From Wikipedia, the free encyclopedia
ಹತ್ತಿ ಬೀಜದ ಎಣ್ಣೆ ಯನ್ನು ಹತ್ತಿ ಬೀಜಗಳಿಂದ ತೆಗೆಯುತ್ತಾರೆ. ಹತ್ತಿ ಗಾಸಿಪಿಯಮ್ ಜಾತಿ, ಮಾಲ್ವೇಸೆ ಕುಟುಂಬಕ್ಕೆ ಸೇರಿದ ಗಿಡ. ಹತ್ತಿ ಬೀಜದ ಸುತ್ತಲಿರುವ ನಾರಿ ನಿಂದ ದಾರ ಮತ್ತು ಬಟ್ಟೆ ತಯಾರಿಸಲಾಗುತ್ತದೆ[1].
ವಿಶ್ವದಲ್ಲಿ ಒಟ್ಟು ೩೯ ಹತ್ತಿ ಪ್ರಭೇದಗಳಿದ್ದರೂ, ಬಟ್ಟೆ ಕೈಗಾರಿಕೆಗೆ ಸರಿಹೊಂದುವ ಹತ್ತಿ ಪ್ರಭೇದಗಳು ಕೇವಲ ೪. ಇದು ಮೂಲತಃ ಭಾರತ ಉಪಖಂಡದ ವಾಯವ್ಯ ಪ್ರದೇಶದ್ದು (ಪಾಕಿಸ್ತಾನ, ಆಫ್ಘಾನಿಸ್ತಾನ). ಇದು ಇಂದಿಗೂ ಇಲ್ಲಿ ವಾರ್ಷಿಕ ಬೆಳೆ. ಹರಪ್ಪ ಹಾಗೂ ಸಿಂಧೂನದಿ ತೀರದ ನಾಗರಿಕತೆಯ ಕಾಲದಲ್ಲಿ, ಇದು ಅತ್ಯಂತ ಭಾರಿ ಪ್ರಮಾಣದಲ್ಲಿದ್ದಿತೆಂಬುದು ತಜ್ಞರ ಅಭಿಪ್ರಾಯ. ಕ್ರಿ.ಪೂ. ೨೦ನೇ ಶತಮಾನದಲ್ಲೇ ಪೂರ್ವ ಆಫ್ರಿಕದ ನ್ಯೂಬಿಯದ ’ಮೆರೋ’ ಜನ ಸಮುದಾಯ ಇದರಿಂದ ಹತ್ತಿ ಬಟ್ಟೆಗಳನ್ನು ತಯಾರಿಸುವಲ್ಲಿ ಪ್ರವೀಣತೆಯನ್ನು ಹೊಂದಿದ್ದರು. ೯ನೇ ಶತಮಾನದಲ್ಲಿ ನೈಜೀರಿಯ ಕೂಡ ಹತ್ತಿ ಸಂಬಂಧದ ಉದ್ಯೋಗದಲ್ಲಿ ಮುಂದಿತ್ತು.ಇದನ್ನು ಅಮೆರಿಕಾ, ಆಫ್ರಿಕಾ ಮತ್ತು ಬಾರತದೇಶದಲ್ಲಿ ಹೆಚ್ಚಾಗಿ ಸಾಗುವಳಿ ಮಾಡುತ್ತಾರೆ.[2]
ಹತ್ತಿಗಿಡ ಬಗ್ಗೆ ಹೆಚ್ಚಿನ ವಿಷಯಕ್ಕಾಗಿ ಪ್ರಧಾನ ಲೇಖನ ಹತ್ತಿನೋಡಿರಿ.
ಹತ್ತಿಬೀಜ ಗುಂಡಾಗಿದ್ದು ,ಅದರ ಒಳ ಭಾಗದಲ್ಲಿ ಹತ್ತಿಯ ನಾರು ಇರುತ್ತದೆ. ನಾರು ಬೆಳ್ಳಗೆ ಇರುತ್ತದೆ. ಹತ್ತಿಬೀಜದ ಮೇಲಿರುವ ನಾರನ್ನು ಜಿನ್ನಿಂಗ್ ಮಿಲ್ಲಿನಲ್ಲಿ (ಜಿನ್ನಿಂಗ್ ಕಾರ್ಖಾನೆ) ಯಂತ್ರಗಳ ಸಹಾಯದಿಂದ ತೆಗೆಯುವರು. ಹತ್ತಿನಾರನ್ನು ತೆಗೆದ ಮೇಲೆ ಬೀಜ ಕಪ್ಪಾಗಿ ಕಾಣಿಸುತ್ತದೆ. ಬೀಜದ ಹೊರಗಡೆ ಕಪ್ಪು ಬಣ್ಣದ,ಗಟ್ಟಿಯಾಗಿರುವ ಹೊಟ್ಟು (ಸಿಪ್ಪೆ, husk) ಇರುತ್ತದೆ. ಇದರ ಒಳಗೆ ಮೃದುವಾದ ಕಾಳು (kernel) ಇದ್ದು, ಎಣ್ಣೆ ,ಪ್ರೋಟಿನುಗಳನ್ನು ಒಳಗೊಂಡಿರುತ್ತದೆ. ಒಟ್ಟು ಬೀಜದಲ್ಲಿ ೧೮-೨೦%ವರೆಗೆ ಎಣ್ಣೆ ಇರುತ್ತದೆ. ಹೊಟ್ಟು ತೆಗೆದ ಕಾಳಿನಿಂದ ೩೮-೪೫% ವರೆಗೆ ಎಣ್ಣೆ ಸಿಕ್ಕುತ್ತದೆ.
