![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/7/76/Gerade.svg/langkn-640px-Gerade.svg.png&w=640&q=50)
ಸರಳರೇಖೆ
From Wikipedia, the free encyclopedia
ಸರಳರೇಖೆಯು ಎರಡು ಬಿಂದುಗಳನ್ನು ಜೋಡಿಸುವ ಕನಿಷ್ಠ ದೀರ್ಘತೆಯ ರೇಖೆ (ಸ್ಟ್ರೇಟ್ ಲೈನ್). ಛೇದಿಸುವ ಎರಡು ಸಮತಲಗಳ ಸಾಮಾನ್ಯ ರೇಖೆ. ಸಂಧಿಸುವ ಎರಡು ಸರಳರೇಖೆಗಳು (l,m) ನಾಲ್ಕು ಪ್ರತ್ಯೇಕ ಕೋನಗಳನ್ನು ರಚಿಸುವುದು ಸರಿಯಷ್ಟೆ: u, v, w, x. ಇಲ್ಲಿ u = w, v = x.
![Thumb image](http://upload.wikimedia.org/wikipedia/commons/thumb/1/13/Vertical_Angles.svg/150px-Vertical_Angles.svg.png)
![see caption](http://upload.wikimedia.org/wikipedia/commons/thumb/7/76/Gerade.svg/320px-Gerade.svg.png)
ಇವುಗಳಿಗೆ ಶಿರೋಅಭಿಮುಖ ಕೋನಗಳೆಂದು (ವರ್ಟಿಕಲ್ಲಿ ಆಪೊಸಿಟ್ ಆ್ಯಂಗಲ್ಸ್) ಹೆಸರು.[1] ಅಲ್ಲದೇ ಇಲ್ಲಿ ಯಾವುವೇ ಒಂದು ಜೊತೆ ಆಸನ್ನ ಕೋನಗಳ ಮೊತ್ತ 1800 - ಇದರ ಹೆಸರು ಸರಳಕೋನ.[2] u + v = u + x = v + w = w + x = 1800. ಆದ್ದರಿಂದ u, v; u, x; v, w; w, x ಜೊತೆಗಳನ್ನು ಸರಳಪೂರಕ ಕೋನಗಳು (ಸಪ್ಲಿಮೆಂಟರಿ ಆ್ಯಂಗಲ್ಸ್) ಎನ್ನುತ್ತೇವೆ.[3]