ಹಣಕಾಸು
From Wikipedia, the free encyclopedia
ಹಣಕಾಸು ಎಂದರೆ ಸಂಪತ್ತಿನ ನಿರ್ವಹಣೆಯ ವಿಜ್ಞಾನ.[1] ಹಣಕಾಸಿನ ಸಾಮಾನ್ಯ ಕ್ಷೇತ್ರಗಳೆಂದರೆ ವಾಣಿಜ್ಯದ ಹಣಕಾಸು , ವೈಯಕ್ತಿಕ ಹಣಕಾಸು , ಮತ್ತು ಸಾರ್ವಜನಿಕ ಹಣಕಾಸು .<ref>ಹಣಕಾಸು. (2009). ಎನ್ಸೈಕ್ಲೊಪಿಡಿಯ ಬ್ರಿಟಾನಿಕಾದಲ್ಲಿ. ಜೂನ್ 23, 2009, ಎನ್ಸೈಕ್ಲೊಪಿಡಿಯ ಬ್ರಿಟಾನಿಕಾ ಆನ್ಲೈನ್ ನಿಂದ ಪಡೆದದ್ದು: ಹಣಕಾಸಿನಲ್ಲಿ ಹಣದ ಉಳಿತಾಯ ಮತ್ತು ಕೆಲವೊಮ್ಮೆ ಹಣದ ಸಾಲ ನೀಡುವಿಕೆಯೂ ಸೇರಿರುತ್ತವೆ. ಸಮಯ, ಹಣ ಮತ್ತು ಅಪಾಯಗಳ ಪರಿಕಲ್ಪನೆ ಮತ್ತು ಅವುಗಳ ಪರಸ್ಪರ ಸಂಬಂಧದ ಅಧ್ಯಯನವನ್ನು ಹಣಕಾಸು ಒಳಗೊಂಡಿದೆ. ಹಣವನ್ನು ಹೇಗೆ ಖರ್ಚು ಮಾಡುವುದು ಮತ್ತು ಬಜೆಟ್ ಮಾಡುವುದು ಎಂಬುದನ್ನು ಅದು ಒಳಗೊಂಡಿರುತ್ತದೆ.
ವ್ಯಕ್ತಿಗಳು ಮತ್ತು ವಾಣಿಜ್ಯ ಸಂಸ್ಥೆಗಳು ಬ್ಯಾಂಕಿನಲ್ಲಿ ಹಣವನ್ನು ಇರಿಸುವುದರೊಂದಿಗೆ ಹಣಕಾಸಿನ ಮೂಲಭೂತವಾದ ಕೆಲಸ ನಡೆಯುತ್ತದೆ. ಬ್ಯಾಂಕು ನಂತರ ಹಣವನ್ನು ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳಿಗೆ ಬಳಕೆಗಾಗಿ ಇಲ್ಲವೇ ಹೂಡಿಕೆಗಾಗಿ ಸಾಲ ಕೊಡುತ್ತದೆ ಮತ್ತು ಸಾಲಗಳಿಗೆ ಬಡ್ಡಿ ಹಾಕುತ್ತದೆ.
