From Wikipedia, the free encyclopedia
ಲೂಯಿಸ್ ಪಾಶ್ಚರ್ (pronounced: [pastøʁ]ಡಿಸೆಂಬರ್ ೨೭,೧೮೨೨-ಸೆಪ್ಟೆಂಬರ್ ೨೮,೧೮೯೫)ಆತನೊಬ್ಬ ಫ್ರೆಂಚ್ ರಾಸಾಯನಿಕ ಶಾಸ್ತ್ರಜ್ಞ ಮತ್ತು ಸೂಕ್ಷ್ಮಜೀವಿ ವಿಜ್ಞಾನ ಶಾಸ್ತ್ರಜ್ಞ,ಆತ ಡೊಲೆಯಲ್ಲಿ ಜನಿಸಿದ. ಕಾಯಿಲೆಗಳ ಕಾರಣ ಮತ್ತು ಅವುಗಳ ಪರಿಹಾರಕ್ಕಾಗಿ ಆತ ಶ್ರಮಿಸಿರುವುದನ್ನು ಸಂಶೋಧನೆ ಮಾಡಿರುವುದನ್ನು ಯಾವಾಗಲೂ ನೆನೆಯಲಾಗುತ್ತದೆ. ಆತನ ಸಂಶೋಧನೆಗಳು ಮಗುವಿನ ಮಾರಕ ಜ್ವರದ ಪತ್ತೆಯು ಚಿಕ್ಕಮಕ್ಕಳ ಸಾವು ಕಡಿಮೆಯಾಗಿದೆ.ಅಲ್ಲದೇ ರೇಬೀಸ್ ರೋಗಕ್ಕೆ ಆತ ಮೊದಲ ಬಾರಿಗೆ ಲಸಿಕೆಯನ್ನು ಕಂಡು ಹಿಡಿದ. ಆತನ ಪ್ರಯೋಗಗಳು ಕ್ರಿಮಿಗಳ ಮೂಲಕ ರೋಗ ಹರಡುವ ವಿಧಾನವನ್ನು ಕಂಡು ಹಿಡಿದವು. ಹಾಲು ಮತ್ತು ವೈನ್ (ಮದ್ಯಸಾರ)ಗಳಿಂದ ಉಂಟಾಗುವ ಸಾವು ನೋವುಗಳನ್ನು ಆತ ಪಾಶ್ಚರೈಸೇಶನ್ ಮೂಲಕ ಕಡಿಮೆ ಮಾಡಿದ ಸೂಕ್ಷ್ಮ ಜೀವಿ ವಿಜ್ಞಾನದ ಸ್ಥಾಪಕ ಮೂವರಲ್ಲಿ ಆತನೂ ಒಬ್ಬ,ಇನ್ನುಳಿದವರೊಂದಿಗೆ ಅಂದರೆ ಫರ್ಡಿನಾಂಡ್ ಕೊಹ್ನ್ ಮತ್ತು ರಾಬರ್ಟ್ ಕೊಚ್ . ಪಾಶ್ಚರ್ ರಾಸಾಯನಿಕ ವಿಜ್ಞಾನದಲ್ಲೂ ಆವಿಷ್ಕಾರ ಮಾಡಿದ್ದಾರೆ,ವಿಶೇಷವಾಗಿ ಸೂಕ್ಷ್ಮ ಜೀವಾಣುಗಳ ಒಟ್ಟು ಮೊತ್ತದ ನಿಶ್ಚಿತ ಕಣಗಳ ಬಗ್ಗೆ ಅವರು ಅಧ್ಯಯನ [2] ಮಾಡಿದ್ದಾರೆ. ಪ್ಯಾರಿಸ್ ನ್ ಅಲ್ಲಿರುವ ಇನ್ ಸ್ಟಿಟ್ಯುಟ್ ಪಾಶ್ಚರ್ ನ ಕೆಳಬದಿ ವಾಸ್ತುಶಿಲ್ಪದೊಳಗೆ ಆತನ ಆವಿಷ್ಕಾರಗಳ ವಿವರಗಳನ್ನು ಬೈಸ್ಯಾಂಟೈನ್ ಕಲಾಕೃತಿನಲ್ಲಿ ವೀಕ್ಷಣೆಗೆ [3] ಪ್ರದರ್ಶಿಸಲಾಗಿದೆ.
Louis Pasteur | |
---|---|
ಜನನ | Dole, Jura, Franche-Comté, France | ೨೭ ಡಿಸೆಂಬರ್ ೧೮೨೨
ಮರಣ | December 28, 1895 73) Marnes-la-Coquette, Hauts-de-Seine, France | (aged
ರಾಷ್ಟ್ರೀಯತೆ | French |
ಕಾರ್ಯಕ್ಷೇತ್ರ | Chemistry Microbiology |
ಸಂಸ್ಥೆಗಳು | Dijon Lycée University of Strasbourg Université Lille Nord de France École Normale Supérieure |
ಅಭ್ಯಸಿಸಿದ ವಿದ್ಯಾಪೀಠ | École Normale Supérieure |
ಗಮನಾರ್ಹ ವಿದ್ಯಾರ್ಥಿಗಳು | Charles Friedel[1] |
ಹಸ್ತಾಕ್ಷರ |
