ಸಾಮಾನ್ಯ ಏಷ್ಯನ್ ನೆಲಗಪ್ಪೆ
From Wikipedia, the free encyclopedia
ಸಾಮಾನ್ಯ ಏಷ್ಯನ್ ನೆಲಗಪ್ಪೆ (Asian Common Toad) ದಕ್ಷಿಣ ಮತ್ತು ಆಗ್ನೇಯ ಏಷಿಯಾದಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ನೆಲಗಪ್ಪೆಯ ಒಂದು ಪ್ರಭೇದ. ವೈಜ್ಞಾನಿಕ ನಾಮಕರಣದಲ್ಲಿ ಇದನ್ನು ದತ್ತಾಫ್ರಿನಸ್ ಮೆಲನೊಸ್ಟಿಕ್ಟಸ್ ಎಂದು ಕರೆಯುತ್ತಾರೆ. ಇದಕ್ಕೆ ಏಷಿಯನ್ ಕಪ್ಪು ಮುಳ್ಳಿನ ಕಪ್ಪೆ, ಏಷಿಯನ್ ನೆಲಗಪ್ಪೆ, ಕಪ್ಪು ಕನ್ನಡಕದ ನೆಲಗಪ್ಪೆ, ಸಾಮಾನ್ಯ ಸುಂಡಾ ನೆಲಗಪ್ಪೆ ಮತ್ತು ಜಾವಾದ ನೆಲಗಪ್ಪೆ ಎಂಬ ವಿವಿಧ ಹೆಸರುಗಳಿವೆ. ಇದು ಒಂದಕ್ಕಿಂತ ಹೆಚ್ಚು ನೈಜ್ಯ ನೆಲಗಪ್ಪೆ ಪ್ರಭೇದಗಳ ಸಂಕೀರ್ಣವಾಗಿರಬಹುದೆಂದು ನಂಬಲಾಗಿದೆ[2].
Quick Facts ಸಾಮಾನ್ಯ ಏಷ್ಯನ್ ನೆಲಗಪ್ಪೆ, Conservation status ...
Close
ಈ ಪ್ರಭೇದವು ೨೦ ಸೆ.ಮೀ. (೮ ಇಂಚು) ಉದ್ದದವರೆಗೆ ಬೆಳೆಯಬಲ್ಲುದು. ಇವು ಮಳೆಗಾಲದಲ್ಲಿ ನಿಂತ ನೀರಿನಲ್ಲಿ ವಂಶಾಭಿವೃದ್ದಿ ಮಾಡುತ್ತವೆ, ಇವುಗಳ ಗೊದಮೊಟ್ಟೆಗಳು ಕಪ್ಪು ಬಣ್ಣದ್ದಾಗಿರುತ್ತವೆ, ಇವುಗಳ ಸಂಖ್ಯೆ ಹಲವು ನೂರರಷ್ಟಿರುತ್ತವೆ[3]
![Thumb image](http://upload.wikimedia.org/wikipedia/commons/thumb/0/0a/Asian_Common_Toad_%28Duttaphrynus_melanostictus%29.jpg/640px-Asian_Common_Toad_%28Duttaphrynus_melanostictus%29.jpg)