ಸಾಲಗಳು ಮರುಮಾರಾಟಕ್ಕೆ ಹೆಚ್ಚಾಗಿ ಸಿದ್ಧಪಡಿಸಲ್ಪಡುತ್ತಿವೆ, ಅಂದರೆ ಬಂಡವಾಳದಾರರು ಸಾಲವನ್ನು (ಋಣವನ್ನು) ಬ್ಯಾಂಕಿನಿಂದ ಅಥವಾ ಸಂಸ್ಥೆಯಿಂದ ನೇರವಾಗಿ ಕೊಳ್ಳುತ್ತಾರೆ. ಬಾಂಡುಗಳು ಬಂಡವಾಳದಾರರಿಗೆ ಸಂಸ್ಥೆಗಳು ನೇರವಾಗಿ ಮಾರುವ ಸಾಲಗಳು, ಬಂಡವಾಳದಾರರು ಸಾಲವನ್ನು ತಡೆಹಿಡಿದು ಬಡ್ಡಿಯನ್ನು ಗಳಿಸಬಹುದು ಅಥವಾ ಸಾಲವನ್ನು ದ್ವಿತೀಯ ಮಾರುಕಟ್ಟೆಯಲ್ಲಿಮಾರಬಹುದು. ಸಾಲ ಕೊಡುವುದರ ಮೂಲಕ ಬ್ಯಾಂಕುಗಳು ಹೂಡಿಕೆಯ ಮುಖ್ಯ ಸಹಾಯಕರಾಗಿವೆ ಆದರೂ ಸಹ ಖಾಸಗಿ ಷೇರುಗಳು, ಮ್ಯುಚುಯಲ್ ಫಂಡುಗಳು, ಹೆಜ್ ಫಂಡುಗಳು ಮತ್ತಿತರ ವ್ಯವಸ್ಥೆಗಳು ಸಾಲದ ವಿಭಿನ್ನ ಪ್ರಕಾರಗಳಲ್ಲಿ ಬಂಡವಾಳ ಹಾಕುವುದರಿಂದ ಪ್ರಾಮುಖ್ಯತೆ ಪಡೆದಿವೆ. ಹೂಡಿಕೆಗಳು ಎಂದು ಕರೆಯಲ್ಪಡುವ ಆರ್ಥಿಕ ಆಸ್ತಿಗಳನ್ನು ಆರ್ಥಿಕ ಅಪಾಯಗಳನ್ನು ನಿಯಂತ್ರಿಸುವ ಸಲುವಾಗಿ ಆರ್ಥಿಕ ಅಪಾಯಗಳ ನಿರ್ವಹಣೆಗೆ ಎಚ್ಚರಿಕೆಯಿಂದ ಗಮನ ನೀಡಿ ಆರ್ಥಿಕವಾಗಿ ನಿರ್ವಹಿಸಲಾಗುತ್ತದೆ. ಬಾಂಡುಗಳಂತಹ ಸಾಲಗಳು ಮತ್ತು ಸಾರ್ವಜನಿಕವಾಗಿ ಮಾರಾಟವಾಗುವ ಸಂಸ್ಥೆಗಳಲ್ಲಿನ ಷೇರುಗಳು ಸೇರಿದಂತೆ ಆರ್ಥಿಕ ಸಾಧನಗಳು ಅನೇಕ ಬಗೆಯ ಸುರಕ್ಷಿತ ಆಸ್ತಿಗಳನ್ನು ಸ್ಟಾಕ್ ಎಕ್ಸ್ ಚೇಂಜ್ ನಂತಹ ಸೆಕ್ಯೂರಿಟಿ ವಿನಿಮಯಕೇಂದ್ರಗಳಲ್ಲಿ ಮಾರಾಟಮಾಡಲು ಸಹಾಯ ಮಾಡುತ್ತವೆ.[dubious – discuss]
ಕೇಂದ್ರೀಯ ಬ್ಯಾಂಕುಗಳು ಅಂತಿಮ ಋಣದಾತರಾಗಿ ಕಾರ್ಯ ನಿರ್ವಹಿಸುವುದಲ್ಲದೆ, ಬಡ್ಡಿಯ ದರದ ಮೇಲೆ ಪ್ರಭಾವ ಬೀರುವ ಹಣದ ಪೂರೈಕೆಯನ್ನು ನಿಯಂತ್ರಿಸುತ್ತವೆ. ಹಣದ ಪೂರೈಕೆ ಹೆಚ್ಚಾದಂತೆ ಬಡ್ಡಿಯ ದರಗಳು ಕಡಿಮೆಯಾಗುತ್ತವೆ.<ref>Microsoft. 2009. ಪೈನಾನ್ಸ್.