ಹತ್ತಿ ಬೀಜಗಳಿಂದ ಎಣ್ಣೆಯನ್ನು ಎಕ್ಸುಪೆಲ್ಲರು(expeller)ಎನ್ನುವ ಯಂತ್ರಗಳ ಸಹಾಯದಿಂದ ತೆಗೆಯುತ್ತಾರೆ. ಒಟ್ಟು ಬೀಜವನ್ನು(ಬೀಜದ ಹೊರಗಡೆ ಇರುವ ಹೊಟ್ಟು ಸಮೇತ) ನೇರವಾಗಿ ಯಂತ್ರದಲ್ಲಿ ಹಾಕಿ ತಿರುಗಿಸಿ ಎಣ್ಣೆ ತೆಗೆಯುತ್ತಾರೆ. ಇಲ್ಲ ಅಂದರೆ,ಹೊಟ್ಟನ್ನು ಮೊದಲು ಡಿಕಾರ್ಟಿಕೇಟರು(decarticater)ಎನ್ನುವ ಯಂತ್ರದಲ್ಲಿ ನಡೆಸಿ, ಹೊಟ್ಟನ್ನು ತೆಗೆದು,ಆ ಮೇಲೆ ಎಣ್ಣೆಯನ್ನು ಸಂಗ್ರಹಿಸಲಾಗುತ್ತದೆ. ಎಣ್ಣೆ ತಯಾರಿಕೆಯಲ್ಲಿ, ಉಳಿಯುವ ಹಿಂಡಿ(cake)ಯನ್ನು ಪ್ರಾಣಿಗಳ ಆಹಾರವಾಗಿ ಬಳಸಲಾಗುತ್ತದೆ. ಕಾಳು ಬೀಜದ ನುಂಡಿ ಬಂದ ಹಿಂಡಿಯಲ್ಲಿ ಪ್ರೋಟಿನು ಅಂಶ/ಪ್ರತಿಶತ ಸಿಪ್ಪೆ ಇರುವ ಬೀಜ ಹಿಂಡಿಕ್ಕಿಂತ ಹೆಚ್ಚಾಗಿರುತ್ತದೆ. ಕಾಳುಬೀಜದ ಹಿಂಡಿಯಲ್ಲಿ ಪ್ರೋಟಿನು ೪೨-೪೩%ವರೆಗೆ ಇರುತ್ತದೆ. ಎಕ್ಸುಪೆಲ್ಲರುನಿಂದ ಬರುವ ಹತ್ತಿ ಹಿಂಡಿಯಲ್ಲಿ ಇನ್ನು ಎಣ್ಣೆ ಉಳಿದಿರುತ್ತದೆ. ಇದು೬-೮% ವರಗೆ ಇರುವ ಸಂಭವವಿದೆ. ಹಿಂಡಿಯಲ್ಲಿ ಉಳಿದ ಎಣ್ಣೆಯನ್ನು ಸಾಲ್ವೆಂಟ್ ಎಕ್ಸುಟ್ರಾಕ್ಷನು ಪ್ಲಾಂಟ್(solvent extraction plant)ನಲ್ಲಿ ನಡೆಸಿ, ಹಿಂಡಿಯಲ್ಲಿ ಉಳಿದಿರುವ ಎಣ್ಣೆಯನ್ನು ತೆಗೆಯುತ್ತಾರೆ.