ರಾಸಾಯನಿಕ ಶಾಸ್ತ್ರಜ್ಞನಾಗಿ ಆತನ ಆರಂಭಿಕ ಸಂಶೋಧನೆಯಲ್ಲಿ ಆತ ಟಾರ್ ಟಾರಿಕ್ ಆಮ್ಲದ ಗುಣಲಕ್ಷಣಗಳ ಸಮಸ್ಯೆಯ ಮೇಲೆ ಬೆಳಕು ಚೆಲ್ಲಿದ.(೧೮೪೯) ಈ ಸಂಯುಕ್ತದ ಮಿಶ್ರಣವು ಬದುಕಿರುವ ಜೀವಿಗಳಿಂದ (ವಿಶೇಷವಾಗಿ ಮದ್ಯದ ಚರಟ)ಇದು ಬೆಳಕಿನ ಧೃವಿಕರಣದವನ್ನು ಅದು ತನ್ಮೂಲಕ ಹಾದುಹೋಗುವಾಗ ಗುರುತಿಸಲಾಗುತ್ತದೆ. ಇದರ ರಹಸ್ಯವೆಂದರೆ ರಾಸಾಯನಿಕ ವಿಭಜನೆಯಿಂದ ಪಡೆದ ಟಾರ್ ಟಾರಿಕ್ ಆಮ್ಲ ಇದರ ಮೇಲೆ ಯಾವ ಪರಿಣಾಮಗಳನ್ನುಂಟು ಮಾಡಿರಲಿಲ್ಲ.ಇಲ್ಲಿ ಅದರ ಅಂಶಗಳು ಸಹ ಯಾವುದೇ ಬದಲಾವಣೆಗೆ ಒಳಪಡದೇ ಅದರ ಸಂಯುಕ್ತ ಕೂಡಾ ಹಾಗೆ [2] ಉಳಿದಿತ್ತು. ಇದರಲ್ಲಿನ ಅತ್ಯಧಿಕ ಸೊಡಿಯಮ್ ಅಮೊನಿಯಮ್ ಟಾರ್ಟ್ರೇಟ್ ಸೂಕ್ಷ್ಮ ಕಣಗಳನ್ನು ಪಾಶ್ಚರ್ ಗಮನಿಸಿದಾಗ ಇದರಲ್ಲಿನ ಕಣಗಳು ಎರಡು ವಿಧದಲ್ಲಿ ಪ್ರತಿರೂಪದ ಪ್ರತಿಬಿಂಬವನ್ನು ಹೊಂದಿದ್ದವು. ಪ್ರಯಾಸದಿಂದ ಕಣಗಳನ್ನು ಬೇರ್ಪಡಿಸಿದಾಗ ಎರಡು ಸಂಯುಕ್ತಗಳನ್ನು ಬಿಡುಗಡೆಗೆ ಕಾರಣವಾಯಿತು:ಒಂದು ರೂಪದ ಕಣ ಧೃವಿಕೃತ ಬೆಳಕನ್ನು ಬಲಬದಿಯಿಂದ ತಿರುಗಿಸಿದರೆ ಇನ್ನಂದು ಎಡಬದಿಯಿಂದ ತಿರುಗಿತು. ಇವೆರಡರ ಸಮಾನ ಮಿಶ್ರಣವು ಬೆಳಕಿನ ಧೃವಿಕರಣವು ಯಾವುದೇ ಪರಿಣಾಮ ಬೀರುವುದಿಲ್ಲ. ಈ ಸಂದರ್ಭದಲ್ಲಿ ಪಾಶ್ಚರ್ ಪ್ರಶ್ನಾತೀತವಾದ ಕಣಗಳನ್ನು ವ್ಯವಕಲನ ಮಾಡಿ ಇವೆರಡೂ ವಿವಿಧ ರೂಪಗಳಲ್ಲಿ ಅಸ್ತಿತ್ವ ಹೊಂದುವಂತೆ ಅವೆರಡೂ ಹೋಲಿಕೆಯ ಮಾದರಿಯಲ್ಲಿ ಆತ ತನ್ನ ಎಡ ಮತ್ತು ಬಲ ಕೈಕವಚಗಳನ್ನು ಸಂಯುಕ್ತಕ್ಕೆ ಸೇರಿಸಿದ.ಈ ಸಂಯುಕ್ತದ ಜೈವಿಕ ಮೂಲವು ಒಂದು ಪ್ರಕಾರವನ್ನು [4] ತೋರಿಸುತ್ತದೆ. ಇದೇ ಮೊದಲ ಬಾರಿಗೆ ಪ್ರಫಲನಕ್ಕೆ ಹೊಂದಿಕೆಯಾಗದಂತಹ ಪರಮಾಣುಗಳನ್ನು ಪ್ರದರ್ಶಿಸಲಾಯಿತು. ಪಾಶ್ಚರ್ ನ ಹರಳಿನ ರೂಪಾಂತರದ ತತ್ವವು ಎಂ.ಪಿಲೆಟ್ ಅವರನ್ನು ಆಕರ್ಷಿಸಿತು.ಅದಕ್ಕೆ ಪಾಶ್ಚರ್ ಫಾಕಲ್ಟ್ (ಕಾಲೇಜ್ ) ಆಫ್ ಸ್ಟಾಸ್ ಬರ್ಗ್ ನಲ್ಲಿ ರಾಸಾಯನಿಕ ಪ್ರೊಫೆಸ್ಸರ್ ಆಗಿ ಕೆಲಸ ದೊರಕಿಸಲು ಅವರು [2] ನೆರವಾದರು. ಹೀಗೆ ಲೂಯಿಸ್ ೧೮೫೪ರಲ್ಲಿ ಲಿಲ್ಲೆಯಲ್ಲಿನ ಹೊಸ ಫಾಕಲ್ಟಿ ಆಫ್ ಸೈನ್ಸಗೆ ಡೀನ್ ಆಗಿ ನಾಮಕರಣಗೊಂಡರು.[2] ನಂತರ ೧೮೫೬ರಲ್ಲಿ ಎಕೊಲೆ ನಾರ್ಮಲೆ ಸುಪೆರಿಯರೆಯಲ್ಲಿ ಆಡಳಿತಗಾರ ಮತ್ತು ವೈಜ್ಞಾನಿಕ ನಿರ್ದೇಶಕನಾಗಿ [2] ನೇಮಿಸಲ್ಪಟ್ಟ.
ಕಿಣ್ವಗಳ ಉತ್ಪಾದನೆಯು ಸೂಕ್ಷ್ಮಾಣುಗಳ ಬೆಳವಣಿಗೆಯಿಂದ ಉಂಟಾಗುತ್ತದೆ,ಎಂಬುದನ್ನು ಪಾಶ್ಚರ್ ತೋರಿಸಿದ.ಅಂದರೆ ಪೌಷ್ಟಿಕಾಂಶಗಳಲ್ಲಿ ಬ್ಯಾಕ್ಟೀರಿಯಾಗಳ ಬೆಳವಣಿಗೆಯು ಸ್ವಾಭಾವಿಕ ಹುಟ್ಟಲ್ಲ. ಆದರೆ ಸಾಮಾನ್ಯವಾಗಿ ಜೈವಿಕ ಪ್ರಕ್ರಿಯೆಯು ಇಲ್ಲಿನಡೆಯುತ್ತದೆ,ಅದು (ಒಮ್ನೆ ವಿವಿಮ್ ಎಕ್ಸ್ ಒವೊ) ಆಗಿ ರಾಸಾಯನಿಕಕ್ಕೆ [2] ಒಳಪಡುತ್ತದೆ.
