From Wikipedia, the free encyclopedia
ಟೆಂಪ್ಲೇಟು:History Of The Cold War ಶೀತಲ ಸಮರ ವು (1945–1991) ಎರಡನೇ ವಿಶ್ವಯುದ್ಧದ(1939–1945) ನಂತರ, ಮುಖ್ಯವಾಗಿ ಯು.ಎಸ್.ಎಸ್.ಆರ್ ಮತ್ತು ಅದರ ಆಶ್ರಿತ ದೇಶಗಳು, ಹಾಗೂ ಯುನೈಟೆಡ್ ಸ್ಟೇಟ್ಸ್ನ್ನು ಒಳಗೊಂಡಂತೆ ಪಾಶ್ಚಾತ್ಯ ವಿಶ್ವಶಕ್ತಿಗಳ ನಡುವಣ ಎಂದೂ ನಿಲ್ಲದೆ ಮುಂದುವರೆಯುತ್ತಲೇ ಬಂದ ರಾಜಕೀಯ ಘರ್ಷಣೆ, ಮಿಲಿಟರಿ ಉದ್ವಿಗ್ನತೆ, ಮತ್ತು ಆರ್ಥಿಕ ಪೈಪೋಟಿಗಳಿಗೆ ನೀಡಿದ ಹೆಸರಾಗಿದೆ. ಈ ಸಮರದಲ್ಲಿ ಪಾಲ್ಗೊಂಡ ಪ್ರಮುಖ ದೇಶಗಳ ಮಿಲಿಟರಿ ಶಕ್ತಿಗಳು ಎಂದೂ ಅಧಿಕೃತವಾಗಿ ನೇರ ಯುದ್ಧಕ್ಕಿಳಿಯದಿದ್ದರೂ, ಮಿಲಿಟರಿ ಮೈತ್ರಿಗಳು, ಆಯಕಟ್ಟಿನ ಜಾಗಗಳಲ್ಲಿ ಸಾಂಪ್ರದಾಯಿಕವಾಗಿ ಸೈನ್ಯವನ್ನು ಇರಿಸುವುದು, ಪರಮಾಣು ಅಸ್ತ್ರ ಪೈಪೋಟಿ, ಗೂಢಚರ್ಯೆ, ಹುಸಿ ಯುದ್ಧಗಳು, ಪ್ರಚಾರಕಾರ್ಯಗಳು, ಮತ್ತು ಅಂತರಿಕ್ಷ ಪೈಪೋಟಿಯೇ ಮೊದಲಾದ ತಂತ್ರಜ್ಞಾನ ಸ್ಪರ್ಧೆಗಳ ಮೂಲಕ ಈ ಘರ್ಷಣೆಯನ್ನು ವ್ಯಕ್ತಪಡಿಸಲಾಯಿತು.
ಆಕ್ಸಿಸ್ ಶಕ್ತಿಗಳ ವಿರುದ್ಧದ ಮೈತ್ರಿಕೂಟದಲ್ಲಿದ್ದು ಅತ್ಯಂತ ಶಕ್ತಿಶಾಲಿಗಳಾಗಿದ್ದರೂ, ಯು.ಎಸ್.ಎಸ್.ಆರ್ ಮತ್ತು ಯು.ಎಸ್ಗಳು ವಿಶ್ವಯುದ್ಧಾನಂತರದ ಸಂರಚನೆಯ ಬಗ್ಗೆ ಯುರೋಪ್ನ ಹೆಚ್ಚಿನ ಭಾಗವನ್ನು ಸ್ವಾಧೀನಪಡಿಸಿಕೊಳ್ಳುವ ಸಂದರ್ಭದಲ್ಲಿ ಪರಸ್ಪರ ವಿರೋಧ ವ್ಯಕ್ತಪಡಿಸಿದವು. ಸೋವಿಯೆತ್ ಯೂನಿಯನ್ ತಾನು ಸ್ವಾಧೀನಪಡಿಸಿಕೊಂಡ ಪೂರ್ವ ಯುರೋಪಿಯನ್ ರಾಷ್ಟ್ರಗಳನ್ನು ಸೇರಿಸಿ Eastern Blocನ ಸ್ಥಾಪನೆ ಮಾಡಿ, ಕೆಲವನ್ನು ಸೋವಿಯೆತ್ ಸೋಶಿಯಲಿಸ್ಟ್ ರಿಪಬ್ಲಿಕ್ಗಳನ್ನಾಗಿ ಹಾಗೂ ಉಳಿದವನ್ನು ಆಶ್ರಿತ ದೇಶಗಳನ್ನಾಗಿ ಉಳಿಸಿಕೊಂಡಿದ್ದು, ಇವುಗಳಲ್ಲಿ ಕೆಲವನ್ನು ವಾರ್ಸಾ ಒಪ್ಪಂದ(1955–1991)ದ ಪ್ರಕಾರ ಒಗ್ಗೂಡಿಸಲಾಯಿತು. ಯು.ಎಸ್ ಮತ್ತು ಕೆಲವು ಪಾಶ್ಚಿಮಾತ್ಯ ಯುರೋಪಿಯನ್ ದೇಶಗಳು ಇದಕ್ಕೆ ಪ್ರತಿಯಾಗಿ ಕಮ್ಯುನಿಸಮ್ ದಮನವನ್ನು ರಕ್ಷಣಾ ನೀತಿಯನ್ನಾಗಿ ಜಾರಿಗೆ ತಂದದ್ದಲ್ಲದೆ ಈ ದಿಸೆಯಲ್ಲಿ NATOನಂತಹ ಮೈತ್ರಿಕೂಟಗಳನ್ನು ಸ್ಥಾಪಿಸಿದವು. ಈ ರಾಷ್ಟ್ರಗಳಲ್ಲಿ ಹಲವು ಯು.ಎಸ್.ಎಸ್.ಆರ್ ಬಲವಾಗಿ ವಿರೋಧಿಸುತ್ತಿದ್ದ ಪಶ್ಚಿಮ ಯುರೋಪಿನ ಪುನರ್ನಿರ್ಮಾಣದ, ಅದರಲ್ಲೂ ಪಶ್ಚಿಮ ಜರ್ಮನಿಯ ಸಂಯೋಜನೆಯಲ್ಲಿ ಪಾಲ್ಗೊಂಡವು. ಹಲವಾರು ಪಾಶ್ಚಿಮಾತ್ಯ ದೇಶಗಳು ಮತ್ತು ಅವುಗಳ ಪ್ರಾದೇಶಿಕ ಮೈತ್ರಿಗಳ ವಿರೋಧ ಕಟ್ಟಿಕೊಂಡ ಯು.ಎಸ್.ಎಸ್.ಆರ್ ಲ್ಯಾಟಿನ್ ಅಮೆರಿಕಾ ಮತ್ತು ಆಗ್ನೇಯ ಏಷ್ಯಾಗಳಲ್ಲಿ ಕಮ್ಯುನಿಸ್ಟ್ ಕ್ರಾಂತಿಯನ್ನು ಹುಟ್ಟುಹಾಕಿದಾಗ ಕೆಲವೆಡೆ ಅವನ್ನು ವಾಪಾಸು ತಳ್ಳುವ ಪ್ರಯತ್ನಗಳು ಮಿಶ್ರಫಲ ನೀಡಿದವು. ಕೆಲವು ದೇಶಗಳು NATO ಮತ್ತು ವಾರ್ಸಾ ಒಪ್ಪಂದವನ್ನು ಬೆಂಬಲಿಸಿದವಾದರೂ ಆಲಿಪ್ತ ರಾಷ್ಟ್ರಗಳ ಬಣಗಳೂ ಹುಟ್ಟಿಕೊಂಡವು.
ಶೀತಲ ಸಮರವು ಒಂದೇ ಸಮಯದಲ್ಲಿ ಸಾಪೇಕ್ಷ ಶಾಂತಿ ಮತ್ತು ಅಂತರ್ರಾಷ್ಟ್ರೀಯ ಉದ್ವಿಗ್ನತೆಯ ಏರಲು ಕಾರಣವಾದ ಘಟನೆಗಳಿಗೆ ಸಾಕ್ಷಿಯಾಯಿತು – ಬರ್ಲಿನ್ ಮುತ್ತಿಗೆ (1948–1949), the ಕೊರಿಯನ್ ಯುದ್ಧ (1950–1953), the 1961ರ ಬರ್ಲಿನ್ ಬಿಕ್ಕಟ್ಟು, the ವಿಯೆಟ್ನಾಮ್ ಯುದ್ಧ (1959–1975), the ಕ್ಯೂಬಾದ ಮಿಸೈಲ್ ಬಿಕ್ಕಟ್ಟು (1962), the ಅಫ್ಘಾನಿಸ್ತಾನದ ಸೋವಿಯೆತ್ ಯುದ್ಧ (1979–1989), ಮತ್ತು ನವೆಂಬರ್ 1983ರ ಏಬಲ್ ಆರ್ಚರ್ 83 NATO ವ್ಯಾಯಾಮಗಳು. ನೇರವಾದ ಮಿಲಿಟರಿ ಆಕ್ರಮಣ ಮಾಡುವುದರಿಂದ ಪರಮಾಣು ಅಸ್ತ್ರಪ್ರಯೋಗದ ಮುಖಾಂತರ ಇಬ್ಬರ ವಿನಾಶವೂ ಖಚಿತವಾದ್ದರಿಂದ ಎರಡೂ ಬಣಗಳು ತಮ್ಮ ರಾಜಕೀಯ ಉದ್ವಿಗ್ನತೆಯನ್ನು ಹೊರಹಾಕಲು ಮತ್ತು ನೇರ ಯುದ್ಧವನ್ನು ತಪ್ಪಿಸಲು ಉಪಶಮನದ ಮಾದರಿಯ ಮೊರೆಹೊಕ್ಕವು.
1980ರ ದಶಕದಲ್ಲಿ ಯುನೈಟೆಡ್ ಸ್ಟೇಟ್ಸ್ ಈಗಾಗಲೇ ವಿಪರೀತ ಆರ್ಥಿಕ ಜಡತೆಯಿಂದ ನಲುಗಿದ್ದ ಯು.ಎಸ್.ಎಸ್.ಆರ್ನ ವಿರುದ್ಧ ರಾಜನೀತಿ, ಮಿಲಿಟರಿ, ಮತ್ತು ಆರ್ಥಿಕ ಒತ್ತಡಗಳನ್ನು ಹೆಚ್ಚಿಸಿತು. ಇದಾದ ನಂತರ ಸೋವಿಯೆತ್ನ ಅಧ್ಯಕ್ಷ ಮಿಖಾಯಿಲ್ ಗೋರ್ಬಚೇವ್ ಅವರು ಈ ಉದಾರವಾದಿ ಸುಧಾರಣೆಗಳನ್ನು ಜಾರಿಗೆ ತಂದರು - ಪೆರೆಸ್ತ್ರೊಯಿಕಾ ("ಪುನರ್ರಚನೆ", "ಮರುಸಂಘಟನೆ", 1987) and ಗ್ಲಾಸ್ನಾಸ್ತ್ ("ಮುಕ್ತತೆ", ca. 1985). 1991ರ ಸೋವಿಯೆತ್ ಯೂನಿಯನ್ನ ಕುಸಿತದೊಂದಿಗೆ ಶೀತಲ ಸಮರ ಕೊನೆಗೊಂಡಿತು. ಅಲ್ಲಿಂದ ಯುನೈಟೆಡ್ ಸ್ತೇಟ್ಸ್ ಅತ್ಯಂತ ಶಕ್ತಿಯುತ ಮಿಲಿಟರಿ ಶಕ್ತಿಯಾಗಿ ಉಳಿಯಿತು ಮತ್ತು ಸೋವಿಯೆತ್ ಯೂನಿಯನ್ನ ಹೆಚ್ಚಿನ ಪರಮಾಣು ಅಸ್ತ್ರಗಳೆಲ್ಲವೂ ರಷ್ಯಾದ ಪಾಲಾದವು. ಶೀತಲ ಸಮರ ಮತ್ತು ಅದರ ಘಟನೆಗಳು ಇಂದಿನ ಪ್ರಪಂಚದ ಮೇಲೆ ಸಾಕಷ್ಟು ಪ್ರಭಾವ ಬೀರಿವೆ ಮತ್ತು ಇದನ್ನು ಕಾದಂಬರಿಗಳಂತಹ ಜನಪ್ರಿಯ ಸಂಸ್ಕೃತಿಗಳಲ್ಲಿ ಇಂದಿಗೂ ಸೂಚಿಸಲಾಗುತ್ತಿದೆ.
ಎರಡನೇ ವಿಶ್ವಯುದ್ಧದ ನಂತರ ಯು.ಎಸ್.ಎಸ್.ಆರ್ ಮತ್ತು ಅದರ ಪಶ್ಚಿಮ ಯುರೋಪಿಯನ್ ಮೈತ್ರಿಗಳ ನಡುವಣ [[ಭೌಗೋಳಿಕ-ರಾಜಕೀಯ|ಭೌಗೋಳಿಕ-ರಾಜಕೀಯ]] ಉದ್ವಿಗ್ನತೆಗಳನ್ನು ಬಣ್ಣಿಸುವ ಶೀತಲ ಸಮರ [1] ಎಂಬ ಪದವನ್ನು ಪ್ರಪ್ರಥಮ ಬಾರಿಗೆ ಬಳಸಿದ ಹೆಗ್ಗಳಿಕೆಯು ಯು.ಎಸ್ನ ಫೈನಾನ್ಷಿಯರ್ ಮತ್ತು ಅಧ್ಯಕ್ಷೀಯ ಸಲಹೆಗಾರನಾದ ಬರ್ನಾರ್ಡ್ ಬರುಚ್ಗೆ ಸಲ್ಲುತ್ತದೆ.[2] ಏಪ್ರಿಲ್ 16, 1947ರಂದು ಸೌಥ್ ಕರೊಲಿನಾದಲ್ಲಿ ಮಾಡಿದ ಭಾಷಣದಲ್ಲಿ (ಹರ್ಬರ್ಟ್ ಬೇಯರ್ಡ್ ಸ್ವೋಪ್ ನಿಂದ)[3], ಆತನು “ನಾವು ಮೋಸಹೋಗಬಾರದು: ನಾವು ಇಂದು ಶೀತಲ ಸಮರವೊಂದರ ನಡುವೆ ಇದ್ದೇವೆ” ಎಂದು ಹೇಳಿದನು.[4] ದೈನಿಕ ವರದಿಗಾರ ಮತ್ತು ಅಂಕಣಕಾರ ವಾಲ್ಟರ್ ಲಿಪ್ಮ್ಯಾನ್ ತನ್ನ ಪುಸ್ತಕ ಕೋಲ್ಡ್ ವಾರ್ (1947)ನ ಮೂಲಕ ಈ ಪದಕ್ಕೆ ಹೆಚ್ಚಿನ ಪ್ರಚಾರ ನೀಡಿದನು.[5]
ಇದಕ್ಕೂ ಹಿಂದೆ, ಯುದ್ಧಕಾಲದಲ್ಲಿ ಜಾರ್ಜ್ ಆರ್ವೆಲ್ ಶೀತಲ ಸಮರ ಎಂಬ ಪದವನ್ನು ಅಕ್ಟೋಬರ್ 19, 1945ರಂದು ಬ್ರಿಟೀಶ್ ನಿಯತಕಾಲಿಕ ಟ್ರಿಬ್ಯೂನ್ ನಲ್ಲಿ ಪ್ರಕಟವಾದ ತನ್ನ ಪ್ರಬಂಧ ’ಯು ಎಂಡ್ ದ ಅತಾಮಿಕ್ ಬಾಂಬ್’ನಲ್ಲಿ ಬಳಸಿದ್ದನು. ಪರಮಾಣು ಯುದ್ಧವೊಂದರ ಭೀತಿಯ ನೆರಳಿನಲ್ಲಿ ಬದುಕಬಹುದಾದ ಪ್ರಪಂಚವೊಂದನ್ನು ಊಹಿಸಿದ್ದ ಆತ ನಿರಂತರ ’ಶೀತಲ ಸಮರ’[6] ವೊಂದರ ’ಶಾಂತಿಯಲ್ಲದ ಶಾಂತಿ’ಯ ಬಗ್ಗೆ ಎಚ್ಚರಿಕೆ ನೀಡುತ್ತಾ ಈ ಯುದ್ಧವು ಸೋವಿಯೆತ್ ಯೂನಿಯನ್ ಮತ್ತು ಪಾಶ್ಚಿಮಾತ್ಯ ಶಕ್ತಿಗಳ ನಡುವಿನ ಸೈದ್ಧಾಂತಿಕ ಘರ್ಷಣೆಯಾಗುವುದೆಂದು ನೇರವಾಗಿ ಹೇಳಿದನು.[7] ಮಾರ್ಚ್ 10, 1946ರಂದು ದ ಅಬ್ಸರ್ವರ್ ನಲ್ಲಿ ಆರ್ವೆಲ್ ’. . . ಕಳೆದ ಡಿಸೆಂಬರ್ನ ಮಾಸ್ಕೋ ಅಧಿವೇಶನದ ನಂತರ, ರಷ್ಯಾವು ಬ್ರಿಟನ್ ಮತ್ತು ಬ್ರಿಟಿಷ್ ಸಾಮ್ರಾಜ್ಯದ ಮೇಲೆ ’ಶೀತಲ ಸಮರ’ ಹೂಡಿತು’ ಎಂದು ಬರೆದನು.[8]
ಶೀತಲ ಸಮರದ ಆರಂಭದ ಬಗ್ಗೆ ಇತಿಹಾಸಜ್ಞರಲ್ಲಿ ಒಮ್ಮತವಿಲ್ಲ. ಹೆಚ್ಚಿನ ಇತಿಹಾಸಜ್ಞರು ಎರಡನೇ ವಿಶ್ವಯುದ್ಧದ ಕೊನೆಯನ್ನು ಶೀತಲ ಸಮರದ ಆರಂಭದ ಸ್ಥಾನವನ್ನಾಗಿ ಗುರುತಿಸಿದರೆ, ಇತರರು ಮೊದಲನೇ ವಿಶ್ವಯುದ್ಧದ ಕೊನೆಯಲ್ಲಿ ಶೀತಲಸಮರ ಆರಂಭವಾಯಿತೆಂದು ವಾದಿಸುವರಾದರೂ ರಷ್ಯನ್ ಸಾಮ್ರಾಜ್ಯ, ಇತರ ಯುರೋಪಿಯನ್ ರಾಷ್ಟ್ರಗಳು ಮತ್ತು ಯುನೈಟೆಡ್ ಸ್ಟೇಟ್ಸ್ಗಳ ನಡುವೆ 19ನೇ ಶತಮಾನದ ಮಧ್ಯಭಾಗದ ಸಮಯದದಿಂದಲೇ ಉದ್ವಿಗ್ನತೆಯ ಪರಿಸ್ಥಿತಿ ಇದ್ದಿತು.[9]
1917ರ ರಷ್ಯಾದ ಬೋಲ್ಷೆವಿಕ್ ಕ್ರಾಂತಿ(ಹಾಗೂ ಮೊದಲನೇ ವಿಶ್ವಯುದ್ಧದಿಂದ ಹಿಂದೆಗೆದುದರಿಂದ)ಯಿಂದಾಗಿ, ಸೋವಿಯೆತ್ ರಷ್ಯಾವು ಅಂತರ್ರಾಷ್ಟ್ರೀಯ ರಾಜಕೀಯದಲ್ಲಿ ಒಬ್ಬಂಟಿಯಾಗುಳಿಯುವಂತಾಯಿತು.[10] ನಾಯಕ ವ್ಲಾದಿಮಿರ್ ಲೆನಿನ್ ರಷ್ಯಾವು "ಪ್ರತಿಕೂಲ ಬಂಡವಾಳಶಾಹೀ ಚಕ್ರವ್ಯೂಹ"ದಿಂದ ಸುತ್ತುವರಿಯಲ್ಪಟ್ಟಿದೆಯೆಂದೂ, ತನ್ನ ಪ್ರಕಾರ ಸೋವಿಯೆತ್ ಯೂನಿಯನ್ನಿನ ವಿರೋಧಿಗಳನ್ನು ಒಡೆಯಲು ರಾಜನೀತಿಯೇ ಸರಿಯಾದ ಅಸ್ತ್ರವೆಂದೂ, ಇದು ಸೋವಿಯೆತ್ ಕೋಮಿಂಟರ್ನ್ನ ಸ್ಥಾಪನೆ ಮತ್ತು ವಿದೇಶಗಳಲ್ಲಿ ಕ್ರಾಂತಿಯನ್ನುಂಟುಮಾಡುವುದರಿಂದ ಮಾತ್ರ ಸಾಧ್ಯವಾಗುವುದೆಂದು ಹೇಳಿಕೆ ನೀಡಿದ.[11] ಅನಂತರದ ನಾಯಕ ಜೋಸೆಫ್ ಸ್ಟಾಲಿನ್, ಸೋವಿಯೆತ್ ಯೂನಿಯನ್ ಅನ್ನು ಒಂದು "ಸಮಾಜವಾದಿ ದ್ವೀಪ"ವೆಂದು ಪರಿಭಾವಿಸಿ, ಸೋವಿಯೆತ್ ಯೂನಿಯನ್ನಲ್ಲಿ "ಈಗಿನ ಬಂಡವಾಳಶಾಹೀ ಮುತ್ತಿಗೆಯು ಸಮಾಜವಾದೀ ಆವರಣವಾಗಿ ಬದಲಾಗಬೇಕು" ಎಂದು ಹೇಳಿಕೆ ನೀಡಿದನು.[12] 1925ರಷ್ಟು ಹಿಂದೆಯೇ ಸ್ಟಾಲಿನ್ ತನಗೆ ಅಂತರ್ರಾಷ್ಟ್ರೀಯ ರಾಜಕೀಯವೆಂದರೆ ಇಬ್ಭಾಗವಾದ ವಿಶ್ವವಾಗಿ ಕಂಡುಬರುವುದೆಂದೂ, ಇದರಲ್ಲಿ ಸಮಾಜವಾದದೆಡೆಗೆ ಒಲವುಳ್ಳ ರಾಷ್ಟ್ರಗಳು ಸೋವಿಯೆತ್ ಯೂನಿಯನ್ ಕಡೆಗೆ ವಾಲುವವು ಮತ್ತು ಬಂಡವಾಳಶಾಹೀ ರಾಷ್ಟ್ರಗಳು ಬಂಡವಾಳಶಾಹಿಯೆಡೆಗೆ ಒಲವುಳ್ಳ ದೇಶಗಳನ್ನು ಆಕರ್ಷಿಸುವವೆಂದೂ, ಇದೇ ಹೊತ್ತಿಗೆ ಪ್ರಪಂಚವು "ಬಂಡವಾಳಶಾಹಿಯ ತಾತ್ಕಾಲಿಕ ಸ್ಥಿರತೆ"ಯ ಸ್ಥಿತಿಯಲ್ಲಿರುವುದಾಗಿಯೂ, ಈ ಸ್ಥಿತಿ ಮುಂದೆ ಖಂಡಿತವಾಗಿ ಕುಸಿದುಬೀಳುವುದೆಂದೂ ಹೇಳಿಕೆ ನೀಡಿದನು.[13]
ಹಲವಾರು ಘಟನೆಗಳು ಪಾಶ್ಚಾತ್ಯ ಶಕ್ತಿಗಳು ಮತ್ತು ಸೋವಿಯೆತ್ ಯೂನಿಯನ್ನ ನಡುವೆ ಸಂಶಯ ಮತ್ತು ಅಪನಂಬಿಕೆಗಳು ಹೆಚ್ಚಾಗುವಂತೆ ಮಾಡಿದವು: ಬಂಡವಾಳಶಾಹಿಗೆ ಬೊಲ್ಷೆವಿಕ್ರ ಸವಾಲು;[14] 1926ರ ಬ್ರಿಟಿಶ್ ಜನರಲ್ ಕಾರ್ಮಿಕರ ಮುಷ್ಕರಕ್ಕೆ ಸೋವಿಯೆತ್ ಆರ್ಥಿಕ ಬೆಂಬಲವು ಬ್ರಿಟನ್ ಸೋವಿಯೆತ್ ಯೂನಿಯನ್ ಜತೆಗಿನ ಸಂಬಂಧಗಳನ್ನು ಮುರಿಯಲು ಕಾರಣವಾಯಿತು;[15] ಶಾಂತಿಯುತ ಸಹಬಾಳ್ವೆಯು "ಬಂಡವಾಳಶಾಹೀ ರಾಷ್ಟ್ರಗಳ ಜತೆ . . . ಭೂತಕಾಲದ ಸಂಗತಿಯಾಗುತ್ತಿದೆ" ಎಂಬ 1927ರ ಸ್ಟಾಲಿನ್ನ ಹೇಳಿಕೆ;[16] ಶಖ್ತಿ ಶೋ ಟ್ರಯಲ್ನ ಸಮಯದಲ್ಲಿ ಫ್ರೆಂಚ್ ಮತ್ತು ಬ್ರಿಟಿಶ್ ನೇತೃತ್ವದ ಪೂರ್ವಯೋಜಿತ ಸರ್ಕಾರಪಲ್ಲಟ ಮಾಡುವ ಪಿತೂರಿಯ ಆರೋಪಗಳು;[17] ಹಲವಾರು ರಾಜಕೀಯ ದಮನದ ಪ್ರಚಾರಕಾರ್ಯಗಳು ಮತ್ತು ಉಚ್ಚಾಟನೆಗಳನ್ನೊಳಗೊಂಡ ಮಹಾ ಶುದ್ಧೀಕರಣದ ಪರಿಣಾಮವಾಗಿ ಮಾರಣಹೋಮಕ್ಕೆ ಬಲಿಯಾದ ಅರ್ಧ ಮಿಲ್ಯನ್ಗೂ ಹೆಚ್ಚಿನ ಸೋವಿಯೆತ್ ಜನತೆ;[18] ಬ್ರಿಟಿಶ್, ಫ್ರೆಂಚ್, ಜಪಾನೀಯ ಮತ್ತು ಜರ್ಮನ್ ಗೂಢಚರ್ಯೆಯ ಆರೋಪಗಳನ್ನೊಳಗೊಂಡ ಮಾಸ್ಕೋ ಶೋ ವಿಚಾರಣೆಗಳು;[19] 1932-3ನ ಯುಕ್ರೇನಿಯನ್ ಬರದ ಸಮಯದಲ್ಲಿ ಯುಕ್ರೇನಿಯನ್ ಸೋವಿಯೆತ್ ಸೋಶಿಯಲಿಸ್ಟ್ ರಿಪಬ್ಲಿಕ್ನ 6-8 ಮಿಲಿಯ ಜನರ ವಿವಾದಾಸ್ಪದ ಸಾವುಗಳು ; ರಷ್ಯನ್ ಅಂತರ್ಯುದ್ಧದ ಸಮಯದಲ್ಲಿ ವ್ಹೈಟ್ ಆರ್ಮಿಗೆ ಪಶ್ಚಿಮದ ಬೆಂಬಲ; 1933ರವರೆಗೆ ಸೋವಿಯೆತ್ ಯೂನಿಯನ್ ಅನ್ನು ಅಂಗೀಕರಿಸಲು ಯು.ಎಸ್ನ ನಕಾರ;[20] ಮತ್ತು ರಾಪಾಲ್ಲೋ ಒಪ್ಪಂದದಲ್ಲಿ ಸೋವಿಯೆತ್ ಪ್ರವೇಶ.[21] ಇದರ ಪರಿಣಾಮವಾಗಿ ಎರಡೂ ರಾಷ್ಟ್ರಗಳ ನಾಯಕರಿಗೆ ಸೋವಿಯೆತ್-ಅಮೆರಿಕನ್ ಸಂಬಂಧಗಳ ಬಗ್ಗೆ ಬಹಳ ದೀರ್ಘ ಕಾಲದವರೆಗೂ ಕಾಳಜಿಯಾಗುವಂತಾಯಿತು.[9]
ಎರಡನೇ ವಿಶ್ವಯುದ್ಧದ ಸಮಯದಲ್ಲಿ, ಸೋವಿಯೆತ್ ಯೂನಿಯನ್ ಮತ್ತು ಜರ್ಮನಿಗಳು ಪೋಲಂಡ್ ಮತ್ತು ಪೂರ್ವ ಯುರೋಪುಗಳನ್ನು ತಮ್ಮ ನಡುವೆ ಭಾಗ ಮಾಡಿಕೊಳ್ಳುವ ರಹಸ್ಯ ಕರಾರನ್ನೊಳಗೊಂಡಿದ್ದ ಮೊಲೋಟೋವ್-ರಿಬೆನ್ಟ್ರಾಪ್ ಒಪ್ಪಂದಕ್ಕೆ ಸಹಿ ಹಾಕಿದಾಗ, ಪಶ್ಚಿಮದ ಜತೆಗೆ ಸೋವಿಯೆತ್ನ ಸಂಬಂಧಗಳಲ್ಲಿ ಹೆಚ್ಚಿನ ಬಿರುಕು ಕಾಣಿಸಿಕೊಂಡಿತು.[22] ಒಂದು ವಾರದ ನಂತರ, ಸೆಪ್ಟೆಂಬರ್ 1939ರಲ್ಲಿ, ಜರ್ಮನಿ ಮತ್ತು ಸೋವಿಯೆತ್ ಯೂನಿಯನ್ಗಳು ಪೋಲಂಡ್ ಮತ್ತು ಪೂರ್ವ ಯುರೋಪಿನ ಉಳಿದ ಭಾಗಗಳನ್ನು ಆಕ್ರಮಿಸುವುದರ ಮೂಲಕ ವಶಪಡಿಸಿಕೊಂಡು ಒಪ್ಪಂದದ ಪ್ರಕಾರ ವಿಭಾಗಿಸಿಕೊಂಡವು.[23][24]
ಮುಂದಿನ ಒಂದೂವರೆ ವರ್ಷಗಳವರೆಗೂ, ಒಂದು ವಿಸ್ತಾರವಾದ ಆರ್ಥಿಕ ಸಂಬಂಧವನ್ನು ಹೊಂದಿದ್ದ ಈ ದೇಶಗಳು, ಜರ್ಮನಿಯು ಆಪರೇಷನ್ ಬಾರ್ಬರೋಸಾದ ಮೂಲಕ ಮೊಲೋಟೋವ್-ರಿಬೆನ್ಟ್ರಾಪ್ ಒಪ್ಪಂದವನ್ನು ಮುರಿದು ಈ ಹಿಂದೆ ತಾವು ವಿಭಾಗಿಸಿಕೊಂಡ ದೇಶಗಳ ಮೂಲಕ ಸೋವಿಯೆತ್ ಯೂನಿಯನ್ ಮೇಲೆ ಆಕ್ರಮಣ ಮಾಡುವವರೆಗೂ ಪ್ರಮುಖ ಯುದ್ಧ ಸಾಮಗ್ರಿಗಳ ವಿನಿಮಯವನ್ನು ಮಾಡಿಕೊಳ್ಳುತ್ತಿದ್ದವು[25][26].[27]
1941ರ ಜಂಟಿ ಯುದ್ಧ ಕಾರ್ಯಾಚರಣೆಯಲ್ಲಿ ಬ್ರಿಟೀಶರು ಮತ್ತು ಅಮೆರಿಕನ್ನರು ನಾಜೀ ಜರ್ಮನಿಯ ವಿರುದ್ಧ ಹೋರಾಡುವ ಸಂಕಷ್ಟಗಳನ್ನು ಸೋವಿಯೆತ್ ಮಾತ್ರ ಎದುರಿಸುವಂತೆ ಪಿತೂರಿ ಮಾಡಿರುವರೆಂಬ ಸಂಶಯ ಸೋವಿಯೆತ್ಗೆ ಉಂಟಾಯಿತು. ಈ ನೋಟದ ಪ್ರಕಾರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಕೊನೆಯ ಘಳಿಗೆಯಲ್ಲಿ ಪ್ರವೇಶಿಸಿ ಶಾಂತಿ ಒಪ್ಪಂದವನ್ನು ತಮಗೆ ತಕ್ಕಂತೆ ರೂಪಿಸುವ ಸಲುವಾಗಿ ಬೇಕೆಂದೇ ಜರ್ಮನಿ ವಿರುದ್ಧದ ಎರಡನೇ ಹೋರಾಟಯೋಜನೆಯನ್ನು ತಡೆಹಿಡಿದರು ಎನ್ನಲಾಯಿತು.[28] ಈ ರೀತಿಯಾದ ಸೋವಿಯೆತ್ನ ಪಶ್ಚಿಮದ ಬಗೆಗಿನ ಗ್ರಹಿಕೆಗಳಿಂದಾಗಿ ಮಿತ್ರರಾಷ್ಟ್ರಗಳ ನಡುವೆ ಬಲವಾದ ಉದ್ವಿಗ್ನತೆ ಮತ್ತು ಪರಸ್ಪರ ವಿರೋಧದ ಅಲೆ ಏಳುವಂತಾಯಿತು.[29]
