![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/c/c9/Racistcampaignposter1.jpg/640px-Racistcampaignposter1.jpg&w=640&q=50)
ವರ್ಣಭೇದ ನೀತಿ
From Wikipedia, the free encyclopedia
![](http://upload.wikimedia.org/wikipedia/commons/thumb/c/c9/Racistcampaignposter1.jpg/640px-Racistcampaignposter1.jpg)
![](http://upload.wikimedia.org/wikipedia/commons/thumb/8/81/DurbanSign1989.jpg/320px-DurbanSign1989.jpg)
![](http://upload.wikimedia.org/wikipedia/commons/thumb/7/75/Marcharmenians.jpg/640px-Marcharmenians.jpg)
![](http://upload.wikimedia.org/wikipedia/commons/thumb/1/15/Alaska_Death_Trap.jpg/640px-Alaska_Death_Trap.jpg)
![](http://upload.wikimedia.org/wikipedia/commons/thumb/5/54/Negro_drinking_at_%22Colored%22_water_cooler_in_streetcar_terminal%2C_Oklahoma_City%2C_Oklahoma_by_Russell_Lee.jpg/640px-Negro_drinking_at_%22Colored%22_water_cooler_in_streetcar_terminal%2C_Oklahoma_City%2C_Oklahoma_by_Russell_Lee.jpg)
- ವರ್ಣವನ್ನು ರಚಿಸುವ ಆನುವಂಶಿಕ ಸಂಗತಿಗಳು ಮಾನವ ಲಕ್ಷಣಗಳ ಮತ್ತು ಸಾಮರ್ಥ್ಯಗಳ ಪ್ರಾಥಮಿಕ ನಿರ್ಧಾರಕಗಳಾಗಿವೆ ಮತ್ತು ಆ ವರ್ಣಭೇದ ಭಿನ್ನತೆಗಳು ಒಂದು ನಿರ್ದಿಷ್ಟವಾದ ವರ್ಣದ (ಜಾತಿಯ) ಒಂದು ಆನುವಂಶಿಕ ಉತ್ಕೃಷ್ಟತೆಯನ್ನು ಉತ್ಪತ್ತಿ ಮಾಡುತ್ತವೆ ಎಂಬುದು ವರ್ಣಭೇದ ನೀತಿಯ ನಂಬಿಕೆಯಾಗಿದೆ.[1] ವರ್ಣಭೇದ ನೀತಿಯ ಪರಿಣಾಮಗಳು "ವರ್ಣಭೇದ ನೀತಿಯ ಭೇದಭಾವಗಳು (ತಾರತಮ್ಯಗಳು)" ಎಂದು ಕರೆಯಲ್ಪಡುತ್ತವೆ.
- ಸಾಂಸ್ಥಿಕ ವರ್ಣಭೇದ ನೀತಿಯ ಸಂದರ್ಭದಲ್ಲಿ, ನಿರ್ದಿಷ್ಟವಾದ ವರ್ಣದ ಗುಂಪುಗಳು ಅವರ ಹಕ್ಕುಗಳಿಂದ ಅಥವಾ ಸೌಲಭ್ಯಗಳಿಂದ ವಂಚಿತರಾಗಲ್ಪಡಬಹುದು, ಅಥವಾ ಆದ್ಯತಾತ್ಮಕ ಉಪಚಾರವನ್ನು ಪಡೆದುಕೊಳ್ಳಬಹುದು. ವರ್ಣಭೇದ ತಾರತಮ್ಯವು ವಿಶಿಷ್ಟವಾಗಿ ವಿಭಿನ್ನವಾದ ಗುಂಪುಗಳ ಜನರ ನಡುವಣ ಜೀವ ವರ್ಗೀಕರಣಕ್ಕೆ ಸಂಬಂಧಿಸಿದ ಭಿನ್ನತೆಗಳನ್ನು ಗುರುತಿಸುತ್ತದೆ. ಅದಾಗ್ಯೂ ಯಾರೊಬ್ಬರೂ ಕೂಡ ಜನಾಂಗದ ಅಥವಾ ಸಂಸ್ಕೃತಿಯ ವಿರುದ್ಧವಾಗಿ ಭೇದಭಾವ ಎಣಿಸಲ್ಪಡುವುದಿಲ್ಲ. ಆದರೆ ಸ್ವತಂತ್ರವಾಗಿ ಅವರ ಶಾರೀರಿಕ ಭಿನ್ನತೆಗಳಿಗನುಗುಣವಾಗಿ ತಾರತಮ್ಯವು ಕಂಡು ಬರುತ್ತದೆ.
- ಯುನೈಟೆಡ್ ನೆಷನ್ಸ್ನ ಸಂಪ್ರದಾಯಗಳ ಪ್ರಕಾರ ಅಲ್ಲಿ ವರ್ಣಭೇದ ತಾರತಮ್ಯ ಮತ್ತು ಜನಾಂಗೀಯ ತಾರತಮ್ಯ ಶಬ್ದಗಳ ನಡುವೆ ಯಾವುದೇ ಭಿನ್ನತೆಯು ಇರುವುದಿಲ್ಲ. ಕಾಲವು ಕಳೆದಂತೆಲ್ಲಾ ಶಬ್ದದ ಅರ್ಥವು ಬದಲಾಗಿದೆ ಎಂಬುದಕ್ಕೆ ಅಲ್ಲಿ ಕೆಲವು ಸಾಕ್ಷ್ಯಗಳಿವೆ ಮತ್ತು ವರ್ಣಭೇದ ನೀತಿಯ ಮುಂಚಿನ ಉಲ್ಲೇಖನಗಳು, ಮಾನವ ಜನಸಂಖ್ಯೆಗಳು ಪ್ರತ್ಯೇಕವಾದ ವರ್ಣಗಳಿಗೆ ವಿಂಗಡಿಸಲ್ಪಟ್ಟಿದೆ ಎಂಬ ಸರಳವಾದ ನಂಬಿಕೆಯನ್ನು ಒಳಗೊಂಡಿದ್ದವು.[2]
- ಹಲವಾರು ಜೀವಶಾಸ್ತ್ರಜ್ಞರು, ಮಾನವಶಾಸ್ತ್ರಜ್ಞರು, ಮತ್ತು ಸಮಾಜಶಾಸ್ತ್ರಜ್ಞರು ಹೆಚ್ಚು ನಿರ್ದಿಷ್ಟವಾದ ಮತ್ತು/ಅಥವಾ ಪ್ರಾಯೋಗಿಕವಾಗಿ ತಾಳೆನೋಡುವಿಕೆಯ ಮಾನದಂಡಗಳಿಗೆ ಅನುಗುಣವಾಗಿ, ಅಂದರೆ ಭೂಗೋಳಶಾಸ್ತ್ರ, ಜನಾಂಗೀಯತೆ, ಅಥವಾ ಅಂತರ್ಜಾತಿಯ ವಿವಾಹದ ಒಂದು ಇತಿಹಾಸದಂತೆ, ಈ ಜೀವವರ್ಗೀಕರಣಕ್ಕೆ ಸಂಬಂಧಿಸಿದ ಭೇದಭಾವವನ್ನು ತಿರಸ್ಕರಿಸುತ್ತಾರೆ.[3]