ಶಾಸ್ತ್ರ
From Wikipedia, the free encyclopedia
ಶಾಸ್ತ್ರ ಎನ್ನುವುದು ಸಂಸ್ಕೃತ ಶಬ್ದವಾಗಿದ್ದು ಇದರ ಸಾಮಾನ್ಯ ಅರ್ಥ "ಮಾರ್ಗದರ್ಶಕ ಸೂತ್ರ, ನಿಯಮಗಳು, ಕೈಪಿಡಿ, ಸಾರಸಂಗ್ರಹ, ಪುಸ್ತಕ ಅಥವಾ ಗ್ರಂಥ" ಎಂದಾಗಿದೆ. ಭಾರತೀಯ ಸಾಹಿತ್ಯದ ವಿಷಯದಲ್ಲಿ ಈ ಶಬ್ದವನ್ನು ಸಾಮಾನ್ಯವಾಗಿ ಅಭ್ಯಾಸದ ಒಂದು ಸುನಿಶ್ಚಿತ ಕ್ಷೇತ್ರದಲ್ಲಿನ ತಾಂತ್ರಿಕ ಅಥವಾ ವಿಶೇಷ ಜ್ಞಾನಕ್ಕೆ ಪ್ರತ್ಯಯ ಶಬ್ದವಾಗಿ ಬಳಸಲಾಗುತ್ತದೆ.[1]
ಶಾಸ್ತ್ರ ಶಬ್ದದ ಅರ್ಥದ ಒಂದು ನಿರ್ದಿಷ್ಟ ವಿಷಯದ ಬಗ್ಗೆ ವೈಜ್ಞಾನಿಕ ಮತ್ತು ಮೂಲಭೂತ ತಿಳಿವಳಿಕೆ. ಆಧುನಿಕ ನವಪದ ಪ್ರಯೋಗದ ವಿಷಯದಲ್ಲಿನ ಉದಾಹರಣೆಗಳಲ್ಲಿ ಭೌತಿಕಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ, ಅರ್ಥಶಾಸ್ತ್ರ,[2] ನೀತಿಶಾಸ್ತ್ರ ಸೇರಿವೆ.
ಕೆಲವು ಇತರ ಉದಾಹರಣೆಗಳೆಂದರೆ ಯೋಗಶಾಸ್ತ್ರ, ನ್ಯಾಯಶಾಸ್ತ್ರ, ಧರ್ಮಶಾಸ್ತ್ರ, ಕಾಮಶಾಸ್ತ್ರ, ಮೋಕ್ಷಶಾಸ್ತ್ರ, ಅಲಂಕಾರಶಾಸ್ತ್ರ, ಕಾವ್ಯಶಾಸ್ತ್ರ, ಸಂಗೀತ ಶಾಸ್ತ್ರ, ನಾಟ್ಯಶಾಸ್ತ್ರ ಇತ್ಯಾದಿ.