ಭಾರತೀಯ ಖಾದ್ಯ From Wikipedia, the free encyclopedia
ವಿಂಡಾಲೂ ಭಾರತದ ಒಂದು ಮೇಲೋಗರ ಖಾದ್ಯವಾಗಿದೆ. ಇದು ಜನಪ್ರಿಯ ಪೋರ್ಚುಗೀಸ್ ಖಾದ್ಯ ಕಾರ್ನ್ ಡೆ ವಿನ್ಯಾ ಡಾಲೋಸ್ ಮೇಲೆ ಆಧಾರಿತವಾಗಿದೆ. ಇದು ಗೋವಾ, ವಸಾಯಿ, ನೆರೆಯ ಕೊಂಕಣ, ಕೇರಳ ಮತ್ತು ಭಾರತದ ಅನೇಕ ಭಾಗಗಳಲ್ಲಿ ಜನಪ್ರಿಯವಾಗಿದೆ.[1][2] ಇದು ತನ್ನ ಬ್ರಿಟಿಷ್ ಭಾರತೀಯ ರೂಪದಲ್ಲಿ ಭಾರತದ ಮನೆಗಳಲ್ಲಿ ಹಾಗೂ ಹೊಟೆಲುಗಳಲ್ಲಿ ಪ್ರಧಾನ ಆಹಾರವಾಗಿ ಪರಿಚಿತವಾಗಿದೆ ಮತ್ತು ಹಲವುವೇಳೆ ಉರಿಯುವ ಖಾರದ ಖಾದ್ಯವೆಂದು ಪರಿಗಣಿತವಾಗಿದೆ. ಇದನ್ನು ಸಾಮಾನ್ಯವಾಗಿ ಹಂದಿಮಾಂಸದಿಂದ ತಯಾರಿಸಲಾಗುತ್ತದೆ. ಆದರೆ ಇದನ್ನು ಗೋಮಾಂಸ, ಆಡಿನ ಮಾಂಸ, ಕೋಳಿಮಾಂಸದಂತಹ ಯಾವುದೇ ಬಗೆಯ ಮಾಂಸದಿಂದ, ಮತ್ತು ಟೋಫ಼ೂದಿಂದಲೂ ತಯಾರಿಸಬಹುದು.[3]
ವಿಂಡಾಲೂದ ಬ್ರಿಟಿಷ್ ಭಾರತೀಯ ಬಗೆಗೆ ಮಾಂಸವನ್ನು ವಿನಿಗರ್, ಸಕ್ಕರೆ, ತಾಜಾ ಶುಂಠಿ ಹಾಗೂ ಸಂಬಾರ ಪದಾರ್ಥಗಳಲ್ಲಿ ಊರುಹಾಕಬೇಕು. ನಂತರ ಮತ್ತಷ್ಟು ಸಂಬಾರ ಪದಾರ್ಥಗಳೊಂದಿಗೆ ಬೇಯಿಸಬೇಕು.[2]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.