ಯುದ್ಧದ ನಂತರ ಮಿತ್ರರಾಷ್ಟ್ರಗಳು ಯುರೋಪಿನ ನಕ್ಷೆ ಹೇಗಿರಬೇಕೆನ್ನುವುದರ ಬಗ್ಗೆ ಮತ್ತು ಗಡಿರೇಖೆಗಳನ್ನು ಹೇಗೆ ನಿರ್ಧರಿಸಬೇಕೆನ್ನುವುದರ ಬಗ್ಗೆ ಪರಸ್ಪರ ವಿರೋಧ ವ್ಯಕ್ತಪಡಿಸಿದವು.[30] ಪ್ರತಿಯೊಂದು ಬಣವೂ ಯುದ್ಧಾನಂತರದ ಭದ್ರತಾ ಸ್ಥಾಪನೆ ಮತ್ತು ನಿರ್ವಹಣೆಯ ಬಗ್ಗೆ ಅಸಾದೃಶ್ಯವಾದ ಕಲ್ಪನೆಗಳನ್ನು ಹೊಂದಿದ್ದವು.[30] ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಎಲ್ಲೆಡೆ ಆದಷ್ಟು ಬೇಗನೆ ಪ್ರಜಾತಂತ್ರವನ್ನುಳ್ಳ ಸರ್ಕಾರಗಳ ಸ್ಥಾಪನೆ ಮಾಡಿಸುವಂಥ ಭದ್ರತಾ ವ್ಯವಸ್ಥೆ ಜಾರಿಯಾಗಬೇಕೆಂದೂ, ಈ ವ್ಯವಸ್ಥೆಯು ಅಂತರ್ರಾಷ್ಟ್ರೀಯ ಸಂಸ್ಥೆಗಳ ಮೂಲಕ ರಾಷ್ಟ್ರಗಳ ನಡುವಿನ ವೈರತ್ವಗಳನ್ನು ಪರಿಹರಿಸಲು ಅನುಮತಿ ನೀಡುವಂತಾಗಬೇಕೆಂದೂ ಇಚ್ಚೆಪಟ್ಟವು.[31]
ಪದೇ ಪದೇ ತನ್ನ ಮೇಲಾಗುತ್ತಿದ್ದ ಆಕ್ರಮಣಗಳ ಐತಿಹಾಸಿಕ ಅನುಭವ[32] ಮತ್ತು ಅತಿ ಹೆಚ್ಚಿನ ಸಂಖ್ಯೆಯ ಸಾವುಗಳು (ಅಂದಾಜು 27 ಮಿಲಿಯನ್) ಹಾಗೂ ಎರಡನೇ ವಿಶ್ವಯುದ್ಧದ ಸಮಯದಲ್ಲಿ ಸೋವಿಯೆತ್ ಯೂನಿಯನ್ನಲ್ಲಾದ ವಿನಾಶ,[33] ಇವೆಲ್ಲದರ ಕಾರಣ ಸೋವಿಯೆತ್ ಯೂನಿಯನ್ ತನ್ನ ಗಡಿಸೀಮೆಗಳಿಗೆ ತಗುಲಿಕೊಂಡಂತಿದ್ದ ದೇಶಗಳ ಆಂತರಿಕ ಆಗುಹೋಗುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರ ಮೂಲಕ ತನ್ನ ಭದ್ರತೆಯನ್ನು ಹೆಚ್ಚಿಸಿಕೊಳ್ಳತೊಡಗಿತು.[30][34] ಏಪ್ರಿಲ್ 1945ರಲ್ಲಿ, ಚರ್ಚಿಲ್ ಮತ್ತು ಅಮೆರಿಕನ್ ಅಧ್ಯಕ್ಷ ಹ್ಯಾರಿ ಎಸ್. ಟ್ರೂಮನ್ ಇತರ ಅಂಶಗಳ ಜತೆಗೇ, ಸೋವಿಯೆತ್ ನಿಯಂತ್ರಣದಲ್ಲಿದ್ದ ಮತ್ತು ಸೋವಿಯೆತ್ ಸರ್ಕಾರದೊಡನೆ ಹದಗೆಟ್ಟ ಸಂಬಂಧ ಹೊಂದಿದ್ದ ದೇಶಭ್ರಷ್ಟ ಪಾಲಿಶ್ ಸರ್ಕಾರದ ವಿರೋಧಿಯಾಗಿದ್ದ ಲುಬ್ಲಿನ್ ಸರ್ಕಾರಕ್ಕೆ ಸೋವಿಯೆತ್ ಬೆಂಬಲ ನೀಡುವುದನ್ನು ವಿರೋಧಿಸಿದರು.[35]
ಫೆಬ್ರುವರಿ 1945ರ ಯಾಲ್ಟಾ ಅಧಿವೇಶನದಲ್ಲಿ ಮಿತ್ರರಾಷ್ಟ್ರಗಳು ಯುರೋಪಿನ ಯುದ್ಧಾನಂತರದ ಪುನರ್ವಸತಿಯ ಬಗ್ಗೆ ಒಮ್ಮತದ ನಿರ್ಧಾರವನ್ನು ತಾಳುವುದರಲ್ಲಿ ಅಸಫಲವಾದವು.[36] ಮೇ ತಿಂಗಳ ಮಿತ್ರರಾಷ್ಟ್ರಗಳ ವಿಜಯದ ನಂತರ, ಯು.ಎಸ್ ಮತ್ತು ಪಾಶ್ಚಿಮಾತ್ಯ ಮಿತ್ರಶಕ್ತಿಗಳು ಪಶ್ಚಿಮ ಯುರೋಪಿನಲ್ಲಿ ಉಳಿದುಕೊಂಡದ್ದರಿಂದ, ಸೋವಿಯೆತ್ ಒಕ್ಕೂಟವು ಪೂರ್ವ ಯುರೋಪನ್ನು ನಿರಾತಂಕವಾಗಿ ವಶಪಡಿಸಿಕೊಂಡಿತು[36]. ಸೋವಿಯೆತ್ ಒಕ್ಕೂಟ, ಯುನೈಟೆಡ್ ಸ್ಟೇಟ್ಸ್, ಬ್ರಿಟನ್ ಮತ್ತು ಫ್ರಾನ್ಸ್ಗಳು ತಾವು ಸ್ವಾಧೀನಪಡಿಸಿಕೊಂಡ ವಲಯಗಳನ್ನು ಸ್ಥಾಪಿಸಿಕೊಂಡದ್ದಲ್ಲದೆ ವಶಪಡಿಸಿಕೊಳ್ಳಲಾದ ಜರ್ಮನಿಯ ಆಳ್ವಿಕೆಗಾಗಿ ಚತುರ್ಬಲ ನಿಯಂತ್ರಣ ವ್ಯವಸ್ಥೆಯೊಂದರ ಬಿಡಿಯಾದ ಹಂದರವೊಂದನ್ನು ರೂಪಿಸಿದವು.[37] ಮಿತ್ರರಾಷ್ಟ್ರಗಳೆಲ್ಲ ಸೇರಿಕೊಂಡು ವಿಶ್ವಶಾಂತಿಯ ಮುಂದುವರಿಕೆಗಾಗಿ United Nations ಅನ್ನು ಸ್ಥಾಪಿಸಿದವಾದರೂ, ಅದರ ಭದ್ರತಾ ಮಂಡಳಿಯ ಪ್ರವರ್ತನಾ ಸಾಮರ್ಥ್ಯವು ಅದರ ವ್ಯಕ್ತಿಗತ ಸದಸ್ಯರ ವೀಟೋ ಅಧಿಕಾರವನ್ನು ಉಪಯೋಗಿಸುವ ಸೌಲಭ್ಯದಿಂದಾಗಿ ನಿರರ್ಥಕವಾಯಿತು.[38] ಇದರಿಂದಾಗಿ UN ತಾರ್ಕಿಕ ಪಾಂಡಿತ್ಯ ವಿನಿಮಯಕ್ಕೆ ಮಾತ್ರ ಮೀಸಲಾದ ಚಟುವಟಿಕೆರಹಿತ ಸಂಸ್ಥೆಯಾಗುಳಿಯಿತು ಮತ್ತು ಸೋವಿಯೆತ್ ಅದನ್ನು ಪ್ರಚಾರಕಾರ್ಯದ ಲೋಕವೇದಿಕೆಯೆಂದೇ ಪರಿಗಣಿಸಿತ್ತು.[39]
ಯುದ್ಧದ ಕೊನೆಯ ಭಾಗಗಳ ವೇಳೆಗೆ ಸೋವಿಯೆತ್ ಒಕ್ಕೂಟವು ತನಗೆ ನಾಜೀ ಜರ್ಮನಿಯು ಮೊಲೋಟೋವ್-ರಿಬೆನ್ಟ್ರಾಪ್ ಒಪ್ಪಂದದ ಪ್ರಕಾರ ಮೊದಲೇ ನೀಡಿದ್ದ ಹಲವಾರು ದೇಶಗಳನ್ನು ನೇರವಾಗಿ ಸೋವಿಯೆತ್ ಸೋಶಿಯಲಿಸ್ಟ್ ರಿಪಬ್ಲಿಕ್ಸ್ನ ಅಡಿಯಲ್ಲಿ ಸೇರಿಸಿಕೊಳ್ಳುವುದರ ಮೂಲಕ ಈಸ್ಟರ್ನ್ ಬ್ಲಾಕ್ಗೆ ಅಡಿಪಾಯ ಹಾಕಿತು. ಈ ದೇಶಗಳೆಂದರೆ ಪೂರ್ವ ಪೋಲಂಡ್ (ಎರಡು ಬೇರೆಬೇರೆ SSRಗಳಾಗಿ ವಿಭಜಿಸಲ್ಪಟ್ಟಿತು),[40] ಲಾತ್ವಿಯಾ (ಲಾತ್ವಿಯನ್ SSR ಆಯಿತು)[41],[41][42] ಈಸ್ಟೋನಿಯಾ (ಈಸ್ಟೋನಿಯನ್ SSR ಆಯಿತು),[41][42] ಲಿಥುವೇನಿಯಾ (ಲಿಥುವೇನಿಯನ್ SSR ಆಯಿತು),[41][42] ಫಿನ್ಲಂಡ್ನ ಪೂರ್ವದ ಕೆಲ ಭಾಗಗಳು (ಕ್ಯಾರೆಲೋ-ಫಿನ್ನಿಶ್ SSRಆಯಿತು)[24] ಮತ್ತು ಪೂರ್ವ ರೊಮೇನಿಯಾ (ಮಾಲ್ಡೇವಿಯನ್ SSR ಆಯಿತು).[43][44]
ಬ್ರಿಟಿಶ್ ಪ್ರಧಾನಮಂತ್ರಿ ವಿನ್ಸ್ಟನ್ ಚರ್ಚಿಲ್ರವರು ಯುದ್ಧದ ಅಂತ್ಯದ ವೇಳೆಗೆ ಯುರೋಪಿನಲ್ಲಿ ಬೀಡುಬಿಟ್ಟಿದ್ದ ಬೃಹತ್ ಸಂಖ್ಯೆಯ ಸೋವಿಯೆತ್ ಸೈನ್ಯ ಹಾಗೂ ಸೋವಿಯೆತ್ ನಾಯಕ ಜೋಸೆಫ್ ಸ್ಟಾಲಿನ್ ಭರವಸೆಗೆ ಯೋಗ್ಯನಲ್ಲವೆಂಬ ಅನಿಸಿಕೆಯ ಕಾರಣದಿಂದಾಗಿ ಪಶ್ಚಿಮ ಯುರೋಪಿಗೆ ಸೋವಿಯೆತ್ ಬೆದರಿಕೆಯಿದೆ ಎಂಬ ಕಳಕಳಿಯನ್ನು ವ್ಯಕ್ತಪಡಿಸಿದರು.[45] 1945ರ ಏಪ್ರಿಲ್-ಮೇಯಲ್ಲಿ, ಬ್ರಿಟೀಶ್ ಯುದ್ಧ ಮಂತ್ರಾಲಯದ ಜಾಯಿಂಟ್ ಪ್ಲಾನಿಂಗ್ ಸ್ಟಾಫ್ ಕಮಿಟಿಯು ಆಪರೇಶನ್ ಅನ್ಥಿಂಕಬಲ್ ಎಂಬ ಹೆಸರಿನ "ರಶ್ಯಾದ ಮೇಲೆ ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರಿಟಿಶ್ ಸಾಮ್ರಾಜ್ಯದ ನಿಯಂತ್ರಣವನ್ನು ಸ್ಥಾಪಿಸುವ" ಯೋಜನೆಯೊಂದನ್ನು ಅಭಿವೃದ್ಧಿಪಡಿಸಿತು.[46] ಆದರೆ ಈ ಯೋಜನೆಯು ಮಿಲಿಟರಿಯ ಪ್ರಕಾರ ಅಸಂಭವನೀಯವೆಂಬ ಕಾರಣ ನೀಡಿದ ಬ್ರಿಟಿಶ್ ಚೀಫ್ಸ್ ಆಫ್ ಸ್ತಾಫ್ ಸಮಿತಿಯು ಇದನ್ನು ತಿರಸ್ಕರಿಸಿತು.[45]
ಜರ್ಮನಿಯ ಶರಣಾಗತಿಯ ನಂತರದ ಜುಲೈನಲ್ಲಿ ಆರಂಭವಾದ ಪಾಟ್ಸ್ದ್ಯಾಮ್ ಅಧಿವೇಶನದಲ್ಲಿ, ಜರ್ಮನಿ ಮತ್ತು ಪೂರ್ವ ಯುರೋಪಿನ ಭವಿಷ್ಯದ ಅಭಿವೃದ್ಧಿಯ ಬಗ್ಗೆ ಬಲವಾದ ವಿರುದ್ಧ ಅಭಿಪ್ರಾಯಗಳು ತಲೆಯೆತ್ತಿದವು.[47] ಇದರ ಜತೆಗೇ, ಭಾಗವಹಿಸಿದವರ ನಡುವಣ ಕಾಣಿಸಿಕೊಂಡ ಹೆಚ್ಚಾದ ವೈರತ್ವ ಮತ್ತು ಜಗಳಗಂಟ ಭಾಷೆಗಳಿಂದಾಗಿ ಒಬ್ಬರೊಬ್ಬರ ಹಗೆಯಿಂದ ಕೂಡಿದ ಉದ್ದೇಶಗಳ ಬಗೆಗಿನ ಸಂಶಯಗಳು ದೃಢಗೊಂಡು ಕಂದಕಗಳು ಮತ್ತೂ ಆಳವಾಗುವಂತಾಯಿತು.[48] ಈ ಅಧಿವೇಶನದಲ್ಲಿ ಟ್ರೂಮನ್ ಸ್ಟಾಲಿನ್ನಿಗೆ ಯುನೈಟೆಡ್ ಸ್ಟೇಟ್ಸ್ ಒಂದು ಪರಿಣಾಮಕಾರಿಯಾದ ನೂತನ ಅಸ್ತ್ರವೊಂದನ್ನು ಹೊಂದಿರುವ ವಿಷಯವನ್ನು ತಿಳಿಸಿದನು.[49]
ಸ್ಟಾಲಿನ್ನನಿಗೆ ಅಮೆರಿಕನ್ನರು ಅಣು ಬಾಂಬ್ ತಯಾರಿಕೆಯಲ್ಲಿ ತೊಡಗಿದ್ದುದು ಆಗಲೇ ತಿಳಿದಿದ್ದುದರಿಂದ ಮತ್ತು ಅದಾಗಲೇ ಸೋವಿಯೆತ್ ಇದಕ್ಕೆ ಪ್ರತಿಯಾದ ಯೋಜನೆಯಲ್ಲಿ ತೊಡಗಿದ್ದುದರಿಂದ ಆತ ಈ ಸುದ್ದಿಗೆ ತಣ್ಣನೆಯ ಪ್ರತಿಕ್ರಿಯೆ ನೀಡಿದನು. ಸೋವಿಯೆತ್ ನಾಯಕನು ತಾನು ಈ ಸುದ್ದಿಯಿಂದ ಹರ್ಷಿತನಾಗಿರುವುದಾಗಿಯೂ, ಈ ಅಸ್ತ್ರವು ಜಪಾನ್ ವಿರುದ್ಧ ಬಳಸಲ್ಪಡುವುದೆಂಬ ನಿರೀಕ್ಷೆಯಿರುವುದಾಗಿಯೂ ಹೇಳಿದನು.[49] ಪಾಟ್ಸ್ಡ್ಯಾಮ್ ಅಧಿವೇಶನ ಮುಗಿದ ಒಂದು ವಾರದ ನಂತರ ಯು.ಎಸ್ ಹಿರೋಶಿಮಾ ಮತ್ತು ನಾಗಾಸಾಕಿಯ ಮೇಲೆ ಬಾಂಬ್ ದಾಳಿ ಮಾಡಿತು. ಈ ಆಕ್ರಮಣದ ನಂತರ ಟ್ರೂಮನ್ನು ಸ್ವಾಧೀನವಾದ ಜಪಾನ್ನ ಮೇಲೆ ಸೋವಿಯೆತ್ಗೆ ಬಹಳ ಕಡಿಮೆ ಅಧಿಕಾರವನ್ನು ನೀಡಿದಾಗ ಸ್ಟಾಲಿನ್ ಇದರ ಬಗ್ಗೆ ಯು.ಎಸ್.ನ ಅಧಿಕಾರಿಗಳ ಬಳಿ ಆಕ್ಷೇಪ ವ್ಯಕ್ತಪಡಿಸಿದನು.[50]
1946ರ ಫೆಬ್ರುವರಿಯಲ್ಲಿ ಮಾಸ್ಕೋದಿಂದ ಕಳುಹಿಸಲಾದ ಜಾರ್ಜ್ ಎಫ್. ಕೆನ್ನನ್ನ "ವಿಸ್ತಾರ ತಂತಿಸಂದೇಶ"ವು ಸೋವಿಯೆತ್ ವಿರುದ್ಧ ಯು.ಎಸ್ ಸರ್ಕಾರದ ಹೆಚ್ಚಿದ ವೈರತ್ವವನ್ನು ಪದಗಳ ರೂಪದಲ್ಲಿ ಸಮರ್ಥವಾಗಿ ವ್ಯಕ್ತಪಡಿಸಲು ಸಹಕಾರಿಯಾಯಿತು ಮತ್ತು ಶೀತಲ ಸಮರದ ಕಾಲಘಟ್ಟದಲ್ಲಿ ಸೋವಿಯೆತ್ ಒಕ್ಕೂಟದ ಬಗೆಗಿನ ಯು.ಎಸ್.ರಣನೀತಿಯ ತಳಹದಿಯಾಗಿತ್ತು.[51] ಆ ಸೆಪ್ಟೆಂಬರಿನಲ್ಲಿ ಸೋವಿಯೆತ್ ಬಣದ ಕಡೆಯಿಂದ ("ಸಹಲೇಖಕ" ನೂ ಆಗಿದ್ದ) ವ್ಯಾಚೆಸ್ಲಾವ್ ಮೊಲೋಟೋವ್ನಿಂದ ನಿಯುಕ್ತಗೊಳಿಸಲ್ಪಟ್ಟ ನೋವಿಕೋವ್ ತಂತಿಸಂದೇಶವನ್ನು ಸೋವಿಯೆತ್ ರಾಯಭಾರಿಯ ಮೂಲಕ ಯು.ಎಸ್ಗೆ ಕಳುಹಿಸಲಾಯಿತು; ಅದರಲ್ಲಿ ಯು.ಎಸ್ ಅನ್ನು "ಹೊಸ ಸಮರವೊಂದರಲ್ಲಿ ವಿಶ್ವದ ಸರ್ವಾಧಿಕಾರ ತಮ್ಮದಾಗುವಂತೆ ಮಾಡಲು ಅನುಕೂಲಕರವಾದ ತಯಾರಿಗಳನ್ನು ನಡೆಸಲು" ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚುಗೊಳಿಸುತ್ತಿರುವ ಏಕಸ್ವಾಮ್ಯ ಬಂಡವಾಳಶಾಹಿಗಳ ಹಿಡಿತದಲ್ಲಿರುವಂತೆ ವರ್ಣಿಸಲಾಗಿತ್ತು.[52]
1946ರ ಸೆಪ್ಟೆಂಬರ್ 6ರಂದು ಜರ್ಮನಿಯಲ್ಲಿ ಮಾಡಿದ ಭಾಷಣದಲ್ಲಿ ಜೇಮ್ಸ್ ಎಫ್. ಬೈರ್ನ್ಸ್ ಮೋರ್ಗೆಂಥಾವ್ ಯೋಜನೆಯನ್ನು (ಯುದ್ಧಾನಂತರದ ಜರ್ಮನಿಯನ್ನು ವಿಭಜಿಸಿ, ಉದ್ಯಮರಹಿತವನ್ನಾಗಿ ಮಾಡುವ ಯೋಜನೆ) ವರ್ಜಿಸುತ್ತಾ ಯು.ಎಸ್ನ ಮಿಲಿಟರಿಯು ಅನಿರ್ದಿಷ್ಟ ಕಾಲಾವಧಿಯವರೆಗೂ ಯುರೋಪಿನಲ್ಲಿ ಹಾಜರಿರುವ ಉದ್ದೇಶ ಹೊಂದಿದೆಯೆಂದು ಸೋವಿಯೆತ್ಗೆ ಎಚ್ಚರಿಕೆ ನೀಡಿದನು.[53] ಬೈರ್ನ್ಸ್ ಒಂದು ತಿಂಗಳ ನಂತರ, "ನಮ್ಮ ಕಾರ್ಯಕ್ರಮದ ಪ್ರಮುಖ ಉದ್ದೇಶ ಜರ್ಮನ್ ಜನತೆಯ ಮನಗೆಲ್ಲುವುದಾಗಿತ್ತು[...] ಅದು ನಮ್ಮ ಮತ್ತು ರಷ್ಯಾದ ನಡುವೆ ಮನಸ್ಸುಗಳನ್ನು ಗುರಿಯಾಗಿಟ್ತುಕೊಂಡು ನಡೆದ ಯುದ್ಧವಾಗಿತ್ತು [...]" ಎಂದು ಒಪ್ಪಿಕೊಂಡನು.[54][54]
"ವಿಸ್ತಾರ ತಂತಿಸಂದೇಶ" ಹೊರಬಂದ ಕೆಲ ವಾರಗಳ ನಂತರ, ಮಾಜೀ ಬ್ರಿಟಿಶ್ ಪ್ರಧಾನಮಂತ್ರಿಯಾಗಿದ್ದ ವಿನ್ಸ್ಟನ್ ಚರ್ಚಿಲ್ ಅವರು ಫುಲ್ಟನ್, ಮಿಸ್ಸೌರಿಯಲ್ಲಿ ತಮ್ಮ ಪ್ರಖ್ಯಾತ "ಐರನ್ ಕರ್ಟನ್" ಭಾಷಣವನ್ನು ಮಾಡಿದರು.[55] ಈ ಭಾಷಣವು ಸೋವಿಯೆತ್ ವಿರುದ್ಧ ಆಂಗ್ಲೋ-ಅಮೆರಿಕನ್ ಮೈತ್ರಿಯ ಸ್ಥಾಪನೆಗೆ ಕರೆ ನೀಡುತ್ತ ಸೋವಿಯೆತ್ ಒಕ್ಕೂಟವು "ಬಾಲ್ಟಿಕ್ನ ಸ್ಟೆಟ್ಟಿನ್ನಿಂದ ಏಡ್ರಿಯಾಟಿಕ್ನ ಟ್ರಿಯೆಸ್ಟ್ವರೆಗೂ" ಒಂದು "ಕಬ್ಬಿಣದ ತೆರೆ"ಯನ್ನು ಪ್ರತಿಷ್ಠಾಪಿಸಿರುವುದಾಗಿ ಆಪಾದಿಸಿತು.[56][57]
ಎರಡನೇ ವಿಶ್ವಯುದ್ಧದ ನಂತರ ಹಲವಾರು ದೇಶಗಳನ್ನು ಸೋವಿಯೆತ್ ಸೋಶಿಯಲಿಸ್ಟ್ ರಿಪಬ್ಲಿಕ್ಗಳಾಗಿ ಸ್ವಾಧೀನಪಡಿಸಿಕೊಳ್ಳಲಾಯಿತಲ್ಲದೆ, ಪೂರ್ವ ಜರ್ಮನಿ,[58] ಪೀಪಲ್ಸ್ ರಿಪಬ್ಲಿಕ್ ಆಫ್ ಪೋಲಂಡ್, ಪೀಪಲ್ಸ್ ರಿಪಬ್ಲಿಕ್ ಆಫ್ ಹಂಗರಿ,[59] ಜೆಕೋಸ್ಲೊವಾಕ್ ಸೊಶಿಯಲಿಸ್ಟ್ ರಿಪಬ್ಲಿಕ್,[60] ಪೀಪಲ್ಸ್ ರಿಪಬ್ಲಿಕ್ ಆಫ್ ರೊಮೇನಿಯಾ ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಅಲ್ಬೇನಿಯಾ ಮುಂತಾದ ದೇಶಗಳನ್ನು ಸೋವಿಯೆತ್ ಆಶ್ರಿತ ಕೈಗೊಂಬೆಗಳನ್ನಾಗಿ[57] ಪರಿವರ್ತಿಸುವುದರ ಮೂಲಕ ಈಸ್ಟರ್ನ್ ಬ್ಲಾಕ್ಗೆ ಸೇರಿಸಿಕೊಳ್ಳಲಾಯಿತು.[61]
ಹೀಗೆ ಹುಟ್ಟಿಕೊಂಡ ಬ್ಲಾಕ್ನ ಸೋವಿಯೆತ್ ಶೈಲಿಯ ಪ್ರಭುತ್ವಗಳು ಸೋವಿಯೆತ್ನ ಆದೇಶ ಅರ್ಥವ್ಯವಸ್ಥೆಗಳ ಮರುಸೃಷ್ಟಿ ಮಾಡಿದವು ಮಾತ್ರವಲ್ಲದೆ, ನೈಜ ಮತ್ತು ಭವಿಷ್ಯದ ವಿರೋಧವನ್ನು ದಮನ ಮಾಡಲು ಜೋಸೆಫ್ ಸ್ಟಾಲಿನ್ ಮತ್ತು ಸೋವಿಯೆತ್ ರಹಸ್ಯ ಪೊಲೀಸರ ನಿರ್ದಯ ವಿಧಾನಗಳನ್ನೂ ಅನುಸರಿಸಲಾರಂಭಿಸಿದವು.[62] ಏಷ್ಯಾದಲ್ಲಿ ಕೆಂಪು ಸೈನ್ಯವು ಯುದ್ಧದ ಕೊನೆಯ ತಿಂಗಳಿನಲ್ಲಿ ಮಂಚೂರಿಯಾವನ್ನು ಆಕ್ರಮಿಸಿಕೊಂಡ ನಂತರ 38ನೇ ಸಮಾನಾಂತರ ರೇಖೆಯ ಉತ್ತರಭಾಗದಲ್ಲಿದ್ದ ಕೊರಿಯನ್ ಭೂಭಾಗದ ದೊಡ್ಡ ಸುತ್ತುಪಟ್ಟಿಯೊಂದನ್ನು ವಶಪಡಿಸಿಕೊಂಡಿತ್ತು.[63]
1947ರ ಸೆಪ್ಟೇಂಬರಿನಲ್ಲಿ ಅಂತರ್ರಾಷ್ಟ್ರೀಯ ಕಮ್ಯುನಿಸ್ಟ್ ಚಳುವಳಿಯಲ್ಲಿ ಸಾಂಪ್ರದಾಯಿಕತೆಯನ್ನು ಬಲವಂತವಾಗಿ ಹೇರುವ ಮತ್ತು ಈಸ್ಟರ್ನ್ ಬ್ಲಾಕ್ನಲ್ಲಿ ಕಮ್ಯುನಿಸ್ಟ್ ಪಾರ್ಟಿಗಳ ಸಹಯೋಗದೊಡನೆ ಸೋವಿಯೆತ್ ಆಶ್ರಿತರುಗಳ ಮೇಲೆ ರಾಜಕೀಯ ನಿಯಂತ್ರಣವನ್ನು ಬಲಪಡಿಸುವ ಉದ್ದೇಶದಿಂದ ಸೋವಿಯೆತ್ ಕೋಮಿನ್ಫಾರ್ಮ್ ಅನ್ನು ರೂಪಿಸಿತು.[64] ಮುಂದಿನ ಜೂನ್ನಲ್ಲಿ ಟಿಟೋ-ಸ್ಟಾಲಿನ್ ಒಡಕು ಕೋಮಿನ್ಫಾರ್ಮ್ಗೆ ಮುಜುಗರದ ಪರಿಸ್ಥಿತಿಯನ್ನು ತಂದದ್ದಲ್ಲದೆ ಅದರ ಸದಸ್ಯರು ಯುದೋಸ್ಲಾವಿಯಾವನ್ನು ಬಹಿಷ್ಕರಿಸುವಂತೆ ಆಯಿತು ಹಾಗೂ ಇದರ ನಂತರ ಯುಗೋಸ್ಲಾವಿಯಾ ಕಮ್ಯುನಿಸ್ಟ್ ಆಗಿ ಮುಂದುವರಿದರೂ ತಟಸ್ಥ ನೀತಿಯನ್ನು ಅನುಸರಿಸಿತು.[65]
ಈಸ್ಟರ್ನ್ ಬ್ಲಾಕ್ ಅನ್ನು ಪ್ರಭಾವಿಸುವ ಸೋವಿಯೆತ್ ನೀತಿಯ ಅಂಗವಾಗಿ ಲ್ಯಾವ್ರೆಂಟೀ ಬೆರಿಯಾ ನೇತೃತ್ವದ NKVDಯು ಕಮ್ಯುನಿಸ್ಟ್-ವಿರೋಧೀ ಪ್ರತಿಭಟನೆಗಳನ್ನು ತುಳಿದುಹಾಕುವ ಸಲುವಾಗಿ ಬ್ಲಾಕ್ನಲ್ಲಿ ಸೋವಿಯೆತ್-ಶೈಲಿಯ ರಹಸ್ಯ ಪೊಲೀಸ್ ವ್ಯವಸ್ಥೆಗಳ ಸ್ಥಾಪನೆಯ ಮೇಲ್ವಿಚಾರಣೆಯನ್ನು ಮಾಡತೊಡಗಿತು.[66] ಬ್ಲಾಕ್ನಲ್ಲಿ ಸ್ವತಂತ್ರದ ಒಂದು ಸಣ್ಣ ಅಲೆ ತಲೆಯೆತ್ತಿದರೂ ಸ್ಟಾಲಿನ್ನ ನೀತಿಯ ಪ್ರಕಾರ ಅದನ್ನು ಯುದ್ಧಪೂರ್ವ ಆಂತರಿಕ ವಿದ್ರೋಹಕ್ಕೆ ಸಮಾನವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಾಗುತ್ತಿತ್ತು: ಅಧಿಕಾರ ಕಿತ್ತುಕೊಳ್ಳುವುದು, ವಿಚಾರಣೆ ನಡೆಸುವುದು, ಬಂಧನದಲ್ಲಿಡುವುದು ಹಾಗೂ ಹಲವಾರು ಬಾರಿ ಕಂಡುಬಂದಂತೆ ಮರಣದಂಡನೆ ವಿಧಿಸುವುದು.[67]
1947ರ ಹೊತ್ತಿಗೆ US ಅಧ್ಯಕ್ಷ ಹ್ಯಾರಿ ಎಸ್. ಟ್ರೂಮನ್ರ ಸಲಹೆಗಾರರು ಸೋವಿಯೆತ್ ಒಕ್ಕೂಟದ ಪ್ರಭಾವವನ್ನು ತಡೆಗಟ್ಟಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಾ, (ಯುದ್ಧಾನಂತರದ ಗೊಂದಲ ಮತ್ತು ವಿನಾಶದ ನಡುವೆ) ಯು.ಎಸ್ನ ಪ್ರಭಾವವನ್ನು ಕಡಿಮೆ ಮಾಡಲು ಬಂಡವಾಳಶಾಹೀ ರಾಷ್ಟ್ರಗಳ ನಡುವಿನ ವೈರತ್ವವನ್ನು ಹೆಚ್ಚಿಸಲು ಸ್ಟಾಲಿನ್ ನಡೆಸುತ್ತಿದ್ದ ಪ್ರಯತ್ನಗಳನ್ನು ಉದಾಹರಿಸಿ ಇದರಿಂದ ಇನ್ನೊಂದು ಯುದ್ಧವಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದರು.[68] 1947ರ ಫೆಬ್ರುವರಿಯಲ್ಲಿ ಬ್ರಿಟಿಶ್ ಸರ್ಕಾರವು ಕಮ್ಯುನಿಸ್ಟ್ ನೇತೃತ್ವದ ಬಂಡುಕೋರರ ವಿರುದ್ಧದ ಅಂತರ್ಯುದ್ಧದಲ್ಲಿ ತಾನು ಇನ್ನು ಮುಂದೆ ಗ್ರೀಕ್ ಏಕಾಧಿಪತ್ಯದ ಮಿಲಿಟರಿ ಆಡಳಿತಕ್ಕೆ ನೆರವು ನೀಡುವುದು ಸಾಧ್ಯವಿಲ್ಲ ಎಂದು ಘೋಷಿಸಿತು.