ಆತ ಕುದಿಸಿದ ಎಲ್ಲಾ ಬ್ಯಾಕ್ಟೀರಿಯಾಗಳ ಪ್ರಮಾಣವನ್ನು ಆತ ಬೇರೆಡೆಗೆ ಗಾಳಿಯಿರುವ ಪಾತ್ರೆಗೆ ವರ್ಗಾಯಿಸುತ್ತಾನೆ ಇದಲ್ಲದೇ ಅದರಲ್ಲಿನ ಟೂಬ್ ನಲ್ಲಿನ ನಿರ್ವಾತ ಜಾಗೆಯಲ್ಲಿ ಇದರ ಒಳಗಣದ ಧೂಳು ಕಣಗಳನ್ನು ಅದರ ಮೂಲಕ ಹಾಯಿಸುವುದರಿಂದ ಶುದ್ದಗೊಳಿಸುತ್ತಿದೆ. ಫ್ಲಾಸ್ಕ್ ಗಳನ್ನು ಒಡೆದು ತೆಗೆದಾಗ ಮಾತ್ರ ಅದರಲ್ಲಿ ಏನೂ ಬೆಳೆದ ಬಗ್ಗೆ ವಿವರ ದಾಖಲಾಗಿಲ್ಲ.ಸೂಕ್ಷ್ಮಾಣುಗಳನ್ನು ಹೊರತೆಗೆದು ನೋಡಿದಾಗ ಅವುಗಳು ಹೊರಗಡೆಯಿಂದ ಬಂದುದೆಂದೂ ಆತ ಗುರುತಿಸಿದ,ಇಲ್ಲಿ ಸ್ವಾಭಾವಿಕವಾಗಿ ಬೆಳೆಯುವದಕ್ಕಿಂತ ಕೃತಕವಾಗಿ ಅದು ಉದ್ಭವವಾಗುತ್ತದೆ. ಇದು ಅವರ ಕೊನೆಯ ಮತ್ತು ಮಹತ್ವದ ಪ್ರಯೋಗವಾಗಿದ್ದು ಇದು ಸ್ವಾಭಾವಿಕ ಸೂಕ್ಷ್ಮಾಣುಗಳ ಬೆಳವಣೆಗೆಗೆ ಸಾಧ್ಯವಿಲ್ಲ ಎಂಬುದನ್ನು ಅವರಿಗೆ ತೋರಿಸಲು ಪುರಾವೆಗಳು ಸಿಗಲಿಲ್ಲ. ಈ ಪ್ರಯೋಗವು ಅಣುಜೀವಿಗಳ ತತ್ವವನ್ನು [2] ಬೆಂಬಲಿಸುತ್ತದೆ. ಪಾಶ್ಚರ್ ಒಬ್ಬರೇ ಸೂಕ್ಷ್ಮಾಣು ತತ್ವವನ್ನು ಪ್ರಸ್ತಾಪಿಸಿಲ್ಲ.ಅವರೊಂದಿಗೆ (ಗಿರೊಲೊಮೊ ಫ್ರಾಕಾಸ್ಟೊರಲ್ ,ಅಗೊಸ್ಟಿನೊ ಬಸ್ಸಿ,ಫ್ರೆಡ್ರಿಕ್ ಹೆನ್ಲೆ ಮತ್ತು ಇನ್ನಿತರರು ಇದನ್ನು ಮೊದಲೇ ಪ್ರತಿಪಾದಿಸಿದ್ದರು)ಆತ ಇದನ್ನು ಅಭಿವೃದ್ಧಿ ಮತ್ತು ಇದರ ಮೂಲಕ ಸ್ವಚ್ಚವಾದ ಮತ್ತು ನಂಬಿಗೆಗೆ ಯೋಗ್ಯವಾದುದನ್ನು ಪಾಶ್ಚರ್ ಯುರೋಪ್ ಖಂಡದಲ್ಲೆಲ್ಲಾ ಇದನ್ನು ಸತ್ಯವೆಂದು ಅವರು ತೋರಿಸಲು ಪ್ರಯತ್ನಿಸಿದರು. ಇಂದು ಆತನನ್ನು ರಾಬರ್ಟ್ ಕೊಚ್ ಜೊತೆಯಲ್ಲಿ ಸೂಕ್ಷ್ಮಾಣು ತತ್ವ ಮತ್ತು ಬ್ಯಾಕ್ಟೀರಿಯೊಲಾಜಿ ಗಳ ಜನಕ ಎಂದು [5] ಕರೆಯಲಾಗುತ್ತದೆ ಸೂಕ್ಷ್ಮಾಣುಗಳ ಬೆಳವಣಿಗೆಯಿಂದ ಪಾನೀಯಗಳಾದ ಬೀರ್ ,ಮದ್ಯಸಾರ ಮತ್ತು ಹಾಲು ಕೆಡಲು ಕಾರಣವಾಗುತ್ತದೆ ಎಂದು ಪಾಶ್ಚರ್ ನ ಸಂಶೋಧನೆಯಿಂದ ಗೊತ್ತಾಯಿತು. ಹೀಗಾಗಿ ಹಾಲನ್ನು ಚೆನ್ನಾಗಿ ಕಾಯಿಸುವುದರಿಂದ ಅದರೊಳಗಿನ ಸೂಕ್ಷ್ಮಾಣುಗಳನ್ನು ಸಾಕಶ್ಟು ಮಟ್ಟಿಗೆ ಮಟ್ಟ ಹಾಕಿ ಹಾಲನ್ನು ಸಂರಕ್ಷಿಸಬಹುದು.ಇದರಿಂದಾಗಿ ಅದರಲ್ಲಿರುವ ಈಗಾಗಲೇ ಹುಟ್ಟಿಕೊಂಡಿರುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಬಹುದಾಗಿದೆ. ಆತ ಮತ್ತು ಕ್ಲಾವ್ಡೆ ಬರ್ನಾರ್ಡ್ ಈ ಕುರಿತ ಮೊದಲ ಪರೀಕ್ಷೆಯನ್ನು ಏಪ್ರಿಲ೨೦,೧೮೬೨ರಲ್ಲಿ ಮಾಡಿದರು.[5] ನಂತರ ಈ ಸಂಸ್ಕರಣೆಯನ್ನು ಪಾಸ್ಚೈರೈಸೇಶನ್ ಎಂದು [5] ಕರೆಯಲಾಯಿತು. ಹೀಗೆ ಪಾನೀಯಗಳಲ್ಲಿನ ಈ ಸೂಕ್ಷ್ಮ ಜೀವಾಣುಗಳಿಂದ ಉಂಟಾಗುವ ದೋಷವು ಪ್ರಾಣಿ ಮತ್ತು ಮನುಷ್ಯರಲ್ಲಿ ಕಾಯಿಲೆಗೆ ಕಾರಣವಾಗುತ್ತದೆ ಎಂದು ಮನುಷ್ಯನ ದೇಹದಲ್ಲಿ ಸೂಕ್ಷ್ಮ ಜೀವಾಣುಗಳ ಸೇರುವಿಕೆಯನ್ನು ತಡೆದರೆ ಅದರಿಂದ ನಂಜಾಗುವುದನ್ನು, ಪ್ರತಿವಿಷ ತಡೆಯುವ ವಿಧಾನವನ್ನು ಕಂಡು ಹಿಡಿಯಲಾತಯಿತು.ಇದನ್ನು ಜೊಸೆಫ್ ಲಿಸ್ಟರ್ ಇದನ್ನು ಶಸ್ತ್ರ ಚಿಕಿತ್ಸೆಯಲ್ಲಿ ಬಳಸಲಾಯಿತು. ಸುಮಾರು ೧೮೬೫ರಲ್ಲಿ ಎರಡು ಪರಾವಲಂಬಿ ಜೀವಿಗಳಿಂದ ಬರುವ ಪೆಬ್ರೈನ್ ಮತ್ತು ಫ್ಲಾಕೆರಿ ಕಾಯಿಲೆಗಳು ಅಲೈಸ್ ನಲ್ಲಿ (ಈಗ ಅಲೇಸ್ )ಅಸಂಖ್ಯಾತ ರೇಷ್ಮೆ ಹುಳುಗಳ ಸಾವಿಗೆ ಕಾರಣವಾದವು [2][5] ಈ ರೇಶ್ಮೆ ಹುಳುಗಳ ಮೊಟ್ಟೆಗೆ ದಾಳಿ ಮಾಡುವ ಸೂಕ್ಷ್ಮ ಜೀವಿಯ ಬಗ್ಗೆ ಆತ ಹಲವಾರು ವರ್ಷಗಳ ವರೆಗೆ ಅಧ್ಯಯನ ಮಾಡಿ,ಈ ದಾಳಿಗೆ ಕಾರಣವಾಗುವ ಮೈಕ್ರೊಬ್ ಗಳನ್ನು ಅಲ್ಲಿನ ನರ್ಸರಿಯಿಂದ [2][5] ಓಡಿಸಿದ. ಪಾಶ್ಚರ್ ಎನೊರೊಬಯೊಸಿಸ್ ನ್ನು ಸಹ ಸಂಶೋಧಿಸಿದ,ಇಲ್ಲಿನ ಸೂಕ್ಷ್ಮಾಣುಗಳು ಗಾಳಿ ಅಥವಾ ಆಮ್ಲಜನಕವಿಲ್ಲದೇ ಬದುಕಬಲ್ಲವು ಎಂದು ತೋರಿಸಿಕೊಟ್ಟ.ಇದನ್ನೇ ಪಾಶ್ಚರ್ ಪರಿಣಾಮ ಎನ್ನಲಾಗುತ್ತದೆ.