ಎಕ್ಸುಪೆಲ್ಲರು ಯಂತ್ರಗಳಿಂದ ಅಥವಾ ಸಾಲ್ವೆಂಟ್ ಎಕ್ಸುಟ್ರಾಕ್ಷನು ಪ್ಲಾಂಟುನಿಂದ ತೆಗೆದ ಎಣ್ಣೆಯನ್ನು 'ಕಚ್ಚಾ ಎಣ್ಣೆ (crude oil)' ಎನ್ನುತಾರೆ, ಇದನ್ನು ನೇರವಾಗಿ ಅಡುಗೆ ಎಣ್ಣೆಯಾಗಿ ಬಳಸುವುದಕ್ಕೆ ಆಗುವುದಿಲ್ಲ. ಈ ಎಣ್ಣೆಯನ್ನು ರಿಫೈನರಿ (refinery) ಕಾರ್ಖಾನೆಯಲ್ಲಿ ಶುದ್ಧಿ ಮಾಡಿದ ಮೇಲೆ ಅಡುಗೆ ಎಣ್ಣೆಯಾಗಿ ಉಪಯೋಗಿಸಲ್ಪಡುತ್ತದೆ. ಕಚ್ಛಾ ಎಣ್ಣೆ ಕಪ್ಪಾಗಿ ಕಾಣಿಸುತ್ತದೆ. ಇದರಲ್ಲಿ ಮಲಿನಗಳು/ಕಿಣಿಗಳು, ಫ್ರೀ ಫ್ಯಾಟಿ ಆಸಿಡ್ಗಳು (free fatty acids) ಇರುತ್ತವೆ. ಕಚ್ಚಾ ಹತ್ತಿ ಬೀಜದ ಎಣ್ಣೆಯಲ್ಲಿ ಫ್ರೀ ಫ್ಯಾಟಿ ಆಸಿಡು ೩-೬% ತನಕ ಇರುತ್ತದೆ. ಆಹಾರದಲ್ಲಿ ಬಳಸುವ ಎಣ್ಣೆಯಲ್ಲಿ ಫ್ರೀ ಫ್ಯಾಟಿ ಆಸಿಡು ೦.೧% ಕ್ಕಿಂತ ಹೆಚ್ಚಾಗಿ ಇರಬಾರದು. ಅದಕ್ಕೆ ಎಣ್ಣೆಯನ್ನು ರಿಫೈನರಿ ಕಾರ್ಖಾನೆ ಯಲ್ಲಿ ಶುದ್ಧಿ ಮಾಡಲಾಗುತ್ತದೆ. ರಿಪೈನರಿಯಲ್ಲಿ ಕಚ್ಚಾ ಎಣ್ಣೆಯಲ್ಲಿರುವ ಫ್ರೀಫ್ಯಾಟಿ ಆಸಿಡುಗಳನ್ನು ತೆಗೆದುಹಾಕಿ, ಎಣ್ಣೆ ಕಲರನ್ನು (ಬಣ್ಣವನ್ನು) ಬ್ಲೀಚಿಂಗ್ನಿಂದ ಕಡಿಮೆ ಮಾಡಲಾಗುತ್ತದೆ. ಎಣ್ಣೆಯಲ್ಲಿರುವ ಕೆಟ್ಟ ವಾಸನೆ ತೊಲಗಿಸಿ ರೀಪೈಂಡು ಎಣ್ಣೆಯನ್ನು ಅಡುಗೆ ಎಣ್ಣೆಯಾಗಿ ಬಳಸುತ್ತಾರೆ.
ಹತ್ತಿಬೀಜದ ಎಣ್ಣೆಯ ಭೌತಿಕ ಗುಣಗಳು [3]
ಗುಣಗಳು | ಮಿತಿ |
ವಿಶಿಷ್ಟ ಗುರುತ್ವ | at250C |
ವಕ್ರೀಭವನ ಸೂಚಿಕೆ(400C) | 1.463-1.466 |
ಐಯೋಡಿನ್ ಬೆಲೆ(value) | 103-115 |
ಸಪೋನಿಫಿಕೇಸನ್ ಬೆಲೆ | 191-196 |
ಸ್ಮೋಕ್(ಹೊಗೆ)ಪಾಯಿಂಟ್ | 2320C |
ಅನ್ ಸಫೊನಿಫಿಯಬು ಪದಾರ್ಥ | 2.0%max |
ಟೈಟರ್ | 32-380C |
ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳು ಶೇಕಡ
ಕೊಬ್ಬಿನ ಆಮ್ಲ | ಕಾರ್ಬನು ಸಂಖ್ಯೆ:ಬಂಧಗಳು | ಶೇಕಡ |
ಮಿರಿಸ್ಟಿಕ್ ಆಸಿಡ್ | C14:0 | 0.5-2.0 |
ಪಾಮಿಟಿಕ್ ಆಸಿಡ್ | C16:0 | 17-29 |
ಪಾಮಿಟೊಲಿಕ್ ಆಸಿಡ್ | C16:1 | <1.5 |
ಸ್ಟಿಯರಿಕ್ ಆಸಿಡ್ | C18:0 | 1.04.0 |
ಒಲಿಕ್ ಆಸಿಡ್ | C18:1 | 13-44 |
ಲಿನೊಲಿಕ್ ಆಸಿಡ್ | C18:2 | 40-60 |
ಲಿನೊಲೆನಿಕ್ ಆಸಿಡ್ | C18:3 | 0.1-2.0 |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.