ಸಿ++
ಕಂಪ್ಯೂಟರ್ ಪ್ರೋಗ್ರಾಮಿಂಗ್ ಭಾಷೆಗಳಲ್ಲಿ “ಸಿ ಪ್ಲಸ್ ಪ್ಲಸ್” (ಅಥವಾ “ಸೀ ಪ್ಲಸ್ ಪ್ಲಸ್”) ಕೂಡಾ ಒಂದು / From Wikipedia, the free encyclopedia
ಕಂಪ್ಯೂಟರ್ ಪ್ರೋಗ್ರಾಮಿಂಗ್ ಭಾಷೆಗಳಲ್ಲಿ “ಸಿ ಪ್ಲಸ್ ಪ್ಲಸ್” (ಅಥವಾ “ಸೀ ಪ್ಲಸ್ ಪ್ಲಸ್”) ಕೂಡಾ ಒಂದು. ಇಂಗ್ಲಿಷ್ ಅಕ್ಷರಮಾಲೆಯ “ಸಿ” ಅಕ್ಷರವನ್ನು ಬಳಸಿಕೊಂಡ “ಸಿ” ಪ್ರೋಗ್ರಾಮಿಂಗ್ ಭಾಷೆಯ ವಿಸ್ತೀರ್ಣ ಎಂದು “ಸಿ ಪ್ಲಸ್ ಪ್ಲಸ್” ಭಾಷೆಯನ್ನು ಪರಿಗಣಿಸಬಹುದು. ಈ ಎರಡೂ ಭಾಷೆಗಳನ್ನು ಯಾವುದೇ ಬಗೆಯ ಪ್ರೋಗ್ರಾಮಿಂಗ್ ಕೆಲಸಕ್ಕೆ ಬಳಸಿಕೊಳ್ಳಬಹುದು; ಆದ್ದರಿಂದ ಇವುಗಳನ್ನು ಜೆನೆರಲ್ ಪರ್ಪಸ್ ಎಂದು ಕರೆಯುವುದು ರೂಢಿ. “ಇದನ್ನು ಮಾಡು,” ಎಂದು ನಿರ್ದೇಶಿಸುವ ಕ್ರಿಯಾವಾಚಕಗಳನ್ನು ಬಳಸುವ ಪ್ರೋಗ್ರಾಮಿಂಗ್ ಭಾಷೆಗಳನ್ನು “ಆಜ್ಞಾವಾಚಕ ಪ್ರೋಗ್ರಾಮಿಂಗ್ ಎನ್ನುತ್ತಾರೆ. ಸೀ ಪ್ಲಸ್ ಪ್ಲಸ್ ಒಂದು ಆಜ್ಞಾವಾಚಕ ಪ್ರೋಗ್ರಾಮಿಂಗ್ ಭಾಷೆಯಾಗುವುದರ ಜೊತೆಗೇ ವಿಭಿನ್ನವಾದ ಒಂದು ಪ್ರೋಗ್ರಾಮಿಂಗ್ ರೀತಿಯನ್ನೂ ಒಳಗೊಂಡಿದೆ; ಇದು “ ಆಬ್ಜೆಕ್ಟ್ ಓರಿಯೆಂಟೆಡ್” ಅಥವಾ “ವಸ್ತು ಕೇಂದ್ರೀಕೃತ” ಎಂಬ ವಿಧಾನ.