ಈ ಘೋಷಣೆಗೆ ಪ್ರತಿಯಾಗಿ ಅಮೆರಿಕನ್ ಸರ್ಕಾರವು ಕಮ್ಯುನಿಸಮ್ನ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ನಿಗ್ರಹನೀತಿಯನ್ನು[69] ಅನುಸರಿಸಲಾರಂಭಿಸಿತು. ಟ್ರೂಮನ್ ತನ್ನ ಭಾಷಣವೊಂದರಲ್ಲಿ ಈ ಯುದ್ಧದಲ್ಲಿ ನಡುವೆ ಪ್ರವೇಶಿಸಲು 400 ಮಿಲಿಯನ್ ಡಾಲರ್ ನೆರವು ನೀಡುವ ಘೋಷಣೆಯನ್ನು ಮಾಡಿದ್ದಲ್ಲದೆ ಮುಕ್ತ ಜನತೆ ಮತ್ತು ಸರ್ವಾಧಿಕಾರಿ ಆಡಳಿತಗಳ ನಡುವಣ ಸಂಘರ್ಷವನ್ನು ಅಧಿಕೃತಗೊಳಿಸಿದ ಟ್ರೂಮನ್ ತತ್ವವನ್ನು ಜಾರಿಗೆ ತಂದರು[69] ಈ ಬಂಡುಕೋರರಿಗೆ ಜೋಸಿಪ್ ಬ್ರಾಜ್ ಟಿಟೋನ ಯುಗೋಸ್ಲಾವಿಯಾದ ನೆರವಿದ್ದರು ಕೂಡ,[20] US ರಾಜನೀತಿಜ್ಞರು ಸೋವಿಯೆತ್ ಮೇಲೆ ತನ್ನ ಪ್ರಭಾವವನ್ನು ವಿಸ್ತರಿಸುವ ಸಲುವಾಗಿ ಗ್ರೀಕ್ ರಾಜಪ್ರಭುತ್ವದ ವಿರುದ್ಧ ಸಂಚುಹೂಡಿದ ಆಪಾದನೆಯನ್ನು ಹೊರಿಸಿದರು.[70]
ಟ್ರೂಮನ್ ತತ್ವದ ಘೋಷಣೆಯು ಯು.ಎಸ್ನ ದ್ವಿಪಕ್ಷೀಯ ಭದ್ರತೆಯ ಆರಂಭದ ಮೈಲಿಗಲ್ಲಾಯಿತು ಮತ್ತು ರಿಪಬ್ಲಿಕನ್ನರು ಹಾಗೂ ಡೆಮೋಕ್ರಾಟ್ಗಳ ನಡುವಿನ ವಿದೇಶಾಂಗ ನೀತಿಯ ಒಪ್ಪಂದವು ನಿಗ್ರಹ ಮತ್ತು ಅಡ್ಡಿಯ ಮೇಲೆ ಗಮನ ಕೇಂದ್ರೀಕರಿಸಿತು; ಇದು ವಿಯೆಟ್ನಾಮ್ ಯುದ್ಧದ ಸಮಯದಲ್ಲಿ ಮತ್ತು ನಂತರ ದುರ್ಬಲಗೊಂಡರೂ ನಂತರದ ದಿನಗಳಲ್ಲಿ ಬಲವಾಗಿ ನಿಂತಿತು.[71][72] ಯುರೋಪಿನ ಮಾಡರೇಟ್ ಮತ್ತು ಕನ್ಸರ್ವೇಟಿವ್ ಪಕ್ಷಗಳು ಮತ್ತು ಸೋಶಿಯಲ್ ಡೆಮೋಕ್ರಾಟ್ಗಳು ಪಾಶ್ಚಿಮಾತ್ಯ ಮೈತ್ರಿಗೆ ತಮ್ಮ ಸಂಪೂರ್ಣ ಬೆಂಬಲವನ್ನು ಸೂಚಿಸಿದವು[73]; ಆದರೆ KGBಯಿಂದ ಹಣಪಡೆದುಕೊಂಡು ಅದರ ಬೇಹುಗಾರಿಕೆಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಯುರೋಪಿಯನ್ ಮತ್ತು ಅಮೆರಿಕನ್ ಕಮ್ಯುನಿಸ್ಟರು[74] ಮಾಸ್ಕೋ ನಿರ್ದೇಶಿಸಿದಂತೆ ನಡೆದುಕೊಳ್ಳುತ್ತಿದ್ದರಾದರೂ ಇಲ್ಲಿ 1956ರ ನಂತರ ಪ್ರತಿಭಟನೆಗಳು ವ್ಯಕ್ತವಾಗತೊಡಗಿದವು. ಈ ಒಮ್ಮತದ ರಾಜಕೀಯಕ್ಕೆ ವಿಯೆಟ್ನಾಮ್ ಯುದ್ಧ ವಿರೋಧೀ ಕಾರ್ಯಕರ್ತರಿಂದ, CND ಮತ್ತು ಪರಮಾಣು ಶೀತಲೀಕರಣಆಂದೋಲನಗಳಿಂದ ವಿರೋಧ ವ್ಯಕ್ತವಾಯಿತು.[75]
1947ರ ಆರಂಭದಲ್ಲಿ ಬ್ರಿಟನ್, ಫ್ರಾನ್ಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಸೋವಿಯೆತ್ನೊಡನೆ ಈಗಾಗಲೇ ಸೋವಿಯೆತ್ನಿಂದ ತೆಗೆದುಹಾಕಲ್ಪಟ್ಟ ಉದ್ಯಮಗಳು, ಸರಕುಗಳು ಮತ್ತು ಮೂಲಭೂತ ಸೌಕರ್ಯಗಳ ವಿವರವಾದ ಲೆಕ್ಕಾಚಾರವನ್ನೂ ಒಳಗೊಂಡಂತೆ ಜರ್ಮನಿಯ ಆರ್ಥಿಕ ಸ್ವಾವಲಂಬನೆಯ ಯೋಜನೆಯ ಅಭಿವೃದ್ಧಿಯ ಬಗ್ಗೆ ಒಪ್ಪಂದ ಮಾಡಿಕೊಳ್ಳಲು ಮಾಡಿದ ಪ್ರಯತ್ನಗಳು ವಿಫಲವಾದವು.[76] 1947ರ ಜೂನ್ನಲ್ಲಿ ಟ್ರೂಮನ್ ಕರಾರು ಪ್ರಕಾರ ಸೋವಿಯೆತ್ ಅನ್ನೂ ಒಳಗೊಂಡಂತೆ ಭಾಗವಹಿಸಲು ಸಿದ್ಧವಿರುವ ಎಲ್ಲಾ ಯುರೋಪಿಯನ್ ದೇಶಗಳಿಗೆ ಆರ್ಥಿಕ ನೆರವು ನೀಡುವ ಪ್ರಮಾಣ ಮಾಡುವ ಮಾರ್ಷಲ್ ಪ್ಲಾನ್ ಅನ್ನು ಜಾರಿಗೊಳಿಸಿತು.[76]
ಈ ಯೋಜನೆಯ ಉದ್ದೇಶವು ಯುರೋಪಿನ ಪ್ರಜಾತಂತ್ರ ಮತ್ತು ಆರ್ಥಿಕ ವ್ಯವಸ್ಥೆಗಳ ಪುನರ್ರಚನೆ ಹಾಗೂ ಯುರೋಪಿನ ಶಕ್ತಿ ಸಮತೋಲನಕ್ಕೆ ಬೆದರಿಕೆಯೊಡ್ಡಬಹುದಾದ ಶಕ್ತಿಗಳನ್ನು ಎದುರಿಸುವುದು - ಉದಾಹರಣೆಗೆ ಚುನಾವಣೆ ಅಥವಾ ಕ್ರಾಂತಿಗಳ ಮೂಲಕ ಅಧಿಕಾರ ಪಡೆಯಲು ಹವಣಿಸುವ ಕಮ್ಯುನಿಸ್ಟ್ ಪಕ್ಷಗಳು - ಆಗಿತ್ತು.[77] ಈ ಯೋಜನೆಯ ಪ್ರಕಾರ ಯುರೋಪಿನ ಸುಭಿಕ್ಷತೆಯು ಜರ್ಮನ್ ಆರ್ಥಿಕ ಚೇತರಿಕೆಯನ್ನು ಅವಲಂಬಿಸಿತ್ತು.[78] ಒಂದು ತಿಂಗಳ ನಂತರ ಟ್ರೂಮನ್ 1947ರ National Security Actಗೆ ಸಹಿಮಾಡುವುದರ ಮೂಲಕ ಒಂದು ಏಕೀಕೃತ Department of Defense, Central Intelligence Agency (CIA), ಮತ್ತು National Security Councilಗಳ ರಚನೆಯನ್ನು ಅಂಗೀಕರಿಸಿದರು. ಇವುಗಳು ಮುಂದೆ ಶೀತಲ ಸಮರದ ಸಮಯದಲ್ಲಿ ಯು.ಎಸ್. ರಾಜನೀತಿಯ ಪ್ರಮುಖ ಅಧಿಕಾರವರ್ಗವಾಗಿ ಕಾರ್ಯನಿರ್ವಹಿಸತೊಡಗಿದವು.[79]
ಸ್ಟಾಲಿನ್ನ ಪಶ್ಚಿಮದೊಂದಿಗಿನ ಆರ್ಥಿಕ ಏಕೀಕರಣವು ಈಸ್ಟರ್ನ್ ಬ್ಲಾಕ್ನ ದೇಶಗಳನ್ನು ಸೋವಿಯೆತ್ ನಿಯಂತ್ರಣದಿಂದ ಆಚೆ ಕೊಂಡೊಯ್ಯುವುದೆಂದೂ, ಯು.ಎಸ್. ತನ್ನ ಪರವಾದ ಯುರೋಪ್ ಪುನರ್ರಚನೆಯನ್ನು ಕೊಂಡುಕೊಳ್ಳಲು ಪ್ರಯತ್ನಿಸುತ್ತಿದೆಯೆಂದೂ ಭಾವಿಸಿದ್ದರು.[64] ಹೀಗಾಗಿ ಸ್ಟಾಲಿನ್ ಈಸ್ಟರ್ನ್ ಬ್ಲಾಕ್ ದೇಶಗಳನ್ನು ಮಾರ್ಷಲ್ ಯೋಜನೆಯ ನೆರವು ಪಡೆಯದಂತೆ ತಡೆಹಿಡಿದರು.[64] ಮಾರ್ಷಲ್ ಯೋಜನೆಗೆ ಪ್ರತಿಯಾಗಿ ಸೋವಿಯೆತ್ ತನ್ನ ಆಶ್ರಿತ ದೇಶಗಳನ್ನು ಪೂರ್ವ ಯುರೋಪಿನೊಂದಿಗೆ ವ್ಯಾಪಾರವ್ಯವಹಾರ ನಡೆಸುವಂತೆ ಮೊಲೋಟೋವ್ ಯೋಜನೆಯನ್ನು ಜಾರಿಗೆ ತಂದಿತು (ಇದಕ್ಕೆ ಮುಂದೆ 1949ರ ಹೊತ್ತಿಗೆ Comecon ಎಂಬ ಹೆಸರಿನಿಂದ ಸಾಂಸ್ಥಿಕ ರೂಪ ನೀಡಲಾಯಿತು).[20] ಸ್ಟಾಲಿನ್ ಪುನರ್ರಚಿತ ಜರ್ಮನಿಯ ಬಗ್ಗೆ ಭೀತಿ ಹೊಂದಿದ್ದರು; ಏಕೆಂದರೆ ಆತನ ವಿಶ್ವಯುದ್ಧಾನಂತರದ ಜರ್ಮನಿಯ ಕಲ್ಪನೆಯಲ್ಲಿ ಸೋವಿಯೆತ್ಗೆ ಮುಂದೆ ಬೆದರಿಕೆಯೊಡ್ಡಬಹುದಾದ ಯಾವುದೇ ಮರುಶಸ್ತ್ರೀಕರಣದ ಯೋಜನೆ ಇರಲಿಲ್ಲ.[80]
1948ರ ಆರಂಭದ ವೇಳೆಗೆ "ಪ್ರತಿಕೂಲ ಅಂಶ"ಗಳ ಬಲವರ್ಧನೆಯ ಬಗ್ಗೆ ಬಂದ ವರದಿಗಳಿಂದಾಗಿ ಸೋವಿಯೆತ್ ಅಧಿಕಾರಿಗಳು ಈಸ್ಟರ್ನ್ ಬ್ಲಾಕಿನಲ್ಲಿ ಪ್ರಜಾತಂತ್ರ ಅಂಶಗಳನ್ನು ಹೊಂದಿದ್ದ ಏಕೈಕ ರಾಷ್ಟ್ರವಾಗಿದ್ದ ಜೆಕೋಸ್ಲೊವಾಕಿಯಾದಲ್ಲಿ 1948ರ ಸರ್ಕಾರಪಲ್ಲಟವನ್ನು ಆಯೋಜಿಸಿದರು.[81][82] ಈ ಪಲ್ಲಟದ ಸಾರ್ವಜನಿಕ ಅಮಾನುಷತೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹಿಂದೆಂದೂ ಇಲ್ಲದಷ್ಟು ದಿಗ್ಭ್ರಮೆ ಉಂಟುಮಾಡಿದ್ದಲ್ಲದೆ, ಯುದ್ಧದ ಭೀತಿಯನ್ನು ಕೂಡಾ ಹುಟ್ಟಿಸಿ ಅಲ್ಲಿಯವರೆಗೆ ಮಾರ್ಷಲ್ ಯೋಜನೆಗೆ ವ್ಯಕ್ತವಾಗಿದ್ದ ಸಣ್ಣಪುಟ್ಟ ವಿರೋಧಗಳ ಅವಶೇಷಗಳನ್ನೂ ಅಳಿಸಿಹಾಕಿತು.[83]
ಟ್ರೂಮನ್ ತತ್ವ ಮತ್ತು ಮಾರ್ಷಲ್ ಯೋಜನೆಯ ಅವಳೀ ನೀತಿಗಳು ಪಶ್ಚಿಮ ಯುರೋಪ್, ಗ್ರೀಸ್ ಮತ್ತು ಟರ್ಕಿಗೆ ಬಿಲಿಯಗಟ್ಟಲೆ ಧನರಾಶಿಯ ನೆರವು ಮತ್ತು ಮಿಲಿಟರಿ ನೆರವು ದೊರಕುವಂತೆ ಮಾಡಿದವು. ಯು.ಎಸ್ನ ನೆರವಿನೊಂದಿಗೆ ಗ್ರೀಕ್ ಮಿಲಿಟರಿಯು ತನ್ನ ಅಂತರ್ಯುದ್ಧದಲ್ಲಿ ವಿಜಯಶಾಲಿಯಾಯಿತು,[79] ಇಟಲಿಯನ್ ಕ್ರಿಶ್ಚಿಯನ್ ಡೆಮೋಕ್ರಾಟ್ಗಳು ಬಲಶಾಲಿಯಾಗಿದ್ದ ಕಮ್ಯುನಿಸ್ಟ್-ಸೋಶಿಯಲಿಸ್ಟ್ ಮೈತ್ರಿಯನ್ನು 1948ರ ಚುನಾವಣೆಯಲ್ಲಿ ಸೋಲಿಸಿದರು.[84] ಬೇಹುಗಾರಿಕೆ ಮತ್ತು ಗೂಢಚರ್ಯೆಯ ಚಟುವಟಿಕೆಗಳು, ಈಸ್ಟರ್ನ್ ಬ್ಲಾಕ್ ಪಕ್ಷಾಂತರಗಳು ಮತ್ತು ರಾಯಭಾರೀ ಉಚ್ಚಾಟನೆಗಳಲ್ಲಿ ಏರಿಕೆ ಕಂಡುಬರತೊಡಗಿತು.[85]
ಯುನೈಟೆದ್ ಸ್ಟೇಟ್ಸ್ ಮತ್ತು ಬ್ರಿಟನ್ ತಮ್ಮ ಸ್ವಾಧೀನದಲ್ಲಿದ್ದ ಪಶ್ಚಿಮ ಜರ್ಮನ್ ವಲಯಗಳನ್ನು "ಬೈಜೋನಿಯಾ"ದೊಳಗೆ ವಿಲೀನಗೊಳಿಸಿದವು (ಮುಂದೆ ಇದು ಫ್ರಾನ್ಸ್ ವಲಯದ ವಿಲೀನದೊಂದಿಗೆ "ಟ್ರೈಜೋನಿಯಾ" ಆಯಿತು).[86] ಜರ್ಮನಿಯ ಆರ್ಥಿಕ ಮರುರಚನೆಯ ಅಂಗವಾಗಿ 1948ರ ಆರಂಭದಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಕೆಲವು ಪಶ್ಚಿಮ ಯುರೋಪಿಯನ್ ಸರ್ಕಾರಗಳ ಪ್ರತಿನಿಧಿಗಳು ಪಶ್ಚಿಮ ಜರ್ಮನ್ ಪ್ರದೇಶಗಳನ್ನು ಒಂದು ಫೆಡರಲ್ ಸರ್ಕಾರ ಕ್ರಮದಲ್ಲಿ ವಿಲೀನಗೊಳಿಸಲು ಸಮ್ಮತಿಯನ್ನು ಸೂಚಿಸಿದರು.[87] ಇದರ ಜತೆಗೇ ಮಾರ್ಷಲ್ ಯೋಜನೆಗೆ ಅನುಸಾರವಾಗಿ ಅವರು ಜರ್ಮನ್ ಅರ್ಥವ್ಯವಸ್ಥೆಯನ್ನು ಪುನರುದ್ಯಮೀಕರಣ ಮತ್ತು ಪುನರ್ರಚನೆ ಮಾಡುವುದರ ಮೂಲಕ ಕಟ್ಟಲಾರಂಭಿಸಿದರು; ಈ ಕಾರ್ಯಕ್ರಮದಲ್ಲಿ ಸೋವಿಯೆತ್ನಿಂದ ಅಧಃಪತನಕ್ಕೀಡಾಗಿದ್ದ ಹಳೆಯ ಕರೆನ್ಸಿಯಾದ ರೀಶ್ಮಾರ್ಕ್ ಅನ್ನು ಬದಲಾಯಿಸಿ ಹೊಸ ಕರೆನ್ಸಿಯಾದ ಡ್ಯೂಶ್ ಮಾರ್ಕ್ ಅನ್ನು ಜಾರಿಗೆ ತರುವುದನ್ನು ಕೂಡ ಒಳಗೊಳ್ಳಲಾಗಿತ್ತು.[88]
ಇದಾದ ಕೆಲಸಮಯದಲ್ಲಿಯೇ ಸ್ಟಾಲಿನ್ ಆಯೋಜಿಸಿದ ಬರ್ಲಿನ್ ಮುತ್ತಿಗೆಯು ಪಶ್ಚಿಮ ಬರ್ಲಿನ್ಗೆ ಬಂದಿಳಿಯುತ್ತಿದ್ದ ಆಹಾರ, ಸಾಮಗ್ರಿಗಳು ಮತ್ತು ಸರಬರಾಜುಗಳನ್ನು ತಡೆಹಿಡಿಯುವುದರ ಮೂಲಕ ಶೀತಲ ಸಮರದ ಮೊತ್ತಮೊದಲ ಬಿಕ್ಕಟ್ಟಿಗೆ ಕಾರಣವಾಯಿತು.[89] ಯುನೈಟೆಡ್ ಸ್ಟೇಟ್ಸ್, ಬ್ರಿಟನ್, ಫ್ರಾನ್ಸ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮತ್ತು ಇತರ ದೇಶಗಳು ಒಟ್ಟಾಗಿ ಸಾಮೂಹಿಕ "ಬರ್ಲಿನ್ ಏರ್ಲಿಫ್ಟ್" ಎಂದರೆ ಬರ್ಲಿನ್ ವಾಯುಮಾರ್ಗದ ಮೂಲಕ ಪಶ್ಚಿಮ ಬರ್ಲಿನ್ಗೆ ಆಹಾರ ಮತ್ತು ಅವಶ್ಯಕ ಸಾಮಗ್ರಿಗಳನ್ನು ಸರಬರಾಜು ಮಾಡತೊಡಗಿದವು.[90]
ರಾಜನೀತಿಯ ಬದಲಾವಣೆಯ ವಿರುದ್ಧ ಸೋವಿಯೆತ್ ಒಂದು ಬೃಹತ್ ಸಾರ್ವಜನಿಕ ಬಾಂಧವ್ಯ ಪ್ರಚಾರಕಾರ್ಯವನ್ನು ಕೈಗೊಂಡಿತು, ಕಮ್ಯುನಿಸ್ಟರು 1948ರ ಚುನಾವಣೆಗಳಿಗೆ ತಡೆಯುಂಟುಮಾಡಿ ಅಪಾರ ನಷ್ಟವುಂತಾಗಲು ಕಾರಣರಾದರು,[91] 300,000 ಬರ್ಲಿನ್ ಪೌರರು ಮೆರವಣಿಗೆ, ಪ್ರದರ್ಶನಗಳನ್ನು ನಡೆಸುವುದರ ಮೂಲಕ ಅಂತರ್ರಾಷ್ಟ್ರೀಯ ಏರ್ಲಿಫ್ಟ್ ಮುಂದುವರಿಯಬೇಕೆಂದು ಕೋರಿಕೆ ಸಲ್ಲಿಸಿದರು,[92] ಇದರಿಂದ ಯು.ಎಸ್ ಅಕಸ್ಮಾತ್ತಾಗಿ ಜರ್ಮನ್ ಮಕ್ಕಳಿಗೆ ಸಿಹಿಕ್ಯಾಂಡಿ ವಿತರಿಸುವ ಯೋಜನೆಯಾದ "Operation Vittles" ಅನ್ನು ಆರಂಭಿಸಿತು.[93] 1949ರ ಮೇಯಲ್ಲ ಹಿಂದೆಗೆದ ಸ್ಟಾಲಿನ್ ಮುತ್ತಿಗೆಯನ್ನು ಸಮಾಪ್ತಿಗೊಳಿಸಿದನು.[66][94]
1949ರ ಏಪ್ರಿಲ್ನಲ್ಲಿ ಬ್ರಿಟನ್, ಫ್ರಾನ್ಸ್, ಯುನೈಟೆಡ್ ಸ್ಟೇಟ್ಸ್, ಕೆನಡಾ ಮತ್ತು ಇತರ ಎಂಟು ಪಶ್ಚಿಮ ಯುರೋಪಿಯನ್ ದೇಶಗಳು North Atlantic Treatyಗೆ ಸಹಿ ಹಾಕುವುದರ ಮೂಲಕ North Atlantic Treaty Organization (NATO)ನ ಸ್ಥಾಪನೆಯನ್ನು ಮಾಡಿದವು.[66] ಅದೇ ಆಗಸ್ಟ್ನಲ್ಲಿ ಸ್ಟಾಲಿನ್ ಪ್ರಥಮ ಸೋವಿಯೆತ್ ಅಣುಸಾಧನವನ್ನು ಸ್ಫೋಟಿಸಲು ಆದೇಶ ನೀಡಿದರು.[20] 1948ರಲ್ಲಿ ಪಶ್ಚಿಮ ಯುರೋಪಿಯನ್ ರಾಷ್ಟ್ರಗಳು ಆರಂಭಿಸಿದ ಜರ್ಮನ್ ಪುನರ್ರಚನಾ ಪ್ರಯತ್ನಗಳಲ್ಲಿ ಭಾಗವಹಿಸಲು ಸೋವಿಯೆತ್ ನಿರಾಕರಿಸಿದ್ದರಿಂದ[87][95] US, ಬ್ರಿಟನ್ ಮತ್ತು ಫ್ರಾನ್ಸ್ ಪಶ್ಚಿಮ ಜರ್ಮನಿಯ ರಚನೆಯನ್ನು ಮೂರು ಸ್ವಾಧೀನವಾದ ವಲಯಗಳಿಂದ ಮೇ 1949ರಲ್ಲಿ ಆರಂಭಿಸಿದವು.[47] ಅದೇ ವರುಷ ಅಕ್ಟೋಬರ್ನಲ್ಲಿ ಸೋವಿಯೆತ್ ಒಕ್ಕೂಟವು ತನ್ನ ಸ್ವಾಧೀನದಲ್ಲಿದ್ದ ಜರ್ಮನಿಯು ಇನ್ನುಮುಂದೆ ಜರ್ಮನ್ ಡೆಮಾಕ್ರಟಿಕ್ ರಿಪಬ್ಲಿಕ್ ಎಂದು ಕರೆಯಲ್ಪಡುವುದಾಗಿ ಘೋಷಿಸಿದರು.[47]
ಈಸ್ತರ್ನ್ ಬ್ಲಾಕ್ನ ಮಾಧ್ಯಮವು [[ಸರ್ಕಾರದ ಒಂದು ಅಂಗವಾಗಿದ್ದು,ಕಮ್ಯುನಿಸ್ಟ್ ಪಕ್ಷದ ಮೇಲೆ ಸಂಪೂರ್ಣವಾಗಿ ಅವಲಂಬಿತವೂ, ಪಕ್ಷದ ಆಜ್ಞಾನುವರ್ತಿಯೂ ಆಗಿದ್ದಿತು]]. ರೇಡಿಯೋ ಮತ್ತು ದೂರದರ್ಶನಗಳು ಸರ್ಕಾರೀ ಒಡೆತನ ಹೊಂದಿದ್ದು, ಮುದ್ರಣ ಮಾಧ್ಯಮವು ರಾಜಕೀಯ ಸಂಸ್ಥೆಗಳ, ಅದರಲ್ಲೂ ಹೆಚ್ಚಾಗಿ ಪ್ರಾದೇಶಿಕ ಕಮ್ಯುನಿಸ್ಟ್ ಪಕ್ಷದ ಒಡೆತನದಲ್ಲಿತ್ತು.[96] ಸೋವಿಯೆತ್ ಪ್ರಚಾರಕ್ರಮವು ಬಂಡವಾಳಶಾಹಿಯ ಮೇಲೆ ದಾಳಿ ಮಾಡಲು ಮಾರ್ಕ್ಸಿಸ್ಟ್ ಸಿದ್ಧಾಂತವನ್ನು ಬಳಸಿಕೊಂಡು ಅದರಲ್ಲಿ ಕಾರ್ಮಿಕರ ಶೋಷಣೆ ಮತ್ತು ಯುದ್ಧಪರ ಸಾಮ್ರಾಜ್ಯಶಾಹೀ ಪ್ರವೃತ್ತಿ ಇವೆಯೆಂದು ಪ್ರತಿಪಾದಿಸಿತು.[97]
ಪಶ್ಚಿಮ ಯುರೋಪಿನಲ್ಲಿ ಬ್ರಿಟಿಶ್ ಬ್ರಾಡ್ಕ್ಯಾಸ್ಟಿಂಗ್ ಕಂಪನಿ ಮತ್ತು ವಾಯ್ಸ್ ಆಫ್ ಅಮೆರಿಕಾಗಳ ಪ್ರಸಾರದ ಜತೆಗೇ[98], 1949ರಲ್ಲಿ ರೇಡಿಯೋ ಮುಕ್ತ ಯುರೋಪ್/ರೇಡಿಯೋ ಸ್ವಾತಂತ್ರ್ಯ ಎಂಬ ಈಸ್ಟರ್ನ್ ಬ್ಲಾಕಿನ ಕಮ್ಯುನಿಸ್ಟ್ಪದ್ಧತಿಯನ್ನು ಶಾಂತಿಯುತವಾಗಿ ಹೊರಹಾಕುವ ಉದ್ದೇಶ ಹೊಂದಿದ ಒಂದು ಮುಖ್ಯ ಪ್ರಚಾರಕಾರ್ಯವು ಆರಂಭವಾಯಿತು.[99] ರೇಡಿಯೋ ಮುಕ್ತ ಯುರೋಪ್ ತನ್ನ ಗುರಿಗಳನ್ನು ಸಾಧಿಸುವ ಸಲುವಾಗಿ ನಿಯಂತ್ರಿತ ಮತ್ತು ಪಕ್ಷ ಒಡೆತನದ ಪ್ರಾದೇಶಿಕ ಮುದ್ರಣಾಲಯಕ್ಕೆ ಬದಲಾಗಿ ಒಂದು ಪ್ರತಿನಿಧಿ ಹೋಮ್ ರೇಡಿಯೋ ಸ್ಟೇಶನ್ನಿನಂತೆ ಕಾರ್ಯನಿರ್ವಹಿಸಲಾರಂಭಿಸಿತು.[99] ರೇಡಿಯೋ ಫ್ರೀ ಯುರೋಪ್ ಜಾರ್ಜ್ ಎಫ್. ಕೆನ್ನನ್ರಂತಹ ಶೀತಲ ಸಮರದ ಪ್ರಮುಖ ವಾಸ್ತುಶಿಲ್ಪಿಗಳ ಕಲ್ಪನೆಯ ಪರಿಣಾಮವಾಗಿ ಮೂಡಿಬಂದಿತು. ಇವರಲ್ಲಿ ಅನೇಕರು ಶೀತಲ ಸಮರವನ್ನು ಮಿಲಿಟರಿ ಮಾರ್ಗಕ್ಕಿಂತ ಹೆಚ್ಚಾಗಿ ರಾಜಕೀಯ ಮಾರ್ಗದ ಮೂಲಕ ನಡೆಸಬೇಕೆಂದು ನಂಬುವವರಾಗಿದ್ದರು.[100]
ಕೆನ್ನನ್ ಮತ್ತು ಜಾನ್ ಫಾಸ್ಟರ್ ಡಲ್ಸ್ನಂತಹ ಹಲವಾರು ಅಮೆರಿಕನ್ ರಾಜನೀತಿಜ್ಞರು ಶೀತಲ ಸಮರವು ಮೂಲಭೂತವಾಗಿ ಯೋಜನೆಗಳ ಸಮರವೆಂದು ಒಪ್ಪಿಕೊಂಡಿದ್ದರು.[100] ಯುನೈಟೆಡ್ ಸ್ಟೇಟ್ಸ್ CIAಯ ಮುಖಾಂತರ ಯುರೋಪ್ ಮತ್ತು ಅಭಿವೃದ್ಧಿಶೀಲ ವಿಶ್ವದಲ್ಲಿ ಕಮ್ಯುನಿಸ್ಟ್ ವರ್ಚಸ್ಸನ್ನು ತಡೆಗಟ್ಟಲು ಹಲವಾರು ಯೋಜನೆಗಳಿಗೆ ಆರ್ಥಿಕ ನೆರವು ನೀಡಿತು.[101]
1950ರ ದಶಕದ ಮೊದಲ ಭಾಗದಲ್ಲಿ US ಪಶ್ಚಿಮ ಜರ್ಮನಿಯ ಮರುಶಸ್ತ್ರೀಕರಣಕ್ಕಾಗಿ ಕೆಲಸ ಮಾಡಿದ್ದಲ್ಲದೆ, 1955ರಲ್ಲಿ ಅದಕ್ಕೆ NATOನ ಸಂಪೂರ್ಣ ಸದಸ್ಯತ್ವ ದೊರಕುವಂತೆ ಮಾಡಿತು.[47] 1953ರ ಮೇಯಲ್ಲಿ ಆಗ ಸರ್ಕಾರೀ ಹುದ್ದೆಯೊಂದರಲ್ಲಿದ್ದ ಬೆರಿಯಾ, NATOಗೆ ಪಶ್ಚಿಮ ಜರ್ಮನಿಯ ವಿಲೀನವನ್ನು ತಡೆಗಟ್ಟಲು ತಟಸ್ಥ ಜರ್ಮನಿಯ ಮರು-ಏಕೀಕರಣ ಮಾಡುವ ವಿಫಲ ಪ್ರಸ್ತಾವನೆಯನ್ನು ಮಾಡಿದರು.[102]
1949ರಲ್ಲಿ ಮಾವೋನ ಕೆಂಪು ಸೈನ್ಯವು ಚೀನಾದ US-ಬೆಂಬಲಿತ ಕ್ಯುವೋಮಿನ್ಟಾಂಗ್ (KMT) ರಾಷ್ಟ್ರೀಯತಾ ಸರ್ಕಾರವನ್ನು ಸೋಲಿಸಿದಾಗ ಸೋವಿಯೆತ್ ಆಕೂಡಲೇ ನೂತನವಾಗಿ ರಚಿಸಲಾದ ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾದ ಜತೆ ಮೈತ್ರಿ ಬೆಳೆಸಿಕೊಂಡಿತು.[103] ಚೀನೀ ಕ್ರಾಂತಿ ಮತ್ತು 1949ರಲ್ಲಿ USನ ಅಣು ಏಕಾಧಿಪತ್ಯವು ಕೊನೆಗೊಂಡದ್ದರಿಂದ ಟ್ರೂಮನ್ ಆಡಳಿತವು ಬಹುಬೇಗನೆ ನಿಗ್ರಹ ನೀತಿಯನ್ನು ಪ್ರಮುಖ ಸ್ಥಾನಕ್ಕೇರಿಸಿ ವಿಸ್ತರಿಸಲಾರಂಭಿಸಿತು.[20] 1950ರ ರಹಸ್ಯ ದಾಖಲೆಯಾದ NSC-68ರಲ್ಲಿ[104] ರಾಷ್ಟ್ರಿಯ ಭದ್ರತಾ ಸಮಿತಿಯು ಪಶ್ಚಿಮ-ಪರ ಮೈತ್ರಿಗಳ ಮರುಸ್ಥಾಪನೆ ಮತ್ತು ಭದ್ರತಾ ವೆಚ್ಚಗಳನ್ನು ನಾಲ್ಕುಪಟ್ಟು ಏರಿಸುವ ಪ್ರಸ್ತಾವನೆ ಮಾಡಿತು.[20]
ಇದಾದ ನಂತರ ಯು.ಎಸ್ ಅಧಿಕಾರಿಗಳು ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾ ಗಳಲ್ಲಿ ನಿಗ್ರಹನೀತಿಯನ್ನು ವಿಸ್ತರಿಸುತ್ತಾ ಅಲ್ಲಿನ ಹಲವಾರು ದೇಶಗಳಲ್ಲಿ ಯು.ಎಸ್.ಎಸ್.ಆರ್ ಬೆಂಬಲದ ಕಮ್ಯುನಿಸ್ಟ್ ಪಕ್ಷಗಳ ನೇತೃತ್ವ ಹೊಂದಿರುವ ಕ್ರಾಂತಿಕಾರಿ ರಾಷ್ಟ್ರೀಯತಾ ಆಂದೋಲನಗಳನ್ನು ಹತ್ತಿಕ್ಕಲು ಮತ್ತು ಆಗ್ನೇಯ ಏಷ್ಯಾದಲ್ಲಿ ಮತ್ತು ಬೇರೆಡೆ ಯುರೋಪಿನ ಮರುವಸಾಹತೀಕರಣವನ್ನು ವಿರೋಧಿಸಲು ಆರಂಭಿಸಿದರು.[105] 1950ರ ದಶಕದ ಆರಂಭದಲ್ಲಿ (ಈ ಕಾಲಘಟ್ಟವನ್ನು ಕೆಲವೊಮ್ಮೆ "ಪ್ಯಾಕ್ಟೋಮೇನಿಯಾ" ಎನ್ನಲಾಗುತ್ತದೆ) US with ಜಪಾನ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಥೈಲ್ಯಾಂಡ್ ಮತ್ತು ಫಿಲಿಪೈನ್ಸ್ಗಳ ಜತೆ ಸರಣಿಯಂತೆ ಹಲವಾರು ಮೈತಿಗಳನ್ನು ಮಾಡಿಕೊಂಡು (ಮುಖ್ಯವಾಗಿ ANZUS ಮತ್ತು SEATO), ಯುನೈಟೆಡ್ ಸ್ಟೇಟ್ಸ್ಗೆ ಕೆಲವು ದೀರ್ಘಕಾಲದ ಮಿಲಿಟರಿ ತಳಪಾಯಗಳನ್ನು ಖಚಿತಗೊಳಿಸಿಕೊಂಡಿತು.[47]
ನಿಗ್ರಹಿಸುವಿಕೆಯ ಒಂದು ಪ್ರಮುಖ ಪರಿಣಾಮವೆಂದರೆ ಕೊರಿಯನ್ ಯುದ್ಧದ ಆರಂಭ. 1950ರ ಜೂನ್ನಲ್ಲಿ ಕಿಮ್ ಇಲ್ ಸುಂಗ್ರ ನಾರ್ಥ್ ಕೊರಿಯನ್ ಪೀಪಲ್ಸ್ ಆರ್ಮಿಯು ದಕ್ಷಿಣ ಕೊರಿಯಾದ ಮೇಲೆ ದಾಳಿ ಮಾಡಿತು.[106] ಸ್ಟಾಲಿನ್ಗೆ ಅಚ್ಚರಿ ಹುಟ್ಟಿಸುವಂತೆ,[20] ಸೋವಿಯೆತ್ ಆ ಹೊತ್ತಿಗೆ ಸಮಿತಿಯಲ್ಲಿ ಕಮ್ಯುನಿಸ್ಟ್ ಚೀನಾದ ಬದಲಾಗಿ ತೈವಾನ್ಗೆ ಶಾಶ್ವತ ಸ್ಥಾನ ನೀಡಲಾಗಿರುವುದನ್ನು ವಿರೋಧಿಸಿ ಎಲ್ಲಾ ಸಭೆಗಳನ್ನು ಬಹಿಷ್ಕರಿಸುತ್ತಿದ್ದರೂ, UN ಭದ್ರತಾ ಸಮಿತಿಯು ದಕ್ಷಿಣ ಕೊರಿಯಾದ ಸುರಕ್ಷೆಯನ್ನು ಬೆಂಬಲಿಸಿತು.[107] ದಕ್ಷಿಣ ಕೊರಿಯಾ, ಯುನೈಟೆಡ್ ಸ್ಟೇಟ್ಸ್,ಯುನೈಟೆಡ್ ಕಿಂಗ್ಡಮ್, ಟರ್ಕಿ, ಕೆನಡಾ, ಆಸ್ಟ್ರೇಲಿಯಾ, ಫ್ರಾನ್ಸ್, ಫಿಲಿಪೈನ್ಸ್, ನೆದರ್ಲ್ಯಾಂಡ್ಸ್, ಬೆಲ್ಜಿಯಂ, ನ್ಯೂಜಿಲ್ಯಾಂಡ್ ಹಾಗೂ ಇತರ ದೇಶಗಳ ಸಿಬ್ಬಂದಿಗಳನ್ನೊಳಗೊಂಡ UN ಪಡೆಯು ಆಕ್ರಮಣವನ್ನೆದುರಿಸಲು ಸನ್ನದ್ಧವಾಯಿತು.[108]
ಬೇರೆ ಪರಿಣಾಮಗಳ ಜತೆಗೇ ಕೊರಿಯನ್ ಯುದ್ಧವು NATOವನ್ನು ಒಂದು ಮಿಲಿಟರಿ ರಚನೆಯನ್ನು ಹೊಂದಲು ಪ್ರೇರೇಪಿಸಿತು.[109] ಈ ಯುದ್ಧದಲ್ಲಿ ಭಾಗವಹಿಸಿದ ಗ್ರೇಟ್ ಬ್ರಿಟನ್ನಂತಹ ದೇಶಗಳಲ್ಲಿ ಸಾರ್ವಜನಿಕ ಅಭಿಮತವು ಯುದ್ಧದ ಪರ ಮತ್ತು ವಿರುದ್ಧವಾಗಿ ಇಬ್ಭಾಗವಾಗಿತ್ತು. ಬ್ರಿಟಿಶ್ ಅಟಾರ್ನಿ ಜನರಲ್ ಆಗಿದ್ದ ಸರ್ ಹಾರ್ಟ್ಲೀ ಶಾಕ್ರಾಸ್ ಯುದ್ಧವನ್ನು ವಿರೋಧಿಸುವವರ ಭಾವನೆಗಳನ್ನು ಹೀಗಳೆಯುತ್ತಾ ಈ ರೀತಿಯಾಗಿ ಹೇಳಿದರು:[110]
I know there are some who think that the horror and devastation of a world war now would be so frightful, whoever won, and the damage to civilization so lasting, that it would be better to submit to Communist domination. I understand that view–but I reject it.
