ಯಾ ನೀತಿ ರೂಪಿಸಿಕೊಳ್ಳುತ್ತವೆ. ಸದ್ಯಕ್ಕೆ 2.4 ಹೆರುವೆಣಿಕೆ ಇರುವ ಭಾರತವೂ 2.1ರ ಸಮತೋಲನದ ಗುರಿ ತಲುಪುವ ಪ್ರಯತ್ನ ಮಾಡುತ್ತಿದೆ.
ಇಸವಿ | ಹೆರುವಣಿಕೆ |
---|---|
1950–1955 | 4.95 |
1955–1960 | 4.89 |
1960–1965 | 4.91 |
1965–1970 | 4.85 |
1970–1975 | 4.45 |
1975–1980 | 3.84 |
1980–1985 | 3.59 |
1985–1990 | 3.39 |
1990–1995 | 3.04 |
1995–2000 | 2.79 |
2000–2005 | 2.62 |
2005–2010 | 2.52 |
2010–2015 | 2.36 |
ಪ್ರಪಂಚ ಇತಿಹಾಸದಲ್ಲಿ ಅತೀ ಕಡಿಮೆ ಹೆರುವಣಿಕೆ (೦.೪೧) ನೊಂದಾಯಿತ ಪ್ರದೇಶ ಚೀನಾ ದಲ್ಲಿರುವ Jiamusi ಜಿಲ್ಲೆಯ Xiangyang [3].
೨೦೦೯ರಂತೆ, ಯೂರೂಪ್ನ ಸರಾಸರಿ ಹೆರುವಣಿಕೆ ಸಂಖ್ಯೆಯು ಪ್ರತೀ ಮಹಿಳೆಗೆ ೧.೫೯ ಮಕ್ಕಳು ಅಗಿರುತ್ತದೆ[4].
ಅಭಿವೃದ್ದಿ ಹೊಂದಿದ ದೇಶಗಳ ಹೆರುವಣಿಕೆ ಸಮಾನ್ಯವಾಗಿ ಅತಿ ಕಡಿಮೆ ಇರುತ್ತದೆ. ಇದಕ್ಕೆ ಕಾರಣವೆಂದರೆ ಉತ್ತಮ ಆರೊಗ್ಯ, ಶಿಕ್ಷಣ ಮತ್ತು ನಗರೀಕರಣ. ಜನನ ನಿಯಂತ್ರಣ ವು ಸಾಮನ್ಯವಾಗಿ ಪ್ರಚುರವಾಗಿದ್ದು, ಸಿಗುತಲಿರುತ್ತದೆ.[5]. ಅಭಿವೃದ್ದಿಶೀಲ ಮತ್ತು ಅಭಿವೃದ್ದಿ ಹೊಂದಿರದ ದೇಶಗಳಲ್ಲಿ ಕುಟುಂಬದಲ್ಲಿ ಕೆಲಸಗಳಿಗೆ ಮಕ್ಕಳು ಬೆಕೆಂಬ ಯೂಚನೆ ಇರುವುದರಿಂದ ಮತ್ತು ಜನನ ನಿಯಂತ್ರಣದ ತಿಳುವಳಿಕೆ ಕಡಿಮೆ ಇರುವದರಿಂದ ಹೆರುವಣಿಕೆ ಸಂಖ್ಯೆ ಜಾಸ್ತಿ ಇರುತ್ತದೆ.[5]. [6]
೨೦೧೧ರ ಜನಗಣತಿಯ ಪ್ರಕಾರ ಭಾರತದ ಹೆರುವೆಣಿಕೆ ೨.೪ ಅಗಿರುತ್ತದೆ.
2011ರ ಜನಗಣತಿಯ ಪ್ರಕಾರ ಕರ್ನಾಟಕದ ಟಿ.ಎಫ್.ಆರ್ (ಹೆರುವೆಣಿಕೆ) ಪ್ರಮಾಣ ಸಮತೋಲನ ಮಟ್ಟಕ್ಕಿಂತ ಕೆಳಗಿಳಿದು 1.9ಕ್ಕೆ ಕುಸಿದಿದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.