![Thumb image](http://upload.wikimedia.org/wikipedia/commons/thumb/b/b9/C_Cpp_compare.png/220px-C_Cpp_compare.png)
ಪ್ರೋಗ್ರಾಮಿಂಗ್ ಮಾದರಿ (ಪ್ಯಾರಾಡಿಗಮ್) | ಬಹುವಿಧ | ನಾನಾ-ಆಲೋಚನಾಕ್ರಮ|ಮಲ್ಟಿ ಪ್ಯಾರಾಡೈಮ್ : ಕ್ರಮವಿಧಿ | ಕ್ರಮವಿಧಿ ಪ್ರೋಗ್ರಾಮಿಂಗ್, ಫಂಕ್ಷನಲ್ ಪ್ರೋಗ್ರಾಮಿಂಗ್, ವಸ್ತು-ಕೇಂದ್ರೀಕೃತ ಪ್ರೋಗ್ರಾಮಿಂಗ್, ಸರ್ವೋಪಯೋಗಿ ಪ್ರೋಗ್ರಾಮಿಂಗ್ ಭಾಷೆ[1] |
---|---|
ಬಿಡುಗಡೆ | ಟೆಂಪ್ಲೇಟು:1983 |
ವಿನ್ಯಾಸಗೊಳಿಸಿದ | ಜಾರ್ನ್ ಸ್ಟ್ರಾಸ್ಟ್ರಪ್ |
ಸಾಫ್ಟ್ವೇರ್ ರಿಲೀಸ್ ಲೈಫ್ ಸೈಕಲ್ | ISO/IEC 14882:2014 (15 ಡಿಸೆಂಬರ್ 2014; 3524 ದಿನ ಗಳ ಹಿಂದೆ (2014-೧೨-15)) |
ಟೈಪಿಂಗ್ | ಸ್ಟಾಟಿಕ್ ಟೈಪ್ | ಸ್ಟಾಟಿಕ್, ನಾಮಿನೇಟಿವ್ | ನಾಮಕೇವಾಸ್ತೆ, ಭಾಗಶಃ ಊಹಿತ |
ಪ್ರಮುಖ ಅನುಷ್ಠಾನ | ಟೆಂಪ್ಲೇಟು:Nowraplinks |
ಪ್ರಭಾವಿತವಾಗಿದೆ | C, ಸಿಮ್ಯುಲಾ, ಆಲ್ಗಾಲ್ 68, Ada, CLU, ML |
ಪ್ರಭಾವಿತವಾಗಿದೆ | Ada 95, C99, C#,
[2] Chapel, [3] D, Java, [4] Lua, Rust</ref>, ಪೈಥನ್|Python, Perl, PHP |
ಅನುಷ್ಠಾನ ಭಾಷೆ | ಸಿ++ |
ಓಎಸ್ | ಯಾವುದೇ |
ಸಾಮಾನ್ಯ ಫೈಲ್ ವಿಸ್ತರಣೆಗಳು | .cc .cpp .cxx .C .c++ .h .hh .hpp .hxx .h++ |
ಜಾಲತಾಣ | isocpp |
|
ಸೀ ಪ್ಲಸ್ ಪ್ಲಸ್ ಭಾಷೆಯನ್ನು ಸೃಷ್ಟಿಸಿದ ಉದ್ದೇಶಗಳು ಹಲವು – (1) ಸಿಸ್ಟಂ ಪ್ರೋಗ್ರಾಮಿಂಗ್, (2) ಅಡಕ ಗಣಕಗಳ ಪ್ರೋಗ್ರಾಮಿಂಗ್ (3) ಬೃಹತ್ ಗಾತ್ರದ ತಂತ್ರಾಂಶಗಳ ಸೃಷ್ಟಿ, (4) ತಂತ್ರಾಂಶ ಭಾಗಗಳ ಮರುಬಳಕೆ, (5) ಸೃಷ್ಟಿಸಲಾದ ತಂತ್ರಾಂಶಗಳ ಕಾರ್ಯಕ್ಷಮತೆ ಹೆಚ್ಚಿರಬೇಕೆಂಬ ಆಶಯ. ಸೀ ಪ್ಲಸ್ ಪ್ಲಸ್ ಭಾಷೆಯನ್ನು ಅನೇಕ ಕಡೆ ಬಳಸಲಾಗುತ್ತದೆ, ಉದಾಹರಣೆಗೆ ಈ-ಕಾಮರ್ಸ್, ವೆಬ್ ಶೋಧನಾ ಯಂತ್ರ, SQL ಡೇಟಾಬೇಸ್, ಟೆಲಿಫೋನ್ ಸ್ವಿಚ್ ಗಳಲ್ಲಿ ಬಳಕೆಯಾಗುವ ತಂತ್ರಾಂಶ, ಇತ್ಯಾದಿ.