ಚೀನೀಯರು ಮತ್ತು ಉತ್ತರ ಕೊರಿಯನ್ನರು ಯುದ್ಧದಿಂದ ನಿತ್ರಾಣಗೊಂಡು 1952ರ ಕೊನೆಯ ಹೊತ್ತಿಗೆ ಅದನ್ನು ಕೊನೆಗೊಳಿಸಲು ತಯಾರಾಗಿದ್ದರೂ ಸ್ಟಾಲಿನ್ ಅವರು ಹೋರಾಟವನ್ನು ಮುಂದುವರಿಸಲೇಬೇಕೆಂದು ಒತ್ತಾಯಿಸಿದನು ಮತ್ತು ಜುಲೈ 1953ರಲ್ಲಿ, ಸ್ಟಾಲಿನ್ನನ ಮರಣದ ನಂತರವೇ ಅವರಿಗೆ ಯುದ್ಧವಿರಾಮದ ಅನುಮತಿಯನ್ನು ನೀಡಲಾಯಿತು.[47] ಉತ್ತರ ಕೊರಿಯಾದಲ್ಲಿ ಕಿಮ್ ಇಲ್ ಸುಂಗ್ ಒಂದು ಕೇಂದ್ರೀಕೃತ ಹಾಗೂ ನಿರ್ದಯವಾದ ಸರ್ವಾಧಿಕಾರವನ್ನು ರಚಿಸಿದ್ದಲ್ಲದೆ, ತನಗೆ ಮಿತಿಯಿಲ್ಲದ ಅಧಿಕಾರಗಳನ್ನು ಕೊಟ್ಟುಕೊಂಡು ಒಂದು ದುರ್ದಮ್ಯವಾದ ವ್ಯಕ್ತಿತ್ವ ಸಂಸ್ಕೃತಿಯನ್ನು ಹುಟ್ಟುಹಾಕಿದನು.[111][112]
1953ರಲ್ಲಿ ಎರಡೂ ಪಕ್ಷಗಳಲ್ಲಿ ಉಂಟಾದ ನೇತೃತ್ವದ ಬದಲಾವಣೆಗಳು ಶೀತಲ ಸಮರದ ಗತಿಯನ್ನು ಬದಲಾಯಿಸಿದವು.[79] ಆ ಜನವರಿಯಲ್ಲಿ ಡ್ವೈಟ್ ಐಸೆನ್ಹಾವರ್ಅಧಿಕಾರಕ್ಕೆ ಬಂದನು. ಟ್ರೂಮನ್ ಆಡಳಿತದ ಕೊನೆಯ 18 ತಿಂಗಳುಗಳಲ್ಲಿ USನ ಭದ್ರತಾ ಬಜೆಟ್ ನಾಲ್ಕು ಪಟ್ತು ಜಾಸ್ತಿಯಾಗಿತ್ತು ಮತ್ತು ಐಸೆನ್ಹಾವರ್ ಶೀತಲ ಸಮರವನ್ನು ಪರಿಣಾಮಕಾರಿಯಾಗಿ ಕಾದುವುದರ ಜತೆಗೇ ಅದರಮ ಮಿಲಿಟರಿ ವೆಚ್ಚವನ್ನು ಮೂರನೇ ಒಂದು ಭಾಗಕ್ಕಿಳಿಸಲು ಕ್ರಮಗಳನ್ನು ಕೈಗೊಂಡನು.[20]
ಮಾರ್ಚಿನಲ್ಲಿ ಜೋಸೆಫ್ ಸ್ಟಾಲಿನ್ನ ಮರಣದ ನಂತರ ಲ್ಯಾವ್ರೆಂಟೀ ಬೆರಿಯಾನ ಉಚ್ಚಾಟನೆ ಮತ್ತು ಮರಣದಂಡನೆ ಹಾಗೂ ವಿರೋಧಿಗಳಾದ ಜಾರ್ಜೀ ಮಾಲೆಂಕೋವ್ ಮತ್ತು ವ್ಯಾಚೆಸ್ಲಾವ್ ಮೊಲೋಟೋವ್ರನ್ನು ಬದಿಗೊತ್ತಿಯಾದಮೇಲೆ ನಿಕಿಟಾ ಕ್ರುಶ್ಚೇವ್ ಸೋವಿಯೆತ್ನ ನಾಯಕತ್ವವನ್ನು ವಹಿಸಿಕೊಂಡರು. 1956ರ ಫೆಬ್ರುವರಿ 25ರಂದು ಸೋವಿಯೆತ್ ಕಮ್ಯುನಿಸ್ಟ್ ಪಾರ್ಟಿಯ 20ನ್ಲ್ಲೇ ಕಾಂಗ್ರೆಸ್ನಲ್ಲಿ ಸ್ಟಾಲಿನ್ನ ಅಪರಾಧಗಳನ್ನು ಪಟ್ಟಿಮಾಡಿ ಹೀಗಳೆಯುವುದರ ಮೂಲಕ ಕ್ರುಶ್ಚೇವ್ ಹಾಜರಿದ್ದ ಪ್ರತಿನಿಧಿಗಳನ್ನು ಬೆಚ್ಚಿಬೀಳಿಸಿದರು.[113] ಡಿ-ಸ್ಟಾಲಿನೀಕರಣ ಎಂಬ ಒಂದು ಪ್ರಚಾರ ಕಾರ್ಯಕ್ರಮದಲ್ಲಿ ಆತ ಸ್ಟಾಲಿನ್ನನ ನೀತಿಯಿಂದ ದೂರ ಸಾಗಲು ಮತ್ತು ಸುಧಾರಣೆಗಳನ್ನು ಜಾರಿಗೆ ತರಲು ಇರುವ ಒಂದೇ ಒಂದು ದಾರಿಯೆಂದರೆ ಹಿಂದೆ ಮಾಡಲಾದ ತಪ್ಪುಗಳನ್ನು ಒಪ್ಪಿಕೊಳ್ಳುವುದು - ಎಂದು ಘೋಷಿಸಿದರು.[79]
1956ರ ನವೆಂಬರ್ 18ರಂದು, ಮಾಸ್ಕೋನ ಪಾಲಿಷ್ ದೂತಾವಾಸದಲ್ಲಿ ಪಾಶ್ಚಿಮಾತ್ಯ ರಾಯಭಾರಿಗಳನ್ನು ಸಂಬೋಧಿಸುತ್ತಾ ಕ್ರುಶ್ಚೇವ್ ತನ್ನ ಪ್ರಖ್ಯಾತ ಮಾತುಗಳಾದ "ನೀವು ಬಯಸುತ್ತೀರೋ ಇಲ್ಲವೋ, ಇತಿಹಾಸ ನಮ್ಮೊಂದಿಗಿದೆ. ನಾವು ನಿಮ್ಮನ್ನು ಹೂತುಹಾಕುತ್ತೇವೆ" - ಎಂದು ಹೇಳಿ ನೆರೆದಿದ್ದ ಎಲ್ಲರನ್ನೂ ದಂಗುಬಡಿಯುವಂತೆ ಮಾಡಿದರು.[114] ಆದರೆ ನಂತರ ಆತನು ಸಮಜಾಯಿಷಿ ನೀಡುತ್ತ ತಾನು ಪರಮಾಣು ಯುದ್ಧದ ಬಗ್ಗೆ ಮಾತನಾಡುತ್ತಿರಲಿಲ್ಲ, ತಾನು ಬಂಡವಾಳಶಾಹಿಯ ಮೇಲೆ ಕಮ್ಯುನಿಸಮ್ನ ಚಾರಿತ್ರಿಕ ವಿಜಯದ ಬಗ್ಗೆ ಮಾತನಾಡುತ್ತಿದ್ದುದು ಎಂದು ಹೇಳಿಕೆ ನೀಡಿದರು.[115] 1961ರಲ್ಲಿ ಕ್ರುಶ್ಚೇವ್ - USSR ಪಶ್ಚಿಮಕ್ಕಿಂತ ಹಿಂದಿರಬೇಕಾಗಿ ಬಂದರೂ ಸರಿಯೆ, ಒಂದು ದಶಕದೊಳಗಾಗಿ ಅದರ ವಸತಿಯ ತೊಂದರೆಗಳು ಮಾಯವಾಗುವುವೆಂದೂ, ಗ್ರಾಹಕ ಬಳಕೆಯ ವಸ್ತುಗಳು ಅಪಾರ ಸಂಖ್ಯೆಯಲ್ಲಿರುವುವೆಂದೂ, ಜನಸಂಖ್ಯೆಯು ಎಲ್ಲ ರೀತಿಯಲ್ಲಿಯೂ ಸುಭಿಕ್ಷತೆಯನ್ನು ಹೊಂದಿರುವುದೆಂದೂ, ಎರಡು ದಶಕಗಳಲ್ಲಿ ಸೋವಿಯೆತ್ ಒಕ್ಕೂಟವು "ಎಂಥಾ ಎತ್ತರವನ್ನು ತಲುಪುವುದೆಂದರೆ, ಅದಕ್ಕೆ ಯಾವ ಪ್ರಮುಖ ಬಂಡವಾಳಶಾಹೀ ರಾಷ್ಟ್ರವೂ ಸಾಟಿಯಾಗಲಾರದು" ಎಂದು ಘೋಷಿಸಿದರು.[116]
ಐಸೆನ್ಹಾವರ್ನ ಸೆಕ್ರೆಟರಿ ಆಫ್ ಸ್ಟೇಟ್ ಆಗಿದ್ದ ಜಾನ್ ಫಾಸ್ಟರ್ ಡಲ್ಸ್ ನಿಯಂತ್ರಣ ನೀತಿಗೆ "ಹೊಸ ನೋಟ"ವೊಂದರ ಅನಾವರಣ ಮಾಡುತ್ತಾ, ಯುದ್ಧಕಾಲದಲ್ಲಿ ಯು.ಎಸ್.ನ ವೈರಿಗಳ ವಿರುದ್ಧವಾಗಿ ಪರಮಾಣು ಅಸ್ತ್ರಗಳನ್ನು ಹೆಚ್ಚು ಅವಲಂಬಿಸುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.[79] ಯಾವುದೇ ಸೋವಿಯೆತ್ ಆಕ್ರಮಣವಾದರೂ ಸರಿಯೆ, ಯು.ಎಸ್ ಅದಕ್ಕೆ ಬಲವಾದ ಪ್ರತಿಕ್ರಿಯೆ ನೀಡುವುದೆಂದು ಸಾರಿದ ಡಲ್ಸ್, "ಭಾರೀ ಪ್ರತೀಕಾರ"ದ ನೀತಿಯನ್ನು ಪ್ರತಿಪಾದಿಸಿದರು. ಪರಮಾಣು ತಂತ್ರಜ್ಞಾನದಲ್ಲಿ ಮೇಲುಗೈ ಪಡೆದಿದ್ದರಿಂದ ಐಸೆನ್ಹಾವರ್ ಮಧ್ಯಪೂರ್ವದಲ್ಲಿನ ಸೊವಿಯೆತ್ ಬೆದರಿಕೆಗಳನ್ನೆದುರಿಸಲು ಸಾಧ್ಯವಾಯಿತು. ಉದಾಹರಣೆಗೆ 1956ರ ಸುಯೆಜ್ ಬಿಕ್ಕಟ್ಟಿನ ನಡುವೆ ಅವರು ಪ್ರವೇಶಿಸಿದರು.[20]
1953ರಲ್ಲಿ ಸ್ಟಾಲಿನ್ನ ಮರಣಾನಂತರ ಉದ್ವಿಗ್ನತೆಗಳು ಕೊಂಚಮಟ್ಟಿಗೆ ಕಡಿಮೆಯಾದರೂ, ಯುರೋಪಿನಲ್ಲಿ ಶಸ್ತ್ರಸಜ್ಜಿತ ಯುದ್ಧವಿರಾಮದ ಸಂದಿಗ್ದ ಪರಿಸ್ಥಿತಿ ಇದ್ದಿತು.[117] 1949ರ ಹೊತ್ತಿಗೆ ಈಸ್ಟರ್ನ್ ಬ್ಲಾಕ್ನಲ್ಲಿ ಪರಸ್ಪರ ಸಹಕಾರ ಒಪ್ಪಂದಗಳ ಜಾಲವೊಂದನ್ನು ರಚಿಸಿಕೊಂಡಿದ್ದ ಸೋವಿಯೆತ್[118], 1955ರಲ್ಲಿ ವಾರ್ಸಾ ಒಪ್ಪಂದದ ಮೂಲಕ ಅಧಿಕೃತವಾದ ಮೈತ್ರಿಯೊಂದನ್ನು ಸ್ಥಾಪಿಸಿತು.[47]
ಕ್ರುಶ್ಚೇವ್ ಹಂಗರಿಯ ಸ್ಟಾಲಿನಿಸ್ಟ್ ನಾಯಕ ಮಟ್ಯಾಸ್ ರಾಕೋಸಿಯ ಉಚ್ಚಾಟನೆಯನ್ನು ಆಯೋಜಿಸಿದ ಕೆಲವೇ ಸಮಯದ ನಂತರ 1956ರ ಹಂಗೇರಿಯನ್ ಕ್ರಾಂತಿ ನಡೆಯಿತು.[119] ಈ ಜನಪ್ರಿಯ ಕ್ರಾಂತಿಗೆ ಉತ್ತರವಾಗಿ[120] ಹೊಸ ಆಡಳಿತವು ರಹಸ್ಯ ಪೊಲೀಸ್ ಅನ್ನು ಅಧಿಕೃತವಾಗಿ ರದ್ದುಮಾಡಿ, ವಾರ್ಸಾ ಒಪ್ಪಂದದಿಂದ ಹಿಂದೆಗೆಯುವ ತನ್ನ ಉದ್ದೇಶವನ್ನು ಬಹಿರಂಗಗೊಳಿಸಿ ಮುಕ್ತ ಚುನಾವಣೆಗಳನ್ನು ಮತ್ತೆ ಜಾರಿಗೊಳಿಸುವುದಾಗಿ ಪಣತೊಟ್ಟಿತು. ಸೋವಿಯೆತ್ನ ಕೆಂಪು ಸೈನ್ಯವು ದಾಳಿ ಮಾಡಿತು.[121] ಸಾವಿರಾರು ಹಂಗೇರಿಯನ್ನರನ್ನು ಸೆರೆಹಿಡಿಯಲಾಯಿತು, ಜೈಲಿಗೆ ಹಾಕಲಾಯಿತು ಮತ್ತು ಸೋವಿಯೆತ್ ಒಕ್ಕೂಟಕ್ಕೆ ಗಡೀಪಾರು ಮಾಡಲಾಯಿತು[122]; ಅಂದಾಜು 200,000 ಹಂಗೇರಿಯನ್ನರು ಈ ಗೊಂದಲದ ನಡುವೆ ತಮ್ಮ ದೇಶವನ್ನು ತೊರೆಯಬೇಕಾಯಿತು.[123] ರಹಸ್ಯ ವಿಚಾರಣೆಗಳ ನಂತರ ಹಂಗೇರಿಯನ್ ನಾಯಕ ಇಮ್ರೆ ನ್ಯಾಜಿ ಮತ್ತು ಇತರರಿಗೆ ಮರಣದಂಡನೆ ವಿಧಿಸಲಾಯಿತು.[124]
1957ರಿಂದ 1961ರವರೆಗೆ ಕ್ರುಶ್ಚೇವ್ ಬಹಿರಂಗವಾಗಿ ಮತ್ತು ಆಗಾಗ ಪಶ್ಚಿಮಕ್ಕೆ ಪರಮಾಣು ವಿನಾಶದ ಬೆದರಿಕೆಯೊಡ್ಡುತ್ತಲೇ ಇದ್ದರು. ಸೋವಿಯೆತ್ ಮಿಸೈಲ್ಗಳ ಸಾಮರ್ಥ್ಯವು ಯುನೈಟೆಡ್ ಸ್ಟೇಟ್ಸ್ನವಕ್ಕಿಂತ ಬಹಳ ಹೆಚ್ಚಾಗಿದೆಯೆಂದೂ, ತಮಗೆ ಯಾವುದೇ ಅಮೆರಿಕನ್ ಅಥವಾ ಯುರೋಪಿಯನ್ ನಗರವನ್ನು ಅಳಿಸಿಹಾಕುವ ಶಕ್ತಿಯಿದೆಯೆಂದು ಆತ ಹೇಳಿಕೊಂಡರು. ಸ್ಟಾಲಿನ್ನ ಯುದ್ಧವು ಅನಿವಾರ್ಯವೆಂಬ ನಂಬಿಕೆಯನ್ನು ತಿರಸ್ಕರಿಸಿದ ಕ್ರುಶ್ಚೇವ್, "ಶಾಂತಿಯುತ ಸಹಬಾಳ್ವೆ"ಯೇ ತನ್ನ ನೂತನ ಗುರಿಯೆಂದು ಘೋಷಿಸಿದರು.[125] ಈ ನಿರ್ಮಾಣಕ್ರಮದಿಂದಾಗಿ ಸ್ಟಾಲಿನ್ ಯುಗದಲ್ಲಿದ್ದ ಅಂತರ್ರಾಷ್ಟ್ರೀಯ ವರ್ಗ ಸಂಘರ್ಷವೆಂದರೆ ಎರಡು ಬಣಗಳ ಅನಿವಾರ್ಯ ಸಂಘರ್ಷದಲ್ಲಿ ಜಾಗತಿಕ ಯುದ್ಧದ ಮೂಲಕ ಕಮ್ಯುನಿಸಮ್ನ ಗೆಲುವು ಎಂಬ ಸೋವಿಯೆತ್ ನಿಲುವು ಬದಲಾಯಿತು; ಈಗ ಶಾಂತಿಯ ಮೂಲಕ ಬಂಡವಾಳಶಾಹಿಯು ತನ್ನಿಂತಾನೇ ಕುಸಿಯಲು ಅವಕಾಶ ಮಾಡಿಕೊಡಲಾಗಿತ್ತು[126], ಇದರಿಂದ ಸೋವಿಯೆತ್ಗೆ ತಮ್ಮ ಮಿಲಿಟರಿ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವ ಅವಕಾಶ ದೊರಕಿತು[127]. ಈ ಕ್ರಮವು ಹಲವಾರು ದಶಕಗಳವರೆಗೆ ಗೋರ್ಬಚೇವ್ ತನ್ನ "ಹೊಸ ಚಿಂತನೆ"ಗಳ ಮೂಲಕ ಶಾಂತಿಯುತ ಸಹಬಾಳ್ವೆಯು ವರ್ಗಸಂಘರ್ಷ ದ ಒಂದು ಪ್ರಕಾರವಲ್ಲ, ಅದು ವರ್ಗಸಂಘರ್ಷದ ನಿಜವಾದ ಅಂತ್ಯ ಎಂದು ಪ್ರತಿಪಾದಿಸುವವರೆಗೂ ನಡೆದುಕೊಂಡು ಬಂದಿತು.[128]
USನ ಅಭಿಪ್ರಾಯ ಪ್ರಕಟಣೆಯು ವಿದೇಶಗಳಲ್ಲಿ ಅಮೆರಿಕನ್ ಶಕ್ತಿ ಮತ್ತು ಉದಾರ ಬಂಡವಾಳಶಾಹಿಯ ಯಶಸ್ಸನ್ನು ಆಧರಿಸಿತ್ತು.[129] 1960ರ ದಶಕದ ಕೊನೆಯ ಹೊತ್ತಿಗೆ ಕೆನಡಿ ಹೇಳಿದಂತಹ ಎರಡು ಸಾಮಾಜಿಕ ಸಂಸ್ಥಾ ಕ್ರಮಗಳ ನಡುವಿನ "ಮನುಷ್ಯರ ಮನಸ್ಸುಗಳಿಗಾಗಿ ನಡೆಯುತ್ತಿದ್ದ ಯುದ್ಧ"ವು ಹೆಚ್ಚಿನಪಕ್ಷ ಮುಗಿದುಹೋಗಿಯಾಗಿತ್ತು, ಆದರೆ ಆನಂತರದ ಬಿಕ್ಕಟ್ಟುಗಳು ಸೈದ್ಧಾಂತಿಕ ಘರ್ಷಣೆಗಳಾಗುವುದರ ಬದಲು ಜಿಯೋಪೊಲಿಟಿಕಲ್ ಉದ್ದೇಶಗಳ ನಡುವಿನ ಸಂಘರ್ಷವನ್ನು ಆಧರಿಸಿದ್ದುವಾಗಿದ್ದವು.[130]
1958ರ ನವೆಂಬರಿನಲ್ಲಿ ಕ್ರುಶ್ಚೇವ್ ಬರ್ಲಿನ್ ಅನ್ನು ಸ್ವತಂತ್ರ, ಮಿಲಿಟರಿರಹಿತ, "ಮುಕ್ತ ನಗರ"ವನ್ನಾಗಿ ಮಾಡಲು ವಿಫಲ ಪ್ರಯತ್ನ ಮಾಡುತ್ತ ಯುನೈಟೆಡ್ ಸ್ಟೇಟ್ಸ್, ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್ಗಳಿಗೆ ಪಶ್ಚಿಮ ಬರ್ಲಿನ್ನ ಹಲವು ಭಾಗಗಳಲ್ಲಿ ತಳವೂರಿದ್ದ ತಮ್ಮ ತುಕಡಿಗಳನ್ನು ಹಿಂದೆಗೆದುಕೊಳ್ಳಲು ಆರು ತಿಂಗಳ ಗಡುವನ್ನು ನೀಡಿ, ಇದಾಗದಿದ್ದಲ್ಲಿ ತಾನು ಪಶ್ಚಿಮದ ಸ್ವಾಧೀನದ ಹಕ್ಕನ್ನು ಪೂರ್ವ ಜರ್ಮನಿಗೆ ನೀಡುವುದಾಗಿ ಹೇಳಿಕೆ ನೀಡಿದನು. ಕ್ರುಶ್ಚೇವ್ ಮಾವೋ-ತ್ಸೆ-ತುಂಗ್ಗೆ "ಬರ್ಲಿನ್ ಪಶ್ಚಿಮದ ವೃಷಣಗಳಂತೆ. ನನಗೆ ಪಶ್ಚಿಮ ಕಿರುಚಾಡಬೇಕೆಂದು ಅನ್ನಿಸಿದಾಗೆಲ್ಲ ನಾನು ಬರ್ಲಿನ್ ಅನ್ನು ಹಿಂಡುತ್ತೇನೆ" ಎಂದು ಒಮ್ಮೆ ವಿವರಿಸಿದ್ದ.[131] NATO ಈ ಗಡುವನ್ನು ಅಧಿಕೃತವಾಗಿ ನಡು-ಡಿಸೆಂಬರಿನಲ್ಲಿ ತಿರಸ್ಕರಿಸಿತು ಮತ್ತು ಕ್ರುಶ್ಚೇವ್ ಜರ್ಮನ್ ಸವಾಲುಗಳ ಬಗ್ಗೆ ಜಿನೀವಾದಲ್ಲಿ ಒಂದು ಅಧಿವೇಶನ ನಡೆಸಬೇಕೆಂಬ ಷರತ್ತಿನ ಮೇಲೆ ಈ ಗಡುವನ್ನು ಹಿಂದೆಗೆದುಕೊಂಡನು.[132]
ವಿಸ್ತಾರವಾಗಿ ಹೇಳುವುದಾದರೆ, 1950ರ ದಶಕದ ವಿಶೇಷ ಲಕ್ಷಣವೆಂದರೆ ಯುರೋಪಿಯನ್ ಏಕೀಕರಣದ ಆರಂಭ — ಇದು ಶೀತಲ ಸಮರದ ಮೂಲಭೂತ ಪರಿಣಾಮಗಳಲ್ಲೊಂದಾಗಿದ್ದು ಇದನ್ನು ಟ್ರೂಮನ್ ಮತ್ತು ಐಸೆನ್ಹಾವರ್ ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸೇನೆಯ ಮೂಲಕ ಪ್ರವರ್ತನೆ ಮಾಡಿದ್ದರೂ ಸ್ವತಂತ್ರ ಯುರೋಪ್ ಮುಂದಿನ ದಿನಗಳಲ್ಲಿ ಸೋವಿಯೆತ್ ಒಕ್ಕೂಟದೊಂದಿಗೆ ಬೇರೊಂದು ಅಡ್ಡಿ ಒಪ್ಪಂದವನ್ನು ಮಾಡಿಕೊಂಡು ಪಾಶ್ಚಿಮಾತ್ಯ ಒಡಕು ಉಲ್ಬಣಿಸುವಂತೆ ಮಾಡಲು ಬಳಸಿಕೊಳ್ಳಬಹುದು ಎಂಬ ಭೀತಿಯಿಂದ ನಂತರದ ಆಡಳಿತಗಳು ಇದನ್ನು ದ್ವಂದ್ವಪೂರಿತ ದೃಷ್ಟಿಯಿಂದ ನೋಡಲಾರಂಭಿಸಿದವು.[133]
ಗ್ವಾಟೆಮಾಲಾ, ಇರಾನ್, ಫಿಲಿಪೈನ್ಸ್, ಮತ್ತು ಇಂಡೋಚೈನಾದಂತಹ ಹಲವಾರು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ನಡೆದ ರಾಷ್ಟ್ರೀಯತಾ ಆಂದೋಲನಗಳು ಸಾಮಾನ್ಯವಾಗಿ ಕಮ್ಯುನಿಸ್ಟ್ ಗುಂಪುಗಳೊಂದಿಗೆ ಮೈತ್ರಿ ಬೆಳೆಸಿಕೊಂಡಿದ್ದವು ಅಥವಾ ಪಶ್ಚಿಮದ ಗ್ರಹಿಕೆಯ ಪ್ರಕಾರ ಕಮ್ಯುನಿಸ್ಟ್ ಮೈತ್ರಿಯುಳ್ಳಂಥ ದೇಶಗಳಾಗಿದ್ದವು.[79] ಈ ಹಿನ್ನೆಲೆಯಲ್ಲಿ ಯು.ಎಸ್ ಮತ್ತು ಯು.ಎಸ್.ಎಸ್.ಆರ್ 1950ರ ದಶಕದಲ್ಲಿ ಮತ್ತು 1960ರ ದಶಕದ ಆರಂಭದಲ್ಲಿ ನಿರ್ವಸಾಹತೀಕರಣವು ತೀವ್ರಗೊಳ್ಳುತ್ತಿರುವಂತೆ[134] ತೃತೀಯ ವಿಶ್ವದ ಮೇಲೆ ಪರೋಕ್ಷವಾಗಿ ಪ್ರಭಾವ ಬೀರಲು ಪೈಪೋಟಿ ನಡೆಸಿದವು; ಸಾಮ್ರಾಜ್ಯಶಾಹಿಗಳ ಮುಂದುವರಿದ ಸೋಲುಗಳನ್ನು ಸೋವಿಯೆತ್ ತಮ್ಮ ಭವಿಷ್ಯದ ಗೆಲುವಿನ ತಳಹದಿಯೆಂಬಂತೆ ಕಾಣತೊಡಗಿತು.[135]
ಯು.ಎಸ್ ಸರ್ಕಾರವು ತಮ್ಮೊಂದಿಗೆ ಸ್ನೇಹಪರವಾಗಿರದ ತೃತೀಯ ವಿಶ್ವದ ಸರ್ಕಾರಗಳನ್ನು ಉರುಳಿಸಲು ಮತ್ತು ಸೌಹಾರ್ದಪೂರ್ಣ ಸರ್ಕಾರಗಳನ್ನು ಬೆಂಬಲಿಸಲು CIAಯನ್ನು ಬಳಸಿಕೊಂಡಿತು.[79] ಯು.ಎಸ್ ಸರ್ಕಾರವು CIAಯನ್ನು ಸೋವಿಯೆತ್-ಪರ ಒಲವು ಹೊಂದಿರುವುವೆಂದು ಸಂಶಯವಿರುವ ಸರ್ಕಾರಗಳನ್ನು ಉರುಳಿಸಲು ಬಳಸಿಕೊಂಡಿತು, ಉದಾಹರಣೆಗೆ 1953ರಲ್ಲಿ ಪ್ರಧಾನಮಂತ್ರಿ ಮೊಹಮ್ಮದ್ ಮೊಸಾದೆಕ್ ನೇತೃತ್ವದ ಇರಾನಿನ ಪ್ರಥಮ ಚುನಾಯಿತ ಸರ್ಕಾರ (ನೋಡಿ 1953 ಇರಾನಿಯನ್ ಸರ್ಕಾರಪಲ್ಲಟ ) ಮತ್ತು 1954ರಲ್ಲಿ ಗ್ವಾಟೆಮಾಲಾದ ಗಣತಂತ್ರ ಚುನಾಯಿತ ಅಧ್ಯಕ್ಷ ಯಾಕೋಬೋ ಆರ್ಬೆಂಜ್ ಗುಜ್ಮಾನ್ in (ನೋಡಿ 1954 ಗ್ವಾಟೆಮಾಲನ್ ಸರ್ಕಾರಪಲ್ಲಟ ).[104] 1954 ಮತ್ತು 1961ರ ನಡುವೆ ಯು.ಎಸ್ ದಕ್ಷಿಣ ವಿಯೆಟ್ನಾಮ್ನ ಪಶ್ಚಿಮ-ಪರ ಆಡಳಿತವು ಕುಸಿಯುವುದನ್ನು ತಡೆಯಲು ಆರ್ಥಿಕ ನೆರವು ಮತ್ತು ಮಿಲಿಟರಿ ಸಲಹೆಗಾರರನ್ನು ಕಳುಹಿಸಿತು.[20]
ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಹಲವಾರು ದೇಶಗಳು ಈ ಪೂರ್ವ-ಪಶ್ಚಿಮಗಳ ಪೈಪೋಟಿಯಲ್ಲಿ ಒಂದು ಬಣವನ್ನು ಸೇರಲು ಹೇರಲಾದ ಒತ್ತಡವನ್ನು ತಿರಸ್ಕರಿಸಿದವು. 1955ರಲ್ಲಿ ಇಂಡೋನೇಶಿಯಾದಲ್ಲಿ ನಡೆದ ಬಾಂಡುಂಗ್ ಅಧಿವೇಶನದಲ್ಲಿ ತೃತೀಯ ವಿಶ್ವದ ಡಜನ್ಗಟ್ಟಲೆ ದೇಶಗಳು ಶೀತಲ ಸಮರದಿಂದ ಹೊರಗುಳಿಯುವ ತೀರ್ಮಾನವನ್ನು ಕೈಗೊಂಡವು.[136] ಬಾಂಡುಂಗ್ ಅಧಿವೇಶನದಲ್ಲಿ ತೆಗೆದುಕೊಳ್ಳಲಾದ ಒಮ್ಮತದ ನಿರ್ಧಾರವು ಮುಂದೆ ಸಾಗಿ 1961ರ ಆಲಿಪ್ತ ಚಳುವಳಿಯ ರೂಪ ತಾಳಿತು.[79] ಇದೇ ವೇಳೆಗೆ ಕ್ರುಶ್ಚೇವ್ ಮಾಸ್ಕೋನ ರಾಜನೀತಿಯನ್ನು ವಿಸ್ತರಿಸುತ್ತಾ ಭಾರತ ಮತ್ತು ಇತರ ಪ್ರಮುಖ ತಟಸ್ಥ ರಾಷ್ಟ್ರಗಳ ಜತೆ ಸಂಬಂಧಗಳನ್ನು ಬೆಳೆಸತೊಡಗಿದರು. ತೃತೀಯ ವಿಶ್ವದ ಸ್ವಾತಂತ್ರ್ಯ ಚಳುವಳಿಗಳು ಯುದ್ಧಾನಂತರದ ಕ್ರಮವನ್ನು ಬದಲಾಯಿಸಿ ಹೆಚ್ಚು ಬಹುಮುಖಿಯನ್ನಾಗಿ ಮಾಡಿತು; ಈ ಪ್ರಪಂಚದಲ್ಲಿ ನಿರ್ವಸಾಹತೀಕರಣಗೊಂಡ ಆಫ್ರಿಕನ್ ಮತ್ತು ಮಧ್ಯಪೂರ್ವ ರಾಷ್ಟ್ರಗಳು ಹಾಗೂ ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕಗಳ ಬೆಳೆಯುತ್ತಿದ್ದ ರಾಷ್ತ್ರೀಯತೆಗಳು ಕಂಡುಬರತೊಡಗಿದವು.[20]
1956ರ ನಂತರದ ದಿನಗಳು ಸೋವಿಯೆತ್ ಒಕ್ಕೂಟಕ್ಕೆ ಗಂಭೀರವಾದ ಹಿನ್ನಡೆಯನ್ನುಂಟುಮಾಡಿದ ಬೆಳವಣಿಗೆಗಳಲ್ಲಿ ಸೈನೋ-ಸೋವಿಯೆತ್ ಬಿರುಕಿನ ಆರಂಭದ ಹೆಜ್ಜೆಯಾದ ಸೈನೋ-ಸೋವಿಯೆತ್ ಮೈತ್ರಿಯ ಒಡಕು ಬಹಳ ಪ್ರಮುಖವಾದುದಾಗಿದೆ. 1956ರಲ್ಲಿ ಸ್ಟಾಲಿನ್ನ ಮರಣಾನಂತರ ಕ್ರುಶ್ಚೇವ್ ಆತನ ಮೇಲೆ ವಾಗ್ದಾಳಿ ನಡೆಸಿದ ಸಂದರ್ಭವೊಂದರಲ್ಲಿ ಮಾವೋ ಸ್ಟಾಲಿನ್ನ ಪಕ್ಷ ವಹಿಸಿದ್ದರು. ಈ ಹೊಸ ಸೋವಿಯೆತ್ ನಾಯಕನನ್ನು ದಿಢೀರನೆ ಅಧಿಕಾರಕ್ಕೆ ಬಂದ ಪೊಳ್ಳುವ್ಯಕ್ತಿತ್ವವುಳ್ಳ ಮನುಷ್ಯನಂತೆ ಕಾಣುತ್ತಿದ್ದ ಮಾವೋ ಆತ ಕ್ರಾಂತಿಯ ಮನೋಭಾವನೆಯನ್ನು ಮರೆತುಹೋಗಿರುವನೆಂದು ಆರೋಪಿಸಿದ್ದರು.[137]
ಇದಾದ ನಂತರ ಕ್ರುಶ್ಚೇವ್ ಸೈನೋ-ಸೋವಿಯೆತ್ ಮೈತ್ರಿಯನ್ನು ಮತ್ತೆ ಜೋಡಿಸಲು ಹಲವಾರು ಹತಾಶ ಪ್ರಯತ್ನಗಳನ್ನು ಮಾಡಿದರೂ ಅವೆಲ್ಲ ನಿಷ್ಪ್ರಯೋಜಕವೆಂದು ಭಾವಿಸುತ್ತಿದ್ದ ಮಾವೋ ಎಲ್ಲಾ ಪ್ರಸ್ತಾವನೆಗಳನ್ನೂ ನಿರಾಕರಿಸಿದರು.[137] ಚೀನೀಯರು ಮತ್ತು ಸೋವಿಯೆತ್ ಒಕ್ಕೂಟದವರು ಕಮ್ಯುನಿಸ್ಟ್ ಪ್ರಚಾರದ ವಿಷಯವಾಗಿ ಒಂದು ಆಂತರಿಕ ಯುದ್ಧವನ್ನೇ ಆರಂಭಿಸಿದರು.[138] ತದನಂತರ ಸೋವಿಯೆತ್ ಜಾಗತಿಕ ಕಮ್ಯುನಿಸ್ಟ್ ಆಂದೋಲನದ ನೇತೃತ್ವಕ್ಕಾಗಿ ಮಾವೋನ ಚೀನಾದ ಜತೆ ಕಹಿದ್ವೇಷವನ್ನು ಬೆಳೆಸುವುದರೆಡೆ ಗಮನಹರಿಸಿತು[139] ಮತ್ತು ಈ ಎರಡೂ ಶಕ್ತಿಗಳು 1969ರಲ್ಲಿ ನೇರವಾದ ಮಿಲಿಟರಿ ಸಂಘರ್ಷಕ್ಕಿಳಿದವು.[140]
ಪರಮಾಣು ಶಸ್ತ್ರಾಸ್ತ್ರಗಳ ಕ್ಷೇತ್ರದಲ್ಲಿ ಯು.ಎಸ್ ಮತ್ತು ಯು.ಎಸ್.ಎಸ್.ಆರ್ಗಳು ಪರಮಾಣು ಮರುಶಸ್ತ್ರೀಕರಣವನ್ನು ಮುಂದುವರಿಸಿದ್ದಲ್ಲದೆ ತಮ್ಮ ವಿರೋಧೀ ಪ್ರಾಂತ್ಯಗಳ ಮೇಲೆ ದಾಳಿ ನಡೆಸುವುದಕ್ಕಾಗಿ ದೀರ್ಘವ್ಯಾಪ್ತಿಯ ಶಸ್ತ್ರಗಳನ್ನು ಅಭಿವೃದ್ಧಿಪಡಿಸಲು ಆರಂಭಿಸಿದರು.[47] 1957ರ ಆಗಸ್ಟ್ನಲ್ಲಿ ಸೋವಿಯೆತ್ ಒಕ್ಕೂಟವು ವಿಶ್ವದ ಪ್ರಪ್ರಥಮ intercontinental ballistic missileಗಳನ್ನು (ICBM)[141] ಯಶಸ್ವಿಯಾಗಿ ಪರೀಕ್ಷಿಸಿದ್ದಲ್ಲದೆ, ಅದೇ ವರ್ಷ ಅಕ್ಟೋಬರ್ನಲ್ಲಿ ಭೂಮಿಯ ಪ್ರಪ್ರಥಮ ಕೃತಕ ಉಪಗ್ರಹವಾದ ಸ್ಪುತ್ನಿಕ್ ಅನ್ನು ಉಡಾವಣೆ ಮಾಡಿದರು.[142] ಸ್ಪುತ್ನಿಕ್ನ ಉಡಾವಣೆಯಿಂದಾಗಿ ಅಂತರಿಕ್ಷ ಪೈಪೋಟಿ ಆರಂಭವಾಯಿತು. ಇದರ ಫಲಸ್ವರೂಪವಾಗಿ ICBMಗಳಿಗಿಂತ ಹೆಚ್ಚು ದಕ್ಷವೆನ್ನಬಹುದಾದ ಅಂತರಿಕ್ಷಯಾನದ ರಾಕೆಟ್ಗಳ ಸಹಾಯದಿಂದ ಅಪೋಲೋ ಚಂದ್ರ ಯಾತ್ರೆಯನ್ನು ನಡೆಸಲಾಯಿತು. ಇದನ್ನು ಗಗನಯಾತ್ರಿ ಫ್ರಾಂಕ್ ಬೋರ್ಮನ್ "ಶೀತಲ ಸಮರದ ಒಂದು ಕದನ ಮಾತ್ರ"[143] ಎಂದು ಬಣ್ಣಿಸಿದರು.
1961ರ ಬರ್ಲಿನ್ ಬಿಕ್ಕಟ್ಟು ಶೀತಲಸಮರಕಾಲದಲ್ಲಿ ಬರ್ಲಿನ್ ಮತ್ತು ಎರಡನೇ ವಿಶ್ವಯುದ್ಧನಂತರದ ಜರ್ಮನಿಯ ಸ್ಥಾನಮಾನಗಳ ಬಗೆಗಿನ ಕೊನೆಯ ಪ್ರಮುಖ ಘಟನೆಯಾಗಿತ್ತು. 1950ರ ದಶಕದ ಆರಂಭದಲ್ಲಿ ಸೋವಿಯೆತ್ ವಲಸೆ ನಿಯಂತ್ರಣ ಅನುಸಂಧಾನವನ್ನು ಈಸ್ಟರ್ನ್ ಬ್ಲಾಕ್ನ ಇತರ ದೇಶಗಳೂ ಅನುಸರಿಸುತ್ತಿದ್ದವು.[144] ನೂರಾರು ಸಾವಿರ ಪೂರ್ವ ಜರ್ಮನರು ಪ್ರತಿ ವರುಷವೂ ಪೂರ್ವ ಮತ್ತು ಪಶ್ಚಿಮ ಬರ್ಲಿನ್ ನಡುವೆ ಇದ್ದ ಎರಡನೇ ವಿಶ್ವಯುದ್ಧದ ನಾಲ್ಕು ಶಕ್ತಿಗಳು ನಿಯಂತ್ರಿಸುತ್ತಿದ್ದ ಸಂಚಾರ ವ್ಯವಸ್ಥೆಯ "ಒಳಕಿಂಡಿ"ಯೊಂದರ ಮುಖಾಂತರ ಪಶ್ಚಿಮ ಜರ್ಮನಿಗೆ ವಲಸೆ ಹೋಗುತ್ತಾ ಇದ್ದರು.[145]
ಪೂರ್ವ ಜರ್ಮನಿಯಿಂದ ಪಶ್ಚಿಮ ಜರ್ಮನಿಗೆ ಯುವ, ಸುಶಿಕ್ಷಿತ ವೃತ್ತಿಪರರ ಈ ಬೃಹತ್ "ಪ್ರತಿಭಾ ಪಲಾಯನ"ವು ಯಾವ ಮಟ್ಟವನ್ನು ತಲುಪಿತೆಂದರೆ 1961ರ ಹೊತ್ತಿಗೆ ಹೆಚ್ಚುಕಡಿಮೆ ಶೇಕಡಾ 20ರಷ್ಟು ಪೂರ್ವ ಜರ್ಮನಿಯ ಜನರು ಪಶ್ಚಿಮ ಜರ್ಮನಿಗೆ ವಲಸೆಹೋಗಿಬಿಟ್ಟಿದ್ದರು.[146] ಆ ವರುಷ ಜೂನ್ನಲ್ಲಿ ಸೋವಿಯೆತ್ ಒಕ್ಕೂಟವು ಮಿತ್ರರಾಷ್ಟ್ರಗಳ ಸೇನೆಗಳು ಪಶ್ಚಿಮ ಬರ್ಲಿನ್ನಿಂದ ಹಿಂತಿರುಗಬೇಕೆಂಬ ಹೊಸ ಸುಗ್ರೀವಾಜ್ಞೆಯೊಂದನ್ನು ಹೊರಡಿಸಿತು.[147] ಈ ಬೇಡಿಕೆಯನ್ನು ತಿರಸ್ಕರಿಸಲಾಯಿತು ಮತ್ತು ಆಗಸ್ಟ್ನಲ್ಲಿ ಪಶ್ಚಿಮ ಜರ್ಮನಿಯು ತನ್ನ ಗಡಿಯುದ್ದಕ್ಕೂ ಮುಳ್ಳುತಂತಿಯ ತಡೆಯನ್ನು ನಿರ್ಮಿಸಿದರು. ಈ ತಡೆಯು ಮುಂದಿನ ದಿನಗಳಲ್ಲಿ ಬರ್ಲಿನ್ ಗೋಡೆಯ ನಿರ್ಮಾಣದ ಮೂಲಕ ಒಳಮಾರ್ಗವನ್ನು ಸಂಪೂರ್ಣವಾಗಿ ಮುಚ್ಚಿಹಾಕುವುದರೊಂದಿಗೆ ಪರ್ಯವಸಾನಗೊಂಡಿತು.[148]
1959ರ ಕ್ಯೂಬಾ ಕ್ರಾಂತಿಯ ನಂತರ ಸೋವಿಯೆತ್ ಒಕ್ಕೂಟವು ಫಿಡೆಲ್ ಕ್ಯಾಸ್ಟ್ರೋ ನೇತೃತ್ವದ ಕ್ಯೂಬಾದ ಜತೆಗೆ ಮೈತ್ರಿ ಮಾಡಿಕೊಂಡಿತು.[149] 1962ರಲ್ಲಿ ಅಧ್ಯಕ್ಷ ಜಾನ್ ಎಫ್. ಕೆನಡಿಯವರು ಕ್ಯೂಬಾದಲ್ಲಿ ಪರಮಾಣು ಮಿಸೈಲ್ಗಳ ಸ್ಥಾಪನೆಗೆ ಉತ್ತರವಾಗಿ ಅದರ ಮೇಲೆ ನೌಕಾ ದಿಗ್ಬಂಧನವನ್ನು ಹೇರಿದರು. ಕ್ಯೂಬನ್ ಮಿಸೈಲ್ ಬಿಕ್ಕಟ್ಟು ವಿಶ್ವವನ್ನು ಪರಮಾಣು ಯುದ್ಧಕ್ಕೆ ಹಿಂದೆಂದೂ ಇಲ್ಲದಷ್ಟು ಹತ್ತಿರ ತಂದು ನಿಲ್ಲಿಸಿತು.[150] ಇದರಿಂದ ಎರಡೂ ಪರಮಾಣು ಮಹಾಶಕ್ತಿಗಳೂ ಕೂಡ ಪರಮಾಣು ಪ್ರತೀಕಾರದಿಂದ ಉಂಟಾಗಬಹುದಾದ ಸಂಪೂರ್ಣ ವಿನಾಶದ ಭೀತಿಯಿಂದ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲು ಹಿಂಜರಿಯಲಾರಂಭಿಸಿದ್ದರಿಂದ ಪರಸ್ಪರ ಖಚಿತವಾದ ವಿನಾಶದ ಕಲ್ಪನೆಗೆ ರುಜುವಾತು ದೊರಕಿದಂತಾಯಿತು.[151] 1961ರಲ್ಲಿಯೇ ಶೀತಲ ಸಮರದ ಪ್ರಪ್ರಥಮ ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದವಾದ ಅಂಟಾರ್ಕ್ಟಿಕ್ ಒಪ್ಪಂದವು ಜಾರಿಗೆ ಬಂದಿದ್ದರೂ ಈ ಬಿಕ್ಕಟ್ಟಿನ ನಂತರ ಪರಮಾಣು ಶಸ್ತ್ರಾಸ್ತ್ರ ಪೈಪೋಟಿಯಲ್ಲಿ ಮೊದಲಬಾರಿಗೆ ಪರಮಾಣು ನಿಶ್ಶಸ್ತ್ರೀಕರಣ ಮತ್ತು ಸಂಬಂಧಗಳನ್ನು ಸುಧಾರಿಸಲು ಪ್ರಯತ್ನಗಳನ್ನು ಮಾಡಲಾಯಿತು[117].[152]
1964ರಲ್ಲಿ ಕ್ರುಶ್ಚೇವ್ನ ಕ್ರೆಮ್ಲಿನ್ ಸಹೋದ್ಯೋಗಿಗಳು ಆತನನ್ನು ಅಧಿಕಾರದಿಂದ ಚ್ಯುತಗೊಳಿಸಿದರಾದರೂ ಆತ ಶಾಂತಿಯುತವಾಗಿ ನಿವೃತ್ತಿಹೊಂದಲು ಅವಕಾಶ ನೀಡಿದರು.[153] ಉದ್ಧಟತನ ಮತ್ತು ಅನರ್ಹತೆಯ ಆರೋಪ ಹೊತ್ತ ಕ್ರುಶ್ಚೇವ್ನ ಮೇಲೆ ಸೋವಿಯೆತ್ನ ಕೃಷಿಪದ್ಧತಿಯನ್ನು ಹಾಳುಗೆಡವಿದ ಮತ್ತು ಪ್ರಪಂಚವನ್ನು ಪರಮಾಣು ಯುದ್ಧದ ಅಂಚಿಗೆ ತಂದು ನಿಲ್ಲಿಸಿದ ಆಪಾದನೆಗಳೂ ಇದ್ದವು.[153] ಬರ್ಲಿನ್ ಗೋಡೆಯ ನಿರ್ಮಾಣಕ್ಕೆ ಆದೇಶ ನೀಡುವುದರೊಂದಿಗೆ ಕ್ರುಶ್ಚೇವ್ ಅಂತರ್ರಾಷ್ಟ್ರೀಯ ಮುಜುಗರದ ಪಟ್ಟ ಪಡೆದಿದ್ದಲ್ಲದೆ ಮಾರ್ಕ್ಸಿಸಮ್-ಲೆನಿನಿಸಮ್ನ ಸಾರ್ವಜನಿಕ ಮುಖಭಂಗಕ್ಕೆ ಕಾರಣವಾದರು.[153]
1960 ಮತ್ತು '70ರ ದಶಕಗಳ ವೇಳೆಗೆ ಶೀತಲ ಯುದ್ಧದಲ್ಲಿ ಭಾಗವಹಿಸಿದವರು ಒಂದು ಹೊಸ, ಸಂಕೀರ್ಣವಾದ ಅಂತರ್ರಾಷ್ಟ್ರೀಯ ಸಂಬಂಧಗಳ ಮಾದರಿಗೆ ಹೊಂದಿಕೊಳ್ಳಬೇಕಾಯಿತು - ಈ ಮಾದರಿಯಲ್ಲಿ ಪ್ರಪಂಚವು ಮೊದಲಿದ್ದಂತೆ ಎರಡು ಸಂಪೂರ್ಣವಾಗಿ ವಿರುದ್ಧವಾದ ಬಣಗಳಾಗಿ ಕಂಡುಬರುತ್ತಿರಲಿಲ್ಲ.[79] ವಿಶ್ವಯುದ್ಧದ ನಂತರದ ಕಾಲಘಟ್ಟದಲ್ಲಿ ಎರಡನೇ ವಿಶ್ವಯುದ್ಧದಿಂದ ಉಂತಾದ ವಿನಾಶದಿಂದ ಬಹಳ ಬೇಗನೆ ಸುಧಾರಿಸಿಕೊಮ್ಡ ಜಪಾನ್ ಮತ್ತು ಪಶ್ಚಿಮ ಯುರೋಪ್ 1950 ಮತ್ತು '60ರ ದಶಕದ ವೇಳೆಗೆ ಬಲಶಾಲಿಯಾದ ಆರ್ಥಿಕ ಬೆಳವಣಿಗೆಯನ್ನು ತೋರಿದವು ಮಾತ್ರವಲ್ಲದೆ ಅವುಗಳ ತಲಾ GDPಯು ಯುನೈಟೆಡ್ ಸ್ಟೇಟ್ಸ್ನ ಅಂಕಿಅಂಶಗಳಷ್ಟೇ ಕಂಡುಬರಲಾರಂಭಿಸಿತು; ಆದರೆ ಈಸ್ಟರ್ನ್ ಬ್ಲಾಕ್ನ ಆರ್ಥಿಕ ವ್ಯವಸ್ಥೆಯು ಹದಗೆಟ್ಟಿತ್ತು.[79][154]
1973 ತೈಲ ಬಿಕ್ಕಟ್ಟು ಮತ್ತು ತೃತೀಯ ವಿಶ್ವದ Organization of Petroleum Exporting Countries (OPEC) ಹಾಗೂ Non-Aligned Movementನಂತಹ ಮೈತ್ರಿಕೂಟಗಳ ಬೆಳೆಯುತ್ತಿದ್ದ ಪ್ರಭಾವಗಳ ಫಲಸ್ವರೂಪವಾಗಿ ಕಡಿಮೆ ಶಕ್ತಿಯುಳ್ಳ ದೇಶಗಳು ಕೂಡ ತಮ್ಮ ಸ್ವಾತಂತ್ರ್ಯವನ್ನು ಪ್ರತಿಪಾದಿಸಲು ಮತ್ತು ಎರಡೂ ಮಹಾಶಕ್ತಿಗಳ ಒತ್ತಡದೆದುರು ಪ್ರತಿರೋಧವನ್ನು ತೋರಲು ಆರಂಭಿಸಿದವು.[105] ಇದೇ ವೇಳೆಗೆ ಮಾಸ್ಕೋ ಬಲವಂತವಾಗಿ ತನ್ನ ಗಮನವನ್ನು ತನ್ನ ಆಳವಾದ ಆಂತರಿಕ ಆರ್ಥಿಕ ತೊಂದರೆಗಳ ಕಡೆಗೆ ತಿರುಗಿಸಬೇಕಾಗಿ ಬಂದಿತು.[79] ಈ ವೇಳೆಗೆ ಅಲೆಕ್ಸೀ ಕೊಸಿಗಿನ್ ಮತ್ತು ಲಿಯೋನಿಡ್ ಬ್ರೆಝ್ನೇವ್ ಮುಂತಾದ ಸೋವಿಯೆತ್ ನಾಯಕರು détente-ಸಹಕಾರ ನೀತಿಯನ್ನು ಬಳಸುವುದರೆಡೆಗೆ ಒಲವು ತೋರಲಾರಂಭಿಸಿದರು.[79]
ಅಧ್ಯಕ್ಷ ಲಿಂಡನ್ ಬಿ. ಜಾನ್ಸನ್ ಲ್ಯಾಟಿನ್ ಅಮೆರಿಕಾದಲ್ಲಿ ಕ್ಯೂಬಾ ಶೈಲಿಯ ಕ್ರಾಂತಿಯಾಗುವ ಸಾಧ್ಯತೆಯಿದೆಯೆಂದು ಪ್ರತಿಪಾದಿಸಿ ಈ ಬೆದರಿಕೆಯನ್ನೆದುರಿಸಲು ಆಪರೇಷನ್ ಪವರ್ ಪ್ಯಾಕ್ ನ ಮುಖಾಂತರ ಡೊಮಿನಿಕನ್ ರಿಪಬ್ಲಿಕ್ನಲ್ಲಿ 22,000 ತುಕಡಿಗಳನ್ನು ನಿಯಮಿಸಿದನು.[20] NATO ರಾಷ್ಟ್ರಗಳು ಯಾವುದೇ ಸೋವಿಯೆತ್ ಆಕ್ರಮಣದ ವಿರುದ್ಧ ಭದ್ರತೆಗಾಗಿ ಪ್ರಾಥಮಿಕವಾಗಿ ಯು.ಎಸ್ನ ಸೇನೆಯ ಮೇಲೆ ಅವಲಂಬಿತವಾಗಿರುವುದನ್ನು ಪ್ರಬಲವಾಗಿ ವಿರೋಧಿಸಿದ ಫ್ರಾನ್ಸಿನ ಚಾರ್ಲ್ಸ್ ಡಿ ಗಾಲ್, 1966ರಲ್ಲಿ NATO's ಸೇನಾ ವ್ಯವಸ್ಥೆಯಿಂದ ಹೊರಬಂದದ್ದೇ ಅಲ್ಲದೆ ಫ್ರಾನ್ಸಿನಿಂದ NATO ತುಕಡಿಗಳನ್ನು ಹೊರಹಾಕಿದನು.[155]
1968ರ ಜೆಕೋಸ್ಲೊವಾಕಿಯಾದ ರಾಜಕೀಯ ಮುಕ್ತತೆಯ ಕಾಲಘಟ್ಟವಾದ ಪ್ರಾಗ್ ವಸಂತವು ಹಲವಾರು ಮುಕ್ತತಾ ಕಾರ್ಯಕ್ರಮಗಳ "ಆಕ್ಷನ್ ಪ್ರೋಗ್ರಾಮ್" ಅನ್ನು ಒಳಗೊಂಡಿದ್ದು ಇದರಡಿ ಪ್ರೆಸ್ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ ಮತ್ತು ಚಲನಾ ಸ್ವಾತಂತ್ರ್ಯದ ಹೆಚ್ಚಿಸುವಿಕೆಯ ಜತೆಗೇ ಗ್ರಾಹಕರ ಬಳಕೆಯ ವಸ್ತುಗಳ ಬಗ್ಗೆ ಹೆಚ್ಚು ಆರ್ಥಿಕ ಪ್ರಾಮುಖ್ಯತೆ, ಬಹುಪಕ್ಷೀಯ ಸರ್ಕಾರ ರಚನೆಯ ಸಾಧ್ಯತೆ, ರಹಸ್ಯ ಪೊಲೀಸ್ನ ಅಧಿಕಾರವನ್ನು ಕಡಿಮೆಗೊಳಿಸುವುದು [156][157] ಮತ್ತು ವಾರ್ಸಾ ಒಪ್ಪಂದದಿಂದ ಹಿಂದೆಗೆಯುವ ಸಂಭವನೀಯತೆಗಳನ್ನೂ ಕೂಡ ವಿವರಿಸಲಾಗಿತ್ತು.[158]
ತಮ್ಮ ಹಲವಾರು ವಾರ್ಸಾ ಒಪ್ಪಂದದ ಮಿತ್ರದೇಶಗಳೊಡನೆ ಸೇರಿಕೊಂಡ ಸೋವಿಯೆತ್ನ ಕೆಂಪು ಸೈನ್ಯವು ಜೆಕೋಸ್ಲೊವಾಕಿಯಾದ ಮೇಲೆ ಆಕ್ರಮಣ ಮಾಡಿತು.[159] ಈ ಆಕ್ರಮಣವು ವಲಸೆಯ ದೊಡ್ಡ ಅಲೆಯೊಂದು ಏಳಲು ಕಾರಣವಾಯಿತು.ಮೊದಲ ಘಟ್ಟದಲ್ಲಿ ಅಂದಾಜು 70,000 ಜೆಕ್ ಜನರು ಪಲಾಯನ ಮಾಡಿದರೆ ಕೊನೆಯ ಘಟ್ಟದಲ್ಲಿ ಈ ಸಂಖ್ಯೆಯು 300,000ವನ್ನು ತಲುಪಿತು.[160] ಈ ಆಕ್ರಮಣವನ್ನು ಯುಗೋಸ್ಲಾವಿಯಾ, ರೊಮೇನಿಯಾ, ಚೀನಾ ಹಾಗೂ ಪಾಶ್ಚಾತ್ಯ ಯುರೋಪಿಯನ್ ಕಮ್ಯುನಿಸ್ಟ್ ಪಕ್ಷಗಳು ಬಲವಾಗಿ ವಿರೋಧಿಸಿದವು.[161]
ಜೆಕೋಸ್ಲೊವಾಕಿಯಾ ಆಕ್ರಮಣದ ಒಂದು ತಿಂಗಳ ನಂತರ, 1968ರ ಸೆಪ್ಟೆಂಬರಿನಲ್ಲಿ ಪಾಲಿಶ್ ಯುನೈಟೆಡ್ ವರ್ಕರ್ಸ್ ಪಾರ್ಟಿಯ ಐದನೇ ಕಾಂಗ್ರೆಸ್ ಅಧಿವೇಶನದಲ್ಲಿ ಮಾಡಿದ ಭಾಷಣವೊಂದರಲ್ಲಿ ಬ್ರೆಝ್ನೇವ್ ಬ್ರೆಝ್ನೇವ್ ಡಾಕ್ಟ್ರಿನ್ನ ಹಂದರವನ್ನು ಮಂಡಿಸುತ್ತ ಮಾರ್ಕ್ಸಿಸಮ್ ಮತ್ತು ಲೆನಿನಿಸಮ್ಗಳಿಗೆ ಬದಲಾಗಿ ಬಂಡವಾಳಶಾಹಿಯನ್ನು ಅಪ್ಪಿಕೊಳ್ಳಲು ಬಯಸುವ ಯಾವುದೇ ದೇಶದ ಸಾರ್ವಭೌಮತ್ವವನ್ನು ಭಂಗಿಸುವ ಹಕ್ಕನ್ನು ಪ್ರತಿಪಾದಿಸಿದನು. ತನ್ನ ಭಾಷಣದಲ್ಲಿ ಬ್ರೆಝ್ನೇವ್ ನೀಡಿದ ಹೇಳಿಕೆ ಈ ರೀತಿ ಇದೆ:[158]
When forces that are hostile to socialism try to turn the development of some socialist country towards capitalism, it becomes not only a problem of the country concerned, but a common problem and concern of all socialist countries.