ನಂತರ ಪಾಶ್ಚರ್ ಚಿಕನ್ ಕಾಲರಾದಂತಹ ಕಾಯಿಲೆಗಳ ಮೇಲೆ ಪ್ರಯೋಗ ಆರಂಭಿಸಿದ. ಈ ಕಾರ್ಯದ ಸಮಯದಲ್ಲಿ ಈ ರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ಬೆಳಸುವ ಕಾರ್ಯ ಯಶಸ್ವಿಯಾಗಲಿಲ್ಲ.ಇದನ್ನು ಕೆಲವು ಕೋಳಿಗಳ ಮೇಲೆ ನಡೆಸಲು ಯತ್ನಿಸಿದ ಆತ ಈ ಕಾಯಿಲೆಯ ಸೋಂಕಿನ ಪರಿಣಾಮಗಳನ್ನು ಪತ್ತೆಹಚ್ಚಿದ., ನಂತರ ಕೆಲವು ಆರೋಗ್ಯವಂತ ಕೋಳಿಗಳು ಈ ವಿಷದ ನಂಜಿಗೆ ತುತ್ತಾಗಲಿಲ್ಲ,ಅತ್ಯಂತ ದುರ್ಬಲ ಬ್ಯಾಕ್ಟೀರಿಯಾಗಳು ಕೋಳಿಗಳಲ್ಲಿ ಕಾಯಿಲೆಗೆ ಒತ್ತು ನೀಡಲಿಲ್ಲ.ಇಲ್ಲಿ ಕೋಳಿಗಳು ರೋಗ ನಿರೋಧಕ ಶಕ್ತಿ ಬೆಳಿಸಿಕೊಂಡು ಸಣ್ಣ ಪ್ರಮಾಣದ ಕಾಯಿಲೆ ಲಕ್ಷಣ ತೋರಿದ್ದರೂ ಅವುಗಳು ರೋಗ ನಿರೋಧಕತೆಯನ್ನು ಹೆಚ್ಚಿಸಿದ್ದವು ಎಂಬುದನ್ನು [2][5] ಕಂಡುಕೊಂಡ. ಆತನ ಸಹಾಯಕ ಚಾರ್ಲ್ಸ್ ಚೇಂಬರ್ ಲ್ಯಾಂಡ್ (ಫ್ರೆಂಚ್ ಮೂಲದ)ನಿಗೆ ಈ ಕೋಳಿಗಳಿಗೆ ಲಸಿಕೆ ಹಾಕಲು ಪಾಶ್ಚರ್ ರಜೆ ಮೇಲೆ ತೆರಳಿದಾಗ ಹೇಳಲಾಯಿತು. ಆದರೆ ಚೇಂಬರ್ ಲ್ಯಾಂಡ್ ಇದನ್ನು ಮಾಡದೇ ತಾನೂ ರಜೆ ಮೇಲೆ ತೆರಳಿದ. ಆತ ಒಂದು ತಿಂಗಳ ನಂತರ ಮರಳಿದಾಗ ಕೋಳಿಗಳು ಅಸ್ವಸ್ಥವಾಗಿದ್ದುವಲ್ಲದೇ ಅವುಗಳಿಗೆ ನಂಜು ಹೆಚ್ಚಾಗಿದೇ ಮೊದಲಿನ ಹಾಗೆ ಇದ್ದು ಮುಂದೆ ಚೇತರಿಸಿಕೊಂಡವು. ಆದರೆ ಚೇಂಬರ್ ಲ್ಯಾಂಡ್ ತಪ್ಪೊಂದು ಆಗಿದೆ ಎಂದು ತಿಳಿದಿದ್ದ,ಅದನ್ನು ತಪ್ಪು ಎಂದು ಬಿಟ್ಟುಬಿಡಲು ನಿರ್ಧರಿಸಿದಾಗ ಪಾಶ್ಚರ್ ಆತನನ್ನು ತಡೆದ. ಹೀಗೆ ಕಾಯಿಲೆ ವಾಸಿಯಾದ ಪ್ರಾಣಿಗಳು ರೋಗರಕ್ಷಣಾ ಕವಚವನ್ನು ಬೆಳೆಸಿಕೊಂಡಿವೆ,ಅಲ್ಲದೇ ಇರೆ-ಎಟ್ -ಲೊಯರ್ ಪಡೆದುಕೊಂಡು ಅಂತ್ರಾಕ್ಸ್ ವಿಷದಿಂದ ಗುಣಮುಖವಾಗಿದ್ದು [6] ಕಂಡಿತು. ಇದನ್ನು ೧೮೭೦ರಲ್ಲಿ ಆತ ಅಂಥ್ರಾಕ್ಸ್ ಗೆ ಅನ್ವಯಿಸಿ ರೋಗರಕ್ಷಕ ವಿಧಾನವನ್ನು ಅಭಿವೃದ್ಧಿಪಡಿಸಿದ.ಇದು ಮುಂದೆ ದನಕರುಗಳಿಗೆ ದುಷ್ಪರಿಣಾಮ ಬೀರಿತು,ನಂತರ ಇದರ ಸುಳುವಿನ ಆಧಾರದ ಮೇಲೆ ಆತ ಬೇರೆ ಕಾಯಿಲೆಗಳನ್ನು ಹೊಡೆದೋಡಿಸುವ ಪ್ರಯೋಗ ಕೈಗೊಂಡ.
