ವೈಕುಂಠವು (ವಿಷ್ಣುಲೋಕ) ಎಲ್ಲರಿಂದ ಪೂಜಿಸಲ್ಪಡುವ, ವೈದಿಕ, ಹಿಂದೂ ಧರ್ಮ, ಹಾಗೂ ಅದರ ವೈಷ್ಣವ ಸಂಪ್ರದಾಯಗಳಲ್ಲಿ ಪರಮಾತ್ಮನಾಗಿರುವ, ಬ್ರಹ್ಮಾಂಡಗಳ ಪ್ರಧಾನ ದೇವತೆಯಾದ ವಿಷ್ಣುವಿನ ಸ್ವರ್ಗೀಯ ನಿವಾಸ.[1] ವೈಕುಂಠದಲ್ಲಿ ಇವನು ಅಧಿಕಾರ ನಡೆಸುತ್ತಾನೆ. ಇವನ ಜೊತೆಗೆ ಇವನ ಸಂಗಾತಿಯಾದ ದೇವತೆ ಲಕ್ಷ್ಮಿ, ಇವನ ಇತರ ವಿಸ್ತರಣಗಳು, ಉದಾ. ಇವನ ಸೋದರನಾದ ಬಲರಾಮ, ಜೊತೆಗೆ ಅಸಂಖ್ಯಾತ ಕುಟುಂಬದ ಬಹುತ್ವವನ್ನು ಪ್ರತಿನಿಧಿಸುವ ಆದರೆ ಇವನಿಗೆ ಸಮಾನವಾಗಿರುವ ತಾಯಿ, ತಂದೆ, ಸೋದರಿ, ಪ್ರೇಯಸಿ, ಸಂಗಾತಿ, ಹೆಂಡತಿ, ಆಕರ್ಷಣೆ, ಋಷಿ, ಬರಹಗಾರ ಇರುತ್ತಾರೆ. ಇಲ್ಲಿ ೧೦,೦೦೮ ಅರಮನೆಗಳಿವೆ ಮತ್ತು ಇವೆಲ್ಲವುಗಳಲ್ಲಿ ಏಕಕಾಲದಲ್ಲಿ ಇವನು ವಿಸ್ತರಣೆಗೊಂಡು, ಎಲ್ಲ ಕಡೆ ಭಿನ್ನ ಚಟುವಟಿಕೆಗಳಲ್ಲಿ ತೊಡಗಿಕೊಂಡು ಪ್ರತ್ಯೇಕವಾಗಿ ನೆಲಸುತ್ತಾನೆ. ಒಂದೆಡೆ ಆಸೆ ಈಡೇರಿಸುವ ಮರದಿಂದ ಹಣ್ಣು ಆರಿಸುತ್ತ ಭಕ್ತರೊಂದಿಗೆ ನರ್ತಿಸುತ್ತಾನೆ, ಮತ್ತೊಂದೆಡೆ ಪ್ರೀತಿಯ ನಮ್ಮ ವ್ಯಾಖ್ಯಾನವನ್ನು ಮೀರಿ ಅವನನ್ನು ಪ್ರೀತಿಸುವ ಎಲ್ಲ ಗೋಪಿಯರೊಡನೆ ನರ್ತಿಸುತ್ತಾನೆ, ಇನ್ನೊಂದೆಡೆ ಸಿತಾರ್ ನುಡಿಸುವವರಾಗಿ, ಉನ್ನತ ಮಾನವರಾಗಿ ತಮ್ಮ ಕೊನೆಯ ಎಂಟು ಜೀವನಗಳನ್ನು ಜೀವಿಸಿದ್ದ ಭಕ್ತರೊಂದಿಗೆ ಸಿತಾರ್ ವಾದ್ಯವನ್ನು ನುಡಿಸುತ್ತಾನೆ.

Thumb
ವೈಕುಂಠ ದರ್ಶನ

ಉಲ್ಲೇಖಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.