ಈ ತತ್ವವು ಪಶ್ಚಿಮ ಜರ್ಮನಿ ಮತ್ತು ಪಶ್ಚಿಮ ಯುರೋಪ್ಗಳ ಸುಭಿಕ್ಷತೆಗೆ ಹೋಲಿಸಿದರೆ ಕುಸಿಯುತ್ತಿರುವ ಜೀವನಶೈಲಿಗಳನ್ನು ಹೊಂದಿರುವ ಪೋಲಂಡ್, ಹಂಗರಿ ಮತ್ತು ಪೂರ್ವ ಜರ್ಮನಿಯೇ ಮೊದಲಾದ ದೇಶಗಳಲ್ಲಿ ಉಂಟಾದ ಮಾರ್ಕ್ಸಿಸಮ್-ಲೆನಿನಿಸಮ್ನ ಸೋಲುಗಳಿಂದ ಹುಟ್ಟಿದೆ.[162]
ಯು.ಎಸ್ ತನ್ನ ಜತೆ ಸೌಹಾರ್ದತೆಯಿಂದಿದ್ದ ತೃತೀಯ ವಿಶ್ವದ ರಾಷ್ಟ್ರಗಳನ್ನು ಬೆಂಬಲಿಸುವುದಕ್ಕಾಗಿ ಅಪಾರ ಧನರಾಶಿಯನ್ನು ವ್ಯಯಿಸುತ್ತಲೇ ಇತ್ತು. ಅಂಚಿನ ಪ್ರದೇಶಗಳಲ್ಲಿ ಮತ್ತು ಬಳಕೆದಾರ ದೇಶಗಳಲ್ಲಿ - ಅದರಲ್ಲೂ ಪ್ರಮುಖವಾಗಿ ವಿಯೆಟ್ನಾಮ್ನಲ್ಲಿ ಬಿಕ್ಕಟ್ಟುಗಳು ಮುಂದುವರಿದವು.[163] ಜಾನ್ಸನ್ ಆಗ್ನೇಯ ಏಷ್ಯಾದಲ್ಲಿ ನ್ಯಾಶನಲ್ ಫ್ರಂಟ್ ಫಾರ್ ದ ಲಿಬರೇಶನ್ ಆಫ್ ಸೌಥ್ ವಿಯೆಟ್ನಾಮ್ (NLF) ಮತ್ತು ಅದರ ಉತ್ತರ ವಿಯೆಟ್ನಾಮೀಸ್ ಮೈತ್ರಿಗಳನ್ನು ವಿಯೆಟ್ನಾಮ್ ಯುದ್ಧದಲ್ಲಿ ಸೋಲಿಸುವ ಸಲುವಾಗಿ 575,000 ತುಕಡಿಗಳನ್ನು ನಿಯಮಿಸಿದನಾದರೂ ಆತನ ದುಬಾರಿ ರಾಜನೀತಿಯಿಂದಾಗಿ ಯು.ಎಸ್ನ ಆರ್ಥಿಕ ಪರಿಸ್ಥಿತಿ ದುರ್ಬಲಗೊಂಡಿತು ಮತ್ತು 1975ರ ಹೊತ್ತಿಗೆ ಪ್ರಪಂಚದ ಅತ್ಯಂತ ಬಡರಾಷ್ಟ್ರಗಳಲ್ಲೊಂದರ ಕೈಯಲ್ಲಿ ಪ್ರಪಂಚದ ಅತ್ಯಂತ ಬಲಶಾಲಿ ಮಹಾಶಕ್ತಿಯು ಅವಮಾನಕರ ಸೋಲನ್ನು ಅನುಭವಿಸಬೇಕಾಗಿ ಬಂದಿತು.[20]
ಇದರ ಜತೆಗೇ ದಕ್ಷಿಣ ಅಮೆರಿಕಾದ ಸರ್ವಾಧಿಕಾರಿಗಳು ಎಡಪಂಥೀಯ ವಿರೋಧವನ್ನು ಹತ್ತಿಕ್ಕಲು ಬಳಸಿದ ಆಪರೇಶನ್ ಕೋಂಡೋರ್ಗೆ ಯು.ಎಸ್ನ ಬೆಂಬಲವಿದ್ದುದಲ್ಲದೆ, ಈ ವಿರೋಧಕ್ಕೆ ಸೊವಿಯೆತ್ ಅಥವಾ ಕ್ಯೂಬನ್ ಬೆಂಬಲವಿದೆ ಎಂದು(ಕೆಲವೊಮ್ಮೆ ಸರಿಯಾಗಿ) ಸಂಶಯಿಸಲಾಗುತ್ತಿತ್ತು.[164] ಇದೇ ವೇಳೆಗೆ ಬ್ರೆಝ್ನೇವ್ ದುಬಾರಿ ಮಿಲಿಟರಿ ವೆಚ್ಚಗಳಿಂದಾಗಿ ಹದಗೆಟ್ಟುಹೋಗಿದ್ದ ಸೋವಿಯೆತ್ ಅರ್ಥವ್ಯವಸ್ಥೆಯನ್ನು ನವೀಕರಿಸಲು ಪ್ರಯತ್ನ ಮಾಡತೊಡಗಿದರು.[20]
ಇದಲ್ಲದೆ, ಮಧ್ಯಪೂರ್ವವೂ ಕೂಡ ವಿವಾದದ ಕೇಂದ್ರವಾಗಿಯೇ ಮುಂದುವರಿದಿತ್ತು. ಯು.ಎಸ್.ಎಸ್.ಆರ್ನಿಂದ ಹೆಚ್ಚಿನ ಶಸ್ತ್ರಾಸ್ತ್ರಗಳು ಮತ್ತು ಆರ್ಥಿಕ ನೆರವು ಪಡೆಯುತ್ತಿದ್ದ ಈಜಿಪ್ಟ್ ಬಹಳ ತ್ರಾಸದಾಯಕ ಗ್ರಾಹಕನಾಗಿದ್ದು, ಆಗಾಗ್ಗೆ ಸೋವಿಯೆತ್ ಮನಸ್ಸಿಲ್ಲದ ಮನಸ್ಸಿನಿಂದ USನ ಮಿತ್ರರಾಷ್ಟ್ರವಾಗಿದ್ದ ಇಸ್ರೇಲ್ ವಿರುದ್ಧದ 1967ರ ಆರು ದಿನಗಳ ಯುದ್ದ (ಸಲಹೆಗಾರರು ಮತ್ತು ತಂತ್ರಜ್ಞರೊಡನೆ) ಮತ್ತುವಾರ್ ಆಫ್ ಅಟ್ರಿಶನ್ಗಳ ಸಮಯದಲ್ಲಿ (ವಿಮಾನಗಳು ಮತ್ತು ಪೈಲಟ್ಗಳೊಂದಿಗೆ)ನೆರವು ನೀಡಬೇಕಾಯುತು;[165] ಅನಂತರ ಸಿರಿಯಾ ಮತ್ತು ಇರಾಕ್ಗಳಿಗೂ ಹೆಚ್ಚಿನ ಸಹಾಯ ಮತ್ತು (ಪರೋಕ್ಷವಾಗಿ) PLO ಕೂಡ ದೊರಕಿದವು.[166]
1973ರ ಯಾಮ್ ಕಿಪ್ಪುರ್ ಯುದ್ಧದ ವೇಳೆಯಲ್ಲಿ ಈಜಿಪ್ಷಿಯನ್ನರ ಕಡೆಯಿಂದ ಯು.ಎಸ್ನ ಬೃಹತ್ ಯುದ್ಧಸನ್ನದ್ಧತೆಯೊಂದರ ವಿರುದ್ಧವಾಗಿ ಸೋವಿಯೆತ್ ಪ್ರವೇಶಿಸುವುದೆಂಬ ಊಹಾಪೋಹಗಳು ಉಪಶಮನದ ಪ್ರಕ್ರಿಯೆಗೆ ಬೆದರಿಕೆಯನ್ನೊಡ್ಡಿದವು;[167] ಇದು ಯು.ಎಸ್. ಹಿತಾಸಕ್ತಿಯ ಕೇಂದ್ರವೊಂದರೊಡನೆ ಯು.ಎಸ್.ಎಸ್.ಆರ್ನ ಮೊದಲ ಪ್ರಾದೇಶಿಕ ಘರ್ಷಣೆಯಾಗಿತ್ತು ಹಾಗೂ ಈ ರೀತಿಯಾಗಿ ಆರಂಭವಾದ ತೃತೀಯ ವಿಶ್ವದ ಹೊಸ, ಹಿಂಸಾತ್ಮಕ ಮಿಲಿಟರಿ ಸಕ್ರಿಯತೆಯ ಘಟ್ಟದಲ್ಲಿ ಸೋವಿಯೆತ್ ತನ್ನ ಹೊಸ ರಣನೀತಿಯ ಸಮಾನತೆಯನ್ನು ಪ್ರಯೋಗಿಸಿತು.[168]
ಸೈನೋ-ಸೋವಿಯೆತ್ ಒಡಕು ಚೀನೀ-ಸೋವಿಯೆತ್ ಗಡಿಸೀಮೆಯಲ್ಲಿ ಉಂಟುಮಾಡಿದ ಉದ್ವಿಗ್ನತೆಯು 1969ರಲ್ಲಿ ತನ್ನ ಉತ್ತುಂಗವನ್ನು ತಲುಪಿತು ಹಾಗೂ ಯು.ಎಸ್ ಅಧ್ಯಕ್ಷ ರಿಚರ್ಡ್ ನಿಕ್ಸನ್ ಶೀತಲ ಸಮರದ ಅಧಿಕರಣದ ಸಮತೋಲನವನ್ನು ಪಶ್ಚಿಮದೆಡೆಗೆ ವಾಲಿಸಲು ಈ ಬಿಕ್ಕಟ್ಟನ್ನು ಬಳಸಿಕೊಳ್ಳಲು ನಿಶ್ಚಯಿಸಿದನು.[169] ಸೋವಿಯೆತ್ ಮೇಲೆ ಪ್ರಾಬಲ್ಯ ಸಾಧಿಸಲು ಚೀನೀಯರು ಯು.ಎಸ್ನ ಜತೆಗಿನ ತಮ್ಮ ಸಂಬಂಧಗಳನ್ನು ಉತ್ತಮಪಡಿಸಿಕೊಳ್ಳಲು ಪ್ರಯತ್ನಿಸತೊಡಗಿದರು.
1972ರ ಫೆಬ್ರುವರಿಯಲ್ಲಿ, ನಿಕ್ಸನ್ ಬೀಜಿಂಗ್ಗೆ ತೆರಳಿ ಮಾವೋ ಜೆಡಾಂಗ್ ಮತ್ತು ಝೌ ಎನ್ಲೈ ರನ್ನು ಭೇಟಿಮಾಡಿ ಮಾವೋನ ಚೀನಾ[170] ದ ಜತೆ ಆಶ್ಚರ್ಯಕರ ಮರುಮೈತ್ರಿಯನ್ನು ಘೋಷಿಸಿದನು. ಇದೇ ಸಮಯದಲ್ಲಿ ಸೋವಿಯೆತ್ ಒಕ್ಕೂಟವು ಪರಮಾಣು ತಂತ್ರಜ್ಞಾನದಲ್ಲಿ ಹೆಚ್ಚೂಕಡಿಮೆ ಯು.ಎಸ್ನ ಜತೆ ಸಮಾನ ಪದವಿಯನ್ನು ಸಾಧಿಸಿತು ಆದರೆ ವಿಯೆಟ್ನಾಮ್ ಯುದ್ಧವು ತೃತೀಯ ರಾಷ್ಟ್ರಗಳಲ್ಲಿ ಯು.ಎಸ್ನ ಪ್ರಭಾವ ಕ್ಷೀಣಿಸುವಂತೆ ಮತ್ತು ಪಶ್ಚಿಮ ಯುರೋಪಿನೊಡನೊಂದಿಗಿನ ಸಂಬಂಧಗಳು ತಣ್ಣಗಾಗುವಂತೆ ಮಾಡಿತು).[171] ಶೀತಲ ಸಮರದ ಪ್ರಮುಖ ಶಕ್ತಿಗಳ ನಡುವಣ ಪರೋಕ್ಷರೂಪದ ಸಂಘರ್ಷಗಳು 1960ರ ದಶಕದ ಕೊನೆಯ ಹಾಗೂ 1970ರ ದಶಕದ ಆರಂಭದವರೆಗೂ ಮುಂದುವರೆದರೂ, ಉದ್ವಿಗ್ನತೆಗಳು ಕಡಿಮೆಯಾಗತೊಡಗಿದವು.[117]
ತನ್ನ ಚೀನಾ ಭೇಟಿಯ ನಂತರ ನಿಕ್ಸನ್ ಮಾಸ್ಕೋದಲ್ಲಿ ಬ್ರೆಝ್ನೇವ್ರನ್ನೊಳಗೊಂದಂತೆ ಹಲವಾರು ಸೋವಿಯೆತ್ ನಾಯಕರನ್ನು ಭೇಟಿಮಾಡಿದರು.[172] ಈ Strategic Arms Limitation Talks ನಿಂದಾಗಿ ಎರಡು ಪ್ರಮುಖ ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದಗಳು: ಎರಡೂ ಮಹಾಶಕ್ತಿಗಳೂ ಸಹಿಹಾಕಿದ ಪ್ರಥಮ ಕ್ರೋಢೀಕೃತ ಶಸ್ತ್ರಾಸ್ತ್ರ ಕರಾರಾದ SALT I,[173] ಮತ್ತು ಪರವೇಶಿಸುವ ಮಿಸೈಲುಗಳನ್ನು ಹೊಡೆದುರುಳಿಸುವ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ತಡೆಯುವ Anti-Ballistic Missile Treaty. ಇವು ದುಬಾರಿಯಾದ ಕ್ಷಿಪಣಿ-ವಿರೋಧೀ ಮಿಸೈಲುಗಳು ಮತ್ತು ಪರಮಾಣು ಮಿಸೈಲುಗಳ ಅಭಿವೃದ್ಧಿಯನ್ನು ತಡೆಗಟ್ಟುವ ಉದ್ದೇಶ ಹೊಂದಿದ್ದವು.[79]
ನಿಕ್ಸನ್ ಮತ್ತು ಬ್ರೆಝ್ನೇವ್ "ಶಾಂತಿಯುತ ಸಹಬಾಳ್ವೆ"ಯ ನೂತನ ಯುಗದ ಆರಂಭದ ಘೋಷಣೆಯನ್ನು ಮಾಡಿ ಎರಡೂ ಮಹಾಶಕ್ತಿಗಳ ನಡುವೆ détente (ಉಪಶಮನ ಅಥವಾ ಸಹಕಾರ) ಎಂಬ ಹೊಸ ಬದಲಾವಣೆಯನ್ನುಂಟುಮಾಡುವ ನೀತಿಯನ್ನು ಸ್ಥಾಪಿಸಿದರು. 1972 ಮತ್ತು 1974ರ ನಡುವೆ ಎರಡೂ ಬಣಗಳು ವಾಣಿಜ್ಯ ವ್ಯವಹಾರಗಳನ್ನೂ ಒಳಗೊಂಡಂತೆ ತಮ್ಮ ನಡುವಿನ ಆರ್ಥಿಕ ಸಂಬಂಧಗಳನ್ನು [20] ಬಲಪಡಿಸಬೇಕೆಂದು ನಿರ್ಧರಿಸಿದವು. ಈ ಭೇಟಿಗಳ ಫಲಸ್ವರೂಪವಾಗಿ ಶೀತಲಸಮರದ ವೈರುಧ್ಯಗಳ ಬದಲಾಗಿ ಸಹಕಾರ ವುಂಟಾಗಿ ಎರಡೂ ದೇಶಗಳು ಪರಸ್ಪರ ಸೌಹಾರ್ದತೆಯಿಂದ ಸಹಬಾಳ್ವೆ ನಡೆಸುವಂತೆ ಆಗುವುದಾಗಿತ್ತು.[172]
ಇದೇ ಸಮಯದಲ್ಲಿ ಪಶ್ಚಿಮ ಜರ್ಮನಿಯ ಚಾನ್ಸೆಲರ್ ವಿಲ್ಲೀ ಬ್ರಾಂಟ್ "Ostpolitik" ಅನ್ನು ಜಾರಿಗೆ ತಂದನು.[161] ಯುರೋಪಿನ ಸ್ಥಿತಿಯನ್ನು ಸ್ಥಾಯಿಗೊಳಿಸಲು ಮಾಡಲಾದ ಹಲವಾರು ಒಪ್ಪಂದಗಳು ಸೇರಿಕೊಂಡು, 1975ರಲ್ಲಿ Conference on Security and Co-operation in Europeನ ಸಮಯದಲ್ಲಿ ಹೆಲ್ಸಿಂಕಿ ಒಪ್ಪಂದದಲ್ಲಿ ಇತ್ಯರ್ಥವಾಯಿತು.[174]
1970ರ ಹೊತ್ತಿಗೆ ಯೂರಿ ಆಂದ್ರೋಪೋವ್ನ ನೇತೃತ್ವದಲ್ಲಿ KGBಯು ಸೋವಿಯೆತ್ ನಾಯಕತ್ವವನ್ನು ಕಟುವಾಗಿ ಟೀಕಿಸುತ್ತಿದ್ದ ಅಲೆಕ್ಸಾಂದ್ರ್ ಸೊಲ್ಝೆನಿತ್ಸಿನ್, ಆಂದ್ರೆಯ್ ಸಖಾರೋವ್ ಮುಂತಾದ ಹಲವಾರು ಪ್ರಮುಖ ಸೋವಿಯೆತ್ ಪೌರರಿಗೆ ಕಿರುಕುಳ ನೀಡಲಾರಂಭಿಸಿತು.[175] ಉಪಶಮನದ ಈ ಕಾಲಾವಧಿಯಲ್ಲಿ ಮಹಾಶಕ್ತಿಗಳ ನಡುವಿನ ಸಂಘರ್ಷಗಳು ಮೂರನೇ ವಿಶ್ವದಲ್ಲಿ ಮುಂದುವರಿದವು, ಉದಾಹರಣೆಗೆ ಮಿಡ್ಲ್ ಈಸ್ಟ್ ಬಿಕ್ಕಟ್ಟು, ಚಿಲಿ, ಇಥಿಯೋಪಿಯಾ ಮತ್ತು ಅಂಗೋಲಾ.[176]
ಅಧ್ಯಕ್ಷ ಜಿಮ್ಮಿ ಕಾರ್ಟರ್ 1979ರ SALT II ಒಪ್ಪಂದದ ಮೂಲಕ ಶಸ್ತ್ರಾಸ್ತ್ರ ಪೈಪೋಟಿಯನ್ನು ನಿಯಂತ್ರಿಸುವ ಯತ್ನವನ್ನು ಮಾಡಿದರೂ[177] ಆತನ ಪ್ರಯತ್ನಗಳು ಆ ವರ್ಷವೇ ನಡೆದ ಕೆಲವು ಘಟನೆಗಳಿಂದ ವಿಫಲಗೊಂಡವು. ಅವೆಂದರೆ, ಯು.ಎಸ್-ಪರ ಆಡಳಿತಗಳನ್ನು ವರ್ಜಿಸಿದ ಇರಾನಿಯನ್ ಕ್ರಾಂತಿ ಮತ್ತು ನಿಕರಾಗುವನ್ ಕ್ರಾಂತಿಗಳು ಹಾಗೂ, ಅಫ್ಘಾನಿಸ್ತಾನದಲ್ಲಿ ಸೋವಿಯೆತ್ ಮಧ್ಯಸ್ಥಿಕೆಗೆ ಆತನ ಪ್ರತೀಕಾರ.[20]
ಎರಡನೇ ಶೀತಲ ಸಮರ ಎಂಬುದನ್ನು ಕೆಲವು ಇತಿಹಾಸಜ್ಞರು ಶೀತಲ ಸಮರಗಳ ಬಿಕ್ಕಟ್ಟುಗಳು ಮತ್ತು ಸಂಘರ್ಷಗಳು ಮತ್ತೆ ಉಲ್ಬಣಗೊಂಡ 1970ರ ದಶಕದ ಕೊನೆ ಮತ್ತು 1980ರ ದಶಕದ ಆರಂಭದ ಕಾಲಾವಧಿಗೆ ನೀಡಿದ ಹೆಸರಾಗಿದೆ. ಎರಡೂ ಬಣಗಳು ತಮ್ಮ ಮಿಲಿಟರಿ ಶಕ್ತಿಗಳನ್ನು ಹೆಚ್ಚಿಸುತ್ತಿದ್ದ ಹಾಗೇ ಉದ್ವಿಗ್ನತೆಗಳೂ ಹೆಚ್ಚಿದವು.[14]
1979ರ ಡಿಸೆಂಬರಿನಲ್ಲಿ, ಅಂದಾಜು 75,000 ಸೋವಿಯೆತ್ ತುಕಡಿಗಳು ಅದೇ ಸೆಪ್ಟೆಂಬರಿನಲ್ಲಿ ತನ್ನ ಪಕ್ಷದ ಎದುರಾಳಿಯೊಬ್ಬನಿಂದ ಹತ್ಯೆಗೀಡಾಗಿದ್ದ ಮಾಜೀ ಪ್ರಧಾನಮಂತ್ರಿ ನೂರ್ ಮುಹಮ್ಮದ್ ತರಕಿ ಸ್ಥಾಪಿಸಿದ್ದ ಮಾರ್ಕ್ಸಿಸ್ಟ್ ಸರ್ಕಾರವನ್ನು ಬೆಂಬಲಿಸಲು ಅಫ್ಘಾನಿಸ್ತಾನದ ಮೇಲೆ ದಾಳಿಮಾಡಿದವು.[178] ಇದರ ಫಲಸ್ವರೂಪವಾಗಿ US ಅಧ್ಯಕ್ಷ ಜಿಮ್ಮಿ ಕಾರ್ಟರ್ ಸೆನೇಟ್ನಿಂದ SALT II ಒಪ್ಪಂದವನ್ನು ಹಿತೆಗೆದುಕೊಂಡು, USSRನ ಧಾನ್ಯ ಮತ್ತು ತಂತ್ರಜ್ಞಾನ ನೌಕಾಸರಕುಗಳ ಮೇಲೆ ಪ್ರತಿಬಂಧಕಗಳನ್ನು ವಿಧಿಸಿ, ಮಿಲಿಟರಿ ವೆಚ್ಚವನ್ನು ಏರಿಸಬೇಕೆಂದು ಆದೇಶಿಸಿದ್ದಲ್ಲದೆ, ಯುನೈಟೆಡ್ ಸ್ಟೇಟ್ಸ್ 1980ರ ಮಾಸ್ಕೋ ಬೇಸಿಗೆ ಒಲಿಂಪಿಕ್ಸ್ ಅನ್ನು ಬಹಿಷ್ಕರಿಸುವುದೆಂದು ಘೋಷಿಸಿದರು. ಅಫ್ಘಾನಿಸ್ತಾನದ ಸೋವಿಯೆತ್ ಮಧ್ಯಸ್ಥಿಕೆಯನ್ನು ಅವರು "ಎರಡನೇ ವಿಶ್ವಯುದ್ಧದ ನಂತರ ಶಾಂತಿಗೆ ಉಂಟಾದ ಅತಿ ದೊಡ್ಡ ಬೆದರಿಕೆ" ಎಂದು ಬಣ್ಣಿಸಿದರು.[179]
1980ರ ಯು.ಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಮಿಲಿಟರಿ ವೆಚ್ಚವನ್ನು ಹೆಚ್ಚಿಸಿ ಎಲ್ಲೆಡೆ ಸೋವಿಯೆತ್ ಅನ್ನು ಎದುರಿಸುವ ಭರವಸೆ ನೀಡಿದ ರೊನಾಲ್ಡ್ ರೇಗನ್ ಜಿಮ್ಮಿ ಕಾರ್ಟರ್ನನ್ನು ಸೋಲಿಸಿದರು.[180] ರಾಗನ್ ಮತ್ತು ನೂತನ ಬ್ರಿಟಿಶ್ ಪ್ರಧಾನಮಂತ್ರಿ ಮಾರ್ಗರೆಟ್ ಥ್ಯಾಚರ್- ಇಬ್ಬರೂ ಸೋವಿಯೆತ್ ಒಕ್ಕೂಟ ಹಾಗೂ ಸಿದ್ಧಾಂತಗಳನ್ನು ವಿರೋಧಿಸಿದರು. ರೇಗನ್ ಸೋವಿಯೆತ್ ಒಕ್ಕೂಟವನ್ನು ಒಂದು "ದುಷ್ಟ ಸಾಮ್ರಾಜ್ಯ"ವೆಂದು ಬಣ್ಣಿಸಿದ್ದಲ್ಲದೆ ಕಮ್ಯುನಿಸಮ್ "ಇತಿಹಾಸದ ಬೂದಿರಾಶಿ"ಯ ಮೇಲೆ ಮಾತ್ರ ಉಳಿದುಕೊಳ್ಳುವುದೆಂಬ ಭವಿಷ್ಯ ನುಡಿದನು.[181]
ಎರಡನೇ ಪೋಪ್ ಜಾನ್ ಪಾಲ್ ಅವರು 1979ರಲ್ಲಿ ತಮ್ಮ ತಾಯಿನಾಡಾದ ಪೋಲಂಡಿಗೆ ಭೇಟಿ ನೀಡಿದ್ದರಿಂದ ಉಂಟಾದ ಐಕ್ಯತಾ ಆಂದೋಲನವು ಧಾರ್ಮಿಕ ಮತ್ತು ರಾಷ್ಟ್ರೀಯತೆಯ ಮರುಹುಟ್ಟಿಗೆ ಕಾರಣವಾಗಿ ಎಲ್ಲ ವಿರೋಧವನ್ನು ಅಳಿಸಿಹಾಕಿ ಕಮ್ಯುನಿಸಮ್-ವಿರೋಧಕ್ಕೆ ನೈತಿಕ ಆಯಾಮವೊಂದನ್ನು ನೀಡಿದುದು ಎರಡು ವರುಷಗಳ ನಂತರ ಅವರ ಮೇಲಿನ ಹತ್ಯಾ ಪ್ರಯತ್ನಕ್ಕೆ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ.[182] ಐಕ್ಯಮತ್ಯದ ಮೇಲಿನ ದಬ್ಬಾಳಿಕೆಯ ವಿರುದ್ಧ ಪ್ರತಿಭಟಿಸುವ ಸಲುವಾಗಿ ರೇಗನ್ ಕೂಡ ಪೋಲಂಡಿನ ಮೇಲೆ ಆರ್ಥಿಕ ದಿಗ್ಬಂಧನಗಳನ್ನು ಹೇರಿದನು.[183] ಇದಕ್ಕೆ ಪ್ರತಿಯಾಗಿ ಕ್ರೆಮ್ಲಿನ್ನ ಪ್ರಮುಖ ತತ್ವಶಾಸ್ತ್ರಜ್ಞನಾಗಿದ್ದ ಮಿಖಾಯಿಲ್ ಸುಸ್ಲೋವ್ ಸೋವಿಯೆತ್ ನಾಯಕರಿಗೆ ಪೋಲಂಡ್ ಐಕ್ಯತೆಯನ್ನು ಬೆಂಬಲಿಸುವವರ ವಶವಾದರೆ ಆ ವಿಷಯವಾಗಿ ಅಡ್ಡಿಮಾಡಬಾರದೆಂದೂ, ಹಾಗಾದಲ್ಲಿ ಉಂಟಾಗಬಹುದಾದ ಆರ್ಥಿಕ ದಿಗ್ಬಂಧನಗಳ್ ಭಾರದಿಂದ ಸೋವಿಯೆತ್ ಅರ್ಥವ್ಯವಸ್ಥೆಯ ವಿನಾಶವಾಗಬಹುದೆಂದೂ ಸಲಹೆ ನೀಡಿದನು.[183]
ಮಾಸ್ಕೋ ಕಟ್ಟಿದ್ದ ಮಿಲಿಟರಿ ವ್ಯವಸ್ಥೆಯ ಮೇಲೆ ಸೋವಿಯೆತ್ ಒಕ್ಕೂಟದ ಒಟ್ಟು ರಾಷ್ಟ್ರೀಯ ಉತ್ಪಾದನೆಯ ಶೇಕಡಾ 25 ರಷ್ಟು ಭಾಗವನ್ನು ಗ್ರಾಹಕರ ಬಳಕೆಯ ವಸ್ತುಗಳ ಮತ್ತು ನಾಗರಿಕ ಕ್ಷೇತ್ರಗಳಲ್ಲಿ ಹೂಡಿಕೆಯ ಖರ್ಚುಗಳ ಬದಲಾಗಿ ವಿನಿಯೋಗಿಸಲಾಗುತ್ತಿತ್ತು.[184] ಸೋವಿಯೆತ್ ಶಸ್ತ್ರಾಸ್ತ್ರ ಪೈಪೋಟಿ ಮತ್ತು ಇತರೆ ಶೀತಲ ಸಮರದ ಬದ್ಧತೆಗಳ ಮೇಲೆ ಹಣ ವಿನಿಯೋಗಿಸುತ್ತಿದ್ದುದು ಸೋವಿಯೆತ್ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟುಮಾಡಿದ್ದು ಬ್ರೆಝ್ನೇವ್ನ ಅಧಿಕಾರಾವಧಿಯ ಕೊನೆಯಲ್ಲಿ ಸೋವಿಯೆತ್ ಕಡಿಮೆಯೆಂದರೂ ಒಂದು ದಶಕದಷ್ಟು ಆರ್ಥಿಕ ಜಡತೆಯನ್ನು ಎದುರಿಸಬೇಕಾಯಿತು.
