ಸ್ಯಾಲಿ ಕ್ರಿಸ್ಟಿನ್ ರೈಡ್
From Wikipedia, the free encyclopedia
From Wikipedia, the free encyclopedia
ಸ್ಯಾಲಿ ಕ್ರಿಸ್ಟಿನ್ ರೈಡ್ ಅವರು ಅಮೇರಿಕಾದ ಭೌತಶಾಸ್ತ್ರಜ್ಞ ಮತ್ತು ಗಗನಯಾತ್ರಿ.ಇವರು ೨೬ ಮೇ ೧೯೫೧ರಲ್ಲಿ ಏಂಜಲೀಸ್ ನಲ್ಲಿ ಜನಿಸಿದರು.ಇವರು ೧೯೭೮ರಲ್ಲಿ 'ನಾಸಾ'ಕ್ಕೆ ಸೇರಿಕೊಂಡರು ಮತ್ತು ೧೯೮೩ರಲ್ಲಿ ಅಂತರಿಕ್ಷಕ್ಕೆ ಹೋದ ಮೊದಲ ಸ್ತ್ರೀ ಎಂದು ಪ್ರಸ್ಸಿದ್ದರು. ಕಾಸ್ಮೋನಾಟ್ಸ್ ವ್ಯಾಲಂಟಿನ ಟ್ರೆಶ್ಕೋವ ಮತ್ತು ಸ್ವೆಟ್ಲಿನ ಸವಿಟ್ಸ್ಕಾಯ ಇವರಿಬ್ಬರ ನಂತರ ಸ್ಯಾಲಿ ರೈಡ್ ರವರು ಮೂರನೆ ಮಹಿಳೆಯಾಗಿದ್ದಾರೆ ಅಂತರಿಕ್ಷಕ್ಕೆ ಹೋಗಲು. ಅವರು ಚಿಕ್ಕ ವಯಸ್ಸಿನಲ್ಲಿ ಗಗನಯಾತ್ರೆ ಮಾಡಿದ ಪ್ರಸಿದ್ದಿ ಹೊಂದಿದ್ದಾರೆ ಈ ಸಾಹಸ ಮಾಡಿದ ಅಮೇರಿಕಾದ ಮೊದಲ ಮಹಿಳೆ ಹಾಗೂ ಅತ್ಯಂತ ಕಿರಿಯ ಬಾಹ್ಯಾಕಾಶಯಾನಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.ಅವರು ೩೨ ವರ್ಷದವರಾಗಿದ್ದಾಗ ಎರಡು ಬಾರಿ ಗಗನಕ್ಕೆ ಹಾರಿದ ನಂತರ ನಾಸಾವನ್ನು ೧೯೮೭ರಲ್ಲಿ ಬಿಟ್ಟರು. ಅವರು ೩ ವರ್ಷಗಳ ಕಾಲ ಸ್ಟಾನ್ ಫೋರ್ಡ ವಿಶ್ವವಿದ್ಯಾಲಯದಲ್ಲಿ ಮತ್ತು ಕ್ಯಾಲಿಫೋನಿಯಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರೋಫೆಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.೧೯೮೭ರಲ್ಲಿ 'ಚಾಲೆಂಜರ್ ನೌಕೆಯಲ್ಲಿ ಬಾಹ್ಯಾಕಾಶ ಯಾತ್ರೆ ಕೈಗೊಂಡರು. ತದನಂತರ ಕೊಲಂಬಿಯಾ ಬಾಹ್ಯಾಕಾಶ ನೌಕೆಯಲ್ಲೂ ಪ್ರಯಾಣಿಸಿದ್ದರು.ನಾಸಾ ತೊರೆದ ನಂತರ ಸ್ಟಾನ್ ಫೋರ್ಡ್ ವಿವಿ ಹಾಗೂ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದರು.ಅಮೇರಿಕಾದ ಹಲವಾರು ಪ್ರತಿಫ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಸ್ಯಾಲಿ. ಅವರು ೨೩ ಜುಲೈ ೨೦೧೨ ರಲ್ಲಿ ಕ್ಯಾನ್ಸರ್ ನಿಂದ ನಿಧನ ಹೊಂದಿದ್ದರು.[೧]
