ಸಂಸಾರ
From Wikipedia, the free encyclopedia
ಸಂಸಾರ ಎಂಬುದು ಒಂದು ಪಾಲಿ/ ಸಂಸ್ಕೃತ ಶಬ್ಧ. ಇದರ ಅರ್ಥ "ಜಗತ್ತು" ಎಂದು.[1][2] ಹಿಂದೂ ಧರ್ಮ, ಬೌದ್ಧ ಧರ್ಮ, ಬೋನ್, ಜೈನ ಧರ್ಮ, ತಾವೋ ಧರ್ಮ, ಯಾರ್ಸಾನ್ನಲ್ಲಿ, ಸಂಸಾರವು ಜನನ, ಜೀವನ, ಮರಣ ಮತ್ತು ಮರುಹುಟ್ಟಿನ (ಪುನರ್ಜನ್ಮ) ಪುನರಾವರ್ತಿಸುವ ಚಕ್ರ.[2] ಇದು ಬಹುತೇಕ ಎಲ್ಲಾ ಭಾರತೀಯ ಧರ್ಮಗಳ ಮೂಲಭೂತ ನಂಬಿಕೆ. .[3][4][5] ಸಿಖ್ ಧರ್ಮದಲ್ಲಿ ಈ ಪರಿಕಲ್ಪನೆಯು ಸ್ವಲ್ಪ ವಿಭಿನ್ನವಾಗಿದೆ ಮತ್ತು ವರ್ತಮಾನದಲ್ಲಿನ ಒಬ್ಬರ ಕ್ರಿಯೆಗಳು ಮತ್ತು ಪರಿಣಾಮಗಳನ್ನು ನೋಡುತ್ತದೆ. ಈ ಏಷ್ಯಾದ ಧರ್ಮಗಳ ದೃಷ್ಟಿಕೋನದ ಪ್ರಕಾರ, ಒಬ್ಬ ವ್ಯಕ್ತಿಯ ಪ್ರಸಕ್ತ ಜೀವನವು ಅನೇಕವುಗಳಲ್ಲಿ ಕೇವಲ ಒಂದು-ಜನನದ ಮೊದಲು ಹಳೆಯ ಅಸ್ತಿತ್ವಗಳಿಗೆ ಮರಳುವ ಮತ್ತು ಮರಣದ ಆಚೆ ಭವಿಷ್ಯದ ಅವತಾರಗಳಲ್ಲಿ ಮುಂದೆ ತಲುಪುವ. ಸಂಸಾರದ ಪರಿಕಲ್ಪನೆಯು ವೇದಗಳ ನಂತರ ಸಾಹಿತ್ಯದಲ್ಲಿದೆ.ಈ ಸಿದ್ಧಾಂತವನ್ನು ವೇದಗಳಲ್ಲಿ ಚರ್ಚಿಸಲಾಗಿಲ್ಲ.[6][7] ಇದು ಹೆಚ್ಚು ಪರಿಪಕ್ವವಾಗಿ ಮೊದಲ ಉಪನಿಷತ್ತುಗಳಲ್ಲಿ ಕಂಡುಬರುತ್ತದೆ.[8][9] ಸಂಸಾರದ ಪೂರ್ಣ ಪ್ರತಿಪಾದನೆ ಕ್ರಿ ಪೂ ಮೊದಲನೆಯ ಶತಮಾನದ ಹಿಂದೂ ತತ್ವಶಾಸ್ತ್ರ ಗ್ರಂಥಗಳಲ್ಲಿ ಅಂತೆಯೇ ಬೌದ್ಧ ಧರ್ಮ ಮತ್ತು ಜೈನ ಧರ್ಮಗಳ ಪ್ರತಿಪಾದನೆಗಳಲ್ಲಿ ಕಂಡುಬರುತ್ತದೆ.[3][9][10] ಸಂಸಾರ ಸಿದ್ಧಾಂತ ಹಿಂದೂಧರ್ಮದ ಕರ್ಮ ಸಿದ್ಧಾಂತದೊಂದಿಗೆ ಸಂಬಂಧ ಹೊಂದಿದೆ. ಸಂಸಾರದಿಂದ ಬಿಡುಗಡೆ ಹೊಂದುವ ದಾರಿಯ ಅನ್ವೇಷನೆ ಭಾರತೀಯ ಪರಂಪರೆಯ ಮೂಲದಲ್ಲೇ ಇದೆ.ಸಂಸಾರದಿಂದ ಬಿಡುಗಡೆ ಹೊಂದುವುದನ್ನು ಮೋಕ್ಷ,ನಿರ್ವಾಣ, ಮುಕ್ತಿ ಅಥವಾ ಕೈವಲ್ಯ ಎಂದು ಕರೆಯುತ್ತಾರೆ.[3] [11]