ಭದ್ರತಾ ವಿಭಾಗದ ಮೇಲಿನ ಸೋವಿಯೆತ್ ಹೂಡಿಕೆಯು ಮಿಲಿಟರಿ ಅವಶ್ಯಕತೆಯಾಗಿರಲಿಲ್ಲವಾದರೂ ತಮ್ಮ ಅಧಿಕಾರ ಮತ್ತು ಸೌಲಭ್ಯಗಳಿಗಾಗಿ ಈ ವಿಭಾಗವನ್ನು ಅವಲಂಬಿಸಿದ್ದ ಬೃಹತ್ ಪಕ್ಷ ಮತ್ತು ಬೂರ್ಜ್ವಾಗಳ ಹಿತಾಸಕ್ತಿಗಳಿಗಳ ಅವಶ್ಯಕತೆಯಾಗಿದ್ದಿತು.[185] ಸೋವಿಯೆತ್ ಸಶಸ್ತ್ರ ಸೇನೆಗಳುತಮ್ಮ ಶಸ್ತ್ರಾಸ್ತ್ರಗಳ ಅಂಕಿಸಂಖ್ಯೆ, ವಿವಿಧ ರೀತಿ, ಹೊಂದಿರುವ ತುಕಡಿಗಳು ಮತ್ತು ಮಿಲಿಟರಿ-ಔದ್ಯಮಿಕ ತಳಹದಿಗಳಿಂದಾಗಿ ವಿಶ್ವದಲ್ಲೇ ಅತ್ಯಂತ ಬಲಶಾಲೀ ಸೇನೆಯ ಸ್ಥಾನ ಪಡೆದುಕೊಂಡವು.[186] ಆದರೆ ಸೋವಿಯೆತ್ ಮಿಲಿಟರಿಯ ಈ ರೀತಿಯ ಗಾತ್ರಕ್ಕೆ ಸಂಬಂಧಿಸಿದ ಉತ್ತಮ ಸ್ಥಿತಿಯು ಪಶ್ಚಿಮದೊಡನೆ ಈಸ್ಟರ್ನ್ ಬ್ಲಾಕ್ ಅನ್ನು ಹೋಲಿಸಿದಾಗ ಕಂಡುಬರುತ್ತಿದ್ದ ದೊಡ್ಡ ಕೊರತೆಗಳನ್ನು ಮರೆಮಾಚುತ್ತಿತ್ತು.[187]
ಯುಎಸ್.ಎಸ್ ಆರ್ 1980ರ ದಶಕದ ಆರಂಭದ ಹೊತ್ತಿಗೆ ಯುನೈಟೆಡ್ ಸ್ಟೇಟ್ಸ್ ಅನ್ನು ಮೀರಿಸುವ ಮಿಲಿಟರಿ ಶಸ್ತ್ರಾಗಾರ ಮತ್ತು ಸೇನೆಯನ್ನು ಕಟ್ಟಿಕೊಂಡಿತ್ತು. ಇದಕ್ಕೂ ಮೊದಲು US ತನ್ನ ಶಸ್ತ್ರಾಸ್ತ್ರಗಳ ಉನ್ನತದರ್ಜೆಯ ಗುಣಮಟ್ಟದ ಮೇಲೆ ಭರವಸೆಯಿಟ್ಟಿದ್ದು ಈಗ ಆ ಅಂತರವೂ ಕಿರಿದಾಗತೊಡಗಿತು.[188] ರೊನಾಲ್ಡ್ ರೇಗನ್ ತನ್ನ ಸ್ಥಾನವನ್ನಲಂಕರಿಸಿದ ಕೂಡಲೇ ಯುನೈಟೆಡ್ ಸ್ಟೇಟ್ಸ್ನ ಮಿಲಿಟರಿ ಶಕ್ತಿಯ ಬಲವರ್ಧನೆಯಲ್ಲಿ ತೊಡಗಿದರು. ಇದು ಯುನೈಟೆಡ್ ಸ್ಟೇಟ್ಸ್ನ ಇತಿಹಾಸದಲ್ಲಿಯೇ ಕಂಡುಕೇಳಿರದಂತಹ ಶಾಂತಿಕಾಲದ ಬೃಹತ್ ಭದ್ರತಾವ್ಯವಸ್ಥೆಯ ನಿರ್ಮಾಣಕ್ಕೆ ಕಾರಣವಾಯಿತು.[189]
1980ರ ದಶಕದ ಆರಂಭದಲ್ಲಿ ಕಾರ್ಟರ್ ಆಡಳಿತವು ನಿಲುಗಡೆ ಮಾಡಿದ್ದ B-1 Lancer ಕಾರ್ಯಕ್ರಮಕ್ಕೆ ಮರುಚಾಲನೆ ನೀಡಿದ ರೇಗನ್, LGM-118 Peacekeeperಗಳ ಉತ್ಪಾದನೆಯನ್ನು ಆರಂಭಿಸಿ[190] US ಕ್ರೂಸ್ ಮಿಸೈಲುಗಳನ್ನು ಯುರೋಪಿನಲ್ಲಿ ಸ್ಥಾಪಿಸಿ, ಮಾಧ್ಯಮವು ’ಸ್ಟಾರ್ವಾರ್ಸ್’ ಎಂದು ಹೆಸರಿಟ್ಟ, ಮಿಸೈಲುಗಳನ್ನು ಪಯಣದ ನಡುಮಧ್ಯೆಯೇ ಹೊಡೆದುರುಳಿಸುವ ಪ್ರಾಯೋಗಿಕ ಭದ್ರತಾ ಕಾರ್ಯಕ್ರಮವಾದ Strategic Defence Initiative ಅನ್ನು ಆರಂಭಿಸಿದ್ದು ಪ್ರಕ್ಷುಬ್ದತೆ ಹೆಚ್ಚಲು ಕಾರಣವಾಯಿತು.[191]
ಸೋವಿಯೆತ್ ಒಕ್ಕೂಟ ಮತ್ತು ಯುನೈಟೆಡ್ ಸ್ಟೇಟ್ಸ್ನ ನಡುವೆ ಹೆಚ್ಚಿದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಸೋವಿಯೆತ್ RSD-10 Pioneer ಎಂಬ ಹೆಸರಿನ ಪಶ್ಚಿಮ ಯುರೋಪನ್ನು ಗುರಿಯಾಗಿಸಿಕೊಂಡ ಕ್ಷಿಪಣಿಯುಕ್ತ ಮಿಸೈಲ್ಗಳನ್ನು ಎಲ್ಲೆಡೆ ಸ್ಥಾಪಿಸತೊಡಗಿದಾಗ, ಕಾರ್ಟರ್ನ ಅಧ್ಯಕ್ಷತೆಯ ಪ್ರಭಾವದಡಿಯಲ್ಲಿ NATO ಕೂಡ MGM-31 Pershing ಎಂಬ ಕ್ರೂಸ್ ಮಿಸೈಲುಗಳನ್ನು ಯುರೋಪಿನಲ್ಲಿ, ಅದರಲ್ಲೂ ಪಶ್ಚಿಮ ಜರ್ಮನಿಯಲ್ಲಿ ಸ್ಥಾಪಿಸುವ ನಿರ್ಧಾರವನ್ನು ಕೈಗೊಂಡಿತು.[192] ಈ ಸ್ಥಾಪನೆಗಳು ಕಾರ್ಯಗತವಾದಲ್ಲಿ ಮಾಸ್ಕೋದಿಂದ ಕೇವಲ ಹತ್ತು ನಿಮಿಷಗಳಷ್ಟು ದಾಳಿಯ ಅಂತರದಲ್ಲಿ ಮಿಸೈಲುಗಳನ್ನು ಸ್ಥಾಪಿಸಬೇಕಾಗಿತ್ತು.[193]
ರೇಗನ್ರ ಮಿಲಿಟರಿ ಬಲವರ್ಧನೆಗೆ ಪ್ರತಿಯಾಗಿ ಸೋವಿಯೆತ್ ತನ್ನ ಮಿಲಿಟರಿ ಬಲವನ್ನು ಮತ್ತೂ ಹೆಚ್ಚಿಸುವ ಪ್ರಯತ್ನವನ್ನೇನೂ ಮಾಡಲಿಲ್ಲ[194]; ಏಕೆಂದರೆ ಅದರ ಅಪರಿಮಿತ ಭದ್ರತಾ ವೆಚ್ಚಗಳು ಮತ್ತು ಅಸಮರ್ಥ ಯೋಜಿತ ಉತ್ಪಾದನೆ ಹಾಗೂಕ್ರೋಢೀಕೃತ ಬೇಸಾಯಪದ್ಧತಿಗಳು ಆಗಲೇ ಸೋವಿಯೆತ್ ಅರ್ಥವ್ಯವಸ್ಥೆಗೆ ಭಾರೀ ತ್ರಾಸವನ್ನುಂಟುಮಾಡಿದ್ದವು.[195] ಇದೇ ಸಮಯಕ್ಕೆ ಸರಿಯಾಗಿ ಇತರ non-OPEC ರಾಷ್ಟ್ರಗಳು ಉತ್ಪಾದನೆಯನ್ನು ಹೆಚ್ಚಿಸುತ್ತಿರುವಂತೆಯೇ ರೇಗನ್ ಸೌದಿ ಅರೇಬಿಯಾವನ್ನು ಹೆಚ್ಚು ತೈಲ ಉತ್ಪಾದನೆ ಮಾಡುವಂತೆ ಓಲೈಸಿದರು.[196][197] ಈ ರೀತಿಯ ಬೆಳವಣಿಗೆಗಳು 1980ರ ದಶಕದ ತೈಲ ಹೆಚ್ಚಳವುಂಟಾಗಲು ಸಹಕಾರಿಯಾಗಿ, ಸೋವಿಯೆತ್ ಅನ್ನು ತೊಂದರೆಗೀಡುಮಾಡಿತು, ಏಕೆಂದರೆ ತೈಲವು ಸೋವಿಯೆತ್ನ ರಫ್ತು ಆದಾಯದ ಪ್ರಮುಖ ಮೂಲವಾಗಿತ್ತು.[184][195] ಆದೇಶ ಅರ್ಥವ್ಯವಸ್ಥೆಯೊಂದಿಗಿನ ತೊಡಕುಗಳಿಂದಾಗಿ[198] ತೈಲ ಬೆಲೆಗಳು ಕುಸಿದುಹೋಗಿ, ದೈತ್ಯ ಮಿಲಿಟರಿ ವೆಚ್ಚಗಳಿಂದಾಗಿ ಸೋವಿಯೆತ್ ಅರ್ಥವ್ಯವಸ್ಥೆಯು ಜಡತೆಯ ಸ್ಥಿತಿಯನ್ನು ತಲುಪುವಂತಾಯಿತು.[195]
1983 ಸೆಪ್ಟೆಂಬರ್ 1ರಂದು ಸೋವಿಯೆತ್ ಒಕ್ಕೂಟವು ಕಾಂಗ್ರೆಸ್ಮನ್ ಲ್ಯಾರಿ ಮ್ಯಾಕ್ಡೊನಾಲ್ಡ್ರನ್ನೊಳಗೊಂಡಂತೆ 269 ಜನರು ಪ್ರಯಾಣಿಸುತ್ತಿದ್ದ ಬೋಯಿಂಗ್ 747 ವಿಮಾನವಾಗಿದ್ದ ಕೊರಿಯನ್ ಏರ್ಲೈನ್ಸ್ನ ಫ್ಲೈಟ್ 007 ಸಖಾಲಿನ್ ದ್ವೀಪದ ಪಶ್ಚಿಮ ಕರಾವಳಿಯ ಅಂಚಿನಲ್ಲಿ ಸೋವಿಯೆತ್ ವಾಯುಸೀಮೆಯನ್ನು ಕೊಂಚವೇ ಮೀರಿದಾಗ ಹೊಡೆದುರುಳಿಸಿ—ಈ ಘಟನೆಯನ್ನು ರೇಗನ್ "ಮಾರಣಹೋಮ"ವೆಂದು ಬಣ್ಣಿಸಿದರು. ಈ ಘಟನೆಯಿಂದಾಗಿ ಮಿಲಿಟರಿಯ ಹರಡುವಿಕೆಗೆ ಬೆಂಬಲ ದೊರೆತು, ಅದನ್ನು ರೇಗನ್ ಮೇಲ್ವಿಚಾರಣೆಯಲ್ಲಿ ನಡೆಸಲಾಯಿತು ಮತ್ತು ಮುಂದಿನ ದಿನಗಳಲ್ಲಿ ರೇಗನ್ ಮತ್ತು ಮಿಖಾಯಿಲ್ ಗೋರ್ಬಚೇವ್ ನಡುವೆ ಸಾಮರಸ್ಯದ ಮಾತುಕತೆಗಳು ನಡೆಯುವವರೆಗೂ ಈ ವ್ಯವಸ್ಥೆ ಹಾಗೆಯೇ ಇದ್ದಿತು.[199] ನವೆಂಬರ್ 1983ರ ನೈಜರೀತಿಯ NATO ಪರಮಾಣು ಬಿಡುಗಡೆಯ ಕೃತಕ ಸಂಯೋಜನೆಯನ್ನುಳ್ಳ ಏಬಲ್ ಆರ್ಚರ್ 83 ಅಭ್ಯಾಸಗಳನ್ನು ಕ್ಯೂಬನ್ ಮಿಸೈಲ್ ಬಿಕ್ಕಟ್ಟಿನ ನಂತರದ ಅತ್ಯಂತ ಆತಂಕಕಾರೀ ಘಳಿಗೆಯೆಂದು ಕರೆಯಲಾಗಿದೆ; ಏಕೆಂದರೆ ಅದರ ಮೇಲೆ ಕಣ್ಣಿಟ್ಟಿದ್ದ ಸೋವಿಯೆತ್ ನಾಯಕರು ಇನ್ನುಮೇಲೆ ಪರಮಾಣು ದಾಳಿಯಾಗುವುದು ಖಚಿತವೆಂದು ಭಾವಿಸಿದರು.[200]
ವಿಯೆಟ್ನಾಮ್ ಯುದ್ಧದ ಕೊನೆಯಾದಂದಿನಿಂದ ವಿದೇಶೀ ಬಿಕ್ಕಟ್ಟುಗಳಲ್ಲಿ ತಲೆತೂರಿಸುವ ಬಗ್ಗೆ ಯು.ಎಸ್ನ ಸಾಮಾನ್ಯ ಜನತೆಯಲ್ಲಿ ಬಹಳಷ್ಟು ಅಶಂಕೆಗಳು ಮೂಡಲಾರಂಭಿಸಿದ್ದವು.[201] ರೇಗನ್ ಆಡಳಿತವು ವಿದೇಶೀ ಬಿಕ್ಕಟ್ಟುಗಳನ್ನು ಪರಿಹರಿಸುವುದಕ್ಕಾಗಿ ತೀವ್ರಗತಿಯ ಕಡಿಮೆ ವೆಚ್ಚದ ದಂಗೆ ನಿರೋಧಕ ಕಾರ್ಯಾಚರಣೆಗಳ ಬಳಕೆಯನ್ನು ಸಮರ್ಥಿಸಿತು.[201] 1983ರಲ್ಲಿ ರೇಗನ್ ಆಡಳಿತವು ಬಹುಪಕ್ಷೀಯ ಲೆಬನೀಸ್ ಅಂತರ್ಯುದ್ಧದ ನಡುವೆ ಪ್ರವೇಶಿಸಿ, ಗ್ರೆನಾಡಾ ಮೇಲೆ ಆಕ್ರಮಣ ಮಾಡಿ, ಲಿಬಿಯಾ ಮೇಲೆ ಬಾಂಬ್ ದಾಳಿ ನಡೆಸಿ, ಮಧ್ಯ ಅಮೆರಿಕದ ಕಾಂಟ್ರಾಸ್ ಎಂಬ ಕಮ್ಯುನಿಸ್ಟ್-ವಿರೋಧಿ ಪ್ಯಾರಾಮಿಲಿಟರಿ ಶಕ್ತಿಗಳಿಗೆ ನಿಕರಾಗುವಾದ ಸೋವಿಯೆತ್ ಒಲವುಳ್ಳ ಸ್ಯಾಂಡಿನಿಸ್ತಾ ಸರ್ಕಾರವನ್ನು ಉರುಳಿಸಲು ಬೆಂಬಲ ನೀಡಿತು.[105] ರೇಗನ್ರ ಗ್ರೆನಾಡಾ ಮತ್ತು ಲಿಬಿಯಾದ ವಿರುದ್ಧದ ಕಾರ್ಯಾಚರಣೆಗಳು ಯು.ಎಸ್ನಲ್ಲಿ ಜನಪ್ರಿಯವಾದವಾದರೂ ಆತ ಕಾಂಟ್ರಾ ದಂಗೆಕೋರರನ್ನು ಬೆಂಬಲಿಸಿದ್ದು ಅತ್ಯಂತ ವಿವಾದಾಸ್ಪದ ವಿಷಯವಾಯಿತು.[202]
ಇದೇ ವೇಳೆಗೆ ಸೋವಿಯೆತ್ ತನ್ನ ವಿದೇಶೀ ಮಧ್ಯಸ್ಥಿಕೆಗಳಿಗಾಗಿ ದುಬಾರಿ ವೆಚ್ಚಗಳನ್ನು ತೆರಬೇಕಾಯಿತು. 1979ರಲ್ಲಿ ಬ್ರೆಝ್ನೇವ್ ಅಫ್ಘಾನಿಸ್ತಾನದ ಸೋವಿಯೆತ್ ಯುದ್ಧವು ಬಹಳ ಕಡಿಮೆ ಅವಧಿಯದ್ದಾಗಿರುವುದೆಂದು ನಂಬಿದ್ದರೂ ಯು.ಎಸ್ ಮತ್ತು ಇತರ ದೇಶಗಳ ನೆರವು ಪಡೆದ ಮುಸ್ಲಿಮ್ ಗೆರಿಲ್ಲಾಗಳು, ಈ ಆಕ್ರಮಣದ ವಿರುದ್ಧ ಉಗ್ರವಾದ ಪ್ರತೊರೋಧವನ್ನು ಒಡ್ಡಿದರು.[203] ಕ್ರೆಮ್ಲಿನ್ ಅಫ್ಘಾನಿಸ್ತಾನದಲ್ಲಿ ತನ್ನ ಕೈಗೊಂಬೆಯಾಗಿದ್ದ ಆಡಳಿತವನ್ನು ಬೆಂಬಲಿಸುವ ಸಲುವಾಗಿ ಸುಮಾರು 100,000 ತುಕಡಿಗಳನ್ನು ಕಳಿಸಿದಾಗ ಹಲವಾರು ಹೊರಗಿನ ನಿರೀಕ್ಷಕರು ಈ ಯುದ್ಧವನ್ನು "ಸೋವಿಯೆತ್ನ ವಿಯೆಟ್ನಾಮ್" ಎಂದು ಕರೆದರು.[203] ಆದರೆ ಆಫ್ಘಾನಿಸ್ತಾನದಲ್ಲಿನ ಮಾಸ್ಕೋನ ದುರವಸ್ಥೆಯು ಅಮೆರಿಕನ್ನರ ವಿಯೆಟ್ನಾಮ್ ಅನುಭವಕ್ಕಿಂತ ಹೆಚ್ಚು ದುರ್ಭರವಾಗಿತ್ತು, ಏಕೆಂದರೆ ಈ ಸಂಘರ್ಷದ ಕಾಲಾವಧಿಯು ಸೋವಿಯೆತ್ ವ್ಯವಸ್ಥೆಯ ಆಂತರಿಕ ಶೈಥಿಲ್ಯ ಮತ್ತು ಸ್ವದೇಶೀ ಬಿಕ್ಕಟ್ಟಿನ ಸಮಯದ ಜತೆ ಕಾಕತಾಳೀಯವಾಗಿ ಸೇರಿಕೊಂಡಿತು.
US ಸ್ಟೇಟ್ ಡಿಪಾರ್ಟ್ಮೆಂಟ್ನ ಹಿರಿಯ ಅಧಿಕಾರಿಯೊಬ್ಬ 1980ರಷ್ಟು ಹಿಂದೆಯೇ ಈ ಪರಿಣಾಮದ ಬಗ್ಗೆ ಭವಿಷ್ಯನುಡಿದಿದ್ದು, ಈ ಆಕ್ರಮಣವು "ಸೋವಿಯೆತ್ನೊಳಗಿನ ಆಂತರಿಕ ಬಿಕ್ಕಟ್ಟಿನ ಫಲವಾಗಿದೆsystem. ... It, ಬಹುಶಃ ಸೋವಿಯೆತ್ ವ್ಯವಸ್ಥೆಯು thermodynamic law of entropyhas ... caughtಯ ಪ್ರಕಾರ ನಡೆಯುತ್ತಿರಬೇಕು, ಈಗ ಆ ವ್ಯವಸ್ಥೆಯು ತನ್ನನ್ನು ಪರಿಷ್ಕರಿಸಿಕೊಳ್ಳುವ ಬದಲಾಗಿ ಬರೇ ತನ್ನ ಸಮತೋಲನವನ್ನು ಕಾಪಾಡಿಕೊಳ್ಳುವುದಕ್ಕಾಗಿ ತನ್ನೆಲ್ಲಾ ಸಾಮರ್ಥ್ಯವನ್ನೂ ವ್ಯಯಿಸುತ್ತಿದೆ. ಬಹುಶಃ ನಾವು ಆಂತರಿಕ ಶೈಥಿಲ್ಯದ ಸಮಯದಲ್ಲಿಯೇ ವಿದೇಶೀ ಸಂಚಲನೆಯನ್ನೂ ಕಾಣಬಹುದು" ಎಂದು ಹೇಳಿದ್ದನು.[204][205] ಇದರ ಜತೆಗೇ ಸೋವಿಯೆತ್ನ ಮುಪ್ಪಡರಿದ ಮತ್ತು ರೋಗಿಷ್ಟ ನಾಯಕತ್ವದಿಂದ ಯಾವುದೇ ಪ್ರಯೋಜನ ಕಾಣಬರುತ್ತಿರಲಿಲ್ಲ: ಬ್ರೆಝ್ನೇವ್ ತನ್ನ ಕೊನೆಯ ವರ್ಷಗಳಲ್ಲಿ ದೈಹಿಕವಾಗಿ ಬಹಳ ಅಸಮರ್ಥನಾಗಿದ್ದು ಆತನ ನಂತರ ಅಧಿಕಾರಕ್ಕೆ ಬಂದ ಆಂದ್ರೋಪೋವ್ ಮತ್ತು ಚೆರ್ನೆಂಕೋ ಕೂಡ ಬಹಳ ಕಾಲದವರೆಗೆ ಉಳಿಯಲಿಲ್ಲ. ಚೆರ್ನೆಂಕೋನ ನಿಧನದ ನಂತರ ರೇಗನ್ರನ್ನು ಆತ ಸೋವಿಯೆತ್ ನಾಯಕರೊಂದಿಗೆ ಏಕೆ ಸಂಧಾನ ಮಾಡಿಕೊಳ್ಳಲಿಲ್ಲವೆಂದು ಪ್ರಶ್ನಿಸಲಾಯಿತು. ರೇಗನ್, "ಅವರು ನನ್ನೆದುರಿಗೆ ಸಾಯುತ್ತಲೇ ಇರುತ್ತಾರೆ" ಎಂದು ಚಟಾಕಿ ಹಾರಿಸಿದರು.[206]
ಇತರರಿಗೆ ಹೋಲಿಸಿದಲ್ಲಿ ಹೆಚ್ಚು ಉತ್ಸಾಹಿಯಾಗಿದ್ದ ಮಿಖಾಯಿಲ್ ಗೋರ್ಬಚೇವ್ 1985ರಲ್ಲಿ ಜನರಲ್ ಸೆಕ್ರೆಟರಿಯಾಗುವ ವೇಳೆಗೆ,[181] ಸೋವಿಯೆತ್ನ ಆರ್ಥಿಕ ಪರಿಸ್ಥಿತಿಯು ಜಡವಾಗಿಹೋಗಿತ್ತು ಹಾಗೂ 1980ರ ದಶಕದ ತೈಲ ಬೆಲೆಗಳ ಕುಸಿತದ ಕಾರಣ ವಿದೇಶೀ ಹಣಕಾಸು ಗಳಿಕೆಗಳಲ್ಲಿ ವಿಪರೀತ ಇಳಿಕೆಯುಂಟಾಯಿತು.[207] ಈ ಮುಗ್ಗಟ್ಟುಗಳಿಂದಾಗಿ ಗೋರ್ಬಚೇವ್ ದೇಶದ ತೊಂದರೆಗಳಿಗೆ ಪರಿಹಾರಗಳನ್ನು ಹುಡುಕುವ ಕಾರ್ಯದಲ್ಲಿ ತೊಡಗಿದರು.[207]
ಆರಂಭದ ನಿಷ್ಫಲತೆಯಿಂದಾಗಿ ವ್ಯವಸ್ಥೆಯ ರಚನಾಕ್ರಮದಲ್ಲಿ ಆಳವಾದ ಬದಲಾವಣೆಯ ಅವಶ್ಯಕತೆಯನ್ನು ಅರಿತ ಗೋರ್ಬಚೇವ್ 1987ರ ಜೂನ್ನಲ್ಲಿ ಪೆರೆಸ್ತ್ರೊಯಿಕಾ (ಪುನರ್ನಿರ್ಮಾಣ) ಎಂದು ಕರೆಯಲಾದ ಆರ್ಥಿಕ ಸುಧಾರಣೆಯನ್ನು ಜಾರಿಗೆ ತರುವ ಘೋಷಣೆಯನ್ನು ಮಾಡಿದರು.[208] ಪೆರೆಸ್ತ್ರೊಯಿಕಾ ಉತ್ಪಾದನಾ ಪಾಲು ವ್ಯವಸ್ಥೆಯನ್ನು ಸಡಿಲಿಸಿ ಉದ್ಯಮಗಳ ಖಾಸಗೀ ಒಡೆತನಕ್ಕೆ ಅನುಮತಿ ನೀಡುವುದರ ಮೂಲಕ ವಿದೇಶೀ ಬಂಡವಾಳ ಹೂಡಿಕೆಗೆ ದಾರಿಮಾಡಿಕೊಟ್ಟಿತು. ಈ ಸುಧಾರಣೆಗಳು ದೇಶದ ಸಂಪನ್ಮೂಲಗಳನ್ನು ಶೀತಲ ಸಮರದ ಮಿಲಿಟರಿ ಬದ್ಧತೆಗಳ ವಿಪರೀತ ಖರ್ಚುವೆಚ್ಚಗಳೆಡೆಯಿಂದ ನಾಗರಿಕ ವಲಯದ ಹೆಚ್ಚು ಲಾಭದಾಯಕ ಕ್ಷೇತ್ರಗಳೆಡೆ ತಿರುಗಿಸುವ ಉದ್ದೇಶವನ್ನು ಹೊಂದಿದ್ದವು.[208]
ಮೊದಮೊದಲು ಪಾಶ್ಚಿಮಾತ್ಯ ವಲಯದಿಂದ ಈ ಬಗ್ಗೆ ಸಂದೇಹಗಳು ವ್ಯಕ್ತವಾದರೂ ಸೋವಿಯೆತ್ನ ಹೊಸ ನಾಯಕ ಪಶ್ಚಿಮದ ಜತೆಗೆ ಶಸ್ತ್ರಾಸ್ತ್ರ ಪೈಪೋಟಿಯನ್ನು ಮುಂದುವರಿಸುವುದರ ಬದಲಾಗಿ ಸೋವಿಯೆತ್ ಒಕ್ಕೂಟದ ಹದಗೆಡುತ್ತಿದ್ದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಬದ್ಧನಾಗಿರುವುದು ಕಂಡುಬರಲಾರಂಭಿಸಿತು.[117][209] ಇದರ ಜತೆಗೇ, ತನ್ನ ಸುಧಾರಣೆಗಳಿಗೆ ಪಕ್ಷದೊಳಗೆ ವ್ಯಕ್ತವಾಗಬಹುದಾದ ವಿರೋಧವನ್ನು ಮಟ್ಟಹಾಕಲು ಗೋರ್ಬಚೇವ್ ಗ್ಲಾಸ್ನಾಸ್ತ್ (ಮುಕ್ತತೆ) ಅನ್ನು ಜಾರಿಗೊಳಿಸಿದರು; ಇದು ಪ್ರೆಸ್ ಸ್ವಾತಂತ್ರ್ಯವನ್ನು ಹೆಚ್ಚಿಸಿದ್ದಲ್ಲದೆ ಸರ್ಕಾರೀ ಸಂಸ್ಥೆಗಳನ್ನು ಹೆಚ್ಚು ಪಾರದರ್ಶಕವನ್ನಾಗಿ ಮಾಡಿತು.[210] ಗ್ಲಾಸ್ನಾಸ್ತ್ ಕಮ್ಯುನಿಸ್ಟ್ ಪಕ್ಷದ ಮೇಲ್ಮಟ್ಟದ ಭ್ರಷ್ಟತೆಯನ್ನು ಕಡಿಮೆಮಾಡುವ ಮತ್ತು ಕೇಂದ್ರ ಸಮಿತಿಯ ಅಧಿಕಾರದ ದುರ್ಬಳಕೆಯನ್ನು ಮಿತಗೊಳಿಸುವ ಧ್ಯೇಯ ಹೊಂದಿತ್ತು.[211] ಗ್ಲಾಸ್ನಾಸ್ತ್ ಸೋವಿಯೆತ್ ಪ್ರಜೆಗಳು ಮತ್ತು ಪಾಶ್ಚಿಮಾತ್ಯ ವಿಶ್ವದ, ಅದರಲ್ಲೂ ಯುನೈಟೆಡ್ ಸ್ಟೇಟ್ಸ್ನ ನಡುವೆ ಸಂಪರ್ಕ ಹೆಚ್ಚುವಂತೆ ಮಾಡಿ ಎರಡೂ ದೇಶಗಳ ನಡುವಿನ ಉಪಶಮನವು ತ್ವರಿತಗತಿಯಲ್ಲಿ ಜಾರಿಯಾಗಲು ಸಹಕಾರ ನೀಡಿತು.[212]
ಕ್ರೆಮ್ಲಿನ್ನ ಮಿಲಿಟರಿ ಮತ್ತು ರಾಜಕೀಯ ರಿಯಾಯಿತಿಗಳಿಗೆ ಪ್ರತಿಕ್ರಿಯೆಯಾಗಿ ರೇಗನ್ ಆರ್ಥಿಕ ವಿಷಯಗಳ ಬಗ್ಗೆ ಹೊಸ ಸುತ್ತಿನ ಮಾತುಕತೆಗಳನ್ನು ನಡೆಸಲು ಮತ್ತು ಶಸ್ತ್ರಾಸ್ತ್ರ ಪೈಪೋಟಿಯನ್ನು ಕಡಿಮೆ ಮಾಡಲು ಒಪ್ಪಿಗೆ ನೀಡಿದನು.[213] ಮೊದಲ ಸುತ್ತಿನ ಮಾತುಕತೆಯು 1985ರ ನವೆಂಬರಿನಲ್ಲಿ ಜಿನೀವಾ, ಸ್ವಿಜರ್ಲೆಂಡ್ನಲ್ಲಿ ನಡೆಯಿತು.[213] ಈ ಮಾತುಕತೆಯ ಒಂದು ಹಂತದಲ್ಲಿ ಒಬ್ಬ ಅನುವಾದಕನನ್ನು ಮಾತ್ರ ಜತೆಗಿಟ್ಟುಕೊಂಡು ಮಾತುಕತೆ ನಡೆಸಿದ ಇಬ್ಬರೂ ನಾಯಕರು ಒಂದು ಸೂತ್ರದಂತೆ ತಮ್ಮ ತಮ್ಮ ದೇಶಗಳ ಪರಮಾಣು ಶಸ್ತ್ರಾಸ್ತಗಳನ್ನು ಶೇಕಡಾ 50ರಷ್ಟು ಕಡಿಮೆಗೊಳಿಸಲು ಸಮ್ಮತಿಸಿದರು.[214] thumb|left| 1988ರಲ್ಲಿ ಸೋವಿಯೆತ್ ಅಫ್ಘಾನಿಸ್ತಾನದಿಂದ ಮರಳುತ್ತಿರುವುದು.ಎರಡನೇ ರೇಜಾವಿಕ್ ಶಿಖರಸಮ್ಮೇಳನವನ್ನು ಐಸ್ಲಂಡ್ನಲ್ಲಿ ನಡೆಸಲಾಯಿತು. ಸರಿಯಾದ ದಿಕ್ಕಿನಲ್ಲಿಯೇ ನಡೆಯುತ್ತಿದ್ದ ಮಾತುಕತೆಯ ವೇಳೆಗೆ ರೇಗನ್ ಮಂಡಿಸಿದ ಆಯಕಟ್ಟಿನ ಭದ್ರತಾ ಉಪಕ್ರಮದ ವಿಷಯ ಬಂದಾಗ ಗೋರ್ಬಚೇವ್ ಅದನ್ನು ತೆಗೆದುಹಾಕಲು ಬಯಸಿದರೆ ರೇಗನ್ ಅಸಮ್ಮತಿ ಸೂಚಿಸಿದರು.[215] ಈ ಸಂಧಾನದ ಮಾತುಕತೆಗಳು ವಿಫಲವಾದವು, ಆದರೂ 1987ರಲ್ಲಿ ನಡೆದ ಶಿಖರಸಮ್ಮೇಳನದಲ್ಲಿ ಇಂಟರ್ಮೀಡಿಯೆಟ್-ರೇಂಜ್ ನ್ಯೂಕ್ಲಿಯರ್ ಫೋರ್ಸಸ್ ಟ್ರೀಟಿ(INF)ಗೆ ಸಹಿ ಹಾಕುವುದರ ಮೂಲಕ ಪ್ರಮುಖ ಮೈಲಿಗಲ್ಲೊಂದನ್ನು ತಲುಪಿದಂತಾಯಿತು . INF ಒಪ್ಪಂದವು ಎಲ್ಲಾ ಪರಮಾಣು ಶಸ್ತ್ರಸಜ್ಜಿತ, ಭೂಮಿಯಿಂದ ಪೃಥಕ್ಕರಿಸಲಾಗುವ 500ರಿಂದ 5,500 ಕಿಲೋಮೀಟರುಗಳ (300ರಿಂದ 3,400 ಮೈಲುಗಳು) ಪರಿಮಿತಿ ಹೊಂದಿರುವ ಕ್ಷಿಪಣಿಯುಕ್ತ ಮತ್ತು ಪರ್ಯಟನ ಮಿಸೈಲುಗಳು ಮತ್ತು ಅವುಗಳಿಗೆ ಸಂಬಂಧಿಸಿದ ಮೂಲಭೂತ ಸೌಕರ್ಯಗಳನ್ನು ವರ್ಜಿಸುವಂತೆ ನಿಯಮಿಸಿತು.[216]
