ವಿಕಿಪೀಡಿಯ:ಹದಿಮೂರನೆಯ ವರ್ಷಾಚರಣೆ ವರದಿ
From Wikipedia, the free encyclopedia
ಇದೊಂದು ಕಾರ್ಯಕ್ರಮ ವರದಿ ಪುಟ. ಕನ್ನಡ ವಿಕಿಪೀಡಿಯಾಕ್ಕೆ ಹದಿಮೂರನೆಯ ವರ್ಷಗಳು ತುಂಬುವ ನಿಟ್ಟಿನಲ್ಲಿ ಕನ್ನಡ ವಿಕಿಪೀಡಿಯವು ಹದಿಮೂರನೆಯ ವರ್ಷಾಚರಣೆಯನ್ನು ಆಚರಿಸಿತು. ಈ ಆಚರಣೆಗೆ ಸಂಬಂಧಿಸಿದಂತೆ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು. ಪಾಲ್ಗೊಳ್ಳದೆಯೂ ಶುಭಹಾರೈಸಿದವರು, ಪರೋಕ್ಷವಾಗಿ ಸಲಹೆ ಸಹಕಾರ ನೀಡಿದವರಿಗೂ ಅಭಿನಂದನೆಗಳು.[1]
ಹಾಗೇನೆ ಇದೊಂದು ಅಭಿಪ್ರಾಯವನ್ನು ಹಂಚಿಕೊಳ್ಳಲು ತೆರೆದ ಪುಟ. ಪಾಲ್ಗೊಂಡವರು ತಮ್ಮ ಅನುಭವಗಳನ್ನು ಈ ಪುಟದಲ್ಲಿ ಹಂಚಿಕೊಳ್ಳಬಹುದು. ವರ್ಷಾಚರಣೆಯ ಯಶಸ್ಸನ್ನು, ಲೋಪ-ದೋಷಗಳನ್ನು, ಭಿನ್ನಾಭಿಪ್ರಾಯಗಳನ್ನು ಮುಕ್ತವಾಗಿ ಈ ಪುಟದಲ್ಲಿ ಬರೆಯಬಹುದು. ಮುಂದೆ ನಡೆಸಬಹುದಾದ ಇಂತಹ ಕಾರ್ಯಕ್ರಮಕ್ಕೆ ಈ ವರದಿ ಮುನ್ನುಡಿಯಾಗಿರಲಿ ಎಂದು ತಿಳಿಯೋಣ.