ಪಾಶ್ಚರ್ ಸಾರ್ವಜನಿಕವಾಗಿಯೇ ಆಂಥ್ರಾಕ್ಸ್ ಲಸಿಕೆಯನ್ನು ಬ್ಯಾಸಿಲಸ್ ನ್ನು ಆಮ್ಲಜನಕದೊಂದಿಗೆ ಒಡ್ಡಿಕೊಳ್ಳುವ ಪ್ರಕ್ರಿಯೆಯಿಂದ ಇದನ್ನು ಅವಿಷ್ಕರಿಸಿರುವುದಾಗಿ ಹೇಳಿದ. ಪ್ಯಾರಿಸ್ ನಲ್ಲಿರುವ ಬಿಬಿಲಿಯೊಥೆಕ್ ನ್ಯಾಶನೇಲ್ ನಲ್ಲಿರುವ ಆತನ ಪ್ರಯೋಗಾಲಯದ ಟಿಪ್ಪಣಿಗಳು ಈಗಲೂ ಇವೆ.ತಮ್ಮ ಇನ್ನಿತರರ ಜೀನ್ -ಜೊಸೆಫ್ -ಹೆನ್ರಿ ಟೌಸೆಂಟ್ ಅವರ ವಿಧಾನಗಳನ್ನು ಬಳಸಿದ್ದಾನೆ.ಒಬ್ಬ ಟೌಲೌಸ್ ಪಶುವೈದ್ಯಕೀಯ ಶಸ್ತ್ರ ಚಿಕಿತ್ಸಕ ಈ ಅಂಥ್ರಾಕ್ಸ್ ಲಸಿಕೆ ತಯಾರಿಸುವಲ್ಲಿ ಸಾಕಷ್ಟು [4][7] ಶ್ರಮಿಸಿದ್ದಾನೆ. ಈ ವಿಧಾನದಿಂದ ಪೊಟ್ಯಾಸಿಯಮ್ ಡೈಕ್ರೊಮೇಟ್ ನ್ನು ಆಮ್ಲಜನಕದ ಪರಿಧ್ಜಿಗೆ ತರಬಹುದಾಗಿದೆ. ಪಾಶ್ಚರ್ ನ ಆಮ್ಲಜನಕ ಪದ್ದತಿಯು ನಂತರದ ದಿನಗಳಲ್ಲಿ ಲಸಿಕೆಯನ್ನು ಉತ್ಪಾದಿಸಿತು,ಆದರೆ ಅಂಥ್ರಾಕ್ಸ್ ಲಸಿಕೆ ತಯಾರಿಸಿದ ನಂತರ ಆತನಿಗೆ ಹಕ್ಕು ಸ್ವಾಮ್ಯ ನೀಡಲಾಯಿತು. ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುವ ಕಾಯಿಲೆಯು ಹೊಸದಲ್ಲವಾದರೂ,ಇಂಥದು ಬಹು ಕಾಲದಿಂದಲೂ ಸಿಡುಬು ರೋಗಯೆಂದು ಮಾನವಕುಲಕುಟಿಯನ್ನು ಕಾಡುತ್ತಾ ಬಂದಿದೆ. ಸಿಡುಬು ರೋಗಕ್ಕೆ ಕಂಡು ಹಿಡಿದ ಲಸಿಕೆಯು ಇದರಿಂದ್ ಓಂಟಾಗುವ ಬಹುತೇಕ ಚರ್ಮದ ಕಲೆಯನ್ನು ನಿವಾರಿಸುತ್ತಿತ್ತಲ್ಲದೇ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಸಹಕರಿಸಿತು.ನೈಸರ್ಗಿಕವಾಗಿ ಬಂದು ಕಾಯಿಲೆಗಿಂತ ಅದು ಹೋಲಿಕೆಗೆ ಮೀರಿದಷ್ಟಾಗಿತ್ತು. ಎಡ್ವರ್ಡ್ ಜೆನ್ನರ್ ಕೂಡಾ ಆಕಳಿನ ಸಿಡುಬಿನ ಲಸಿಕೆಯೊಂದಿಗೆ ಸಿಡುಬಿಗಾಗಿ ಲಸಿಕೆಯೊಂದನ್ನು ಕಂಡು ಹಿಡಿದ,ಅಂದರೆ ಮನುಷ್ಯರಿಗೆ ಬರುವ ಈ ಸಿಡುಬನ್ನು ಕ್ರಾಸ ಇಮ್ಯುನಿಟಿ ಮೂಲಕ ಗುಣಪಡಿಸುವುದನ್ನು ಆತ ಆವಿಷ್ಕರಿಸಿದ.(೧೯೭೦),ನಂತರ ಪಾಶ್ಚರ್ ನ ವೇಳೆಗೆ ನೈಜ ಸಿಡುಬು ಲಸಿಕೆ ಬಳಸುವುದನ್ನು ಅದು ನಿಲ್ಲಿಸಿತು. ಸಿಡುಬು ಲಸಿಕೆ ಮತ್ತು ಅಂಥ್ರಾಕ್ಸ್ ಅಥವಾ ಕೋಳಿ ಕಾಲರಾ ಲಸಿಕೆಗಳಿಗೆ ಇರುವ ವ್ಯತ್ಯಾಸಗಳೆಂದರೆ,ನಂತರದ ಇನ್ನುಳಿದ ಕಾಯಿಲೆಯ ಸೂಕ್ಷ್ಮಾಣುಗಳನ್ನು ಸಾಮಾನ್ಯವಾಗಿ ಕೃತಕವಾಗಿ ಸೃಷ್ಟಿಸಲಾಗುತ್ತದೆ.ಹೀಗೆ ದುರ್ಬಲ ಸೂಕ್ಷ್ಮಾಣುಗಳ ರಚನೆಯು ಇಲ್ಲಿ ಕಾಯಿಲೆಯ ಲಕ್ಷಣಗಳನ್ನು ತೋರುವ ಅಗತ್ಯವಿರುವದಿಲ್ಲ. ಇದು ಈ ತೆರನಾಗಿ ಸೋಂಕು ರೋಗಗಳ ಕಾಯಿಲೆಗಳ ಪತ್ತೆಗೆ ಕ್ರಾಂತಿಯೊಂದನ್ನು ಮಾಡಿತು.ಹೀಗೆ ಪಾಶ್ಚರ್ ದುರ್ಬಲಗೊಳಿಸಿದ ಕಾಯಿಲೆಗಳಿಗೆ ಸಾಮಾನ್ಯವಾದ ಲಸಿಕೆಗಳು ಎಂದು ಹೆಸರಿಸಿ ಜೆನ್ನರ್ ನ ಸಂಶೋಧನೆಗೆ ಗೌರವ ತಂದನು. ಮೊಲಗಳಲ್ಲಿ ವಐರಸ್ ಗಳನ್ನು ಬೆಳೆಸಿ ರೇಬೀಸ್ ಗೆ ಆತ ಲಸಿಕೆ ಕಂಡು ಹಿಡಿದ,ನಂತರ ಈ ರೋಗಪೀಡಿತ ನರಗಳಲ್ಲಿನ ಅಂಗಾಂಶಗಳನ್ನು ಒಣಗಿಸಿ ಅದನ್ನು ದುರ್ಬಲಗೊಲಿಸುವ ಪ್ರಯೋಗ ಮಾಡಿದ. ಪ್ರಾರಂಭದಲ್ಲಿ ರಬೀಸ್ ಲಸಿಕೆಯು ಎಮೈಲ್ ರೂಕ್ಸ್ ,ಒಬ್ಬ ಫ್ರೆಂಚ್ ವ್ಡ್ಯ ಮತ್ತು ಪಾಶ್ಚರ್ ನ ಸಹೋದ್ಯೋಗಿಯಿಂದ ಸಿದ್ದಗೊಂಡಿತು.ರೋಗ ಪೀಡಿತ ಮೊಲಗಳ ಬೆನ್ನುಮೂಳೆಯ ಭಾಗವನ್ನು ಕತ್ತರಿಸಿ ಇದರ ಪ್ರಯೋಗ ಮಾಡಲಾಯಿತು. ಈ ಲಸಿಕೆಯನ್ನು ಮನುಷ್ಯರ ಮೇಲೆ ಪ್ರಯೋಗ ಮಾಡುವ ಮುಂಚೆ ಕೇವಲ ಹನ್ನೊಂದು ನಾಯಿಗಳ ಮೇಲೆ ಇದನ್ನು [2][4] ಬಳಸಲಾಗಿತ್ತು. ಈ ಲಸಿಕೆಯನ್ನು ಮೊದಲ ಬಾರಿಗೆ ೯ವರ್ಷ ವಯಸ್ಸಿನ ಜೊಸೆಫ್ ಮೆಸ್ಟರ್ ಎಂಬಾತನಿಗೆ ಜುಲೈ ೬,೧೮೮೫ರಲ್ಲಿ ಹಾಕಲಾಯಿತು.