ಡೇಲ್ ಬುರ್ಡೆಲ್ ರೈಡ್ ಮತ್ತು ಕರೊಲ್ ಜೂಯ್ಸ ರವರ ದೊಡ್ಡಮಗಳು ಸ್ಯಾಲಿ ರೈಡ್ ರವರು,ಲಾಸ್ ಏಂಜಲೀಸ್ ನ ಕ್ಯಾಲಿಫೋರ್ನಿಯಾದಲ್ಲಿ ಜನಿಸಿದರು ಅವರ ತಮ್ಮ ಕರನ್ ಬಿರ್ ರೈಡ್ ಇವರು ಮಿನಿಸ್ಟರ್ ಆಗಿದ್ದರು .ರೈಡ್ ರವರ ತಾಯಿ ಸ್ವಯಂ ಸೇವಕ ಸಲಹೆಗಾರರಾಗಿ ವುಮೆನ್ಸ ಕರೆಕ್ಷನಲ್ ಸಹಾಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು.ಅವರ ತಂದೆ ರಾಜಕಾರಣಿಯಾಗಿ ಹಾಗೂ ವಿಜ್ಙಾನದ ಪ್ರೊಫೆಸರ್ ಆಗಿ ಸಂತ ಮೋನಿಕ ಕಾಲೇಜಿನಲ್ಲಿ ಕೆಲಸ ನಿರ್ವಹಿಸಿದ್ದರು.ರೈಡ್ ರವರ ಪ್ರಾಥಮಿಕ ಶಾಲೆಯನ್ನು ಪೊರ್ ಟೊಲ ಮಿಡಲ್ ಸ್ಕೂಲ್ ನಲ್ಲಿ ಮುಗಿಸಿ ಮತ್ತು ನಂತರ ಬಿರ್ಮಿನ್ ಗಮ್ ಹೈ ಸ್ಕೂಲ್, ನಂತರ ಡಿಗ್ರಿಯನ್ನು ವೆಸ್ಟ್ ಲೇಕ್ ಹುಡುಗಿಯರ ಸ್ಕೂಲ್, ಲಾಸ್ ಏಂಜಲೀಸ್ ನಲ್ಲಿ ಶುಲ್ಕ ವಿನಾಯಿತಿ ಸಹಾಯದಿಂದ ಮಾಡಿದರು.ಶೈಕ್ಷಣಿಕವನ್ನು ಬಿಟ್ಟು ರೈಡ್ ರವರು ನ್ಯಾಷನಲ್ ಟೆನಿಸ್ ಪ್ಲೇಯರ್ ಆಗಿದ್ದರು. ಸ್ಟಾನ್ ಫೋರ್ಡ್ ಯುನಿವರ್ಸಿಟಿ ಯಲ್ಲಿ ಸ್ನಾತಕೋತ್ತರ ಪದವಿಯನ್ನು ೧೯೭೫ರಲ್ಲಿ ಮತ್ತು ೧೯೭೮ ರಲ್ಲಿ ಭೌತಶಾಸ್ತ್ರದಲ್ಲಿ ಪಿ.ಎಚ್.ಡಿ ಪದವಿಯನ್ನು ಪಡೆದರು.[೨]
ರೈಡ್ ತನ್ನ ವೈಯಕ್ತಿಕ ಜೀವನದ ಬಗ್ಗೆ ಅತ್ಯಂತ ಆಸಕ್ತಿತೋರಿಸುತ್ತಿದ್ದರು.೧೯೮೨ ರಲ್ಲಿ,ಅವರು ಸಹ ನಾಸಾದಲ್ಲಿ ಗಗನಯಾತ್ರೆ ಮಾಡಿದ್ದ ಸ್ಟೀವ್ ಹಾಲೆಯವರನು ಮದುವೆಯಾದರು.೧೯೮೭ರಲ್ಲಿ ಅವರು ವಿಚ್ಛೇಧನ ಪಡೆದರು .ರೈಡ್ ರನ್ನು ಒಬ್ಬ ಉತ್ತಮ ಆಜ್ಞೇಯತಾವಾದಿಯೆಂದು ವರ್ಣಿಸಲಾಗುತ್ತದೆ. ಇವರು ಧಾರ್ಮಿಕ ನಂಬಿಕೆಯ ಕೊರತೆಯು ಯಾರ ಪ್ರಭಾವದಿಂದಲೂ ಹುಟ್ಟಿಕೊಳ್ಳಲಿಲ್ಲ,ಬದಲಿಗೆ ತನ್ನ ಜಿಜ್ಞಾಸೆಯ ಮನಸ್ಸಿನಿಂದ ಹುಟ್ಟಿಕೊಂಡಿತು ಇವರು ದೇವರ ಅಸ್ತಿತ್ವದ ನಂಬಿಕೆಯನ್ನು ನಿರಾಕರಿಸುತ್ತಿದ್ದರು ಎಂದು ಅವರ ತಾಯಿ ನೆನಪಿಸಿಕೊಳ್ಳುತ್ತಾರೆ. ರೈಡ್ ವಿಶೇಷವಾಗಿ ವಿದೇಶ ಪ್ರಯಾಣ ಮತ್ತು ಟ್ರೆಕಿಂಗ್ ಇಷ್ಟಪಡುತ್ತಿದ್ದರು. ಇವರು ಅನೇಕ ವೃತ್ತಿಪರ ಪ್ರವಾಸವನ್ನು ಕೈಗೊಂಡರು. ಕುಟುಂಬದಲ್ಲಿ ಇವರು 'ರೈಡ್' ಎಂದು ಕರೆಯಲ್ಪಡುತ್ತಿದ್ದರು. ಇವರು ಸಾಮಾನ್ಯವಾಗಿ ತಮ್ಮ ರಾಜಕೀಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು.ಇವರು ಯಾರೊಂದಿಗೂ ಆಳವಾದ ಸಂಬಂಧವನ್ನು ಹೊಂದಿರಲಿಲ್ಲವೆಂದು ತೋರುತ್ತದೆ.