ಸೀ ಪ್ಲಸ್ ಪ್ಲಸ್ ಭಾಷೆಯನ್ನು ಬೆಲ್ ಲ್ಯಾಬ್ಸ್ ಎಂಬ ಪ್ರಯೋಗಾಲಯದಲ್ಲಿ 1979ರಲ್ಲಿ ಅಭಿವೃದ್ಧಿ ಪಡಿಸಲು ಪ್ರಾರಂಭಿಸಿದವನು ಜಾರ್ನ್ ಸ್ಟ್ರೌಸ್ಟ್ರಪ್ ಎಂಬ ಕಂಪ್ಯೂಟರ್ ವಿಜ್ಞಾನಿ. ಇದೇ ಪ್ರಯೋಗಾಲಯದಲ್ಲಿ “ಸಿ” ಪ್ರೋಗ್ರಾಮಿಂಗ್ ಭಾಷೆಯನ್ನು ಕೂಡಾ ಅನ್ವೇಷಿಸಲಾಗಿತ್ತು ಮತ್ತು ಅದು ಈಗಾಗಲೇ ಸಾಕಷ್ಟು ಜನಪ್ರಿಯತೆ ಪಡೆದಿತ್ತು. “ಸಿ” ಭಾಷೆಯನ್ನು ಹೋಲುವ ಆದರೆ ಅದಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾದ ಭಾಷೆಯ ಸೃಷ್ಟಿ ಆತನ ಉದ್ದೇಶವಾಗಿತ್ತು. “ಸಿ” ಭಾಷೆಯಲ್ಲಿ “ಎ” ಎಂಬ ಒಂದು ಅಂಕಿಯನ್ನು ಹೆಚ್ಚಿಸಬೇಕಾದರೆ “ಎ++” ಎಂಬ ಸರಳವಾದ ನಿರ್ದೇಶವಿದೆ. “ಸಿ” ಭಾಷೆಯನ್ನು ಇನ್ನಷ್ಟು ಬೆಳೆಸುವ ಉದ್ದೇಶ ಹೊಂದಿದ್ದರಿಂದ ಈ ಭಾಷೆಗೆ “ಸಿ++” ಎಂಬ ಹೆಸರನ್ನು ಸೂಕ್ತವೆಂದು ಅನ್ವೇಷಕನಿಗೆ ತೋರಿತು. ಅಂತರರಾಷ್ಟ್ರೀಯ ಮಾನಕ ಸಂಸ್ಥೆಯು ಸೀ ಪ್ಲಸ್ ಪ್ಲಸ್ ಭಾಷೆಗೆ ಮಾನ್ಯತೆ ನೀಡಿದೆ. ಮೊದಲು 1998ರಲ್ಲಿ ಸೀ ಪ್ಲಸ್ ಪ್ಲಸ್ ಭಾಷೆಗೆ ಇಂಥ ಮಾನ್ಯತೆ ಸಿಕ್ಕಿತು (ISO/IEC 14882:1998). ಡಿಸೆಂಬರ್ 2014ರಲ್ಲಿ ಇತ್ತೀಚಿನ ಬದಲಾವಣೆಗಳಿಗೆ ಮಾನ್ಯತೆ ನೀಡಲಾಗಿದೆ (ISO/IEC 14882:2014).
ಸೀ ಪ್ಲಸ್ ಪ್ಲಸ್ ಭಾಷೆಯ ಪ್ರಭಾವ ಅನೇಕ ಪ್ರೋಗ್ರಾಮಿಂಗ್ ಭಾಷೆಗಳ ಮೇಲೆ ಆಗಿದೆ. ಸೀ ಶಾರ್ಪ್, ಡಿ, ಜಾವಾ, ಮತ್ತು “ಸಿ” ಭಾಷೆಯ ಹೊಸ ಅವತರಣಿಕೆಗಳ ಮೇಲೆ ಸೀ ಪ್ಲಸ್ ಪ್ಲಸ್ ಭಾಷೆಯ ಪ್ರಭಾವ ಗುರುತಿಸಬಹುದು.