ಈ ಬಾಲಕ ರಾಬಿಡ್ ನಾಯಿಯಿಂದ ಮಾರಣಾಂತಿಕ [4] ಗಾಯಗೊಳಗಾಗಿದ್ದ. ಆದರೆ ಪ್ರಕರಣದಲ್ಲಿ ಪಾಶ್ಚರ್ ಅಧಿಕೃತ ವೈದ್ಯನಾಗಿರಲಿಲ್ಲ ಒಂದು ವೇಳೆ ಏನಾದರು ಅನಾಹುತ ವಾಗಿದ್ದರೆ ಆತ ಮೊಕದ್ದಮೆಯನ್ನು ಎದುರಿಸಬೇಕಾಗುತಿತ್ತು. ತನ್ನ ಸಹೋದ್ಯೋಗಿಗಳೊಂದಿಗೆ ಚರ್ಚಿಸಿದ ನಂತರ ಪಾಶ್ಚರ್ ಚಿಕಿತ್ಸೆಗೆ ಮುಂದಾದ. ಮೆಸ್ಟರ್ ಈ ಕಾಯಿಲೆಗೆ ತುತ್ತಾಗಲಿಲ್ಲ. ಇದನು ಹಲವರು ಪಾಶ್ಚರ್ ಬಾಲಕನ ಜೀವ ಉಳಿಸಿದ ಎಂದು ಹೇಳಲಾಗುತ್ತದೆಯಾದರೂ ಮತ್ತೆ ರೇಬೀಸ್ ಮರುಕಳಿಸುವ ೧೫%ರಷ್ಟರ ಸಾಧ್ಯತೆಯನ್ನು ತಳ್ಳಿ [8] ಹಾಕಲಾಗುವುದಿಲ್ಲ. ಹೇಗೆಯಾಗಲಿ ಪಾಶ್ಚರ್ ಹಿರೊ ಎನಿಸಿಕೊಂಡು ಯಾವುದೇ ಕಾನೂನು ಸಮರವನ್ನು ಎದುರಿಸಬೇಕಾಗಲಿಲ್ಲ. ಈ ಚಿಕಿತ್ಸೆಯಿಂದಾಗಿ ಹಲವಾರು ಇನ್ನಿತರ ಲಸಿಕೆಗಳ ಉತ್ಪಾದನೆಗೆ ದಾರಿಯಾಯಿತು. ಈ ಸಾಧನೆಯ ಹಿನ್ನಲೆಯಲ್ಲಿ ಮೊದಲ ಬಾರಿಗೆ ಪಾಶ್ಚರ್ ಇನ್ ಸ್ಟಿಟುಟ್ [4] ನಿರ್ಮಾಣಗೊಂಡಿತು. ಆದರೆ ಕೇವಲ ಕಾನೂನಿನ ಅಪಾಯವನ್ನು ಮಾತ್ರ ಪಾಶ್ಚರ್ ಎದುರಿಸಲಿಲ್ಲ. ದಿ ಸ್ಟೊರಿ ಆಫ್ ಸ್ಯಾನ್ ಮೈಕೆಲೆ ಯಲ್ಲಿ ಎಕ್ಸೆಲ್ ಮುಂಥೆ ರೇಬೀಸ್ ಲಸಿಕೆಗಳ ಸಂಶೋಧನೆಗಳ ಬಗ್ಗೆ ಬರೆದನು:
“ | Pasteur himself was absolutely fearless. Anxious to secure a sample of saliva straight from the jaws of a rabid dog, I once saw him with the glass tube held between his lips draw a few drops of the deadly saliva from the mouth of a rabid bull-dog, held on the table by two assistants, their hands protected by leather gloves. | ” |
ತನ್ನ ಸೂಕ್ಷ್ಮ ಜೀವಾಣುಗಳ ಅಧ್ಯಯನದ ನಂತರ ಪಾಶ್ಚರ್ ವೈದ್ಯರು ಶಸ್ತ್ರ ಚಿಕಿತ್ಸೆ ಮತ್ತು ಇನ್ನಿತರ ಸಂದರ್ಭದಲ್ಲಿ ಕೈಗಳನ್ನು ಸ್ವಚ್ಛವಾಗಿಡುವಂತೆ ಸಲಹೆ ಮಾಡಿದ. ಈ ಮುಂಚೆ ಕೆಲವು ವೈದ್ಯರು ಅಥವಾ ಅವರ ಸಹಾಯಕರು ತಮ್ಮ ಕೈಗಳನ್ನು ಸ್ವಚ್ಚಗೊಳಿಸಿಕೊಳ್ಳುವ ಕ್ರಮ ಅನುಸರಿಸಿತಿದ್ದರು.
ಲೂಯಿಸ್ ಪಾಶ್ಚರ್ ನ ಶತಮಾನೋತ್ಸವದ ೧೯೯೫ರಲ್ಲಿ ನ್ಯುಯಾರ್ಕ್ ಟೈಮ್ಸ್ "ಪಾಶ್ಚರ್ ನ ಮೋಸ" ಎಂಬ ಲೇಖನವೊಂದನ್ನು ಪ್ರಕಟಿಸಿತು. ಪಾಶ್ಚರ್ ನ ಪ್ರಯೋಗಾಲದ ಟಿಪ್ಪಣಿಗಳನ್ನು ಓದಿದ ವಿಜ್ಞಾನ ಇತಿಹಾಸ ತಜ್ಞ ಗೆರಾಲ್ಡ್ ಎಲ್ ಗಿಸನ್ ಅಂಥ್ರಾಕ್ಸ್ ಲಸಿಕೆಗಳ ತಯಾರಿಕೆಯಲ್ಲಿ ಪಾಶ್ಚರ್ ತಪ್ಪು ಮತ್ತು ಹಾದಿ ತಪ್ಪಿಸುವ ಅಭಿಪ್ರಾಯಗಳನ್ನು ನೀಡಿದ್ದಾನೆಂದು ಹೇಳಿದ.ಆತ ಈ ಪ್ರಯೋಗಗಳನ್ನು ಪೌಲ್ಲಿ-ಲೆ-ಫೊರ್ಟ್ ನಲ್ಲಿ ನಡೆಸಿದ್ದು ಇವೆಲ್ಲವೂಗಳು ಸೂಕ್ತವಾಗಿಲ್ಲವೆಂದೇ ಗೆರಾಲ್ಡ್ [9] ಅಭಿಪ್ರಾಯಪಟ್ಟಿದ್ದಾನೆ.
ಕ್ಯಾಥೊಲಿಕ್ ಗಳ ಪ್ರಕಾರ ಪಾಶ್ಚರ್ ತನ್ನ ಜೀವಮಾನವಿಡಿ ಒಬ್ಬ ಕಟ್ಟಾ ಕ್ರಿಶ್ಚಿಯನ್ ಆಗಿ ಬದುಕಿದ ಎಂದು ಹೇಳಿದ್ದಾರೆ. ಆತನ ಮೊಮ್ಮಗ ಲೂಯಿಸ್ ಪಾಶ್ಚರ್ ವ್ಯಾಲ್ಲರಿ-ರಾಡೊಟ್ ,ಅವರ ಪ್ರಕಾರ ಪಾಶ್ಚರ್ ತಮ್ಮ ಕ್ಯಾಥೊಲಿಕ್ ಹಿನ್ನಲೆಯಲ್ಲಿ ಬದುಕಿದ್ದರೂ ಧಾರ್ಮಿಕ ಆಚರಣೆ ಮಾಡದಿದ್ದರೂ ದೈವ [10] ಭಕ್ತರೆನಿಸಿದ್ದರು. ಪಾಶ್ಚರ್ ಅವರ ಅಳಿಯನ ಸಹೋದರನ ಮೊಮ್ಮಗ ಕೂಡಾ ಪ್ರಖ್ಯಾತ ಕ್ಯಾಥೊಲಿಕ್ ,ಪಾಶ್ಚರ್ ಮೂಲಭೂತವಾಗಿ ಕ್ಯಾಥೊಲಿಕ್ ಆದರೂ ಆತ ಇದನ್ನು [11] ಸಾರ್ವಜನಿಕಗೊಳಿಸಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಪಾಶ್ಚರ್ ವ್ಯಾಲ್ಲಿರಿ-ರಾಡೊಟ್ ಮತ್ತು ಮೌರಿಸ್ ವ್ಯಾಲ್ಲೆರಿ-ರಾಡೊಟ್ ಇವರಿಬ್ಬರೂ ಪಾಶ್ಚರ್ ಬಗ್ಗೆ ಹೇಳಿಕೆ "ನಾನು ಬ್ರೆಟನ್ ರೈತನ ಬಗ್ಗೆ ಹೆಚ್ಚು ತಿಳಿದಂತೆ ಹೆಚ್ಚು ಹತ್ತಿರವಾಗಿದ್ದೇನೆ". ಬ್ರೆಟನ್ ರೈತನ [2] ಪತ್ನಿಯ ಸಾಚಾತನದ ಬಗ್ಗೆ ನನ್ನಲ್ಲಿ ಅಷ್ಟಾಗಿ ನಂಬಿಕೆಗಳು [12] ಹುಟ್ಟುತ್ತಿಲ್ಲ."
