![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/7/7d/Satrughna%252C_the_youngest_brother_of_R%25C4%2581ma..jpg/640px-Satrughna%252C_the_youngest_brother_of_R%25C4%2581ma..jpg&w=640&q=50)
ಶತ್ರುಘ್ನ
ರಾಮನ ಸಹೋದರ / From Wikipedia, the free encyclopedia
ಶತ್ರುಘ್ನ ಅಯೋಧ್ಯೆಯ ರಾಜಕುಮಾರ ಮತ್ತು ಮಧುಪುರ ಮತ್ತು ವಿದಿಶಾದ ರಾಜ. ಇವನು ಹಿಂದೂ ಮಹಾಕಾವ್ಯ ರಾಮಾಯಣದಲ್ಲಿ ರಾಜಕುಮಾರ ರಾಮನ ಸಹೋದರ.[2] ಶತ್ರುಘ್ನನನ್ನು ರಿಪುದಮನ್ (ವೈರಿಗಳನ್ನು ಸೋಲಿಸಿದವನು) ಎಂದೂ ಕರೆಯುತ್ತಾರೆ. ಇವನು ಲಕ್ಷ್ಮಣನ ಅವಳಿ. ರಾಮನಿಗೆ ಲಕ್ಷ್ಮಣನಿದ್ದಂತೆ ಇವನು ಭರತನ ನಿಷ್ಠ. ವಾಲ್ಮೀಕಿ ರಾಮಾಯಣದ ಪ್ರಕಾರ, ಶತ್ರುಘ್ನನು ಸುದರ್ಶನ ಚಕ್ರದ ಅವತಾರ.[3] ಮಹಾಭಾರತದ ವಿಷ್ಣುಸಹಸ್ರನಾಮದಲ್ಲಿ ಶತ್ರುಘ್ನನು ವಿಷ್ಣುವಿನ ೪೧೨ ನೇ ನಾಮವಾಗಿ ಕಾಣಿಸಿಕೊಳ್ಳುತ್ತಾನೆ.
Quick Facts ಶತ್ರುಘ್ನ, ಸಂಲಗ್ನತೆ ...
ಶತ್ರುಘ್ನ | |
---|---|
![]() ಶತ್ರುಘ್ನ, ಅಯೋಧ್ಯೆಯ ಕಿರಿಯ ರಾಜಕುಮಾರ | |
ಸಂಲಗ್ನತೆ | ಸುದರ್ಶನ ಚಕ್ರದ ಅವತಾರ |
ಒಡಹುಟ್ಟಿದವರು | ಲಕ್ಷ್ಮಣ (ಸಹೋದರ) ರಾಮ (ಮಲಸಹೋದರ) ಭರತ (ಮಲಸಹೋದರ) ಶಾಂತ (ಮಲಸಹೋದರಿ) |
ಮಕ್ಕಳು | ಸುಬಾಹು ಶತ್ರುಘಟಿ[1] |
ಗ್ರಂಥಗಳು | ರಾಮಾಯಣ ಮತ್ತು ಅದರ ಇತರ ಆವೃತ್ತಿಗಳು |
ತಂದೆತಾಯಿಯರು | ದಶರಥ (ತಂದೆ) ಸುಮಿತ್ರ (ತಾಯಿ) ಕೌಸಲ್ಯೆ (ಮಲತಾಯಿ) ಕೈಕೇಯಿ (ಮಲತಾಯಿ) |
Close
ರಾಮಾಯಣದ ಪ್ರಕಾರ, ರಾಮನು ವಿಷ್ಣುವಿನ ಏಳನೇ ಅವತಾರವಾದರೆ, ಲಕ್ಷ್ಮಣ, ಶತ್ರುಘ್ನ ಮತ್ತು ಭರತ ಕ್ರಮವಾಗಿ ಶೇಷನಾಗ, ಸುದರ್ಶನ ಚಕ್ರ ಮತ್ತು ಪಾಂಚಜನ್ಯದ ಅವತಾರವಾಗಿದ್ದಾರೆ.[4]