೧೯೭೮ರಲ್ಲಿ ರೈಡ್ ನಾಸಾ ಸೇರಲು ಆಯ್ಕೆಯಾದರು. ನಾಸಾದಲ್ಲಿ ರೈಡ್ ರವರು ಗ್ರೌಂನ್ಡ್ ಕ್ಯಾಪ್ಸೂಲ್ ಕಮ್ಯುನಿಕೆಟರ್(ಕ್ಯಾಪ್ ಕಾಮ್) ಆಗಿ ಎಸ್ ಟಿ ಎಸ್ ೨ ಮತ್ತು ೩ ಮತ್ತು ಇತ್ತರೆ ರೊಬೋಟ್ ಡೆವೆಲಪ್ ಮಾಡಲು ಸಹಾಯ ಮಾಡಿದ್ದರು.ಮೊದಲು ರೈಡ್ ರವರು ಮಿಡಿಯಾ ಅಡಿಷನ್ ಆಗಿ ಕೆಲಸ ಮಾಡುತ್ತಿದ್ದರು, ಕಾರಣ ಅವರು ಸ್ತ್ರೀಯಾದರಿಂದ. ೧೮ನೇ ಜೂನ್ ೧೯೮೩ರಲ್ಲಿ ರೈಡ್ ರವರು ಅಮೇರಿಕಾದ ಮೊದಲ ಮಹಿಳಾ ಸ್ಪೆಸ್ ಕ್ರೂ ಆಗಿದ್ದರು ಸ್ಪೆಸ್ ಶಟರ್ ಚಾಲೆಂಜರ್ ಎಸ್ ಟಿ ಎಸ್-೭. ಅವರು ಮಿಡಿಯಾ ೩೪೩ ಗಂಟೆಗಳ ಕಾಲ ಸ್ಪೆಸ್ ನಲ್ಲಿ ಸಮಯ ಕಳೆದರು. ರೈಡ್ ರವರು ರೊಬೊಟ್ ಆರ್ಮ್ ವನ್ನು ಅಂತರಿಕ್ಷದಲ್ಲಿ ಬಳಸಿದ ಮೊದಲ ಮಹಿಳೆ ಹಾಗೂ ಉಪಗ್ರಹವನ್ನು ಹಿಂಪಡೆಯಲು ಆರ್ಮ್ ವನ್ನು ಉಪಯೋಗಿಸೆದ ಮೊದಲ ಮಹಿಳೆ. ಅವರು ಮೂರನೇ ಬಾರಿ ಹೊರಡುವ ಮುನ್ನ ೮ ತಿಂಗಳ ಕಾಲ ಟ್ರೈನಿಂಗ್ ಪಡೆದಿದ್ದರು.