[2] ಪಾಶ್ಚರ್ ನ ಪ್ರಮುಖ ಕಾರ್ಯಗಳೆಂದರೆ "ಎಟುಡ್ಸ್ ಸುರ್ ಲೆ ವಿನ್ "(೧೮೬೬): "ಎಟುಡ್ಸ್ ಸುರ್ ಲೆ ವಿನೈಗ್ರೆ " (೧೮೬೮); "ಎಟುಡ್ಸ್ ಸುರ್ ಲಾ ಮಾಲಾಡೆಸ್ ಡೆಸ್ ವರ್ಸ್ ಎ ಸೊಇ" (೨ ಸಂಪುಟಗಳು., ೧೮೭೦); "ಕ್ವೆಲ್ಕೆಸ್ ರಿಫ್ಲೆಕ್ಸನ್ಸ್ ಸುರ್ ಲಾ ಸೈನ್ಸ್ ಎನ್ ಫ್ರಾನ್ಸ್" (೧೮೭೧); "ಎಟುಡ್ಸ್ ಸುರ್ ಲಾ ಬಿರೆ" (೧೮೭೬); "ಲೆಸ್ ಮೈಕ್ರೊಬ್ಸ್ ಆರ್ಗ್ಯನಿಸಿಸ್, ಲಿಯರ್ ರೊಲ್ ಡಾನ್ಸ್ ಲಾ ಫರ್ಮಂಟೇಶನ್, ಲಾ ಪುಟ್ರಿಫೆಕ್ಸನ್ ಎಟ್ ಲಾ ಕಂಟಾಜಿನ್" (೧೮೭೮); "ಡಿಸ್ಕೊರ್ಸ್ ಡೆ ರೆಸೆಪ್ಶನ್ ದೆ M.L. ಪಾಶ್ಚರ್ ಎl'ಅಕಾಡೆಮಿ ಫ್ರಾಂಕೈಸ್" (೧೮೮೨); "ಟ್ರೇಟ್ ಮೆಂಟ್ ಡೆ ಲಾ ರೇಜ್" (೧೮೮೬).[2] ಪಾಶ್ಚರ್ ನ ಪ್ರಮುಖ ಕಾರ್ಯಗಳೆಂದರೆ "ಎಟುಡ್ಸ್ ಸುರ್ ಲೆ ವಿನ್ "(೧೮೬೬)
ಪಾಶ್ಚರ್ ಸುಮಾರು ೧೮೬೮ರಲ್ಲಿ ಹಲವಾರು ಬಾರಿ ಪಾರ್ಶ್ವವಾಯುಗೆ ಬಲಿಯಾಗಿ ಆತ ೧೮೯೫ರಲ್ಲಿ ಪ್ಯಾರಿಸ್ ನಲ್ಲಿ [4] ನಿಧನನಾದ. ಆತ ತನ್ನ ರೊಲ್ ಮಾಡೆಲ್ ಸೇಂಟ್ ವಿನ್ಸೆಂಟ್ ಡೆ ಪೌಲ್ ಅವರ ಕಥೆ ಕೇಳುತ್ತಲೇ ಮರಣ [2] ಹೊಂದಿದ. ಆತನನ್ನು ಕ್ಯಾಥೆಡ್ರಲ್ ಆಫ್ ನೊಟ್ರೆ ಡೇಮ್ನಲ್ಲಿ ಆತನನ್ನು ಸಮಾಧಿ ಮಾಡಲಾಯಿತು,ಆದರೆ ಪ್ಯಾರಿಸ್ ನಲ್ಲಿರುವ ಇನ್ ಸ್ಟಿಟುಟ್ ಪಾಶ್ಚರ್ ನ ಜೀವ ಉಳಿಸುವ ಪ್ರಯೋಗಗಳಿರುವಲ್ಲಿ ಆತನ ನೆನಪುಗಳನ್ನು ಸಂರಕ್ಷಿಸಲಾಗಿದೆ. ಅತ್ಯುನ್ನತ ಡಚ್ ಗೌರವವಾದ ಲಿವುವೆನ್ಹೊಕ್ ಮೆಡಲ್ ನ್ನು ಆತ ೧೮೯೫ರಲ್ಲಿ ಗಳಿಸಿದ.ಸೂಕ್ಷ್ಮಾಣುಜೀವಿಗಳ ಮೈಕ್ರೊಬಯೊಲಾಜಿ ಬಗೆಗಿನ ಅಧ್ಯಯನಕ್ಕೆ ಹಾಗು ಕಲೆ ಮತ್ತು ವಿಜ್ಞಾನದಲ್ಲಿ ಈ ಪದಕ ಪ್ರಶಸ್ತಿ ನೀಡಲಾಗುತ್ತದೆ. ಆತ ಗ್ರಾಂಡ್ ಕ್ರೊಇಕ್ಸ್ ಆಫ್ ದಿ ಲೆಗನ್ ಆಫ್ ಆನರ್ –ಪಡೆದುಕೊಂಡ ಫ್ರಾನ್ಸ್ ನಲ್ಲಿ ಇದಕ್ಕೆ ಪಾತ್ರರಾದವರ ೭೫ ಸಂಶೋಧಕರ ಪೈಕಿ ಈತನೂ ಒಬ್ಬನಾಗಿದ್ದಾನೆ. ಎರಡೂ ಇನ್ ಸ್ಟಿಟುಟ್ ಮತ್ತು ಯುನ್ವರ್ಸಿಟಿ ಲೂಯಿಸ್ ಪಾಶ್ಚರ್ ಗಳಿಗೆ ಆತನ ಸ್ಮಾರಕಗಳನ್ನಾಗಿಸಿದೆ. ವಿಶ್ವಾದ್ಯಂತ ಹಲವಾರು ಬೀದಿ ಹಾಗು ಪ್ರಮುಖ ಸ್ಥಳಗಳಿಗೆ ಆತನ ಗೌರವಾರ್ಥ ಹೆಸರಿಡಲಾಗಿದೆ. ಉದಾಹರಣೆಗಾಗಿ, USAನಲ್ಲಿ: tವೈದ್ಯಕೀಯ ಶಾಲೆ ಸ್ಟ್ಯಾನ್ ಫೊರ್ಡ್ ಯುನ್ವರ್ಸಿಟಿ , ಪಾಲೊ ಆಲ್ಟೊ ಮತ್ತು ಇವಿನ್ , ಕ್ಯಾಲಿಫೊರ್ನಿಯಾ, ಬಾಸ್ಟನ್ , ಮ್ಯಾಸಾಚುಸೆಟ್ಸ್ ಮತ್ತು ಪೊಲ್ಕ್ , ಫ್ಲೊರಿಡಾ, ಯುನ್ವರ್ಸಿಟಿ ಆಫ್ ಟೆಕ್ಸಾಸ್ ಹೆಲ್ತ್ ಸೈನ್ಸ್ ಸೆಂಟರ್ ಸ್ಯಾನ್ ಅಂಟೊನಿಯೊದಲ್ಲಿ;(ಅದಕ್ಕೆ ಹತ್ತಿರವಿರುವ) ಜೊಂಕೆರೆ, ಕ್ವೆಬೆಕ್; ಸ್ಯಾನ್ ಸಲ್ವೊಡಾರ್ ಡೆ ಜುಜುಯ್ ಮತ್ತು ಬಿನೊಸ್ ಏರ್ಸ್ (ಅರ್ಜೈಂಟೈನಾ ), ಗ್ರೇಟ್ ಎರ್ಮೌತ್ ನಾರ್ಫೊಲ್ಕ್ ನಲ್ಲಿ,(ಯುನೈಟೆಡ್ ಕಿಂಗ್ ಡಮ್ ) , ಜೆರಿಕೊ ಅಂಡ್ ವುಲ್ಗುರು ಕ್ವೀನ್ಸ್ ಲ್ಯಾಂಡ್ (ಆಸ್ಟ್ರೇಲಿಯಾ), ; ಫೊಮ್ ಪೆನ್ಹ ಕಾಂಬೊಡಿಯಾದಲ್ಲಿ; ಹೊ ಚಿ ಮಿನ್ಹ್ ಸಿಟಿ ವಿಯೆಟ್ನಾಮ್;ನಲ್ಲಿ ಬಾಟ್ನಾ ಅಲ್ಜೆರಿಯಾದಲ್ಲಿ; ಬಾಂಡಂಗ್ ಇಂಡೊನೇಶ್ಯಾ,ದಲ್ಲಿ ತೆಹರಾನ್ ಇರಾನ್ ನಲ್ಲಿ, ಮಿಲಾನ್ ಇಟಲಿಯಲ್ಲಿand ಕ್ಲುಜ್-ನಾಪೊಕಾ ಮತ್ತುಬುಕಾರೆಸ್ಟ್ ರೊಮೇನಿಯಾದಲ್ಲಿ. ಕ್ಯಾಲಿಫೊರ್ನಿಯಾದ ಸ್ಯಾನ್ ರಾಫೆಲ್ ಹೈಸ್ಕೂಲ್ ಕ್ಯಾಂಪಸ್ ನಲ್ಲಿ ಆತನ ಮೂರ್ತಿ ಅನಾವರಣ ಮಾಡಲಾಗಿದೆ. ಇದೇ ರೀತಿ ಭಾರತದ ಉದಕ ಮಂಡದಲ್ಲಿ ಸಹ ಪಾಶ್ಚರ್ ನ ಇನ್ ಸ್ಟಿಟುಟ್ ಇದ್ದು ಅಲ್ಲಿ ಲಸಿಕೆಗಳ ಪ್ರಯೋಗ ಮತ್ತು ವೈಋಜ್ಞಾನಿಕ ಕಾರ್ಯಗಳು ನಡೆಯುತ್ತಿವೆ.
ಸೊರ್ಬನ್ನೆಯಲ್ಲಿ ೧೮೬೪ರಲ್ಲಿ ಆತ ತನ್ನ ಭಾಷಣದಲ್ಲಿ "ನೈಸರ್ಗಿಕ ತಾನೇ ತಾನಾಗಿ ಹುಟ್ಟುವ ತತ್ವವು ಮಾರಣಾಂತಿಕ ಹೊಡೆತಗಳನ್ನು ತಪ್ಪಿಸಬಹುದು ಆದರೆ ಇದರ ಮೂಲವನ್ನು ಮುಂದಿನಪೀಳಿಗೆ ಇನ್ನಷ್ಟು ಪ್ರಯೋಗಗಳ ಮೂಲಕ ಸಾಧಿಸಬೇಕಾಗಿದೆ.(ಇಲ್ಲಿ ಪಾಶ್ಚರ್ ನ ಬಾತುಗೋಳಿನ ಕತ್ತಿನಂತಹ ಫ್ಲಾಸ್ಕಗಳಲ್ಲಿನ ಆತನ ಪ್ರಯೋಗಗಳು ಕಿಣ್ವಗಳ ಮೂಲಕ ಸೂಕ್ಷ್ಮ ಜೀವಾಣುಗಳ ಪತ್ತೆ ಸಾಧ್ಯವೆಂದು ಆತ ತೋರಿಸಿಕೊಟ್ಟ.ಪಾಶ್ಚರ್ ನ ನಿರಂತರ ಪ್ರಯೋಗಶೀಲತೆ ಎಂತವರನ್ನೂ ಬೆರಗು ಹುಟ್ಟಿಸುವಂತೆ ಮಾಡುವುದರಲ್ಲಿ [4][13][14] ಆಶ್ಚರ್ಯವಿಲ್ಲ)
ಅವ್ಯುನ್ಯು ಲೂಯಿಸ್ ಪಾಶ್ಚರ್ ಇರುವ ಪ್ರದೇಶವು ಲಾಂಗ್ ವುಡ್ ಮೆಡಿಕಲ್ ಮತ್ತು ಅಕಾಡಿಮಿಕ್ ಪ್ರದೇಶ ಕೂಡಾ ಬಾಸ್ಟನ್ , ಮ್ಯಾಸ್ಯ್ಚೆಸ್ಟ ನೊಳಗಿನ ಪ್ರದೇಶವಾಗಿದೆ.ಇದು ಪಾಶ್ಚರ್ ನ ಗೌರ್ವಾರ್ಥ ಇಡಲಾಗಿದೆ. (i.e. "ಈ ಬೀದಿಯನ್ನು ಫ್ರೆಂಚ್ ಫ್ಯಾಶನ್ ನಲ್ಲಿ ಹೆಸರಿಸಲಾಗಿದೆ (ಅಂದರೆಏವ್ " ಈ ಹೆಸರಿನ ಮೊದಲು, ನಿಜವಾಗಿಯೂ ನಂತರವೇ ಎನ್ನಬಹುದು) ಇದನ್ನು ಮರು ಸಮಗ್ರಗೊಲಿಸಬಹುದು.[15] ಇಲ್ಲಿ ಈ ಬೀದಿಯಲ್ಲಿ ಅತ್ಯಂತ ಪ್ರತಿಷ್ಠಿತ ಬಾಸ್ಟನ್ ಲ್ಯಾಟಿನ್ ಸ್ಕೂಲ್ ಇದೆ. ವಿಯೆಟ್ನಾಮ್ ನಲ್ಲಿರುವ ದಿ ಅವಿನ್ಯು ಪಾಶ್ಚರ್ ಸೈಗೊನ್ ನ ಹಲ್ವು ಬೀದಿಗಳಲ್ಲಿ ಒಂದು.ಇಂದಿಗೆ ಅದು ತನ್ನ ಫ್ರೆಂಚ್ ಹೆಸರನ್ನು ಉಳಿಸಿಕೊಂಡಿದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.