ಸಿದ್ಧ
From Wikipedia, the free encyclopedia
ಸಿದ್ಧ (ಸಂಸ್ಕೃತ, "ಪರಿಪೂರ್ಣನಾದವನು") ಭಾರತೀಯ ಧರ್ಮಗಳು ಮತ್ತು ಸಂಸ್ಕೃತಿಯಲ್ಲಿ ವ್ಯಾಪಕವಾಗಿ ಬಳಸಲಾಗುವ ಒಂದು ಪದ. ಇದರರ್ಥ "ಸಾಧಿಸಿದವನು, ಪಾರಂಗತ" ಎಂದು.[1][2] ಈ ಪದವು ಉನ್ನತ ಮಟ್ಟದ ದೈಹಿಕ ಮತ್ತು ಆಧ್ಯಾತ್ಮಿಕ ಪರಿಪೂರ್ಣತೆ ಅಥವಾ ಜ್ಞಾನೋದಯವನ್ನು ಸಾಧಿಸಿದ ಪರಿಪೂರ್ಣಗೊಂಡ ನಿಪುಣರನ್ನು ಸೂಚಿಸುತ್ತದೆ. ಜೈನ ಧರ್ಮದಲ್ಲಿ, ಈ ಪದವನ್ನು ವಿಮೋಚಿತ ಆತ್ಮಗಳನ್ನು ಸೂಚಿಸಲು ಬಳಸಲಾಗುತ್ತದೆ. ಸಿದ್ಧ ಪದವು ಅಧಿಸಾಮಾನ್ಯ ಸಾಮರ್ಥ್ಯಗಳು, ಸಿದ್ಧಿಯನ್ನು ಸಾಧಿಸಿದವನನ್ನೂ ಸೂಚಿಸಬಹುದು.
ಸಿದ್ಧ ಪದವು ಸ್ಥೂಲವಾಗಿ ಸಿದ್ಧರ್ರು, ನಾಥರು, ತಪಸ್ವಿಗಳು, ಸಾಧುಗಳು, ಅಥವಾ ಯೋಗಿಗಳನ್ನು ಸೂಚಿಸಬಹುದು ಏಕೆಂದರೆ ಅವರೆಲ್ಲರೂ ಸಾಧನೆ ಮಾಡುತ್ತಾರೆ.