೧೯೮೭ ರಲ್ಲಿ, ರೈಡ್ ವಾಷಿಂಗ್ಟನ್, ಡಿಸಿಯ ಇಂಟರ್ನ್ಯಾಷನಲ್ ಸೆಕ್ಯೂರಿಟಿ ಹಾಗೂ ಶಸ್ತ್ರಾಸ್ತ್ರ ನಿಯಂತ್ರಣದಲ್ಲಿ ಕೆಲಸಮಾಡಿದರು. ೧೯೮೯ರಲ್ಲಿ ಅವರು ಕ್ಯಾಲಿಫೋರ್ನಿಯಾ ಸ್ಪೇಸ್ ಇನ್ಸ್ವಿಟ್ಯೂಟ್ ಆಫ್ ಕ್ಯಾಲಿಫೋರ್ನಿಯಾ, ಸ್ಯಾನ್ ಡಿಯಾಗೋ ವಿಶ್ವವಿದ್ಯಾಲಯದ ಭೌತಶಾಸ್ತ್ರದ ಪ್ರೊಫೆಸರ್ ಮತ್ತು ನಿರ್ದೇಶಕರಾಗಿ ಸೇವೆಸಲ್ಲಿಸಿದರು. ೧೯೯೦ರ ಮಧ್ಯಾವಧಿಯಿಂದ ನಿಧನರಾಗುವ ತನಕ, ರೈಡ್ ನಾಸಾಗೆ ಎರಡು ಸಾರ್ವಜನಿಕರ-ಮನವರಿಕೆ ಕಾರ್ಯಕ್ರಮಗಳು ನಡೆಸಿಕೊಟ್ಟರು. ೨೦೦೩ರಲ್ಲಿ ಅವರು ಕೊಲಂಬಿಯಾ ಅಪಘಾತ ತನಿಖಾ ಮಂಡಳಿಯಲ್ಲಿ ಸೇವೆಸಲ್ಲಿಸಿದರು. ೨೦೦೧ರಲ್ಲಿ ಅವರು ಸ್ಯಾಲಿ ರೈಡ್ ಸೈನ್ಸ್ ಕಂಪನಿಯ ಅಧ್ಯಕ್ಷರು ಮತ್ತು ಸಿಇಒ ಆಗಿದ್ದರು, ಪ್ರಾಥಮಿಕ ಮತ್ತು ಮಧ್ಯಮ ಶಾಲಾ ವಿಧ್ಯಾರ್ಥಿಗಳಿಗೆ ವಿಜ್ಞಾನ ಕಾರ್ಯಕ್ರಮಗಳನ್ನು ಹಮ್ಮಿಕ್ಕೊಂಡಿದರು. ರೈಡ್ ರವರು "ಸ್ಪೇಸ್ ಏಮ್ಡ್ ಅಟ್ ಚಿಲ್ಡ್ರನ್" ಮೇಲೆ ೭ ಪುಸ್ತಕಗಳನ್ನು ಬರೆದಿದ್ದಾರೆ ಕಾರಣ ಮಕ್ಕಳನ್ನು ವಿಜ್ಞಾನವನ್ನು ಓದುವುದಾಗಿ ಪ್ರೋತ್ಸಾಹಿಸಲು ಇದೇ ಅವರ ಗುರಿಯಾಗಿತ್ತು. ಏಪ್ರಿಲ್ ೨೦೧೩ರಂದು ರೈಡ್ ರವರಿಗೆ ಗೌರವಸಲ್ಲಿಸಲಿಕ್ಕೆ ಯು.ಎಸ್ ನೌಕಾಪಡೆ ಸೊಶೋಧನ ಹಡಗನ್ನು ರೈಡ್ ರವರ ಹೆಸರನ್ನು ನೀಡಿದೆ. ಜಾನಲ್ಲೇ ಮೊನ್ನೆ ಅವರು ಸ್ಯಾಲಿ ರೈಡ್ ಎಂಬ ಹಾಡನ್ನು ಬರೆದಿದ್ದಾರೆ.೨೦೧೭ರಂದು ಗೂಗಲ್ ಡೂಡಲ್ ಅಂತರರಾಷ್ಟ್ರಿಯಾ ಮಹಿಳಾ ದಿನಾಚಾರಣೆಯಂದು ರೈಡ್ ರವರನ್ನು ಗೌರವಸಿದ್ದಾರೆ.
ನ್ಯಾಷನಲ್ ಸ್ಪೇಸ್ ಸೊಸೈಟೀಸ್ ವೊನ್ ಬ್ರಾನ್. ಎನ್ ಸಿ ಎ ಎ ತಿಒಡೊರ್ ರೂಸ್ವೆಲ್ಟ್ ಅವಾರ್ಡ್. ನ್ಯಾಷನಲ್ ವುಮೆನ್ಸ್ ಹಾಲ್ ಆಫ್ ಫೇಮ್.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.