ಸಂಖ್ಯೆ
From Wikipedia, the free encyclopedia
ಸಂಖ್ಯೆ ಎನ್ನುವುದು ಎಣಿಕೆ ಮತ್ತು ಅಳತೆಯಲ್ಲಿ ಉಪಯೋಗಿಸುವ ಒಂದು ಅಮೂರ್ತ ಕಲ್ಪನೆ / ಪ್ರತೀಕ. ಗಣಿತಶಾಸ್ತ್ರದಲ್ಲಿ, ಸಂಖ್ಯೆಯ ಪರಿಕಲ್ಪನೆಯನ್ನು ವಿಸ್ತರಿಸಿ ಸ್ವಾಭಾವಿಕ ಸಂಖ್ಯೆಗಳು,[1] ಸೊನ್ನೆ, ಧನ ಸಂಖ್ಯೆಗಳು (positive numbers), ಋಣ ಸಂಖ್ಯೆಗಳು (negative numbers) ಇನ್ನೂ ಮುಂತಾದ ಹೊಸ ರೀತಿಯ ಸಂಖ್ಯೆಗಳನ್ನೂ ಸೇರಿಸಿಕೊಳ್ಳಲಾಗಿದೆ.
ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಮುಂತಾದ ಸಂಖ್ಯೆಗಳ ಮೇಲೆ ಮಾಡುವ ಕ್ರಿಯೆಗಳ ಅಭ್ಯಾಸಕ್ಕೆ ಸಂಖ್ಯಾಗಣಿತ ಎನ್ನುವರು.
ಪ್ರಪಂಚದಾದ್ಯಂತ ವ್ಯವಹಾರದಲ್ಲಿರುವ ಹಿಂದು-ಅರ್ಯಾಬಿಕ್ ಪದ್ಧತಿಯಲ್ಲಿ ಹತ್ತು ವಿಭಿನ್ನ ಪ್ರತೀಕಗಳಿವೆ: 0, 1, 2, 3, 4, 5, 6, 7, 8, 9. ಇವು ಅಂಕೆಗಳು (ನ್ಯೂಮರಲ್ಸ್).[2] ಇವುಗಳ ವಿವಿಧ ಸಂಯೋಜನೆಗಳೇ ಸಂಖ್ಯೆಗಳು.