1980ರ ದಶಕದ ನಡುವಿನಿಂದ ಕೊನೆಯವರೆಗಿನ ಕಾಲದಲ್ಲಿ ಕ್ಷಿಪ್ರವಾಗಿ ಕಡಿಮೆಯಾದ ಪೂರ್ವ-ಪಶ್ಚಿಮಗಳ ನಡುವಿನ ಪ್ರಕ್ಷುಬ್ದತೆಗಳು 1989ರ ಮಾಸ್ಕೋನ ಕೊನೆಯ ಶಿಖರಸಮ್ಮೇಳನದಲ್ಲಿ ಗೋರ್ಬಚೇವ್ ಮತ್ತು ಜಾರ್ಜ್ ಎಚ್.ಡಬ್ಲ್ಯು. ಬುಶ್ ಇಬ್ಬರೂ START I ಎಂಬ ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದಕ್ಕೆ ಸಹಿ ಹಾಕುವುದರ ಮೂಲಕ ಮುಕ್ತಾಯಗೊಂಡವು.[217] ಮುಂದಿನ ವರುಷದ ಹೊತ್ತಿಗೆ ಸೋವಿಯೆತ್ಗೆ ತೈಲ ಮತ್ತು ಅನಿಲ ಸಹಾಯಧನಗಳು ಮತ್ತು ಬೃಹತ್ ಸೇನಾ ನಿರ್ವಹಣೆಯ ಖರ್ಚುವೆಚ್ಚಗಳ ದೆಸೆಯಿಂದ ದೊಡ್ಡ ಆರ್ಥಿಕ ಸೋರಿಕೆಯುಂಟಾಗುತ್ತಿದೆಯೆಂದು ಅರಿವಾಯಿತು.[218] ಇದರ ಜತೆಗೇ ತಡೆವಲಯವೊಂದರ ಭದ್ರತಾ ಸೌಕರ್ಯಗಳು ಅಪ್ರಯೋಜಕವೆಂದು ಅಂಗೀಕೃತವಾದ ಮೇಲೆ ಪೂರ್ವ ಯುರೋಪಿನ ಮಿತ್ರದೇಶಗಳ ಕಾರ್ಯಕಲಾಪಗಳಲ್ಲಿ ಮೂಗು ತೂರಿಸುವುದಿಲ್ಲವೆಂದು ಸೋವಿಯೆತ್ ಅಧಿಕೃತವಾಗಿ ಘೋಷಿಸಿತು.[219]
1989ರಲ್ಲಿ, ಸೋವಿಯೆತ್ ಸೇನೆಗಳು ಅಫ್ಘಾನಿಸ್ತಾನ[220] ದಿಂದ ಹಿಂದೆ ಸರಿದವು ಮತ್ತು 1990ರ ಹೊತ್ತಿಗೆ ತಿಯನನ್ಮೆನ್ ಪರಿಸ್ಥಿತಿಯ ಹೊರತಾಗಿ ಬೇರೆ ವಿಕಲ್ಪಗಳಿಲ್ಲದುದರಿಂದ ಗೋರ್ಬಚೇವ್ ಜರ್ಮನ್ ಪುನರ್ಏಕೀಕರಣಕ್ಕೆ,[218] ಸಮ್ಮತಿ ನೀಡಿದರು.[221] ಬರ್ಲಿನ್ ಗೋಡೆಯು ಕೆಳಗುರುಳಿದಾಗ ಗೋರ್ಬಚೇವರ "ಸಾಮಾನ್ಯ ಯುರೋಪಿಯನ್ ಮನೆ"ಯ ಕಲ್ಪನೆಯು ರೂಪ ತಳೆಯತೊಡಗಿತು.[222]
1989ರ ಡಿಸೆಂಬರ್ 3ರಂದು ಗೋರ್ಬಚೇವ್ ಮತ್ತು ರೇಗನ್ರ ಉತ್ತರಾಧಿಕಾರಿಯಾದ ಜಾರ್ಜ್ ಎಚ್.ಡಬ್ಲ್ಯು.ಬುಶ್, ಮಾಲ್ಟಾ ಶಿಖರಸಮ್ಮೇಳನದಲ್ಲಿ ಶೀತಲ ಸಮರದ ಅಂತ್ಯವಾಗಿದೆಯೆಂದು ಘೋಷಿಸಿದರು;[223] ಒಂದು ವರ್ಷದ ನಂತರ, ಈ ಎರಡು ಮಾಜೀ ವೈರಿಗಳು ಗಲ್ಫ್ ಯುದ್ಧದಲ್ಲಿ ಬಹಳಕಾಲದವರೆಗೂ ಸೋವಿಯೆತ್ ಮೈತ್ರಿ ಹೊಂದಿದ್ದ ಇರಾಕ್ನ ವಿರುದ್ಧ ಜತೆಸೇರಿಕೊಂಡವು.[224]
1989ರ ಹೊತ್ತಿಗೆ ಸೋವಿಯೆತ್ ಮೈತ್ರಿ ವ್ಯವಸ್ಥೆಯು ಕುಸಿತದ ಕೊನೆಯ ಘಟ್ಟವನ್ನು ತಲುಪಿತ್ತು ಮತ್ತು ಸೋವಿಯೆತ್ನ ಮಿಲಿಟರಿ ಬೆಂಬಲವನ್ನು ಕಳೆದುಕೊಂಡ ವಾರ್ಸಾ ಒಪ್ಪಂದದ ದೇಶಗಳ ಕಮ್ಯುನಿಸ್ಟ್ ನಾಯಕರ ಅಧಿಕಾರಬಲ ಕ್ಷೀಣವಾಗತೊಡಗಿತ್ತು.[220] ಯು.ಎಸ್.ಎಸ್.ಆರ್ನಲ್ಲಿ ಗ್ಲಾಸ್ನಾಸ್ತ್ ಸೋವಿಯೆತ್ ಒಕ್ಕೂಟವನ್ನು ಒಂದುಗೂಡಿಸಿದ್ದ ಎಳೆಗಳನ್ನು ದುರ್ಬಲಗೊಳಿಸಿತು[219] ಮತ್ತು 1990ರ ಫೆಬ್ರುವರಿಯ ವೇಳೆಗೆ USSRನ ವಿಸರ್ಜನೆಯ ನೆರಳಿನಡಿ ಕಮ್ಯುನಿಸ್ಟ್ ಪಾರ್ಟಿಯು ತನ್ನ 72 ವರ್ಷಗಳ ಏಕಸ್ವಾಮ್ಯದ ಅಧಿಕಾರವನ್ನು ಬಲವಂತವಾಗಿ ಬಿಟ್ಟುಕೊಡಬೇಕಾಯಿತು.[225]
ಗ್ಲಾಸ್ನಾಸ್ಟ್ ಮಾನ್ಯಮಾಡಿದ ಪ್ರೆಸ್ ಸ್ವಾತಂತ್ರ್ಯ ಹಾಗೂ ಅಸಮ್ಮತಿಯ ಸೌಲಭ್ಯಗಳು ಮತ್ತು ಉಲ್ಬಣಿಸತೊಡಗಿದ್ದ "ರಾಷ್ಟ್ರೀಯತೆಗಳ ಸವಾಲು"ಗಳು ಒಕ್ಕೂಟದ ಗಣರಾಜ್ಯಗಳು ಮಾಸ್ಕೋದಿಂದ ತಮ್ಮ ಸ್ವಾಯತ್ತತೆಯನ್ನು ಘೋಷಿಸುವಂತೆ ಮಾಡಿತು ಮತ್ತು ಬಾಲ್ಟಿಕ್ ರಾಜ್ಯಗಳು ಒಕ್ಕೂಟದಿಂದ ಸಂಪೂರ್ಣವಾಗಿ ಬೇರೆಯಾದವು.[226] ಮಧ್ಯ ಮತ್ತು ಪೂರ್ವ ಯುರೋಪುಗಳನ್ನು ವ್ಯಾಪಿಸಿದ 1989ರ ಕ್ರಾಂತಿಯ ಅಲೆಯು ಪೋಲಂಡ್, ಹಂಗರಿ, ಜೆಕೋಸ್ಲೊವಾಕಿಯಾ ಮತ್ತು ಬಲ್ಗೇರಿಯಾ[227] ವೇ ಮುಂತಾದ ಸೋವಿಯೆತ್-ಶೈಲಿಯ ಕಮ್ಯುನಿಸ್ಟ್ ದೇಶಗಳ ಸರ್ಕಾರಗಳನ್ನು ಉರುಳಿಸಿತು ಹಾಗೂ ಅವುಗಳಲ್ಲಿ ರೊಮಾನಿಯಾ ಮಾತ್ರ ಹಿಂಸಾತ್ಮಕ ರೀತಿಯಲ್ಲಿ ತನ್ನ ಕಮ್ಯುನಿಸ್ಟ್ ಸರ್ಕಾರವನ್ನುರುಳಿಸಿ ತನ್ನ ಮುಖ್ಯಸ್ಥನನ್ನು ಹತ್ಯೆಗೈದ ಈಸ್ಟರ್ನ್ ಬ್ಲಾಕಿನ ಏಕೈಕ ರಾಷ್ಟ್ರವಾಗಿತ್ತು.[228]
ಗೋರ್ಬಚೇವ್ ಪೂರ್ವ ಯುರೋಪಿನೆಡೆಗೆ ತೋರುತ್ತಿದ್ದ ಅನುಮೋದಕ ದೃಷ್ಟಿಕೋನವು ಮೊದಮೊದಲು ಸೋವಿಯೆತ್ ಪ್ರದೇಶದವರೆಗೂ ತಲುಪಲಿಲ್ಲ; ಸ್ನೇಹಪರ ಸಂಬಂಧಗಳನ್ನು ಬೆಳೆಸುವತ್ತ ಒಲವು ತೋರುತ್ತಿದ್ದ ಬುಶ್ ಕೂಡ ಜನವರಿ 1991ರ ಲಾತ್ವಿಯಾ ಮತ್ತು ಲಿಥುವೇನಿಯಾದ ಕೊಲೆಗಳನ್ನು ಖಂಡಿಸಿದ್ದಲ್ಲದೇ, ಈ ಹಿಂಸೆಯು ಮುಂದುವರಿದಲ್ಲಿ ಆರ್ಥಿಕ ಸಂಬಂಧಗಳನ್ನು ಕಡಿದುಕೊಳ್ಳಲಾಗುವುದೆಂಬ ಖಾಸಗೀ ಎಚ್ಚರಿಕೆಯನ್ನೂ ನೀಡಿದನು.[229] ವಿಫಲವಾದ ಸರ್ಕಾರಪಲ್ಲಟ ಪ್ರಯತ್ನವೊಂದರಿಂದಾಗಿ ಅತ್ಯಂತ ದುರ್ಬಲಗೊಂಡಿದ್ದ ಯು.ಎಸ್.ಎಸ್.ಆರ್ಗೆ ಆಗಲೇ ತಲೆಯೆತ್ತತೊಡಗಿದ ಸೋವಿಯೆತ್ ಗಣತಂತ್ರಗಳು, ಅದರಲ್ಲಿಯೂ ರಷ್ಯಾದಿಂದ ಬೆದರಿಕೆಯುಂಟಾಗಿದ್ದರಿಂದ 1991ರ ಡಿಸೆಂಬರ್ 25ರಂದು ಯು.ಎಸ್.ಎಸ್.ಆರ್ ಅನ್ನು ಅಧಿಕೃತವಾಗಿ ವಿಸರ್ಜಿಸಲಾಯಿತು.[230]
1991ರ ಡಿಸೆಂಬರ್ 21ರಂದು ಅಸ್ತಿತ್ವಕ್ಕೆ ಬಂದ ಕಾಮನ್ವೆಲ್ತ್ ಆಫ್ ಇಂಡಿಪೆಂಡೆಂಟ್ ಸ್ಟೇಟ್ಸ್ ಅನ್ನು ಸೋವಿಯೆತ್ ಒಕ್ಕೂಟದ ಉತ್ತರಾಧಿಕಾರಿಯಂತೆ ಕಾಣಲಾಗುತ್ತದೆಯಾದರೂ ರಷ್ಯಾದ ನಾಯಕರ ಪ್ರಕಾರ ಅದರ ಉದ್ದೇಶವು ಸೋವಿಯೆತ್ ಗಣತಂತ್ರಗಳ ನಡುವೆ "ಸೌಹಾರ್ದಯುತ ವಿಚ್ಚೇದನವನ್ನು ಕಲ್ಪಿಸು"ವುದಾಗಿತ್ತು ಮತ್ತು ಅದನ್ನು ಒಂದು ಬಿಡಿಯಾದ ರಾಷ್ಟ್ರಗಳ ಕೂಟಕ್ಕೆ ಹೋಲಿಸಬಹುದಾಗಿದೆ.[231]
ಶೀತಲ ಸಮರದ ನಂತರ ರಷ್ಯಾ ತನ್ನ ಮಿಲಿಟರಿ ವೆಚ್ಚದಲ್ಲಿ ಭಾರೀ ಕಡಿತ ಮಾಡಿದರೂ ಈ ಮೊದಲಿನ ಸೋವಿಯೆತ್ ಒಕ್ಕೂಟದ ಪ್ರತೀ ಐದು ವಯಸ್ಕರಲ್ಲಿ ಒಬ್ಬರು[232] ಮಿಲಿಟರಿ-ಔದ್ಯೋಗಿಕ ಕ್ಷೇತ್ರದಲ್ಲಿ ಕೆಲಸದಲ್ಲಿದ್ದುದು ಮತ್ತು ಅದರ ಕುಸಿತದ ನಂತರ ಮಿಲಿಯಗಟ್ಟಲೆ ಜನರು ನಿರುದ್ಯೋಗಿಗಳಾದುದರಿಂದ ಹೊಂದಾಣಿಕೆ ಬಹಳ ಪ್ರಯಾಸದಾಯಕವಾಗಿತ್ತು.[232] 1990ರ ದಶಕದಲ್ಲಿ ರಷ್ಯಾವು ಬಂಡವಾಳಶಾಹೀ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದರೂ ಕೂಡ ಅದು ಒಂದು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಿ ಬಂದಿದ್ದು ಮಾತ್ರವಲ್ಲದೆ ಯು.ಎಸ್ ಮತ್ತು ಜರ್ಮನಿಗಳು ಗ್ರೇಟ್ ಡಿಪ್ರೆಶನ್ನ ಸಮಯದಲ್ಲಿ ಅನುಭವಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದ ಆರ್ಥಿಕ ಹಿನ್ನಡೆಯನ್ನು ಕೂಡ ಎದುರಿಸಬೇಕಾಯಿತು.[233] 1999ರ ನಂತರ ರಷ್ಯನ್ ಅರ್ಥವ್ಯವಸ್ಥೆಯಲ್ಲಿ ಬೆಳವಣಿಗೆ ಕಂಡುಬರುತ್ತಿದ್ದರೂ ಕೂಡ ಶೀತಲ ಸಮರದ ನಂತರದ ವರುಷಗಳಲ್ಲಿ ರಷ್ಯನ್ ಜೀವನಮಟ್ಟವು ಮತ್ತಷ್ಟು ಹದಗೆಡುತ್ತಲೇ ಇರುವುದು ಕಂಡುಬರುತ್ತದೆ.[233]
ಇಂದಿಗೂ ಪ್ರಪಂಚದ ಆಗುಹೋಗುಗಳ ಮೇಲೆ ಶೀತಲ ಸಮರದ ಪರಂಪರೆಯ ಪ್ರಭಾವ ಇದ್ದೇ ಇದೆ.[14] ಸೋವಿಯೆತ್ ಒಕ್ಕೂಟದ ವಿಸರ್ಜನೆಯ ನಂತರ ಉಳಿದಿರುವ ಏಕೈಕ ಮಹಾಶಕ್ತಿ ಯು.ಎಸ್. ಮಾತ್ರವಾದ್ದರಿಂದ ಶೀತಲ ಸಮರ-ಪೂರ್ವ ವಿಶ್ವವನ್ನು ಏಕಧ್ರುವ ವಿಶ್ವವೆಂದು ಪರಿಗಣಿಸಲಾಗುತ್ತದೆ.[234][235][236] ಶೀತಲ ಸಮರವು ಎರಡನೇ ವಿಶ್ವಯುದ್ಧಾನಂತರದಲ್ಲಿನ ಯುನೈಟೆಡ್ ಸ್ಟೇಟ್ಸ್ನ ಪಾತ್ರವನ್ನು ರೂಪಿಸುವಲ್ಲಿ ಸಹಾಯಕವಾಯಿತು: 1989ರ ಹೊತ್ತಿಗೆ ಯು.ಎಸ್ 50 ರಾಷ್ಟ್ರಗಳ ಜತೆಗೆ ಸೇನಾ ಮೈತ್ರಿಯನ್ನು ಹೊಂದಿತ್ತಲ್ಲದೆ, ಅದರ 1.5 ಮಿಲಿಯನ್ ತುಕಡಿಗಳು 117 ದೇಶಗಳಲ್ಲಿ ನೆಲೆಯೂರಿದ್ದವು.[237] ಶೀತಲ ಸಮರವು ಬೃಹತ್ ಹಾಗೂ, ಶಾಶ್ವತವಾದ ಶಾಂತಿಕಾಲದ ಮಿಲಿಟರಿ-ಔದ್ಯಮಿಕ ಸಂಕೀರ್ಣಗಳು ಮತ್ತು ಬೃಹತ್ ವೈಜ್ಞಾನಿಕ ಮಿಲಿಟರಿ ಹೂಡಿಕೆಗಳ ಸಾಂಸ್ಥೀಕರಣದೆಡೆ ಜಾಗತಿಕ ಬದ್ಧತೆಯನ್ನು ಹುಟ್ಟುಹಾಕಿತು.[237]
ಶೀತಲ ಸಮರದ ಕಾಲದಲ್ಲಿ ಯು.ಎಸ್.ನ ಮಿಲಿಟರಿ ವೆಚ್ಚವು $8 ಟ್ರಿಲಿಯನ್ ಡಾಲರ್ನಷ್ಟಾಗಿತ್ತೆಂದೂ, ಕೊರಿಯನ್ ಯುದ್ಧ ಮತ್ತು ವಿಯೆಟ್ನಾಮ್ ಯುದ್ಧಗಳ ಸಮಯದಲ್ಲಿ ಸುಮಾರು 100,000 ಅಮೆರಿಕನ್ನರು ಸಾವಿಗೀಡಾದರೆಂದೂ ಲೆಕ್ಕಹಾಕಲಾಗಿದೆ.[238] ಸೋವಿಯೆತ್ ಸೈನಿಕರ ಸಾವುನೋವಿನ ಅಂಕಿಅಂಶಗಳನ್ನು ಲೆಕ್ಕಹಾಕುವುದು ಕಷ್ತಕರವಾದರೂ ಸೋವಿಯೆತ್ನ ಒಟ್ಟು ರಾಷ್ಟ್ರೀಯ ಉತ್ಪನ್ನದ ವೆಚ್ಚದ ಪ್ರಮಾಣವು ಯು.ಎಸ್.ಗಿಂತ ಬಹಳ ಹೆಚ್ಚಾಗಿದ್ದುದು ಖಚಿತವಾಗಿದೆ.[239]
ಸೇನೆಯ ಮುಖಾಂತರ ಉಂಟಾದ ಸಾವುನೋವುಗಳ ಜತೆಗೇ ಮಹಾಶಕ್ತಿಗಳ ನಡುವಿನ ಜಾಗತಿಕ ಪರೋಕ್ಷ ಯುದ್ಧಗಳಲ್ಲಿ, ಅದರಲ್ಲೂ ಹೆಚ್ಚಾಗಿ ಆಗ್ನೇಯ ಏಷ್ಯಾದಲ್ಲಿ ಮಿಲಿಯಗಟ್ಟಲೆ ಜನರು ಸಾವಿಗೀಡಾದರು.[240] ಶೀತಲ ಸಮರದ ಅಂತ್ಯದೊಂದಿಗೆ ಪರೋಕ್ಷ ಯುದ್ಧಗಳು ಹಾಗೂ ಪ್ರಾದೇಶಿಕ ಬಿಕ್ಕಟ್ಟುಗಳಿಗೆ ಸಹಾಯಕವಾಗಿದ್ದ ಸಂಘರ್ಷಗಳೂ ಕೂಡ ಕೊನೆಗೊಂಡವು; ಅಂತರ್ರಾಜ್ಯ ಯುದ್ಧಗಳು, ಜನಾಂಗೀಯ ಯುದ್ಧಗಳು, ಕ್ರಾಂತಿಕಾರೀ ಯುದ್ಧಗಳ ಜತೆಗೇ ನಿರಾಶ್ರಿತರ ಮತ್ತು ಸ್ಥಾನಪಲ್ಲಟವಾದ ಜನರ ಬಿಕ್ಕಟ್ಟುಗಳು ಕೂಡ ಶೀತಲ ಸಮರಾನಂತರದ ಕಾಲಾವಧಿಯಲ್ಲಿ ಗಣನೀಯವಾಗಿ ಕಡಿಮೆಯಾಗಿವೆ.[241]
ಶೀತಲ ಸಮರಕ್ಕಾಗಿ ಯಾವುದೇ ರೀತಿಯ ಅಧಿಕೃತ ವಿಶೇಷ ಪ್ರಚಾರ ಪದಕವನ್ನು ನೀಡಲಾಗಿಲ್ಲವಾದರೂ; 1998ರಲ್ಲಿ ಯುನೈಟೆಡ್ ಸ್ಟೇಟ್ ಕಾಂಗ್ರೆಸ್ ಕೋಲ್ಡ್ ವಾರ್ ರೆಕಗ್ನಿಶನ್ ಸರ್ಟಿಫಿಕೇಟ್ಗಳನ್ನು "ಶೀತಲ ಸಮರದ ಕಾಲದಲ್ಲಿ, ಎಂದರೆ ಸೆಪ್ಟೆಂಬರ್ 2, 1945 ರಿಂದ ಡಿಸೆಂಬರ್ 26, 1991ರವರೆಗಿನ ಯಾವುದೇ ಸಮಯದಲ್ಲಿ ಯುನೈಟೆಡ್ ಸ್ಟೇಟ್ಸ್ಗೆ ಗೌರವ, ನಿಷ್ಠೆಗಳೊಂದಿಗೆ ಸೇವೆ ಸಲ್ಲಿಸಿದ ಎಲ್ಲಾ ಸೇನಾ ಸದಸ್ಯರು ಹಾಗೂ ಫೆಡರಲ್ ಸರ್ಕಾರದ ಯೋಗ್ಯ ಪೌರ ಸಿಬ್ಬಂದಿಗೆ" ಕೊಡಮಾಡಿತು.[242]
ಶೀತಲ ಸಮರದ ಸಂಘರ್ಷದ ನೆನಪುಗಳನ್ನು ಸುಲಭವಾಗಿ ಅಳಿಸಿಹಾಕಲಾಗದು, ಏಕೆಂದರೆ ಮೂರನೇ ವಿಶ್ವದ ರಾಷ್ಟ್ರಗಳಲ್ಲಿ ಶೀತಲ ಸಮರದ ಪೈಪೋಟಿಯನ್ನು ಹೆಚ್ಚುಗೊಳಿಸಿ ದುರ್ಲಾಭ ಪಡೆಯಲು ಉಂಟುಮಾಡಲಾದ ಹಲವಾರು ಆರ್ಥಿಕ ಮತ್ತು ಸಾಮಾಜಿಕ ಉದ್ವಿಗ್ನತೆಗಳು ಇಂದಿನವರೆಗೂ ಉಳಿದುಕೊಂಡು ಬಂದಿವೆ.[14] ಹಿಂದೆ ಕಮ್ಯುನಿಸ್ಟ್ ಸರ್ಕಾರಗಳ ಆಳ್ವಿಕೆಯನ್ನು ಹೊಂದಿದ್ದು ನಂತರ ರಾಜಕೀಯ ನಿಯಂತ್ರಣವನ್ನು ಕಳೆದುಕೊಂಡ ಹಲವಾರು ಪ್ರದೇಶಗಳಲ್ಲಿ, ಅದೂ ಯುಗೋಸ್ಲಾವಿಯಾದಲ್ಲಿ ಅನೇಕ ಹೊಸ ನಾಗರಿಕ ಮತ್ತು ಜನಾಂಗೀಯ ಕಲಹಗಳು ಹುಟ್ಟಿಕೊಳ್ಳುತ್ತಿವೆ.[14] ಪೂರ್ವ ಯುರೋಪಿನಲ್ಲಿ ಶೀತಲ ಸಮರದ ನಂತರ ಆರ್ಥಿಕ ಅಭಿವೃದ್ಧಿ ಮತ್ತು ಹೆಚ್ಚಿನ ಸಂಖ್ಯೆಯ ಉದಾರ ಪ್ರಜಾತಂತ್ರಗಳ ಹೊಸ ಯುಗವೊಂದು ಆರಂಭವಾದರೆ, ಅಫ್ಘಾನಿಸ್ತಾನದಂತಹ ವಿಶ್ವದ ಇತರ ಭಾಗಗಳಲ್ಲಿ ಸ್ವಾತಂತ್ರ್ಯವು ರಾಜ್ಯದ ಸೋಲುಗಳಲ್ಲಿ ಪರ್ಯವಸಾನಗೊಂಡಿತು.[14]
"ಶೀತಲ ಸಮರ" ಎಂಬ ಪದವು ಯುನೈಟೆಡ್ ಸ್ಟೇಟ್ಸ್ ಮತ್ತು ಸೋವಿಯೆತ್ ಒಕ್ಕೂಟದ ಯುದ್ಧಾನಂತರದ ಉದ್ವಿಗ್ನತೆಗಳನ್ನು ವಿವರಿಸುವ ಜನಬಳಕೆಯ ಪದ ಮಾತ್ರವಾಗಿರದೆ ಈ ಕಾಲಾವಧಿಯ ಸಂಘರ್ಷದ ಮೂಲ ಮತ್ತು ಪಥದ ಬಗೆಗಿನ ಹಲವಾರು ವ್ಯಾಖ್ಯಾನಗಳು ಇತಿಹಾಸಜ್ಞರು, ರಾಜಕೀಯ ವಿಜ್ಞಾನಿಗಳು ಹಾಗೂ ಪತ್ರಕರ್ತರ ನಡುವೆ ಬಿರುಸಾದ ತಕರಾರುಗಳು ನಡೆಯಲು ಕಾರಣವಾಗಿವೆ.[243] ಎರಡನೇ ವಿಶ್ವಯುದ್ಧದ ನಂತರ ಸೋವಿಯೆತ್-ಯು.ಎಸ್ ಸಂಬಂಧಗಳಲ್ಲಿ ಉಂಟಾದ ಬಿರುಕಿಗೆ ಯಾರು ಕಾರಣ; ಹಾಗೂ ಈ ಎರಡು ಮಹಾಶಕ್ತಿಗಳ ನಡುವೆ ಸಂಘರ್ಷ ಅನಿವಾರ್ಯವಾಗಿತ್ತೆ, ಅಥವಾ ಇದನ್ನು ತಪ್ಪಿಸಬಹುದಾಗಿತ್ತೆ ಎಂಬ ವಿಷಯಗಳ ಬಗ್ಗೆ ತೀವ್ರವಾಗಿ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.[244] ಇತಿಹಾಸಜ್ಞರು ನಿಜವಾಗಿ ಶೀತಲ ಸಮರ ಏನಾಗಿತ್ತು, ಈ ಸಂಘರ್ಷದ ಮೂಲಗಳಾವುವಾಗಿದ್ದುವು, ಎರಡೂ ಬಣಗಳ ನಡುವಿನ ಕ್ರಿಯೆ ಮತ್ತು ಪ್ರತಿಕ್ರಿಯೆಗಳ ಸಂವಿಧಾನವನ್ನು ಬಿಡಿಬಿಡಿಯಾಗಿ ಬಿಡಿಸಿ ಹರಡುವುದು ಹೇಗೆ ಎಂಬ ವಿಷಯಗಳ ಬಗೆಗೂ ಭಿನ್ನಾಭಿಪ್ರಾಯ ಹೊಂದಿದ್ದಾರೆ.[14]
ಶೈಕ್ಷಣಿಕ ಶಿಸ್ತಿನ ಚರ್ಚೆಗಳಲ್ಲಿ ಸಂಘರ್ಷದ ಮೂಲದ ಬಗ್ಗೆ ನೀಡಲಾಗಿರುವ ವಿವರಣೆಗಳು ಸಂಕೀರ್ಣವೂ, ವೈವಿಧ್ಯಮಯವೂ ಆಗಿರುವುವಾದರೂ ಈ ವಿಷಯದ ಬಗ್ಗೆ ಹಲವಾರು ಸಾರ್ವತ್ರಿಕ ಪಂಥಗಳು ಅಥವಾ ತತ್ವಸಿದ್ಧಾಂತಗಳನ್ನು ಗುರುತಿಸಬಹುದು. ಇತಿಹಾಸಜ್ಞರು ಶೀತಲ ಸಮರವನ್ನು ಅಧ್ಯಯನ ಮಾಡಲು ಮೂರು ಮಾರ್ಗಗಳ ಬಳಕೆಯ ಬಗ್ಗೆ ತಿಳಿಸುತ್ತಾರೆ: "ಸಾಂಪ್ರದಾಯಿಕ" ಉಲ್ಲೇಖಗಳು, "ಪರಿಷ್ಕರಣ", ಮತ್ತು "ಮರು-ಪುನರ್ವಿಮರ್ಶೆ".[237]
"ಸಾಂಪ್ರದಾಯಿಕ" ಅಧ್ಯಯನಗಳ ಪ್ರಕಾರ ಶೀತಲ ಸಮರವು ಸೋವಿಯೆತ್ ಒಕ್ಕೂಟ ಮತ್ತು ಪೂರ್ವ ಯುರೋಪಿನೆಡೆಗೆ ಅದರ ವಿಸ್ತರಣೆಯಿಂದಾಗಿ ಆರಂಭವಾಯಿತು.[237] "ಪರಿಷ್ಕರಣಾ" ಲೇಖಕರು ಯುದ್ಧಾನಂತರದ ಶಾಂತಿಯನ್ನು ಒಡೆದ ಹೆಚ್ಚಿನ ಜವಾಬ್ದಾರಿಯನ್ನು ಯುನೈಟೆಡ್ ಸ್ಟೇಟ್ಸ್ನ ಮೇಲೆ ಹೊರಿಸುತ್ತಾರೆ ಮತ್ತು ಇದಕ್ಕಾಗಿ ಎರಡನೇ ವಿಶ್ವಯುದ್ಧವು ಮುಗಿಯುವ ಮೊದಲೇ ಸೋವಿಯೆತ್ ಯೂನಿಯನ್ ಅನ್ನು ಪ್ರತ್ಯೇಕಿಸಲು ಹಾಗೂ ಎದುರಿಸಲು ಯು.ಎಸ್ ಮಾಡಿದ ಹಲವಾರು ಪ್ರಯತ್ನಗಳನ್ನೂ ಉದಾಹರಿಸುತ್ತಾರೆ.[237] "ಪರಿಷ್ಕರಣೋತ್ತರ" ಅಧ್ಯಯನಕಾರರು ಶೀತಲ ಸಮರವನ್ನು ಹೆಚ್ಚು ಸೂಕ್ಷ್ಮ ವ್ಯತ್ಯಾಸಗಳಿಂದ ಕೂಡಿರುವಂತೆ ಕಾಣುವುದಲ್ಲದೆ ಶೀತಲ ಸಮರದ ಸಮಯದಲ್ಲಿ ಏನಾಯಿತೆಂದು ನಿರ್ಧರಿಸುವುದಕ್ಕಾಗಿ ಹೆಚ್ಚು ಸಮತೋಲನದ ಮನೋಭಾವನೆಯನ್ನು ಹೊಂದಿರುವಂಥವರಾಗಿರುತ್ತಾರೆ.[237] ಶೀತಲ ಸಮರದ ಬಗೆಗಿನ ಹೆಚ್ಚಿನ ಚರಿತ್ರಲೇಖನವು ಈ ವಿಸ್ತಾರವಾದ ಮಾರ್ಗಗಳಲ್ಲಿ ಎರಡು ಅಥವಾ ಎಲ್ಲ ಮೂರನ್ನೂ ಒಟ್ಟಿಗೇ ಹೆಣೆದುನೋಡುತ್ತದೆ.[47]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.