ಸಂಸ್ಥೆಯ ಪ್ರತಿನಿಧಿ ಕೆಲಸ(ಉಪಮಾರಾಟದ ವೃತ್ತಿ)
From Wikipedia, the free encyclopedia
Expression error: Unexpected < operator.
This article's factual accuracy is disputed. (June 2009) |
ಫ್ರ್ಯಾಂಚೈಸಿಂಗ್ ಅಧಿಕಾರದ ಪ್ರತಿನಿಧಿತ್ವ ವಹಿಸಿ ಕೊಡುವುದೆಂದರೆ ಮತ್ತೊಂದು ಸಂಸ್ಥೆಯ ಯಶಸ್ವಿ ವಹಿವಾಟಿನ ಮಾದರಿಯನ್ನು ಅನುಸರಿಸುವುದು. 'ಫ್ರ್ಯಾಂಚೈಸ್ ' ಪದವನ್ನು ಆಂಗ್ಲೊ-ಫ್ರೆಂಚ್ ಭಾಷೆಯಿಂದ ತೆಗೆದುಕೊಳ್ಳಲಾಗಿದೆ,ಫ್ರಾಂಕ್ ಅಂದರೆ ಮುಕ್ತ,ಮತ್ತು ಇದನ್ನು ನಾಮಪದ ಮತ್ತು ಕ್ರಿಯಾಪದ (ಸಕರ್ಮಕ)ಎಂದೂ [1][2] ಬಳಸಲಾಗುತ್ತದೆ.
ಫ್ರ್ಯಾಂಚೈಸರ್ ಗೆ ಇದು 'ಸರಣಿ ದಾಸ್ತಾನುಗಳ'ಮೂಲಕ ಪರ್ಯಾಯ ಕಟ್ಟಡದಲ್ಲಿ ವಸ್ತುಗಳ ವಿತರಣೆ ಮತ್ತು ವಿಶೇಷ ಬಂಡವಾಳ ಹೂಡಿಕೆ ಮತ್ತು ವ್ಯಾಪಾರಿ ತೊಂದರೆಗಳಿಂದ ದೂರವಾಗಲು ಈ ವ್ಯವಸ್ಥೆ ನೆರವಾಗುತ್ತದೆ.ಫ್ರ್ಯಾಂಚೈಸರ್ ನ ಯಶಸ್ಸು ಫ್ರಾಂಚೈಸೀಯ ಯಶಸ್ಸಾಗುತ್ತದೆ. ಫ್ರ್ಯಾಂಚೈಸೀಯು ನೇರ ನೌಕರನಗಿಂತ ಹೆಚ್ಚು ಆದಾಯದ ಪ್ರ್ತೊತ್ಸಾಹಕರ ಅವಕಾಶ ಪಡೆಯುತ್ತಾನೆ,ಯಾಕೆಂದರೆ ಈತ ಅಥವಾ ಆಕೆ ವ್ಯವಹಾರದಲ್ಲಿ ನೇರ ಬಂದವಾಳ ಹೂಡಿರುತ್ತಾನೆ.
ಹೇಗೆಯಾದರೂ US ಬಿಟ್ಟರೆ ಅದೂ ಈಗ ಚೀನಾದಲ್ಲಿ(2007)ಅಲ್ಲಿ ಒಕ್ಕೂಟ (US ನಲ್ಲಿ ರಾಜ್ಯಗಳ ವ್ಯವಸ್ಥೆ)ಫ್ರ್ಯಾಂಚೈಸಿ ಕಾನೂನುಗಳ ಪರಿವರ್ತನೆ,ಬಹಳಷ್ಟು ದೇಶಗಳು ಫ್ರ್ಯಾಂಚೈಸ್ ವ್ಯವಸ್ಥೆ ಹೊಂದಿದ್ದರೂ ಅದಕ್ಕಾಗಿ ಸೂಕ್ತವಾದ ಕಾನೂನುಗಳಿಲ್ಲ. ಕೇವಲ ಫ್ರಾನ್ಸ್ ಮತ್ತು ಬ್ರ್ಯಾಜಿಲ್ ಮಹತ್ವದ ಕಾನೂನ್ನು ತೆರೆದ ನೀತಿ ನಿಯಮಗಳನ್ನು ರೂಪಿಸಿವೆ,ಆದರೆ ಬ್ರ್ಯಾಜಿಲ್ ಫ್ರ್ಯಾಂಚೈಸೀಗಳನ್ನು ಅತಿ ಹತ್ತಿರದಿಂದ ನಿಯಂತ್ರಣ ಮಾಡುತ್ತದೆ.
ಎಲ್ಲಿ ಇದರ ಬಗ್ಗೆ ವಿಶೇಷ ಕಾನೂನುಗಳನ್ನು ರಚಿಸಲಾಗಿಲ್ಲ,ಫ್ರ್ಯಾಂಚೈಸ್ ನ್ನು ಅಲ್ಲಿ ಒಂದು ವಿತರಣಾ ಪದ್ದತಿಯೆಂದು (ಫ್ರ್ಯಾಂಚೈಸ್ ಪದ್ದತಿ)ಪರಿಗಣಿಸಲಾಗುತ್ತದೆ,ಇದಕ್ಕೆ ವಿತರಣಾ ಕಾನೂನು ಅನ್ವಯವಾಗುತ್ತದೆ,ಇದಕ್ಕೆ ಸಂಬಂಧಪಟ್ಟ ವ್ಯಾಪಾರಿ ಗುರುತನ್ನು ನೀಡಲಾಗುತ್ತದೆ.