![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/c/cd/Government-Vedder-Highsmith-detail-1.jpeg/640px-Government-Vedder-Highsmith-detail-1.jpeg&w=640&q=50)
ವಿತ್ತೀಯ ನೀತಿ
From Wikipedia, the free encyclopedia
ಸರ್ಕಾರ, ಕೇಂದ್ರ ಬ್ಯಾಂಕ್ ಅಥವಾ ರಾಷ್ಟ್ರದ ವಿತ್ತೀಯ ಪ್ರಾಧಿಕಾರವು (i) ವಿತ್ತೀಯ ಸರಬರಾಜು,(ii) ಹಣದ ಅಗತ್ಯತೆ, (iii) ಹಣದ ವೆಚ್ಚ ಅಥವಾ ಬಡ್ಡಿದರವನ್ನು ನಿಯಂತ್ರಿಸುವ ಪ್ರಕ್ರಿಯೆಗೆ ವಿತ್ತೀಯ ನೀತಿ ಎನ್ನಲಾಗುತ್ತದೆ. ಆರ್ಥಿಕತೆಯ ಸ್ಥಿರತೆ ಮತ್ತು ಪ್ರಗತಿ ಕಡೆಗೆ ಗುರಿಯಿಟ್ಟು ಅವುಗಳ ಸಮೂಹವನ್ನು ಸಾಧಿಸುವುದು ಇದರ ಹಿಂದಿನ ಉದ್ದೇಶವಾಗಿದೆ.[1] ವಿತ್ತೀಯ ಸಿದ್ಧಾಂತವು ಗರಿಷ್ಠ ಹಣಕಾಸು ನೀತಿ ರೂಪಿಸುವ ಬಗ್ಗೆ ಒಳನೋಟವನ್ನು ಒದಗಿಸುತ್ತದೆ.
![]() | This article may contain too much repetition or redundant language. (September 2009) |
ವಿತ್ತೀಯ ನೀತಿಯನ್ನು ವಿಸ್ತರಣೆ ನೀತಿ ಅಥವಾ ಪರಿಮಿತ ನೀತಿ ಎಂದು ಉಲ್ಲೇಖಿಸಲಾಗಿದೆ. ವಿಸ್ತರಣೆಯ ನೀತಿಯು ಆರ್ಥಿಕತೆಯಲ್ಲಿ ಹಣದ ಒಟ್ಟು ಪೂರೈಕೆಯನ್ನು ವರ್ಧಿಸುತ್ತದೆ. ಪರಿಮಿತ ನೀತಿಯು ಒಟ್ಟು ಹಣದ ಪೂರೈಕೆಯನ್ನು ಕುಗ್ಗಿಸುತ್ತದೆ.
ಆರ್ಥಿಕ ಹಿಂಜರಿತದ ಕಾಲದಲ್ಲಿ ಬಡ್ಡಿದರವನ್ನು ಕುಂಠಿತಗೊಳಿಸುವ ಮೂಲಕ ನಿರುದ್ಯೋಗ ನಿವಾರಣೆಗೆ ವಿಸ್ತರಣಾ ನೀತಿಯನ್ನು ಸಾಂಪ್ರದಾಯಿಕವಾಗಿ ಬಳಸಲಾಗುತ್ತದೆ. ಪರಿಮಿತ ನೀತಿಯಲ್ಲಿ ಹಿಂಜರಿತ ನಿಭಾಯಿಸಲು ಬಡ್ಡಿದರಗಳ ಏರಿಕೆ ಒಳಗೊಂಡಿದೆ. ವಿತ್ತೀಯ ನೀತಿಯು ಖಜಾನೆ ನೀತಿಗೆ ಭಿನ್ನವಾಗಿದೆ. ಸರ್ಕಾರದ ಸಾಲ,ವೆಚ್ಚ ಮತ್ತು ತೆರಿಗೆ ಪದ್ಧತಿಯನ್ನು ಖಜಾನೆ ನೀತಿ ಉಲ್ಲೇಖಿಸುತ್ತದೆ.[2]